ಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ!!! ಗುಜರಾತಿಗಳ ಕರುಣೆಗಿಟ್ಟಿಸಲು ತನ್ನ ಸೆಕ್ಸ್ ಟೇಪನ್ನು ತಾನೇ ಚಿತ್ರೀಕರಿಸಿದನೇ ಹಾರ್ದಿಕ್ ಪಟೇಲ್?!

ಒಂದು ಕಡೆ ಹಾರ್ದಿಕ್ ಪಟೇಲ್ ನ ಸೆಕ್ಸ್ ಸಿಡಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಜೋರಾಗಿಯೇ ಸದ್ದು ಮಾಡುತ್ತಿದೆಯಷ್ಟೇ! ಆದರೆ, ಬಿಜೆಪಿಯ ಹೆಸರು
ಕೆಡಿಸಲು ಸ್ವತಃ ಕಾಂಗ್ರೆಸ್ ಹಾಗು ಹಾರ್ದಿಕ್ ಪಟೇಲೇ ಈ ಚಿತ್ರೀಕರಣವನ್ನು ಮಾಡಿದರೇ?!

“ಹಾರ್ದಿಕ್ ಪಟೇಲ್ ಸ್ವತಃ ತನ್ನ ಸೆಕ್ಸ್ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣದಲ್ಕಿ ಬಹಿರಂಗಪಡಿಸುವ ಮೂಲಕ ಗುಜರಾತಿಗಳ ಕರುಣೆ ಗಿಟ್ಟಿಸಲು ಮುಂಚೆಯೇ ತಯಾರಿ ನಡೆಸಿದ್ದನೇ?!”

ಹುಡುಗಿಯ ಮುಖ ಯಾಕೆ ಕಾಣಿಸಲಿಲ್ಲ?!

ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹಾರ್ದಿಕ್ ಜೊತೆ ಕುಳಿತಿರುವ ಹುಡುಗಿಯ ಮುಖ ಎಲ್ಲಿಯೂ ಕಾಣುವುದಿಲ್ಲ. ಹೇಳಬೇಕೆಂದರೆ, ಒಂದು ಸಲವೂ ಆಕೆ ಕ್ಯಾಮರಾ ಇಟ್ಟ ಕಡೆ ತಿರುಗಿ ನೋಡಲಿಲ್ಲ. ಆ ಹುಡುಗಿಯನ್ನು ಬಿಜೆಪಿಯವರೇ ಕಳುಹಿಸಿರಬಹುದು ಎಂದು ನೀವು ವಾದಿಸಬಹುದು! ಅಕಸ್ಮಾತ್, ಹುಡುಗಿಯನ್ನು ಬಿಜೆಪಿಯವರೇ ಕಳಿಸಿದ್ದು ಎಂದಾದರೆ, ವೀಡಿಯೋ ಬಹಿರಂಗವಾಗುವ ಮುಂಚೆಯೇ, ಹಾರ್ದಿಕ್ ನವೆಂಬರ್ 4 ರಂದು ‘ಬಿಜೆಪಿ ಸ್ವತಃ ಸೃಷ್ಟಿಸಿದ ನನ್ನ ಸೆಕ್ಸ್ ವೀಡಿಯೋವನ್ನು ಬಹಿರಂಗಗೊಳಿಸಿದೆ, ಮಜಾ ಮಾಡಿ!” ಎಂದು ಹೇಳಿದ್ದೇಕೆ?!

ಬಿಜೆಪಿಯೇ ಸ್ವತಃ ಚಿತ್ರೀಕರಣ ಮಾಡಿದೆ ಎಂಬುದಕ್ಕೆ ಆಧಾರವಾದರೂ ಏನು?!

ಈಗಾಗಲೇ ನಡೆಸಿರುವ ಸಮೀಕ್ಷೆಯಲ್ಲಿ, ಗುಜರಾತಿನಲ್ಲಿ ಖಂಡಿತವಾಗಿಯೂ ಬಿಜೆಪಿ 2/3 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ. ಅಲ್ಲದೇ, ಮೂರಕ್ಕೆ ಮೂರು ಸ್ಥಾನಗಳನ್ನು ಪೂರ್ತಿ ಗೆದ್ದರೂ ಆಶ್ಚರ್ಯವಿಲ್ಲ ಎಂಬ ಸಮೀಕ್ಷೆ ವರದಿ ನೀಡಿರುವಾಗ, ಬಿಜೆಪಿ ಇಂತಹ ಕೊಳಕು ರಾಜಕೀಯ ಮಾಡುವುದೇ?! ಅಲ್ಲದೇ, ಬಿಜೆಪಿಗೊಂದು ಘನತೆಯಿದೆ! ಪರರ ಕೊಳಕು ವೈಯುಕ್ತಿಕ ಬದುಕನ್ನೇ ಪ್ರಶ್ನಿಸಿ ಗೆಲ್ಲಬೇಕಾದ ಪರಿಸ್ಥಿತಿಯಂತೂ ಬಿಜೆಪಿಗಿಲ್ಲ! ಆದರೂ, ಕಾಂಗ್ರೆಸ್ ಹಾಗೂ ಹಾರ್ದಿಕ್ ಪಟೇಲ್ ಬಿಜೆಪಿಯನ್ನು ದೂರುತ್ತಿರುವುದರ ಬಗ್ಗೆ ಸಾಕ್ಷ್ಯಾಧಾರಗಳನ್ನೇನಾದರೂ ಕೊಟ್ಟು ದೂರುತ್ತಿದ್ದಾವಾ?!

ಕಾಂಗ್ರೆಸ್ ನ ನಡೆಯೇ ಅನುಮಾನಕರ!

ಯಾವಾಗ ವೀಡಿಯೋ ಬಹಿರಂಗವಾಯಿತೋ, ನಿಮಿಷಾರ್ಧದಲ್ಲಿ ಕಾಂಗ್ರೆಸ್ಸಿಗರು ಹಾರ್ದಿಕ್ ನ ಬೆನ್ನಿಗೆ ನಿಂತಿದ್ದಾರೆ! ಹಾರ್ದಿಕ್ ಪಟೇಲ್ ನನ್ನು ಪಕ್ಷದ ಮರ್ಯಾದೆಗೋಸ್ಕರವಾದರೂ ತೋರಿಕೆಗಾದರೂ ಬುದ್ಧಿ ಹೇಳಬೇಕಾಗಿದ್ದ ಕಾಂಗ್ರೆಸ್ ನಾಯಕರೇ ಹಾರ್ದಿಕ್ ನನ್ನು ಬೆಂಬಲಿಸುತ್ತಿದ್ದಾರೆ! ಇದು ಬಿಜೆಪಿಯ ಘನತೆಯನ್ನು ಸುಖಾ ಸುಮ್ಮನೇ ದೂರುವ ಮೂಲಕ ಹಾಳುಗೆಡವಬಹುದೆಂಬುದು ಕಾಂಗ್ರೆಸ್ ನ ಆಲೋಚನೆಯೇ?! ವೀಡಿಯೋ ಬಹಿರಂಗವಾದಾಗಿನಿಂದ, ಬಿಜೆಪಿ ನಾಯಕರ ಮೇಲೆ ಹರಿಹಾಯುತ್ತಿರುವ ಕಾಂಗ್ರೆಸ್ ಪಕ್ಷದ ಪ್ರತಿ ಹೇಳಿಕೆಗಳೂ ಸಹ ಅನರ್ಥವೇ!

ಹಾರ್ದಿಕ್ ಪಟೇಲ್ ಒಬ್ಬ ಹೆಣ್ಣುಮಗಳ ಜೊತೆ ನಡೆಸಿರುವ ಕಾಮಕೇಳಿಗೆ ಸ್ಪಷ್ಟೀಕರಣ ಕೇಳುವುದು ಬಿಟ್ಟು ಬಿಜೆಪಿಯ ಕಡೆ ಬೊಟ್ಟು ಮಾಡಿ ತೋರಿಸಿ, ಬಿಜೆಪಿಯವರ ಹತ್ತಿರ ಸ್ಪಷ್ಟೀಕರಣ ಕೇಳುತ್ತಿರುವುದನ್ನು ನೋಡಿದರೆ Yes! There’s something Fishy!

ಬಿಜೆಪಿ ತಾನೇ ವೀಡಿಯೋವನ್ನು ಬಹಿರಂಗಗೊಳಿಸಿದ್ದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ! ಆದರೂ, ಕಾಂಗ್ರೆಸ್ ಹಾಗೂ ಹಾರ್ದಿಕ್ ಬಿಜೆಪಿಯನ್ನು ದೂರುತ್ತಿರುವುದ್ಯಾಕೆ ಗೊತ್ತಾ?!

ಅಕಸ್ಮಾತ್ ಬಿಜೆಪಿಯವರೇ ವೀಡಿಯೋವನ್ನು ಬಹಿರಂಗಗೊಳಿಸಿದ್ದೆಂದಾರೆ ಯಾಕೆ ಹಾರ್ದಿಕ್ ಪೋಲಿಸ್ ಠಾಣೆಯನ್ನು ಸಂಪರ್ಕಿಸಲಿಲ್ಲ?! ಆಧಾವಿದೆ ಎಂದು ಬೋಂಗು ಬಿಡುವ ರಾಹುಲ್ ಗಾಂಧಿಗಿರುವ ‘ಕೈ’ಗಳಿಗೆ ಲೆಕ್ಕವಿದೆಯೇ?! FIR ನನ್ನೇ ದಾಖಲಿಸಬಹುದು! ಹಾಗಿದ್ಯಾಗಿಯೂ, ಠಾಣೆಯಲ್ಲಿ ದೂರು ಕೊಡಲಿಲ್ಲ ಯಾಕೆ?! ಪೋಲಿಸರು ಬೆಂಡೆತ್ತಿ ಬಣ್ಣ ಬಯಲು ಮಾಡಿಬಿಡುತ್ತಾರೆಂಬ ಭಯವೇ?!

ಇಷ್ಟಕ್ಕೂ, ಹಾರ್ದಿಕ್ ಪಟೇಲ್ ನ ಉದ್ದೇಶವೇನು?!

ಈ ವೀಡಿಯೋವನ್ನು ಬೇರೆ ಸ್ತರಗಳಿಂದಲೇ ಪರಿಗಣಿಸುವುದಾದರೆ, ಹಾರ್ದಿಕ್ ಪಟೇಲ್ ಈ ವೀಡಿಯೋವನ್ನು ಬಿಡುಗಡೆ ಮಾಡಿರುವುದರ ಹಿಂದಿನ ಉದ್ದೇಶವೊಂದೇ! ಅದು, ಕರುಣೆಯನ್ನು ಗಿಟ್ಟಿಸುವದಷ್ಟೇ! ಯಾಕೆಂದರೆ, ಹಾರ್ದಿಕ್ ಪಟೇಲ್ ತನ್ನ ಸಮುದಾಯದವರಿಂದಲೇ ತಿರಸ್ಕಾರಕ್ಕೊಳಪಡುತ್ತಿದ್ದಾನಷ್ಟೇ! ಮತ್ತೆ, ತನ್ನ ಸಮುದಾಯವನ್ನು ಮರಳಿ ಪಡೆಯುವುದಕ್ಕೆ ಈ ರೀತಿಯಾದ ಸಿಂಪಥಿಯನ್ನು ಗಿಟ್ಟಿಸುವ ಖತರ್ನಾಕ್ ಯೋಚನೆಗಿಳಿದನೇ?! ಬೇರೇನೂ ಕಾಣದಿದ್ದಾಗ, ಈ ರೀತಿಯಾದ ನಾಟಕ ಪ್ರಾರಂಭ ಮಾಡಿದನೇ ಹಾರ್ದಿಕ್?! ಹೌದೆನ್ನುತ್ತಿದೆ ಸಮಾಜ!!!

ಜಿಗ್ನೇಶ್ ಮೇವಾನಿ, ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್!! ಈ ಮೂವರನ್ನಿಟ್ಟುಕೊಂಡು ಗುಜರಾತಿನ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಬೇಕೆಂದು ಯೋಚಿಸಿದ್ದ
ಕಾಂಗ್ರೆಸ್ ಅಲ್ಲಿಯೂ ಸೋಲುಂಡಿದ್ದಲ್ಲದೇ, ರಾಹುಲ್ ಗಾಂಧಿ ಗುಜರಾತಿಗೆ ಕಾಲಿಟ್ಟರೆ ಕಲ್ಲು ಹೊಡೆಯುವ ಗುಜರಾತಿಗಳು ಕಾಂಗ್ರೆಸ್ ನ ಒಂದೊಂದೇ ಮುಖವಾಡವನ್ನು ಕಳಚಿಡುತ್ತಿದ್ದಾರಷ್ಟೇ!

ಕಾಂಗ್ರೆಸ್ ಹಾಗೂ ಹಾರ್ದಿಕ್ ತಮ್ಮ ಮರ್ಯಾದೆಯನ್ನು ತಾವೇ ಹರಾಜು ಹಾಕಿದರಾಗುವ ಲಾಭಗಳೇನು?!

ಪ್ರಾರಂಭದಲ್ಲಿ, ಹಿಂದುತ್ವವನ್ನೇ ಅತಿಯಾಗಿ ದ್ವೇಷಿಸುತ್ತಿದ್ದ ರಾಹುಲ್ ಗಾಂಧಿ ಯನ್ನು ಹಿಂದೂ ದೇವಸ್ಥಾನಗಳಿಗೆ ಭೇಟಿ ಕೊಡಲು ಕಳುಹಿಸಿದ್ದ ಕಾಂಗ್ರೆಸ್ ನ ಯೋಜನೆ ತಲೆಕೆಳಗಾಗಿದ್ದು ಗೊತ್ತೇ ಇದೆ! ದೇವಸ್ಥಾನದಲ್ಲಿ ಕವಡೆ ಕಿಮ್ಮತ್ತೂ ಸಿಗಲಿಲ್ಲ ರಾಹುಲ್ ಗಾಂಧಿಗೆ! ಕೊನೆಗೆ ಹಾರ್ದಿಕ್ ನನ್ನಿಟ್ಟು ಸೆಕ್ಸ್ ವೀಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ತನ್ನ ಹಳೆಯ ‘Violations againist Right To Privacy” ಎಂಬ ಹ್ಯಾಷ್ ಟ್ಯಾಗ್ ಹಿಡಿದು ಕೂತಿದೆಯಷ್ಟೇ! ಆದರೆ, ಗುಜರಾತಿನ ಜನರು ಹಾರ್ದಿಕ್ ನ ಅದ್ಭುತ ಚಿತ್ರೀಕರಣಕ್ಕೆ ಅಸಹ್ಯಿಸಿ ಕ್ಯಾಕರಿಸಿ ಉಗಿದು, ಮೋದಿಯ ಗೆಲುವನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ!

– ಪೃಥು ಅಗ್ನಿಹೋತ್ರಿ

Tags

Related Articles

Close