ಅಂಕಣಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ! ನೇತಾಜಿಯಲ್ಲದಿದ್ದರೆ ಗುಮ್ನಾನಿ ಬಾಬಾ ಯಾರಾಗಿದ್ದರು?!

ನೇತಾಜಿ ಸುಭಾಸ್ ಚಂದ್ರ ಬೋಸರ 116 ನೇ ಹುಟ್ಟಿದ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸರಕಾರ ಸುಬಾಸ್ ಚಂದ್ರ ಬೋಸರ ಮರಣದ ಬಗ್ಗೆ ಎಲ್ಲಾ ಫೈಲ್‍ಗಳನ್ನು ಬಹಿರಂಗ ಪಡಿಸುವ ಉದ್ದೇಶವನ್ನು ಹೊಂದಿತ್ತು.

ನೇತಾಜಿ ಸುಬಾಸ್‍ಚಂದ್ರ ಬೋಸ್‍ರ ನಿಧನವು ಒಂದು ನಿಗೂಢ ರಹಸ್ಯವಾಗಿ ಅನೇಕ ಜನರಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿದೆ. !! ನೇತಾಜಿ ಮರಣಕ್ಕೆ ಸಂಬಂಧ
ಪಟ್ಟಂತೆ ಕೆಲವರು ಸಾಕ್ಷ್ಯಾಧಾರಗಳನ್ನು ಕೂಡಾ ಒದಗಿಸುತ್ತಾರೆ.

ಅಂದು ಕಾಂಗ್ರೆಸ್ ಅಧಿಕಾರದಲ್ಲಿರಬೇಕಾದರೆ ಅವರ ಮರಣದ ಎಲ್ಲಾ ಕಡತಗಳು ಮರೆಮಾಚಲಾಗಿದ್ದು ಕೆಲ ದಾಖಲೆಗಳನ್ನು ಮಾತ್ರ ಒದಗಿಸಲಾಗಿತ್ತು. ಇವರ ಸಾವಿನ ಬಗ್ಗೆ ಅನೇಕ ಜನರಲ್ಲಿ ಗೊಂದಲ ಸೃಷ್ಟಿಸಿದ್ದು ಅದಕ್ಕೆ ಇನ್ನೂ ದಾಖಲೆಗಳು ಇನ್ನೂ ಸ್ಪಷ್ಟೀಕರಣವಾಗಿಲ್ಲ.!!

ಹಲವಾರು ಜನ ಹಲವು ನಿದರ್ಶನಗಳನ್ನು ಕೊಡುವುದರ ಮೂಲಕ ಇವರ ಸಾವಿನ ರಹಸ್ಯವನ್ನು ಮರೆಮಾಚಲು ನೋಡುತ್ತಿದೆ ಆದರೆ ಮೋದಿ ಸರಕಾರ ಮಾತ್ರ ಈ ಬಗ್ಗೆ ಕ್ರಮವನ್ನು ಕೈಗೊಂಡು ಅವರ ಸಾವಿನ ರಹಸ್ಯವನ್ನು ಪತ್ತೆ ಹಚ್ಚಲು ತಯಾರಾಗಿದೆ.

ಸುಭಾಸ್‍ಚಂದ್ರರ ಮಗಳು ಅನಿತಾ ಬೋಸ್‍ರವರೊಂದಿಗೆ ಹಿಂದೂ ಸ್ತಾನ್ ಟೈಮ್ಸ್ ಎನ್ನುವ ಮಾಧ್ಯಮದ ಪ್ರಸುನ್ನ ಸೋನ್‍ವಲ್ಕರ್ ಜೊತೆ ಮಾತನಾಡಿದ್ದು ನೇತಾಜಿ 1945ರಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟಿಲ್ಲ.. ಅಲ್ಲಿಂದ ಅವರು ಹಿಮಾಲಯ ಪರ್ವತಕ್ಕೆ ಹೋಗಿ ಗುಮ್ನಾನಿ ಬಾಬಾ ಎನ್ನುವ ಹೆಸರಲ್ಲಿ ಬಾಬಾ ಆಗಿದ್ದರು ಎಂಬ ಹೇಳಿಕೆಯನ್ನು ನೇತಾಜಿ ಮಗಳು ಅಲ್ಲಗಳೆದಿದ್ದಾರೆ.

ಆದರೆ ಗುಮ್ನನಿ ಬಾಬಾ ನೇತಾಜಿ ಅಲ್ಲದಿದ್ದರೆ ಹಾಗಾದರೆ ಗುಮ್ನಾನಿ ಬಾಬಾ ಯಾರು? ಎಂದು ಶಕ್ತಿ ಸಿಂಗ್ ಬಿಜೆಪಿಯ ಬೆಂಬಲಿಗ ಮತ್ತು ಸುಭಾಸ್ ಚಂದ್ರ ಬೋಸ್ ವಿಂಚರ್ ಮಂಚ್‍ನ ಅಧ್ಯಕ್ಷ ಪ್ರಶ್ನಿಸಿದ್ದಾರೆ. 1982 ರಾಮ ಭವನ ದಲ್ಲಿ ಶಕ್ತಿ ಸಿಂಗ್ ತಂದೆ ಗುರು ಬಸಂತ್ ಹಾಗೂ ಭಗವಾನ್ ಜೀ ಕೂಡಾ ಎರಡು ಬೇರೆ ಬೇರೆ ಕೊಠಡಿಯಲ್ಲಿ ಇದ್ದರು ಎಂದು ಶಕ್ತಿ ಸಿಂಗ್ ಹೇಳಿದ್ದಾರೆ.

ಅವರು ನಾವೆಲ್ಲಾ ಮಲಗಿದ ನಂತರ ಗಾಲಿ ಕುರ್ಚಿಯಿಂದ ಕೋಣೆಗೆ ಸ್ಥಳಾಂತರಗೊಂಡರು. ನಾನು ಕೇಳಿದೆ ನಾನು ಭಗವಾನ್ ಜೀ ನಿಮ್ಮ ಜೊತೆ ಮಾತನಾಡಬಹುದೇ ಎಂದು ಕೇಳಿದೆ ಆದರೆ ಡಾ. ಮಿಶ್ರಾ ಅನುಮತಿಯನ್ನು ನೀಡಲಿಲ್ಲ. ಯಾಕೆಂದರೆ ಭಗವಾನ್ ಜೀ ಯಾರೊಂದಿಗೂ ಮಾತನಾಡಲು ಬಯಸುತ್ತಿಲ್ಲ.. ಅವರಿಗೆ ಪ್ರಶಾಂತತೆಯ ವಾತಾವರಣ ಬೇಕಾಗಿತ್ತು. ಅವರು ಪ್ರತ್ಯೇಕವಾಗಿ ವಾಸಿಸಲು ಬಯಸಿದ್ದರು. ಅವರು ಕಿಟಕಿಯ ಹಿಂದೆ ನನ್ನೊಂದಿಗೆ ಮಾತನಾಡಲು ಬಯಸಿದ್ದರು ಎಂದು ಆ ಸಮಯದಲ್ಲಿ ಅಲಹಬಾದ್‍ನಲ್ಲಿ ಅಧ್ಯಯನ ಮಾಡುತ್ತಿದ್ದ ಸಿಂಗ್ ನೆನೆಪಿಸಿಕೊಳ್ಳುತ್ತಾರೆ. ಭಗವಾನ್ ಜೀ ಯ ಸಹಾಯಕ್ಕಾಗಿ ಸರಸ್ವತಿ ದೇವಿ ಎಂಬ ಮಹಿಳೆ ಇದ್ದಿದ್ದು ಭಗವಾನ್ ಜೀ ಎಲ್ಲಾ ಕೆಲಸ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದಳು.

ಸಪ್ಟೆಂಬರ್ 9 1985 ರಲ್ಲಿ ಘವಾನ್ ಜೀ ತೀರಿಕೊಂಡರು.. ಒಂದು ತಿಂಗಳ ನಂತರ ಇದರ ಬಗ್ಗೆ ಹಲವಾರು ಚರ್ಚೆಗಳು ನಡೆದಿದ್ದು, ಇದರ ಬಗ್ಗೆ ನೇವಿ ಲಾಂಗ್
ಪತ್ರಿಕೆಯು ಸುಬಾಸ್ ಚಂದ್ರ ಬೋಸ್ ಪೈಜಾಬಾದ್‍ನಲ್ಲಿ ವಾಸವಾಗಿದ್ದು, ಈಗ ಇವರಿಲ್ಲ ಅಂತಾ ಪ್ರಶ್ನೆಯನ್ನು ಮಾಡಿತ್ತು.

ಫೈಝಾಬಾದ್‍ನ ಅತ್ಯಂತ ಪ್ರಸಿದ್ಧ ವರದಿಯು ಭಗವಾನ್ ಜೀ ಮತ್ತು ಸುಭಾಸ್‍ಚಂದ್ರ ಬೋಸ್‍ರಜೀವನ ಚರಿತ್ರೆಗೂ ತುಂಬಾ ಹತ್ತಿರದ ಸಂಬಂಧವನ್ನು ಹೊಂದಿತ್ತು. ನೇತಾಜಿ ಕುರಿತಾದ ಜೀವನದ ಊಹಾಪೋಹಗಳಿಗೆ ಉತ್ತೇಜನ ನೀಡಿದ ವರದಿಗಳು ಮಾಹಿತಿಯನ್ನು ಬಹಿರಂಗಪಡಿಸಿತ್ತು.!! ಭಗವಾನ್ ಜೀ ಬಿಟ್ಟು ಹೋದ ಕೈಬರಹದ ಟಿಪ್ಪಣಿಗಳು, ಪತ್ರಗಳು ಮತ್ತು ಕುಟುಂಬ ಛಾಯಾಚಿತ್ರಗಳು ನೇತಾಜಿಗೂ ಹೋಲುವಂತಿತ್ತು ಎಂದು ಪತ್ರಿಕೆ ಸ್ಪಷ್ಟಪಡಿಸಿತ್ತು. ಭಗವಾನ್ ಜೀ
ಸುಭಾಸ್‍ಚಂದ್ರ ಭೋಸ್‍ಈ ಪತ್ರಿಕೆಯು ಸಷ್ಟಪಡಿಸಿತ್ತು.

ಮತ್ತೊಂದು ಕಡೆಯಲ್ಲಿ ಮುಖರ್ಜಿ ಕಮಿಷನ್ 1945 ರಲ್ಲಿ ನಡೆದ ತೈವಾನ್ ವಿಮಾನ ದುರಂತದಲ್ಲಿ ಸಾವಾಗಿಲ್ಲ ಎಂಬ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಆದರೆ ಸರಕಾರ ಇವರ ಸ್ಪಷ್ಟನೆಯನ್ನು ತಿರಸ್ಕರಿಸಿತ್ತು. ಯಾವುದೇ ಸಾಕ್ಷಾಧಾರಗಳನ್ನು ಗಮನಿಸಿದರೂ ಗುಮ್ನಾನಿ ಬಾಬಾನೇ ಸುಭಾಸ್ ಚಂದ್ರ ಬೋಸ್ ಎಂದು ಎಲ್ಲಾ ಸಾಕ್ಷಾಧಾರಗಳು ಹೇಳುತ್ತವೆ. ನೇತಾಜಿ ಪೈಝಾಬಾದ್‍ನಲ್ಲಿ ಸಪ್ಟೆಂಬರ್ 1985ರಲ್ಲಿ ಮರಣವನ್ನಪ್ಪಿದ್ದಾರೆ ಎಂದು ಮಾಹಿತಿಯನ್ನು ಲಗತ್ತಿಸಿತು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೇತಾಜಿಯ ಮರಣಕ್ಕೆ ಸಂಬಂಧಿಸಿದಂತೆ ಅನೇಕ ದಾಖಲೆಗಳು ಸರಕಾರಕ್ಕೆ ದೊರಕ್ಕಿದ್ದರೂ ಅದನ್ನು ಕಾಂಗ್ರೆಸ್ ಸರಕಾರ ಮಣ್ಣುಪಾಲು ಮಾಡುವಲ್ಲಿ ಯಶಸ್ವಿಯಾಗಿದೆ.!! ಭಗವಾನ್ ಜೀ ಅಥವಾ ಗುಮ್ನಾನಿ ಬಾಬಾ ನೇತಾಜಿಯೇ ಎಂದು ಅನೇಕ ಜನರಲ್ಲಿ ಗೊಂದಲವನ್ನು ಸೃಷ್ಟಿಮಾಡಿದೆ. ಯಾಕೆ ಕಾಂಗ್ರೆಸ್ ಸರಕಾರ ಇವರ ಸಾವಿನ ರಹಸ್ಯವನ್ನು ಅಡಗಿಟ್ಟಿದೆ ಎನ್ನುವುದೇ ನಮಗೆಲ್ಲಾ ಆಶ್ಚರ್ಯಕರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲೂ ಸಿದ್ಧರಿದ್ದ ನೇತಾಜಿಗೆ ನಾವು ಕೊಡುವ ಗೌರವ ಅವರ ಸಾವಿನ ರಹಸ್ಯದ ಬಗ್ಗೆ ಸರಿಯಾದ ಕಡತಗಳನ್ನು ಕೊಟ್ಟು ರಹಸ್ಯವನ್ನು ಬಯಳಿಗೆಳೆಯುವುದು. ಆಗ ಅನೇಕ ಜನರಲ್ಲಿ ಮೂಡಿದಂತಹ ಪ್ರಶ್ನೆಗೆ ಉತ್ತರ ಸಿಕ್ಕಂತಾಗುತ್ತದೆ. ಆದರೆ ಕಾಂಗ್ರೆಸ್ ಸರಕಾರ ಮಾತ್ರ ಕಡತಗಳನ್ನೆಲ್ಲಾ ಮರೆ ಮಾಚಿ ಜನರ ಕಣ್ಣಿಗೆ ಮನ್ನೆರೆಚಲು ಪ್ರಯತ್ನಿಸುತ್ತಿದ್ದಾರೆ. ಯಾಕೀ ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದೀರಿ ಕಾಂಗ್ರೆಸ್ಸಿಗರೇ? ನೇತಾಜಿಯೇ ಗುಮ್ನಾನಿ ಬಾಬಾನೇ , ಭಗವಾನ್ ಜೀ ಯೇ ನೇತಾಜಿ ಎಂಬ ಹಲವರ ಸ್ಪಷ್ಟನೆಗೆ ಇಡೀ ಜಗತ್ತಿನ ಜನರಿಗೆ ನೇತಾಜಿಯ ಸಾವು ಪ್ರಶ್ನಾರ್ತಕ ಚಿನ್ಹೆಯಾಗಿದೆ. ಎಲ್ಲರ ಮನಸ್ಸಲ್ಲಿ ನೇತಾಜಿ ನೇತಾಜಿ ಇಂತಹ ಮಾರು ವೇಷದಲ್ಲಿ ಇದ್ದರೇ ಎಂದು ಗೊಂದಲವಾಗಿದ್ದಾರೆ. ಕೊನೆಗೂ ಇದಕ್ಕೊಂದು ಪರಿಹಾರವನ್ನು ಹುಡುಕಿ ಸೂಕ್ತ ದಾಖಲೆಗಳನ್ನು ಹುಡುಕಿ ನೇತಾಜಿ ಸಾವಿನ ರಹಸ್ಯಕ್ಕೆ ಗೆರೆ ಎಳೆದು ಬಿಡಿ.

Source : The Quint – Original Link
-ಶೃಜನ್ಯಾ

Tags

Related Articles

Close