ಮತ್ತೆ ಶುರುವಾಗಿದೆ ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯನ ಜಟಾಪಟಿ! ಕುಮಾರ ಸ್ವಾಮಿಯವರು ಚುನಾವಣೆ ಹತ್ತಿರ ಬಂದಿದೆ ಎಂತಲೋ ಏನೋ,
ಒಟ್ಟಿನಲ್ಲಿ.ಸಿದ್ಧರಾಮಯ್ಯನವರ ಬಗ್ಗೆ ಆಘಾತಕಾರಿ ವಿಷಯವನ್ನು ಹೊರ ಹಾಕಿದ್ದಾರೆ ಕುಮಾರಸ್ವಾಮಿ!
“ಮುಂಚೆ ಜೆಡಿಸ್ ಸೇರಿದ ಸಿದ್ಧರಾಮಯ್ಯನಿಗೆ ರಾಜಕೀಯ ತಳಹದಿ ಹಾಕಿಕೊಟ್ಟಿದ್ದು ಜೆಡಿಎಸ್! ಅಷ್ಟಾದರೂ ಜೆಡಿಎಸ್ ಬಿಟ್ಟು ಅಧಿಕಾರದ ಆಸೆಗೆ ಕಾಂಗ್ರೆಸ್ ಸೇರಿದರು! ಆದರೆ, ಇದೇ ಸಿದ್ಧರಾಮಯ್ಯ ಕಾಂಗ್ರೆಸ್ ಸೇರುವ ಮುನ್ನ ಬಿಜೆಪಿ ಸೇರಲು ಬಯಸಿದ್ದರು.’ ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ!
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತಿಗಿಳಿದಿದ್ದ ಕುಮಾರಸ್ವಾಮಿ “ಅಧಿಕಾರ ಬೇಕಾದಾಗ ಸಿದ್ಧರಾಮಯ್ಯನವರಿಗೆ ಯಾವುದೇ ಜಾತಿ, ಕೋಮು ಲೆಕ್ಕಕ್ಕೇ ಬರುವುದಿಲ್ಲ! ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುತ್ತಿರುವ ಇದೇ ಸಿದ್ಧರಾಮಯ್ಯ ಅವತ್ತು ಬಿಜೆಪಿ ಸೇರಲು ಬಯಸಿದ್ದರು” ಎಂದ ಮೇಲೆ ‘ಎಚ್ ವಿಶ್ವನಾಥ್ ರವರನ್ನೂ ಸಹ ಮೂಲೆಗುಂಪಾಗಿಸಿದ್ದಾರೆ ಸಿದ್ಧರಾಮಯ್ಯ’ ಎಂದು ಆರೋಪಗಳ ಸುರಿಮಳೆಯನ್ನೇ ಹರಿಸಿದ್ದಾರಷ್ಟೇ!!
“ನಿಮಗೆ ಬೇಕಿದ್ದರೆ ಮುಕುಂದಪ್ಪ ಹಾಗೂ ಕೋದಂಡರಾಮಯ್ಯನವರಿಗೆ ಕೇಳಿ’ ಎಂದಿರುವ ಕುಮಾರಸ್ವಾಮಿ ಸಿದ್ಧರಾಮಯ್ಯನವರ ಜಾತಕ ಬಯಲುಗೊಳಿಸಿದ್ದಾರಷ್ಟೇ!!!
ಜಾತ್ಯಾತೀತ ಪಕ್ಷವಾಯಿತು ಇದ್ದಕ್ಕಿದ್ದ ಹಾಗೇ!
ಹಾ! ಪಾಪ! ಕುಮಾರಸ್ವಾಮಿಯವರು ಈಗಷ್ಟೇ ಆಸ್ಪತ್ರೆಯಿಂದ ಮರಳಿದ್ದಾರೆ! ಚೇತರಿಸಿಕೊಳ್ಳುವುದಕ್ಕೂ ಸಮಯವಿಲ್ಲದ ಕುಮಾರಸ್ವಾಮಿಯವರ ಅಸಹನೆ ಸಿದ್ಧರಾಮಯ್ಯನವರ ಮೇಲೆ ತಿರುಗಿದೆ!
“ಸೋನಿಯಾ ಹಾಗೂ ರಾಹುಲ್ ಕರೆದರು! ಸಿದ್ಧರಾಮಯ್ಯ ಹೋದರು! ಅಲ್ಲಿಂದ ಸಿದ್ಧರಾಮಯ್ಯನವರು ಜಾತ್ಯಾತೀತರಾಗಿ ಹೋದರು! ದುಡ್ಡು ಸರಬರಾಜು ಮಾಡುವ ಸಿದ್ಧರಾಮಯ್ಯ ಮಾಡುವ ಜವಾಬ್ದಾರಿಯನ್ನು ಸಿದ್ಧರಾಮಯ್ಯ ವಹಿಸಿಕೊಂಡಿದ್ದಾಗ ಒಂಭತ್ತು ಕಂತುಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಉತ್ತರ ಪ್ರದೇಶದ ಚುನಾವಣೆಯ ಸಮಯದಲ್ಲಿ ಇಲ್ಲಿಂದ ದುಡ್ಡು ಹೋಗಿದೆ! ಎಲ್ಲಿಂದ ಕೊಟ್ಟರು ಸಿದ್ಧರಾಮಯ್ಯ?! ಭ್ರಷ್ಟಾಚಾರದ ಹಣವಿಲ್ಲದೇ ಹೇಗೆ ಕೊಡಲು ಸಾಧ್ಯ?!”
“ಬಿಬಿಎಂಪಿ ಅನ್ನುವುದು ಭ್ರಷ್ಟಾಚಾರದ ಕೂಪ! ಟೆಂಡರ್ ಗಳ ಬಿಲ್ ಅಂತೂ ಲೆಕ್ಕಕ್ಕೇ ಸಿಗುತ್ತಿಲ್ಲ! ಏನುಮಾಡುತ್ತಿದ್ದಾರೆ ಸಿದ್ಧರಾಮಯ್ಯ?!”
“ಕೇಳಿದರೆ ದುಡ್ಡಿಲ್ಲ ಎನ್ನುವ ಇದೇ ಸಿದ್ಧರಾಮಯ್ಯ 800 ಕೋಟಿ ರೂಗಳನ್ನು ಬಿಬಿಎಂಪಿಯಿಂದ ಗುತ್ತಿಗೆದಾರರಿಗೆ ಪಾವತಿಸಬೇಕಿದೆ! ಇದಕ್ಕೆ ಸಾಲ ಮಾಡಬೇಕು ಎನ್ನುವ ಸಿದ್ಧರಾಮಯ್ಯ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗೆ ಹಣ ಹೊಂದಿಸಲು ನಾಟಕವಾಡುತ್ತಿದ್ದಾರಾ?!”
“ನಾನಾಗಲಿ, ರೇವಣ್ಣನಾಗಲಿ ಯಾವ ಪಕ್ಷದ ಬಾಗಿಲಿಗೂ ಹೋಗಲಿಲ್ಲ. ರಾಷ್ಡ್ರೀಯ ಪಕ್ಷಗಳ ಹತ್ತಿರ ಹೋಗಿದ್ದೆವೆಂದು ಜಮೀರ್ ಅಹಮದ್ ಹೇಳುತ್ತಾರಾದರೆ, ಸಾಕ್ಷೀಕರಿಸಲಿ! ಹಾಗಾದರೆ,.ರಾಜಕೀಯ ವೃತ್ತಿಯಿಂದಲೇ ನಿವೃತ್ತಿ ಹೊಂದುತ್ತೇನೆ”
“ಸಿದ್ಧರಾಮಯ್ಯನವರ ಭ್ರಷ್ಟ ಸರಕಾರಕ್ಕೆ ಜೊತೆಯಾಗುವಂತೆ ಸಚಿವ ಜಾರ್ಜ್ ನಿಂತಿದ್ದಾರೆ.”
ಅಬ್ಬಬ್ಬಾ! ಏನು ಆರೋಪಗಳು!!!
ಈ ಇಬ್ಬರೂ ರಾಜಕೀಯ ಧುರೀಣರು ಒಬ್ಬರೊಬ್ಬರ ಮೇಲೆ ಹರಿಹಾಯುವ ನಾಟಕವೊಂದು ಜೋರಾಗಿಯೇ ನಡೆದಿದೆ! ಬಿಡಿ! ಇಬ್ಬರಿಗೂ ಸಹ 2018 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಬರುವುದಿಲ್ಲ ಎಂಬ ಅರಿವಿದೆಯೋ ಏನೋ! ತೇಪೆ ಹಚ್ಚುವುದಕ್ಕಾದರೂ ಸಹ ಬಡಿದಾಡಬೇಕು ಎನ್ನುವ ಸ್ಥಿತಿಯಲ್ಲಿರುವ ಈ ಎರಡೂ ಪಕ್ಷಗಳು ಗೊತ್ತಿಲ್ಲದೆಯೇ ಒಬ್ಬರೊಬ್ಬರ ಗುಟ್ಟುಗಳನ್ನು ಬಿಟ್ಟುಕೊಡುತ್ತಿದ್ದಾರೆ!
ಸಿದ್ಧರಾಮಯ್ಯನವರ ಸರಕಾರ ದೇವರಿಗೇ ಬಲ್ಲ!
ಬಿಜೆಪಿಯನ್ನು ಸೇರ ಬಯಸಿದ್ದರು ಸಿದ್ಧರಾಮಯ್ಯ ಎಂಬುದೊಂದು ಮಾಹಿತಿಯಿದೆಯಲ್ಲವಾ?! ಅಧಿಕಾರದ ಆಸೆಗೆ ಯಾವುದೇ ಸಿದ್ಧಾಂತಗಳನ್ನಿಟ್ಟುಕೊಳ್ಳದೇ ಆಡಳಿತ ನಡೆಸಿದ ಸಿದ್ಧರಾಮಯ್ಯ ಮಾತ್ರ ಇನ್ನು ಮುಂಬರುವ ಚುನಾವಣೆಗೆ ಮತ್ತೆ ಕಾಂಗ್ರೆಸ್ ಗೆ ಕೈ ಕೊಡಲಿದ್ದಾರಾ ಕಾದು ನೋಡಬೇಕು!
– ಪೃಥು ಅಗ್ನಿಹೋತ್ರಿ