ಪ್ರಚಲಿತ

ಸ್ಫೋಟಕ ಸುದ್ದಿ!!! ಅನೈತಿಕವಾಗಿ ಒಂದು ಬಿಲಿಯನ್ ಭಾರತೀಯ ರೂಪಾಯಿಗಳನ್ನು ಸುಲಿಗೆ ಮಾಡಲು ದಾವೂದ್ ಇಬ್ರಾಹಿಂ ನ ಸಹೋದರನಿಗೆ ಸಹಾಯ ಮಾಡಿದ ಭಾರತೀಯ ರಾಜಕಾರಣಿಗಳಾರು ಗೊತ್ತೇನು?

ಈ ಇಕ್ಬಾಲ್ ಕಸ್ಕರ್ ಎಂಬ ಭೂಗತ ಪಾತಕಿಯನ್ನು ಎರಡು-ಮೂರು ದಿನಗಳ ಹಿಂದಷ್ಟೇ ಮುಂಬೈ ಪೋಲಿಸರು ಅಟ್ಟಾಡಿಸಿದರಷ್ಟೇ!! ದಾವೂದ್ ಸಹೋದರನಾದ ಈತನ ಕೈಚಳಕ.ಕಂಡು ಸ್ವತಃ ಪೋಲಿಸರೇ ದಂಗಾಗಿ ಹೋಗಿದ‌್ದರು! ಈತನ ಅತೀ ಪ್ರಮುಖ ದಂಧೆ ‘ಸುಲಿಗೆ’!!! ಆತನ ಅಸ್ತ್ರ ‘ಫಿಯರ್ ಓಫ್ ಡಿ ಗ್ಯಾಂಗ್’!!!! ಈ ‘ಡಿ-ಗ್ಯಾಂಗ್ ‘ ಅನ್ನೋದರಿಂದಲೇ ಆತ ಅದೆಷ್ಟು ಜನರ ಸುಲಿಗೆ ಮಾಡಿದ್ದಾನೋ, ಅದೆಷ್ಟು ಜನರ ಕೋಟಿಗಟ್ಟಲೆ ಹಣವನ್ನು ಸ್ವಾಹಾ ಮಾಡಿದ್ದಾನೋ ಲೆಕ್ಕವೇ ಇಲ್ಲ!

ಯಾವಾಗ ಇಕ್ಬಾಲ್ ನನ್ನು ಬಂಧಿಸಿ ಪೋಲಿಸರು ಬೆಂಡೆತ್ತತೊಡಗಿದರೋ, ಪಾಪ!!! ಎಲ್ಲವನ್ನೂ ಕಕ್ಕಿದ್ದ ಇಕ್ಬಾಲ್ ಎಂಬ ದಾವೂದ್ ಸಹೋದರ!!!! ಮಹಾರಾಷ್ಟ್ರದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಯವರು ಸುಲಿಗೆ ಮಾಡಲು ಮಧ್ಯವರ್ತಿಗಳಾಗಿದ್ದರೆಂದು ಹೇಳಿಕೆ ನೀಡಿದ ಇಕ್ಬಾಲ್ ನ ಬಾಯಿಯಿಂದ ಇನ್ನೆಷ್ಟು ಸ್ಫೋಟಕ ಮಾಹಿತಿಗಳು ಹೊರಬರುವುದೋ ಆ ಅಲ್ಲಾಹನೇ ಬಲ್ಲ!! ಆದರೆ, ಅದೆಷ್ಟೋ ಭಾರತೀಯರ ಮಾರಣ ಹೋಮಕ್ಕೂ ಎನ್ ಸಿ ಪಿ ಕಾರಣವಾಗಿದೆ ಎಂದು ಇಕ್ಬಾಲ್ ಹೇಳಿಕೆ ನೀಡಿದ್ದಾನೆ!!

ಇದಕ್ಕಿಂತಲೂ ಮುಂಚೆ ಮಾಧ್ಯಮಗಳಲ್ಲಿ ಸ್ವತಃ ದಾವೂದ್ ನೇ ನೇರ ಸಂಪರ್ಕದಲ್ಲಿದ್ದುಕೊಂಡು ಬಿಲ್ಡರ್ಸ್ ಗಳಿಂದ ಹಣ ಸುಲಿಗೆ ಮಾಡುತ್ತಿದ್ದನೆಂದು ವರದಿಯಾಗಿತ್ತು!! ಅಲ್ಲದೇ, ಪೋಲಿಸರು ಕೂಡಾ ಇದನ್ನೇ ನಂಬಿ ದಾವೂದ್ ನ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದರು!!! ಬಿಡಿ! ‘ಹವಾಲಾ’ ಎಂಬ ಜಾಲವೊಂದು ಅದೆಷ್ಟು ಪ್ರಸಿದ್ಧವಾಗಿದೆ ಎಂದರೆ ಸ್ವತಃ ದಾವೂದ್ ನಿಗೆ ಬಹಿರಂಗವಾಗಿಯೇ ಸಹಾಯ ಮಾಡಿತ್ತು! ಆದರೆ, ಎಲ್ಲಿ ಮೋದಿಯವರ ‘ನೋಟು ನಿಷೇಧ’ ಕಾರ್ಯಾಚರಣೆ ನಡೆಯಿತೋ, ಬಿಲ್ಡರ್ಸ್ ಗಳಿಗೆ ಹಣದ ರೂಪದಲ್ಲಿ ದಾವೂದ್ ಗೆ ತೆರಿಗೆ ಕಟ್ಟಲು ಅಸಾಧ್ಯವಾಗಿ ಹೋಯ್ತು!! ಜಾಣ ಇಕ್ಬಾಲ್ ಹಣದ ಬದಲಿಗೆ ಐಷಾರಾಮಿ ‘ಫ್ಲಾಟ್’ ಗಳನ್ನು ತೆರಿಗೆ ರೂಪದಲ್ಲಿ ಕೇಳಿದ!!!

ಇದೆಲ್ಲವನ್ನೂ ಕುಂತಲ್ಲೇ ಮಾಹಿತಿ ಕಲೆ ಹಾಕಿದ ಪೋಲಿಸರು ಈಗ NCP ನಾಯಕರನ್ನು ತನಿಖೆಗೊಳಪಡಿಸಿದ್ದಾರೆ! ಅದರಲ್ಲೂ, ಇಕ್ಬಾಲ್ ಎರಡು ನಾಯಕರ ಹೆಸರನ್ನು ಬಹಿರಂಗಗೊಳಿಸಿದ ಮೇಲೆ NCP ಯ ರೆಕ್ಕೆಯೊಂದು ಮುರಿದಿದೆ!! ಇಕ್ಬಾಲ್ ನ ಬಲವಿರುವ ‘ಥೇನ್’ ವ್ಯಾಪ್ತಿಯಿಂದಲೇ ಬೇಟೆ ಶುರು ಮಾಡಿರುವ ಪೋಲಿಸರು 2013 ರಿಂದಲೂ ನಡೆಯುತ್ತಿದ್ದ ಸುಲಿಗೆ ಕಾರ್ಯಕ್ರಮವನ್ನು ಸದ್ಯಕ್ಕೆ ತಡೆಹಿಡಿದಿದ್ದಾರಷ್ಟೇ!!!

ಒಂದು ಸಲ ಒಬ್ಬ ಬಿಲ್ಡರ್ ನಿಂದ 30 ಲಕ್ಷವನ್ನು ದೋಚಿದ್ದ ಇಕ್ಬಾಲ್, ತದನಂತರ ಪ್ಲಶ್ ರೋಸಾ ಬೆಲ್ಲಾ ಕಾಂಪ್ಲೆಕ್ಸ್ ನ 4 ಐಷಾರಾಮಿ ಬಂಗಲೆಗಳನ್ನು ಕೇಳಿದ್ದ! ಅವೆಲ್ಲವೂ ತಲಾ 5 ಕೋಟಿ ಬೆಲೆಬಾಳುವಂತಹ ಬಂಗಲೆಗಳು!!!!! ಆದರೆ, 3 ಬಂಗಲೆಗಳು ತಲಾ 30 ಲಕ್ಷಕ್ಕೆ ಮಾರಿದ್ದ ಇಕ್ಬಾಲ್, ನಾಲ್ಕನೇ ಬಂಗಲೆಯನ್ನು ತನ್ನ ಬಂಟನಾದ ಶೇಕ್ ಗೆ ನೀಡಿದ್ದ! ಆತನೂ ಸಹ ‘ರಿಯಲ್ ಎಸ್ಟೇಟ್ ಉದ್ಯಮಿ!!’

ಇಕ್ಬಾಲ್ ಹೇಳಿದ ಎರಡು NCP ನಾಯಕರಲ್ಲಿ ಒಬ್ಬ ಪಕ್ಕಾ ಖತರ್ನಾಕ್ ಮಧ್ಯವರ್ತಿಯಾಗಿ ಕೆಲಸಮಾಡಿದ್ದನೆಂದು TOI ವರದಿ ನೀಡಿದೆ! ಅಲ್ಲದೇ, ಅದೆಷ್ಟೋ ಬಿಲ್ಡರ್ ಗಳು ಇಕ್ಬಾಲ್ ಪರವಾಗಿದ್ದಾರೆ ಎಂದೂ ತನಿಖೆಯಲ್ಲಿ ಹೊರ ಬಂದಿರುವುದರಿಂದ ಇನ್ನಷ್ಟು ತಿರುವು ಪಡೆದುಕೊಳ್ಳುತ್ತಿರುವ ಈ ಪ್ರಕರಣ ಮಾತ್ರ ಮುಂಬೈ ಜನರ ನಿದ್ದೆ ಕೆಡಿಸಿರುವುದು ಸುಳ್ಳಲ್ಲ! ಇಕ್ಬಾಲ್ ಪ್ರತಿಯಾಗಿ ಬೆಂಬಲ ನೀಡುವ ಬಿಲ್ಡರ್ಸ್ ಗಳ ಸ್ಪರ್ಧಿಗಳನ್ನೂ ಚೆನ್ನಾಗಿಯೇ ಕುಟ್ಟುತ್ತಿದ್ದರಿಂದ ಸ್ವತಃ ಬಿಲ್ಡರ್ ಗಳೇ ಬೆಂಗಾವಲಾಗಿ ನಿಂತಿದ‌್ದರು!

ಕಸ್ಕರ್ ಬರೀ ಬಿಲ್ಡರ್ಸ್ ಗಳನ್ನು ದೋಚಿದ್ದಲ್ಲ, ಬದಲಾಗಿ ಪ್ರಸಿದ್ಧ ಬಂಗಾರದ ಅಂಗಡಿಗಳ ಮಾಲೀಕರನ್ನೂ ಸಹ ದೋಚಿದ್ದ! ಇವನ ಆಟಾಟೋಪ ತಾಳಲಾರದೇ, ಅದೆಷ್ಟೋ ನಾಯಕರು ಊರೇ ಬಿಟ್ಟು ಹೋಗಿದ್ದರು!!!

ಥೇನ್ ಪೋಲಿಸ್ ಆಯುಕ್ತ ಪರಾಂಬಿರ್ ಸಿಂಗ್, ‘ಇಕ್ಬಾಲ್ ಹಾಗೂ ದಾವೂದ್ ನ ಜಾಲಗಳನ್ನು ಸದ್ಯದಲ್ಲಿಯೇ ಭೇಧಿಸುತ್ತೇವೆ! ಅಲ್ಲದೇ, ಆತ ಬಿಲ್ಡರ್ಸ್
ಗಳಿಂದ, ಬಂಗಾರದ ಅಂಗಡಿಗಳ ಮಾಲೀಕರಿಂದ ರೌಡಿಗಳ ಮೂಲಕ ಹಣ ಸುಲಿಗೆ ಮಾಡುತ್ತಿದ್ದನಲ್ಲದೇ, ಭಯೋತ್ಪಾದಕ ಚಟುವಟಿಕೆಗಳಿಗೂ ಕೂಡ ಸಹಾಯ
ಮಾಡಿರುವುದಾಗಿ ಶಂಕೆ ಇದೆ! ಇನ್ನೂ ಹೆಚ್ಚಿನ ತನಿಖೆಗೊಳಪಡಿಸಿದ ನಂತರ ಮಾಹಿತಿಗಳು ಸಿಗುಬಹುದು’ ಎಂದು ಹೇಳಿದ್ದಾರೆ!

ಮಜಾ ಏನಂದ್ರೆ ದಾವೂದ್ ನದ್ದೇ ಸ್ವಾಮಿ!!! ಭಾರತೀಯ ಪೋಲಿಸರ ಒದೆತ ತಾಳಲಾರದೇ 1993 ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿಯಾಗಿರುವ ಭೂಗತ ಪಾತಕಿಯ ಹೇಡಿತನದ ಬಗ್ಗೆ ಇಕ್ಬಾಲ್ ಸ್ಫೋಟಕ ಮಾಹಿತಿ ನೀಡಿದ್ದೇನು ಗೊತ್ತೇ?!

ದಾವೂದ್ ಪಾಕಿಸ್ಥಾನದಲ್ಲಿಯೇ ಇದ್ದಾನೆ! ಮೋದಿ ಅಧಿಕಾರಕ್ಕೆ ಬಂದ ನಂತರ ಆತ ಈವರೆಗೆ ಒಟ್ಟು ನಾಲ್ಕು ಬಾರಿ ವಾಸ್ತವ್ಯವನ್ನು ಬದಲಾಯಿಸಿದ್ದಾನೆ! ಮತ್ತು, ಅವನ ಭದ್ರತೆಯನ್ನು ಪಾಕಿಸ್ಥಾನ ಶೇ.50% ರಷ್ಟು ಹೆಚ್ಚಿಸಿದೆ!!!”

ಆಹಾಹಾ! ತಾನು ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರವಲ್ಲ ಎಂದೇ ಕುಣಿಯುತ್ತಿದ್ದ ಪಾಕಿಸ್ಥಾನಕ್ಕೆ ಇಕ್ಬಾಲ್ ನೀಡಿದ ಹೇಳಿಕೆಯಿಂದಾಗಿ ಈಗ ಮತ್ತಷ್ಟು ಮುಜುಗರವಾಗಿದ್ದಲ್ಲದೇ, ‘ಪಾಕಿಸ್ಥಾನ ಎಂದರೆ ಏನು ಮಕ್ಕಳೇ?!’ ಎಂದಾಗ ‘ಭಯೋತ್ಪಾದಕರ ರಾಷ್ಟ್ರ ಟೀಚರ್’ ಎಂದು ಪ್ರತ್ಯುತ್ತರ ಕೊಡುವಂತಾಗಿದೆ!!!!

ಇಷ್ಟಲ್ಲದೇ, ದಾವೂದ್ ಪಶ್ಚಿಮ ಮತ್ತು ಉತ್ತರ ಆಫ್ರಿಕಾದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ನೀಡುತ್ತಿರುವ ಇಕ್ಬಾಲ್ ದಕ್ಷಿಣ ಅಮೇರಿಕಾದ ಮಾದಕ ದೊರೆಗಳ ಜೊತೆ ನಿಕಟ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾನೆ!

ಸುಲಿಗೆ ನಡೆಸಲು ಮತ್ತೋರ್ವ ಸಹೋದರ ಅನೀಸ್ ಇಬ್ರಾಹಿಂ ಜೊತೆಗೂಡಿ ಕೆಲಸ ಮಾಡಿದ್ದಾಗಿ ಹೇಳಿದ ಇಕ್ಬಾಲ್ ಗೆ ಈಗ ಪಾಕಿಸ್ಥಾನವೇ ಕಾಪಾಡಬೇಕು!

ಬಿಲಿಯನ್ ಡಾಲರ್ ಪ್ರಶ್ನೆ ಏನೆಂದರೆ ಆರೋಪಿಗಳೆಂದು ಸಾಬೀತಾಗಿರುವ ಎರಡು NCP ನಾಯಕರನ್ನು ಜೈಲಿಗಟ್ಟುತ್ತಾರೆಯೇ ಅಥವಾ ಇಲ್ಲವೇ ಎಂಬುದೇ!!!

– ತಪಸ್ವಿ

Tags

Related Articles

Close