ಪ್ರಚಲಿತ

ಸ್ಫೋಟಕ ಸುದ್ದಿ: ಅಯ್ಯಪ್ಪ ಭಕ್ತರನ್ನು ಕೊಲ್ಲಲು ಐಸಿಸ್ ಹುನ್ನಾರ: ಐಸಿಸ್ ಉಗ್ರರ ಈ ಗುಪ್ತ ಪತ್ರದಲ್ಲಿ ಇನ್ನೇನೆಲ್ಲಾ ಇದೆ ಗೊತ್ತಾ?

ಅಯ್ಯಪ್ಪ ಭಕ್ತರು ಈ ಬಾರಿ ಶಬರಿಮಲೆಗೆ ಹೋಗುವಾಗ ತುಂಬಾ ಎಚ್ಚರಿಕೆ ವಹಿಸಲೇಬೇಕು. ಕೊಂಚ ಏಮಾರಿದರೂ ಭಕ್ತರ ಜೀವ ಹೋಗಬಹುದು. ಯಾಕೆಂದರೆ ಐಸಿಸ್ ಉಗ್ರರು ಅಯ್ಯಪ್ಪ ಭಕ್ತರನ್ನೇ ಕೊಲ್ಲಲು ಸಂಚೊಂದನ್ನು ಹೂಡಿದ್ದು, ಇಡೀ ದೇಶದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈಗಾಗಲೇ ಕೇರಳದಲ್ಲಿ ಗುಪ್ತವಾಗಿ ತನ್ನ ಜಾಡನ್ನು ವಿಸ್ತರಿಸಿರುವ ಐಸಿಸ್ ಉಗ್ರರು ಸಾವಿರಾರು ಭಕ್ತರನ್ನು ಏಕಕಾಲದಲ್ಲಿ ಕೊಂದು ಇಡೀ ವಿಶ್ವವವನ್ನೇ ತಲ್ಲಣಗೊಳಿಸಲು ಮುಂದಾಗಿದ್ದಾರೆ ಎನ್ನುವ ಖಚಿತ ವರ್ತಮಾನವೊಂದನ್ನು ಗುಪ್ತಚರ ಇಲಾಖೆ ಕಲೆಹಾಕಿದೆ.

ಕೇರಳದಲ್ಲಿರುವ ಅಯ್ಯಪ್ಪ ಭಕ್ತರನ್ನು ಟಾರ್ಗೆಟ್ ಮಾಡಿರುವ ಐಸಿಸ್ ಉಗ್ರರು ಅಯ್ಯಪ್ಪ ಭಕ್ತರು ಸ್ವೀಕರಿಸುವ ಪ್ರಸಾದದಲ್ಲಿ ವಿಷಬೆರೆಸಿ ಸಾವಿರಾರು ಮಂದಿ ಅಯ್ಯಪ್ಪ ಭಕ್ತರನ್ನು ಕೊಲ್ಲಲು ಉಗ್ರರು ಸಂಚು ಹೂಡಿದ್ದಾರೆ. ಮುಖ್ಯವಾಗಿ ರೈಲ್ವೆ ಸ್ಟೇಷನ್‍ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿರುವ ಅಯ್ಯಪ್ಪ ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ತಾನು ಸಿದ್ಧಪಡಿಸಿದ ವಿಷಮಿಶ್ರಿತ ಅಯ್ಯಪ್ಪನ ಪ್ರಸಾದವನ್ನು ನೀಡಿ ಅವರನ್ನು ಕೊಲ್ಲಲು ಸಂಚು ಹೂಡಿದ್ದಾರೆ ಎನ್ನುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಪೊಲೀಸರಿಗೆ ಗುಪ್ತಪತ್ರ ಹಾಗೂ ಐಸಿಸ್ ಉಗ್ರರು ಮಾತಾಡಿದ್ದಾರೆನ್ನಲಾದ ಆಡಿಯೋವೊಂದು ಲಭಿಸಿದ್ದು ಕೇರಳದಾದ್ಯಂತ ಹೈ ಅಲೆರ್ಟ್ ಘೋಷಿಸಲಾಗಿದೆ.

ಮುಸ್ಲಿಮರಲ್ಲದವರನ್ನು ಕೊಲ್ಲಿರಿ ಎಂದು ಈಗಾಗಲೇ ಆದೇಶ ನೀಡಿದ ಐಸಿಸ್ ಕಮಾಂಡರ್‍ಗಳು ಕೇರಳವನ್ನು ಸ್ಲೀಪರ್ ಸೆಲ್ ಆಗಿ ಆಯ್ಕೆ ಮಾಡಿಕೊಂಡಿರುವ ಐಸಿಸ್ ಉಗ್ರರು ತಮಗೆ ಸುಲಭವಾಗಿ ಸಿಗುವ ಅಯ್ಯಪ್ಪ ಭಕ್ತರನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ. ಒಂದು ಸ್ಥಳದಲ್ಲಿ ಬಾಂಬ್ ಸ್ಫೋಟಿಸಿ ಒಂದಷ್ಟು ಮಂದಿಯನ್ನು ಕೊಲ್ಲುವುದಕ್ಕೆ ಸಾಕಷ್ಟು ಸಮಯ ಹಿಡಿಯುವುದರಿಂದ ಇದಕ್ಕಾಗಿ ಹೊಸ ಮಾರ್ಗಗಳನ್ನು ಕಂಡುಹಿಡಿದಿದ್ದಾರೆ. ಆ ಹೊಸ ಮಾರ್ಗಗಳನ್ನು ತಿಳಿದರೆ ಅಯ್ಯಪ್ಪ ಭಕ್ತರು ಖಂಡಿತಾ ಬೆಚ್ಚಿಬೀಳಲೇಬೇಕಾಗಿದೆ..

1. ಪ್ರಸಾದದಲ್ಲಿ ವಿಷ:

ಅಯ್ಯಪ್ಪ ಭಕ್ತರ ಬಳಿಗೆ ಭಕ್ತರ ಸೋಗಿನಲ್ಲಿ ಬಂದು ಅವರಿಗೆ ಪ್ರಸಾದ ನೀಡಲಾಗುತ್ತದೆ. ಮುಖ್ಯವಾಗಿ ತಿನ್ನುವ ಪ್ರಸಾದದಲ್ಲಿ ವಿಷ ಬೆರೆಸಿ ಅಯ್ಯಪ್ಪ ಭಕ್ತರಂತೆಯೇ ಬಂದು ಅಯ್ಯಪ್ಪ ಭಕ್ತರಲ್ಲಿ ಪ್ರಸಾದವನ್ನು ತಿನ್ನಲು ಪುಸಲಾಯಿಸಲಾಗುತ್ತದೆ. ಅಯ್ಯಪ್ಪ ಭಕ್ತರು ಯಾವುದೇ ಸಂಶಯವಿಲ್ಲದೆ ಪ್ರಸಾದವನ್ನು ಸ್ವೀಕರಿಸಿದರೆ ಅದು ಅತ್ಯಂತ ವಿಷಯುಕ್ತವಾಗಿದ್ದು, ಅದನ್ನು ತಿಂದ ಭಕ್ತರು ಸ್ವಲ್ಪ ಹೊತ್ತಲ್ಲೇ ಪ್ರಾಣ ಬಿಡುತ್ತಾರೆ. ಇಂಥದೊಂದು ಉಪಾಯವನ್ನು ಹೆಣೆದಿರುವ ಐಸಿಸ್ ಉಗ್ರರು ಒಂದಷ್ಟು ಮಂದಿ ಹಿಂದೂಗಳನ್ನು ಕೊಲ್ಲಲು ಸಂಚು ಹೂಡಿದ್ದಾರೆ..

Related image

2. ರೈಲ್ವೆ ಸ್ಟೇಷನ್ ಬಳಿ ಆಹಾರದಲ್ಲಿ ವಿಷ:

ಲಕ್ಷಾಂತರ ಮಂದಿ ಭಕ್ತರು ಇಂದು ರೈಲ್ವೆಯನ್ನು ಬಳಸುತ್ತಿದ್ದು ಅದಕ್ಕಾಗಿ ರೈಲಿನಲ್ಲಿ ಬರುವ ಭಕ್ತರನ್ನು ಕೊಲ್ಲಲು ಐಸಿಸ್ ಉಗ್ರರು ಸಂಚು ಹೂಡಿದ್ದಾರೆ. ರೈಲಿನಲ್ಲಿ ಬರುವ ಭಕ್ತರಿಗೆ ಆಹಾರವನ್ನು ಮಾರುತ್ತಾ ಬಂದು ಅವರಿಗೆ ವಿಷಯುಕ್ತ ಆಹಾರವನ್ನು ನೀಡಿ ಅವರನ್ನು ಕೊಲ್ಲಲು ಸಂಚು ಹೂಡಿದ್ದಾರೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಕಲೆ ಹಾಕಿದೆ. ಮುಸ್ಲಿಮರನ್ನು ಗುರುತಿಸಿ ಅವರಿಗೆ ಆಹಾರವನ್ನು ನೀಡದೆ ಹಿಂದೂಗಳನ್ನು ಮಾತ್ರ ಆಯ್ಕೆ ಮಾಡುವಂತೆ ಐಸಿಸ್ ಸಂಚು ರೂಪಿಸಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ಕಲೆ ಹಾಕಿದೆ.

3. ಕಾಲ್ತುಳಿತ:

ಅಯ್ಯಪ್ಪ ಭಕ್ತರು ಹೆಚ್ಚು ಸೇರುವ ಸ್ಥಳದಲ್ಲಿ ಉದ್ದೇಶಪೂರ್ವಕವಾಗಿ ಕಾಲ್ತುಳಿತ ಉಂಟಾಗುವಂತೆ ಮಾಡಿ ಭಕ್ತರನ್ನು ಕೊಲ್ಲಲು ಐಸಿಸ್ ಸಂಚು ರೂಪಿಸಿರುವ ಬಗ್ಗೆ ಗುಪ್ತ ಪತ್ರದ ಆಧಾರದಲ್ಲಿ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿದೆ. ವದಂತಿ ಹಬ್ಬುವ ಮೂಲಕ ಭಕ್ತರನ್ನು ಭಯಹುಟ್ಟಿಸಿ ಅವರನ್ನು ಎಲ್ಲಿಂದರೆಲ್ಲಿಗೆ ಓಡುವಂತೆ ಮಾಡಲಾಗುತ್ತದೆ. ಭೀತಿಯಲ್ಲಿ ಓಡುವ ಭಕ್ತರು ಕಾಲ್ತುಳಿತ ಉಂಟಾಗಿ ಸಾಯುವಂತೆ ಮಾಡುವುದು ಉಗ್ರರ ಸಂಚಾಗಿದೆ.

4. ಬಾಂಬ್ ಇಡುವುದು:

ಅಯ್ಯಪ್ಪ ಭಕ್ತರು ಇಡುವ ಬ್ಯಾಗ್ ಮುಂತಾದುವುಗಳಲ್ಲಿ ಬಾಂಬ್‍ಗಳನ್ನು ಇಟ್ಟುಕೊಂಡು ಸಾಗಿಸುವಂತೆ ಮಾಡಿ ಅದು ಎಲ್ಲೆಂದರಲ್ಲಿ ಸ್ಫೋಟಿಸುವಂತೆ ಮಾಡಿ ಒಂದಷ್ಟು ಮಂದಿ ಭಕ್ತರನ್ನು ಕೊಲ್ಲಲು ಐಸಿಸ್ ಉಗ್ರರು ಸಂಚು ರೂಪಿಸಿರುವ ಬಗ್ಗೆ ಮಾಹಿತಿಯನ್ನು ಗುಪ್ತಚರ ಇಲಾಖೆ ಕಲೆ ಹಾಕಿದೆ.

ಈಗಾಗಲೇ ಕೇರಳದ ತ್ರಿಶೂಲ್ ರೈಲ್ವೆ ಸ್ಟೇಷನ್‍ನಲ್ಲಿ ಕಟ್ಟೆಚ್ಚರ ವಹಿಸಿರುವ ಪೊಲೀಸರು ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಕೂಲಂಕುಶ ತನಿಖೆಗೆ ಮುಂದಾಗಿದ್ದಾರೆ. ಮುಸ್ಲಿಮರಲ್ಲದವರನ್ನು ಕೊಲ್ಲಲು ಹೊಸ ಐಡಿಯಾ ಹೆಣೆದಿರುವ ಐಸಿಸ್ ಉಗ್ರರು ಒಂದಷ್ಟು ಮಂದಿ ಹಿಂದೂಗಳನ್ನು ಕೊಂದು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಬ್ರಿಟನ್, ಅಮೆರಿಕಾದಲ್ಲಿ ಟ್ರಕ್ ಸ್ಫೋಟಿಸುವಂತಹಾ ಕೃತ್ಯದಲ್ಲಿ ತೊಡಗಿಕೊಂಡು ಒಂದಷ್ಟು ಮಂದಿಯನ್ನು ಕೊಲ್ಲುವಲ್ಲಿ ಐಸಿಸ್ ಉಗ್ರರು ಯಶಸ್ವಿಯಾಗಿದ್ದಾರೆ. ಅದೇ ರೀತಿ ಭಾರತದಲ್ಲೂ ಮಾಡಲು ಐಸಿಸ್ ಉಗ್ರರು ಸಂಚು ಹೂಡಿದ್ದು, ಅದಕ್ಕಾಗಿ ಸುಲಭವಾಗಿ ಸಿಗುವ ಅಯ್ಯಪ್ಪ ಭಕ್ತರನ್ನು ಟಾರ್ಗೆಟ್ ಮಾಡಿದ್ದಾರೆ.

ಅಯ್ಯಪ್ಪ ಭಕ್ತರೇ ಈ ಎಚ್ಚರಿಕೆಯನ್ನು ಪಾಲಿಸಿ:

1. ಯಾರಾದರೂ ಅಪರಿಚಿತರು ಪ್ರಸಾದವೆಂದು ಏನನ್ನಾದರೂ ಕೊಟ್ಟರೆ ಅದನ್ನು ಸ್ವೀಕರಿಸಬೇಡಿ. ಮುಖ್ಯವಾಗಿ ದೇವಸ್ಥಾನವಲ್ಲದ ಕಡೆಗಳಲ್ಲಿ ಯಾರಾದರೂ ಪ್ರಸಾದ ನೀಡಿದರೆ ಸ್ವೀಕರಿಸಬೇಡಿ. ಈ ರೀತಿ ಕಂಡು ಬಂದ ವ್ಯಕ್ತಿಗಳಿದ್ದರೆ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಿ..

2. ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಯಾರಾದರೂ ಆಹಾರ ನೀಡಿದರೆ ಎಚ್ಚರಿಕೆ ವಹಿಸಿರಿ. ರೈಲಿನೊಳಗಡೆ ಹತ್ತಿ ಬಂದು ಆಹಾರ ವಸ್ತುಗಳನ್ನು ಮಾರುತ್ತಾ ಬಂದರೆ ಅವರು ನಿಜವಾದ ರೈಲಿನಲ್ಲೇ ಇರುವ ಸಿಬ್ಬಂದಿಯೇ ಎಂದು ಖಚಿತಪಡಿಸಲು ಸರಕಾರದ ವತಿಯಿಂದ ಕೊಡಲಾದ ಐಡೆಂಟಿಟಿ ಕಾರ್ಡನ್ನು ಪರಿಶೀಲಿಸಿ. ಯಾರ್ಯಾರಿಂದಲೋ ಆಹಾರವನ್ನು ಸ್ವೀಕರಿಸಲು ಹೋಗಬೇಡಿ. ಈ ಬಗ್ಗೆ ಅನುಮಾನ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

3. ದೇಗುಲದಲ್ಲಿ ಏನಾದರೂ ವದಂತಿ ಹಬ್ಬಿ ಭಯ ಹುಟ್ಟಿಸಿದರೆ ಅದಕ್ಕೆ ಮರುಳಾಗಬೇಡಿ. ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಧೈರ್ಯದಿಂದ ವರ್ತಿಸಿರಿ. ಕಾಲ್ತುಳಿತವಾಗದಂತೆ ನೋಡಿಕೊಳ್ಳಿ. ದೇವಸ್ಥಾನದಲ್ಲಿ ಪೊಲೀಸರು, ದೇಗುಲದ ಸಿಬ್ಬಂದಿ ನೀಡುವ ಸಲಹೆ ಸೂಚನೆಗಳನ್ನು ಎಚ್ಚರಿಕೆಯಿಂದ ಪಾಲಿಸಿ. ಅನುಮಾನ ಮೂಡಿದರೆ ಯಾವುದೇ ವಿಷಯವನ್ನು ಪೊಲೀಸರೊಂದಿಗೆ ವಿನಿಮಯಗೊಳಿಸಲು ಹಿಂಜರಿಯಬೇಡಿ.

4. ಮುಖ್ಯವಾಗಿ ಅಯ್ಯಪ್ಪ ಭಕ್ತರು ತನ್ನ ಬ್ಯಾಗ್, ಇರಿಮುಡಿ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾರಾದರೂ ಅಪರಿಚಿತರು ನಿಮ್ಮ ಬ್ಯಾಗನ್ನು ಮುಟ್ಟದಂತೆ ಎಚ್ಚರವಹಿಸಿ. ಅಪರಿಚಿತರಲ್ಲಿ ಬ್ಯಾಗ್ ಕೊಡಬೇಡಿ. ಯಾರಾದರೂ ಬ್ಯಾಗಿನೊಳಗಡೆ ಯಾವುದಾದರೂ ವಸ್ತುಗಳನ್ನಿಡದಂತೆ ಎಚ್ಚರವಹಿಸಿ. ಬ್ಯಾಗನ್ನು ಎಲ್ಲೆಂದರಲ್ಲಿ ಮರೆತುಬಿಡಬೇಡಿ. ಅನುಮಾನ ಬಂದರೆ ಬ್ಯಾಗನ್ನೊಮ್ಮೆ ಚೆಕ್ ಮಾಡಿಕೊಳ್ಳಿ. ಬ್ಯಾಗ್‍ನೊಳಗಡೆ ನಿಮ್ಮದಲ್ಲದ ವಸ್ತು ಏನಾದರೂ ಸಿಕ್ಕಿದರೆ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಿ.

5. ಯಾರಾದರೂ ವದಂತಿ ಹಬ್ಬಿದರೆ ಅದಕ್ಕೆ ಮರುಳಾಗಬೇಡಿ. ಬಂದಿರುವ ವದಂತಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಮುಂದುವರಿಯಿರಿ. ನಿಮ್ಮ ಕಿವಿಗೆ ವದಂತಿ ಬಿದ್ದರೆ ಈ ಬಗ್ಗೆ ಪೊಲೀಸರಲ್ಲಿ ಮಾಹಿತಿ ನೀಡಿ…

6. ಅಯ್ಯಪ್ಪ ಭಕ್ತರೇ ನಿಮಗೆ ಏನಾದರೂ ಅನುಮಾನ, ಭಯ ಅಥವಾ ಸಲಹೆ ಸೂಚನೆಗಳಿದ್ದರೆ ನೇರವಾಗಿ ಪೊಲೀಸರೊಡನೆ ವ್ಯವಹರಿಸಿ. ಕ್ಷೇತ್ರಕ್ಕೆ ಹೋಗುವುದರಿಂದ ಹಿಡಿದು ಸುರಕ್ಷಿತವಾಗಿ ವಾಪಸ್ ಆಗುವವರೆಗೆ ಸದಾ ಪೊಲೀಸ್ ಸಂಪರ್ಕದಲ್ಲಿದ್ದರೆ ಪೊಲೀಸರಿಗೂ ಭಕ್ತರ ಜೊತೆ ರಕ್ಷಣೆ ಮಾಡಲು ಸುಲಭವಾಗುತ್ತದೆ. ಯಾಕೆಂದರೆ ಅಯ್ಯಪ್ಪ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಬಂದು ಹೋಗುವುದರಿಂದ ಪೊಲೀಸರಿಗೂ ಅನುಮಾನ, ಗೊಂದಲ ಮೂಡುವುದು ಸಹಜ.

ಅಯ್ಯಪ್ಪ ದೇಗುಲವನ್ನು ವ್ಯಾವಹಾರಿಕೆ ಕ್ಷೇತ್ರವನ್ನಾಗಿಸಿದ ಕೇರಳದ ಪಿನರಾಯ್ ವಿಜಯನ್ ಸರಕಾರ ಅದರಿಂದ ಬರುವ ಆದಾಯದ ಮೇಲೆ ಕಣ್ಣಿಟ್ಟಿದೆಯೇ ಹೊರತು ಭಕ್ತರ ಸುರಕ್ಷತೆಯ ಮೇಲೆ ಕಣ್ಣಿಟ್ಟಿಲ್ಲ. ಕೇರಳವನ್ನು ಐಸಿಸ್ ಉಗ್ರರು ಸ್ಲೀಪರ್ ಶೆಲ್ ಆಗಿ ಆಯ್ಕೆ ಮಾಡಿಕೊಂಡಿದ್ದರೂ ಕೇರಳದ ಪಿನರಾಯ್ ವಿಜಯನ್ ಸರಕಾರ ಮಾತ್ರ ಈ ಬಗ್ಗೆ ಎಚ್ಚರವಹಿಸಿಲ್ಲ. ಕೇರಳದಲ್ಲಿ ಮತಾಂಧರ ಅಟ್ಟಹಾಸ ಹೆಚ್ಚುತ್ತಿದ್ದು, ಸರಕಾರದ ಹಿಂದೂಗಳ ತುಷ್ಟೀಕರಣ ನೀತಿಯಿಂದ ಉಗ್ರ ಸಂಘಟನೆಗಳು ಕೇರಳದಲ್ಲಿ ಕೊಬ್ಬುತ್ತಿದೆ. ಸರಕಾರ ಅಯ್ಯಪ್ಪ ಭಕ್ತಿಗೆ ಗರಿಷ್ಠ ಭದ್ರತೆ ನೀಡುತ್ತಾ ಅವರ ಸುರಕ್ಷತೆಗೆ ಒತ್ತು ನೀಡಬೇಕಾಗಿದೆ.

ಕೃಪೆ; ಪಬ್ಲಿಕ್ ಟಿವಿ

ಚೇಕಿತಾನ

Tags

Related Articles

Close