ಇತಿಹಾಸ

ಸ್ಫೋಟಕ ಸುದ್ದಿ! ಇಸ್ಲಾಮೀಕರಣವಾಗಿದೆಯೇ ಕಾಶ್ಮೀರ? ರೋಹಿಂಗ್ಯಾ ಮುಸಲ್ಮಾನರಿಗೂ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೂ ಇರುವ ಸಂಬಂಧವೇನು ಗೊತ್ತೇ?

ಕಾಶ್ಮೀರ ಎಂದರೆ ನಮಗೆ ಥಟ್ಟನೆ ನೆನಪಾಗೋದು ಭಯೋತ್ಪಾದನೆ, ಸೈನಿಕರ ಮೇಲೆ ಕಲ್ಲೆಸೆತ, ಪ್ರತ್ಯೇಕತಾವಾದಿಗಳ ಕಾಶ್ಮೀರ ಪಾಕಿಸ್ತಾನಕ್ಕೆ
ಸೇರಬೇಕು ಅನ್ನೋ ದ್ವೇಷದ ದೇಶವಿರೋಧಿ ಮಾತುಗಳು.

ಒಂದು ಕಾಲದಲ್ಲಿ ಭಾರತದ ಸ್ವರ್ಗ ಅನ್ನಿಸಿಕೊಳ್ಳುತ್ತಿದ್ದ ಕಾಶ್ಮೀರ ಇಸ್ಲಾಮೀಕರಣವಾದದ್ದಾದರೂ ಹೇಗೆ?

ಕಶ್ಯಪ್ ಋಷಿಗಳು ನಿರ್ಮಿಸಿದ ಭೂಲೋಕದ ಸ್ವರ್ಗವಾದ ಕಾಶ್ಮೀರ ನರಕವಾದದ್ದಾದರೂ ಹೇಗೆ?

ಕಾಶ್ಮೀರದಲ್ಲಿ ಇಸ್ಲಾಮಿ ಆಕ್ರಮಣ ಶುರುವಾಗಿದ್ದು 13 ನೆಯ ಶತಮಾನದಲ್ಲಿ.

ಭಾರತದಲ್ಲಿ ಮಯನ್ಮಾರಿನ ರೋಹಿಂಗ್ಯಾ ಮುಸಲ್ಮಾನರಿಗೆ ಆಶ್ರಯ ನೀಡಿ ಅನ್ನೋ ಭಾರತೀಯ ಮುಸಲ್ಮಾನರ ಒತ್ತಾಯಕ್ಕೆ ಕಾರಣವಾದರೂ ಏನು?
ಕಾಶ್ಮೀರ ಹೇಗೆ ಹಿಂದೂ ಬಾಹುಳ್ಯದಿಂದ ಇಸ್ಲಾಮೀಕರಣದತ್ತ ಹೊರಳಿತೋ ಹಾಗೆಯೇ ಭಾರತವನ್ನೂ ಇಸ್ಲಾಮೀಕರಣ ನಾಡುವ ಹುನ್ನಾರದ ಭಾಗವೇ ಇದಕ್ಕೆಲ್ಲ
ಕಾರಣ.

ಅದಿರಲಿ. ಕಾಶ್ಮೀರದ ಇತಿಹಾಸಕ್ಕೆ ಮರಳೋಣ.

13 ನೇ ಶತಮಾನದಲ್ಲಿ ಕಾಶ್ಮೀರವನ್ನ ರಾಜಾ ಸಹದೇವ ಆಳುತ್ತಿದ್ದ. ಭಾರತದ ಇತಿಹಾಸದುದ್ದಕ್ಕೂ ನೀವು ಗಮನಿಸಿದರೆ ಅರ್ಥವಾಗುವ ವಿಷಯವೆಂದರೆ ಹಿಂದೂ ರಾಜರುಗಳು ಮುಸಲ್ಮಾನರನ್ನ ಶರಣಾಗತಿ ನೀಡಿ, ಕ್ಷಮಿಸಿ ಅಥವ ಅವರನ್ನ ಆಶ್ರಯ ನೀಡಿದ್ದಕ್ಕೆ ಭಾರತ ತಕ್ಕ ಬೆಲೆಯನ್ನೇ ತೆತ್ತಿತ್ತು.

ಇಂದಿಗೂ ಅದು ಪ್ರಸ್ತುತವೇ ಸರಿ. ಅಂತಹದ್ದೆ ತಪ್ಪನ್ನ ಕಾಶ್ಮೀರದ ರಾಜ ಸಹದೇವ ಕೂಡ ಮಾಡಿದ್ದ. ಸಹದೇವ ಕಾಶ್ಮೀರದಲ್ಲಿ ಟಿಬೆಟಿಯನ್
ರಾಜನಾದ ಲಡಾಕ್’ನ ‘ಸಿಂಚನ್’ನಿಗೂ ಕಾಶ್ಮೀರದಲ್ಲಿ ಆಶ್ರಯ ನೀಡಿದ್ದು ಕಾಶ್ಮೀರ ಇಸ್ಲಾಮೀಕರಣವಾಗುವ ಪಾಠಕ್ಕೆ ಮುನ್ನುಡಿಯಾಗಿತ್ತು.

ಲಡಾಕಿನ ಟಿಬೆಟಿಯನ್ ರಾಜಕುಮಾರನಾಗಿದ್ದ ರಿಂಚನ್, ಲಡಾಕಿನ ಆಡಳಿತಗಾರನಾದ ಅವನ ಚಿಕ್ಕಪ್ಪನ ವಿರುದ್ಧ ದಂಗೆಯೆದ್ದಿದ್ದ, ದಂಗೆಯೆದ್ದಿದ್ದ ರಿಂಚನ್’ನ್ನ ಆತನ ಚಿಕ್ಕಪ್ಪನೇ ಸೋಲಿಸಿದ್ದ. ಸೋತ ರಿಂಚನ್ ಪ್ರಾಣ ಉಳಿಸಿಕೊಳ್ಳಲು ಕಾಶ್ಮೀರಕ್ಕೆ ಓಡಿ ಬಂದನು.

ಹೀಗೆ ಆಶ್ರಯ ಬೇಡಿ ಬಂದ ರಿಂಚನ್’ನಿಗೆ ಕಾಶ್ಮೀರದ ರಾಜ ಆಶ್ರಯ ನೀಡಿ ಆತನನ್ನ ತನ್ನ ರಾಜ್ಯದ ಮಂತ್ರಿಯನ್ನಾಗೂ ನೇಮಿಸಿದ.

ಇದರ ಮಧ್ಯೆ ಪರ್ಷಿಯನ್ ಮುಸ್ಲಿಂ ಸೂಫಿಯಾದ ‘ಷಾಹ್ ಮಿರ್’ ಕೂಡ ಕಾಶ್ಮೀರದಲ್ಲಿ ಬಂದು ನೆಲೆಸಿದ್ದ. ಅತ್ತ ರಿಂಚನ್’ನ್ನ
ಮಂತ್ರಿಯನ್ನಾಗಿ ನೇಮಿಸಿದ್ದ ಸಹದೇವ ಈ ಪರ್ಷಿಯನ್ ಸೂಫಿ ಷಾಹ್ ಮೀರನನ್ನ ಕೂಡ ತನ್ನ ಆಸ್ಥಾನದ ಸಚಿವನಾಗಿ ನೇಮಕಮಾಡಿಕೊಂಡುಬಿಡುತ್ತಾನೆ. ಶಾಹ್ ಮೀರ್ ಹಾಗು ರಿಂಚನ್ ಉತ್ತಮ ಸ್ನೇಹಿತರಾಗಿಬಿಟ್ಟರು.

ಸಹದೇವ ಕಾಶ್ಮೀರವನ್ನ ಆಳುತ್ತಿದ್ದ ವೇಳೆಯಲ್ಲಿಯೇ ಮಂಗೋಲರು ರಾಜ ‘ದುಲ್ಚು’ ನೇತೃತ್ವದಲ್ಲಿ 70,000 ಬೃಹತ್ ಸೈನ್ಯದ ಜೊತೆಗೆ ಕಾಶ್ಮೀರದ ಮೇಲೆ ಯುದ್ಧ ಘೋಷಿಸಿ ರಾಜ ಸಹದೇವನನ್ನ ಸೋಲಿಸಿಯೇಬಿಟ್ಟರು.

ಇಸ್ಲಾಮಿ ಆಕ್ರಮಣಕಾರರು ಹೇಗೆ ಯುದ್ಧದಲ್ಲಿ ಸೋಲಿಸಿದ ರಾಜ್ಯವನ್ನು ವಶಪಡಿಸಿಕೊಂಡು ಅಲ್ಲಿನ ಜನರನ್ನ ಬಲವಂತವಾಗಿ ಇಸ್ಲಾಮಿಗೆ ಮತಾಂತರ ಮಾಡುತ್ತಾರೋ ಹಾಗೆ ಬೇರೆ ಯಾವ ದಾಳಿಕೋರರೂ ಭಾರತದಲ್ಲಿ ಮಾಡಿರಲಿಲ್ಲ. ಅದೇ ರೀತಿಯಲ್ಲಿ ಮಂಗೋಲಿಯನ್ ‘ದುಲ್ಚು’ ಕೂಡ ಸಹದೇವನನ್ನ ಸೋಲಿಸಿ ಟಿಬೇಟಿನ ಕಡೆ ಹೆಜ್ಜೆ ಹಾಕಿದ್ದ.

ಈ ಸಮಯದಲ್ಲಿ ಸಹದೇವನ ರಾಜ್ಯದ ಮುಖ್ಯಸ್ಥನಾಗಿದ್ದ ರಾಮಚಂದ್ರ ಮಂಗೋಲರು ಕಾಶ್ಮೀರ ಬಿಟ್ಟು ತೆರಳಿದ ನಂತರ ಸಹದೇವನನ್ನ ರಾಜನ ಸ್ಥಾನದಿಂದ ಕೆಳಗಿಳಿಸಿ ತಾನೇ ಕಾಶ್ಮೀರದ ಪಟ್ಟ ಆಕ್ರಮಿಸಿಬಿಟ್ಟ.

ಹೀಗೆ ಕಾಶ್ಮೀರವನ್ನ ತನ್ನ ಅಧೀನಕ್ಕೆ ತೆಗೆದುಕೊಂಡ ರಾಮಚಂದ್ರನನ್ನ ಸೋಲಿಸಿ ಕಾಶ್ಮೀರದ ಆಡಳಿತಗಾರನಾಗಿಬಿಟ್ಟ.

ರಿಂಚನ್ ತನ್ನ ಆಳ್ವಿಕೆಯನ್ನ ನ್ಯಾಯಸಮ್ಮತಗೊಳಿಸಲು ರಾಮಚಂದ್ರನ ಮಗಳಾದ ‘ಕೋತರಾನಿ’ಯನ್ನ ವಿವಾಹವಾದ ಹಾಗು ಹಿಂದೂ ಧರ್ಮಕ್ಕೆ ಪರಿವರ್ತನೆಯಾಗಲೂ ಒಪ್ಪಿಕೊಂಡ.

ಆದರೆ ಕಾಶ್ಮೀರ ರಾಜ್ಯದ ಹಿಂದೂ ಬ್ರಾಹ್ಮಣ ಪಂಡಿತರು ರಿಂಚನ್’ನ ಆಚರಣೆಗಳು, ಸಂಸ್ಕೃತಿಯು ನಮ್ಮ ಧರ್ಮಕ್ಕೆ ಹಿಡಿಸೋಲ್ಲವೆಂದು ಹಿಂದೂ ಧರ್ಮಕ್ಕೆ ಸ್ವೀಕರಿಸಲು ಒಪ್ಪಲಿಲ್ಲ.

ಅಷ್ಟರಲ್ಲಾಗಲೆ ಕಾಶ್ಮೀರದಲ್ಲಿ ಮಧ್ಯ ಪೂರ್ವ ಮತ್ತು ಮಧ್ಯ ಏಷ್ಯಾದ ಮುಸ್ಲಿಂ ಸೂಫಿ ಮಿಷನರಿಗಳು ಕಾಶ್ಮೀರದಲ್ಲಿ ನೆಲೆಸಿದ್ದರು ಮತ್ತು ಹಲವಾರು
ಕಾಶ್ಮೀರಿಗಳನ್ನು ಇಸ್ಲಾಂಗೆ ಮತಾಂತರಿಸಿದ್ದರು.

ರಾಜ ರಿಂಚನ್ ರಾಜ್ಯದಲ್ಲಿ ಬೌದ್ಧರು, ಹಿಂದುಗಳು, ಮುಸಲ್ಮಾನರೂ ಅದಾಗಲೇ ನೆಲೆಸಿದ್ದರು. ಅತ್ತ ಹಿಂದೂ ಧರ್ಮಕ್ಕೆ ರಿಂಚನ್’ನ್ನ ಸ್ವೀಕರಿಸಲು ಕಾಶ್ಮೀರದ ಪಂಡಿತರು ತಯಾರಿರಲಿಲ್ಲ.

ಇದೇ ಸಮಯವನ್ನ ದುರುಪಯೋಗಪಡಿಕೊಂಡ ಷಾಹ್ ಮೀರ್’ನು ರಾಜ ರಿಂಚನ್’ಗೆ ಮೂರು ಧರ್ಮಗಳ ಆಯ್ಕೆಗಳನ್ನ ಮುಂದಿಟ್ಟು ನೀವು ಹಿಂದೂ ಅಥವ ಬೌದ್ಧ ಅಥವ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಅನ್ನೋ ಸಲಹೆಯನ್ನು ನೀಡಿದ.

ಆದರೆ ತಾನು ಯಾವ ಧರ್ಮಕ್ಕೆ ಸೇರಲು ಎಂದು ಕನಫ್ಯೂಸ್ ಆಗಿದ್ದ ರಿಂಚನ್’ಗೆ ಷಾಹ್ ಮೀರ್ ತನ್ನ ಕುತಂತ್ರದಿಂದ ಒಂದು ಸಲಹೆಯನ್ನು ನೀಡ್ತಾನೆ.

ಅದೇನು ಗೊತ್ತಾ? “ನೀವು ನಾಳೆ ಬೆಳಿಗ್ಗೆ ಎದ್ದು ಮೊದಲು ಯಾವ ಧರ್ಮದ ವ್ಯಕ್ತಿಯ ಮುಖವನ್ನ ಮೊದಲು ನೋಡುತ್ತಿರೋ ಅದೇ ಧರ್ಮಕ್ಕೆ ಮತಾಂತರವಾಗಿ” ಅನ್ನೋ ಸಲಹೆಯನ್ನು ನೀಡಿದ.

ಇದಕ್ಕೊಪ್ಪಿದ ರಾಜಾ ರಿಂಚನ್ ಮರುದಿನ ಬೆಳಗಿನ ಸಮಯಕ್ಕೆ ಕಾದ.

ಮರುದಿನ ಬೆಳಿಗ್ಗೆ ರಿಂಚನ್ ಅರಮನೆಯಿಂದ ಹೊರ ನಡೆದಾಗ ಆತ ನೋಡಿದ ಮೊದಲ ವ್ಯಕ್ತಿಯೇ ನಮಾಜ್ ಮಾಡುತ್ತಿದ್ದ ಮುಸ್ಲಿಂ ಸೂಫಿ ‘ಸೈಯದ್ ಶರಾಫುದ್ದೀನ್ ಬುಲ್ಬುಲ್ ಷಾ’.

ಈತನನ್ನ ನೋಡಿದ ರಿಂಚನ್ ಇಸ್ಲಾಂ ಧರ್ಮವನ್ನ ಸ್ವೀಕರಿಸಿ ‘ಸುಲ್ತಾನ್ ಸದ್ರುದ್ದೀನ್’ ಎಂದು ತನ್ನ ಹೆಸರನ್ನ ಬದಲಾಯಿಸಿಕೊಂಡ.

ಇತಿಹಾಸದ ಮೂಲಗಳ ಪ್ರಕಾರ, ಷಾಹ್ ಮಿರ್’ನು ಶರಾಫುದ್ದಿನನ ಜೊತೆ ತಾನು ಮಾಡಿದ ಕುತಂತ್ರದ ಬಗ್ಗೆ ಮೊದಲೇ ತಿಳಿಸಿ ರಾಜ ರಿಂಚನ್’ನ್ನ ಇಸ್ಲಾಂಗೆ ಪರಿವರ್ತಿಸುವ ಹುನ್ನಾರ ಮಾಡಿದ್ದರು.

ಹೀಗೆ ಇಸ್ಲಾಂಗೆ ಮತಾಂತರಗೊಂಡ ರಿಂಚನ್’ನ್ನ ತನ್ನದೆ ರಾಜ್ಯದ ಬಂಡುಕೋರರು ಸೋಲಿಸಿದರು. ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡ ರಿಂಚನ್ ಅಲಿಯಾಸ್ ಸುಲ್ತಾನ್ ಸದ್ರುದ್ದೀನ್ 1323 ರಲ್ಲಿ ಅಸುನೀಗಿದ.

ಇದೇ ಸಮಯಕ್ಕೆ ಕಾಯುತ್ತಿದ್ದ ಷಾಹ್ ಮಿರ್ ಅನ್ನೋ ಜಿಹಾದಿ ಸೂಫಿ ಕಾಶ್ಮೀರದ ರಾಜನಾಗಿ ಮೆರೆಯಲು ಮುಂದಾದ.

ಅಷ್ಟೇ ಅಲ್ಲದೆ ‘ಕೋಟಾ’ದ ರಾಣಿಯ ಮೇಲೂ ಕಣ್ಣು ಹಾಕಿ ಆಕೆಗೆ ತನ್ನನ್ನ ಮದುವೆಯಾಗು ಅನ್ನೋ ಪ್ರಸ್ತಾವನೆಯನ್ನೂ ಮುಂದಿಟ್ಟ. ಆದರೆ ಹಿಂದೂ ಧರ್ಮದವಳಾಗಿದ್ದ ಕೋಟಾದ ರಾಣಿ ಇದಕ್ಕೊಪ್ಪಲಿಲ್ಲ.

ಬಲವಂತವಾಗಿ ಕೋಟಾ ರಾಣಿಯನ್ನ ಷಾಹ್ ಮಿರ್ ಮುಂದಾದಾಗ ಕೋಟಾ ರಾಣಿ ಧೈರ್ಯದಿಂದ ಹೋರಾಡಿದಳು.

ಮೊದಲೇ ಮಂಗೋಲರ ಆಕ್ರಮಣದಿಂದ ಅವಳ ಸಾಮ್ರಾಜ್ಯವು ಅದಾಗಲೇ ದುರ್ಬಲಗೊಂಡಿತು.

ಷಾಹ್ ಮೀರ್ ‘ಕೋಟಾ’ ರಾಣಿಯನ್ನ ಸೋಲಿಸಿಬಿಟ್ಟ. ಯುದ್ಧವನ್ನ ಸೋತ ರಾಣಿ ತನ್ನ ಶೀಲವನ್ನ ಯಾವ ಕಾರಣಕ್ಕೂ ಮುಸಲ್ಮಾನ ರಾಜನಿಗೆ ಒಪ್ಪಿಸಲ್ಲ ಎಂಬ ನಿರ್ಧಾರ ಮಾಡಿ ಜೌಹಾರ್(ತನ್ನನ್ನ ತಾನು ಬೆಂಕಿಗಾಹುತಿ) ಮಾಡಿಕೊಂಡುಬಿಟ್ಟಳು.

ಹೀಗೆ ಕಾಶ್ಮೀರವನ್ನ ಮೋಸದಿಂದ ಇಸ್ಲಾಮೀಕರಣಗೊಳಿಸಲು ಕಾರಣೀಕರ್ತರಾದವರೇ ಷಾಹ್ ಮೀರ್ ಹಾಗು ಸೈಯದ್ ಶರಾಫುದ್ದೀನ್ ಬುಲ್ಬುಲ್ ಷಾ ಎಂಬ ಜಿಹಾದಿ ಸೂಫಿಗಳು.

ಮುಂದೆ 18 ನೆ ಶತಮಾನದಲ್ಲಿ ಇದೇ ಕಾಶ್ಮೀರವು ಮತ್ತೆ ಹಿಂದೂ ರಾಜನ ಕೈಗೆ ಮರುಳಿತಾದರೂ ಭಾರತದ ಸ್ವಾತಂತ್ರ್ಯಾನಂತರ ಇನ್ನು ಆ ರಾಜ್ಯ ಮುಸಲ್ಮಾನ ಬಾಹುಳ್ಯದಿಂದಲೇ ಕೂಡಿದೆ.

ಅಂದು ಮೋಸದಿಂದ ರಿಂಚನ್’ನನ್ನ ಸೋಲಿಸಿ ಕಾಶ್ಮೀರವನ್ನ ಇಸ್ಲಾಮೀಕರಣ ಮಾಡಿದ್ದ ಷಾಹ್ ಮೀರ್ & ಶರಾಫುದ್ದಿನ್’ನ ಕೆಲಸವನ್ನೇ ಇಂದು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು, ಅಲ್ಲಿನ ಜನಗಳು ಹಾಗು ಪಾಕಿಸ್ತಾನದ ಭಯೋತ್ಪಾದಕರು ಮಾಡುತ್ತಿದ್ದಾರಷ್ಟೆ.

ಮುಸಲ್ಮಾನರಿಗೆ ಆಶ್ರಯ ಯಾವ ದೇಶವೇ ನೀಡಲಿ ರಾಜನೇ ನೀಡಲಿ ಅವರು ಮಾತ್ರ ಆಶ್ರಯ ನೀಡಿದ ರಾಜ್ಯಕ್ಕೆ ಅಥವ ರಾಜನಿಗೆ ಅಥವ ರಾಷ್ಟ್ರಕ್ಕೆ ಮಾತ್ರ ಎಂದಿಗೂ ಕೃತಘ್ನರಾಗಿರಲು ಸಾಧ್ಯವೇ ಇಲ್ಲ.

ಇಸ್ಲಾಮಿನ ಪ್ರಕಾರ ಮುಸಲ್ಮಾನರಿಗೆ ಯಾವ ದೇಶದ ಗಡಿ, ಭಾಷೆ, ಪ್ರಾಂತ್ಯ ಯಾವುದೂ ಮೊದಲಲ್ಲ, ಅವರಿಗೆ ತಾವು ಮೊದಲು ಮುಸಲ್ಮಾನರು ಅಷ್ಟೇ.

ಈಗ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಮಯನ್ಮಾರಿನ ರೋಹಿಂಗ್ಯಾ ಮುಸಲ್ಮಾನರ ಪರ ಇಲ್ಲಿನ ಮುಸಲ್ಮಾನರು ಬ್ಯಾಟಿಂಗ್ ಮಾಡುತ್ತಿರೋದಕ್ಕೂ ಇದೇ ಕಾರಣ.

ಉಂಡ ಮನೆಗೆ ದ್ರೋಹ ಬಗೆಯುವಂಥವರು ನಮ್ಮ ದೇಶದಲ್ಲೇ ಸಾವಿರ ವರ್ಷಗಳಿಂದಿದಾರೆ. ಅಂಥವರನ್ನು ಹುಡುಕಿ ಹೊರದಬ್ಬೋ ಕೆಲಸವಾಗಬೇಕಿದೆ ಅಷ್ಟೇ.

ಅದನ್ನ ಮೋದಿಜೀ ಸರ್ಕಾರ ಸಮರ್ಥವಾಗಿ ನಿಭಾಯಿಸುವತ್ತ ಹೆಜ್ಜೆಯಿಡುತ್ತಿದೆ.

ಕಾಶ್ಮೀರ ಇಸ್ಲಾಮೀಕರಣವಾದ ರೀತಿಯಲ್ಲಿ ಇಡೀ ಭಾರತವನ್ನೇ ಇಸ್ಲಾಮೀಕರಣಗೊಳಿಸಲು ಷಡ್ಯಂತ್ರ ಮಾಡುತ್ತಿರುವವರನ್ನ ತಡೆಯುವುದು ಸರ್ಕಾರ,
ಭಾರತೀಯ ಸೇನೆಯದ್ದಷ್ಟೇ ಕರ್ತವ್ಯವಲ್ಲ. ಬದಲಾಗಿ ಆ ಜಜವಾಬ್ದಾರಿ ನಾವು ಸಾಮಾನ್ಯ ನಾಗರಿಕರ ಮೇಲೂ ಇದೆ.

– Vinod Hindu Nationalist

Tags

Related Articles

Close