ಇತಿಹಾಸ

ಸ್ಫೋಟಕ ಸುದ್ದಿ! ಗಾಂಧೀ ಹತ್ಯೆಯ ರಹಸ್ಯ ದಾಖಲೆಗಳನ್ನು ಬರೋಬ್ಬರಿ 68 ವರ್ಷಗಳ ಕಾಲ ಮಧ್ಯಪ್ರದೇಶದಲ್ಲಿ ಅಡಗಿಸಿಟ್ಟಿದ್ದು ಯಾಕೆ ಗೊತ್ತೇ?!

ಯಾರಾದರೂ ಭಾರತದಲ್ಲಿ ‘ಗಾಂಧಿಯನ್ನು ಕೊಂದವರಾರೆಂದರೆ”, ಮತ್ತ್ಯಾವ ಪೂರ್ವಾಪರ ಯೋಚನೆಯಿಲ್ಲದೇ ಥಟ್ಟನೇ ಉಲಿಯುತ್ತಾರೆ “ನಾಥೂರಾಮ್ ಗೋಡ್ಸೆ” ಯೆಂದು! ಸತ್ಯ! ಗಾಂಧೀಜಿಯ ಸಾವಿನ ಸುತ್ತ ಹೆಣೆದ ದೃಶ್ಯಗಳೆಲ್ಲ ಗೋಡ್ಸೆಯ ಕಡೆಗೇ ಬೊಟ್ಟು ಮಾಡಿ ತೋರಿಸುತ್ತವಷ್ಟೇ!

ಎಲ್ಲದಕ್ಕೂ ಹೆಚ್ಚಾಗಿ ನ್ಯಾಯಾಲಯದ ಕಟಕಟೆಯಲ್ಲಿ, ನಾಥೂರಾಮ್ ಗೋಡ್ಸೆ ‘ಹಲವಾರು ಕಾರಣಗಳಿತ್ತು, ಗಾಂಧಿಯ ಹತ್ಯೆಗೆ ಪ್ರೇರೇಪಿಸಲು!’ ಎಂದುಬಿಟ್ಟ! ಆದರೆಲ್ಲಿಯೂ ತಾನು ಗಾಂಧೀಜಿಯನ್ನು ಹತ್ಯೆಗೈದೆ ಎನ್ನಲಿಲ್ಲ! “ಪ್ರೇರೇಪಣೆ’ ಎಂಬ ಒಂದೇ ಪದ ಸಾಕಿತ್ತು ನೆಹರೂವಿಗೆ! ಅಲ್ಲಿಂದ, ಗಾಂಧೀಜಿಯನ್ನು ಕೊಂದದ್ದು ಗೋಡ್ಸೆ ಎಂಬ ಸುದ್ದಿ ವಿಶ್ವವ್ಯಾಪಿಯಾಗಿ ಹಬ್ಬಿಬಿಟ್ಟಿತು!

ಆದರೆ, ಮುಚ್ಚಿಟ್ಟ ಇತಿಹಾಸದ ಸತ್ಯದ ಹಿಂದೆ ಒಬ್ಬರು ಪ್ರಭಾವಿ ಅನಾಮಿಕ ವ್ಯಕ್ತಿ ಗಾಂಧಿಯ ಹತ್ಯೆಗೆ ಅತಿ ಮುಖ್ಯವಾದ ಸಂಚು ರೂಪಿಸಿದ್ದರು ಎಂಬುದು
ನಿಧಾನವಾಗಿ ಪರದೆ ಸರಿಸಿ ಮುಂದೆ ಹೆಜ್ಜೆಯಿಟ್ಟಿತು!!

ಗಾಂಧೀಜಿಯ ಹತ್ಯೆಯ ದುರ್ಲಭವಾದ ಅಮೂಲ್ಯ ದಾಖಲೆಗಳನ್ನೊದಗಿಸುವಂತೆ ಮೊದಲು ಧ್ವನಿ ಎತ್ತಿದ್ದು ಸುಬ್ರಹ್ಮಣಿಯನ್ ಸ್ವಾಮಿ! ಈ ಹಿಂದೆಯೂ ಕೂಡ ಸ್ವಾಮಿ “ನಾಥೂರಾಮ್ ಗೋಡ್ಸೆಯನ್ನು ಅನಾವಶ್ಯಕವಾಗಿ ಗಾಂಧೀ ಹತ್ಯೆಯ ಮಾಡಿದನೆಂಬ ಆರೋಪ ಹೊರಿಸಿ ಶಿಕ್ಷೆಗೊಳಪಡಿಸಿದರು. ಆದರೆ, ಗಾಂಧಿಯನ್ನು ನಿಜವಾಗಿಯೂ ಹತ್ಯೆಗೈದವರು ಮಾತ್ರ ಇನ್ನೂ ಆರಾಮಾಗಿ ತಿರುಗಾಡಿಕೊಂಡಿದ್ದಾರೆ” ಎಂದಿದ್ದ ಸ್ವಾಮಿಯವರು ಗೋಡ್ಸೆಯ ಮೂಲಕ ಕ್ರಾಂತಿಕಾರಿಗಳನ್ನು ಮಟ್ಟ ಹಾಕಲು ಕಾಂಗ್ರೆಸ್ ರೂಪಿಸಿದ ತಂತ್ರವಿದು ಎಂಬ ಸುಳಿವನ್ನೂ ನೀಡಿದ್ದರು!

ಆದರೆ, ಅವೆಲ್ಲವೂ ಇವತ್ತು ನಿಜವಾಗುವ ಲಕ್ಷಣವೊಂದು ಎದ್ದು ಕಾಣಿಸುತ್ತಿದೆ! Times Of India ಇವತ್ತು ಪ್ರಕಟಿಸಿದ ಪ್ರಕಾರ ಗಾಂಧೀ ಹತ್ಯೆಯ ಕುರಿತಾದ ಮಧ್ಯಪ್ರದೇಶದಲ್ಲಿ ಅಡಗಿದ್ದ ದಾಖಲೆಗಳು ಸುಬ್ರಹ್ಮಣಿಯನ್ ಸ್ವಾಮಿಯವರ ಮಾತನ್ನು ಅಕ್ಷರಶಃ ನಿಜಗೊಳಿಸಿದೆ! ಸುಮ್ಮನೆ ನೋಡಿದರೆ ಗೋಡ್ಸೆ ಗಾಂಧಿಯನ್ನು ಸಾರ್ವಜನಿಕರ ಎದುರಲ್ಲಿಯೇ ಕೊಂದರೆಂದು ಎಷ್ಟು ಸುಲಭವಾಗಿ ಅನ್ನಿಸಿಬಿಡುತ್ತದೆಯೋ, ಆದರೆ ವಾಸ್ತವದಲ್ಲಿ ನೆಹರೂ ಸರಕಾರ ಮುಚ್ಚಿಟ್ಟ ಹತ್ಯೆಯ ಹಿಂದಿನ ಜಾಲದ ಕುತಂತ್ರವೊಂದು ಇಷ್ಟು ವರ್ಷಗಳಾದರೂ ಅಡಗಿ ಕುಳಿತಿದೆ!

ಈ ಎಲ್ಲವೂ ಶುರುವಾಗಿದ್ದು ಒಂದೇ ಪ್ರಶ್ನೆಯಿಂದ!

ಹಾ! ನಿಮಗಾಶ್ಚರ್ಯವಾಗಬಹುದೇನೋ?! ಇಷ್ಟೆಲ್ಲ ವಿವಾದಗಳು ಶುರುವಾಗಿದ್ದು ಒಂದೇ ಒಂದು ಪ್ರಶ್ನೆಯಿಂದ! “ಗಾಂಧಿಗೆ ತಗುಲಿದ ಗುಂಡುಗಳು ಮೂರೋ ಅಥವಾ ನಾಲ್ಕೋ?!” ಎಂಬ ಒಂದೇ ಒಂದು ಪ್ರಶ್ನೆಯಿಂದಷ್ಟೇ!!! ಪ್ರಾರಂಭದಲ್ಲಿ, ನೆಹರೂ ಸರಕಾರ ಒದಗಿಸಿದ್ದ ವರದಿಯೊಂದು “ಗೋಡ್ಸೆ ಮೂರು ಗುಂಡುಗಳನ್ನು ಗಾಂಧಿಯ ದೇಹದಲ್ಲಿ ಹೊಕ್ಕಿಸಿದ! ಅಷ್ಟರಲ್ಲಿ ಗಾಂಧಿ ನೆಲಕ್ಕುರುಳಿದರು! ಕೊನೆಯುಸಿರೆಳೆದರು” ಎಂದು! ಆದರೆ, ಅಂತ್ಯಸಂಸ್ಕಾರಕ್ಕೂ ಮುನ್ನ ಗಾಂಧಿಯ ದೇಹವನ್ನು ಶುಚಿಗೊಳಿಸಿದವನು ಪೋಲಿಸರಿಗೆ ನೀಡಿದ ಹೇಳಿಕೆಯಲ್ಲಿ “ಗಾಂಧೀಜಿಯ ದೇಹದಲ್ಲಿ ನಾಲ್ಕು ಗುಂಡುಗಳಿದ್ದವು” ಎಂದು ಸಾಕ್ಷಿಯನ್ನೂ ನೀಡಿದ್ದ!!

ಪೋಲಿಸರಿಗರ ನೀಡಿದ ಹೇಳಿಕೆಯಲ್ಲಿ, ” ಸುಮಾರು ರಾತ್ರಿ ಒಂದು ಗಂಟೆಯ ಹೊತ್ತಿಗೆ ಬಾಪೂವಿನ ಶವವನ್ನು ಶುಚಿಗೊಳಿಸಲು ಒಳಗೆ ತೆಗೆದುಕೊಂಡು ಬಂದೆವು. ಬಾಪೂವಿನ ರಕ್ತಸಿಕ್ತವಾದ ದೇಹವನ್ನು ನೋಡಿ ಎಲ್ಲರೂ ಅಳಲು ಪ್ರಾರಂಭಿಸಿದರು. ಆಗ, ಬಾಪೂವಿನ ರಕ್ತ ಮೆತ್ತಿದ ಉಡುಪಿನಿಂದ ಒಂದು ಗುಂಡು ಹೊರಗೆ ಬಿತ್ತು.” ಎಂದು ದಾಖಲಿಸಿದ್ದನ್ನು ಗಾಂಧಿಯ ಮೊಮ್ಮಗಳಾದ ಮನುಬೆನ್ ಡೈರಿಯಲ್ಲಿಯೂ ದಾಖಲಾಗಿದೆ! ಆಕೆ ಗಾಂಧಿ ಹತ್ಯೆಯಾಗುವಾಗ ಪಕ್ಕದಲ್ಲಿಯೇ ನಿಂತಿದ್ದಳು!

ದುರಂತವೆಂದರೆ ಯಾವ ಪೋಲಿಸ್ ತನಿಖಾ ದಳವೂ ಆ ನಾಲ್ಕನೇ ಗುಂಡಿನ ಬಗೆಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ! ಅದರ ಹಿಂದೆ ತನಿಖೆಯನ್ನೂ ಕೈಗೊಳ್ಳಲಿಲ್ಲ!

ಗೋಡ್ಸೆ ಗಾಂಧೀ ಹತ್ಯೆ ಮಾಡಬೇಕೆಂದು ತೆಗೆದುಕೊಂಡ ಪಿಸ್ತೂಲು ಚಿಕ್ಕದಾದ ಕಪ್ಪು ಬಣ್ಣದ ಇಟಾಲಿಯನ್ ಬೆರೆಟ್ಟಾ! ಅದು ವಾಸ್ತವವಾಗಿ ಗೋಡ್ಸೆಯದ್ದೂ ಅಲ್ಲ, ಗಂಗಾಧರ್ ದಂಢಾವಟೆ ಎಂಬ ವ್ಯಕ್ತಿ ಗೋಡ್ಸೆಗೆ ಹತ್ಯೆಯ ಸಂಚು ರೂಪಿಸುವಾಗ ನೀಡಿದ್ದರು! ಇದೇ ಪಿಸ್ತೂಲನ್ನು ಜಗದೀಶ್ ಪ್ರಸಾದ್ ಗೋಯೆಲ್ ಎಂಬುವವರು ಗಂಗಾಧರರಿಗೆ ಹಿಂತಿರುಗಿಸಿದ್ದರು! ಆದರೆ.. ಅಷ್ಟರೊಳಗೆ ಆ ಪಿಸ್ತೂಲು ಯಾರ ಕೈನಿಂದ ಯಾರ್ಯಾರ ಕೈಗಳಿಗೆ ಹಸ್ತಾಂತರವಾಗಿತ್ತು ಎಂಬುವುದನ್ನೂ ಯಾರೂ ಗಮನಿಸಲಿಲ್ಲ. ಮಹಾತ್ಮನ ಹತ್ಯೆಯ ವಿಚಾರಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಪೋಲಿಸ್ (ಹಾಗೂ ನೆಹರೂ ಸರಕಾರ) ಯಾವುದೇ ತನಿಖೆಯನ್ನೂ ಕೈಗೊಳ್ಳದೇ ಕೊನೆಗೆ ಅರ್ಧದಲ್ಲಿಯೇ ವಿಚಾರಣೆ ಹಳ್ಳ ಹಿಡಿಯಿತು! ಅನ್ಯಾಯವಾಗಿ ಗೋಡ್ಸೆಯನ್ನು ಗಲ್ಲಿಗೇರಿಸಿದರು! ಜೊತೆಗೆ ನಾರಾಯಣ ಆಪ್ಟೆಯನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು ನೆಹರೂ ಸರಕಾರ!

ಬಯಲಾಗುತ್ತ ಬಂದಿತು ಒಂದಷ್ಟು ಸತ್ಯಗಳು!

ಅದೆಷ್ಟೋ ವರ್ಷಗಳ ನಂತರ ಆ ಬೆರೆಟ್ಟಾ ಪಿಸ್ತೂಲು ಗ್ವಾಲಿಯರ್ ನ ಡಾ.ದತ್ತಾತ್ರೇಯ ಪರ್ಚುರೆ ಎಂಬುವವರಿಗೆ ಸೇರಿದ್ದೆಂದು ತನಿಖಾ ದಳಕ್ಕೆ ತಿಳಿಯಿತು! ಆದರೆ, ಇದೇ ವ್ಯಕ್ತಿ ಇನ್ನೊಂದು ಬೆರೆಟ್ಟಾ ಪಿಸ್ತೂಲನ್ನು ಹೊಂದಿದ್ದರು! ಅದರ ನೋಂದಣಿ ಸಂಖ್ಯೆ 719791.

ಆಘಾತಕರವೆಂದರೆ ಇದೇ ನೋಂದಣಿ ಸಂಖ್ಯೆ ಹೊಂದಿರುವ ಇನ್ನೊಂದು ಬೆರೆಟ್ಟಾ ಪಿಸ್ತೂಲು ಉದಯ್ ಚಾಂದ್ ಎಂಬುವವರ ಹತ್ತಿರ ಇತ್ತು! ಅದೂ ಅದೇ ಸಮಯದಲ್ಲಿಯೇ!

ಗೋಡ್ಸೆ ಇಟ್ಟುಕೊಂಡಿದ್ದ ಪಿಸ್ತೂಲಿನ ನೋಂದಣಿ ಸಂಖ್ಯೆ 606824, ಆದರೆ ತನಿಖೆಯಲ್ಲಿ ದತ್ತಾತ್ರೇಯ ಪರ್ಚುರೆ ತಾನು ಗೋಡ್ಸೆಗೆ ತನ್ನ ಎರಡನೇ ಪಿಸ್ತೂಲನ್ನು ನೀಡಿರಲಿಲ್ಲ ಎಂದು ಧೃಢೀಕರಿಸಿದರು! ಬಿಡಿ! ಹತ್ಯೆಯಾದ ಮೇಲೆ ಆ ಎರಡೂ ಪಿಸ್ತೂಲುಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಸರಕಾರ!

ಆ ನಾಲ್ಕನೇ ಗುಂಡು ಗೋಡ್ಸೆಯ ಪಿಸ್ತೂಲಿನದಲ್ಲ!

ಹಾ! ಬಾಲ್ಕಿಸ್ಟಿಕ್ ವರದಿಯ ಪ್ರಕಾರ ಆ ನಾಲ್ಕನೇ ಗುಂಡು ಈ ಮುಟ್ಟುಗೋಲು ಹಾಕಿಕೊಂಡ ದತ್ತಾತ್ರೇಯ ಪರ್ಚುರೆಯ ಪಿಸ್ತೂಲುಗಳದಲ್ಲ ಎಂದು ವರದಿ ನೀಡಿತು! ಇದೇ ವರದಿ ಹಲವಾರು ಅನುಮಾನಗಳಿಗೆ ಕಾರಣವಾಗಿದ್ದಲ್ಲದೇ,. ಗಾಂಧೀ ಹತ್ಯೆಯಲ್ಲಿ ಭಾಗಿಯಾಗಿದ್ದದ್ದು ಬರೀ ಗೋಡ್ಸೆಯಲ್ಲ, ಬದಲಾಗಿ ಕಾಣದ ‘ಕೈ’ ಯೊಂದಿತ್ತು!

ಇದೇ ವರದಿಯ ಆಧಾರದ ಮೇಲೆ ಗೋಡ್ಸೆಯ ಹಿಂಬಾಲಕರಾಗಿದ್ದ ಹಾಗೂ, ಸರ್ವೋಚ್ಛ ನ್ಯಾಯಾಲಯದಲ್ಲಿ ಆ ನಾಲ್ಕನೇ ಗುಂಡಿನ ಬಗೆಗೆ ತನಿಖೆ ಮಾಡುವಂತೆ ದಾವೆ ಹೂಡಿದ್ದ ಡಾ.ಪಂಕಜ್ ಫಡ್ನಿಸ್ ವಿಷಯವನ್ನು ಗಂಭೀರವಾಗಿ ತೆಗೆದಿಟ್ಟರು!

ಪ್ರಾಥಮಿಕ ಲ್ಯಾಬ್ ವರದಿಗಳ ಪ್ರಕಾರ ಗಾಂಧಿಯ ಸಾವಿಗೆ ಕಾರಣವಾಗಿದ್ದದ್ದು ಆ ನಾಲ್ಕನೇ ಗುಂಡು! ಈ ವರದಿಯನ್ನಿಟ್ಟು ಪಂಕಜ್ ಪೂರ್ಣವಾಗಿ ಹತ್ಯೆಯನ್ನು ಪ್ರಾರಂಭದಿಂದಲೂ ಪರಿಶೀಲಿಸುವಂತೆ ಒತ್ತಾಯಿಸಿದರು!

ಅಲ್ಲದೇ, “ಜಗತ್ತಿನ ಎಲ್ಲಾ ಪತ್ರಿಕೆಗಳೂ ಸಹ ಮಹಾತ್ಮನ ಹತ್ಯೆಯ ವಿಷಯವನ್ನು ಪ್ರಕಟಿಸಿದೆ. ಅದರಲ್ಲೆಲ್ಲೂ, ಸಾವಿಗೆ ಕಾರಣವಾಗಿದ್ದದ್ದು ಗೋಡ್ಸೆಯ ಗುಂಡುಗಳೆಂದು ಹೇಳಿಲ್ಲ! ಆ ನಿಗೂಢವಾದ ನಾಲ್ಕನೇ ಗುಂಡು ಎಂದೇ ವರದಿ ಮಾಡಿದೆ! ಆದರೆ, ಭಾರತದ ಅಂದಿನ ಸರಕಾರವು ಅದನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿತು! ಆ ನಾಲ್ಕನೇ ಗುಂಡೊಂದರಿಂದ ಮಾತ್ರ ಗಾಂಧಿ ಸಾವಿಗೀಡಾದದ್ದು.” ಎಂದ ಪಂಕಜ್ ಸೂಕ್ಷ್ಮವಾಗಿಯೇ ನಿಗೂಢಗಳನ್ನು ತೆಗೆದಿಟ್ಟಿದ್ದರು!!!

ಆದರೆ, . . .

ಯಾವ ಶವಪರೀಕ್ಷೆಯನ್ನೂ ನಡೆಸಿರಲಿಲ್ಲ ಅವತ್ತು! ತನಿಖೆಯನ್ನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ! ನಾಲ್ಕನೇ ಗುಂಡು ಕಾಣದ ಕೈಗಳ ಹಿಡಿತದಲ್ಲಿ ಅವಿತು ಕುಳಿತಿತು! ಅವಶ್ಯವಾಗಿದ್ದ ಯಾವುದೂ ಮಹಾತ್ಮನ ಹತ್ಯೆಯ ಪ್ರಕರಣದಲ್ಲಿ ನಡೆಯಲೇ ಇಲ್ಲ! ನಿರಪರಾಧಿಗಳು ಅಪರಾಧಿಗಳಾಗಿ ಹೋದರು! ಇತಿಹಾಸದುದ್ದಕ್ಕೂ ಅಪರಾಧಿಗಳು ದೇಶದ ಚುಕ್ಕಾಣಿಯನ್ನು ಹಿಡಿಯುತ್ತಲೇ ಸತ್ಯವನ್ನು ಹೊಸಕುತ್ತಲೇ ಹೋದರು! ನಂಬಿದ ಜನರೂ ಸದಾ ಸುಳ್ಳಿನ್ನೇ ಉಸಿರಾಡಿದರು!

Source : Times Of India reveals the Truth about Gandhi!

– ತಪಸ್ವಿ

Tags

Related Articles

Close