ಪ್ರಚಲಿತ

ಸ್ಫೋಟಕ ಸುದ್ದಿ! ಗುಜರಾತಿನಲ್ಲಿ ದಲಿತರ ಮೇಲೆ ಹಲ್ಲೆಯಾಗಲೇ ಇಲ್ಲ! ಆದರೆ ಈ ಎನ್ ಜಿ ಓ ಮಾಡಿದ್ದೇನು ಗೊತ್ತೇ?!

ದಲಿತರ ಮೇಲೆ ನಡೆದ ಅದೆಷ್ಟೋ ದೌರ್ಜನ್ಯಗಳಿಗೆ ಯಾವುದೇ ರೀತಿಯ ನ್ಯಾಯ ಸಿಗದಿದ್ದು, ಈ ಬಗ್ಗೆ ಜನರು ಸರಕಾರಕ್ಕೆ ಹಾಗೂ ಪೊಲೀಸರಿಗೆ ಸೂಕ್ತ ತನಿಖೆ
ನಡೆಸುವಂತೆ ಮನವಿ ಮಾಡಿದ್ದರು. ಆದರೆ ಪೋಲಿಸರ ಹಾಗೂ ಕೆಲ ಸರಕಾರಗಳ ನಿರ್ಲಕ್ಯದಿಂದ ಸತ್ಯಾಸತ್ಯತೆಗಳು ಹೊರಬೀಳದೆ ಇದ್ದು, ಅದೆಷ್ಟೋ ಜನರ
ಅಕ್ರೋಶಕ್ಕೆ ಗುರಿಯಾಗಿದೆಯೋ ನಾ ಕಾಣೆ!! ಆದರೆ ಇದಕ್ಕೆಲ್ಲ ಉತ್ತರ ಇದೀಗ ಸಿಕ್ಕಿದ್ದು, ಸತ್ಯತೆಯನ್ನು ತಿಳಿಯುವಲ್ಲಿ ಗುಜರಾತ್ ಪೊಲೀಸರು ಯಶಸ್ವಿಯಾಗಿದ್ದಾರೆ!!

ಹೌದು.. ಗುಜರಾತಿನ ದಲಿತರ ಮೇಲೆ ನಡೆದ ದೌರ್ಜನ್ಯ ಸುಳ್ಳು ಎಂದು ಗುಜರಾತ್ ಸರಕಾರ ನಿರೂಪಿಸಿದ್ದು, ಎಲ್ಲಾ ದೌರ್ಜನ್ಯದ ಹಿಂದೆ ನಿಜ ಸ್ವರೂಪವು ಇದೀಗ ಬಯಲಾಗಿದೆ!! ಅದೇನೆಂದರೆ, ಒಕ್ಟೋಬರ್ 3 ರಂದು, ದಲಿತ ಯುವಕ ದಿಗ್ನತ್ ಮಾಹೇರಿಯ ತನ್ನ ಮನೆಗೆ ಹಿಂತಿರುಗುವ ವೇಳೆ ಕೆಲವು ಮಂದಿ ಆತನಿಗೆ ಬೆದರಿಕೆ ಹಾಕಿದ್ದಲ್ಲದೇ ಬೆನ್ನಿನ ಮೇಲೆ ಬ್ಲೇಡ್‍ನಿಂದು ಇರಿದು ಗಾಯಗೊಳಿಸಿದ್ದಾರೆ ಅಷ್ಟೇ ಅಲ್ಲದೇ ಆತನಿಗೆ ಆ ಜಾಗ ಬಿಟ್ಟು ಕದಲಬಾರದು ಎಂದು ಬೆದರಿಕೆಯನ್ನು ಒಡ್ಡಿದ್ದರು ಎಂದು ಹೇಳಲಾಗಿದೆ, ಈ ಬಗ್ಗೆ ರಾಹುಲ್ಸಿನ್ ಮತ್ತು ಮೌರಿನ್ಹ್ ವಿರುದ್ದ ಪ್ರಕರಣವನ್ನು ಕೂಡ ದಾಖಲಿಸಲಾಗಿತ್ತು!!

ಹಾಗಾಗಿ, ದಿಗ್ನತ್ ಮಾಹೇರಿಯಾ ಈ ಬಗ್ಗೆ ಕಲೋಲ್ ತಾಲೂಕಿನ ಪೊಲೀಸ್ ಠಾಣೆಯಲ್ಲಿ 135/17ರ ಅಡಿಯಲ್ಲಿ ದೂರು ಸಲ್ಲಿಸಿದ್ದ!! ಅಷ್ಟೇ ಅಲ್ಲದೇ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 326, 506(2) ಮತ್ತು ದೌರ್ಜನ್ಯ ಕಾಯಿದೆಯ ಅಡಿಯ ಸೆಕ್ಷನ್ 3(2) (5)ರಲ್ಲಿ ಪ್ರಕರಣವನ್ನು ನೋಂದಾಯಿಸಲಾಗಿತ್ತು!! ಆದ್ದರಿಂದ ಪೊಲೀಸರು ಈ ದೂರಿನ ವಿಚಾರವಾಗಿ ಮೂರು ತಂಡಗಳನ್ನು ರಚಿಸಿ ತನಿಖೆಯನ್ನು ಆರಂಭಿಸಿದರು!!

ಆದರೆ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದು, ದಿಗ್ನತ್ ಮಾಹೇರಿಯಾ ಮೇಲೆ ಯಾವುದೇ ರೀತಿಯ ಹಲ್ಲೆಯೂ ನಡೆದಿಲ್ಲ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಇದೊಂದು ತಯಾರಿಸಲ್ಪಟ್ಟ ಕಟ್ಟುಕತೆ ಎನ್ನುವ ಮಾಹಿತಿ ಹೊರಬಿದ್ದಿದೆ!! ಹೌದು….. ತನಿಖೆ ಮಾಡುವ ಸಂದರ್ಭದಲ್ಲಿ ತನಿಖಾಕಾರರಿಗೆ ಯಾವುದೇ ರೀತಿಯಾದ ರಕ್ತವಾಗಲಿ ಅಥವಾ ರಕ್ತದ ಕಲೆಗಳಾಗಲಿ ಸಿಕ್ಕಿಲ್ಲ!! ಅಲ್ಲದೇ, ಅಲ್ಲಿದ್ದ ಸಿಸಿಟಿವಿ ತುಣುಕಿನಲ್ಲೂ ಯಾವುದೇ ರೀತಿಯಾದ ಘಟನೆ ನಡೆದಿಲ್ಲ ಎನ್ನುವುದು ತಿಳಿದು ಬಂದಿದೆ!! ಹಾಗೆಯೇ ಘಟನೆ ನಡೆದ ಸ್ಥಳದಲ್ಲಿದ್ದ ಅಂಗಡಿಯ ಮಾಲೀಕ ಕೂಡ, ಯಾವುದೇ ರೀತಿಯ ದಾಳಿ ನಡೆದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾನೆ ಎಂದು ತನಿಖೆಯಲ್ಲಿ ದೃಡಪಡಿಸಲಾಗಿದೆ!!

ತದನಂತರದಲ್ಲಿ ದಿಗ್ನತ್‍ನ್ನು ವಿಚಾರಣೆ ನಡೆಸಿದ ಪೊಲೀಸರು, ದಿಗ್ನತ್ ಹಾಗೂ ಆತನ ಇಬ್ಬರು ಗೆಳೆಯರು ಬ್ಲೇಡ್‍ನ್ನು ಖರೀದಿಸಿ, ಸಹಾನುಭೂತಿಯನ್ನು ಸೃಷ್ಟಿಸಲು ತಮಗೆ ತಾವೇ ಹಲ್ಲೆ ನಡೆಸಿಕೊಂಡರು ಎಂದು ಹೇಳಿದ್ದಾನೆ!! ಅಷ್ಟೇ ಅಲ್ಲದೇ ಪ್ರಚಾರವನ್ನು ಗಿಟ್ಟಿಸಲು ಮಾಧ್ಯಮದವರನ್ನು ಸಂಪರ್ಕಿಸಿದ್ದೇವೆ ಎಂದು ಈ ಯುವಕ ತಪ್ಪೊಪ್ಪಿಕೊಂಡಿದ್ದಾನೆ!! ದಿಗ್ನತ್ ಪೋಷಕರು ಮತ್ತು ಆತನ ಸ್ನೇಹಿತರು ಈ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಎನ್‍ಜಿಒಗಳು ಈರೀತಿ ಸುಳ್ಳು ವದಂತಿಯನ್ನು ಸೃಷ್ಟಿಸಲು ಒತ್ತಾಯ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ!!

ದಿಗ್ನತ್ ಹೇಳುವ ಪ್ರಕಾರ ಎನ್‍ಜಿಒ ಗಳು ಇವರ ಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಪ್ರಚಾರ ಮತ್ತು ಖ್ಯಾತಿಯನ್ನು ಗಳಿಸಬೇಕಾದರೆ ಈ ರೀತಿಯಾಗಿ ಮಾಡಿ ಎಂದು
ಪ್ರೇರೆಪಿಸಿದ್ದಾರೆ ಎಂದು ಹೇಳಿದ್ದಾನೆ!!

ಅಂತೂ… ಈ ಘಟನೆಯನ್ನು ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ದುರ್ಬಳಕೆ ಮಾಡಲು ಎನ್‍ಜಿಒಗಳು ದಲಿತರನ್ನು ಬಳಸುತ್ತಿದ್ದಾರೆ ಎಂಬುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ!! ಇದು ಕೇವಲ ಮೊದಲ ಬಾರಿಗೆ ನಡೆದ ಘಟನೆ ಅಲ್ಲ. ಆದರೆ ಇಂತಹ ಘಟನೆಗಳು ಸಾಕಷ್ಟು ಬಾರಿ ನಡೆದಿದ್ದು, ಮಾಧ್ಯಮಗಳು ಇಂತಹ ನಕಲಿ ಸುದ್ದಿಗಳನ್ನು ಹರಡಲು ಕಂಡುಕೊಂಡ ಮಾರ್ಗ ಎಂದು ತಿಳಿದುಬರುತ್ತೆ!! ‘ದಿ ಇಂಡಿಯನ್ ಎಕ್ಸ್‍ಪ್ರೆಸ್’ ಪ್ರತಿಕೆ ಈ ನಕಲಿ ಕಥೆಯನ್ನು ಪ್ರಕಟಿಸಿದ್ದು, ಬಿಜೆಪಿ ದಲಿತರಿಗೆ ಕಿರುಕುಳವನ್ನು ನೀಡಿದೆ ಎಂದು ಹೇಳಿದ್ದಲ್ಲದೇ, ಈ ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸಿದ್ದಾರೆ!! ಮಾಧ್ಯಮಗಳು ನಿಜಾಂಶಗಳನ್ನು ಭಿತ್ತರಿಸುವ ಬದಲು ಸುಳ್ಳಿನ ಮನೆಯನ್ನು ಕಟ್ಟುತ್ತಿದೆ ಎಂದರೆ ಮಾಧ್ಯಮಗಳು ಎತ್ತ ಸಾಗುತ್ತಿವೆ ಎನ್ನುವುದು ನನ್ನ ಪ್ರಶ್ನೆ??

– ಅಲೋಖಾ

Tags

Related Articles

Close