ಪ್ರಚಲಿತ

ಗೋ ಹತ್ಯೆಯನ್ನು ವಿರೋಧಿಸಿ ದೂರು ನೀಡಿದ್ದ ಮಹಿಳೆಯ ಮೇಲೆ ಮುಸಲ್ಮಾನರಿಂದಾದ ಮಾರಣಾಂತಿಕ ಹಲ್ಲೆಯಲ್ಲಿ ಪೋಲಿಸರ ಕೈವಾಡ?!

ಕರ್ನಾಟಕದ ತುಘಲಕ್ ಸರಕಾರದ ಮುಸಲ್ಮಾನ ಓಲೈಕೆಗೆ ದಿನೇ ದಿನೇ ಮುಸ್ಲಿಂರ ಅಟ್ಟಹಾಸ ಸದ್ದು ಮಾಡುತ್ತಿದೆ! ಮಂಗಳೂರಿನಲ್ಲಿ, ಭಟ್ಕಳದಲ್ಲಾಯಿತು! ಈಗ
ಬೆಂಗಳೂರಿನಲ್ಲಿಯೂ ಸಹ ‘ಶಾಂತಿ ಧರ್ಮ’ದ ಕ್ರೂರತೆಯೊಂದು ಬಯಲಾಗಿದೆ!

ಮೊನ್ನೆ ಶನಿವಾರದ ರಾತ್ರಿ, ಬೆಂಗಳೂರಿನ ತಲಘಟ್ಟಪುರ ಬಳಿಯ ಟಿಪ್ಪು ಸರ್ಕಲ್ ನಲ್ಕಿರುವ ಕಸಾಯಿಖಾನೆ ಬಳಿ ಮಹಿಳಾ ಟೆಕ್ಕಿಯ ಮೇಲೆ ಹಲವಾರು ಮುಸಲ್ಮಾರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ!

ಕಾರಣವೇನು ಗೊತ್ತಾ?!

ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಸೀನಿಯರ್ ಟೆಕ್ಕಿಯಾಗಿದ್ದ ನಂದಿನಿ ಎನ್ನುವವರು ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ನಡೆಯುತ್ತಿದ್ದ ಗೋ ಹತ್ಯೆಯ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದರು! ಅಲ್ಲದೇ, ಗೋ ಹತ್ಯೆ ನಡೆಯುತ್ತಿರುವ ಸ್ಥಳವನ್ನು ತೋರಿಸಲು ಇಬ್ಬರು ಪೇದೆಯೊಂದಿಗೆ ತೆರಳಿದ್ದ ನಂದಿನಿಯ ಮೇಲೆ ನೂರಕ್ಕೂ ಹೆಚ್ಚು ಮುಸಲ್ಮಾನರು ಮುಗಿಬಿದ್ದಿದ್ದಾರೆ ಎನ್ನಲಾಗಿದೆ!!

ಮುಸಲ್ಮಾನರು ಜಮಾಯಿಸುತ್ತಿದ್ದ ಹಾಗೇ, ಪೇದೆಗಳು ನಂದಿನಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ! ನಂತರ ಮನಬಂದಂತೆ
ಮುಸಲ್ಮಾನರು ನಂದಿನಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ! ಈ ಸಂದರ್ಭದಲ್ಲಿ ಪಾಕಿಸ್ಥಾನ ಪರ ಘೋಷಣೆಯನ್ನೂ ಕೂಗಿದ್ದಾರೆ ಎನ್ನಲಾಗಿದ್ದು, ತಲಘಟ್ಟಪುರ ಪೋಲಿಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ!

ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಾಣಿ ದಯಾ ಸಂಘದ ಕಾರ್ಯಕರ್ತೆಯಾದ ನಂದಿನಿ, ” ನಾನು ನನ್ನ ಸ್ನೇಹಿತೆಯ ಜೊತೆ ಕಾರಿನಲ್ಲಿ.ಪ್ರಯಾಣಿಸುವಾಗ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿರುವುದು ಗಮನಕ್ಕೆ ಬಂದದ್ದರಿಂದ ಹತ್ತಿರದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ತದನಂತರ, ಹದಿನೈದು ಪೋಲಿಸರನ್ನು ಕಳುಹಿಸುತ್ತೇವೆಂದು ಹೇಳಿದ್ದರಿಂದ ಗೋಹತ್ಯೆಯ ಸ್ಥಳವನ್ನು ತೋರಿಸಲು ಹೋದಾಗ, ಯಾವ ಪೋಲಿಸರೂ ಇರಲಿಲ್ಲ. ಬದಲಾಗಿ ಎರಡು ಪೇದೆಗಳು ಮಾತ್ರ ಇದ್ದರೂ ನನ್ನನ್ನು ಬಿಟ್ಟು ಓಡಿ ಹೋಗಿದ್ದರು. ನಾನು ಇವರೆಲ್ಲರ ಬಲೆಗೆ ಬಿದ್ದೆನಾ ಎನ್ನಿಸಿತು,’ ಎಂದು ಹೇಳಿದ್ದಾರೆ!

ಆಕೆಯ ಹೇಳಿಕೆಯೊಂದೇ ಸಾಕು, ಇದರಲ್ಲಿ ಪೋಲಿಸರ ಕೈವಾಡವೂ ಇದೆಯೇ ಎಂಬ ಅನುಮಾನ ಬರುವುದಕ್ಕೆ!

ಏನ್ರೀ ಇದು ಅವ್ಯವಸ್ಥೆ?!

ಎತ್ತ ಸಾಗುತ್ತಿದೆ ಕರ್ನಾಟಕ?! ಪ್ರತೀ ಸಲವೂ ಚುನಾವಣೆಗೆ ಮತ ಕೇಳುವಾಗ ಮಹಿಳೆಯರಿಗೆ ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಡುತ್ತೇವೆನ್ನುವ ಸರಕಾರಕ್ಕೆ ಮಹಿಳೆಯರ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿಯೂ ಇಲ್ಲದಿರುವುದು ಖೇದಕರ!

ಸಿದ್ಧರಾಮಯ್ಯನ ಸರಕಾರವೊಂದು ತುಘಲಕ್ ಸರಕಾರ ಎನ್ನುವುದಕ್ಕೆ ಬೇರಾವ ಸಾಕ್ಷಿಬೇಕು ಹೇಳಿ?! ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಹಿಂದೂಗಳ ಮೇಲೆ ನಡೆದಷ್ಟು ಹಲ್ಲೆ ಇನ್ನು ಯಾವಾಗಲೂ ನಡೆದಿಲ್ಲ! ಅದೂ ಬೇಡ! ಸ್ವಾತಂತ್ರ್ಯ ಪೂರ್ವದಿಂದಲೂ ಕೂಡ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಷ್ಟು ಗೋ ಹತ್ಯೆ ಇನ್ಯಾವಾಗ ನಡೆದಿದೆ ಹೇಳಿ?!

ಇದೇ ಸಿದ್ಧರಾಮಯ್ಯನ ಸರಕಾರ ಒಂದಷ್ಟು ತಿಂಗಳ ಹಿಂದೆ ಕಸಾಯಿಖಾನೆಗೆ ಅಧಿಕೃತವಾಗಿ ಒಪ್ಪಿಗೆ ನೀಡಿತ್ತು! ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ಹಲವಾರು ಮಠಾಧೀಶರ ಹೋರಾಟದ ನಂತರ ಯೋಜನೆಯನ್ನು ಅಲ್ಲಿಗೇ ಕೈ ಬಿಡಲಾಯಿತು! ರಾಜಾ ರೋಷವಾಗಿ ‘ಗೋಮಾಂಸ ತಿನ್ನುತ್ತೇನೆ, ಏನಿವಾಗ?!’ ಎಂದೆಲ್ಲ ಬೊಬ್ಬಿರಿದ ಇದೇ ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ನೈತಿಕತೆಯೆನ್ನುವುದಿದೆಯಾ?! ಕೇವಲ ಮತಕ್ಕೋಸ್ಕರ ಮುಸಲ್ಮಾನರ ಪಾದ ನೆಕ್ಕುವ ಇಂತಹ ಸರಕಾರದಿಂದಲೇ ಕಳೆದ ಐದು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಹತರಾಗಿ ಹೋಗಿದ‌್ದಾರೆ! ಅದೆಷ್ಟೋ ಹಿಂದೂಗಳ ಮೇಲೆ ಕಾರಣವಿಲ್ಲದೆಯೇ ಲೆಕ್ಕವಿಲ್ಲದಷ್ಟು ಕೇಸು ಹಾಕಿ ಜೈಲಿಗಟ್ಟಿದ ಕಾಂಗ್ರೆಸ್ ಸರಕಾರಕ್ಕೆ ಇನ್ನಾದರೂ ಬುದ್ಧಿ ಕಲಿಸುತ್ತಾರಾ ಸ್ವಾಭಿಮಾನವಿರುವ ಹಿಂದೂಗಳು?!

ಓಡಿ ಹೋದ ಪೋಲಿಸ್ ಪೇದೆ!!

ಹಾಸ್ಯಾಸ್ಪದ ವೆಂದರೆ ಇದೇ! ಮಹಿಳೆಯನ್ನು ಕಾಯಬೇಕಾಗಿದ್ದ ಪೋಲಿಸರೇ ಓಟ ಕಿತ್ತಿದ್ದಾರೆಂದರೆ ತೊಟ್ಟ ಖಾಕಿಗಿದು ಅನ್ಯಾಯವಲ್ಲವೇ?! ಆರಕ್ಷಕರೆಂದು ಕರೆಸಿಕೊಳ್ಳುವವರು ರಕ್ಷಣೆಗೆ ನಿಲ್ಲದೆಯೇ, ಹೆದರಿ ಆಕೆಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ! ಛೇ!! ಹೀಗಾದರೆ ಇನ್ಯಾರ ರಕ್ಷಣೆಯ ಜವಾಬ್ದಾರಿ ಹೊರಬಲ್ಲರು?!

ಸೂಕ್ಷ್ಮ ವಿಚಾರಗಳೆಂದು ಗೊತ್ತಿದ್ದರೂ ಕೂಡ, ನಿರಾಧಾರಿಯಾದ ಪೇದೆಗಳನ್ನು ಜೊತೆ ಕಳಿಸಿದ ಅಧಿಕಾರಿಗಳಿಗೆ ಪರಿಜ್ಞಾನವೆನ್ನುವುದಿದೆಯೇ ?! ಯಾವುದೇ ರಕ್ಷಣೆ ಇಲ್ಲದೆಯೇ ಈ ರೀತಿಯ ಬೇಜವಾಬ್ದಾರಿಯನ್ನು ತೋರಿಸಿದರೆ ಪೋಲಿಸರ ಮೇಲಿರುವ ಗೌರವವೂ ಕಡಿಮೆಯಾದಂತೆಯೇ!

ಕರ್ನಾಟಕದ ಕಥೆ!

ನಾಳೆ ಮತ್ತೊಂದು ಹಲ್ಲೆ! ಮತ್ತೊಂದು ಹಿಂದೂವಿನ ಹತ್ಯೆ! ತನಿಖೆಯೆಂದು ನಾಲ್ಕಾರು ಸುತ್ತು ಹಾಕುವ ಪೋಲಿಸರಿಗೆ ರಾಜಕಾರಣಿಯರಿಂದ ಕರೆ ಬಂದಿರುತ್ತದೆ! ಆರೋಪಿಗಳು ಮುಸಲ್ಮಾನರೆಂದು ತಿಳಿದ ಮೇಲೆ ಮಾಧ್ಯಮಗಳಿಗೆ ಬೇಕಾದಷ್ಟನ್ನೇ ಸುದ್ದಿ ನೀಡಿ, ಕೊನೆಗೆ ಒಂದೋ ಎರಡೋ ವರ್ಷವೋ ಅಪರಾಧಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿ ಬಿಡುಗಡೆ ಮಾಡಲಾಗುತ್ತದೆ! ಕೊನೆಗೆ, ಉಪ್ಪಿನ ರುಚಿ ಕಂಡವನನ್ನು ಜಿಹಾದಿಗಳು ಸ್ಮರಿಸುತ್ತಾರೆ! ಜೈ ಕಾರ ಹಾಕುತ್ತಾರೆ! ಅಲ್ಲಿಂದ ಮತ್ತವನ ಹಿಂದೂ ಬೇಟೆ ಪ್ರಾರಂಭವಾಗುತ್ತದೆ!

ಹತ್ಯೆಯಾದ ಹಿಂದೂವಿನ ಮನೆಯೊಂದರ ಬೆಳಕು ಆರುವಾಗಲೇ, ಇತ್ತ ಹಿಂದೂಗಳು ಏನು ಮಾಡೋದು ಎಂಬ ಆತಂಕದಲ್ಲಿಯೇ ದೀಪ ಹಚ್ಚಿ ಸುಮ್ಮನಾಗಿಬಿಡುತ್ತಾರೆ! ಕೊನೆಗೂ, ನ್ಯಾಯ ಸಿಗದ ಹಿಂದೂವಿನ ಹತ್ಯೆ ಒಂದಷ್ಟು ಸಮಯದ ನಂತರ ಕಣ್ಮರೆಯಾಗಿ ಹೋಗುತ್ತದೆ!

– ಪೃಥು ಅಗ್ನಿಹೋತ್ರಿ

Tags

Related Articles

Close