ಪ್ರಚಲಿತ

 ಸ್ಫೋಟಕ ಸುದ್ದಿ: ದೇಶದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗಳಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡ!!!

ಕೇರಳದಲ್ಲಿ ದಿನಬೆಳಗಾದರೆ ನಾವು ಕೇಳುತ್ತಿರುವ ಸುದ್ದಿಗಳೇ ಬರ್ಬರವಾಗಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ, ಕೇರಳವಷ್ಟೇ ಯಾಕೆ ಕರ್ನಾಟಕದಲ್ಲಿ ಕಳೆದ 4 ವರ್ಷಗಳಿಂದ ಹತ್ರತ್ರ ಇಪ್ಪತ್ತು ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿವೆ.

ಇತ್ತೀಚೆಗೆ ಪಂಜಾಬ್ ನಲ್ಲೂ ಕೂಡ ಆರೆಸ್ಸೆಸ್ ಕಾರ್ಯಕರ್ತರನ್ನ ಗುಂಡಿಟ್ಟು ಕೊಲ್ಲಲಾಗಿತ್ತು.

ಪಂಜಾಬಿನಲ್ಲಿ ಖಲಿಸ್ತಾನಿ ಉಗ್ರರು ಪ್ರತ್ಯೇಕ ಖಲಿಸ್ತಾನ್ ರಾಷ್ಟ್ರ ಘೋಷಿಸಬೇಕೆಂದು ಹಲವಾರು ದಶಕಗಳಿಂದ ತಮ್ಮ ರೆಬೆಲ್ ಆಟವನ್ನ ಆಡುತ್ತಲೇ ಬಂದಿದ್ದಾರೆ. ಅದು ಈಗಲೂ ನಡೆಯುತ್ತಿದೆ.

ಭಾರತದಲ್ಲೇ ಪ್ರತ್ಯೇಕತೆಯನ್ನ ಬಯಸುವವರನ್ನ ಯಾರು ಬೆಂಬಲಿಸ್ತಿದಾರೆ ಅನ್ನೋ ಪ್ರಶ್ನೆ ನಿಮಗೆಲ್ಲ ಕಾಡುತ್ತಿರಬಹುದು.

ಮತ್ಯಾರು? ಭಾರತದಲ್ಲಿ ವಿಧ್ವಂಸಕ ಕೃತ್ಯಗಳು, ಭಯೋತ್ಪಾದನಾ ಚಟುವಟಿಕೆಗಳು, ಪ್ರತ್ಯೇಕತೆಗಾಗಿ ಉತ್ತೇಜಿತಗೊಳಿಸಿ ಭಾರತವನ್ನ ಸರ್ವನಾಶ ಮಾಡಲು ಕಳೆದ 70 ವರ್ಷಗಳಿಂದ ಪಣ ತೊಟ್ಟು ನಿಂತಿರುವ ಪಾಕಿಸ್ತಾನವೇ ಈ ಖಲಿಸ್ತಾನಿ ಉಗ್ರರಿಗೂ ಬೆಂಬಲ ಕೊಡುತ್ತಿದೆ.

ಇದಕ್ಕೆ ಪಾಕಿಸ್ತಾನಿನ ಇಂಟೆಲಿಜೆನ್ಸ್ ಸರ್ವಿಸ್ ಐಎಸ್ಐ ಇದಕ್ಕೆ ರಣತಂತ್ರವನ್ನ ಭಾರತವನ್ನ ಎದುರಿನಿಂದ ಹೋರಾಡಿ ಸೋಲಿಸೋಕೆ ಆಗಲ್ಲವಂತ ಅರಿತು
ಭಾರತದಲ್ಲಿನ ಹಿಂದೂ ಸಂಘಟನೆಗಳ ಪ್ರಮುಖರನ್ನ, ಆರೆಸ್ಸೆಸ್ ಕಾರ್ಯಕರ್ತರನ್ನ ಟಾರ್ಗೇಟ್ ಕಿಲ್ಲಿಂಗ್ ಮಾಡುವ ಮೂಲಕ ತಮ್ಮ ಘಜವಾ-ಎ-ಹಿಂದ್(ಭಾರತವನ್ನ ಇಸ್ಲಾಮೀಕರಣಗೊಳಿಸುವುದು) ಮಾಡೋಕೆ ಹೊಂಚು ಹಾಕಿ ಕೂತಿದ್ದಾರೆ.

ಇದರ ಭಾಗವಾಗಿ ಖಲಿಸ್ತಾನ್ ಬೆಂಬಲಿಗರಿಂದ ಹಿಂದೂ ಮುಖಂಡರ ಹತ್ಯೆ ಮಾಡಿಸಿ ಕೋಮುದಳ್ಳುರಿ ಸೃಷ್ಟಿಸುವುದು ಪಾಕಿಸ್ತಾನದ ISI ಯೋಜನೆಯ ಉದ್ದೇಶವಾಗಿದೆ.

ಪಂಜಾಬ್​ನಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆಯಲ್ಲಿ ಐಎಸ್​ಐ ಕೈವಾಡವಿರುವುದರ ಬಗ್ಗೆ ಸ್ವತಃ ಪಂಜಾಬ್​ ಮುಖ್ಯಮಂತ್ರಿ ಕ್ಯಾ. ಅಮರಿಂದರ್​ ಸಿಂಗ್ ಒಪ್ಪಿಕೊಂಡಿದ್ದರು. ಪ್ರಮುಖ ಆರೋಪಿ ಜಿಮ್ಮಿ ಸಿಂಗ್​ ಮೂಲತಃ ಜಮ್ಮು ನಿವಾಸಿ ಹಲವು ವರ್ಷಗಳ ಕಾಲ ಇಂಗ್ಲೆಂಡ್​ನಲ್ಲಿದ್ದು ಇತ್ತೀಚೆಗಷ್ಟೆ ಭಾರತಕ್ಕೆ ಮರಳಿದ್ದ.

ಆರ್’ಎಸ್’ಎಸ್ ಕಾರ್ಯಕರ್ತರ ಹತ್ಯೆಗೆ ಪಾಕ್​ ಬೇಹುಗಾರಿಕಾ ಪಡೆ ಐಎಸ್​ಐ, ಇಟಲಿ, ಕೆನಡಾ, ಇಂಗ್ಲೆಂಡ್​ನಲ್ಲಿರೋ ಐಎಸ್​ಐ ಏಜೆಂಟರ ಮೂಲಕ ಸಂಚು ನಡೆಸುತ್ತಿರುವ ಸ್ಫೋಟಕ ಮಾಹಿತಿಯನ್ನು ಪಂಜಾಬ್ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಆರ್’ಎಸ್’ಎಸ್ ಕಾರ್ಯಕರ್ತರ ಹತ್ಯೆಗೆ ಖಲಿಸ್ತಾನ್ ಬೆಂಬಲಿಗರನ್ನು ಬಳಸಲಾಗುತ್ತಿದ್ದು, ಜಗದೀಶ್ ಕುಮಾರ್​ ಕೊಲೆ ಪ್ರಕರಣ ತನಿಖೆ ವೇಳೆ ಸತ್ಯ
ಬಯಲಾಗಿದೆ. ಒಂದು ಕೊಲೆ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ 6 ಕೊಲೆಗಳ ರಹಸ್ಯ ಬಯಲಾಗಿದೆ.

ತನಿಖೆಯ ಸಂದರ್ಭದಲ್ಲಿ ಆರ್’ಎಸ್’ಎಸ್​, ಶಿವಸೇನೆ, ಹಿಂದೂ ತಖ್ತ್ ​ಸಂಘಟನೆಗಳ ಮುಖಂಡರ ಕೊಲೆ ರಹಸ್ಯಗಳು ಕೂಡ ಬಯಲಾಗಿದೆ. ಪಂಜಾಬ್ ಪೊಲೀಸರು ಆರ್’ಎಸ್’ಎಸ್  ಮುಖಂಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ಮಿ ಸಿಂಗ್, ಜಗ್ತಾರ್​ ಸಿಂಗ್, ಜೊಹಾಲ್, ಧರ್ಮೇಂದರ್ ಅಲಿಯಾಸ್ ಗುಗ್ಗಿ ಎಂಬುವರರನ್ನು ಬಂಧಿಸಿದ್ದರು.

ಇಂಗ್ಲೆಂಡ್​ನಲ್ಲಿದ್ದಾಗಲೇ ಐಎಸ್​ಐ ಏಜೆಂಟರ ಸಂಪರ್ಕಕ್ಕೆ ಬಂದಿದ್ದ ಜಿಮ್ಮಿ ಸಿಂಗ್. ಅದೇ ರೀತಿ 2 ನೇ ಆರೋಪಿ ಜಗ್ತಾರ್​ ಸಿಂಗ್ ಇಂಗ್ಲೆಂಡ್​ ನಾಗರಿಕನಾಗಿದ್ದು ಪಂಜಾಬಿ ಕನ್ಯೆಯನ್ನ ಮದುವೆಯಾಗಿದ್ದ. 3 ನೇ ಆರೋಪಿ ಧರ್ಮೇಂದರ್​ ಅಲಿಯಾಸ್ ಜಗ್ಗಿ ಸ್ಥಳೀಯ ರೌಡಿಶೀಟರ್. ಇವರೆಲ್ಲರಿಗೂ ಆರ್’ಎಸ್’ಎಸ್ ಮುಖಂಡರ ಹತ್ಯೆಗೆ ವಿದೇಶದಿಂದ ಹಣ, ರಹಸ್ಯ ಸ್ಥಳದಲ್ಲಿ ತರಬೇತಿ ನೀಡಲಾಗುತ್ತದೆ. ಗೂಂಡಾಗಳು, ಖಲಿಸ್ತಾನ್​ ಪರ ಒಲವು ಹೊಂದಿರುವ ಯುವಕರು ಆರ್’ಎಸ್’ಎಸ್ ಅನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಪಂಜಾಬ್​ನಲ್ಲಿ ಭಯೋತ್ಪಾದನೆ ಹುಟ್ಟುಹಾಕಿ ಭಾರತವನ್ನು ಅಭದ್ರಗೊಳಿಸಲು ಪಾಕ್​ ಷಡ್ಯಂತ್ರ ರೂಪಿಸುತ್ತಿದೆ.

ಈ ಸಂದರ್ಭದಲ್ಲಿ ಪಾಕ್​ ಹಣ, ಐಎಸ್​ಐ ಕೈವಾಡ, ಇಟಲಿ, ಕೆನಡಾ, ಇಂಗ್ಲೆಂಡ್​ ಲಿಂಕ್  ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಖಲಿಸ್ತಾನ್ ಬೆಂಬಲಿಗರಿಂದ ಹಿಂದೂ ಮುಖಂಡರ ಹತ್ಯೆ ಮಾಡಿಸಿ ಕೋಮುದಳ್ಳುರಿ ಸೃಷ್ಟಿಸುವುದು ಯೋಜನೆಯ ಉದ್ದೇಶವಾಗಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ ಇಸ್ಲಾಮಿ ಭಯೋತ್ಪಾದನಾ ಸಂಘಟನೆಗಳಾದ PFI, SDPI ಸಂಘಟನೆಗಳ ಕೈವಾಡವನ್ನೂ ಬಹಿರಂಗಗೊಳಿಸಿತ್ತು. ಇದರ ಜೊತೆ ಜೊತೆಗೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಭಾರತದಲ್ಲಿನ ಹಿಂದೂ ಸಂಘಟನೆಯ ಪ್ರಮುಖರನ್ನ ಕೊಲ್ಲುವ ಸಂಚನ್ನೂ ಮಾಟಿದ್ದಾರೆ ಅನ್ನೋದನ್ನೂ NIA ಹೇಳಿತ್ತು.

ಸಾಲು ಸಾಲು ಆರೆಸ್ಸೆಸ್ ಹಾಗು ಹಿಂದೂ ಸಂಘಟನೆಗಳ ಕಗ್ಗೊಲೆಗಳಾಗುತ್ತಿದ್ದರೂ ಕಮಲ್ ಹಾಸನ್, ಪ್ರಕಾಶ್ ರೈ ನಂಥವರಿಗೆ ಭಾರತದಲ್ಲಿ ಹಿಂದೂ ಭಯೋತ್ಪಾದನೆ ಇದೆ ಅಂತ ಹೇಳುತ್ತಿರೋದನ್ನ ನೋಡಿದರೆ ಎಲ್ಲಿ ಇವರೂ ಪಾಕಿಸ್ತಾನದ ಪ್ಲ್ಯಾನ್ ನಲ್ಲಿ ಭಾಗಿಯಾಗಿದ್ದಾರಾ ಅನ್ನೋ ಶಂಕೆ ವ್ಯಕ್ತತವಾಗುತ್ತೆ.

ಯಾಕಂದ್ರೆ ಪಾಕಿಸ್ತಾನದ ವಿರೋಧಿಗಳೂ ಮೋದಿ, ಬಿಜೆಪಿ, ಆರೆಸ್ಸೆಸ್ & ಹಿಂದೂ ಸಂಘಟನೆಯ ಪ್ರಮುಖರು ಹಾಗು ಈ ಕಮಲ್ ಹಾಸನ್, ಪ್ರಕಾಶ್ ರೈ ತಮ್ಮ ಕಚಡಾ ನಾಲಿಗೆಯಿಂದ ಟಾರ್ಗೇಟ್ ಮಾಡ್ತಿರೋದು ಇವರನ್ನೇ.

ಫ್ರೀಡಂ ಆಫ್ ಸ್ಪೀಚ್ ಆಪತ್ತಿನಲ್ಲಿದೆ ಅಂತ ಅದೇ ಫ್ರೀಡಂ ಆಫ್ ಸ್ಪೀಚ್ ಮೂಲಕ ಬಾಯಿಗೆ ಬಂದಂತೆ ಬೊಗಳುತ್ತಿರುವ ಈ ಮಾನಸಿಕ ಭಯೋತ್ಪಾದಕರೇನೂ ಪಾಕಿಸ್ತಾನಕ್ಕಿಂತ ಮಾರಕವೇನಲ್ಲ ಬಿಡಿ.

ಕೇಂದ್ರ ಮೋದಿ ಸರ್ಕಾರ ಹಿಂದೂ ಸಂಘಟನೆಯ ಪ್ರಮುಖರಾದಿಯಾಗಿ ಸಾಮಾನ್ಯ ಕಾರ್ಯಕರ್ತರ ರಕ್ಷಣೆಗೂ ಕಟಿಬದ್ದವಾಗಿ ಅವರ ಸೂಕ್ತ ರಕ್ಷಣೆಗೆ ಮುಂದಾಗಬೇಕಿದೆ.

– Vinod Hindu Nationalist

Tags

Related Articles

Close