ಪ್ರಚಲಿತ

ಸ್ಫೋಟಕ ಸುದ್ದಿ! ಪಾಕಿಸ್ಥಾನದಲ್ಲಿ ನೆಲೆಸಿರುವ ಮೋಸ್ಟ್ ವಾಂಟೆಡ್ ಉಗ್ರನ ಮಗನನ್ನು ಜೈಲಿಗಟ್ಟಿದ ಮೋದಿ ಸರಕಾರ!

ಭಯೋತ್ಪಾದಕರ ಬೆಂಬಲಿಗರಿಗೆ ಸಂಪೂರ್ಣ ವಿರೋಧದ ಸ್ಪಷ್ಟ ನಿಲುವನ್ನು ಹಾಕಲು ಸರಕಾರ ನಿರ್ಧರಿಸಿದೆ. !! ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ( ಎನ್‍ಐಎ)
ಭಯೋತ್ಪಾದಕ ನಿಧಿಯನ್ನು ನಿರ್ಮೂಲನೆ ಮಾಡಲು ತುಂಬಾ ಆಕ್ರಮಣಕಾರಿಯಾಗಿ ತನಿಖೆ ನಡೆಸುತ್ತಿದೆ. ಇದೀಗ ಎನ್‍ಐಎ ಹಿಜ್ಬುಲ್ ಮುಜಾಹಿದೀನ್(ಎಚ್‍ಎಂ) ಮುಖ್ಯಸ್ಥ ಮೊಹದ್ ಯೂಸುಫ್ ಷಾ ಅಲಿಯಾಸ್ ಸೈಯದ್ ಸಲಾಹದ್ದೀನ್ ಅವರ ಮಗ ಶಾಹಿದ್ ಯೂಸುಫ್‍ರನ್ನು ಬಂಧಿಸಿದೆ.!! 2011 ರ ಭಯೋತ್ಪಾದನ ನಿಧಿಯ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆಸಲಾಗಿದೆ

ಉಗ್ರರಿಗೆ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ಪುತ್ರ ಸಯ್ಯದ್ ಶಾಯೀದ್ ಯೂಸೂಫ್‍ನನ್ನು ಎನ್‍ಐಎ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಉಗ್ರರಿಗೆ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸತ್ಯಗಳನ್ನು ಶಾಯಿದ್ ಮುಚ್ಚುತ್ತಿದ್ದು ಅಗಸ್ಟ್ 16 ರಂದು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ದಳ ಈ ಹಿಂದೆ ಶಾಯಿದ್‍ಗೆ ಸಮನ್ಸ್ ಜಾರಿ ಮಾಡಿತ್ತು. ಇದೀಗ ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ!!!.

ಸಯ್ಯದ್ ಶಾಯಿದ್ ಯೂಸುಫ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸಯ್ಯದ್ ಸಲಹುದೀನ್ ಪುತ್ರನಾಗಿದ್ದು ಈಗ ಸೊಯ್ಯಘ್ ಬುದ್ಗಾಂನ
ನಿವಾಸಿಯಾಗಿದ್ದಾನೆ. ಕೃಷಿ ಕ್ಷೇತ್ರದಲ್ಲಿ ಪದವಿ ಮಾಡಿರುವ ಶಾಹಿದ್ ಏರ್-ಇ-ಕಾಶ್ಮೀರ್ ಇನ್ಸಿಸ್ಟೀಟ್ಯೂಟ್ ಆಫ್ ಅಗ್ರಿಕಲ್ಚರ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ರಿಸರ್ಚ್ ಮಾಡುತ್ತಿದ್ದಾನೆ.ಸೈಯದ್ ಶಾಯಿದ್ ಯೂಸುಫ್ ಕೆಲ ವರ್ಷಗಳಿಂದ ಅಹಮದ್ ಭಟ್ ಅಲಿಯಾಸ್ ಐಜಾಜ್ ಮಗ್ಬೂಲ್ ಭಟ್ ಈ ಪ್ರಕರಣದಲ್ಲಿ ಒಬ್ಬ ಅನುಯಾಯಿಯಾದ ಇಂಟರ್‍ನ್ಯಾಶನಲ್ ವೈರ್ ಮನಿ ವರ್ಗಾವಣೆ ಮೂಲಕ ಹಣವನ್ನು ಪಡೆಯುತ್ತಿದ್ದಾರೆ ಮತ್ತು ಸಂಗ್ರಹಿಸುತ್ತಿದ್ದ ಕಾರಣಕ್ಕಾಗಿ ಇವರನ್ನು ಬಂಧಿಸಲಾಗಿದೆ. ಸಯ್ಯದ್ ಶಾಹಿದ್ ಯೂಸುಫಿಸ್ ಜಮ್ಮ ಮತ್ತು ಕಾಶ್ಮೀರದ ಕೃಷಿ ಇಲಾಖೆ ಗ್ರಾಮದ ಕೃಷಿ ವಿಸ್ತರಣೆ ಸಹಾಯಕರಾಗಿ 2013ರಿಂದಲೂ ಸೋಯಿಬಗ್‍ನಲ್ಲಿ ಕೆಲಸ ಮಾಡುತ್ತಿದ್ದ.

ಬಂಧನಕ್ಕೆ ಮುಂಚಿತವಾಗಿ ಎನ್‍ಐಎ ಹಣದ ವರ್ಗಾವಣೆ ಸ್ವೀಕರಿಸಲು ಅವರೊಂದಿಗೆ ಟೆಲಿಫೋನ್ ಸಂಪರ್ಕದಲ್ಲಿದ್ದ ಐಜಾಜ್ ಅಹಮ್ಮದ್ ಭಟ್‍ನನ್ನು ಹಲವಾರು
ಭಾರತೀಯ ಸಂಪರ್ಕಗಳಲ್ಲಿ ಒಬ್ಬರಾಗಿದ್ದರೇ ಎಂದು ಎನ್‍ಐಎ ಪ್ರಶ್ನಿಸಿತ್ತು. 2011ರಲ್ಲಿ ದೆಹಲಿ ಪೊಲೀಸ್ ವಿಶೇಷ ಸೆಲ್ಸ್ 13, 17, 18 ಮತ್ತು 20 ರ
ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯಿದೆ 1967ರ ಅಡಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲಿಂದೀಚೆಗೆ ಭಾರತದಲ್ಲಿ ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ಅನೇಕ ದೇಶದ್ರೋಹಿಗಳು ರೇಡರ್ ಅಡಿಯಲ್ಲಿದ್ದರು.

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‍ನನ್ನು ಅಮೆರಿಕಾ ಜಾಗತಿಕ ಉಗ್ರ ಎಂದು ಘೋಷಿಸಿದ ಬಳಿಕ ಭಾರತ ಮೇಲೆ ವಿಷ ಕಾರುತ್ತಿರುವ ಸಹಾಹುದ್ದೀನ್ ಭಾರತದ ಯಾವ ಭಾಗದ ಮೇಲಾದರೂ ದಾಳಿ ಮಾಡುವ ಸಾಮಥ್ರ್ಯ ನಮಗಿದೆ ಎಂದು ಕೂಡಾ ಬಹಿರಂಗ ಹೇಳಿಕೆ ನೀಡಿದ್ದ.. ಮೋದಿ ಅಮೆರಿಕಾ ಪ್ರವಾಸದ ವೇಳೆ ಅಲ್ಲಿನ ಸರಕಾರ ಸಲಾಹುದ್ದೀನ್‍ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಇದರಿಂದ ಭಾರತದ ಮೇಲೆ ಸಲಾಹುದ್ದೀನ್ ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಮೇಲೆ ಯಾವಾಗ ಹಾಗೂ ಯಾವುದೇ ಭಾಗದ ಮೇಲೆ ಬೇಕಾದರೂ ನಾವು ದಾಳಿ ನಡೆಸಬಲ್ಲೆವು ಅಂದು ಕೂಡಾ ನೇರವಾಗಿ ಬೆದರಿಕೆ ಹಾಕಿದ್ದನು.!! ನಾನು ಭಾರತದಲ್ಲಿ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದೇನೆ. ನನ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಮೂರ್ಖ ಎಂದು ಈತ ಹೇಳಿದ್ದು ಭಾರತದಿಂದ ಕಾಶ್ಮೀರವನ್ನು
ವಿಮೋಚನೆಗೊಳಿಸುವ ವರೆಗೂ ನಮ್ಮ ಹೋರಾಟ ಅಂತ್ಯಗೊಳ್ಳುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ಕೂಡಾ ಈತ ರವಾನಿಸಿದ್ದ.

ಭಯೋತ್ಪಾದಕ ಸೈಯದ್ ಸಲಾಹುದ್ದೀನ್ ಹಲವಾರು ಮುಗ್ಧ ವ್ಯಕ್ತಿಗಳನ್ನು ಕೊಂದ ನಂತರ ಅದೆಷ್ಟೋ ಖುಷಿ ಪಡುತ್ತಿದ್ದ!!.. ಆದರೆ ಇವತ್ತು ಎನ್‍ಐಎ ಸೈಯದ್
ಸಲಾಗುದ್ದೀನ್ ಮಗನನ್ನು ಬಂಧಿಸಿದಾಗ ಅದನ್ನು ಕೇಳಿ ಆತ ಭಾರೀ ಆಘಾತಕ್ಕೊಳಗಾಗಿದ್ದಾನೆ. ಅಮಾಯಕರನ್ನು ಕೊಂದ ಮೇಲೆ ಅವರ ಕುಟುಂಬ ಅದೆಷ್ಟು
ಸಂಕಟಪಡುತ್ತಿತ್ತು ಎಂದು ಈತ ಗ್ರಹಿಸಲಿಕ್ಕಿರಲಿಲ್ಲ.. ಸೈಯದ್ ಸಲಾಹುದ್ದೀನ್ ಅವರ ಮೂರನೇ ಮಗ ಯೂಸುಫ್. ಅತನಿಗೆ ಐದು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದಾರೆ.

ಜೂನ್ ತಿಂಗಳಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು ಭಾರತದ ಅತ್ಯಂತ ಬೇಕಾಗಿರುವ ಭಯೋತ್ಪಾದಕ ಮತ್ತು ಹಿಜ್ಬುಲ್ ಮುಜಹಿದೀನ್ ಮುಖ್ಯಸ್ಥ ಸೈಯದ್
ಸಲಾಹುದ್ದೀನ್‍ರನ್ನು ವಿಷೇಶವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ ಎಂದು ಕೂಡಾ ಘೋಷಿಸಿತ್ತು. ಅಮೇರಿಕದ ರಾಷ್ಟ್ರೀಯ ಭದ್ರತೆಯನ್ನು ಬೆದರಿಸುವ ಭಯೋತ್ಪಾದನೆಯ ಕೃತ್ಯಗಳನ್ನು ಮಾಡಿದ ವಿದೇಶಿಗಳ ಮೇಲಿನ ನಿರ್ಬಂಧಗಳನ್ನು ವಿಧಿಸುವ ಅಮೆರಿಕದ ನಿಬಂಧನೆಗಳ ಅಡಿಯಲ್ಲಿ ಅವರನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಯಿತು. ಈ ಘೊಷಣೆಯ ಕಾರಣ ಎಲ್ಲ ಅಮೇರಿಕನ್ನರು ಸಾಮಾನ್ಯವಾಗಿ ತೊಡಗಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಸಲಾಹುದ್ದೀನ್ ಅವರ ಎಲ್ಲಾ ಆಸ್ತಿ ಮತ್ತು ಆಸ್ತಿಯ ಆಸಕ್ತಿಯು ಯುನೈಟೆಡ್ ಸ್ಟೇಟ್‍ನ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದೆ. 2011ರಲ್ಲಿ ಎನ್‍ಐಎ ಈ ಪ್ರಕರಣದಲ್ಲಿ ಆರು ಆರೋಪಿಗಳ ವಿರುದ್ಧ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದೆ. ಎಸ್‍ಎಸ್ ಗೀಲಾನಿ, ಅಧ್ಯಕ್ಷ ತೆರಿಹಿಕ್-ಇ-ಹೂರ್ರಿಯತ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ವಿಶೇಷ ನ್ಯಾಯಾಲಯ ಎನ್‍ಐಎ ನವದೆಹಲಿ ಮತ್ತು ಇತರ ಇಬ್ಬರು ಮೊಹಮ್ಮದ್ ಮಕ್ಬೂಲ್ ಪಂಡಿತ್ ಮತ್ತು ಐಜಾಜ್ ಅಹ್ಮದ್ ಭಟ್ ಇನ್ನೂ ತಲೆಮರಿಸಿಕೊಂಡಿದ್ದಾರೆ. ತಪ್ಪಿತಸ್ಥ ಆರೋಪಿಗಳ ವಿರುದ್ಧ ರೆಡ್ ನೋಟಿಸ್ ಈಗಾಗಲೇ ಹೊರಡಿಸಿದೆ.

ಇಂತಹ ಉಗ್ರರನ್ನು ಬೆಳೆಯಲು ಬಿಟ್ಟರೆ ಮುಂದೆ ನಾವೆಲ್ಲರೂ ಅನುಭವಿಸಬೇಕಾಗುತ್ತದೆ. ಇಂತಹವರನ್ನು ಮುಂದೆ ಬೆಳೆಯಲು ಬಿಡದೆ ಈಗಲೇ ಚಿವುಟಿ ಬಿಡಬೇಕು. ಯಾವುದೇ ಸರಕಾರಕ್ಕೂ ಇಂತಹ ಉಗ್ರರನ್ನು ಹಿಡಿಲು ಆಗದೆ ದೇಶದ್ರೋಹ ಮಾಡಲು ಬಿಟ್ಟಿದ್ದರು. ಆದರೆ ಇದೀಗ ಮೋದಿ ಸರಕಾರ ಸೈಯದ್ ಸಲಾಹುದ್ದೀನ್‍ನ ಮಗನ್ನು ಹಿಡಿಯಲು ಸಹರಿಸಿದ್ದಾರೆ…

-ಶೃಜನ್ಯಾ

Tags

Related Articles

Close