ಪ್ರಚಲಿತ

ಸ್ಫೋಟಕ ಸುದ್ದಿ ಬಹಿರಂಗ!!! ಮಂಗಳೂರಿನಿಂದ ಪಾಕಿಸ್ಥಾನ ಉಗ್ರರಿಗೆ ರವಾನೆಯಾಗುತ್ತಿದೆಯೇ ದೊಡ್ಡ ಮೊತ್ತದ ಹಣ?!

ಕರ್ನಾಟಕದ ಕರಾವಳಿ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆ ಬೇರೂರುತ್ತಿದಿಯಾ..? ಈ ಪ್ರಶ್ನೆಗೆ ಇತ್ತೀಚಿನ ಕೆಲವು ಬೆಳವಣಿಗೆಗಳು ಹೌದೆನ್ನುತ್ತಿವೆ. ಮೊನ್ನೆ ಮೊನ್ನೆ ತಾನೇ ಐಸಿಸ್ ಬೆಳವಣಗೆÂಯ ಮಾಹಿತಿ ಬಂದಿದ್ದರೆ ಈಗ ಪಾಕಿಸ್ಥಾನ ಹಸ್ತಕ ಸಂಘಟನೆಯ ಹಣಕಾಸಿನ ಮಾಹಿತಿಯೊಂದನ್ನು ಜಾರಿ ನಿರ್ಧೇಶನಾಲಯ
ಬಯಲಿಗೆಳೆದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಮಂಗಳೂರು. ಕಡಲ ನಗರಿ, ಬುದ್ಧಿವಂತರ ಜಿಲ್ಲೆ ಎಂದು ಪ್ರಸಿದ್ಧಿ ಪಡೆದಿರುವ ಜಿಲ್ಲೆ. ರಾಜ್ಯದಲ್ಲಿ ಅದೇನೂ ಕೋಲಾಹಲ ನಡೆದ್ರೂನೂ ಮಂಗಳೂರು ಮಾತ್ರ ತಣ್ಣಗೆ ಯಥಾಸ್ಥಿತಿಯಲ್ಲಿರುತ್ತೆ. ಆದ್ರೆ ದೇಶದ ವಿಷಯ, ಧರ್ಮಕ್ಕೆ ಸಂಬಂಧ ಪಟ್ಟ ವಿಷಯದಲ್ಲಿ ಏನಾದರು ಘಟನೆಗಳು ಸಂಭವಿಸಿದರೆ, ಮೊದಲು ಸಿಡಿದೇಳುವುವುದು ಅದೇ ಮಂಗಳೂರಿನಲ್ಲಿ.

ಆದರೆ ಅದೇ ಮಂಗಳೂರಿಗೆ ಉಗ್ರರ ಕರಿಛಾಯೆ ಪದೇ ಪದೇ ಆವರಿಸುತ್ತಿದೆ. ಇತ್ತೀಚೆಗೆ ಮಂಗಳೂರಿನ ಬಿ.ಸಿ. ರೋಡಿನಲ್ಲಿ ಐಸಿಸ್ ಉಗ್ರರ ಶಿಬಿರಗಳು ನಡೆಯುತ್ತಿದೆ ಎಂಬ ಮಾಹಿತಿಗಳು ಸ್ವತಃ ಮುಸ್ಲಿಮರಿಂದಲೇ ಬಯಲಾಗಿತ್ತು. ಐಸಿಸ್ ಬೆಂಬಲಿತ ಧ್ವನಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತ್ತು. ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಅರಣ್ಯ ಸಚಿವ ರಮಾನಾಥ್ ರೈ ತವರಲ್ಲೇ ಇಂತಹ ಪ್ರಕರಣ ಕಂಡುಬಂದದ್ದು, ರೈ ವಿರುದ್ಧ ಟೀಕಾಪ್ರಹಾರವೇ ಬುಗಿಳೆದ್ದಿತ್ತು.

ಬಿಸಿ ರೋಡಿನ ಐಸಿಸ್ ಶಿಬಿರಗಳ ವಿಷಯಗಳು ಸದ್ದಿಲ್ಲದೆ ತಣ್ಣಗಾಗುತ್ತಲೇ ಮತ್ತೊಂದು ಸ್ಪೋಟಕ ಮಾಹಿತಿ ಮಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ
ಜನತೆಯನ್ನೇ ಬೆಚ್ಚಿ ಬೀಳಿಸಿದೆ. ಈ ಮೊದಲೇ ಉಗ್ರರ ಕರಿನೆರಳನ್ನು ಮೆತ್ತಿಕೊಂಡಿದ್ದ ಮಂಗಳೂರು ಇದೀಗ ಮತ್ತೊಂದು ಪ್ರಕರಣದಲ್ಲಿ ಆತಂಕಪಡುವಂತಾಗಿದೆ.

* ಮಂಗಳೂರಿನಿಂದ ಪಾಕಿಸ್ಥಾನ ಉಗ್ರರಿಗೆ ರವಾಣೆಯಾಗುತ್ತಿದೆ ಹಣ…!!

ಮಂಗಳೂರಿನಿಂದ ಉಗ್ರರಿಗೆ ಹಣಸಂದಾಯವಾಗಿರುವ ಸ್ಪೋಟಕ ಮಾಹಿತಿ ಇಡಿ ಯಿಂದ ಬಟಬಯಲಾಗಿದೆ. ಹೀಗೊಂದು ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಇದನ್ನು ಬಹಿರಂಗಗೊಳಿಸಿದ ಜಾರಿ ನಿರ್ಧೇಶನಾಲಯ (ಇ.ಡಿ.) ಪಾಕಿಸ್ಥಾನದ ಉಗ್ರರಿಗೆ ರವಾನೆಯಾಗುತ್ತಿದ್ದ ಹಣವನ್ನು ಪತ್ತೆ ಹಚ್ಚಿ ಬೆಳಕಿಗೆ ತಂದಿದೆ. ರಾಜ್ಯದಲ್ಲಿ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರಿಗೆ ಸೇರಿದ 5 ಲಕ್ಷ ರಾಪಾಯಿ ಮೌಲ್ಯದ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದಲ್ಲದೆ ಈ ಉಗ್ರರಿಗೆ ಪಾಕಿಸ್ಥಾನ ಭಯೋತ್ಪಾದನಾ ಸಂಘಟನೆಗಳ ಸಂಪರ್ಕವಿದೆ ಎಂದು ಖಚಿತಗೊಳಿಸಿದೆ. ಆಕ್ರಮ ಹಣ ಬರ್ಗಾವಣೆ ತಡೆ ಕಾಯ್ದೆ ಅನುಸಾರ ಉಗ್ರರ ಹಸ್ತಕದಲ್ಲಿರುವ ಮಂಗಳೂರಿನಲ್ಲಿರುವ ಸ್ಥಿರಾಸ್ತಿ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಯನ್ನು ಮುಟ್ಟು ಗೋಲು ಹಾಕಿದೆ. ಈ ಆಸ್ತಿ ಪಾಸ್ತಿಯು ಉಗ್ರಗಾಮಿ ಸಂಘಟನೆಗಳಿಗೆ ಹಣಕಾಸು ನೆರವು ಒದಗಿಸುವ ವ್ಯಕ್ತಿಗಳಿಗೆ ಸೇರಿದೆ. ಆ ವ್ಯಕ್ತಿಗಳಿಗೆ ಪಾಕಿಸ್ಥಾನದ ಸಂಪರ್ಕವೂ ಇದೆ ಎಂದೂ ಜಾರಿ ನಿರ್ಧೇಶನಾಲಯ ಖಚಿತ ಪಡಿಸಿದೆ. ಧೀರಜ್ ಸಾವೋ ಎಂಬಾತನ ಖಾತೆಗೆ ದೇಶದ ವಿವಿಧ ಭಾಗಗಳಿಂದ ಹಣ ಬಂದು ಬೀಳುತ್ತಿತ್ತು. ಈತ ತನ್ನ ಕಮಿಷನ್ ಇರಿಸಿಕೊಂಡು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ವಿವಿಧ ವ್ಯಕ್ತಿಗಳಿಗೆ ಆ ಹಣವನ್ನು ವರ್ಗಾಯಿಸುತ್ತಿದ್ದ ಎಂಬ ಸ್ಪೋಟಕ ಮಾಹಿತಿಯನ್ನು ಇಡಿ ಬಹಿರಂಗಗೊಳಿಸಿದೆ.

ಇಂಡಿಯನ್ ಮುಜಾಹಿದ್ದೀನ್ ಜತೆ ನಂಟಿದ್ದ ಜುಬೇರ್ ಹುಸೇನ್, ಆಯೇಷಾ ಬಾನು, ರಾಜು ಖಾನ್ ಹಾಗೂ ಇತರರ ಖಾತೆಗೂ ಹಣ ಜಮೆ ಆಗಿತ್ತು ಎಂದು ಜಾರಿ
ನಿರ್ಧೇಶನಾಲಯ ನೇರವಾಗಿ ಆರೋಪಿಸಿದೆ.

* ಮಂಗಳೂರು ಮುಸಲ್ಮಾನರಿಗೆ ಉಗ್ರ ಸಂಪರ್ಕ ಇದೇ ಮೊದಲಲ್ಲ….?

ಹೌದು ಮಂಗಳೂರಿನಲ್ಲಿರುವ ಮುಸ್ಮಾನರಿಗೆ ಉಗ್ರರ ಸಂಪರ್ಕವಿರುವುದು ಈ ಹಿಂದೆಯೇ ಖಚಿತವಾಗಿತ್ತು. 2013ರಲ್ಲಿಯೇ ಮಂಗಳೂರಿಗರ ಉಗ್ರ ಸಂಪರ್ಕವನ್ನು ಬಹಿರಂಪಡಿಸಿತ್ತು. ಹಿಂದೂ ಧರ್ಮದಿಂದ ಮತಾಂತರವಾಗಿ ಆಯೇಷಾ ಆಗಿ ಬದಲಾದ ಮಹಿಳೆಯನ್ನು ಉಗ್ರರು ಇದೇ ಕೆಲಸಕ್ಕೆ ಉಪಯೋಗಿಸುತ್ತಿದ್ದರು. 2013ರಲ್ಲಿ ಆಯೇಷಾ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಹವಾಲ ಹಣದ ವ್ಯವಹಾರ ಮಾಡುತ್ತಿದ್ದ ಇತರರನ್ನು ಬಂಧಿಸಿದ್ದರು. ಈಗ ಮತ್ತೆ ಇಂತಹ ಚಟುವಟಿಕೆಗಳು ಬೆಳಕಿಗೆ ಬಂದಿದ್ದು ಮತ್ತೆ ಕರಾವಳಿಗರನ್ನು ಆತಂಕಕ್ಕೆ ದೂಡಿದೆ.

ಹೀಗೆ ಉಗ್ರರಿಂದ ವ್ಯವಹಾರಕ್ಕೊಳಪಟ್ಟ ಇದೇ ಹಣದಿಂದ ಬಾನು ಹಾಗೂ ಹುಸೇನ್ ಎಂಬ ಉಗ್ರರು ಮಂಗಳೂರಿನ ಪಂಜಿಮೊಗರು ಎಂಬಲ್ಲ ಆಸ್ತಿ ಖರೀದಿಸಿದ್ದರು ಎಂಬುವುದು ತನಿಖೆಯಿಂದ ಬಹಿರಂಗಗೊಂಡಿತ್ತು. ಈ ಅವರಿಗೆ ಪಾಕಿಸ್ಥಾನೀ ನಾಗರಿಕ ಖಾಲಿದ್ ಎಂಬಾತನ ಸಂಪರ್ಕವಿದ್ದು ಆತನ ನಿರ್ಧೇಶನದಂತೆ ಆರೋಪಿಗಳು ವಿವಿಧ ಬ್ಯಾಂಕ್‍ಗಳಲ್ಲಿ ಖಾತೆಗಳನ್ನು ತೆರೆದಿದ್ದರು ಎಂದು ಜಾರಿ ನಿರ್ಧೇಶನಾಲಯ ದೃಢಪಡಿಸಿದೆ.

ಹೀಗೆ ಸ್ವೀಕಾರ ಆದ ಹಣವನ್ನು ಕಮಿಷನ್ ಇರಿಸಿಕೊಂಡು ಉಳಿದ ಹಣವನ್ನು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳಿಗೆ ಜಮಾ ಮಾಡುತ್ತಿದ್ದರು ಎಂಬ
ಗುಟ್ಟು ರಟ್ಟಾಗಿತ್ತು. ಎಲ್ಲಾ ಖಾತೆಗಳನ್ನು ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಗಳು ಭಾರತದ ವಿವಿಧ ಭಾಗಗಳಲ್ಲಿ ಈ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದರು. ಹಣ
ಜಮೆಯಾದ ಕೂಡಲೇ ಮೂಲ ಶಾಖೆಗಳನ್ನು ಹೊರತು ಪಡಿಸಿ ಇತರೆಡೆ ಏಟಿಎಂ ನಿಂದ ಹಣ ವಿತ್ ಡ್ರಾ ಆಗುತ್ತಿತ್ತು. ಇದು ಉಗ್ರ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು ಎಂಬುದು ಗೊತ್ತಾಗಿದೆ. ಹೀಗಾಗಿ ಇತರರ ಭಾಗೀದಾರಿಕೆ ಹಾಗೂ ಸಂಪರ್ಕದ ಬಗ್ಗೆಯೂ ತನಿಖೆ ನಡೆಸಿದೆ ಎಂದು ಜಾರಿ ನಿರ್ಧೇಶನಾಲಯ ತಿಳಿಸಿದೆ.

ಮೊನ್ನೆ ಮೊನ್ನೆ ತಾನೇ ಐಸಿಸ್ ಶಿಬಿರಗಳು ಮಂಗಳೂರಿನಲ್ಲಿ ತಲೆಎತ್ತುತ್ತಿವೆ ಎಂಬ ಮಾಹಿತಿಗಳನ್ನು ಅಲ್ಲಗಳೆದಿದ್ದ ಇಲ್ಲಿನ ಸೋಗಲಾಡಿ ಸಚಿವರುಗಳು ಈಗ
ಮಂಗಳೂರಿನ ಮುಸಲ್ಮಾನರಿಗೆ ಪಾಕಿಸ್ಥಾನಿ ಉಗ್ರರ ನಂಟಿರುವ ಅಧಿಕೃತ ಮಾಹಿತಿಗೆ ಏನನ್ನುತ್ತಾರೆ?

ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಭಯೋತ್ಪಾದಕರನ್ನು ಬೆಂಬಲಿಸುವ ನಿಮಗೆ ದೇಶಪ್ರೇಮವನ್ನೋದು ಚೂರಾದರೂ ಇದಿಯಾ? ಅದೆಷ್ಟೋ ಮದರಸಾಗಳಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿದೆ. ಭಯೋತ್ಪಾದನಾ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದೆ. ತಾಕತ್ತಿದ್ದರೆ ಅದನ್ನು ಕಂಡುಹಿಡಿದು ನಿಯಂತ್ರಿಸಿ.

ಜಿಲ್ಲೆಯಲ್ಲಿ ಅಂತಹಾ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವ ಯು.ಟಿ. ಖಾದರ್ ಸಾಹೇಬ್ರೇ ಈಗ ಬಂದಿರುವ ಅಧಿಕೃತ ಮಾಹಿತಿಗೆ
ಏನಂತೀರಾ…? ಓಟಿಗಾಗಿ ಮುಸಲ್ಮಾನರನ್ನು ಬೆಳೆಸುತ್ತಿರುವ ಭರದಲ್ಲಿ ಉಗ್ರರನ್ನು ಪೋಷಿಸುತ್ತಿರುವ ಅರಣ್ಯ ಸಚಿವ ರಮಾನಾಥ್ ರೈಯವರೇ ನೀವೇನಂತೀರಾ…?

ಹುಲಿಯ ನೃತ್ಯ ಮಾಡಿಕೊಂಡೇ ಜನರನ್ನು ಮೋಸಗೊಳಿಸುತ್ತೀರಾ ಅಥವಾ ಇದರ ಬಗ್ಗೆ ಏನಾದರು ಕ್ರಮ ಕೈಗೊಳ್ಳುವಿರಾ…? ಸ್ವತಃ ಮುಸಲ್ಮಾನರೇ ಈ ಬಗ್ಗೆ
ಮಾಹಿತಿ ನೀಡಿದ್ದರೂ ಬಾಯಿ ಮುಚ್ಚಿ ಕುಳಿತಿದ್ದೀರಲ್ಲಾ, ನಿಮಗೆ ಏನನ್ನಬೇಕು..? ಇನ್ನಾದರು ಈ ಬಗ್ಗೆ ಕ್ರಮ ಕೈಗೊಳ್ಳಿ. ಇಲ್ಲವಾದರೆ ಜನರೇ ನಿಮ್ಮ ಕ್ರಮ
ಕೈಗೊಳ್ಳುವುದರಲ್ಲಿ ಸಂದೇಹವಿಲ್ಲ…

Source : https://m.dailyhunt.in/news/india/kannada/suvarnanews+tv-epaper-suvarna/paak+ugrarige+mangalurinindha+hana+idi+sfotaka+maahiti-newsid-74780413?ss=pd&s=a

-ಸುನಿಲ್

Tags

Related Articles

Close