ಪ್ರಚಲಿತ

ಸ್ಫೋಟಕ ಸುದ್ದಿ! ಬಿಜೆಪಿಗೆ ಲೀಡ್ ಬಂದಲ್ಲೆಲ್ಲ ಕಾಣೆಯಾಗುತ್ತಿರುವ ಮತದಾರರು! ಕರ್ನಾಟಕದಲ್ಲೊಂದು ಎಲ್ಲೂ ಕಂಡಿರದ ಗೋಲ್ ಮಾಲ್!

ಹಗರಣಗಳ ಮೇಲೆ ಹಗರಣಗಳನ್ನು ಮಾಡುತ್ತಿರುವ ಸಿದ್ದರಾಮಯ್ಯ ಸರಕಾರ ,ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ ಗಿಟ್ಟಿಸಿಕೊಳ್ಳಲು ಬಾರೀ ಸರ್ಕಸ್ ನಡೆಸುತ್ತಾ ಇದ್ದರೆ, ಇನ್ನೊಂದೆಡೆ ತಮ್ಮ ಪಕ್ಷದ ಶಾಸಕ ಬೃಹತ್ ಮಟ್ಟದ ಹಗರಣಗಳನ್ನು ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ!! ಚುನಾವಣೆಯಲ್ಲಿ ಬಿಜೆಪಿಯನ್ನು ಮಟ್ಟ ಹಾಕಲು ಕರ್ನಾಟಕ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಪ್ಲಾನ್ ಗಳನ್ನು ನೋಡಿದರೆ ಒಂದು ಕ್ಷಣ ಆಶ್ಚರ್ಯ ಆಗಬಹುದು. ಯಾಕೆಂದರೆ ಚುನಾವಣಾ ಎಣಿಕೆಯಲ್ಲಿ ಗೋಲ್‍ಮಾಲ್ ನಡೆಯುವುದನ್ನು ಕೇಳಿದ್ದೇವೆ ಆದರೆ ಮತದಾರರ ಪಟ್ಟಿಯಲ್ಲೂ ಕೂಡ ಬಾರೀ ಮಟ್ಟದ ಗೋಲ್‍ಮಾಲ್ ನಡೆಸಬಹುದೂ ಎಂದು ಇವರು ತೋರಿಸಿಕೊಟ್ಟಿದ್ದಾರೆ!!

ಹೌದು… ಕಾಂಗ್ರೆಸ್ ಸರಕಾರ ತಮ್ಮ ಬುದ್ದಿವಂತಿಕೆಯನ್ನು ತೋರಿಸುವಲ್ಲಿ ಪ್ರತಿ ಬಾರಿ ಎಡವಿ ಬೀಳುತ್ತಲೇ ಇದ್ದು, ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಲೇ ಇರುವುದು ಸರ್ವೇಸಾಮಾನ್ಯವಾಗಿದೆ!! ಪ್ರತೀ ಬಾರೀಯೂ ಬೊಕ್ಕಸವನ್ನು ತುಂಬಿಸಿಕೊಳ್ಳುವ ಯೋಜನೆಯಲ್ಲಿ ಸಾಗಿದ್ದರೆ ಈ ಬಾರಿ ಪ್ರಜೆಗಳನ್ನೇ ಮತದಾನದ ಪಟ್ಟಿಯಿಂದ ನಾಪತ್ತೆ ಮಾಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ!! ಇದೀಗ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೈಸೂರಿನಲ್ಲಿನ ಮತದಾರ ಪಟ್ಟಿಯಲ್ಲಿ ಅಧಿಕಾರಿಗಳು ಬಾರಿ ಪ್ರಮಾಣದ ಗೋಲ್ ಮಾಲ್ ನಡೆಸಿದ್ದಾರೆಂದು ಮಾಜಿ ಸಚಿವ ಎಸ್.ಎ ರಾಮದಾಸ್ ನೇರವಾಗಿ ಆರೋಪಿಸಿದ್ದಾರೆ.

ನಾಪತ್ತೆಯಾಗಿರುವ ಮತತದಾರರ ಸಂಖ್ಯೆ ಎಷ್ಟು ಗೊತ್ತೇ??

ಮೈಸೂರಿನಲ್ಲಿ ಮತದಾರ ಪಟ್ಟಿಯಲ್ಲಿ ನಾಪತ್ತೆಯಾಗಿರುವ ಮತದಾರರ ಸಂಖ್ಯೆಗಳು ಕೇವಲ ನೂರಾರು ಸಂಖ್ಯೆಯ ಮತದಾರರಲ್ಲ!! ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ಮತದಾರರನ್ನು ನಾಪತ್ತೆ ಮಾಡಿಸಿದ್ದಾರೆ ಎಂದರೆ ಅದನ್ನು ನಂಬಲೇಬೇಕು. ಈ ಬಗ್ಗೆ ಮಾಜಿ ಸಚಿವ ಎಸ್‍ಎ ರಾಮದಾಸ್ ಬಾರಿ ಮಟ್ಟದ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿದ್ದಾರೆ.

ಹೌದು… ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದ ಬೂತ್‍ನಲ್ಲಿ ಬರೋಬ್ಬರಿ 4,794 ಮತದಾರರ ಹೆಸರು ನಾಪತ್ತೆಯಾಗಿದೆ. ಈ ಮತದಾರರ ಹೆಸರು ಹೇಗೆ ನಾಪತ್ತೆ ಯಾಗಿದೆ ಎನ್ನುವುದನ್ನು ತಿಳಿದುಕೊಂಡಾಗ ಒಂದುಕ್ಷಣ ಆಶ್ಚರ್ಯ ಆಗಬಹುದು!! ಯಾಕೆಂದರೆ ಮತದಾರರು ಬದುಕಿದ್ದರೂ, ಸತ್ತು ಹೋಗಿದ್ದಾರೆಂದು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದೆ!! ಬದುಕಿದ್ದವರನ್ನು ಸತ್ತುಹೋಗಿದ್ದಾರೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಎಸ್.ಎ ರಾಮದಾಸ್ ಅಧಿಕಾರಿಗಳ ಈ ಕೃತ್ಯದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.

ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಶಾಸಕ….!!!

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬದುಕಿದ್ದವರನ್ನು ಜೀವಂತವಾಗಿ ಸಾಯಿಸಿರುವ ಬಗ್ಗೆ ಮಾಜಿ ಸಚಿವ ಎಸ್.ಎ ರಾಮದಾಸ್ ಅವರು ತೀವ್ರವಾದ ಆರೋಪವನ್ನು ಮಾಡಿದ್ದು, ಈ ಕೃತ್ಯದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ದಾಖಲೆಯ ಪ್ರಕಾರ, ಮೂರೇ ದಿನದಲ್ಲಿ 30 ಅಧಿಕಾರಿಗಳಿಂದ ಈ ಕೆಲಸ ನಡೆದಿದ್ದು, ಎನ್.ಆರ್ ಕ್ಷೇತ್ರದಲ್ಲಿ 5642 ಮತದಾರರ ಹೆಸರು ಹಾಗೂ ಚಾಮರಾಜ ಕ್ಷೇತ್ರದಲ್ಲಿ 3416 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಕೇವಲ ಮೂರೇ ದಿನದಲ್ಲಿ ನಡೆದ ಹಗರಣದಲ್ಲಿ ಭಾರೀ ಸಂಖ್ಯೆಯ ಮತದಾರರನ್ನು, ಮತದಾನ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಕಾಂಗ್ರೆಸ್ ತನ್ನ ಅಸಲಿ ಮುಖವನ್ನು ಜನತೆಗೆ ಇನ್ನೊಂದು ಬಾರಿ ತೋರಿಸಿಕೊಟ್ಟಂತಿದೆ.

ಹೌದು… ಮತದಾನ ಪಟ್ಟಿಯಿಂದ ತೆಗೆದುಹಾಕಿದವರಲ್ಲಿ ಕೆಲವರನ್ನು ಮನೆಯಲ್ಲಿ ಇದ್ದವರನ್ನು, ಊರು ಬಿಟ್ಟಿದ್ದಾರೆಂದು ತಪ್ಪು ಮಾಹಿತಿ ನೀಡಲಾಗಿದೆ!! ಅಷ್ಟೇ ಅಲ್ಲದೇ, ಬರೋಬ್ಬರಿ 4 ಸಾವಿರ ಅರ್ಜಿಗಳು ಒಂದೇ ಮಾದರಿಯಲ್ಲಿ ಭರ್ತಿಯಾಗಿದ್ದು ಒಬ್ಬರ ಕೈಯಲ್ಲೇ ಅರ್ಜಿಗಳನ್ನು ತುಂಬಿಸಲಾಗಿದ್ದು ಮಾತ್ರ ವಿಷರ್ಯಾಸ. ಬಿಜೆಪಿಗೆ ಲೀಡ್ ಬಂದ ಮತದಾನ ಪಟ್ಟಿಯಲ್ಲಿ ಗೋಲ್ ಮಾಲ್ ನಡೆದಿದ್ದು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಈ ಒಂದು ಹಗರಣ ನಡೆದಿದೆ ಎಂದು ರಾಮದಾಸ್ ಆರೋಪಿಸಿದ್ದಾರೆ.

ಇನ್ನು ಈ ಒಂದು ಮತದಾನದ ಪಟ್ಟಿಯಲ್ಲಿ ಗೋಲ್ ಮಾಲ್ ಆಗಿರುವ ಬಗ್ಗೆ ದಾಖಲೆಗಳನ್ನು ನೀಡಿರುವ ಇವರು, ನಿಜವಾಗಿ ಸತ್ತವರ ಹೆಸರನ್ನು ಈ ಅಧಿಕಾರಿಗಳು ಡಿಲೀಟ್ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ, ಕೆಆರ್ ಕ್ಷೇತ್ರದ 12 ಬೂತ್ ಗಳಲ್ಲಿ ಒಟ್ಟು 52 ಮಂದಿ ಸತ್ತಿದ್ದು, ಅವರೆಲ್ಲರೂ ಕೂಡ ಈ ಮತದಾರರ ಪಟ್ಟಿಯಲ್ಲಿ ಇನ್ನೂ ಜೀವಂತವಾಗಿದ್ದಾರೆ!! ಇನ್ನೂ ಈ ಬಗ್ಗೆ  ನಡೆದ ಸುದ್ದಿಗೋಷ್ಠಿಯಲ್ಲಿ ಮತದಾರ ಪಟ್ಟಿಯಲ್ಲಿ ಸತ್ತಿದ್ದಾರೆ ಎಂದು ನಮೂದಿಸಿರುವ ವ್ಯಕ್ತಿಗಳು ಸಹ ತಮಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತಾವು ಬದುಕಿರುವಾಗಲೇ ಅಧಿಕಾರಿಗಳಿಗೆ ಕೆಲ ಮತದಾರರು ವಡೆಯನ್ನು ರವಾನಿಸುವುದಾಗಿ ಹೇಳಿಕೊಂಡಿದ್ದಾರೆ!!

Source :http://publictv.in/voter-list-golmaal-in-mysuru-former-minister-sa-ramdas-released-documents/

-ಅಲೋಖಾ

Tags

Related Articles

Close