ಪ್ರಚಲಿತ

ಸ್ಫೋಟಕ ಸುದ್ದಿ!!! ಸಾಮೂಹಿಕ ಅತ್ಯಾಚಾರವೆಸಗಿ ಮತಾಂತರಕ್ಕೆ ಒತ್ತಾಯಿಸಿದ ಧರ್ಮಾಂಧರು!!!

ಹೆಣ್ಣನ್ನು ದೇವತೆ ಎಂದು ಪೂಜಿಸುವ ನಮ್ಮ ರಾಷ್ಟ್ರದಲ್ಲಿ ಹೆಣ್ಣುಮಕ್ಕಳಿಗೆ ಯಾಕೆ ಪದೇ ಪದೇ ಅನ್ಯಾಯವಾಗುತ್ತಿದೆ? ಎಷ್ಟು ಹೋರಾಟ ನಡೆಸಿದರು ಕೂಡ ಅತ್ಯಾಚಾರ ಎನ್ನುವ ಮಾರಕ ಖಾಯಿಲೆಯಿಂದ ಹೆಣ್ಣೊಬ್ಬಳು ಹೊರಬರಲು ಸಾಧ್ಯವೇ ಇಲ್ಲವೇ? ಏನೂ ಮಾಡದ ತಪ್ಪಿಗೆ 16 ವರ್ಷದ ಬಾಲಕಿ ಕಾಮುಕರ ಅಟ್ಟಹಾಸಕ್ಕೆ ಗುರಿಯಾದಳು ಎಂದರೆ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ವೇ?

ಶಾಲೆಗೆ ಹೋಗಿ ಆಡಿ ಕಲಿಯ ಬೇಕಾದ ವಯಸ್ಸು ಆಕೆಯದ್ದು, ಹಾಗಿರಬೇಕಾದರೆ ಮಂಡಿ ಪ್ರದೇಶದ ಕುರ್ಕಾ ಗ್ರಾಮದಲ್ಲಿನ ತನ್ನ ಚಿಕ್ಕಪ್ಪನ ಮನೆಯಿಂದ ಮುಜಾಫರ್ ನಗರಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಈಕೆಯನ್ನು ನಾಲ್ವರು ಯುವಕರು ಕಾರಿನಲ್ಲಿ ಬಿಡುವುದಾಗಿ ಹೇಳಿ ಈಕೆಯ ಮೇಲೆ ನಿರಂತರವಾಗಿ 10 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವನ್ನು ಎಸೆಗಿದ್ದಾರೆ!!

ನಮ್ಮ ದೇಶದಲ್ಲಿ ಹೆಣ್ಣು ಅಂದರೆ ಭೋಗದ ವಸ್ತು ಎಂದು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ!! ಕ್ರೂರ ಪ್ರಾಣಿಗಳಂತೆ ವರ್ತಿಸುವ ಈ ಕಾಮುಕರಿಗೆ ಗುರಿಯಾದಳು ಈ ಮುಗ್ದ ಹೆಣ್ಣು!! ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ನಿರಂತರವಾಗಿ 10 ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ಮಾಂಸ ತಿನ್ನುವಂತೆ ಒತ್ತಾಯಿಸಿ ಮತಾಂತರವಾಗುವಂತೆ ಬಲವಂತ ಪಡೆಸಿದ್ದಾರೆ ಈ ಕಾಮುಕರು!!

ಈ ಬಗ್ಗೆ ಭೋಪಾ ಪೊಲೀಸರಿಗೆ ದೂರು ನೀಡಿರುವ ಈ ಬಾಲಕಿ, “ನಾಲ್ವರು ಯುವಕರು ತನ್ನ ಮೇಲೆ ಹತ್ತುದಿನಗಳ ಕಾಲ ನಿರಂತರವಾಗಿ ಸಾಮೂಹಿಕ
ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೇ ಮಾಂಸ ತಿನ್ನುವಂತೆ ಒತ್ತಾಯಿಸಿ ಮತಾಂತರವಾಗುವಂತೆ ಬಲವಂತ ಮಾಡಿದ್ದಾರೆ” ಎಂದು ಆರೋಪಿಸಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಮೊಹಮದ್ ರಿಜ್ವಾನ್, 10 ದಿನಗಳ ಕಾಲ ಬಾಲಕಿಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಅಕ್ರಮ್, ಆಸ್ಲಾಮ್, ಆಯೂಬ್ ಹಾಗೂ ಸಲೀಂ ಎಂಬ ನಾಲ್ವರು ಯುವಕರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿ, ಬಾಲಕಿ ದೂರು ನೀಡಿದ್ದಾಳೆ ಎಂದು ಹೇಳಿದ್ದಾರೆ.

ಪೆÇಲೀಸರಿಗೆ ನೀಡಿರುವ ದೂರಿನಲ್ಲಿ, ಹೊಸ ಮಂಡಿ ಪ್ರದೇಶದ ಕುರ್ಕಾ ಗ್ರಾಮದಲ್ಲಿ ಚಿಕ್ಕಪ್ಪನ ಮನೆಯಿದೆ. ಅವರನ್ನು ಭೇಟಿ ಮಾಡಿ ಸೆಪ್ಟೆಂಬರ್ 6ರಂದು
ಮುಜಾಫರ್‍ನಗರಕ್ಕೆ ಹೊರಟಿದ್ದೆ. ಈ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದಾಗ ಅದೇ ಮಾರ್ಗವಾಗಿ ಕಾರಿನಲ್ಲಿ ಹೊರಟಿದ್ದ ನಾಲ್ವರು ನನ್ನನ್ನು ಅಲ್ಲಿಗೆ ಬಿಟ್ಟುಕೊಡುವುದಾಗಿ ಹೇಳಿದರು. ಅದರಂತೆ ಕಾರಿಗೆ ಹತ್ತಿದ ತಕ್ಷಣವೇ ಪಿಸ್ತೂಲ್ ತೋರಿಸಿ ಹೆದರಿಸಿ, ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿದರು. ಆ ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ನಿರಂತರ ಅತ್ಯಾಚಾರವೆಸಗಿದರು ಎಂದು ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ, ಸೆಪ್ಟೆಂಬರ್ 16ರಂದು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿ ಗಂಗಾ ಚಾನಲ್ ಮೇಲ್ಸೇತುವೆ ಬಳಿಯಿರುವ ಹಳ್ಳಿಯೊಂದರ ಸಮೀಪ ಬಿಟ್ಟುಹೋದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಬಾಲಕಿ, ಈ ಬಗ್ಗೆ ಪೋಷಕರಿಗೆ ಹೇಳಿದ ಮೇಲೆ ಅವರು ಪೆÇಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ
ಪೆÇಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಕೆಲ ಹಿಂದೂ ಧರ್ಮದ ಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ!!

ಹೆಣ್ಣನ್ನು ಭೋಗದ ವಸ್ತು ಎಂದು ತಿಳಿದಿರುವ ಕಾಮುಕರಿಗೆ ನಮ್ಮ ಕಾನೂನಿನಲ್ಲಿ ಶಿಕ್ಷೆ ಇದ್ದರು ಕೂಡ ಅದು ಸಾಲೋದಿಲ್ಲ. ಯಾಕೆಂದರೆ ಜೈಲಿಗೆ ಹೋದರೆ ಮತ್ತೆ ಮರಳಿ ಬರುವ ಸಾಧ್ಯತೆಗಳಿವೆ!! ಆದರೆ ನಮ್ಮ ಕಾನೂನಿನಲ್ಲಿ ಅತ್ಯಾಚಾರಿಗಳಿಗೆ ವಿದೇಶದಲ್ಲಿರುವಂತಹ ಕ್ರೂರ ಶಿಕ್ಷೆಯನ್ನು ನೀಡಿದರೆ, ಕಾಮುಕರಿಗೆ ಭಯ ಹುಟ್ಟಲು ಸಾಧ್ಯವಾಗುತ್ತೆ ಇಲ್ಲದಿದ್ದರೇ ಹೆಣ್ಣು ಮಕ್ಕಳು ಈ ಸಮಾಜದಲ್ಲಿ ಒಬ್ಬಂಟಿಯಾಗಿ ಓಡಾಡುವುದೇ ಕಷ್ಟಕರ ಎಂದನಿಸುತ್ತೆ!!!

Source :Original Link

– ಅಲೋಖಾ

Tags

Related Articles

Close