ಪ್ರಚಲಿತ

ಸ್ಫೋಟಕ ಸುದ್ದಿ! ಸಿದ್ದರಾಮಯ್ಯ ಸರಕಾರದ ಮತ್ತೊಂದು ಸಾಧನೆ! ರೌಡಿ ಶೀಟರ್ ಗೆ ಸರಕಾರೀ ಅಭಿಯೋಜಕ ಪಟ್ಟ!

ಪ್ರತಿ ದಿನವೂ ಮೇಲಿಂದ ಮೇಲೆ ಯಡವಟ್ಟು ಮಾಡಿಕೊಳ್ಳುತ್ತಿರುವ ಸಿದ್ಧರಾಮಯ್ಯ ಸರಕಾರ ಮತ್ತೊಂದು ಸಾಧನೆಯನ್ನು ಮಾಡಿದೆ! ಇಷ್ಟು ದಿನವೂ ಕೂಡ ಪೋಲಿಸ್ ಇಲಾಖೆಯವರನ್ನು ಮನಃಬಂದಂತೆ ನಡೆಸಿಕೊಂಡ ಸಿದ್ಧರಾಮಯ್ಯ ಸರಕಾರ ಯಾವತ್ತು ರಕ್ಷಕರನ್ನು ಗೌರವಿಸಿದೆ ಹೇಳಿ?! ಬರೀ ಇದೊಂದೇ ಅಲ್ಲ, ಎಸಿಬಿಯನ್ನೇ ಹಿಡಿತದಲ್ಲಿಟ್ಟುಕೊಂಡು ಬುಗುರಿಯಾಟವಾಡಿದ ಸಿಎಮ್ ಸಿದ್ಧರಾಮಯ್ಯರ ಬಲಗೈ ಬಂಟರಾದಿಯಾಗಿ ವೀರಾವೇಶದಿಂದ ಬದುಕುತ್ತಿರುವವರೇ! ಯಾಕೆ ಹೇಳಿ?! ಏನೇ ಮೊಕದ್ದಮೆ ದಾಖಲಾದರೂ ಕೂಡ ನೇರ ಮುಖ್ಯಮಂತ್ರಿಗಳ ಕಛೇರಿಯಿಂದಲೇ ಕರೆ ಬರುವಾಗ ಇನ್ನೇನು ಬೇಕು ಹೇಳಿ?!

ಈಗ. . ರೌಡಿ ಶೀಟರ್ ಗೆ ಉನ್ನತ ಹುದ್ದೆ ನೀಡಿದೆ ಸಿದ್ಧರಾಮಯ್ಯನ ಸರಕಾರ!

ಹೌದು ಸ್ವಾಮಿ! ನಾವಷ್ಟೇ ಅಲ್ಲ! ನ್ಯಾಯದೇವತೆಯೇ ದಂಗಾಗಿ ಹೋಗಿದ್ದಾಳೆ! ಬೆಂಗಳೂರಿನ ಪುಲಿಕೇಶಿ ನಗರದ ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲಿ ‘ಸುಧಾಕರ್’ ಎಂಬ ರೌಡಿಗೆ ಸ್ವತಃ ರಾಜ್ಯ ಸರಕಾರವೇ ಕರೆದು ಸರಕಾರೀ ಅಭಿಯೋಜಕ ಪಟ್ಟ ನೀಡಿ ಗೌರವಿಸಿದೆ! ಜುಲೈ 10, 2017 ರಂದು ನೇಮಕ ಮಾಡಿರುವ ರಾಜ್ಯ ಸರಕಾರದ ಕೃಪೆಗೆ ಪಾತ್ರನಾಗಿರುವ ಸುಧಾಕರ್ ಮೇಲೆ ಕೊಲೆ ಆರೋಪಗಳೂ ಸೇರಿದಂತೆ ಹಲವು ಗಂಭೀರ ಪ್ರಕರಣಗಳ 9 ಮೊಕದ್ದಮೆಗಳಿದೆ! ಮಾಹಿತಿ ಪ್ರಕಾರ, ಅವಿಷ್ಟೂ ಕೂಡ ವಿಚಾರಣೆಯ ಹಂತದಲ್ಲಿವೆ!

ಇದಲ್ಲದೇ, ಉಚ್ಛ ನ್ಯಾಯಾಲಯ ಕೂಡ ಬಾರ್ ಆಫ್ ಕೌನ್ಸಿಲ್ ಗೆ ಸುಧಾಕರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿತ್ತು.
ಅಷ್ಟಾದರೂ. .

ವ್ಹಾ! ಎಂತಹ ಅದ್ಭುತ ಸಾಧನೆ!!

ಪ್ರತೀ ಪೋಲಿಸರೂ ಕೂಡ ತಲೆ ತಗ್ಗಿಸುವಂತೆ ನಿರ್ಧಾರ ತೆಗೆದುಕೊಂಡಿರುವ ಗೃಹ ಸಚಿವ ಇಲಾಖೆಯ ಆಯುಕ್ತರು ಕೊನೆಗೂ ತಮ್ಮ ವಿವೇಕವನ್ನು ಪ್ರದರ್ಶಿಸಿದ್ದಾರೆ ಬಿಡಿ! ರಾಮಲಿಂಗಾರೆಡ್ಡಿಗಂತೂ ವಿಚಾರಣೆಯ ಮುನ್ನವೇ ಎಲ್ಲವೂ ತಿಳಿಯುವಾಗ, ಸುಧಾಕರ್ ಒಬ್ಬ ರೌಡಿ ಶೀಟರ್ ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲವೇ?! ಅಥವಾ, ತಮ್ಮ ಬೇಳೆ ಬೇಯಿಸೋಕೆ ಒಬ್ಬ ಬೇಕೆಂಬ ದೂರಾಲೋಚನೆಯೋ?!

https://www.facebook.com/SuvarnaNews/videos/1743080095723035/

ಗೃಹ ಸಚಿವರಿಗೂ ಸಲ್ಲಬೇಕು ಬಿಡಿ ಇದರ ಶ್ರೇಯಸ್ಸು!

ಹಾ! ಅನ್ಯಾಯ ಅಂದರೆ ಆಗೋದಿಲ್ಲ ನಂಗೆ ಎಂದು ಕುಣಿಯುವ ರಾಮಲಿಂಗಾರೆಡ್ಡಿಯವರಿಗೆ ಇದನ್ನು ವಿರೋಧಿಸುವ ಮನಸ್ಸಾಗುತ್ತಿಲ್ಲ ಬಿಡಿ ಪಾಪ!
ನ್ಯಾಯದೇವತೆಯ ಹತ್ತಿರವೇ ಹೊಂದಾಣಿಕೆ ಮಾಡ್ಕೋ ತಾಯೇ ಎಂದು ರೌಡಿ ಶೀಟರ್ ಗೆ ಹುದ್ದೆ ನೀಡಿದ್ದಾರೆ! ಇನ್ನು, ಆತ ತನ್ನ ಹಡಾವಡಿಯೇ ಮುಗಿಯದಿರುವಾಗ ಪರರ ಮೊಕದ್ದಮೆಗಳ ಮೇಲೆ ವಾದಿಸಬೇಕಾದ ದುಸ್ಥಿತಿ!! ಛೇ! ಅನ್ಯಾಯ ಮಾಡುವವಗೇ ನ್ಯಾಯ ಪಂಚಾಯಿತಿಯ ಉಸ್ತುವಾರಿ!

ಸಿದ್ಧರಾಮಯ್ಯನವರ ಉದಾರ ಮನಃಸ್ಥಿತಿ!

ಅಲ್ವೇ ಮತ್ತೆ?! ಹಿಂದೆ ಅದೆಷ್ಟೋ ದಕ್ಷ ಅಧಿಕಾರಿಗಳಿಗೆ ಥರಾವರಿ ಭಾಗ್ಯ ನೀಡುವ ಮೂಲಕವೇ ಉದಾರತೆಯನ್ನು ಎತ್ತಿ ಹಿಡಿದಿದ್ದ ಸಿದ್ಧರಾಮಯ್ಯ ಕೆಲವರಿಗೆ
ಶಿವನಪಾದ ಸೇರುವ ಉನ್ನತ ಭಾಗ್ಯವನ್ನೂ ಕರುಣಿಸುವಾಗ ಇಂತಹ ಕಾರ್ಯ ಯಾವ ಲೆಕ್ಕ ಬಿಡಿ!

ಇಷ್ಟಾದರೂ, ಸಿದ್ಧರಾಮಯ್ಯನ ಸರಕಾರ ಕ್ರಮ ತೆಗೆದುಕೊಳ್ಳುತ್ತೋ ಅಥವಾ ನಿದ್ರಾದೇವಿಗೇ ಮನಸೋತು ಮಂಪರಿನಲ್ಲಿರುತ್ತದೆಯೋ ಕಾದು ನೋಡಬೇಕು.

– ಪೃಥು ಅಗ್ನಿಹೋತ್ರಿ

Tags

Related Articles

Close