ಪ್ರಚಲಿತ

ಸ್ಫೋಟಕ ಸುದ್ದಿ! ಸಿದ್ಧರಾಮಯ್ಯನ ಕುಟುಂಬ ಮಾಡಿದ ಭ್ರಷ್ಟಾಚಾರಗಳನ್ನು ದಾಖಲೆ ಸಮೇತ ಹೊರಗೆಡವಿದ ಭಾರತೀಯ ಜನತಾ ಪಕ್ಷ!

ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯನ ಕುಟುಂಬಿಕರ ಒಂದೊಂದೇ ಭ್ರಷ್ಟಾಚಾರ ಪ್ರಕರಣಗಳು ಮತ್ತೆ ಮತ್ತೆ ಹೊರಬರುತ್ತಲೇ ಇದೆ. ಈ ಬಾರಿ ಮತ್ತೊಂದು ಭ್ರಷ್ಟಾಚಾರ ಪ್ರಕರಣ ಹೊರಬಿದ್ದಿದ್ದು, ಇದನ್ನು ಅರಗಿಸಿಕೊಳ್ಳಲಾಗದ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ಅವರು ಈ ಬಾರಿ ಸಿದ್ದರಾಮಯ್ಯ ಕುಟುಂಬದ ಸ್ಫೋಟಕ ಭ್ರಷ್ಟಾಚಾರ ಪ್ರಕರಣವನ್ನು ದಾಖಲೆ ಸಮೇತ ಬಿಡುಗಡೆಗೊಳಿಸಿದ್ದು, ಇಡೀ ಕರ್ನಾಟಕದ ಜನತೆಯ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಸದಸ್ಯ
ಬಿ.ಜೆ.ಪುಟ್ಟಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಪ್ರಕರಣವನ್ನು ದಾಖಲೆ ಸಮೇತ ಬಿಡುಗಡೆಗೊಳಿಸಿದರು. ಸಿದ್ದು ಅವರ ಪುತ್ರ ಡಾ.ಯತೀಂದ್ರ ಅವರ ಇಂಡಸ್ಟ್ರೀಸ್‍ಗೆ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಬಿ.ಜೆ. ಪುಟ್ಟಸ್ವಾಮಿ ಗಂಭೀರವಾಗಿ ಆರೋಪಿಸಿದರು. ಬಳಿಕ ಯತೀಂದ್ರ ಸಿದ್ದರಾಮಯ್ಯ ಅವರ ಶಾಂತಲಾ ಇಂಡಸ್ಟ್ರೀಸ್‍ಗೆ ಕಾನೂನು ಬಾಹಿರವಾಗಿ ಭೂಮಿ ಮಂಜೂರು ಮಾಡಿರುವ ಕುರಿತು ದಾಖಲೆಯನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತಾಡಿದ ಬಿ.ಜೆ.ಪುಟ್ಟಸ್ವಾಮಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟ ಸದಸ್ಯರ ಬಗ್ಗೆ 30 ವಿಷಯಗಳ ಕುರಿತಾದ ಭ್ರಷ್ಟಚಾರ ಕುರಿತು ದಾಖಲೆ ಸಂಗ್ರಹ ಮಾಡಲಾಗಿದ್ದು, ಮೂರು ದಿನಕ್ಕೊಮ್ಮೆ ಒಂದು ಭ್ರಷ್ಟಾಚಾರ ಕುರಿತಾದ ದಾಖಲೆ ಬಿಡುಗಡೆ ಮಾಡಲಾಗುವುದು ಇನ್ನಷ್ಟು ಭ್ರಷ್ಟಾಚಾರ ಪ್ರಕರಣಗಳ ಕುರಿತು ಬೆಳಕು ಚೆಲ್ಲಿದರು. ಮಹಾಲಕ್ಷ್ಮಿ ಬಡಾವಣೆಯ ಕೇತಮಾರನಹಳ್ಳಿಯಲ್ಲಿ ಶಾಂತಾ ಇಂಡಸ್ಟ್ರೀಸ್‍ಗೆ ಮಂಜೂರಾಗಿದ್ದ 21 ಗುಂಟೆ ಜಮೀನಿಗೆ ಪರ್ಯಾಯವಾಗಿ ಹೆಚ್‍ಬಿಆರ್ ಬಡಾವಣೆ, ತದ ನಂತರ ಹೆಬ್ಬಾಳ ಫ್ಲೈ ಓವರ್ ಬಳಿ 2.50 ಎಕರೆ 200 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ನೀಡಲಾಗಿದೆ. ಇದು ಅಧಿಕಾರ ದುರುಪಯೋಗದ ಸ್ಪಷ್ಟ ನಿದರ್ಶನ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಪಾಲುದಾರಿಕೆಯ ಶಾಂತಾ ಇಂಡಸ್ಟ್ರಿಯಲ್ ಎಂಟರ್ ಪ್ರೈಸಸ್‍ನ ಭೂ ಹಗರಣದ ದಾಖಲೆಗಳು ಇವತ್ತು ಬಿಡುಗಡೆ ಮಾಡಲಾಗಿದ್ದು, ಕೇತಮಾರನಹಳ್ಳಿಯಲ್ಲಿ ವಾಸದ ನಿವೇಶನಗಳಿಗೆ ಮೀಸಲಾದ ಪ್ರದೇಶದಲ್ಲಿ ಕೈಗಾರಿಕಾ ಉದ್ದೇಶಕ್ಕೆ ನಿವೇಶನ ನೀಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದರು.

ತನ್ನ ಭ್ರಷ್ಟಾಚಾರ ಪ್ರಕರಣ ಎಳೆಎಳೆಯಾಗಿ ಬಿಡುಗಡೆಗೊಳ್ಳುವುದು ಬಹಿರಂಗವಾಗುತ್ತಿದ್ದಂತೆ ಕೆಂಡಾಮಂಡಲವಾದ ಸಿದ್ದರಾಮಯ್ಯ ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ತನ್ನ ಪ್ರತೀಬಾರಿ ಭ್ರಷ್ಟಾಚಾರ ಪ್ರಕರಣ ಹೊರಬರುತ್ತಿದ್ದಂತೆ ಇದೆಲ್ಲಾ ಸುಳ್ಳು, ಬಿಜೆಪಿಗರ ಕುತಂತ್ರ ಎಂದು ಹೇಳಿ ಹೇಳಿ ಅಭ್ಯಾಸವಾಗಿರುವ ಸಿದ್ದರಾಮಯ್ಯ ಈ ಬಾರಿಯೂ ತನ್ನ ಮಾಮೂಲಿ ಡೈಲಾಗ್ ಹೊಡೆದು ತನ್ನ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಆರೋಪ ಸುಳ್ಳಾಗಿದ್ದು, ತನ್ನ ಮಗನ ಮುಖಾಂತರ ಬಿ.ಜೆ. ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಿಸುವುದಾಗಿ ಬೋಂಗು ಬಿಟ್ಟಿದ್ದಾರೆ. 70 ಲಕ್ಷ ವಾಚ್ ಪ್ರಕರಣದ ವೇಳೆಯೂ ಇದೇ ರೀತಿ ಸಿದ್ದು ಅದು ಅಗ್ಗದ ವಾಚ್ ಎಂದು ಬೋಂಗು ಬಿಟ್ಟಿದ್ದರು. ಆದರೆ ಕೊನೆಗದು 70 ಲಕ್ಷದ ವಜ್ರ ಖಚಿತ ವಾಚ್ ಎಂದು ಗೊತ್ತಾಗುತ್ತಿದ್ದಂತೆ ಬಾಯಿಗೆ ಬೀಗ ಹೊಡೆದಿದ್ದರು.

ಸಿದ್ದು ಪುತ್ರ ಯತೀಂದ್ರ ವಿರುದ್ಧ ಈ ಹಿಂದೆಯೂ ಭ್ರಷ್ಟಾಚಾರ ಪ್ರಕರಣ ಹೊರಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ನೂರಾರು ಕೋಟಿ ಬೇನಾಮಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವರ್ತೂರು ಕನಕದಾಸ ಎನ್ನುವವರು ಡಾ.ಯತೀಂದ್ರ ಒಡೆತನದ ಮ್ಯಾಟ್ರಿಕ್ ಇಮೇಜಿಂಗ್ ಸಲ್ಯೂಶನ್ಸ್ ಕಂಪೆನಿಯ ವಿರುದ್ಧವೂ ದೂರು ದಾಖಲಿಸಿ, ಬೇನಾಮಿ ಆಸ್ತಿ ವ್ಯವಹಾರಗಳ ಕಾಯ್ದೆ ಅಡಿಯಲ್ಲಿ ತನಿಖೆಗೆ ಆಗ್ರಹಿಸಿದ್ದಾರೆ. ಇಮೇಜಿಂಗ್ ಸಲ್ಯೂಶನ್ಸ್ ಸಂಸ್ಥೆ ವಿಕ್ಟೋರಿಯಾ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಡಯಾಗ್ನೋಸ್ಟಿಕ್ ಘಟಕ ಸ್ಥಾಪಿಸಲು ಟೆಂಡರ್ ಪಡೆದಿರುವ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವ ಬಳಸಲಾಗಿದೆ ಎಂಬ ಆರೋಪವೂ ಇದೆ.

ಸಿದ್ದರಾಮಯ್ಯನ ವಿರುದ್ಧ ಹಲವಾರು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಭ್ರಷ್ಟಾಚಾರದ ಮೇಲೆ ಭ್ರಷ್ಟಾಚಾರ ಬಯಲಾಗುತ್ತಿರುವುದನ್ನು ಅರಗಿಸಲಾಗದೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗುತ್ತಿದ್ದಾರೆ. ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ಲೋಕಾಯುಕ್ತ ಸಂಸ್ಥೆಯನ್ನು ಕಡೆಗಣಿಸಿ ಸಿಎಂ ಸಿದ್ದರಾಮಯ್ಯ ರಚಿಸಿದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಇದುವರೆಗೆ ಅವರ ವಿರುದ್ಧವೇ ಸಾಕಷ್ಟು ದೂರುಗಳು ದಾಖಲಾಗಿವೆ.

-ಚೇಕಿತಾನ

Tags

Related Articles

Close