ಪ್ರಚಲಿತ

ಸ್ಫೋಟಕ ಸುದ್ದಿ! ಹೊಸ ಪಕ್ಷ ಘೋಷಿಸಿದ ನಟ ಉಪೇಂದ್ರ!! ಪಕ್ಷದ ವಿಶೇಷತೆಗಳೇನು ಗೊತ್ತೇ?!

ಉಪೇಂದ್ರರವರ ಹೊಸ ಪಕ್ಷ ಘೋಷಣೆ?!

ಗಾಂಧಿಭವನದಲ್ಲಿ ಆಟೋ ಡ್ರೈವರ್ ರವರ ಉಡುಗೆ ತೊಟ್ಟಿದ್ದ ನಟ ಉಪೇಂದ್ರರವರು ಕೊನೆಗೂ ತಮ್ಮ ಹೊಸ ಪಕ್ಷವನ್ನು ಘೋಷಿಸಿದ್ದಾರೆ!

ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ!!

ನಟ ಉಪೇಂದ್ರ ರವರ ಬಹು ನಿರೀಕ್ಷಿತ ಪಕ್ಷವೊಂದು ಇವತ್ತು ಘೋಷಣೆಯಾಗಿದೆ! ಮುಂಚೆಯಿಂದಲೂ ಸಹ ಪ್ರಜಾಕೀಯ ಮಾಡುತ್ತೇನೆಂದು ಭರವಸೆ ಕೊಟ್ಟಿದ್ದ ನಟ ಉಪೇಂದ್ರರವರು ಈಗ ಹೊಸ ಪಕ್ಷವನ್ನು ಸೇರಿದ್ದಾರೆ!

ಸಮಾಜದಲ್ಲಿ ಈಗಿರುವ ವ್ಯವಸ್ಥೆಯನ್ನು ಬದಲಾಯಿಸಲು ಹೊಸ ಪಕ್ಷವನ್ನು ಸ್ಥಾಪಿಸಿದ್ದೇನೆ. ಅಲ್ಲದೇ,.ಸಂಪೂರ್ಣ ಬದಲಾವಣೆಯೇ ಪಕ್ಷದ ಗುರಿ! ನಾವು ಸೇವಕರನ್ನೇ ಜನನಾಯಕರೆನ್ನುತ್ತೇವೆ” ಎಂದು ಹೇಳಿರುವ ಉಪೇಂದ್ರರವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ!

ಚುನಾವಣೆಯ ಸಮಯದಲ್ಲಿಯೇ ಹೊಸ ಪಕ್ಷ!

ಸುಮಾರು ವರುಷಗಳಿಂದಲೂ ಸಹ ರಾಜಕೀಯಕ್ಕಿಳಿಯುತ್ತೇನೆ ಎಂದು ಸುದ್ದಿ ಮಾಡುತ್ತಲೇ ಇದ್ದ ಉಪೇಂದ್ರರವರು ಅಣ್ಣ ಹಜಾರೆಯನ್ನು ಸ್ಫೂರ್ಥಿಯಾಗಿರಿಸಿಕೊಂಡವರು! ಕೊನೆಗೆ ಅರವಿಂದ್ ಕೇಜ್ರಿವಾಲ್ ಹೊಸ ಪಕ್ಷ ತೆರೆಯುತ್ತೇನೆಂದಾಗ 2010 ರಿಂದಲೂ ಸಹ ಭ್ರಷ್ಟಾಚಾರಮುಕ್ತ ಭಾರತಕ್ಕೆ ಬೆಂಬಲ ನೀಡಿದ್ದ ‘ಬುದ್ಧಿವಂತ’ ಕೊನೆಗೆ ಮೋದಿಯೆಡೆಗೆ ವಾಲಿದ್ದರು!

ನೋಟು ಅಮಾನ್ಯೀಕರಣ ಹಾಗೂ ಹೊಸ ತೆರಿಗೆ ವ್ಯವಸ್ಥೆ!

ಪ್ರಧಾನಿ ಸರಕಾರ ಎಲ್ಲಿ ನೋಟು ಅಮಾನ್ಯೀಕರಣ ಮಾಡಿತೋ, ಉಪೇಂದ್ರರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೋದಿಯನ್ನು ಶ್ಲಾಘಿಸಿದ್ದಲ್ಲದೇ, ಜಿಎಸ್ ಟಿ ತೆರಿಗೆ ವಿಚಾರದಲ್ಲಿಯೂ ಸಹ ಮೋದಿಯನ್ನು ಶ್ಲಾಘಿಸಿದ್ದ ಉಪೇಂದ್ರ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೇರಲಿದ್ದಾರಾ ಎಂಬ ಅನುಮಾನವೂ ಇತ್ತು ಅಷ್ಟೇ! ಆದರೆ, ಇವತ್ತು ಗಾಂಧಿ ನಗರದಲ್ಲಿ ತಮ್ಮ ಹೊಸ ಪಕ್ಷವನ್ನು ಘೋಷಿಸಿರುವ ಉಪೇಂದ್ರ ಹೊಸ ಬದಲಾವಣೆ ತರುವಲ್ಲಿ ಪಕ್ಷ ಶ್ರಮವಹಿಸುತ್ತದೆಂದು ಹೇಳಿದ್ದಾರೆ!

ಹೊಸ ಪಕ್ಷದಲ್ಲಿರಲಿದೆ ಹೊಸ ಬದಲಾವಣೆ!

ಹೊಸ ಪಕ್ಷ ಸ್ಥಾಪಿಸುತ್ತಿರುವುದರ ಹಿಂದೆ ನನ್ನ ಸಿದ್ಧಾಂತವಿದೆ! ಸಮಾಜದ ಇವತ್ತಿನ ಸ್ಥಿತಿಯನ್ನು ಬದಲಾಯಿಸುವುದಕ್ಕಾಗಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಎಂಬುದಾಗಿ ನಾಮಕರಣ ಮಾಡಿದ್ದೇನೆ. ನಿಸ್ವಾರ್ಥ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ನಾನು ಪ್ರಯತ್ನಿಸುತ್ತೇನೆ” ಎಂದಾಗಿ ಹೇಳಿದ್ದಾರೆ!

ಪ್ರಾರಂಭದಿಂದಲೂ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದ  ಉಪೇಂದ್ರರವರು ಸಿದ್ಧಾಂತಗಳ ಪ್ರಶ್ನೆ ಬಂದಾಗ, ನ್ಯಾಯ ನೀತಿಗಳ ಪ್ರಶ್ನೆ ಬಂದಾಗ  ಎದುರಲ್ಲೇ ಪ್ರಶ್ನೆ ಮಾಡುತ್ತಾ ಬಂದಿದ್ದಾರೆ. ಆದರೆ, ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಉಪೇಂದ್ರರವರ ಬೆಂಬಲ ಹಾಗೂ ಮೋದಿಯವರ ಜೊತೆ ಕೈಗೂಡಿಸುವ ಪ್ರತಿ ಲಕ್ಷಣ ಎದ್ದು ಕಾಣುತ್ತಿತ್ತು. ಅದರಲ್ಲಿಯೂ, ಕರ್ನಾಟಕದ ಸರಕಾರದ ಹಗರಣಗಳ ವಿರುದ್ಧ ಪ್ರತಿಕ್ರಿಯಿಸಿದ್ದ ಅವರ ನಡೆ ನಿಜಕ್ಕೂ ಒಬ್ಬ ಉತ್ತಮ ನಾಯಕನಾಗುವಲ್ಲಿ ಕರೆದೊಯ್ಯಬಹುದಿತ್ತೇನೋ. ಆದರೆ, ತಮ್ಮದೇ ಬೇರೆ ಪಕ್ಷ ಸ್ಥಾಪಿಸಿರುವ ಉಪೇಂದ್ರರವರು ಪಕ್ಷದ ಪ್ರಣಾಳಿಕೆಯನ್ನು ಸದ್ಯದಲ್ಲಿಯೇ ಹೊರತರಲಿದ್ದಾರೆ!

ವಿಶೇಷತೆಗಳೇನು?!

ಸಮಾನ ಆಡಳಿತ!

ಸಮಾಜದ ಬದಲಾವಣೆ!

ಉನ್ನತ ಮಟ್ಟದ ಪ್ರಜಾಕಾರಣ!

ಭ್ರಷ್ಟಾಚಾರ ಮುಕ್ತ ಕರ್ನಾಟಕ!

ಪ್ರಜೆಗಳೇ ಜನನಾಯಕರು!

ಕಾರ್ಯಕರ್ತರೇ ಪ್ರಜಾಪ್ರತಿನಿಧಿಗಳು!

ಪ್ರಜಾಪ್ರಭುತ್ವ ಅನ್ನುವುದರಲ್ಲೇ ಪ್ರಜೆಗಳಿದ್ದಾರೆ. ಸಾಮಾನ್ಯರು ಅಸಾಮಾನ್ಯರಲ್ಲ, ಅವರಿಂದಲೇ ಇವತ್ತು ರಾಜಕೀಯ ನಡೆಯುತ್ತಿದೆ. ತಂತ್ರಜ್ಞಾನದ ಮೂಲಕ ನಾವು ಜನರನ್ನು ತಲುಪಹುದು. ಸಮಾಜಕ್ಕೆ ಬೇಕಾಗುವಂತಹ ಪ್ರತಿ ಸೌಲಭ್ಳಯವನ್ನೂ ನಾವು ನೀಡಬಹುದು. ಜನ ದುಡ್ಡಿರುವವಗೆ ಮಾತ್ರ ಮತ ಹಾಕುತ್ತಿದ್ದಾರೆ. ಆದರೆ, ನಾನದನ್ನು ಬೆಂಬಲಿಸುವುದಿಲ್ಲ. ಯಾವತ್ತೂ ರಾಜಕಾರಣ ಪಾರದರ್ಶಕವಾಗಿರಬೇಕು. ನನ್ನ ಹೊಸ ಪಕ್ಷಕ್ಕೆ ನಾನಿನ್ನೂ ಹೆಸರಿಟ್ಟಿಲ್ಲ, ಸ್ವಲ್ಪ ದಿನದಲ್ಲಿಯೇ ಪೂರ್ಣವಾಗಿ ಜನರನ್ನು ತಲುಪುತ್ತೇನೆ.” ಎಂದಿದ್ದ ಉಪೇಂದ್ರರವರು ಪ್ರಣಾಳಿಕೆಯಲ್ಲಿ ಯಾವ ರೀತಿಯ ಸಿದ್ಧಾಂತಗಳನ್ನು ತರುತ್ತಾರೋ ನೋಡಬೇಕು!

ಪ್ರಧಾನ ಮಂತ್ರಿ ಮೋದಿಯವರನ್ನು ಶ್ಲಾಘಿಸಿದ್ದ ಉಪ್ಪಿದಾದಾ “ಅವರನ್ನು ಯಾವಾಗಲೂ ಬೆಂಬಲಿಸುತ್ತಿದ್ದೇನೆ, ಹಾಗೂ ಮುಂದೆಯೂ ಅವರ ನಿರ್ಧಾರಗಳಿಗೆ ಬೆಂಬಲವಿದೆ. ವೋಟ್ ಬ್ಯಾಕ್ ರಾಜಕಾರಣವನ್ನು ವಿರೋಧಿಸಿದ ಉಪ್ಪಿ ದಾದಾ ‘ಪ್ರಜಾಕಾರಣ’ ಎಂಬ ನೂತನ ವೇದಿಕೆಯನ್ನು ಸೃಷ್ಟಿಸುತ್ತಿರುವುದಾಗಿ ಈ ಹಿಂದೆ ಹೇಳಿದ್ದರಷ್ಟೇ!

ಚುನಾವಣೆಯ ಕಾವೇರುತ್ತಿರುವ ಸಮಯದಲ್ಲಿಯೇ ಉಪೇಂದ್ರರವರು ಧಿಢೀರನೆ ಪಕ್ಷ ಘೋಷಿಸಿರುವುದರ ಹಿಂದಿನ ಉದ್ದೇಶವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

– ಪೃಥು ಅಗ್ನಿಹೋತ್ರಿ

Tags

Related Articles

Close