ಅಂಕಣ

ಸ್ವಚ್ಛ ಭಾರತಕ್ಕಾಗಿದೆ ಮೂರು ವರ್ಷ! ಶೌಚಾಲಯಗಳಾಯಿತು! ಆದರೆ, ಕಸದ ಬುಟ್ಟಿಗಳು?

ಹಲವು ವಿಷಯಗಳಲ್ಲಿ ನಮ್ಮ ಭಾರತ, ಇಡಿ ಪ್ರಪಂಚವೇ ನಿಬ್ಬೆರಗಾಗುವ ಜಗತ್ತೇ ಹುಬ್ಬೇರಿಸುವಂತಹ ಕೆಲಸಗಳನ್ನು ಮಾಡಿದೆ. ಪ್ರತಿಯೊಂದು ರಂಗದಲ್ಲಿಯೂ
ಸಾಧನೆಯ ಗರಿ ಉತ್ತುಂಗಕ್ಕೇರಿಸಿದ ಶ್ರೇಯಸ್ಸು ನಮ್ಮ ಭಾರತಕ್ಕೆ ಸಲ್ಲುತ್ತದೆ. ದೇಶ ಸಬಲೀಕರಣ ಎನ್ನುವ ವಿಷಯದಲ್ಲಿ ಸುಮಾರು ಸಾಧನೆಯ ಹಾದಿ ಕ್ರಮಿಸಿ ಇಡಿ ಜಗತ್ತಿನ ಹಲವು ಸಂಪನ್ಮೂಲಗಳನ್ನು ತನ್ನಲ್ಲಿರಿಸಿಕೊಂಡಿದೆ. ಸುಮಾರು ದಶಕಗಳ ಇತಿಹಾಸವನ್ನು ಹೊಂದಿರುವ ಭಾರತ ಹಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ.

ಇಂತಹ ಸಮೃದ್ಧ ಭಾರತದಲ್ಲಿ ಮೋದಿ ಎಂಬ ಅಭಿವೃದ್ಧಿಯ ಅಲೆ ಇದೀಗ ಹಲವು ಹೊಚ್ಚ ಹೊಸ ಯೋಜನೆಗಳಿಗೆ ನಾಂದಿ ಹಾಡಿ ಭಾರತವನ್ನು ಇನ್ನೂ
ಮುಂದುವರಿಯುವ ರಾಷ್ಟ್ರವಾಗಿ ಮಾಡುವ ಕನಸನ್ನು ನನಸಾಗಿಸುವ ನೇರ ದೃಷ್ಟಿಯಿದೆ. ಪ್ರಧಾನಿ ನರೇಂದ್ರ ಮೋದಿ ಕಂಡ ಬಹುದೊಡ್ಡ ಕನಸು ಮಹಾತ್ಮ
ಗಾಂದೀಜಿಯ ಕನಸು “ಸ್ವಚ್ಛ ಭಾರತ” .

ಮೂರು ವರ್ಷಗಳ ಹಿಂದೆ ಗಾಂಧಿ ಜಯಂತಿಯ ಅಂಗವಾಗಿ ಪ್ರಧಾನಿ ಮೋದಿ ಭಾರತದ ಅತೀ ದೊಡ್ಡ ಸ್ಚಚ್ಚತಾ ಕಾರ್ಯಕ್ರಮವನ್ನು ಆರಂಭಿಸಿದರು. ತ್ಯಾಜ್ಯವನ್ನು ಪ್ರಕ್ರಿಯೆಗೊಳಿಸಲು ಮತ್ತು ಮಿಶ್ರ ಗೊಬ್ಬರವನ್ನು ತಯಾರಿಸಲು ಅಥವಾ ವಿದ್ಯುತ್ ಉತ್ಪಾದಿಸಲು ಶೌಚಾಲಯಗಳನ್ನು ನಿರ್ಮಿಸಲು ನಗರಗಳು ಮತ್ತು ಹಳ್ಳಿಗಳನ್ನು ಸ್ವಚ್ಛಗೊಳಿಸಲು ಮತ್ತು ತೆರೆದ ಮಲವಿಸರ್ಜನೆಯನ್ನು ತೊಡೆದು ಹಾಕಲು ಕಾರ್ಯಕ್ರಮವನ್ನು ಸ್ವಚ್ಛ ಭಾರತ ಕಾರ್ಯಕ್ರಮನ್ನು ಆಯೋಜಿಸಲಾಗಿದೆ.

ಸ್ವಚ್ಛ ಭಾರತ ಮಿಷನ್ ತನ್ನ ಮೂರನೇ ವಾರ್ಷಿಕ ದಿನಾಚರಣೆಯನ್ನು ಅಕ್ಟೋಬರ್ 2 ರಂದು ಆಚರಿಸಲಾಯಿತು. ಎಕನಾಮಿಕ್ಸ್ ಟೈಮ್ಸ್ ಪ್ರಕಾರ ಭಾರತವು ಎಷ್ಟರ ಮಟ್ಟಿಗೆ ಸ್ವಚ್ಛವಾಗಿದೆ ಎಂಬುವ ಮಾಹಿತಿಯನ್ನು ಅಂಕಿ ಅಂಶಗಳ ಮೂಲಕ ತಿಳಿಸುತ್ತದೆ. ಸ್ವಚ್ಛ ಭಾರತದ ಅಡಿಯಲ್ಲಿ ಪ್ರತೀಯೊಂದು ಮನೆ ಮನೆಗಳಿಗೆ ಶೌಚಾಲಯ ನಿರ್ಮಾಣವನ್ನು ಮಾಡಲಾಗಿದೆ. ಆರಂಭದಲ್ಲಿ ಮೋದಿ ಸರಕಾರವು 65.82 ಲಕ್ಷ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಿಸಲು ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ಐದು ಲಕ್ಷ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯ ಸ್ಥಾನಗಳನ್ನು ನಿರ್ಮಿಸಿದೆ. 38.51 ಲಕ್ಷ ವೈಯಕ್ತಿಕ ಹಾಗೂ 2.2 ಲಕ್ಷ ಸಮುದಾಯದ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅನೇಕ ರಾಜ್ಯಗಳು ತಾವು ಶೌಚಾಲಯಗಳನ್ನು ನಿರ್ಮಿಸಲು ತಾವು ಹೊಂದಿದ್ದ ಗುರಿಗಳನ್ನು ಮೀರಿಸಿದೆ. ಹಾಗೆ ಹೋಲಿಸಿದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2004 ಮತ್ತು 2014 ನಡುವೆ 10 ವರ್ಷಗಳಲ್ಲಿ ಮೂರು ಲಕ್ಷ ಶೌಚಾಲಯಗಳನ್ನು ನಿರ್ಮಿಸಿದೆ. ಕಾಂಗ್ರೆಸ್ ಸರಕಾರ ಸುಳ್ಳು ಪೊಳ್ಳು ವಿಶ್ವಾಸವನ್ನು ಕೊಡುತ್ತದೆ ಹೊರತು ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಯಾವತ್ತೂ
ಕೈಜೋಡಿಸಿದವರಲ್ಲ.

ಇತರ ಪಕ್ಷಗಳ ಆಳ್ವಿಕೆಗಿಂತ ಬಿಜೆಪಿ ಸರಕಾರ ಅಧಿಕಾರವಧಿಯಲ್ಲಿ ಅತೀ ಹೆಚ್ಚು ಉತ್ಸಾಹವನ್ನು ಹೊಂದಿದೆ. ಮೋದಿ ಸರಕಾರ ಶೌಚಾಲಯಕ್ಕೆ 4,000 ರೂ ನೆರವು ನೀಡುವ ಮೂಲಕ ಈ ಯೋಜನೆಯನ್ನುಪ್ರಾರಂಭಿಸಿತು. 25%ನಷ್ಟು ಕೇಂದ್ರದ ಕೊಡುಗೆಯನ್ನು ನೀಡಿದೆ. ಉತ್ತರ ಪ್ರದೇಶವು 8,000 ರೂ. ಕೇಂದ್ರದಲ್ಲಿ
ಹಂಚಿಕೊಂಡಿದೆ ಮತ್ತು ಗರಿಷ್ಠಪಾಲು ಪುದುಚ್ಛೇರಿ 22,000 ಹಂಚಿಕೊಂಡಿದೆ. ಹೀಗಾಗಿ ಶೌಚಾಲಯ ನಿರ್ಮಾಣ ಪ್ರಕ್ರಿಯೆಯೂ ಎಷ್ಟು ಪರಿಣಾಮಕಾರಿಯಾಗಿದೆ
ಎಂಬುವುದನ್ನು ನಾವು ಇಲ್ಲಿ ಗಮನಿಸಬಹುದು. ಶೌಚಾಲಯ ನಿರ್ಮಾಣ ಮಾಡುವಂತೆ ಅನೇಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಡಿದೆ. ಇತರ ಘನ ತ್ಯಾಜ್ಯ ನಿರ್ವಹಣೆಯಾಗಿದ್ದು, ಭಾರತದ ಎಲ್ಲಾ 81,000 ನಗರ ವಾರ್ಡ್‍ಗಳಲ್ಲಿ ಬಾಗಿಲು ಬಾಗಿಲಿನ ಕಸದ ಸಂಗ್ರಹವನ್ನು ಸ್ವಚ್ಛ ಮಾಡುವ ಕಾರ್ಯವನ್ನು ಕೈಗೊಂಡಿದೆ.

ಇಲ್ಲಿಯವರೆ 41,000 ವಾರ್ಡ್‍ಗಳನ್ನು ಈಗಾಗಲೇ ಸ್ವಚ್ಛತಾ ಕಾರ್ಯವನ್ನು ಸಂಪೂರ್ಣ ಕೊನೆಗೊಳಿಸಿದೆ. ಅಂದ ಹಾಗೆ ವ್ಯವಸಾಯದ ತ್ಯಾಜ್ಯ ಸಂಸ್ಕರಣಾ ಈ
ಕಾರ್ಯಕ್ರಮದ ದೊಡ್ಡ ಸವಾಲಾಗಿದೆ. ಸ್ಚಚ್ಛ ಭಾರತ್ ಮಿಷನ್ ಆರಂಭಿಸಿದಾಗ ತ್ಯಾಜ್ಯ ಸಂಸ್ಕರಣೆಯು 16% ಮಟ್ಟವನ್ನು ತಲುಪಿತ್ತು. ಮೂರು ವರ್ಷಗಳ ಮೇಲೆ ಅದು 22% ಸ್ಚಚ್ಛತಾ ಕಾರ್ಯವನ್ನು ತಲುಪಿದೆ.

ಪುರ ಸಭೆಯ ತ್ಯಾಜ್ಯದಿಂದ ಉಂಟಾದ ಒಟ್ಟು ಉತ್ಪಾದನೆಯು 54 ಲಕ್ಷ ಟನ್ ಆಗಿದ್ದು, ಆದರೆ ಇಲ್ಲಿಯವರೆಗೆ ಕಾಂಪೋಸ್ಟ್ ಉತ್ಪಾದನೆಯ ಸಾಮಥ್ರ್ಯ ಕೇವಲ 15 ಲಕ್ಷ.. ಪ್ರಸ್ತುತ ಕಾರ್ಯಾಚರಣೆಯಲ್ಲಿ 145 ಮಿಶ್ರ ಗೊಬ್ಬರ ಸಸ್ಯಗಳು ಮತ್ತು 200 ನಿರ್ಮಾಣ ಹಂತದಲ್ಲಿದೆ.

ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಅಂದಾಜಿನ ಪ್ರಕಾರ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯ ಸಾಮಥ್ರ್ಯವು ಸುಮಾರು 600 ಮೆಗಾ ವ್ಯಾಟ್ ಆಗಿದೆ. ಆದರೆ ಇದರ ಪೈಕೆ 92 ಮೆಗಾ ವ್ಯಾಟ್ ಮಾತ್ರ ಉತ್ಪಾದನೆಯಾಗುತ್ತಿದೆ. ಉಳಿದ ಸಾಮಥ್ರ್ಯಕ್ಕಾಗಿ ಸುಮಾರು 150 ವೇಸ್ಟೋ- ಎನರ್ಜಿ ಯೋಜನೆಗಳು ನಿರ್ಮಾಣ ಹಂತದಲ್ಲಿದೆ. ಘನ ತ್ಯಾಜ್ಯ ನಿರ್ವಹಣೆಯನ್ನು ಸಾಧಿಸಲು ಸರಕಾರವು ಕ್ರಮವನ್ನು ಕೈಗೊಂಡಿದೆ. ಕಾರ್ಯಸಾಧ್ಯತೆ ಗ್ಯಾಪ್ ನಿಧಿಯ ಮೂಲಕ ಕೇಂದ್ರ ನೆರವು 20% ರಿಂದ 35% ಗೆ ಹೆಚ್ಚಾಗಿದೆ. ರಾಸಾಯನಿಕಗಳು ಮತ್ತು ರಸಗೊಬ್ಬರ ಇಲಾಖೆಯು ಪ್ರತೀ ಮಾರುಕಟ್ಟಗೆ 1,500 ರೂ ಟನ್‍ಗಳಷ್ಟು ಮಿಶ್ರಗೊಬ್ಬರವನ್ನು ಮಾರಾಟ ಮಾಡಿತ್ತು ಮತ್ತು ಈಗ ಉತ್ಪಾದನಾ ಸ್ಥಾವರದ ಸಮೀಪದಲ್ಲಿ ಮಿಶ್ರಗೊಬ್ಬರ ಚಿಲ್ಲರೆ ಮಾರಾಟವನ್ನು ಅನುಮೋದಿಸಲಾಗಿದೆ.

ಈ ಯೋಜನೆಯು ನಗರ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದು ಎಲ್ಲರಿಗೂ ಸ್ಚಚ್ಛತೆಯ ಮಹತ್ವ ಹೇಳಿಕೊಡಲಿದೆ. ನರೇಂದ್ರ ಮೋದಿಯ ಕಲ್ಪನೆಯಂತೆ ಸ್ಚಚ್ಛ ಬಾರತ ಕನಸಿಗೆ ಪೂರಕವಾಗಿ ದೇಶದಲ್ಲಿ ಸ್ವಚ್ಛತೆಯ ಅಡಿಪಾಯ ಹಾಕಲಿದೆ. ಈ ಯೋಜನೆಯೂ ತನ್ನ ಸ್ಪಷ್ಟವಾದ ಗುರಿ ಮತ್ತು ಉದ್ಧೇಶವನ್ನು ಹೊಂದಿದೆ. ದೇಶದ ಕೊಳೆಯನ್ನು ತೊಳೆಯುವ ಕೆಲಸದಲ್ಲಿ ಪ್ರಧಾನಿ ನಿರತರಾಗಿದ್ದಾರೆ.

2019ರ ಹೊತ್ತಿಗೆ ಸ್ವಚ್ಛ ಭಾರತವನ್ನು ಗುರಿ ಹೊಂದಿದೆ.ನರೇಮದ್ರ ಮೋದಿ ಒಬ್ಬ ದೇಶದ ಸ್ವಚ್ಛತೆ ಬಗ್ಗೆ ಅರಿವಿರಿರುವ ವ್ಯಕ್ತಿಯೆಂಬುವುದು ಈ ಯೋಜನೆಯ ಮೂಲಕ ಪ್ರಸ್ತುತ ಪಡಿಸಿದ್ದಾರೆ. ದೇಶದ ಸ್ಚಚ್ಛತೆಯಿಂದ ದೇಶದ ಅಭಿವೃದ್ಧಿಯಾಗಲಿದೆ ಮತ್ತು ಜನರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಯೋಜನೆ ಸಹಕಾರಿಯಾಗಲಿದೆ ಎಂಬ ಬಲವಾದ ನಂಬಿಕೆಯೊಂದಿಗೆ ಯೋಜನೆ ಚಾಲನೆ ಮಾಡಿದ್ದಾರೆ. ದೇಶದ ಸ್ವಚ್ಛತೆಯ ಮಹತ್ವದ ಘಟ್ಟವೊಂದು ಹೊರಬರಲಿದೆ. ಹಲವು ಉತ್ತಮ ಅಂಶಗಳನ್ನು ಒಳಗೊಂಡ ಈ ಸ್ಚಚ್ಛ ಭಾರತ ಅಭಿಯಾನವು ನಮ್ಮ ನಮ್ಮ ಮನೆ ಮನಗಳಿಂದ ಜಾರಿಯಾಗಲಿ ಎಂಬುವುದು ನಮ್ಮ ಆಶಯ.

-ಶೃಜನ್ಯಾ

Tags

Related Articles

Close