ಅಂಕಣಪ್ರಚಲಿತ

ಸ್ವತಂತ್ರ ಲಿಂಗಾಯತ್ ಧರ್ಮದ ಮಾನ್ಯತೆಗಾಗಿ ಲಿಂಗಾಯತರು ಬೃಹತ್ ಸಮಾವೇಶ ನಡೆಸಿದರೆ ಅದರಿಂದ ಮುಸಲ್ಮಾನರಿಗೇಕಷ್ಟು ಖುಷಿ?

ಬೀದರ್ ಆಯ್ತು, ಬೆಳಗಾವಿಯಾಯ್ತು ಮುಂದೆ ಬರೋ 9 ನೇ ತಾರೀಖಿನಂದು ಕಲಬುರಗಿಯಲ್ಲಿ ಸ್ವತಂತ್ರ ಲಿಂಗಾಯತ್ ಧರ್ಮದ ಸಮಾವೇಶ ನಡೆಯಲಿದೆ. ಲಿಂಗಾಯತರನ್ನು ವೋಟಬ್ಯಾಂಕ್ ಮಾಡಿಕೊಳ್ಳಲು ಧರ್ಮ ಧರ್ಮಗಳ ನಡುವೆ ಕಿಚ್ಚು ಹೊತ್ತಿಸಿರುವ ರಾಜ್ಯ ಸರ್ಕಾರ ಆ ಬೆಂಕಿಯಲ್ಲೀಗ ಚಳಿ ಕಾಯಿಸಿಕೊಳ್ಳಲು
ಮುಂದಾಗಿದೆ.

ಲಿಂಗಾಯತ್ ಪ್ರತ್ಯೇಕ ಧರ್ಮದ ಕೂಗು ಎದ್ದಾಗಿನಂದ ಗಮನಿಸುತ್ತಿದ್ದೇನೆ, ಟಿವಿ ಡಿಬೇಟ್’ಗಳಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಪ್ಯಾನಲಿಸ್ಟ್’ಗಳು ಬಂದು ಲಿಂಗಾಯತ್ ಪ್ರತ್ಯೇಕ ಧರ್ಮದ ಮಾನ್ಯತೆಗೆ ನಿಮಗೆ ಬೆಂಬಲ ಕೊಡ್ತೇವೆ ಅಂತ ಹೇಳೋದನ್ನ ನೋಡಿ ‘ದಾಲ್ ಮೇ ಕುಚ್ ಕಾಲಾ ಹೈ’ ಅಂತ ಅನಿಸಿದ್ದಂತೂ ನಿಜ.

ಲಿಂಗಾಯತ್ ಪ್ರತ್ಯೇಕ ಧರ್ಮವಾಗೋದೂ ಬಿಡೋದು ಅವರಿಗೆ ಬಿಟ್ಟ ವಿಚಾರ, ಮುಸಲ್ಮಾನರು ಕ್ರಿಶ್ಚಿಯನ್ನರ್ಯಾಕೆ ಇದರಲ್ಲಿ ಇಷ್ಟು ಆಸಕ್ತಿ ವಹಿಸಿದ್ದಾರೆ ಅಂತ
ತಿಳ್ಕೊಳ್ಳೋಕೆ ಆಗದಿರೋ ವಿಚಾರವನ್ನೇನಲ್ಲ ಬಿಡಿ.

ಕ್ರಿಶ್ಚಿಯನ್ ಮಿಷನರಿಗಳು ಹಿಂದೂಗಳನ್ನ ಮತಾಂತರಿಸೋಕೆ ನಾನಾ ರೀತಿಯ ಟ್ರಿಕ್’ಗಳನ್ನ ಉಪಯೋಗಿಸುತ್ತ ಹೊರ ದೇಶದಿಂದ ಬರೋ ಅರಬೋಗಟ್ಟಲೇ ಡಾಲರ್ ಇಲ್ಲಿ ಖರ್ಚು ಮಾಡುತ್ತಿದ್ದಾರೆ.

ಮುಸ್ಲಿಂ ಭಯೋತ್ಪಾದಕ ಸಂಘಟನೆಗಳಂತೂ ಲವ್ ಜಿಹಾದ್ ಆದಿಯಾಗಿ ಹಿಂದೂಗಳನ್ನ ಮತಾಂತರಿಸೋಕೆ ನಾನಾ ರೀತಿಯಲ್ಲಿ ಕೆಲಸ ಮಾಡುತ್ತಿವೆ.

ಇವರ ಕೆಲಸ ಹಿಂದೂಗಳಲ್ಲಿನ ಒಗ್ಗಟ್ಟನ್ನು ಒಡೆದು ನಂತರ ಅವರನ್ನ ಮತಾಂತರ ಮಾಡೋದಾಗಿದೆ.

ಇಂಥದ್ರಲ್ಲಿ ಲಿಂಗಾಯತರೇ ನಾವು ಹಿಂದೂಗಳಲ್ಲ ನಮ್ಮದು ಪ್ರತ್ಯೇಕ ಧರ್ಮ ಅಂತ ನಿಂತುಬಿಟ್ಟರೆ ಮಿಷನರಿಗಳ ಕೆಲಸ ಅರ್ಧಕ್ಕರ್ಧ ಮುಗಿದ ಹಾಗೆಯೇ ಅಲ್ವೆ?

ಇದಕ್ಕೇ ಮೊನ್ನೆ ಬೆಳಗಾವಿಯಲ್ಲಿ ನಡೆದ ಪ್ರತ್ಯೇಕ ಲಿಂಗಾಯತ್ ಧರ್ಮದ ಸಮಾವೇಶದಲ್ಲಿ ಮುಸ್ಲಿಂ ಸಂಘಟನೆಗಳು ಸಮಾವೇಶ ನಡೆಯುತ್ತಿದ್ದ ಸ್ಥಳದ ಹತ್ತಿರ ಸ್ಟಾಲ್ ಹಾಕಿಕೊಂಡು ನೀರು, ತಂಪು ಪಾನೀಯ ಕುಡಿಸಿದ್ದು ಹಾಗು ಸಮಾವೇಶಕ್ಕೆ ಬಂದ ಜನರನ್ನ ತಬ್ಬಿಕೊಂಡು ನಾವು ನಿಮ್ಮ ಜೊತೆಗಿದ್ದೇವೆ ಅಂತ ಪೋಸು ಕೊಟ್ಟಿದ್ದು.

ಲಿಂಗಾಯತರನ್ನ ಒಡೆಯೋಕೆ ಅಥವ ಮತಾಂತರ ಮಾಡೋಕೆ ಮಿಷನರಿಗಳು, ಜಿಹಾದಿಗಳು ಈಗಿನಿಂದ ಪ್ರಯತ್ನಿಸುತ್ತಿಲ್ಲ, ಭಾರತದಲ್ಲಿ ಇದು ನೂರು ವರ್ಷಗಳಿಂದ ನಡೆದುಕೊಂಡೇ ಬಂದಿದೆ.

ಅದಕ್ಕೆ ಒಂದು ಉದಾಹರಣೆ 1924 ರಲ್ಲಿ ಶುರುವಾಗಿದ್ದ ದೀನದಾರ್ ಅಂಜುಮನ್ ಸಂಘಟನೆಯ ಮತಾಂತರ.

ದೀನದಾರ್ ಅಂಜುಮನ್ ಉಗ್ರಗಾಮಿ ಸಂಘಟನೆಯ ಬಗ್ಗೆ ಎಷ್ಟು ಜನರಿಗೆ ಗೊತ್ತು??

ಅವರ ಸಂಘದ ಪೂರ್ತಿ ಹೆಸರು “ದೀನದಾರ್ ಚೆನ್ನಬಸವೇಶ್ವರ ಅಂಜುಮಾನ್ ಸಂಘ” ಎಂದು.

1924 ರಲ್ಲಿ ಸಿದ್ಧಿಖ್ ಹುಸೇನ್ ಎಂಬುವವ ಈ ಅಂಜುಮಾನ್ ಸಂಘವನ್ನು ಮೊದಲು ಸ್ಥಾಪಿಸಿದ ಮೂಲಪುರುಷ.

ತಾನು ಶಿವಭಕ್ತರ ದೈವವಾದ ಚೆನ್ನಬಸವೇಶ್ವರನ ಅವತಾರವಾಗಿ ಜನ್ಮಿಸಿದ್ದೇನೆ ಎಂದು ಹೇಳಿಕೊಂಡ ಈತ, ಮುಸ್ಲಿಂರ ‘ಅಲ್ಲಾ’ ಮತ್ತು ಹಿಂದೂಗಳ ‘ಓಂ’
ಎರಡೂ ಒಂದೇ ಎಂದು ಘೋಷಿಸಿ, ತನ್ನ ಸಂಸ್ಥೆ ಹಿಂದೂ ಮತ್ತು ಇಸ್ಲಾಂ ಮತಗಳ ಸಂಯೋಜನೆ ಎಂದೂ, ತನ್ನ ಸಂಘದಿಂದಲೇ ಹಿಂದೂ ಮುಸ್ಲಿಂರ ಘರ್ಷಣೆಗೆ ಸೂಕ್ತ ಉತ್ತರ ಎಂದು ಹೇಳಿಕೊಳ್ಳುತ್ತಾ “ಗುಲ್ಬರ್ಗಾ”ದಿಂದ ತನ್ನ ಯೋಜನೆಯನ್ನು ಆರಂಭಿಸಿ, ಈ ತತ್ವದ ಮುಖವಾಡದಲ್ಲಿಯೇ ಇಸ್ಲಾಂ ಮತವನ್ನು ಪ್ರಚಾರಗೊಳಿಸುತ್ತ ಬಂದ.

ಈ ಸಂಘದ ಬಗ್ಗೆ ಸಂಶೋಧನೆ ಕೈಗೊಂಡಿರುವ ಯೋಗಿಂದರ್ ಸಿಕಂದರ್ ಅವರು ಈತನ ಬಗ್ಗೆ ಹೀಗೆ ಬರೆಯುತ್ತಾರೆ!!

“ಸಿದ್ದಿಕ್ ಹುಸೇನ್ ತನ್ನ ಮಿಷನರಿ(ಮತಾಂತರ ಪ್ರಕ್ರಿಯೆ)ಯನ್ನ ಲಿಂಗಾಯತ ಸಮುದಾಯವನ್ನ ಟಾರ್ಗೆಟ್ ಮಾಡುವ ಮೂಲಕ ಶುರು ಮಾಡ್ತಾನೆ.

ಒಮ್ಮೆ ‘ಕೊಡೇಕಲ್ ಬಸಪ್ಪ’ನವರ ಸಮಾಧಿಗೆ ಈತ ಭೇಟಿ ಕೊಟ್ಟಾಗ ಅಲ್ಲಿನ ಸ್ಥಳೀಯ ಲಿಂಗಾಯತರು ಸೂಫಿಯೊಬ್ಬರು ಬಂದಿದ್ದಾರಂತ ಬಹಳ ಮರ್ಯಾದೆಯಿಂದಲೇ ಈತನನ್ನ ಸತ್ಕರಿಸಿದರಂತೆ.

ಲಿಂಗಾಯತ್ ಸುಮದಾಯದ ಜನರ ಸತ್ಕಾರವನ್ನ ಕಂಡ ಸಿದ್ದಿಕಿ ತಾನು ‘ದೀನದಾರ್ ಚನ್ನಬಸವೇಶ್ವರ’ ಎಂದು ಹೇಳಿಕೊಂಡು ಅಲ್ಲಿನ ಜನರನ್ನ ನಂಬಿಸಿಬಿಟ್ಟ.

ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದರೂ ಸಹ ತಾನು ಹಿಂದೂ ಮುಸಲ್ಮಾನರನ್ನು ಒಗ್ಗೂಡಿಸೋಕೆ ಬಂದವನು, ಹಿಂದೂ ಮುಸ್ಲಿಂ ಇಬ್ಬರೂ ಒಂದೇ ಅನ್ನೋ ಬಿಟ್ಟಿ
ಪ್ರವಚನವನ್ನೂ ಕೊಟ್ಟು ಅಲ್ಲಿನ ಜನರನ್ನ ಮಂತ್ರ ಮುಗ್ಧ ಗೊಳಿಸಿದ.

ನಂತರ ಲಿಂಗಾಯತ ಸಮುದಾಯದ ಅನೇಕ ಮಠ ಮಂದಿರಗಳಿಗೆ ಭೇಟಿ ನೀಡಿದ.

ಹೀಗೆ ಹಿಂದು ಮತ್ತು ಮುಸ್ಲಿಮರ ಮಧ್ಯೆ ಶಾಂತಿ ನೆಲೆಯೂರುವಂತೆ ಮಾಡಲು ದೇವರು ನನ್ನನ್ನು ನೇಮಿಸಿ ಕಳುಹಿಸಿರುವುದಾಗಿ ಹೇಳುತ್ತ ಇನ್ನೂ ಮುಂದೆ ಹೋಗಿ
ತಾನೇ ‘ಕಲ್ಕಿ’ಯ ಅವತಾರವೆಂದೂ ಹೇಳಿಕೊಳ್ಳುತ್ತಾನೆ”

ಆತನ ಜೀವನ ಮತ್ತು ತತ್ವಗಳ ಮೇಲೂ ಸಂಶೋಧಿಸಿರುವ ಯೋಗಿಂದರ್ ಸಿಕಂದರ್ ಹೇಳುವಂತೆ, ಹುಸೇನ್ ಹೀಗೆ ಹೇಳುತ್ತಿದ್ದನಂತೆ:

“ನಾನು ಕಲ್ಕಿಯ ಅವತಾರವಾಗಿ ಜನ್ಮ ತಾಳಲಿದ್ದೇನೆಂದು ಎಂದು ಭಗವಂತನೇ ನನಗೆ ಹೇಳಿದ್ದ, ಕಲಿಯುಗ ಸಮಾಪ್ತಿಯಾಗೋ ಸಮಯ
ಬಂದಿದೆ, ಮುಂದೆ ಮತ್ತೆ ಸತ್ಯಯುಗ ಶುರುವಾಗಲಿದೆ. ಓ ಹಿಂದುಗಳೇ ನಿಮ್ಮ ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಆ ಗುರು ನಾನೇ”

ಆದರೆ ಮುಖ್ಯವಾಗಿ ಆತ ಲಿಂಗಾಯತ ಜನಾಂಗವನ್ನು ಓಲೈಸಲು ಪ್ರಯತ್ನಿಸಿದ. ಏಕೆಂದರೆ ಲಿಂಗಾಯತ ಜನಾಂಗವು ಹಿಂದೂ ಧರ್ಮದ ವಿರುದ್ಧ ಎದ್ದು ನಿಂತವರೆಂದು ನಂಬಿದ್ದ ಆತ ಅವರನ್ನು ಸುಲಭವಾಗಿ ಇಸ್ಲಾಂ ಮತಕ್ಕೆ ಮತಾಂತರಗೊಳಿಸಬಹುದು ಎಂದು ಯೊಚಿಸಿದ್ದ.

ಅದಕ್ಕಾಗಿ ಆತ ಹಲವಾರು ತಂತ್ರಗಳನ್ನು ಉಪಯೋಗಿಸುತ್ತಾನೆ. ಅವರ ಆಯುಧವಾದ ತ್ರಿಶೂಲವನ್ನೂ ತನ್ನ ಸಂಘದ ಸದಸ್ಯರು ಉಪಯೋಗಿಸುವಂತೆ
ರೂಢಿಸುತ್ತಾನೆ. ಜೊತೆಗೆ ಲಿಂಗಾಯತರು ಹೆಚ್ಚು ಸಂಖ್ಯೆಯಲ್ಲಿದ್ದ ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಮುಸ್ಲಿಮ್ ಸಂತರನ್ನು ಜನ ಸ್ವೀಕರಿಸಿದ್ದರಿಂದ ತನ್ನ ಧ್ಯೇಯ
ಸುಲಭವಾಗಿ ಕೂಡಿ ಬರುತ್ತೆ ಅಂದು ನಂಬಿದ್ದ.

1924 ರಂದ 1948 ರವರೆಗೆ ಹಲವಾರು ಲಿಂಗಾಯತರನ್ನ ಈತ ಇಸ್ಲಾಂ ಗೆ ಮತಾಂತರ ಮಾಡಿದ್ದ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕದ್ದು 1947 ರಲ್ಲಿ ಆದರೆ ಹೈದ್ರಾಬಾದ್ ನಿಜಾಮ ಮಾತ್ರ ತನ್ನ ಹೈದ್ರಾಬಾದ್ ಸಂಸ್ಥಾನವನ್ನ ಭಾರತದ ಜೊತೆ ವಿಲೀನ ಮಾಡಲು ಒಪ್ಪಿರಲಿಲ್ಲ.

ಹೈದ್ರಾಬಾದ್ ಸಂಸ್ಥಾನದಲ್ಲೇ ತನ್ನ ಮತಾಂತರ ಪ್ರಕ್ರಿಯೆ ನಡೆಸಿದ ದೀನದಾರ್ ಚನ್ನಬಸವೇಶ್ವರ ಅಂಜುಮಾನ್ ಸಂಸ್ಥೆ 1948 ರಲ್ಲಿ ಅಂದರೆ ಭಾರತ ಸರ್ಕಾರ
ಹೈದ್ರಾಬಾದ್ ಸಂಸ್ಥಾನದ ಮೇಲೆ ದಾಳಿಗೈದು ಭಾರತಕ್ಕೆ ವಿಲೀನಗೊಳಿಸಿದ ನಂತರ ದೀನದಾರ್ ಅಂಜುಮನ್ ಅನುಯಾಯಿಗಳು ಪಾಕಿಸ್ತಾನಕ್ಕೆ ಓಡಿ ಹೋದರು.

ಹುಸೇನನ ಮಕ್ಕಳಲ್ಲಿ ಐದು ಜನ ಪಾಕಿಸ್ತಾನಕ್ಕೆ ವಲಸೆ ಹೋದರು. ಅಲ್ಲಿಗೆ ಹೋದ ಅನುಯಾಯಿಗಳು ಉಗ್ರರ ಸಂಬಂಧ ಬೆಳೆಸಿ ತಮ್ಮ ಭಾರತದಲ್ಲಿರುವ ದೀನದಾರ್ ನೆಲೆಗಳಲ್ಲಿಯೂ ‘ಹಿಂದೂ ದ್ವೇಷಿ’ ಉಗ್ರರನ್ನು ಹುಟ್ಟು ಹಾಕಿದರು.

ಕರ್ನಾಟಕ, ಗೋವಾ ಮತ್ತು ಆ೦ಧ್ರದಲ್ಲಿ ಕ್ರಿ.ಶ.2001 ರ ಮೇ ಮತ್ತು ಜುಲೈನ ಅಂತರದಲ್ಲಿ ಕರ್ನಾಟಕ, ಗೋವಾ, ಆಂಧ್ರಪ್ರದೇಶದ ಹನ್ನೆರಡು ಕಡೆ ಚರ್ಚ್ ಮತ್ತು ದೇವಾಲಯಗಳಲ್ಲಿ ಬಾಂಬಿಟ್ಟು ಸಿಡಿಸಿದ ಇವರ ಸಂಘದ 23 ಜನರನ್ನು ಬಂಧಿಸಲಾಗಿತ್ತು ಕೂಡ.

2007 ರ ಅಕ್ಟೋಬರ್ ತಿಂಗಳಿನಲ್ಲಿ ಸಂಘಟನೆಯನ್ನ Unlawful Prevention Act ಅಡಿಯಲ್ಲಿ ಭಾರತ ಸರ್ಕಾರ ಬ್ಯಾನ್ ಮಾಡಿತು. ಕೊನೆಗೆ 2008ರಲ್ಲಿ ಬಾಂಬ್ ಸ್ಫೋಟದ ರೂವಾರಿಗಳಾದ ಈ ಸಂಘಟನೆಯ ಹನ್ನೊಂದು ಜನಕ್ಕೆ ವಿಶೇಷ ನ್ಯಾಯಾಧೀಶರಾದ ಶಿವನಗೌಡರ್ ಅವರಿಂದ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈ ಸಂಘಟನೆಯ ವಿರುದ್ಧ ಬ್ರಿಟೀಷರೂ ಗರಂ ಆಗಿದ್ದರು!!

1934 ರಲ್ಲಿ ಸಿದ್ದಿಕಿ ಕ್ರಿಸ್ಮಸ್ ವಿರೋಧಿಸಿ ಆಂದೋಲನವೊಂದನ್ನ ಮಾಡಿದ್ದಾಗ ಬ್ರಿಟೀಷರು ಸಿದ್ದಿಕಿಯನ್ನ ಕೋಮು ಪ್ರಚೋದಕ ಭಾಷಣ ಮಾಡುತ್ತಾನೆ, ಸಮಾಜದ  ಸ್ವಾಸ್ಥ್ಯ ಹಾಳುಮಾಡುತ್ತಿದ್ದಾನೆಂದು ಈತನ ಸಮೇತ 18 ಸದಸ್ಯರನ್ನ ಶಿಕ್ಷೆಗೊಳಪಡಿಸಿದ್ದರು. ಇದು ದೀನದಾರ್ ಅಂಜುಮನ್ ಕಥೆಯಾದರೆ ಇದೇ ರೀತಿಯ ಕಥೆಗಳು ದಿನಬೆಳಗಾದರೆ ಕಾಣ ಸಿಗುತ್ತಿವೆ.

ಆದರೆ ಅದು ದೀನದಾರ್ ಅಂಜುಮನ್ ರೂಪದಲ್ಲಲ್ಲ ಬದಲಾಗಿ ಸೆಕ್ಯೂಲರ್, ಲಿಬರಲ್ ಗಳ ರೂಪದಲ್ಲಿ!

ಮೊನ್ನೆ ಟಿವಿ ನೋಡ್ತಾ ಕೂತಾಗ ಮುಸ್ಲಿಂ ಪ್ಯಾನಲಿಸ್ಟ್ ಒಬ್ಬ ಹೇಳ್ತಾನೆ “ಪ್ರವಾದಿ ಮೊಹಮ್ಮದರು ಬೋಧಿಸಿದ ತತ್ವಗಳೇ ಬಸವಣ್ಣನವರ ಬೋಧಿಸಿದ್ದು, ಲಿಂಗಾಯತ ಧರ್ಮ ಇಸ್ಲಾಂ ಗೆ ಬಹಳ ಹತ್ತಿರವಾದದ್ದು” ಅಂತ!

ಆ ಕಡೆ ಮುಸ್ಲಿಂ ಸಂಘಟನೆಗಳು ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶದ ಪ್ರಚಾರ ಮಾಡುತ್ತ ಬ್ಯಾನರ್’ಗಳಲ್ಲಿ ಕಾಬಾ, ಟಿಪ್ಪು ಫೋಟೋ ಹಾಕಿ ತಮ್ಮ ಬೆಂಬಲ ಲಿಂಗಾಯತರಿಗಿದೆ ಎಂದು ತೋರಿಸಿಕೊಳ್ಳುತ್ರಿದ್ದಾರೆ.

ರಂಜಾನ್ ದರ್ಗಾ ಅನ್ನೋ ಸಾಹಿತಿ ಒಂದು ಪುಸ್ತಕ ಬರೀತಾನೆ, ಅದರ ಹೆಸರೇನು ಗೊತ್ತಾ? “ಬಸವ ತತ್ವ ಹಾಗು ಇಸ್ಲಾಂ” ಅಂತೆ.

ಹೀಗೆ ಲಿಂಗಾಯತರನ್ನ ಹಿಂದೂ ಧರ್ಮದ ವಿರುದ್ಧ ಪ್ರಚೋದಿಸುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ, ಆದರೆ ಇದರ ಯಾವ ಅರಿವೂ ಇಲ್ಲದ ನಮ್ಮ ಜನ ಲಿಂಗಾಯತ್ ಪ್ರತ್ಯೇಕ ಧರ್ಮ ಆಗಲಿ ಅಂತ ಹಿಂದೂ ಧರ್ಮದ ಒಡಕಿಗೆ ಕಾರಣವಾಗುವತ್ತ ಹೆಜ್ಜೆ ಹಾಕಿದ್ದಾರೆ.

ನಮ್ಮ ಜನಗಳಿಗೆ ಅದ್ಯಾವಾಗ ಕ್ರಿಶ್ಚಿಯನ್ ಮಿಷನರಿಗಳ & ಜಿಹಾದಿಗಳ ನರಿ ಬುದ್ಧಿ ಅರ್ಥವಾಗುತ್ತೋ ಅದನ್ನ ಅವರು ನಂಬೋ ಆಯಾ ದೇವರುಗಳಿಗೇ ಗೊತ್ತು!

– Vinod Hindu Nationalist

Tags

Related Articles

Close