ಅಂಕಣಇತಿಹಾಸದೇಶಪ್ರಚಲಿತ

ಸ್ವತಃ ಭಗವಾನ್ ಶಿವನಿಂದಲೇ ರಕ್ಷಿಸಲ್ಪಟ್ಟಿದ್ದ ಆ ಬ್ರಿಟಿಷ್ ಅಧಿಕಾರಿ ಯಾರು ಗೊತ್ತಾ?! ನಿಗೂಢಮಯ ಇತಿಹಾಸದ ಪುಟಗಳು!!!!

ಹಿಂದೂ ಚಿಂತನೆಯೇ ಒಂದು ಅದ್ಭುತ. ಅದು ಸಾಗರವಿದ್ದಂತೆ ಎಂದರೂ ಅತಿಶಯೋಕ್ತಿಯಾಗಲಾರದು. ಯಾವ ವ್ಯಕ್ತಿ ಭಯದಿಂದಲ್ಲದೇ, ನಿರ್ಮಲ ಮನಸ್ಸಿನಿಂದ ಭಗವಂತನನ್ನು ಭಜಿಸುತ್ತಾನೋ, ಆತನಿಗೆ ದೇವರ ಅಭಯ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆತನಿಗೆ ಅದು ದೇವರ ದರ್ಶನವಾದರೆ, ಇತರರಿಗೆ ಅದು ಪವಾಡ !!! ಭಗವಂತ ಭಕ್ತರ ಕನಸಿನಲ್ಲಿ ಬಂದು ಉತ್ತಮ ಕಾರ್ಯವನ್ನು ಮಾಡಲು ನಿದೇರ್ಶಿಸುವ ಅನೇಕ ಕಥನಗಳನ್ನು ನಾವು ಕೇಳಿರಬಹುದು. ಆದರೆ ಈ ಕಥೆ ಸ್ವಲ್ಪ ವಿಭಿನ್ನ.. ಹಿಂದೂ ದೇವರೆಂದೇ ಬಿಂಬಿಸಲಾಗುತ್ತಿರುವ ದೇವರು ಓರ್ವ ಕ್ರಿಶ್ಚಿಯನ್ ಭಕ್ತನನ್ನು ಕಾಪಾಡಿದ ಕಥೆ !!!

ಭಕ್ತಸಂರಕ್ಷಕ ಸದಾಶಿವ :

ಅದು 1879 ನೇ ವರ್ಷ. ಭರತಖಂಡವನ್ನು ಬ್ರಿಟಿಷರು ಆಳುತ್ತಿದ್ದ ಕಾಲವದು. ಆ ಸಂದರ್ಭದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಯುದ್ಧಕ್ಕೆ ನೇತೃತ್ವ ವಹಿಸಿದವನು ಲೆಫ್ಟಿನೆಂಟ್ ಕೊಲೊನಿಯಲ್ ಮಾರ್ಟಿನ್.. ನೆನಪಿರಲಿ, ಆತನೊಬ್ಬ ಕ್ರಿಶ್ಚಿಯನ್ ಬ್ರಿಟಿಷ್ ಅಧಿಕಾರಿ !!

ಕೊಲೊನಿಯಲ್ ಮಾರ್ಟಿನ್ ತನ್ನ ಹೆಂಡತಿಯ ಕಷ್ಟ-ಸುಖವನ್ನು ಸಂದೇಶಗಳನ್ನು ರವಾನಿಸುವ ಮೂಲಕ ತಿಳಿಯುತ್ತಿದ್ದ. ಆ ಕಡೆಯಿಂದಲೂ ಸಮರ್ಪಕವಾದ ಪ್ರತಿಕ್ರಿಯೆ ಬರುತ್ತಿತ್ತು. ಅಫ್ಘಾನಿಸ್ತಾನ ಹಾಗೂ ಬ್ರಿಟಿಷರ ಯುದ್ಧ ದೀರ್ಘವಾಗಲು ಪ್ರಾರಂಭವಾದುದರಿಂದ ತನ್ನ ಹೆಂಡತಿಗೆ ಸಂದೇಶಗಳನ್ನು ಕಳಿಸಲು
ವಿಫಲರಾದರು ಮಾರ್ಟಿನ್. ತಕ್ಷಣ ಸಂದೇಶಗಳು ಬರುವುದು ಸ್ಥಗಿತವಾದ್ದರಿಂದ ಸಹಜವಾಗಿಯೇ ಆಕೆ ಗಾಬರಿಗೊಂಡಳು.

ಒಂದು ದಿನ, ತಾನು ಕುದುರೆಯ ಮೇಲೆ ಸವಾರಿಯನ್ನು ಮಾಡುತ್ತಾ ಸಾಗಬೇಕಾದರೆ ಬಾಜಿನಾಥ್ ದೇವಾಲಯದ ಪಕ್ಕದಲ್ಲೇ ಹಾದುಹೋದಳು. ಅಲ್ಲಿಯ ಶಂಖ ಹಾಗೂ ಮಂತ್ರಗಳ ಉಚ್ಛಾರಣೆಯ ಧ್ವನಿಗಳು ಆಲಿಸಿದ ಆಕೆ ದೇವಾಲಯದ ಕಡೆಗೆ ಆಕರ್ಷಿಸಲ್ಪಟ್ಟಳು. ಒಂದು ಕ್ಷಣವೂ ತಡ ಮಾಡದೇ ದೇವಾಲಯವನ್ನು ಪ್ರವೇಶಿಸಿ, ಅಲ್ಲಿ ಶಿವನನ್ನು ಬ್ರಾಹ್ಮಣರು ಆರಾಧನೆ ಮಾಡುತ್ತಿದ್ದುದನ್ನು ಕಂಡು ಚಕಿತಗೊಳ್ಳುತ್ತಾಳೆ.

ದುಃಖ ಹಾಗೂ ಗಾಬರಿಯಲ್ಲಿದ್ದ ಆಕೆಯನ್ನು ದೇವಾಲಯದಲ್ಲಿದ್ದ ಬ್ರಾಹ್ಮಣರು ಗಮನಿಸಿ, ದುಃಖಕ್ಕೆ ಕಾರಣಗಳನ್ನು ಕೇಳಿದ ಅವರಲ್ಲಿ ನಡೆದ ವಿಚಾರಗಳನ್ನು ಹಂಚುತ್ತಾಳೆ. ಭಕ್ತಸಂರಕ್ಷಕನಾದ ಭಗವಂತ ನಿಮ್ಮೆಲ್ಲಾ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರವನ್ನೂ ಕೊಡುತ್ತಾನೆ, ನಿಮ್ಮ ಕಷ್ಟದ ಪರಿಸ್ಥಿತಿಯನ್ನು ನಿವಾರಿಸುತ್ತಾನೆ ಎಂಬುದಾಗಿ ಅವರು ಇವಳಿಗೆ ಬೋಧಿಸಿದರು.

ಬ್ರಾಹ್ಮಣರ ನಿರ್ದೇಶನದಂತೆ ಮಾರ್ಟಿನ್ ನ ಪತ್ನಿ 11 ದಿನಗಳ ಅವಿಧಿಯವರೆಗೆ ಪಂಚಾಕ್ಷರೀ ಮಂತ್ರವಾದ “ಓಂ ನಮಃ ಶಿವಾಯ ” ಎಂಬ ಮಂತ್ರವನ್ನು ಉಚ್ಛರಿಸುತ್ತಾ ‘ಲಘು-ರುದ್ರ ಅನುಷ್ಠಾನ’ ವನ್ನು ಪ್ರಾರಂಭ ಮಾಡುತ್ತಾಳೆ. ಒಂದು ವೇಳೆ ಯುದ್ಧಕ್ಷೇತ್ರದಿಂದ ತನ್ನ ಗಂಡ ಸುಖವಾಗಿ ವಾಪಾಸಾದರೆ ದೇವಾಲಯವನ್ನು ಜೀರ್ಣೋದ್ದಾರ ಮಾಡಿಸುವುದಾಗಿ ಶಿವವನ್ನು ಕುರಿತು ಆಕೆ ಪ್ರಾರ್ಥಿಸುತ್ತಾಳೆ.

‘ಲಘು-ರುದ್ರಿ’ ಅನುಷ್ಠಾನದ ಅಂತಿಮ ದಿವಸ, ಸಂದೇಶವಾಹಕ ಒಂದು ಪತ್ರವನ್ನು ಆಕೆಗೆ ತಲುಪಿಸುತ್ತಾನೆ. ಆ ಪತ್ರ ತನ್ನ
ಗಂಡನಿಂದಲೇ ಬಂದುದಾಗಿತ್ತು. ಆ ಪತ್ರದಲ್ಲಿ ಮಾರ್ಟಿನೆ ಏನು ಬರೆದಿದ್ದ ಗೊತ್ತಾ?- “” ನಾನು ಪ್ರತೀ ಬಾರಿಯೂ ಯುದ್ಧಭೂಮಿಯಿಂದಲೇ ನಿನಗೆ ಸಂದೇಶಗಳನ್ನು ರವಾನಿಸುತ್ತಿದ್ದೆ. ಆದರೆ ಕೆಲವು ಸಮಯಗಳಲ್ಲಿ ಪಠಾಣರು ನಮ್ಮನ್ನು ಎಲ್ಲಾ ಕಡೆಯಿಂದಲೂ ಸುತ್ತುವರಿದರು. ಸಾವಿನಿಂದ ಬಚಾವಾಗುವ ಯಾವ ಲಕ್ಷಣವೂ ಆಗ ಗೋಚರಿಸಲಿಲ್ಲ. ಅದೇ ಸಂದರ್ಭದಲ್ಲಿ 3 ಚೂಪಾದ ಕೊಡಿಗಳುಳ್ಳ ಆಯುಧವನ್ನು(ತ್ರಿಶೂಲ) ಹೊಂದಿದ್ದ, ಉದ್ದ ಕೂದಲಿನ ಓರ್ವ ಭಾರತದ ಯೋಗಿಯನ್ನು ಕಂಡೆ. ಆತನ ವ್ಯಕ್ತಿತ್ವ ಮೈನವಿರೇಳಿಸುವಂತಹದ್ದು. ಆ ಆಯುಧವನ್ನು ಹಿಡಿಯುವ ಶೈಲಿಯೇ ಆಕರ್ಷಕವಾದುದು. ಇಂತಹ ಅದ್ಭುತ ವ್ಯಕ್ತಿಯನ್ನು ಗಮನಿಸಿದ ಪಠಾಣರು ಓಡಿಹೋದರು. ಅವರ ಅಭಯದಿಂದ ಕೆಟ್ಟ ಸಮಯಗಳು ದೂರವಾಗಿ ವಿಜಯ ಪಥಾಕೆಯನ್ನು ಹಾರಿಸಿದೆ. ಸಿಂಹ ಚರ್ಮದಂತಿದ್ದ, 3 ಚೂಪಾದ ಕೊಡಿಗಳನ್ನು ಹೊಂದಿದ ಆಯುಧವನ್ನು ಹಿಡಿದ ಆ ಯೋಗಿಯಿಂದಲೇ ಇಂತಹ ಸಂದರ್ಭ ಒದಗಿಬಂದಿದೆ ಅನ್ನುವು ಸ್ಪಷ್ಟ. ಆ ಮಹಾನ್ ಯೋಗಿ ನನ್ನ ಬಳಿ ಬಂದು,”ನೀನೇನು ಹೆದರಬೇಡ. ನಿನ್ನ ಪತ್ನಿಯ ಭಕ್ತಿಯ ಪ್ರಾರ್ಥನೆ ಮೆಚ್ಚಿ ನಾನು ನಿನ್ನನ್ನು ರಕ್ಷಿಸಲು ಬಂದಿದ್ದೇನೆ ” ಎಂದರು ”

ಈ ಪತ್ರವನ್ನು ಓದಿದ ಮಾರ್ಟಿನ್ ಅವರ ಪತ್ನಿ ಭಾವುಕಳಾಗಿ ಕಣ್ಣೀರಿಟ್ಟಳು. ಶಿವನ ಪಾದಚರಣಗಳಲ್ಲಿ ಎರಗಿ ಕಣ್ಣಿರಿನಿಂದಲೇ ಪಾದವನ್ನು ತೊಳೆದಳು ಆಕೆ.

ಕೆಲವು ವಾರಗಳ ನಂತರ ಮಾರ್ಟಿನ್ ಮರಳಿ ಬರುತ್ತಾರೆ. ತನ್ನ ಜೀವವನ್ನು ರಕ್ಷಿಸಿದ ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಅವರೀರ್ವರೂ ದೇವಾಲಯಕ್ಕೆ ಭೇಟಿಯನ್ನು ಕೊಡುತ್ತಾರೆ. ಯೋಗಿಯ ರೂಪದಲ್ಲಿ ಶಿವನೇ ಬಂದು ತನ್ನನ್ನು ರಕ್ಷಿಸಿದ್ದಾನೆಂದು ತಿಳಿದ ಮಾರ್ಟಿನ್ ಕೂಡ ಭಾವುಕರಾಗುತ್ತಾರೆ.

ಶಿವನ ಅದಮ್ಯ ಭಕ್ತರಾದರವರೀರ್ವರು. ಆ ದೇವಾಲಯದ ಜೀರ್ಣೋದ್ದಾರ ಹಾಗೂ ನಿರ್ವಹಣೆಗೆ ಬೇಕಾದಷ್ಟು ಮೊತ್ತವನ್ನು ಕಾಣಿಕೆಯ ರೂಪದಲ್ಲಿ ಸಲ್ಲಿಸಿದರು. ದೇವಾಲಯದ ಚಪ್ಪಡಿಯ ಕೆತ್ತನೆಯಲ್ಲಿ ಈಗಲೂ ಅವರ ನಾಮವಿದೆ. ಅಂದಿನವರೆಗೆ ಇತಿಹಾಸದಲ್ಲಿ ದಾಖಲಾಗದ, ಆವತ್ತು ದಾಖಲಾದ ಪ್ರಮುಖ ವಿಚಾರವೇನು ಗೊತ್ತೇ ?? ಭಾರತದಲ್ಲಿ ದೇವಾಲಯದ ಜೀರ್ಣೋದ್ದಾರ ಮಾಡಿದ ಪ್ರಥಮ ಹಾಗೂ ಅಂತಿಮ ಬ್ರಿಟಿಷ್ ಅಧಿಕಾರಿ !! ಆ ದೇವಾಲಯವೇ ಶ್ರೀ ಭಾಜೀನಾಥ ಮಹಾದೇವ ದೇವಾಲಯ !!!

ದೇವರ ಹೆಸರಿನಲ್ಲಿ ಗಲಭೆ ಸೃಷ್ಟಿಸುವವರಿಗೆ ಇದೊಂದು ಮಾರ್ಗದರ್ಶನ ಮಾಡುವ ಕಥೆಯೂ ಆಗಲಿದೆ ಅನ್ನುವುದೇ ಉತ್ತಮ ವಿಚಾರ .! ಜಗತ್ತಿನ ಸಂರಕ್ಷಕ ಒಬ್ಬನೇ , ಆದರೆ ನಾಮಗಳು ಮಾತ್ರ ಹಲವು ಎಂಬುದನ್ನು ಪದೇ ಪದೇ ನಿರೂಪಿಸಲ್ಪಟ್ಟಿವೆ ಅನ್ನುವುದು ಸ್ಪಷ್ಟ ಹಾಗೂ ಸತ್ಯ ..

– ವಸಿಷ್ಠ

Tags

Related Articles

Close