ಪ್ರಚಲಿತ

ಸ್ವತಃ ಶಿವನಿಂದ ಸೃಷ್ಟಿಯಾದ ಈ ಬೆಟ್ಟ ಹಲವಾರು ರಹಸ್ಯಗಳನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ…

ಹಿಂದೂ ಸಂಪ್ರದಾಯದಲ್ಲಿ ಮುಕ್ಕೋಟಿ ದೇವತೆಗಳನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಪೂಜಿಸುತ್ತೇವೆ… ಇಲ್ಲಿರುವ ಪ್ರತೀಯೊಂದು ದೇವಾಲಯವು ಒಂದು ವಿಸ್ಮಯಕಾರಿಯೇ ಹೌದು. ವಿಜ್ಞಾನಿಗಳಿಗೂ ಕೆಲವೊಮ್ಮೆ ಅಚ್ಚರಿಯನ್ನುಂಟು ಮಾಡುವ ಅದೆಷ್ಟೋ ದೇವಾಲಯ ಭಾರತದಲ್ಲಿದೆ. ಇಂತಹ ವಿಸ್ಮಯಕಾರಿ ಸಂಗತಿಗಳನ್ನು ಯಾರೇ ಆದರೂ ನಂಬಲೇ ಬೇಕು… ದೇವರೇ ಇಲ್ಲ ಎಂದು ಹೇಳುವವರೂ ಇಂತಹ ವಿಸ್ಮಯಕಾರಿ ಘಟನೆಗಳಿಗೆ ತಲೆಬಾಗಲೇ ಬೇಕು. ವಿಜ್ಞಾನಿಗಳಿಗೂ ಕೆಲವೊಂದು ದೇವರ ಚಮತ್ಕಾರಗಳು ಸಂಶೋಧನೆಗೂ ಸಿಗುವುದಿಲ್ಲ… ಅಂತಹ ವಿಚಿತ್ರಗಳು ನಮ್ಮ ಭೂಮಿಯಲ್ಲಿ ನಡೆಯುತ್ತಿರುತ್ತದೆ.

ಮನುಷ್ಯ ಎಷ್ಟು ಎತ್ತರಕ್ಕೆ ಬೆಳೆದರೂ ಕೂಡಾ ಕೆಲವು ನಂಬಿಕೆಗಳನ್ನು ನಂಬಲೇ ಬೇಕಾದ ಅನಿವಾರ್ಯ ಬರುತ್ತದೆ. ನಮ್ಮಲ್ಲಿ ಹಲವಾರು ದೇವಾಲಯಗಳು ಅವುಗಳ ಹಿಂದಿರುವ ರೋಚಕವಾದ ಕತೆಗಳು ಇಂದಿಗೂ ರಹಸ್ಯವಾಗಿಯೇ ಉಳಿದಿವೆ. ಹೀಗೆ ಭಾರತದಲ್ಲಿ ಅಂತಹ ನಿಗೂಢತೆಗಳಲ್ಲಿ ತಮಿಳುನಾಡಿನ ವೇದಗಿರಿಶ್ವರ ದೇವಾಲಯವೂ ಒಂದಾಗಿದೆ. ಈ ದೇವಾಲಯದಲ್ಲಿ ಪರಮೇಶ್ವರ ವೇದೇಶ್ವರನಾಗಿ ನೆಲೆ ನಿಂತಿದ್ದಾನೆ. ಈ ದೇವಾಲಯದಲ್ಲಿ ವೇದಗಳೇ ಬೆಟ್ಟ. ಇಂತಹ ವಿಸ್ಮಯಕಾರಿ ವಿಚಾರವನ್ನು ಯಾರಿಗಾದರೂ ನಂಬಲು ಸಾಧ್ಯವೇ? ನಂಬಲೇ ಬೇಕಾದ ಸತ್ಯ ಇದು. ಏನಪ್ಪಾ ಇದು ವೇದಗಳೇ ಬೆಟ್ಟನಾ ಅಂತಾ ಒಂದು ಬಾರಿ ಪ್ರಶ್ನೆಯೊಂದು ಕಾಡಲು ಶುರು ಮಾಡಬಹುದು. ಹೌದು ಇಲ್ಲಿ ವೇದಗಳೇ ಬೆಟ್ಟ.

ಸಾವಿರಾರು ವರ್ಷಗಳ ಹಿಂದೆ ಭಾರದ್ವಜ ಮಹಾಮುನಿಯು ಧೀರ್ಘಕಾಲದಿಂದ ಶಿವನನ್ನು ಕುರಿತು ತಪಸ್ಸನ್ನು ಮಾಡುತ್ತಿರುತ್ತಾರೆ. ಒಂದು ದಿನ ಶಿವ ಪ್ರತ್ಯಕ್ಷನಾದಾಗ ಶಿವನ ಮುಂದೆ ನನಗೆ ದೀರ್ಘಾಯುಷ್ಯನ್ನು ಕೊಡು ನಾನು ಎಲ್ಲಾ ವೇದಗಳನ್ನು ಕಲಿಯ ಬೇಕು ಎಂಬ ಬಯಕೆಯನ್ನು ಮುಂದಿಡುತ್ತಾರೆ. ಮೂರು ಪರ್ವತಗಳನ್ನು ಸೃಷ್ಟಿಸಿದನು (ಋಗ್, ಯಜುರ್ ಮತ್ತು ಸಾಮ) ಶಿವನು ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು “ಪ್ರೀತಿಯ ಭಾರದ್ವಾಜ! ಇಲ್ಲಿ ಇರುವ ಪರ್ವತಗಳಿಗೆ ಹೋಲಿಸಿದರೆ ನೀನು ಕಲಿಯಲಿಕ್ಕಾಗುವುದು ಬಹಳಷ್ಟದೆ! ನೀನೂ ಎಷ್ಟೇ ವರ್ಷಗಳ ಕಾಲ ಬದುಕಿದರೂ ಕಲಿಕೆ ಅನ್ನುವಂತಹದ್ದು ಮುಗಿಯಲು ಸಾಧ್ಯವೇ ಇಲ್ಲ… ಮೂರು ಪರ್ವತಗಳಲ್ಲಿ ಒಂದು ಹಿಡಿ ಮಣ್ಣಿನಷ್ಟು ಮಾತ್ರ ನೀನು ಕಲಿಯಲು ಸಾಧ್ಯ” ಎಂಬುವುದನ್ನು ಶಿವ ಹೇಳುತ್ತಾನೆ. ಕಲಿಯುಗದಲ್ಲಿ ಮೋಕ್ಷಕ್ಕೆ ಸರಳ ಮತ್ತು ಖಚಿತವಾದ ಮಾರ್ಗವೆಂದರೆ ಭಕ್ತಿ , ಸೇವೆ ಮತ್ತು ದೇವರ ಪ್ರೀತಿ ಹೀಗೆ ಮಾಡಿದಲ್ಲಿ ಮಾತ್ರ ನಿನಗೆ ಜೀವನ ಪ್ರಾಪ್ತಿಯಾಗಲು ಸಾಧ್ಯ. ಎಂಬ ಮಾತನ್ನು ಹೇಳುತ್ತಾನೆ… ಹೀಗಾಗಿ ವೇದಗಿರೀಶ್ವರ ದೇವಾಲಯವನ್ನು ಕಟ್ಟಿದ ಬೆಟ್ಟವು ಶಿವನಿಂದ ನಿರ್ಮಿಸಲ್ಪಟ್ಟ ವೇದಗಳನ್ನು ಸೂಚಿಸುವ ಪರ್ವತಗಳು ಎಂದು ನಂಬಲಾಗಿದೆ. ಕಲಿಯುಗದಲ್ಲಿ ಅತ್ಯಂತ ಭಕ್ತಿ ಶ್ರದ್ಧೆಯಿಂದ ಈ ದೇವಾಲಯಕ್ಕೆ ಬರುವ ಭಕ್ತರಿಗೆ ಮೋಕ್ಷವನ್ನು ಪ್ರಸಾದಿಸುತ್ತೇನೆ ಎಂದು ಪರಮಶಿವನು ಮಹರ್ಷಿಗೆ ತಿಳಿಸಿದ ಎಂಬ ನಂಬಿಕೆ ಇದೆ.

ಹೀಗಾಗಿ ಇಲ್ಲಿರುವ ಬೆಟ್ಟಗಳನ್ನು ವೇದಗಳ ಪರ್ವತ ಎಂದು ಕರೆಯುತ್ತಾರೆ. ತ್ರಿಪುರ ಸುಂದರಿ ದೇವಿ ಬೆಟ್ಟದ ಮೇಲೆ ಪರಮಶಿವನು ವೇದಗಿರೀಶ್ವರನಾಗಿ ನೆಲೆಸಿದ್ದರೆ, ಬೆಟ್ಟದ ಕೆಳಗೆ ಪಾರ್ವತಿ ದೇವಿಯು ತ್ರಿಪುರಸುಂದರಿ ದೇವಿಯಾಗಿ ನೆಲೆಸಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಬೆಟ್ಟದ ಮೇಲ್ಭಾಗದಲ್ಲಿ ಪರಮೇಶ್ವರನು ಹಾಗೂ ಕೆಳ ಭಾಗದಲ್ಲಿ ಪಾರ್ವತಿದೇವಿಯು ಪ್ರತ್ಯೇಕವಾಗಿ ನೆಲೆಸಿರುವುದು ಈ ದೇವಾಲಯದ ಮತ್ತೊಂದು ವಿಶೇಷತೆಯಾಗಿದೆ. ಬೆಟ್ಟದ ಕೆಳಗೆ ಒಂದು ಪವಿತ್ರವಾದ ತೀರ್ಥವಿದೆ. ಪೂರ್ತಿಯಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯವು ಚರಿತ್ರಕಾರರನ್ನೂ ಆಕರ್ಷಿಸುತ್ತದೆ.

ಕಾಂಚಿಪುರದಲ್ಲಿನ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾದ ವೇದೇಶ್ವರ ದೇವಾಲಯಕ್ಕೆ ಚೆನ್ನೈನಿಂದ ಸುಮಾರು 72 ಕಿಲೋ ಮೀಟರ್ ದೂರದಲ್ಲಿದೆ. ಮಹಾಬಲಿಪುರಂನಿಂದ ಕೇವಲ 16 ಕಿಲೋಮೀಟರ್ ಪ್ರಯಾಣಿಸಿದರೆ ಈ ದೇವಾಲಯಕ್ಕೆ ಸುಲಭವಾಗಿ ತಲುಪಬಹುದು. ಆ ಪಕ್ಷಿಗಳು ಪೂರ್ವದಲ್ಲಿ ಈ ದೇವಾಲಯ ಇರುವ ಗ್ರಾಮವನ್ನು ತಿಲಕುರಕುಂಡ್ರ ಎಂದು ಕರೆಯುತ್ತಿದ್ದರು. ತದನಂತರ ವೇದ ಗಿರಿಯಾಗಿ ಮಾರ್ಪಾಟಾಯಿತು. ಅದಲ್ಲದೆ ಇಲ್ಲಿ ಎರಡು ಪಕ್ಷಿಗಳು ಕ್ರಮವಾಗಿ ಮಧ್ಯಾಹ್ನ 12 ಗಂಟೆಗೆ ಪೂಜಾರಿ ನೀಡುವ ಪ್ರಸಾದವನ್ನು ಸ್ವೀಕರಿಸುತ್ತದೆ! ಇದರಿಂದಾಗಿ ಇಲ್ಲಿನ ತೀರ್ಥವನ್ನು ಪಕ್ಷಿ ತೀರ್ಥ ಎಂದು ಕರೆಯಲಾಯಿತು.

ಆದರೆ ಪ್ರಪಂಚದಲ್ಲಿ ನಡೆಯುವ ಅದೆಷ್ಟೋ ವಿಚಿತ್ರಗಳು ಒಂದು ಕ್ಷಣ ನಮ್ಮ ಕಣ್ಣು ತೆರೆಸುತ್ತವೆ. ಅಷ್ಟೇ ಅಲ್ಲದೇ, ಈ ವಿಚಿತ್ರಗಳು ನಡೆಯುವ ಸ್ಥಳಕ್ಕೆ ಬೇಟಿ ನೀಡಿ ಅದನ್ನೂ ಪರೀಕ್ಷಿಸಲೂ ಮುಂದಾಗುತ್ತೇವೆ ಕೂಡ! ದೇವರು ಇದ್ದಾನೆಯೇ ಅಥವಾ ಇಲ್ಲವೋ ಎಂಬ ಗೊಂದಲ ಇರುವವರಿಗೆ, ದೇವರು ಇಲ್ಲ ಎಂದು ವಾದಿಸುವವರ ಕಣ್ಣು ತೆರೆಸಬೇಕು ಎಂದು ಆ ಭಗವಂತನು ನಮಗೆ ಇಂತಹ ಅದ್ಭುತಗಳನ್ನು ಮಾಡಿ ತೋರಿಸುತ್ತಾನೋ ಏನೋ ಗೊತ್ತಿಲ್ಲ ಇಂತಹ ವಿಸ್ಮಯಗಳನ್ನು ನಾವು ನಂಬಲೇ ಬೇಕು….

-ಪವಿತ್ರ

Tags

Related Articles

FOR DAILY ALERTS
Close