ಅಂಕಣಇತಿಹಾಸ

ಸ್ವಾತಂತ್ರ್ಯಾ ನಂತರ ಸಾವರ್ಕರ್ ಅವರನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿತ್ತು ಗೊತ್ತಾ? ಸಾವರ್ಕರ್ 21 ದಿನಗಳ ಕಾಲ ಉಪವಾಸ ಹೂಡಿ ದೇಹತ್ಯಾಗ ಮಾಡಿದ್ದು ಯಾಕೆ?

ವಿನಾಯಕ ದಾಮೋದರ ಸಾವರ್ಕರ್…. ಇಡೀ ಇಂಗ್ಲೆಂಡ್ ಸಾಮ್ರಾಜ್ಯವನ್ನೇ ಗಡಗಡ ನಡುಗುವಂತೆ ಮಾಡಿದ,  ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಬದುಕನ್ನು, ತಮ್ಮ ಇಡೀ ಕುಟುಂಬವನ್ನೇ ಸಮರ್ಪಿಸಿದ, ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿತ್ತು ಗೊತ್ತಾ? ಛೇ ಇಂತಹಾ ಕಷ್ಟ ಯಾರಿಗೂ ಬರಬಾರದಿತ್ತು… ಕೊನೆಗೆ 21 ದಿನಗಳ ಕಾಲ ಉಪವಾಸ ಮಾಡಿಕೊಂಡು ದೇಹವನ್ನೇ ತ್ಯಾಗ ಮಾಡಿದರು ಸಾವರ್ಕರ್.

ಛೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಸೇನಾನಿಯನ್ನು  ನಮ್ಮಿಂದ ಉಳಿಸಲು ಸಾಧ್ಯವಾಗಲಿಲ್ಲವಲ್ಲ!

ಅಘಾತಗಳ ಮೇಲೆ ಅಘಾತ…!

ವಿದೇಶಕ್ಕೆ ತೆರಳಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಸಾವರ್ಕರ್ ನಿಜವಾಗಿಯೂ ಅಪ್ರತಿಮ ದೇಶಭಕ್ತ. ವಿದೇಶಕ್ಕೆ ತೆರಳಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿ ದೇಶಭಕ್ತಿ ಪ್ರದರ್ಶಿಸಿದ್ದಕ್ಕಾಗಿ ಇಂಗ್ಲೆಂಡ್ ಅವರಿಗೆ ಇಡೀ ಜಗತ್ತಲ್ಲೇ ಯಾರಿಗೂ ಕೊಡದ ಭೀಕರ ಶಿಕ್ಷೆಯನ್ನು ನೀಡಿತ್ತು.  ಅದೇ 50 ವರ್ಷಗಳ ಕರಿನೀರಿನ ಶಿಕ್ಷೆ.  ಕರಿನೀರಿನ ಶಿಕ್ಷೆ ಎಂದರೆ ಅದನ್ನು ಸಾವಿನ ಮನೆ ಎಂದೇ ಕರೆಯಲಾಗುತ್ತಿತ್ತು. ಶಿಕ್ಷೆಯ ಹೆಸರು ಕೇಳಿದರೇನೇ ಹೃದಯಾಘಾತಕ್ಕೊಳಗಾಗಬೇಕು…! ಹೊರಗಿನ ಯಾವ ಸಂಪರ್ಕವೂ ಇಲ್ಲದೆ ನಾಲ್ಕು ಗೋಡೆಗಳ ಕತ್ತಲ ಕೋಣೆಯಲ್ಲಿ ಏಕಾಂಗಿಯಾಗಿರುವ ಎದೆಬಿರಿಯುವ ಶಿಕ್ಷೆಯನ್ನು ನೀಡಿದರೂ ವಿಚಲಿತರಾಗದ ಸಾವರ್ಕರ್ ಜೋರಾಗಿ ಗಹಗಹಿಸಿ ನಕ್ಕಿದ್ದರಂತೆ… ಯಾಕೆ ಗೊತ್ತಾ? 50 ವರ್ಷಗಳ ಕಾಲ ನಿಮ್ಮ ಸರಕಾರ ಇದ್ದರೆ ತಾನೆ? ಸಾವರ್ಕರ್‍ಗೆ ದೇಶ ಶೀಘ್ರ ಸ್ವಾತಂತ್ರ್ಯಗೊಂಡು ಸ್ವತಂತ್ರ್ಯ ಭಾರತದಲ್ಲಿ ನೆಮ್ಮದಿಯಿಂದ ಇರಬಹುದೆಂದು ಎನಿಸಿದ್ದರು. ಆದರೆ ಸ್ವಾತಂತ್ರ್ಯಗೊಂಡ ಬಳಿಕ ನೆಹರೂ ಸರಕಾರ ಅವರನ್ನು ಯಾವ ರೀತಿ ನಡೆಸಿತ್ತು ಅಂದರೆ ಖಂಡಿತಾ ನಿಮ್ಮ ಕಣ್ಣಲ್ಲಿ ಧಾರಾಕಾರ ನೀರು ಸುರಿಯುವುದು ಖಂಡಿತಾ!!!

ಇಟಲಿ ರಾಷ್ಟ್ರಭಕ್ತ ಮ್ಯಾಝಿನಿಯನ್ನು ಆದರ್ಶನಾಯಕನನ್ನಾಗಿ ಇಟ್ಟುಕೊಂಡಿದ್ದ ಸಾವರ್ಕರ್ ಮ್ಯಾಝಿನಿ ಚರಿತ್ರೆಯನ್ನು ವೀರಾವೇಶದ ನುಡಿಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರೇಪಣೆ ನೀಡುವ ಶೈಲಿಯಲ್ಲಿ ಬರೆದು ಭಾರತಕ್ಕೆ ಕಳುಹಿಸಿದ್ದರು.  ಸಾವರ್ಕರ್‍ರ ಬರಹದ ಶೈಲಿ ಇಡೀ ದೇಶದಲ್ಲೇ ಕ್ರಾಂತಿಗೆ ಪ್ರೇರಣೆ ನೀಡಬಹುದೆಂದು ಬೆಚ್ಚಿದ ಇಂಗ್ಲೆಂಡ್ ಸರಕಾರ ಅವರು ಬರೆದ `ಮ್ಯಾಝಿನಿ’ ಪುಸ್ತಕ ಮುಟ್ಟುಗೋಲು ಹಾಕಲ್ಪಟ್ಟಿತು.

ಛಲ ಬಿಡದ ಸಾವರ್ಕರ್ `ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ -1857′ ಎಂಬ ಕೃತಿಯನ್ನು ಬರೆದರು.  ಈ ಪುಸ್ತಕವನ್ನು ಅವರ ಅಣ್ಣ ಗಣೇಶ(ಬಾಬಾ) ಸಾವರ್ಕರರು ಪ್ರಕಟಿಸಲು ಸಾಕಷ್ಟು ಯತ್ನಿಸಿದರು. ಆದರೆ ಮಾಹಿತಿ ಅರಿತ ಇಂಗ್ಲೆಂಡ್ ಆ ಪುಸ್ತಕವನ್ನು ಮುಟ್ಟುಗೋಲು ಹಾಕಿಸಲು  ಇಂಗ್ಲೆಂಡ್ ಮುದ್ರಾಣಯದ ಮೇಲೆ ನಿರಂತರವಾಗಿ ದಾಳಿ ನಡೆಸಿತು. ಆದರೆ ಎಷ್ಟು ದಾಳಿ ನಡೆಸಿದರೂ ಪುಸ್ತಕದ ಹಸ್ತಪ್ರತಿ ಸಿಗಲಿಲ್ಲ. ಕೊನೆಗೆ ಇದನ್ನು ಫ್ರಾನ್ಸ್‍ಗೆ ರವಾನಿಸಲಾಯಿತು. ಭಾರತೀಯ ಭಾಷೆಯಲ್ಲಿರುವ ಪುಸ್ತಕ ಫ್ರಾನ್ಸ್‍ನಲ್ಲಿ ಮುದ್ರಣವಾಗದ ಕಾರಣ ಮತ್ತೆ ಆ ಕೃತಿಯನ್ನು ಇಂಗ್ಲೀಷ್‍ಗೆ ತರ್ಜುಮೆ ಮಾಡಿ ಮುದ್ರಿಸಲಾಯಿತು. ಇದನ್ನು ಗ್ರಹಿಸಿದ ಇಂಗ್ಲೆಂಡ್ ಪುಸ್ತಕವನ್ನು ಮುಟ್ಟುಗೋಲು ಹಾಕಿತು. ಆದರೆ ಈ ಗ್ರಂಥ ಇಡೀ ದೇಶದ ಸ್ವಾತಂತ್ರ್ಯ ಚಳುವಳಿಯ ದಿಕ್ಕನ್ನೇ ಬದಲಿಸಿತು. ಭಗತ್ ಸಿಂಗ್, ಅಜಾದ್, ಸುಭಾಷ್‍ಚಂದ್ರ ಬೋಸ್‍ನಂತಹಾ ಸಾವಿರಾರು ಕ್ರಾಂತಿಕಾರರು ಹುಟ್ಟಿಕೊಂಡರು. ಇದಕ್ಕಾಗಿ ಸಾವರ್ಕರ್‍ರನ್ನು ಬಂಧಿಸಿ ರಾಜದ್ರೋಹದ ಆಪಾದನೆ ಹೊರಿಸಿ ಅಜನ್ಮ ಕಾರಾವಾಸದ ಶಿಕ್ಷೆ ವಿಧಿಸಲ್ಪಟ್ಟಿತು.

ಸಾವರ್ಕರ್‍ಗೆ ಚಿಕ್ಕಂದಿನಿಂದಲೇ ಅನೇಕ ಕಷ್ಟಗಳನ್ನು ಅನುಭವಿಸಿದ್ದರು. ಚಿಕ್ಕಂದಿನಲ್ಲಿಯೇ ಅವರು ತಾಯಿಯನ್ನು ಕಳೆದುಕೊಂಡಿದ್ದರು. ಅವರ ಚಿಕ್ಕಮಗ ಸಿಡುಬಿಗೆ ಬಲಿಯಾದ. ಅವರ ಹಿರಿಯ ಸಹೋದರ ಗಣೇಶ್‍ಪಂತ್ (ಬಾಬಾರಾವ್) ಗಡೀಪಾರು ಶಿಕ್ಷೆಗೆ ಒಳಗಾದರು. ಕಿರಿಯ ಸಹೋದರ ನಾರಾಯಣರಾವ್ ಅವರನ್ನು ಬಂಧಿಸಲಾಯಿತು. ಇಂಗ್ಲೆಂಡ್ ಸರಕಾರ ಅವರ ಮನೆ ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿತು.  ಅವರ ಶಿಷ್ಯ ಮದನ್‍ಲಾಲ್ ಧಿಂಗ್ರಾರನ್ನು ಲಂಡನ್‍ನಲ್ಲಿ ಗಲ್ಲಿಗೇರಿಸಲಾಯಿತು. ಸಾವರ್ಕರ್ ಬ್ಯಾರಿಸ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತಕ್ಕೆ ಬರುವ ಯೋಚನೆಯಲ್ಲಿದ್ದಾಗ ಅವರನ್ನು ರಾಜದ್ರೋಹ, ಒಳಸಂಚು ಮತು ಕ್ರಾಂತೀಯ ಪ್ರಚೋದನೆಗಾಗಿ 1910 ಮಾರ್ಚ್ 13ರಂದು ಬಂಧಿಸಲಾಯಿತು! ಅವರನ್ನು ಬ್ರಿಕ್ಸ್‍ಟನ್ ಕಾರಾಗೃಹದಲ್ಲಿ ಇರಿಸಿದ ನಂತರ ಭಾರತಕ್ಕೆ ಕಳುಹಿಸುವ ಪ್ರಯತ್ನ ನಡೆಯಿತು. ಹೀಗೆ ಆಘಾತಗಳ ಸರಮಾಲೆ ಸಾವರ್ಕರ್‍ರನ್ನು ಸುತ್ತಿಕೊಂಡಿತು!

ಸಾವರ್ಕರ್‍ರನ್ನು ಭಾರತಕ್ಕೆ ಹಡಗಿನಲ್ಲಿ ಕಳುಹಿಸಲು ನಿರ್ಧರಿಸಲಾಯಿತು. ಹಡಗು ಫ್ರಾನ್ಸ್‍ನ ಬಂದರು ಮರ್‍ಸೈಲ್ಸ್  ತಲುಪಿದಾಗ ಲಂಗರು ಹಾಕಬೇಕಾಯಿತು. ಅಲ್ಲಿಂದ ಹೇಗಾದರೂ ಪಾರಾಗುವ ಸಾಹಸಕ್ಕೆ ಸಾವರ್ಕರ್ ಅನುವಾದರು. ಸಾವರ್ಕರ್ ತಪ್ಪಿಸದಂತೆ ಕಾವಲುಗಾರರು ತೀವ್ರ ನಿಗಾ ವಹಿಸಿದ್ದರು. ಅಲ್ಲಿಂದ ತಪ್ಪಿಸುವಂತೆಯೇ ಇರಲಿಲ್ಲ. ಅದಕ್ಕಾಗಿ ಉಪಾಯ ಮಾಡಿದ ದಾಮೋದರ್, ಕಾವಲುಗಾರರಲ್ಲಿ ತನಗೆ ಶೌಚಕ್ಕೆ ಹೋಗಬೇಕೆಂದು ತಿಳಿಸಿದರು. ಶೌಚಾಲಯದ ಬಾಗಿಲು ಹಾಕಿದ ಸಾವರ್ಕರ್ ಚಿಲಕ ಭದ್ರಪಡಿಸಿಕೊಂಡು ಕಿಟಕಿಯನ್ನು ಅಂಗಿಯಲ್ಲಿ ಮುಚ್ಚಿಕೊಂಡು ಹಡಗಿನ ಕಿಂಡಿಯಿಂದ ಸಮುದ್ರಕ್ಕೆ ಧುಮುಕಿದರು. ಸಾವರ್ಕರ್ ಇನ್ನೂ ಶೌಚಾಲಯದಿಂದ ಹೊರಬಾರದಿರುವುದನ್ನು ಗಮನಿಸಿ ದಿಗಿಲುಬಿದ್ದ ಕಾವಲುಗಾರರು ಸುದ್ದಿಮುಟ್ಟಿಸಿದರು. ಹತ್ತಾರು ಸಣ್ಣ ದೋಣಿಗಳ ಮೂಲಕ ಸಾವರ್ಕರ್ ಅವರ ಬೆನ್ನುಬಿದ್ದರು. ಫ್ರಾನ್ಸ್ ನೆಲದಲ್ಲಿ ತನ್ನನ್ನು ಬಂಧಿಸುವ ಅಧಿಕಾರ ತಮಗಿಲ್ಲ ಎಂದೂ ಕೇಳದೆ ಮತ್ತೆ ಸೆರೆಹಿಡಿದು ಹಡಗಿನಲ್ಲಿ ಮರಳಿ ತರಲಾಯಿತು.

ಮುಂದೆ ಅವರಿಗೆ ಐವತ್ತು ವರ್ಷಗಳ ಕಾಲ  ಅಂಡಮಾನಿನ ಕಾರಾಗೃಹದಲ್ಲಿ ಕರಿನೀರಿನ ಶಿಕ್ಷೆಗೆ ಒಳಗಾದರು. ಬೆಳಗ್ಗಿನಿಂದ ಸಂಜೆ ತನಕ ಎಣ್ಣೆ ಹಿಂಡುವ ಗಾಣವನ್ನು ಎತ್ತಿನಂತೆ ದೂಡುವುದು, ಹಗ್ಗ ಹೊಸೆಯುವುದು, ಸರಿಯಾದ ಆಹಾರವಿಲ್ಲದೆ ಕ್ಷಯರೋಗ ಬಡಿದವರಂತೆ ಬಿಡುಗಡೆಯ ದಾರಿಯಿಲ್ಲದೆ, ಮಾತನಾಡಲು ಮನುಷ್ಯ ಸಹವಾಸವಿಲ್ಲದೆ, ನೊಣ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಅನೇಕ ಕಠಿಣ ಶಿಕ್ಷೆಗಳನ್ನು ಅನುಭವಿಸಿದರು. ಕೆಲಸ ಮಾಡಲಾಗದಿದ್ದರೆ ಬೆತ್ತದ ಏಟುಗಳನ್ನು ತಿನ್ನಬೇಕಾಗಿತ್ತು. ಕೆಲಸವಾದ ಮೇಲೆ ಸಂಕೋಲೆಯ ಮುಖಾಂತರ ಬಂಧಿಸಲಾಗುತ್ತಿತ್ತು.

ಅಂತೂ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆದರೆ ಅವರ ವಿಧಿಬರಹ ಚೆನ್ನಾಗಿರಲಿಲ್ಲವೇನೋ? ಸ್ವತಂತ್ರ್ಯ ಭಾರತದಲ್ಲಿ ನೆಮ್ಮದಿಯಿಂದ ಇರಬೇಕಾಗಿದ್ದ ಅದೇ ಸಾವರ್ಕರ್ ಮತ್ತೆ ಬಂಧನಕ್ಕೊಳಗಾದರು. ಪಾಪ ತನ್ನ ಜೀವನ ಪೂರ್ತಿ ಜೈಲಿನಲ್ಲೇ ಕೊಳೆದರು ಸಾವರ್ಕರ್.  ಅಂಡಮಾನ್‍ನಿಂದ ಬಿಡುಗಡೆಗೊಂಡರೂ ಮತ್ತೆ ಅವರ ಮೇಲೆ ಸುಳ್ಳಾರೋಪ ಹೊರಿಸಲಾಯಿತು. ಅದೇ ಗಾಂಧಿ ಹತ್ಯೆ…!

ಗಾಂಧಿ ಹತ್ಯೆಯಾದ ಬಳಿಕ ಒಂದೇ ವಾರದ ಅಂತರದಲ್ಲಿ ಸಾವರ್ಕರ್‍ರನ್ನು ಬಂಧಿಸಲಾಯಿತು.  ಅವರ ಇಡೀ ಮನೆಯನ್ನು ಜಾಲಾಡಿ 143 ಕಡತಗಳನ್ನು, ಸಾವಿರಾರು ಪತ್ರಗಳನ್ನು ಕಾಂಗ್ರೆಸ್ ಸರಕಾರ ವಶಕ್ಕೆ ತೆಗೆದುಕೊಂಡಿತು. 26 ವರ್ಷ ಜೈಲಲ್ಲಿ ಕಳೆದು ಅನಾರೋಗ್ಯಪೀಡಿತನಾಗಿದ್ದ ಸಾವರ್ಕರ್‍ಗೆ ಮತ್ತೆಲೊಂದು ವರ್ಷ ಜೈಲು ಶಿಕ್ಷೆ ನೀಡಿ 1949ರಂದು ನಿರ್ದೋಶಿಯಾಗಿ ಸಾಬೀತಾಗಿರುವುದರಿಂದ ಅವರನ್ನು ಬಿಡುಗಡೆಗೊಳಿಸಲಾಯಿತು. ಜೈಲಿಗಟ್ಟಿದ ಕಾಂಗ್ರೆಸ್ ಅವರನ್ನು ಬ್ರಿಟಿಷರಿಗಿಂತಲೂ ಕ್ರೂರವಾಗಿ ನಡೆಸಿತು. ಅವರ ಹೆಂಡತಿಮಕ್ಕಳಿಗೂ ಮಾತಾಡಲು ಅವಕಾಶ ನೀಡಲಿಲ್ಲ. ಗಾಂಧಿ ಕೊಲೆಯಾದಾಗ ಮೊರಾರ್ಜಿ ದೇಸಾಯಿ ಮುಂಬಯಿ ಸರಕಾರದ ಗೃಹಸಚಿವರಾಗಿದ್ದರು. ಗಾಂಧಿ ಹತ್ಯೆಗೊಂಡ ಬಳಿಕ ಜನ ರೊಚ್ಚಿಗೆದ್ದಿದ್ದರು. ಮೊದಲೇ ಸಾವರ್ಕರ್ ಅವರನ್ನು ಅನ್ಯಾಯವಾಗಿ ಬಂಧಿಸಿ ಜೈಲಿಗಟ್ಟಿದ್ದರಿಂದ ಜನರಿಗೆ ಅವರಮೇಲೆಯೂ ಸಂಶಯ ಉಂಟಾಗಿ ಜೀವಬೆದರಿಕೆಯಿತ್ತು. ಈ ಬಗ್ಗೆ ಸರಕಾರಕ್ಕೆ ಸಾಕಷ್ಟು ಮನವರಿಕೆ ಮಾಡಿದರೂ ಮೊರಾರ್ಜಿ ದೇಸಾಯಿ ಕ್ಯಾರ್ ಮಾಡಲೇ ಇಲ್ಲ. ಈ ವೇಳೆ ಸಾವರ್ಕರ್ ಮನೆಗೆ ದಾಳಿ ನಡೆಯಿತು. ಸರಕಾರ ರಕ್ಷಣೆ ನೀಡದಿರುವುದನ್ನು ಗಮನಿಸಿದ ಅವರ ಬಂಧುಗಳು, ಅಭಿಮಾನಿಗಳು ಮನೆಗೆ ರಕ್ಷಣೆ ನೀಡಿದರು.

ಸಾವರ್ಕರರ ತಮ್ಮ ನಾರಾಯಣ ರಾಯನನ್ನು ಪುಂಡರ ಗುಂಪೊಂದು ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ, ಅವರು ಒಂದೂವರೆ ವರ್ಷ ಹಾಸಿಗೆ ಹಿಡಿದು ಅನ್ಯಾಯವಾಗಿ ತೀರಿಕೊಂಡರು. ಸಾವರ್ಕರರ ಅಂಗರಕ್ಷಕನಾಗಿದ್ದ ಅಪ್ಪಾ ರಾಮಚಂದ್ರ ಕಾಸರ ಎಂಬವರಿಗೆ ಪೊಲೀಸರು ಎಷ್ಟು ಚಿತ್ರಹಿಂಸೆ ನೀಡಿದರೆಂದರೆ  ಜೈಲಿನಲ್ಲಿ ಉಗುರುಗಳನ್ನು ಕಿತ್ತು ನಾನಾ ರೀತಿಯಲ್ಲಿ ಹಿಂಸಿಸಿ ಗಾಂಧಿ ಹತ್ಯೆಯನ್ನು ಒಪ್ಪುವಂತೆ ಬಲವಂತ ಪಡಿಸಿದರು. ಆದರೆ ಪುಣ್ಯಾತ್ಮ ಶಿಕ್ಷೆಗೆ ಬಗ್ಗಲೇ ಇಲ್ಲ. ಏನೇ ತಂತ್ರ ಹೂಡಿದರೂ ಸಾವರ್ಕರ್‍ನನ್ನು ಕೊಲೆಗಾರ ಎಂದು ರೂಪಿಸಲು ಕಾಂಗ್ರೆಸಿಗೆ ಸಾಧ್ಯವೇ ಆಗಲಿಲ್ಲ. ಕೊನೆಗೂ ಸಾವರ್ಕರ್ ನಿರ್ದೋಶಿ ಎಂದು ಬಿಡುಗಡೆಗೊಳ್ಳಬೇಕಿತ್ತು.

ಆದರೆ ಈ ನೆಹರೂ ಏನು ಮಾಡಿದ ಗೊತ್ತೇ? ತೀರ್ಪು ಬಂದ ತಕ್ಷಣ ಪಂಜಾಬ್ ನ್ಯಾಯಾಲಯದ ಮೂಲಕ, ಸಾವರ್ಕರ್ ಅಪಾಯ ಕಾರಿ ಎಂದು ಪಂಜಾಬ್ ಮತ್ತು ದೆಹಲಿಯಲ್ಲಿ ಮೂರು ತಿಂಗಳು ಬಹಿಷ್ಕಾರ ಹಾಕಲಾಗಿದೆ ಎಂದು ಮತ್ತೊಂದು ತೀರ್ಪು ಹೊರಡಿಸಿ, ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿ ಪೆÇಲೀಸ್ ಸರ್ಪ ಗಾವಲಿನಲ್ಲಿ ಮುಂಬಯಿಗೆ ಕಳಿಸಿದ! 1950ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಸಾರ್ವಕರ್ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್‍ರನ್ನು ಬಂಧಿಸಿ ಸರ್ಕಾರ ಬೆಳಗಾವಿ ಜೈಲಿಗೆ ಕಳಿಹಿಸಲಾಯಿತು. ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾರಣ ಅವರಿಗೆ ಸರಕಾರ ಕಿಂಚಿತ್ತೂ ಧನಸಹಾಯ ನೀಡಲಿಲ್ಲ. ಅವರು ಸಾಯುವವರೆಗೂ ಅವರ ಮೇಲೆ  ಗೂಢಚಾರಿಕೆ ನಡೆಸಲಾಯಿತು.

ಸಾವರ್ಕರ್ ಅವರನ್ನು ಆರೋಪಿಯೆಂದು ಸಾಬೀತುಪಡಿಸಿ ನೇಣುಗಂಭಕ್ಕೆ ಹಾಕಲು ಇನ್ನಿಲ್ಲದಂತೆ ಪ್ರಯತ್ನಿಸಲಾಗಿತ್ತಿತ್ತು. ಆದರೆ ಸಾವರ್ಕರ್ ಅವರ ಸತ್ಯಸಂದತೆ, ನಿಷ್ಠೆ, ಜೊತೆಗೆ ಕಷ್ಟವನ್ನು ಸಹಿಸಿ, ಎದುರಿಸಬಲ್ಲೆ ಎಂಬ ಛಲ ಎಲ್ಲವೂ ಅವರನ್ನು ಆರೋಪಮುಕ್ತರನ್ನಾಗಿಸಿತ್ತು. ಆದರೆ ಎಷ್ಟೂಂತ ಕಷ್ಟಗಳನ್ನು ಸಹಿಸುವುದು? ಜೊತೆಗೆ ಹಿಂದೂಗಳಿಗೆ ಹಿಂದೂ ಎಂಬ ಹೆಸರನ್ನು ನೀಡಿದ ಸಿಂಧು ನದಿ, ಹಿಂದೂಗಳಿಗೆ ವೇದಗಳನ್ನಿತ್ತ ಆರ್ಯಾವರ್ತ ಪ್ರದೇಶ ಭಾರತದ ಹೊರಗೆ ಉಳಿದು ಪಾಕಿಸ್ತಾನ ಎಂಬ ಬೇರೆಯೇ ರಾಷ್ಟ್ರ ನಿರ್ಮಾಣವಾದದ್ದು ಅವರಿಗೆ ಸಹ್ಯವಾಗಿರಲಿಲ್ಲ. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ನೆಹರೂ ಸರ್ಕಾರ ತೋರಲಿಲ್ಲ. ಇಲ್ಲಿನ ವ್ಯವಸ್ಥೆಗೆ ತೀವ್ರ ನೊಂದುಕೊಂಡ ಸಾವರ್ಕರ್ 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ 1966ರ ಫೆಬ್ರುವರಿ 26 ರಂದು ಆತ್ಮಾರ್ಪಣೆಗೈದರು ಛೇ…

Postcard Team

Tags

Related Articles

FOR DAILY ALERTS
Close