ನೆಹರು ದೇಶದ ಪ್ರಥಮ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ದೇಶದಲ್ಲಿ ಕಾಂಗ್ರೆಸ್ ‘ಗರೀಬಿ ಹಟಾವೋ’ ಅನ್ನುತ್ತಲೇ ಬಂದಿತು.
ಮೂರು ಬಾರಿಪ್ರಧಾನಿಯಾದ ನೆಹರು ಬಡತನ ನಿರ್ಮೂಲನೆಗೆ ಯಾವ ಪ್ರಯತ್ನವೂ ಪಡಲಿಲ್ಲ.
ಮುಂದೆ ಆತನ ಮಗಳು ಇಂದಿರಾ ಗಾಂಧಿ ಪ್ರಧಾನಿಯಾದಳು, ಆಕೆಯೂ ಗರೀಬಿಹಟಾವೋ ಘೋಷಣೆ ಮಾಡಿದಳು, ನಂತರ ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಹೀಗೆ ದೇಶವನ್ನಾಳಿದ ಕಾಂಗ್ರೆಸ್ಸಿಗರು ‘ಗರೀಬಿಹಟಾವೋ’ ಅನ್ನೋ ಘೋಷಣೆಯನ್ನೇ 70 ವರ್ಷಗಳಿಂದ ಮಾಡಿಕೊಂಡು ಬಂದರು.
ಈಗ ಅಮೇರಿಕಾದಲ್ಲಿ ಹೋಗಿ ಭಾರತದ ಬಗ್ಗೆ ತುಚ್ಛವಾಗಿ ಮಾತನಾಡಿ, ಏನೋಮಾತನಾಡಲು ಹೋಗಿ ಇನ್ನೇನನ್ನೋ ಹೇಳಿ ನಗೆಪಾಟಲಿಗೀಡಾಗುತ್ತಿರೋ ರಾಹುಲ್ ಗಾಂಧಿ ಕೂಡ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ನಾನೇ ಮುಂದಿನಪ್ರಧಾನಮಂತ್ರಿ ಅಭ್ಯರ್ಥಿಯಂತ ಸ್ವಯಂ ಘೋಷಿಸಿಕೊಳ್ಳುತ್ತ ಹೇಳುತ್ತಿರೋದೂ ‘ಗರೀಬಿ ಹಟಾಯೇಂಗೆ’ ಅನ್ನೋ ಘೋಷಣೆಯನ್ನೆ!
ಆದರೆ ಇವರೆಲ್ಲರ ಮಧ್ಯೆ ಭಿನ್ನವಾಗಿನಿಲ್ಲುವ ನಾಯಕ, ದಿನಕ್ಕೆ 18 ಗಂಟೆಗಳ ಕಾಲ ದುಡಿಯುತ್ತಿರುವ ದೇಶದ ಪ್ರಧಾನಿ ಮೋದಿಜೀ ಮಾತ್ರ ಕಾಂಗ್ರೆಸ್ ನವರು ಮಾಡಿದ್ದ ‘ಗರೀಬಿ ಹಟಾವೋ’ಘೋಷಣೆಯನ್ನ ಅಕ್ಷರಶಃ ಪಾಲಿಸಿ ದೇಶದ ಬಡವರನ್ನ ಆರ್ಥಿಕವಾಗಿ ಸಬಲೀಕರಣಗೊಳಿಸಲು ಮುಂದಾಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಪ್ರಧಾನ್ ಮಂತ್ರಿಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)’ ಘೋಷಣೆ ಮಾಡಿ ದೇಶದ ಪ್ರತಿ ಮನೆಗೂ ವಿದ್ಯುತ್ ಸೌಲಭ್ಯ ಕಲ್ಪಿಸಲು ಯೋಜನೆಯೊಂದನ್ನ ಘೋಷಿಸಿದ್ದಾರೆ.
ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಪಂಡಿತ್ ದೀನ್ ದಯಾಳ್ ‘ಊರ್ಜಾ ಭವನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಧಾನ್
ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)’ ಘೋಷಣೆ ಮಾಡಿದ್ದಾರೆ.
ಈ ಯೋಜನೆಯ ಅನ್ವಯ ಪ್ರತಿಯೊಂದು ಮನೆಗೆ 5 LED Bulb,1 ಫ್ಯಾನ್,ಬ್ಯಾಟರಿ ವಿತರಣೆ ಮಾಡಲಾಗುತ್ತದೆ.
2019 ರ ಮಾರ್ಚ್ 31 ರೊಳಗೆ ಪ್ರತಿ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ(ಸೌಭಾಗ್ಯ) 16,320 ರೂ. ಮೊತ್ತದ ಯೋಜನೆಯಾಗಿದೆ.
ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60 ರಷ್ಟುಅನುದಾನ ನೀಡಲಿದೆ. ರಾಜ್ಯಗಳು ಶೇ 30 ರಷ್ಟು ಅನುದಾನ ನೀಡಬೇಕು.
ಸಾಲದ ಮೂಲಕ ಉಳಿದ ಶೇ. 10 ರಷ್ಟು ವೆಚ್ಚವನ್ನು ಭರಿಸಲಾಗುತ್ತದೆ.
2011ರಜನಗಣತಿ ಪ್ರಕಾರ ಈ ಯೋಜನೆಯ ಪ್ರಕಾರ ಈ ಯೋಜನೆಗೆ APL ಕಾರ್ಡ್ ಹೊಂದಿರುವ ಕುಟುಂಬಗಳಿಗೆ 500 ರೂ.ಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುವುದು.
BPL ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆಯಂತೆ.
ಎಪಿಎಲ್ ಕುಟುಂಬಗಳು ವಿದ್ಯುತ್ ಸಂಪರ್ಕ ಒದಗಿಸಲು ಪಾವತಿ ಮಾಡಬೇಕಾದಹಣವನ್ನು 10 ಕಂತುಗಳ ವಿದ್ಯುತ್ ಬಿಲ್ನಲ್ಲಿ ಪಡೆಯಲಾಗುತ್ತದೆ. ಮನೆಯಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸುವ ಅರ್ಜಿಯನ್ನು ವಿತರಣೆ ಮಾಡಲಾಗುತ್ತದೆಯಂತೆ.
ಗ್ರಾಮಪಂಚಾಯಿತಿಗಳು, ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕ ಸಂಸ್ಥೆಗಳು ಅರ್ಜಿಗಳನ್ನು ವಾಪಸ್ ಪಡೆಯವುದು, ಬಿಲ್ ನೀಡುವುದು, ಬಿಲ್ ಪಾವತಿ ಮುಂತಾದಕೆಲಸಗಳಿಗೆ ಸಹಾಯ ಮಾಡಲಿವೆ.
ಇದಕ್ಕೂ ಮೊದಲು ಮೋದಿಜೀ ದೇಶದಲ್ಲಿನ ಇನ್ನೂ ವಿದ್ಯುತ್ ಕಾಣದ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಕಾರ್ಯಕ್ಕೆ ಕೈ ಹಾಕಿದ್ದು ಬಹುತೇಕ ಹಳ್ಳಿಗಳಲ್ಲಿ ಕಾಣದ ಕರೆಂಟ್ ಬಂದು ತಲುಪಿದೆ.
ಸ್ವಚ್ಛ ಭಾರತ್ ಮೂಲಕ ದೇಶವನ್ನ ಸ್ವಚ್ಛಗೊಳಿಸುವ ಕೈಂಕರ್ಯಕ್ಕೆ ಕೈ ಹಾಕಿರುವ ಮೋದಿಜೀ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಹಕ್ಕುಗಳು ದೊರೆಯಬೇಕೆಂಬ ಸಂಕಲ್ಪವನ್ನ ತೊಟ್ಟಿದ್ದಾರೆ.
ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿರುವಸಿದ್ದರಾಮಯ್ಯ 1 ರೂಪಾಯಿಗೆ ನಾಯಿಯೂ ಮೂಸದ ಅಕ್ಕಿಯನ್ನ ಕೊಟ್ಟು, ಅವ್ಯವಸ್ಥೆಯ ಆಗರದಂತಿರುವ ಇಂದಿರಾ ಕ್ಯಾಂಟೀನ್ ಎಂಬ ಕ್ಯಾಂಟೀನ್’ಗೆ ಚಾಲನೆ ನೀಡಿ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ದಲ್ಲಿನ 3000 ಬಡ ವಿದ್ಯಾರ್ಥಿಗಳ ಅನ್ನ ಕಸಿದುಕೊಂಡು ‘ಗರೀಬಿ ಹಟಾವೋ’ ಎಂಬ 70 ವರ್ಷಗಳ ಘೋಷಣೆಯನ್ನಮುಂದುವರೆಸಿದ್ದಾರೆ.
ಕಾಂಗ್ರೆಸ್ ಇನ್ನೂ 50 ವರ್ಷ ದೇಶವಾಳಿದರೂ ಅವರು ಹೇಳೋ ಘೋಷಣೆ ಒಂದೇ ಅದುವೇ ‘ಗರೀಬಿ ಹಟಾವೋ’.
ಅದು ಯಾರ ಗರೀಬಿಹಟಾವೋ ಅನ್ನೋದು ಮಾತ್ರ ಇನ್ನೂ ಅರ್ಥವಾಗಿಲ್ಲ. ಬಹುಶಃ ತಮ್ಮ ಪಕ್ಷದ ನಾಯಕರುಗಳ ‘ಗರೀಬಿ ಹಟಾವೋ’ಗೋಸ್ಕರ ಅವರು ಆ ರೀತಿಯ ಘೋಷಣೆಯಾವಾಗಲೂ ಹೇಳ್ತಿರ್ತಾರೋ ಏನೋ!!
ರಾಜ್ಯದಲ್ಲಿ ನಡೆಯುತ್ತಿರುವ ಐಟಿ ಅಧಿಕಾರಿಗಳ ದಾಳಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರ ಮನೆಯಲ್ಲಿ ಸಿಕ್ಕ ಕೋಟಿಕೋಟಿ ಹಣವನ್ನ ನೋಡಿದರೆ ಅರ್ಥವಾಗುತ್ತೆ ಇವರು ಇಲ್ಲೀವರೆಗೂ ಯಾರ ಗರೀಬಿ ಹಟಾವೋ ಮಾಡಿದರಂತ!!
– Vinod Hindu Nationalist