ಇಂತಹ ದೊಡ್ಡ ಹಗರಣವನ್ನು ಸಾರ್ವಜನಿಕರು ಏಕೆ ಗಮನಿಸುತ್ತಿಲ್ಲ? ಅಧಿಕಾರದಲ್ಲಿರುವಾಗ 2ಜಿ ಹಗರಣದಲ್ಲಿ ಕಾಂಗ್ರೆಸ್ 170000000000 ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ನಿಮಗೆ ತಿಳಿದಿದೆಯೇ? ಈ ಹಣದಿಂದ ಭಾರತವು ಹಲವಾರು ಬುಲೆಟ್ ರೈಲುಗಳನ್ನು ಖರೀದಿಸಬಹುದಿತ್ತು. ಇದರಿಂದ ನಮ್ಮ ಭಾರತದ ಸಾರಿಗೆ ವ್ಯವಸ್ಥೆ ಬಲಗೊಳ್ಳಬಹುದಿತ್ತು. ಆದರೆ ಕಾಂಗ್ರೆಸ್ ಮಾತ್ರ ಅಭಿವೃದ್ಧಿಯನ್ನು ವಿಫಲಗೊಳಿಸಿದೆ!!
ಸೋನಿಯಾ ಗಾಂಧಿ ಸರಕಾರದಲ್ಲಿ 170000000000 ಕೋಟಿ ನಷ್ಟವನ್ನು ಭಾರತಕ್ಕೆ ಉಡುಗೊರೆಯಾಗಿ ನೀಡಿದರೆ, ಸೋನಿಯಾ ಗಾಂಧಿ ನೇತೃತ್ವದ ಸರಕಾರವು ಲೂಟಿ ಮಾಡಿದ ಹಣವಾದರೂ ಎಷ್ಟು? ಇದು ನಮ್ಮ ಕಲ್ಲನೆಗೂ ಮೀರಿದ ಹಣವನ್ನು ಕಾಂಗ್ರೆಸ್ ಸರಕಾರ ಹಣವನ್ನು ಲೂಟಿ ಮಾಡಿದೆ.!!
ಪೋಷಕರಾಗಿ ನಿಮ್ಮ ಮಗುವು 10 ನೇ ತರಗತಿ ಕಿರು ಪರೀಕ್ಷೆಯಲ್ಲಿ ಒಂದು ವೇಳೆ ಅನುತ್ತೀರ್ಣರಾದರೆ ಇಂಜಿನಿಯರ್, ಡಾಕ್ಟರ್ ಅಥವಾ ಚಾರ್ಟೆಡ್ ಅಕೌಂಟ್ ಆಗುವ ಕನಸನ್ನು ಕಾಣಬೇಡಿ ಅಂತಾ ಮಕ್ಕಳಿಗೆ ಹೇಳಿಕೊಡುತ್ತೀರಾ? ಅಥವಾ ಮತ್ತೆ ಉತ್ತಮ ಅಂಕವನ್ನು ಪಡೆಯುವಂತೆ ಪ್ರೇರೆಪಿಸುತ್ತೀರಾ? ಆಶ್ಚರ್ಯರಾಗಬೇಡಿ!! ಯಾಕೆ ಈ ರೀತಿ ಪ್ರಶ್ನೆ ಕೇಳುತ್ತಿದ್ದಾರೆ ಅಂತಾ? ಹೌದು ಕಾಂಗ್ರೆಸ್ ಸರಕಾರ ಮಾತ್ರ ನಿಮ್ಮ ಮಕ್ಕಳು ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದರೆ ಇಂಜಿನಿಯರ್, ಡಾಕ್ಟರ್ ಅಥವಾ ಚಾರ್ಟೆಡ್ ಅಕೌಂಟ್ ಆಗುವ ಕನಸನ್ನು ಕಾಣಬೇಡಿ ಈ ರೀತಿ ಕನಸು ಕಾಣುವುದನ್ನು, ಉದ್ಧೇಶಗಳನ್ನು ನಿಲ್ಲಿಸುವಂತೆ ಹೇಳುತ್ತದೆ.!!
ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಟಿವಿ ಶೋಗಳಲ್ಲಿ ಬುಲೆಟ್ ಟ್ರೈನ್‍ಗಳ ಬಗ್ಗೆ ಕಾಂಗ್ರೆಸ್ ಸರಕಾರ ಮೋದಿ ಬಗ್ಗೆ ಟೀಕೆ ಮಾಡುತ್ತಿದೆ. ಪ್ರಧಾನಿ ಮೋದಿಯನ್ನು ನೀವೊಬ್ಬ ಮೂರ್ಖ ಎನ್ನುವಂತಹ ಟೀಕೆಯನ್ನು ಕೂಡಾ ಮಾಡುತ್ತಿದ್ದಾರೆ. ಈ ಸುದ್ಧಿಗಳು ಒಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಭಡ್ತಿ ಪಡೆದಿದೆ ಮತ್ತು ಇದು ಈಗ ಪ್ರತೀ ರೈಲು ಮಾರ್ಗಗಳ ಬಗ್ಗೆ ಟ್ವೀಟ್‍ಗಳು ಕೂಡಾ ಹರಿದಾಡುತ್ತಿದೆ. ಹಗರಣಗಳನ್ನು ಮಾಡುವ ಮೂಲಕ ಕೋಟಿ ಕೋಟಿ ಹಣವನ್ನು ವಂಚಿಸುವಾಗ ನಿಮಗೆ ನಾಚಿಕೆಯಾಗಬೇಕು ಸೋನಿಯಾ ಗಾಂಧಿ… ಪ್ರಧಾನಿ ಮೋದಿಯನ್ನು ಟೀಕಿಸುವ ಮೊದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ..
ಆದರೆ ಈ ರೈಲು ಮಾರ್ಗಗಳು ಸಾಮಾನ್ಯವಾಗಿರುವುದು ಒಂದು ವಿಷಯವಾಗಿದೆ. ರೈಲು ಅಪಘಾತ ಸಂಭವಿಸಿದರೆ ಇದು ಕೇವಲ ಅಜ್ಞಾತ ಪುರುಷರಿಂದ
ಸಂಭವಿಸುತ್ತದೆ ಎಂದು ಕಾರ್ಯರೂಪಕ್ಕೆ ಬಂದಿದೆ. ರೈಲ್ವೆ ಜಾಡುಗಳು ಸ್ಪಷ್ಟವಾಗಿ ಪರೀಕ್ಷಿಸಲ್ಪಟ್ಟ ನಂತರ ಇದು ಸ್ಪಷ್ಟವಾಗಿತ್ತು. ಈ ಅಪಘಾತಗಳ ಬಗ್ಗೆ ತನಿಖೆ
ಮಾಡುವ ಬದಲು ಕಾಂಗ್ರೆಸ್ ಪಕ್ಷವು ಭಾರತದಲ್ಲಿ ಅಭಿವೃದ್ಧಿಯ ಯೋಜನೆಗಳನ್ನು ಹಾಳು ಮಾಡುವಲ್ಲಿ ಸಿದ್ಧವಾಗಿದೆ.
ಶತಮಾನಗಳ ಹಿಂದೆ ನಾವು ಎತ್ತಿನ ಗಾಡಿಯಲ್ಲಿ ಚಲಿಸುತ್ತಿದ್ದೆವು ಮತ್ತು ನಮ್ಮ ಇತರ ಕೆಲಸಗಳಿಗೂ ನಾವು ಬಳಸುತ್ತಿದ್ದೆವು. ನಂತರ ನಾವು ಬಸ್, ಕಾರು ಬೈಕ್ ಹೀಗೆ ಹಲವಾರು ವಾಹನಗಳ ಬಳಕೆ ಮಾಡಲು ತಯಾರಾದೆವು. ಯಾವಾಗ ತಂತ್ರಜ್ಞಾನ ಬದಲಾಯಿತೋ ವಿಮಾನಗಳನ್ನು ಪರಿಚಯಿಸಲಾಯಿತು. ಆದರೆ ನಾವು ಕಾಂಗ್ರೆಸ್‍ನ ತರ್ಕವನ್ನು ನಾವು ಮಾತನಾಡುತ್ತಾ ಹೋದರೆ ನಾವು ಇನ್ನೂ ಎತ್ತಿನ ಗಾಡಿಯಲ್ಲಿಯೇ ಪ್ರಯಾಣಿಸುವ ರೀತಿಯಲ್ಲಿ ಚಿಂತಿಸಬೇಕಾಗುತ್ತದೆ.
ಕೆಳಗಿರುವ ಟ್ವೇಟ್ ಅನ್ನು ಗಮನಿಸಿದರೆ ಗುಜರಾತ್‍ನಲ್ಲಿ ರೈಲು ಹಳಿ ತಪ್ಪಿಸಲು ಪೂರ್ವ ನಿಯೋಜಿತವಾಗಿ ಯಾರೋ ಯೋಜನೆಯನ್ನು ಮಾಡಿದ್ದಾರೆಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲ ನಾವು ಗಮನಿಸಬೇಕಾದ ಅಂಶವೆಂದರೆ ಗುಜರಾತ್‍ನಲ್ಲಿ ಶೀಘ್ರವಾಗಿ ಚುನಾವಣೆಯನ್ನು ಎದುರಿಸಬೇಕು ಎನ್ನುವ ಉದ್ಧೇಶವನ್ನಿಟ್ಟು ಕೊಂಡು ರೈಲು ಹಳಿ ತಪ್ಪಿ ಅಘಾತವಾಗಿರುವುದನ್ನು ಬಿಜೆಪಿಗೆ ಕಾಂಗ್ರೆಸ್ ಕೈ ತೋರುತ್ತಿದೆ.. ಬಿಜೆಪಿ ನೇತೃತ್ವದ ರಾಜ್ಯದಲ್ಲಿ ನಿಯಮಿತ ರೈಲು ಹಳಿ ತಪ್ಪಿ ಅಪಘಾತ ಸಂಭವಿಸಿದಾಗ ಅದನ್ನು ಕಾಂಗ್ರೆಸ್ ಸರಕಾರ ಲಾಭ ಪಡೆಯುವಲ್ಲಿ ಯಶಸ್ವಿಯಾಗುತ್ತಿದೆ ಎಂಬೂವುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ.
ಕೆಳಗಿನ ಟ್ವೀಟ್‍ನಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿರಬೇಕಾದರೆ ರೈಲ್ವೆ ಹಳಿ ತಪ್ಪಿದೆ ಎಂಬೂವುದು ತೋರಿಸಿದರೂ ಯಾರೂ ಅದರ ಬಗ್ಗೆ ತಲೆಕೆಡಿಸುವುದಿಲ್ಲ.
2009 ರಿಂದ 2015ರವರೆಗೆ 803 ರೈಲುಗಳು ಅಪಘಾತಕ್ಕೀಡಾಗಿದ್ದು, 620 ಜನ ಅಸುನೀಗಿದ್ದಾರೆ ಹಾಗೂ 1855 ಜನರು ಗಾಯಗೊಂಡಿದ್ದಾರೆ. ಆದೆರೆ ಶ್ರೀಮತಿ ಸೋನಿಯಾ ಗಾಂಧಿ ಮಾತ್ರ ಯಾಕೆ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಿಲ್ಲ ಎಂಬೂದೇ ಎಲ್ಲರಿಗೂ ಆಶ್ಚರ್ಯಕರವಾದ ಸಂಗತಿ.
ಮೋದಿ ಅಧಿಕಾರಕ್ಕೆ ಬಂದ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷ ಒಂದಲ್ಲ ಒಂದು ತೊಂದರೆಯನ್ನು ಸೃಷ್ಟಿ ಮಾಡುತ್ತಾನೇ ಇದೆ. ಕೇವಲ ಇದಲ್ಲದೆ ಎಲ್ಲಿ ಅಭಿವೃದ್ಧಿ
ಕಾರ್ಯಗಳು ನಡೆಯುತ್ತದೆಯೋ ಅದನ್ನು ಸ್ಥಗಿತಗೊಳಿಸುವಲ್ಲಿ ಕಾಂಗ್ರೆಸ್ ಸರಕಾರದ್ದು ಎತ್ತಿದ ಕೈ… ಸಂಸತ್ ಅಧಿವೇಶನವನ್ನು ಅಸಭ್ಯ ಚರ್ಚೆಗೆ ಅಡ್ಡಪಡಿಸುವಲ್ಲಿ ಕೂಡಾ ಇದರ ಪಾತ್ರ ಅಗಾಧ… ಭಾರತದಕ್ಕೆ ಕಳಂಕ ತರುವಲ್ಲಿ ಕಾಂಗ್ರೆಸ್ ಸರಕಾರ ಅದೆಷ್ಟೋ ಅವಿರತ ಪ್ರಯತ್ನ ಮಾಡುತ್ತಿದೆ. ಯಾಕೆಂದರೆ ಭಾರತದ ಅಭಿವೃದ್ಥಿಯನ್ನು ಕಾಂಗ್ರೆಸ್ ಸರಕಾರ ಎಂದಿಗೂ ಸಹಿಸುವುದಿಲ್ಲ.
ನಮ್ಮ ದೇಶದ ಅಭಿವೃದ್ಧಿಯನ್ನು ಮಾಡುವ ಬದಲು ಪ್ರಸ್ತುತ ಮಯನ್ಮಾರ್‍ನಲ್ಲಿ ಹಿಂದೂಗಳು ಮತ್ತು ಬೌದ್ಧರನ್ನು ಹತ್ಯೆ ಮಾಡಿದ ರೋಹಿಂಗಾ ಮುಸ್ಲಿಮರನ್ನು ಉಳಿಸುವಲ್ಲಿ ಸುಪ್ರಿಮ್ ಕೋರ್ಟ್ ಮೆಟ್ಟಿಲೇರಿ ನ್ಯಾಯವನ್ನು ಕೇಳುತ್ತಿದೆ.!! ಅವರನ್ನು ಇಲ್ಲೇ ಉಳಿಸುವಂತೆ ಅಂಗಲಾಚಿ ಬೇಡುತ್ತಿದೆ…. !
ನಮ್ಮ ಭಾರತವನ್ನು ಉಳಿಸುವ ಏಕೈಕ ಪರಿಹಾರವೆಂದರೆ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಅಧಿಕಾರದಿಂದ
ಕಿತ್ತೊಗೆಯುವುದು. ಇಲ್ಲದಿದ್ದರೆ ನಮಗೆ ಇಲ್ಲಿ ನೆಲೆ ಇಲ್ಲದಂತಾಗುತ್ತದೆ ಅಷ್ಟೆ. ಕಾಂಗ್ರೆಸ್ ಮತ್ತೆ ಏನಾದರೂ ಅಧಿಕಾರವನ್ನು ಪ್ರವೇಶಿಸಿದರೆ ಭಾರತವು ಮತ್ತುಮ್ಮೆ
ಹಗರಣಗಳ ಮತ್ತು ಗಲಭೆಗಳ ಕೇಂದ್ರವಾಗುತ್ತದೆ ಎಂಬುವುದಕ್ಕೆ ಬೇರೆ ಮಾತಿಲ್ಲ.
-ಶೃಜನ್ಯಾ