ಪ್ರಚಲಿತ

ಹಂತಕ ಸಚಿವ ವಿನಯ್ ಕುಲಕರ್ಣಿ ತಾನು ಮಾಡಿದ ಕೊಲೆಯನ್ನು ಮುಚ್ಚಿಹಾಕಲು ಮಾಡಿದ ಐನಾತಿ ಕೆಲಸವೇನು ಗೊತ್ತೇ?

ಇದುವರೆಗೆ ಲಿಂಗಾಯಿತ ಪ್ರತ್ಯೇಕ ಧರ್ಮವಾಗಬೇಕು ಎಂದು ಹೋರಾಟ ನಡೆಸುತ್ತಿದ್ದ ರೌಡಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಮುಖಂಡನನ್ನು ಕೊಲ್ಲಿಸುವ ಮೂಲಕ ತನ್ನ ಕೈಗಳಲ್ಲಿ ರಕ್ತದ ಕಲೆಯನ್ನು ಶಾಶ್ವತವಾಗಿ ಮೆತ್ತಿಸಿಕೊಂಡುಬಿಟ್ಟ. ಈತನ ಗೂಂಡಾಗಿರಿಯಿಂದ ಈತನ ಕ್ಷೇತ್ರದ ಜನರು ರೋಸಿಹೋಗಿದ್ದಾರೆ. ಆರಂಭದಲ್ಲಿ ಲೋಕಲ್ ರೌಡಿಯಂತೆ ವಿನಯ್ ಕುಲಕರ್ಣಿ ಸಣ್ಣಪುಟ್ಟ ಗೂಂಡಾಗಿರಿ ಮಾಡುತ್ತಾ ಊರಲ್ಲಿ ಭಯ ಹುಟ್ಟಿಸುತ್ತಿದ್ದ. ಆಮೇಲೆ ಈತನಿಗೆ ಸಿಕ್ಕಿದ್ದು ಲಿಂಗಾಯಿತ ಪ್ರತ್ಯೇಕ ಧರ್ಮವಾಗಬೇಕೆಂಬ ವಿಚಾರ. ಇದನ್ನೇ ಹಿಡಿದು ಜಗ್ಗುತ್ತಿದ್ದ ಗೂಂಡಾ ಕುಲಕರ್ಣಿ ಮುಂದಿನ ಓಟಿಗಾಗಿ ಸ್ಕೆಚ್ ಹಾಕುತ್ತಿದ್ದ. ಆದರೆ ಇದು ವರ್ಕೌಟ್ ಆಗುವುದಿಲ್ಲ ಎಂದು ಅರಿತಿದ್ದ ಕುಲಕರ್ಣಿ ತನ್ನ ಪಾಡಿಗೆ ತಾನಿದ್ದ. ಇದೀಗ ಒಂದು ಕೊಲೆಯಲ್ಲಿ ಶಾಮೀಲಾಗಿರುವ ಕುಲಕರ್ಣಿ ಇನ್ನು ಮುಂದೆ ಅದ್ಯಾವ ಮುಖ ಹೊತ್ತು ಲಿಂಗಾಯಿತ ಧರ್ಮಕ್ಕಾಗಿ ಹೋರಾಡುತ್ತಾನೆ?

ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡರ ಕೊಲೆಯಾಗಿ ಬಿಡುತ್ತದೆ. ಈ ಕೊಲೆಗೆ ಸಂಬಂಧಿಸಿ ಒಂದಷ್ಟು ಮಂದಿ ಕಾಂಗ್ರೆಸಿಗರು ಅರೆಸ್ಟ್ ಆಗಿದ್ದರು. ಆ ಬಳಿಕ ಈ ಕೊಲೆಯಲ್ಲಿ ವಿನಯ್ ಕುಲಕರ್ಣಿ ಹೆಸರು ಕೇಳಿಬಂದಿತು. ತನ್ನ ಹೆಸರು ಬಯಲಾಗುತ್ತಿದ್ದಂತೆ ಬೆಚ್ಚಿಬಿದ್ದ ಕುಕರ್ಣಿ ಐನಾತಿ ಕೆಲಸವೊಂದನ್ನು ಮಾಡಿಬಿಟ್ಟ.. ಯೋಗೀಶ್ ಗೌಡರ ಕೊಲೆ ಪ್ರಕರಣವನ್ನು ನಿಭಾಯಿಸುತ್ತಿದ್ದ ವಕೀಲ ಆನಂದ್ ಎಂಬವರಿಗೆ ಕರೆ ಮಾಡಿ ಈ ಪ್ರಕರಣವನ್ನು ನಿಭಾಯಿಸಬಾರದೆಂದು ಬೆದರಿಕೆಯೊಡ್ಡಿದ್ದಷ್ಟೇ ಅಲ್ಲದೆ ನನಗೆ ಏನು ಮಾಡ್ಬೇಕು ಎಂದು ಗೊತ್ತಿದೆ ಎಂದು ಹೆದರಿಸಿದ್ದಾನೆ.

ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ, ಯೊಗೇಶ್ ಕುಟುಂಬದ ಪರವಾಗಿ ವಕೀಲ ಆನಂದ್ ವಕಾಲತ್ತು ನಡೆಸುತ್ತಿದ್ದಾರೆ. ಆದರೆ ಈ ಪ್ರಕರಣವನ್ನು ಆನಂದ್ ಅವರು ನಿಭಾಯಿಸಬಾರದು ಎಂದು ಸಚಿವ ವಿನಯ್ ಕುಲಕರ್ಣಿ ಕರೆ ಮಾಡಿ ಬೆದರಿಕೆಯೊಡ್ಡಿದ್ದಾನೆ. ಇದರ ಆಡಿಯೋ ಕ್ಲಿಪ್ ಮಾಧ್ಯಮಗಳಿಗೆ ದೊರಕಿದ್ದು, ಕುಲಕರ್ಣಿಯ ಬಂಡವಾಳ ಬಟಾಬಯಲಾಗಿದೆ.
ಅಡಿಯೊ ಕ್ಲಿಪ್‍ನಲ್ಲಿ ಸಚಿವ ವಿನಯ್ ಕುಲಕರ್ಣಿ ವಕೀಲ ಆನಂದ್ ರೊಂದಿಗೆ ಮಾತನಾಡುತ್ತಾ, ಸಹಾಯ ಮಾಡಿದ್ಯಾಕೆ, ಸಹಾಯ ಮುಂದುವರಿಸಬೇಡ ಎಂದು ಬೆದರಿಕೆಯೊಡಿದ್ದ ಅಡಿಯೋವನ್ನು ಕನ್ನಡ ಸುದ್ದಿವಾಹಿನಿಗಳು ಪ್ರಸಾರ ಮಾಡಿದೆ. 500-1000 ರೂಪಾಯಿ ಫೀಸ್ ಕೊಡ್ತಾರೆ. ಅದಕ್ಕೆ ಸಹಾಯ ಮಾಡಿದ್ದೀನಿ ಎಂದು ಹೆದರಿ ಆನಂದ್ ಉತ್ತರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕುಲಕರ್ಣಿ ಪಕ್ಕಾ ಲೋಕಲ್ ಲಾಂಗ್ವೇಜ್ ಬಳಸಿಕೊಂಡು ಥೇಟ್ ರೌಡಿಯಂತೆ, `ಮಂತ್ರಿ ಪದವಿ ಇದ್ದರೆ ಒಂದು ಹೋದ್ರೆ ಒಂದು.. ನಾನು ನೋಡ್ಕೋತಿನಿ’ `ನಾನು ಸುಮ್ಮನೆ ಕುಳಿತಿಲ್ಲ, ನಂಗೂ ಗೊತ್ತು ಏನ್ ಮಾಡಬೇಕು ಅಂತ’ `ಯಾವ ಸೂ… ಮಕ್ಕಳು ಬರ್ತಾರೆ ಬರಲಿ’ ಎಂದು ಆವಾಜ್ ಹಾಕಿದ್ದಾನೆ.

ಈ ಬಗ್ಗೆ ಸ್ವತಃ ವಕೀಲ ಆನಂದ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಚಿವರಿಂದ ತಮಗೆ ಬೆದರಿಕೆ ಇದೆ, ನಿನ್ನೆ ನನ್ನನ್ನು ನಾಲ್ಕು ಕಾರುಗಳಲ್ಲಿ ಕೆಲವು ಅಪರಿಚಿತರು ಧಾರವಾಡದಿಂದ ಹಂಗರಕಿವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ. ನಾನು ಹೆದರಿಕೆಯಿಂದಲೇ ಮನೆಗೆ ಹೋದೆ. ನಾನು ಹತ್ಯೆಯಾದ ಯೋಗೀಶ್ ಅವರ ಕುಟುಂಬಕ್ಕೆ ಕಾನೂನು ನೆರವು ನೀಡುತ್ತಿದ್ದೆ. ಇದಕ್ಕೆ ಸಚಿವರಿಂದ ವಿರೋಧ ವ್ಯಕ್ತವಾಗಿತ್ತು. ನನಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದೆಲ್ಲಾ ನಿಂದಿಸಿದ್ದಾರೆ. ಹಾಗಾಗಿ ಕೂಡಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಆನಂದ್ ಆಗ್ರಹಿಸಿದ್ದಾರೆ.

ಒಟ್ಟಾರೆ ಕುಲಕರ್ಣಿ ಒಂದು ಕೊಲೆಯನ್ನು ಮುಚ್ಚಲು ಯಾವ ಮಟ್ಟಕ್ಕೂ ಇಳಿಯುವುದಕ್ಕೆ ಸಿದ್ಧನೆಂಬುವುದನ್ನು ತೋರಿಸಿಕೊಟ್ಟಿದ್ದಾನೆ.

ಇವನು ಧಮ್ಕಿ ಹಾಕುವ ಆಡಿಯೋ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಹುಬ್ಬಳ್ಳಿ ಧಾರವಾಡದಲ್ಲಿ ವಾಹಿನಿಯೇ ಪ್ರಸಾರವಾಗದಂತೆ ತಡೆದುಬಿಟ್ಟಿದ್ದಾನೆ. ಏನೇ ತಿಪ್ಪೆರಲಾಗ ಹಾಕಿದರೂ ಕುಲಕರ್ಣಿಯ ಕೊಲೆಯೊಂದು ಕೊನೆಗೂ ಬೆಳಕಿಗೆ ಬಂದಿದೆ. ಕುಲಕರ್ಣಿಯ ಕೈವಾಡದ ಬಗ್ಗೆ ಹಿಂದೆಯೇ ಬಹಿರಂಗಗೊಂಡಿತ್ತು. ಹೇಗೆಂದರೆ ಯೋಗೀಶ್ ಗೌಡ ಕೊಲೆಗೆ ಎರಡು ದಿನಗಳ ಮುಂಚೆ ಅವರಿಗೊಂದು ಅನಾಮಧೇಯ ಪತ್ರವೊಂದು ಬಂದಿದ್ದು ಅದರಲ್ಲಿ ಕುಲಕರ್ಣಿಯ ಬಗ್ಗೆ ಎಚ್ಚರಿಕೆವಹಿಸುವಂತೆ ಸೂಚಿಸಲಾಲಗಿತ್ತು. “ನಮಸ್ಕಾರ ಯೋಗೀಶ್ ಗೌಡರಿಗೆ.. ನಿಮ್ಮ ಅಣ್ಣ ಉದಯ ಗೌಡ್ರ ಕೊಲೆ ಮಾಡಿಸಿದ್ದು ವಿನಯ ಕುಲಕರ್ಣಿ, ಎಚ್.ಕೆ. ಪಾಟೀಲ್. ಅವರು ಮತ್ತೆ ಅಂದರೆ ವಿನಯ ಕುಲಕರ್ಣಿ ಸಮಯ ನೋಡಿ ನಿಮ್ಮ ಕೊಲೆ ಮಾಡಿಸಬೇಕು ಅಂತ ಕಾಯುತ್ತಾ ಇದ್ದಾರೆ. ನಾನು ಯಾರು ಅಂತ ತಿಳಕೊಳ್ಳೋ ಪ್ರಯತ್ನ ಮಾಡಬೇಡಿ. ಮುಂದೆ ನಿಮಗೆ ಎಲ್ಲ ರೀತಿಯ ಮಾಹಿತಿ ಲೆಟರ್ ಮೂಲಕ ತಿಳಿಸುತ್ತೇನೆ. ನನಗೆ ನಿಮ್ಮಿಂದ ಸಹಾಯ ಬೇಕು. ಆಗ ನಿಮ್ಮ ಹತ್ತಿರ ಖಂಡಿತಾ ಬರುತ್ತೇನೆ, ಸಹಾಯ ಮಾಡಿ..’ ಎಂದು ಬರೆಯಲಾಗಿತ್ತು. ಈ ಪತ್ರ ಬರೆದ ಎರಡೇ ದಿನಗಳಲ್ಲಿ ಯೋಗೀಶ್ ಕೊಲೆಯಾಗಿ ಹೋಗಿದ್ದರು.

ಯೋಗೀಶ್ ಗೌಡ ಅವರ ಕುಟುಂಬ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯ ಕೈವಾಡ ಇರುವ ಬಗ್ಗೆ ಒತ್ತಿ ಹೇಳಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿನಯ ಕುಲಕರ್ಣಿಯ ರಾಜೀನಾಮೆ ಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಯೋಗೀಶ್ ಗೌಡರ ಕುಟುಂಬಕ್ಕೆ ಕುಲಕರ್ಣಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಹೋದರ ಗುರುನಾಥ ಗೌಡ ಆರೋಪಿಸಿದ್ದಾರೆ.

ಕೊಲೆಯನ್ನು ಮುಚ್ಚಿಹಾಕಲೆಂದೇ ಕುಲಕರ್ಣಿ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹೋರಡಿದ್ದನೇ ಎಂಬ ಸಂಶಯ ಹುಟ್ಟಿಕೊಂಡಿದೆ. ಕೊಲೆ ವಿಚಾರದಿಂದ ಜನರ ಮನಸ್ಸು ಡೈವರ್ಟ್ ಮಾಡಲೆಂದು ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ. ಇದೀಗ ತನ್ನ ಕೈಯ್ಯಲ್ಲಿ ರಕ್ತದ ಕಲೆಯನ್ನು ಅಂಟಿಸಿಕೊಂಡಿರುವ ಕುಲಕರ್ಣಿ ಅದ್ಯಾವ ಮುಖ ಹೊತ್ತು ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಾನೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇಂಥಹಾ ಮನುಷ್ಯನಿಗೆ ಲಿಂಗಾಯಿತರು ಬೆಂಬಲ ನೀಡುವುದು ಅಸಾಧ್ಯ ಎಂಬ ಮಾತು ಕೇಳಿಬಂದಿದೆ.

ಅಷ್ಟಕ್ಕೂ ವಿನಯ್ ಕುಲಕರ್ಣಿ ಯೋಗೀಶ್ ಗೌಡರನ್ನು ಕೊಲೆ ಮಾಡಿಸಿದ್ದು ಯಾಕೆ ಎಂದು ಇನ್ನೂ ನಿಗುಢವಾಗಿಯೇ ಉಳಿದುಕೊಂಡಿದೆ. ಈ ರಹಸ್ಯ ಬಯಲಾಗಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕಾಗಿದೆ. ಇಲ್ಲವಾದರೆ ಸಾಕ್ಷ್ಯ ನಾಶ ಮಾಡುವ ಎಲ್ಲಾ ಲಕ್ಷಣ ಕಾಣಿಸಿಕೊಂಡಿದೆ.

ಕರ್ನಾಟಕದ ಜನರಿಗೆ ಹಲವು ಭಾಗ್ಯಗಳನ್ನು ಕರುಣಿಸಿರುವ ಸಿದ್ದುಖಾನ್ ಸರಕಾರ ಕೊಲೆಭಾಗ್ಯಗಳನ್ನೂ ಕರುಣಿಸುತ್ತಿದೆ. ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ ಜಾರ್ಜ್ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಡಿ.ಕೆ ರವಿ ಪ್ರಕರಣದಲ್ಲೂ ಕೆಲವರ ಕೈವಾಡ ಇರುವುದನ್ನು ಅವರ ತಾಯಿಯೇ ಸ್ವತಃ ಆರೋಪಿಸುತ್ತಾರೆ. ಒಟ್ಟಾರೆ ಕರ್ನಾಟಕದ ಕಾಂಗ್ರೆಸ್‍ನಲ್ಲಿ ರೌಡಿಗಳು, ಗೂಂಡಾಗಳು, ಹಂತಕರು ಎಲ್ಲರೂ ಮಂತ್ರಿಗಳಾಗಿದ್ದಾರೆ. ಇಂಥವರೇ ಇಂದು ನಟೋರಿಯಸ್ ರೌಡಿಸಂನಲ್ಲಿ ತೊಡಗಿಕೊಂಡು ಕರ್ನಾಟಕದ ಜನರನ್ನು ಇನ್ನಿಲ್ಲದ್ದಂತೆ ಕಾಡುತ್ತಿದ್ದಾರೆ.

source:http://kannada.asianetnews.com/news/minister-vinay-kulkarni-exclusive-audio-is-here

-ಚೇಕಿತಾನ

Tags

Related Articles

Close