ಪ್ರಚಲಿತ

ಹಂದಿ ಮಾಂಸ ತಿಂದು ಮಸೀದಿ ಪ್ರವೇಶ ಮಾಡಲು ಧೈರ್ಯವಿದೆಯೇ ಸಿದ್ಧರಾಮಯ್ಯನವರೇ?! ಇದಕ್ಕೆ ಉತ್ತರಿಸುವಿರಾ ಮುಖ್ಯಮಂತ್ರಿಗಳೇ?!

ಅರೇ ಮುಖ್ಯಮಂತ್ರಿಗಳೇ… ಏನಿದು ಅನಾಚಾರ… ನಿಮ್ಮ ನಾಸ್ತಿಕತೆ ಮಿತಿ ಮೀರಲಿಲ್ಲವೇ..? ಸಮಸ್ತ ಭಗವದ್‍ಭಕ್ತರೂ ದೇವರ ಬಳಿ ನಿರ್ಮಲ ದೇಹದಿಂದ ದರ್ಶನ ಮಾಡುತ್ತಿರುವಾಗ, ನೀವು ಮಾಂಸ ತಿಂದು ದೇವರ ದರ್ಶನ ಪಡೆದಿರಲ್ಲಾ… ಅದೂ ಮಾತು ಬಿಡದ ಮಂಜುನಾಥನ ಸನ್ನಿಧಾನದಲ್ಲಿ..!

ಸಣ್ಣ ಸಣ್ಣ ಮಕ್ಕಳೂ ಕೂಡಾ ಆಟವಾಡಿ ಬಂದರೂ ದೇವರ ಕೋಣೆಗೆ ಕಾಲಿಡುವುದಿಲ್ಲ. ಮಾಂಸ ತಿನ್ನುವುದು ಬಿಡಿ, ಅದನ್ನು ಮುಟ್ಟಿದರೂ ಸ್ನಾನ ಮಾಡದೆ ದೇವರ
ಸಣ್ಣ ಭಾವಚಿತ್ರವನ್ನೇ ಮುಟ್ಟುವುದಿಲ್ಲ. ದೇವರ ಮೇಲಿನ ಭಯ, ಭಕ್ತಿ ಅಷ್ಟೊಂದು ಪರಿಣಾಮಕಾರಿಯಾಗಿರುತ್ತೆ ಅನ್ನೋದಕ್ಕೆ ಇದೊಂದು ಸಾಕ್ಷಿ ಸಾಕು. ಅಂತಹದರಲ್ಲಿ ಹೊಟ್ಟೆ ತುಂಬಾ ಮಾಂಸ ತಿಂದು, ಅಲ್ಲಿಂದ ಕೈಕಾಲೂ ತೊಳೆಯದೆ ನೇರವಾಗಿ ಮಂಜುನಾಥನ ಸನ್ನಿಧಿಗೆ ತೆರಳಿದಿರಲ್ಲಾ… ನಿಮಗೇನನ್ನಬೇಕು..?

ಮಾಂಸ ಬಿಡಿ. ಬಾಯಲ್ಲಿ ತಿಂಡಿ ತಿನ್ನುತ್ತಿದ್ದರೂ ಧರ್ಮಸ್ಥಳ ಅಥವಾ ಮಂಜುನಾಥ ಎನ್ನಲು ಹಿಂಜರಿಯುತ್ತಾರೆ. ಅದು ಭಯದೊಂದಿಗೆ ಮಂಜುನಾಥನ ಮೇಲಿರುವ ಭಕ್ತಿಯೂ ಸೇರಿದೆ. ದೇಶದ ನಾನಾ ಕಡೆಯಿಂದ ಮಂಜುನಾಥನ ಸನ್ನಿಧಿಗೆ ಆಗಮಿಸಿ ತಮ್ಮ ಅಳಲನ್ನು ತೋಡಿಕೊಂಡು ಪಾಪವನ್ನು ನೇತ್ರಾವತಿಯಲ್ಲಿ ಬಿಟ್ಟು ಹೋದವರಿದ್ದಾರೆ. “ಮಂಜುನಾಥನ ಮೇಲಾಣೆ” ಎಂದರೆ ಸಾಕು, ನ್ಯಾಯವನ್ನು ಒದಗಿಸುತ್ತಾನೆ ಎನ್ನುವ ಖ್ಯಾತಿ ಧರ್ಮಸ್ಥಳಕ್ಕೆ ಇದೆ.

ಇತಿಹಾಸ ತಿಳಿದಿದಿಯೇ ಮುಖ್ಯಮಂತ್ರಿಗಳೇ…?

ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯರೇ… ಇತಿಹಾಸವನ್ನು ಒಮ್ಮೆ ಕೆದಕಿ ನೋಡಿ. ಆಚಾರ ವಿಚಾರ ನಿಮಗೆ ಇಲ್ಲದಿರಬಹುದು. ಆದರೆ ಧರ್ಮಸ್ಥಳದ ಸಮಸ್ತ ಭಕ್ತರಿಗೆ ಈ ನಂಬಿಕೆ ಇದೆ. ಇಲ್ಲಿಗೆ ಬರಬೇಕಾದರೆ ತಿಂಗಳುಗಳ ಕಾಲ ಮಾಂಸ, ಮದಿರೆಯನ್ನು ಬಿಟ್ಟು ಬರುತ್ತಾರೆ. ಆಣೆ ಪ್ರಮಾಣಗಳನ್ನೂ ನಡೆಸುತ್ತಾರೆ. ನೆನಪಿಡಿ… ಉಧ್ಯಮಿಗಳು, ರಾಜಕಾರಣಿಗಳು ಧರ್ಮಸ್ಥಳಕ್ಕೆ ಆಗಮಿಸಿ ಆಣೆ ಪ್ರಮಾಣ ಮಾಡಿದ ನಂತರ ಅವರ ರಾಜಕೀಯ ಭವಿಷ್ಯ ಏನಾಯಿತು. ತಿಳಿದುಕೊಳ್ಳಿ… ಧರ್ಮಸ್ಥಳದ ಮಂಜುನಾಥನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾರಾದರೂ ನೆಮ್ಮದಿಯಿಂದ ಉಳಿದವರುಂಟೆ..?

ಸಿ.ಎಂ. ಸಮರ್ಥನೆ…!

ಬೇಡರ ಕಣ್ಣಪ್ಪ, ದೇವರಿಗೆ ಮಾಂಸಾಹಾರವನ್ನು ಕೊಟ್ಟು ಮೆಚ್ಚಿಸಲಿಲ್ಲವೇ… ಮಾಂಸ ತಿಂದು ದೇವರ ದರ್ಶನ ಪಡೆಯಬಾರದೆಂದು ಯಾರು ಹೇಳಿದ್ದು” ಎಂಬ ದರ್ಪದ ಮಾತುಗಳನ್ನಾಡಿ ಸಿಎಂ ಸಮರ್ಥಿಸಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಬೇಡರ ಕಣ್ಣಪ್ಪನ ಹೆಸರೆತ್ತಿ ತಾನೂ ಓರ್ವ ಬೇಡರ ಕಣ್ಣಪ್ಪ ಎಂದು ಪೋಸು ಕೊಡಲು ಹೊರಟಿದ್ದಾರೆ.

ಮುಖ್ಯಮಂತ್ರಿಗಳೇ ಮಾಂಸ ತಿಂದು ಮಸೀದಿ ಪ್ರವೇಶಿಸುವಿರಾ..?

ಹೀಗೊಂದು ಪ್ರಶ್ನೆಯನ್ನೆತ್ತಿದವರು ಮಾಜಿ ಶಾಸಕ ಸೊಗಡು ಶಿವಣ್ಣ… ಇದನ್ನು ಸಾಮಾನ್ಯ ನಾಗರಿಕರೂ ಕೇಳುವ ಪ್ರಶ್ನೆ.

ಮುಖ್ಯಮಂತ್ರಿಗಳೇ… ಯಾವಾಗ ನೋಡಿದರೂ ಹಿಂದೂಗಳ ನಂಬಿಕೆಗಳ ಮೇಲೆ, ಅವುಗಳ ಇತಿಹಾಸದ ಮೇಲೆ ಕೊಡಲಿಯೇಟನ್ನು ಹೊಡೆಯುತ್ತಾ ಬಂದಿರುವ
ನೀವು ಅನ್ಯಧರ್ಮೀಯರ ವಿಚಾರದಲ್ಲಿ ಯಾಕೆ ಮೌನ ವಹಿಸುತ್ತಿದ್ದೀರಾ..? ಮಾಂಸ ತಿಂದು ಮಸೀದಿಗೆ ಅಥವಾ ಕ್ರೈಸ್ತಾಲಯಗಳಿಗೆ ಹೋಗಬಾರದೆಂಬ ನಿಯಮವೇನಿಲ್ಲ. ಆದರೂ ನಿಮಗೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗುತ್ತೇನೆ ಎಂದು ಹೇಳುವ ಧೈರ್ಯ ಇದೆಯೇ..? ಮುಸಲ್ಮಾನರ ಧರ್ಮದಲ್ಲಿ ಹಂದಿ ಮಾಂಸ ಸೇವನೆ ನಿಷಿದ್ಧ. ಹಂದಿ ಮಾಂಸ ಸೇವಿಸಿದವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದ ಮುಸಲ್ಮಾನರ ಮಸೀದಿಗಳಿಗೆ ಹಂದಿ ಮಾಂಸ ತಿಂದು ಹೋಗುವ ಸಾಹಸವನ್ನು ಮಾಡುತ್ತೀರಾ..? ಮಸೀದಿಗಳಿಗೆ ಪ್ರವೇಶ ಮಾಡುವುದು ಬಿಡಿ, ಕನಿಷ್ಠ ಹಂದಿ ಮಾಂಸ ತಿಂದು ಮಸೀದಿ ಪ್ರವೇಶ ಮಾಡುತ್ತೇನೆ ಎಂದು ಹೇಳುವ ಧೈರ್ಯವನ್ನಾದರು ಮಾಡುತ್ತೀರಾ..? ಖಂಡಿತ ಮಾಡಲ್ಲ ನೀವು. ಯಾಕೆಂದರೆ ನೀವು ನಿಂತಿರುವುದೇ ಅವರ ಆಧಾರದಲ್ಲಿ.

ಯಾವಾಗಾದರು ಮುಸಲ್ಮಾನರ ಧರ್ಮದ ವಿಚಾರದಲ್ಲಿ ಋನಾತ್ಮಕ ವಿಷಯಗಳ ಸಂಭಂಧಿಸಿದಂತೆ ಹೇಳಿಕೆಗಳನ್ನು ನೀಡಿದ್ದೀರಾ..? ಇಸ್ಲಾಂನಲ್ಲಿ ತಲಾಖ್ ಪದ್ದತಿ ತಾಂಡವವಾಡುತ್ತಿದ್ದು, ಯಾವಾಗಲಾದರೂ ಅದರ ವಿರುದ್ಧ ಮಾತನಾಡಿದ್ದೀರಾ..? ಇಲ್ಲ…ಮುಸಲ್ಮಾನರಲ್ಲಿ ಅನೇಕ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ವಂಚಿತರಾಗಿದ್ದಾರೆ. ಯಾವಾಗಲಾದರು ಧ್ವನಿ ಎತ್ತಿದ್ದೀರಾ…? ಇಲ್ಲ…

ಸದಾ ಕಾಲ ಹಿಂದೂಗಳ ಭಾವನೆಗಳ ಜೊತೆಗೆ ಚೆಲ್ಲಾಟವಾಡುವ ಮುಖ್ಯಮಂತ್ರಿಗಳು ಅನ್ಯಧರ್ಮೀಯರ ಆಚರಣೆಗಳ ಬಗ್ಗೆ ಮೌನ ವಹಿಸುತ್ತಾರೆ..?

ಒಂದು ವೇಳೆ ಹಂದಿ ಮಾಂಸ ತಿಂದು ಮಸೀದಿ ಪ್ರವೇಶ ಮಾಡಿದಿದ್ದರೆ ಪರಿಣಾಮ ಏನಾಗುತ್ತಿತ್ತು? ಯಾವ ಧರ್ಮವನ್ನು ತನ್ನ ಪಕ್ಷದ ಮತಬ್ಯಾಂಕ್ ಎಂದು
ತಿಳಿದುಕೊಂಡು ರಾಜಕೀಯ ನಡೆಸುತ್ತಿದ್ದರೋ, ಅದೇ ಧರ್ಮದವರು ತಿರುಗಿ ಬಿದ್ದು ಸಿದ್ಧರಾಮಯ್ಯರಿಗೆ ಸರಿಯಾಗಿಯೇ ಪಾಠ ಕಳಿಸುತ್ತಿದ್ದರು. ಆವಾಗ ಸಿದ್ಧರಾಮಯ್ಯರ ಅಸ್ತ್ರದಲ್ಲಿದ್ದ “ಅಹಿಂದ”ದಲ್ಲಿ “ಅ” ಹೋಗಿ ಬಿಡುತ್ತದೆ.(ಹಿಂದ ಆವಾಗಲೆ ಹೋಗಿದೆ ಬಿಡಿ). ತನ್ನ ಓಟ್ ಬ್ಯಾಂಕ್‍ಗಾಗಿ ಇಡೀ ಹಿಂದೂ ಸಮಾಜವನ್ನೇ ಬಲಿಕೊಡುತ್ತಿರುವ ಮುಖ್ಯಮಂತ್ರಿಗಳು ಅದ್ಯಾವ ಸಾಧನೆ ಮಾಡಲು ಹೊರಟಿದ್ದಾರೋ ದೇವನೆ ಬಲ್ಲ.

ಇಂದು “ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು” ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ನಾಳೆ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ “ದೇವಸ್ಥಾನದಲ್ಲಿ ಮಾಂಸ ತಿಂದರೆ ಏನು ತಪ್ಪು. ದೇವಸ್ಥಾನದಲ್ಲೇ ಮಾಂಸ ತಯಾರಿಸಿ ತಿನ್ನಿ. ನಾನು ಬೆಂಬಲ ಕೊಡುತ್ತೇನೆ” ಎಂದು ಹೇಳಲ್ಲ ಅನ್ನೋದು ಯಾವ ಗ್ಯಾರಂಟಿ..?

ಒಂದು ಕಡೆ ವಿಚಾರವಾದಿಗಳ ಹಾವಳಿ, ಮತ್ತೊಂದೆಡೆ ನಾಸ್ತಿಕರ ಹಿಂದೂ ವಿರೋಧಿ ಧೋರಣೆ, ಇದನ್ನೆಲ್ಲ ಸಹಿಸಿಕೊಂಡು ಮುಂದೆ ಹೋಗೋಣವೆಂದರೆ, ಜನರ ಹಿತ ಕಾಯಬೇಕಾದ ಸರ್ಕಾರವೇ ನಾಸ್ತಿಕತೆಯ ಪರಮಾವಧಿಯನ್ನು ಮೆರೆಯುತ್ತಿದ್ದರೆ ಇನ್ನು ಸಮಾಜದ ಕಥೆಯೇನು… ಹಿಂದಿನ ಕಾಲದಿಂದಲೂ ಹಿಂದೂ ಧರ್ಮವನ್ನು ತುಳಿದು ತುಳಿದು ಈ ರೀತಿ ತಂದು ನಿಲ್ಲಿಸಿದರೂ ನಮ್ಮ ಧರ್ಮ ಗಟ್ಟಿಯಾಗಿಯೇ ಇರುತ್ತೆ ಅನ್ನೋದು ಸರ್ವವಿಧಿತ. ಆದರೆ ನಿಂದಿಸುವವರನ್ನು ಏನು ಮಾಡೋಣಾ…?

ದೇಹ ಶುದ್ಧಿಯಾಗಿದ್ದರೆ ಮನಸ್ಸು ಕೂಡಾ ಶುದ್ಧಿಯಾಗಿರುತ್ತದೆ ಎನ್ನುವ ಮಾತಿದೆ. ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಬರುವಾಗ ಮನೆಯಲ್ಲಿ ಸ್ನಾನ
ಮಾಡಿದ್ದರೂ ಪುಣ್ಯ ನದಿ ನೇತ್ರಾವತಿಯಲ್ಲಿ ಮಿಂದು ದೇಹದೊಂದಿಗೆ ಮನಸ್ಸನ್ನೂ ಶುಚಿಗೊಳಿಸುತ್ತಾರೆ. ಆದರೆ ಮುಖ್ಯಮಂತ್ರಿಗಳಾದ ತಾವು ಮಾಂಸ ತಿಂದು, ಒಂದು ಹನಿ ನೀರನ್ನೂ ದೇಹಕ್ಕೆ ಸೋಕಿಸದೆ ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಪ್ರವೇಶ ಮಾಡಿದ್ದೀರಿ… ಇದರ ಹಿಂದಿರುವ ನಿಮ್ಮ ಅಜೆಂಡಾವೇನು, ನಿಮ್ಮ ಮುಂದಿನ ರಾಜಕೀಯ ಭವಿಷ್ಯವೇನು ಎಂಬುವುದು ಆ ಮಂಜುನಾಥನೇ ಬಲ್ಲ…

-ಸುನಿಲ್

Tags

Related Articles

Close