ಪ್ರಚಲಿತ

ಹತ್ತು ವರುಷದ ಹಿಂದೆ ನಡೆದಿದ್ದ ಹತ್ಯಾ ಯತ್ನದಿಂದ ಯೋಗಿ ಪಾರಾಗಿದ್ದು ಹೇಗೆ?

ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿ. ಅದಕ್ಕೂ ಮುಂಚೆ ಅವರೊಬ್ಬ ಸಂತ ಕುಲದ ಶ್ರೇಷ್ಠ ಸನ್ಯಾಸಿ. ಹಿಂದೂಗಳ ಹೃದಯ ಸಾಮ್ರಾಟ. ತನ್ನ ಉಗ್ರ ಹಿಂದುತ್ವವಾದದಿಂದಲೇ ಹಿಂದೂಗಳ ಮನಗೆದ್ದು ದೇಶದಲ್ಲಿಯೇ ಹಿಂದುತ್ವದ ಬೆಂಕಿ ಚೆಂಡು ಎಂದು ಗುರುತಿಸಿಕೊಂಡವರು. ತನ್ನ ಪ್ರಖರವಾದ ಮಾತುಗಳಿಂದ ಜನರನ್ನು ಮಂತ್ರಮಂತ್ರ ಮುಗ್ದರನ್ನಾಗಿಸಿ ದೇಶ ಸೇವೆಯ ಮುಖ್ಯ ವೇದಿಕೆಗೆ ಬರುವಂತೆ ಪ್ರಯತ್ನ ಪಟ್ಟವರು ಯೋಗಿ ಆದಿತ್ಯನಾಥರು. ಇಂತಹ ಪ್ರಸಿದ್ಧ ವ್ಯಕ್ತಿ ಈಗ ಉಗ್ರರ ಕಣ್ಣಲ್ಲಿ ಟಾರ್ಗೆಟ್ ಆಗಿದ್ದಾರೆ!!

ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಹಿಟ್‍ಲಿಸ್ಟ್‍ನಲ್ಲಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಬಹಳಷ್ಟು ಕಾಲದಿಂದ ಇದ್ದಾರೆ. ಆದರೆ ಯೋಗಿ ಮೇಲೆ ಹತ್ತು ವರ್ಷಗಳ ಹಿಂದೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಉತ್ತರ ಪ್ರದೇಶದ ಅಝಂಗಡದ “ಮನೆಯಂಗಳ”ದ ವಿಧ್ವಂಸಕ ಶಕ್ತಿಗಳು ಯೋಗಿ ಕೊಲೆಗೆ ಸ್ಕೆಚ್ ಹಾಕಿದ್ದವು. ಗೋರಖ್‍ಪುರ ಮಠದ ಮಹಂತರ ಕುರಿತಾದ ಪುಸ್ತಕ “ಯೋಗಿ ಆದಿತ್ಯನಾಥ್: ದಿ ರೈಸ್ ಆಫ್ ಸ್ಯಾಫ್ರನ್ ಸೋಶಿಯಲಿಸ್ಟ್” ಎಂಬ ಪುಸ್ತಕದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 7, 2008ರಂದು ಅಝಂಗಡದಲ್ಲಿ ಭಯೋತ್ಪಾದನೆ ವಿರೋಧಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲು ತೆರಳಿದ್ದ ಯೋಗಿ ಆದಿತ್ಯನಾಥ್ ಮೇಲೆ ದಾಳಿ ನಡೆಸಲಾಗಿತ್ತು. ಈ ಸಂದರ್ಭ ಅಹಮದಾಬಾದ್ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಅಬು ಬಶೀರ್ ಮನೆ ಮುಂದೆ ವಿಪಕ್ಷಗಳ ಮುಖಂಡರು ಸಾಲು ನಿಂತಿದ್ದರು.

“ಅಝಂಗಡದ ಡಿಎವಿ ಮೈದಾನದಲ್ಲಿ ಸೆಪ್ಟೆಂಬರ್ 7, 2008ರಲ್ಲಿ ರ್ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ರ್ಯಾಲಿಯಲ್ಲಿ ಯೋಗಿ ಆತಿತ್ಯನಾಥ್‍ರವರು ಪ್ರಮುಖ ಭಾಷಣಕಾರನಾಗಬೇಕಿತ್ತು. ಹಿಂದೂ ಯುವವಾಹಿನಿ ನೇತೃತ್ವದಲ್ಲಿ ಅನೇಕ ಕೇಸರಿ ಪಡೆಗಳು ಭಯೋತ್ಪಾದನೆ ವಿರೋಧಿ ರ್ಯಾಲಿ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದರು. ರ್ಯಾಲಿ ಇದ್ದ ಮುಂಜಾನೆ 40 ವಾಹನಗಳ ಪಡೆಯೊಂದು ಗೋರಖ್‍ಪುರದ ದೇವಸ್ಥಾನದಿಂದ ತಮ್ಮ ಸಂಚಾರ ಆರಂಭಿಸಿದ್ದವು. ಅಝಂಗಡದಲ್ಲಿ ಹಗೆಮಯ ವಾತಾವರಣ ಎದುರಿಸುವ ಸಾಧ್ಯತೆಯನ್ನು ಗ್ರಹಿಸಿದ್ದ ಯೋಗಿ ತಂಡ ಪೂರ್ಣ ಸಜ್ಜಾಗಿತ್ತು. ಮೊದಲೇ ಯೋಗಿ ಆದಿತ್ಯನಾಥರಿಗೆ ಆಘಾತಕಾರಿ ಘಟನೆ ಆಗಬಹುದು ಎಂದು ಮೊದಲೇ ಅರಿವಿಗೆ ಬಂದಿತ್ತು.

ಅಲ್ಲಿರುವ 40 ವಾಹನಗಳಲ್ಲಿ ಯೋಗಿ ಆದಿತ್ಯನಾಥರ ಎಸ್‍ಯುವು ವಾಹನವು ಏಳನೇಯದ್ದಾಗಿತ್ತು. ಅಝಂಗಡದ ಹೊರವಲಯದಲ್ಲಿ ಏನಾಗಬಹುದು ಎಂಬುದರ ಕುರಿತು ಯೋಗಿ ತಂಡಕ್ಕೆ ಊಹೆಯಿರಲಿಲ್ಲ. ಅಝಂಗಡದ ಬಳಿಗೆ ಬರುವ ಹೊತ್ತಿಗೆ ಯೋಗಿ ತಂಡದಲ್ಲಿ ನೂರಕ್ಕೂ ಹೆಚ್ಚು ನಾಲ್ಕು ಚಕ್ರದ ವಾಹನಗಳು ಹಾಗೂ ಸಾಕಷ್ಟು ಮೋಟರ್‍ಬೈಕ್‍ಗಳಿದ್ದವು. ದಾಳಿ ನಡೆಯುವ ಕುರಿತು ಗುಪ್ತಚರ ಮಾಹಿತಿ ಇದ್ದ ಕಾರಣ ಪೆÇಲೀಸ್ ಪೇದೆಗಳ ತುಕಡಿಯೊಂದು ಯೋಗಿಯ ರ್ಯಾಲಿಯನ್ನು ಹಿಂಬಾಲಿಸಿತ್ತು. ಆದರೆ ಯಾವ ರೀತಿ ದಾಳಿಯಾಗಬಹುದೆಂದು ಯಾರೂ ತಿಳಿದಿರಲಿಲ್ಲ.

ಮದ್ಯಾಹ್ನ 1.20ರ ವೇಳೆಗೆ ರ್ಯಾಲಿಯು ಅಝಂಗಡ ಪಟ್ಟಣದ ಬಳಿಯ ಟಾಕಿಯಾ ಎಂಬಲ್ಲಿ ಬರುತ್ತಿದ್ದಂತೆ ರ್ಯಾಲಯಲ್ಲಿದ್ದ ಏಳನೇ ವಾಹನವಕ್ಕೆ ಕಲ್ಲೊಂದು ಬಿತ್ತು. ಕೂಡಲೇ ಎಲ್ಲ ದಿಕ್ಕುಗಳಿಂದ ಕಲ್ಲುಗಳು ತೂರಿ ಬರಲು ಆರಂಭಿಸಿದವು. ಬಳಿಕ ಪೆಟ್ರೋಲ್ ಬಾಂಬ್‍ಗಳು ದಾಳಿ. ಇದೊಂದು ಪೂರ್ವನಿಯೋಜಿತ ದಾಳಿಯಾಗಿದ್ದು ಸಾಕಷ್ಟು ಮುಂಚೆಯೇ ತಯಾರಿ ನಡೆಸಲಾಗಿತ್ತು. ದಿಢೀರ್ ದಾಳಿಯಿಂದ ಯೋಗಿ ಬೆಂಬಲಿಗರು ಕಕ್ಕಾಬಿಕ್ಕಿಯಾಗಿ ಮೂರು ಗುಂಪುಗಳಾಗಿ ಚದುರಿದರು. ಆರು ವಾಹನಗಳು ಮುಂದೆ ಚಲಿಸಿದರೆ ಇನ್ನುಳಿದವು ಸಾಕಷ್ಟು ಹಿಂದೆ ಉಳಿದವು. ಮಧ್ಯದಲ್ಲಿದ್ದ ಕೆಲವು ದಾಳಿಗೆ ಈಡಾದವು. ವಾಹನಗಳನ್ನು ಸುತ್ತುವರೆದ ದಾಳಿಕೋರರು ಒಳಗಿದ್ದವರ ಮೇಲೆ ಹಲ್ಲೆ ಮಾಡಿದರು. ಆದರೆ ಅವರ ಗುರಿಯಾದ ಯೋಗಿ ಕಣ್ಣಿಗೆ ಬೀಳಲಿಲ್ಲ.

ಹಠಾತ್ಯೋ ದಾಳಿಯಿಂದ ಚೇತರಿಸಿಕೊಂಡ ಬಳಿಕ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಯೋಗಿ ಎಲ್ಲಿದ್ದಾರೆಂಬ ಪ್ರಶ್ನೆ ಎಲ್ಲರಲ್ಲೂ ಮೂಡಲಾರಂಭಿಸಿತು. ಯೋಗಿ ಕೈಗೆ ಸಿಗದ ಕಾರಣ ದಾಳಿಕೋರರು ಮತ್ತಷ್ಟು ರೊಚ್ಚಿಗೆದ್ದಿದ್ದರು. ಇದೇ ಸಂದರ್ಭ ಸುತ್ತಲಿನ ಪೆÇಲೀಸ್ ಠಾಣೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪೆÇಲೀಸರು ಸ್ಥಳಕ್ಕೆ ಆಗಮಿಸಿದರು. ಇದೇ ವೇಳೆ ಬೀದಿಯ ಎರಡೂ ಬದಿಯಲ್ಲಿದ್ದ ವರ್ತಕರು ದಾಳಿಗೊಳಗಾದವರ ರಕ್ಷಣೆಗೆ ಬಂದು ನಿಂತರು.

ನಗರದ ಪೆÇಲೀಸ್ ಅಧಿಕಾರಿ ಪ್ರತಿ ದಾಳಿ ನಡೆಸಲು ಆದೇಶ ನೀಡಿದರು. ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತನಾದ. ರ್ಯಾಲಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯೋಗಿ ಏನಾದರೆಂದು ಇನ್ನೂ ಯಾರಿಗೂ ತಿಳಿದಿರಲಿಲ್ಲ. ದಾಳಿಯಾದ ಸ್ಥಳದಿಂದ ಸಾಕಷ್ಟು ಮುಂದೆ ಹೋಗಿದ್ದ ಹೋಗಿ ಉಳಿದ ವಾಹನಗಳಿಗಾಗಿ ಕಾಯುತ್ತಿದ್ದರು. ಅವರು ರ್ಯಾಲಿಯಲ್ಲಿದ್ದ ಮೊದಲನೇ ಎಸ್‍ಯುವಿ ಕಾರಿನಲ್ಲಿದ್ದರು. ಹತ್ತಿರದ ಲೋಕೋಪಯೋಗಿ ಕಟ್ಟಡವೊಂದರಲ್ಲಿ ಯೋಗಿಯ ತಂಡ ವಿಶ್ರಾಂತಿ ತೆಗೆದುಕೊಂಡ ಬಳಿಕ ಯೋಗಿ ತಮ್ಮ ಕಾರನ್ನು ಬದಲಿಸಿದ್ದರು.

ಟಾಕಿಯಾ ದಾಳಿಕೋರರಿಗೆ ಯೋಗಿಯ ಕೊನೆಯ ಕ್ಷಣದ ಬದಲಾವಣೆ ಕುರಿತು ತಿಳಿದಿರಲಿಲ್ಲವೆಂದು ತೋರುತ್ತದೆ” ಎಂದು ತಿಳಿಸಲಾಗಿದೆ. ಇದಲ್ಲದೇ ಯೋಗಿ ಬದುಕಿನ ಕುರಿತ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಉತ್ತರಾಖಂಡದ ಪೌರಿಯಿಂದ ಲಖನೌನ ಮುಖ್ಯಮಂತ್ರಿ ಅಧಿಕೃತ ನಿವಾಸದ ತನಕ ಯೋಗಿ ನಡೆದುಬಂದ ಹಾದಿಯ ಕುರಿತು ಪುಸ್ತಕದಲ್ಲಿ ವಿವರಿಸಲಾಗಿದೆ.

 

– -ಪವಿತ್ರ

Tags

Related Articles

Close