ಅಂಕಣದೇಶಪ್ರಚಲಿತ

ಹಮೀದ್ ಅನ್ಸಾರಿ! ಭಾರತೀಯ ಮುಸ್ಲಿಮನೋ ಅಥವಾ ಮುಸ್ಲಿಂ ಭಾರತೀಯನೋ?!

ಮಾಜಿ ಉಪರಾಷ್ಟ್ರಪತಿಯಾದ ಹಮೀದರ ಅನ್ಸಾರಿಯ ಹೇಳಿಕೆಯೊಂದಿದೆಯಲ್ಲ! ಅದು, ಅವರ ‘ಇಸ್ಲಾಂ’ ಧೋರಣಾ ಮನಃಸ್ಥಿತಿ! ಒಬ್ಬ ಉಪರಾಷ್ಟ್ರಪತಿಯಾಗಿದ್ದರೂ ಕೂಡ ‘ಮುಸ್ಲಿಂ ಭಾರತದಲ್ಲಿ ಅಸುರಕ್ಷಿತರು’ ಎಂಬ ಹೇಳಿಕೆಯನ್ನು ಆತ ಮಾತ್ರ ಕೊಡಲು ಸಾಧ್ಯ!
‘ಒಬ್ಬನ ರಾಷ್ಟ್ರೀಯತೆಯನ್ನು ಪ್ರಶ್ನಿಸಬಾರದು!” ಎಂದ ಹಮೀದ್ ಅನ್ಸಾರಿಯವರಿಗೆ ಆತ ಒಬ್ಬ ಉಗ್ರನಾಗಿದ್ದರೂ ಅಭ್ಯಂತರವಿಲ್ಲವೇ?

ಒಬ್ಬ ಮುಸ್ಲಿಮನಾಗಿ ತನ್ನ ಧರ್ಮದವರ ಬಗ್ಗೆ ಕಾಳಕಿ ತೋರುವುದು ಹಮೀದ್ ಅನ್ಸಾರಿತಯವರ ಸಹಜ ಗುಣವಾಗಿರಬಹುದಾದರೂ, ಭಾರತೀಯ ಸಿದ್ಧಾಂತಗಳು ಮುಸ್ಲಿಮರನ್ನು ದಿಕ್ಕುಗೆಡಿಸುತ್ತಿವೆ ಎನ್ನುವ ಆರೋಪವೊಂದು ಹಾಸ್ಯಾಸ್ಪದ! ಅಲಿಘರ್ ವಿಶ್ವಿ ವಿದ್ಯಾನಿಲಯದ ವಿದ್ಯಾರ್ಥಿಯೂ ಹಾಗೂ ಮಾಜಿ ಉಪ-ಕುಲಪತಿಯಾಗಿದ್ದವರು ಭಾರತೀಯ ಪರಿಸರವನ್ನು ಒಪ್ಪಿಕೊಳ್ಳಲು ಒತ್ತಡ ಬರುತ್ತಿದೆ ಎಂದೆಲ್ಲ ಆರೋಪಿಸುವುದು ಆಶ್ಚರ್ಯವೇನಲ್ಲ ಬಿಡಿ! 1961 ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯಿಂದ ವೃತ್ತಿ ಜೀವನ ಆರಂಭಿಸಿದ ಅನ್ಸಾರಿ, ಅದೆಷ್ಟೋ ವರ್ಷಗಳ ಅನುಭವವನ್ನು ಗಳಿಸಿ, ಯಾವ ದೇಶದಲ್ಲಿ ಏನೇನು ನಡೆಯುತ್ತಲಿದೆ ಎಂಬುದನ್ನೂ ಅಭ್ಯಸಿಸಿರಾದರೂ ಸಹ ವಿದೇಶಗಳಿಂದ ಭಾರತದ ಮೇಲಾದ ಪರಿಣಾಮ, ಮುಸ್ಲಿ ರಾಷ್ಟ್ರಗಳ ವಿದೇಶಾಂಗ ಚಟಿವಟಿಕೆಗಳನ್ನೂ ಅರಿಯದೆಯೇ, ಭಾರತದ ಉಪರಾಷ್ಟ್ರಪತಿಯಾಗಿದ್ದರೂ ಇಂತಹ ಹೇಳಿಕೆ ನೀಡಿದ್ದು ಅವರ ಬುದ್ಧಿಮತ್ತೆಗೆ ಹಿಡಿದ ಕನ್ನಡಿಯೋ ಅಥವಾ ನಮ್ಮ ದುರಾದೃಷ್ಟವೋ?

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಿಗೂ ಇದರ ಬಗ್ಗೆ ಅರಿವಿದ್ದೇ ಇದೆ! ಒಬ್ಬ ಗೌರವಾನ್ವಿತ ಸ್ಥಾನದಲ್ಲಿ ಕೂತವನ ಬೇಕಾ ಬಿಟ್ಟಿ ಹೇಳಿಕೆ ಜನಸಾಮಾನ್ಯರ ಮೇಲೆ ಅದೆಷ್ಟು ಪರಿಣಾಮ ಬೀರಬಹುದೆಂಬ ಅರಿವಿದೆ. ಆದರೆ, ಒಬ್ಬ ನಿವೃತ್ತಿಯಾದ ‘ಮಾಜಿ’ ಗಳ ಹೇಳಿಕೆಯನ್ನು ‘ರಾಜಕೀಯ ಹೇಳಿಕೆ’ಗಳೆಂದು ಬಿಂಬಿಸಿ, ಅದರಲ್ಲಿ ಅರ್ಧ ಸತ್ಯವಿದ್ದರೂ ‘ಸಾಮಾನ್ಯ’ ಜನರು ಭಾವನಾತ್ಮಕವಾಗಿ ವರ್ತಿಸಿ, ಸಮಾಜರ ಶಾಂತಿಗೊಂದು ಸದ್ದಿಲ್ಲದೇ ಧಕ್ಕೆಯಾಗುತ್ತದೆ. ಹಮೀದ್ ಅನ್ಸಾರಿಯ ಹೇಳಿಕೆಗಳು ಒಂದಲ್ಲ ಒಂದು ಅಶಾಂತಿ ಸೃಷ್ಟಿಸುವಾಗ, ‘ಮಾಜಿ ಉಪರಾಷ್ಟ್ರಪತಿ’ ಯ ಹೇಳಿಕೆಗಳೇ ಎಂದು ಬಿಂಬಿತವಾಗುತ್ತದೆ ವಿನಃ ಒಬ್ಬ ‘ಮುಸ್ಲಿಂ’ ಎಂದಾಗುವುದೇ ಇಲ್ಲ. ಈ ಹೇಳಿಕೆಯಿಂದ, ಇಷ್ಟು ದಿನವೂ ‘ಭಾರತೀಯ ಮುಸ್ಲಿಂ’ ಎಂದೇ ಬಿಂಬಿತವಾಗಿದ್ದ ಅನ್ಸಾರಿ ‘ಮುಸಲ್ಮಾನ ಭಾರತೀಯ’ ಎಂದು ಧೃಢೀಕರಿಸಿಕೊಂಡರಷ್ಟೇ!

‘ಹಿಂದೂ’ ಸುರಕ್ಷಿತನೇ ಹಾಗಾದರೆ?

ಒಬ್ಬ ಹಿಂದೂವಾಗಿ, ಏನು ನಿರೀಕ್ಷಿಸಬಹುದು ಇಂತಹ ಅನ್ಸಾರಿಯವರಿಂದ?!
ಭಾರತದಲ್ಲಿ ಮುಸ್ಲಿಂ ಸಮುದಾಯ ಸುರಕ್ಷಿತವಲ್ಲವೆಂದಾದರೆ, ಅಫ್ಘಾನಿಸ್ಥಾನ, ಪಾಕಿಸ್ಥಾನ, ಬಾಂಗ್ಲಾದೇಶ ಎಲ್ಲವೂ ಹಿಂದೂಗಳ ಮಾರಣ ಹೋಮ ನಡೆಸಿದರಲ್ಲ?! ಬಿಡಿ! ಮೊನ್ನೆ ಮೊನ್ನೆಯ ಸಂಘದವರ ಹತ್ಯೆ ಯಾಯಿತಲ್ಲ ಕೇರಳದಲ್ಲಿ?! ಯಾರು ಸುರಕ್ಷಿತರು?!

ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ನಂತಹ ಕ್ರೈಸ್ತ ಮತದವರ ಮತಾಂತರಗಳು ಎಗ್ಗಿಲ್ಲದೇ ನಡೆಯಿತಲ್ಲವೇ?! ಕಾಶ್ಮೀರವೊಂದು ಪಾಕಿಸ್ಥಾನದ ಬೇಡಿಕೆಯಾ ಯಿತಲ್ಲವೇ?! ಯಾರು ಸುರಕ್ಷಿತರು?!
ಇಷ್ಟಾದರೂ, ಒಬ್ಬ ಹಿಂದು ನಾಯಕನೂ ‘ಭಾರತದಲ್ಲಿ ಹಿಂದು ಸುರಕ್ಷಿತನಲ್ಲ’ ಎಂಬ ಹೇಳಿಕೆಯನ್ನು ನೀಡಲಿಲ್ಲ. ಒಬ್ಬ ಜವಾಬ್ದಾರಿಯುತ ನಾಯಕನೆನ್ನಿಸಿಕೊಂಡವನು ಯಾವ ಮಾತನಾಡಬಹುದು?!

ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಿರುವ ಎಲ್ಲಾ ಪ್ರದೇಶಗಳಲೂ ಹಿಂದೂವಿನ ಕಗ್ಗೊಲೆಗೆ ನಾಂದಿ ಹಾಡಿದ್ದಾರೆ!
ಅಲ್ಪಸಂಖ್ಯಾತರ ಕಾನೂನಿನಡಿಯಲ್ಲಿ, ಹಿಂದೂ ಎನ್ನಿಸಿಕೊಂಡವ ಮೂಲೆಗುಂಪಾದರೂ ಸಹ ಒಬ್ಬ ಹಿಂದುವೂ ಚಕಾರವೆತ್ತಲಿಲ್ಲ! ಭಾರತೀಯ ಸಮುದಾಯದಲ್ಲಿರುವ ‘ಜಾತ್ಯಾತೀತ’ವೆಂಬ ಬಿರುದು ಕೇವಲ ಅಲ್ಪಸಂಖ್ಯಾತರ ವರ್ಗಗಳಿಗಷ್ಟೇ ಬರೆದಿಟ್ಟರೇ?!

ಭಾರತದ ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿ ಒಬ್ಬ ಭಾರತೀಯ ಮುಸ್ಲಿಮನಾಗಿ ಹಾಗೂ ಪರಿಸ್ಥಿತಿಯನ್ನವಲೋಕಿಸುವಷ್ಟು ಸೂಕ್ಷ್ಮತೆಯೊಂದಿದ್ದರೆ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನೂ ನೀಡುತ್ತಿರಲಿಲ್ಲ ಹಾಗೂ, ಭಾರತೀಯ ಹಿಂದೂಗಳ ಬಗ್ಗೆಯೂ ಜವಾಬ್ದಾರಿಯುತ ನಾಯಕನಾಗಿ ವರ್ತಿಸುತ್ತಿದ್ದರೆಂಬುದು ಸತ್ಯ.

ಸತ್ಯ ಅದೇ!

ನಾನೊಬ್ಬ ಭಾರತೀಯ ಹಿಂದೂವೆಂದೇ ಉಳಿಯುತ್ತದೆ ವಿನಃ ನಾನೊಬ್ಬ ಹಿಂದೂ ಭಾರತೀಯನಾಗಿ ಅಲ್ಲ. ಸ್ವತಂತ್ರ್ಯ ರಾಷ್ಟ್ರದಲ್ಲಿ ಜನಿಸಿದ್ದು ನಾನಾದರೂ ಕೂಡ ಪೂರ್ವಜರೆಲ್ಲ ಮುಸ್ಲಿಂ ಸಮುದಾಯದವರ ಕ್ರೂರತೆಗೆ ಒಳಗಾಗಿ ಸ್ವಂತ ಮನೆಯನ್ನು ಬಿಟ್ಟು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬರುವ ಸಂಭವವೂ ಬಂದಿತು. ತದನಂತರ, ಮೇಘಾಲಯಕ್ಕೆ ವಲಸೆ ಹೋದರೂ, ಅಲ್ಲಿಂದಲೂ ಕ್ರೈಸ್ತ ಸಮುದಾಯದವರ ಹಿಂಸೆ ಸಹಿಸಲಾಗದೇ ಮತ್ತೆ ವಲಸೆ ಹೋಗುವ ಹಾಗಾಯಿತು!
ಇಷ್ಟಾದರೂ, ಕೂಡ, ಒಬ್ಬ ಹಿಂದೂವಾಗಿ ನಾನು ‘ಅಸುರಕ್ಷಿತ’ ಎಂದು ನನಗನ್ನಿಸಲೇ ಇಲ್ಲ! ಬದಲು, ನಾನು ಭಾರತೀಯ ಹಿಂದೂ ವೆಂಬ ಸತ್ಯವೊಂದೇ ಉಳಿಯಿತೇ ವಿನಃ ನನಗೆ ಇನ್ನೇನೂ ತೋಚಲಿಲ್ಲ.

‘ಎಲ್ಲಾ ಧರ್ಮವೂ ಒಂದೇ’ ಎಂದು ನಂಬಿದವ ನಾನು! ಆದ್ದರಿಂದ, ರಾಷ್ಟ್ರಪತಿ ಭವನದಲ್ಲಿ ಹೇಗೆ ‘ಇಫ್ತಾರ್ ಕೂಟ’ ವನ್ನಾಯೋಜಿಸುತ್ತಾರೋ, ಹಾಗೆಯೇ ಹೋಳಿ, ದೀಪಾವಳಿಯನ್ನೂ ಆಚರಿಸಬೇಕಿತ್ತಲ್ಲವೇ?

ಮುಸ್ಲಿಮರು ಸುರಕ್ಷಿತವಾಗಿಲ್ಲವೆಂಬುದಿದ್ದರೆ, ಅಬ್ದುಲ್ ಕಲಾಂ ರಾಷ್ಟ್ರಪತಿ ಹುದ್ದೆಗೇರುತ್ತಿರಲಿಲ್ಲ, ಅದೆಷ್ಟೋ ಪ್ರಾರ್ಥನೆಗಳು ಸದ್ದಿಲ್ಲದೆಯೇ ನಡೆಯಬೇಕಿತ್ತು, ಅದೆಷ್ಟೋ ಕೂಟಗಳೂ ನಿಷೇಧಗೊಳ್ಳುತ್ತಿದ್ದವು! ಹಮೀದ್ ಅನ್ಸಾರಿಯವರಿಗೂ ಈ ಹೇಳಿಕೆ ನೀಡುವಂತ ಸ್ವಾತಂತ್ರ್ಯವೂ ಇರುತ್ತಿರಲಿಲ್ಲ!

ಆದ್ದರಿಂದ, ಮೊದಲು ‘ಜವಾವ್ದಾರಿಯುತ’ ನಾಯಕನಾಗಿ ‘ಎಲ್ಲರೂ ಒಂದೇ’ ಎನ್ನುವ ಭಾವನೆಯಿರಬೇಕು. ದೇಶದ ಪ್ರಜೆ ಮೊದಲಾಗಬೇಕೇ ವಿನಃ ಧರ್ಮದ ಅಂಧ ಆರಾಧಕನಾಗಲ್ಲವೇ ಅಲ್ಲ! ಅದಕ್ಕೇ, ಇನ್ನೂ ಮುಸ್ಲಿಮರಿಗೆ, ಕ್ರೈಸ್ತರಿಗೆ ಭಾರತದಲ್ಲಿನ್ನೂ ಬದುಕಲು ಭಾರತೀಯ ಸ್ವಾಭಿಮಾನಿ ಹಿಂದೂಗಳು ಅವಕಾಶ ಮಾಡಿಕೊಟ್ಟಿರುವುದಲ್ಲವೇ?

– ಸುಮನ್

Tags

Related Articles

Close