ಅಂಕಣದೇಶಪ್ರಚಲಿತ

ಹರ್ಯಾಣ ಗಲಭೆಗೂ ನಾರ್ವೆಗೂ ಲಿಂಕ್ ಇದೆಯಾ? ಗಲಭೆ ಆಗುವ ಒಂದು ಗಂಟೆ ಮುಂಚೆ ರಾಹುಲ್ ಗಾಂಧಿ ನಾರ್ವೆಗೆ ಹೋಗುವುದಾಗಿ ಘೋಷಿಸಿದ್ದು ಯಾಕೆ?

ಹರಿಯಾಣ ಮತ್ತು ಪಂಜಾಬ್‍ನಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಇಡೀ ದೇಶದ ಪರಿಸ್ಥಿತಿಯೇ ಹದಗೆಟ್ಟಿದೆ. ಗುರ್ಮಿತ್ ರಾಮ್ ರಹೀಂನನ್ನು ಬಂಧಿಸಿದ ಬಳಿಕ ಇದರಿಂದಲೇ ಗಲಭೆ ಸೃಷ್ಟಿಯಾಗಿರಬಹುದೆಂದು ಭಾವಿಸಲಾಗುತ್ತದೆ. ಆದರೆ ಡಾ. ಗೌರವ್ ಪ್ರಧಾನ್ ಅವರು ಈ ಗಲಭೆಯ ಹಿಂದೆ ರಾಜಕೀಯ ಪಿತೂರಿ ಇರುವ ಅಘಾತಕಾರಿ ಅಂಶಗಳನ್ನು ಬಯಲಿಗೆಳೆದಿದ್ದಾರೆ. ಈ ಪಿತೂರಿಯನ್ನು ನೋಡಿದಾಗ ನಮ್ಮಲ್ಲಿ ಸಿಟ್ಟು, ಅಸಹನೆ ಜೊತೆಗೆ ಶಾಕ್ ಆಗವುದಂತೂ ಖಂಡಿತ.

ಗಲಭೆ ನಡೆಯುವ ಕೆಲವೇ ಗಂಟೆಗಳ ಮುಂಚೆ ರಾಹುಲ್ ಗಾಂಧಿ ಭಾರತ ತೊರೆದಿದ್ದು ಯಾಕೆ?
ಹೌದು ಇಂಥದೊಂದು ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ರಾಹುಲ್ ಗಾಂಧಿ ಗಲಭೆ ನಡೆಯುವ ಕೆಲವೇ ಗಂಟೆಗಳ ಮುಂಚೆ ನಾರ್ವೆಗೆ ತೆರಳಿದ್ದು ಯಾಕೆ? ಈ ವಿಷಯವನ್ನು ಕೇಳಿದಾಗ ಅಚ್ಚರಿಯಾಗುವುದು ಸಹಜ. ಯಾಕೆಂದರೆ ಆರ್‍ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ನೃತೃತ್ವದಲ್ಲಿ ಭಾನುವಾರ ನಡೆದ ಬೃಹತ್ ರ್ಯಾಲಿಗೆ ಅವರ ಕಟ್ಟಾ ಬೆಂಬಲಿಗನಾಗಿರುವ ರಾಹುಲ್ ಗಾಂಧಿ ತಪ್ಪಿಸಿಕೊಂಡಿದ್ದ. ಇದೀಗ ಲಾಲೂ ನೇತೃತ್ವದಲ್ಲಿ ಪಾಟ್ನಾದಲ್ಲಿ ವಿಪಕ್ಷಗಳು ಹಮ್ಮಿಕೊಂಡಿದ್ದ ರ್ಯಾಲಿಗೂ ರಾಹುಲ್ ಮಿಸ್ ಆಗಿದ್ದ. ಇನ್ನು ಸೆಪ್ಟೆಂಬರ್ 1ರಂದು ಗುಜರಾತ್‍ನಲ್ಲಿ ಹಮ್ಮಿಕೊಂಡ ಬೃಹತ್ ರ್ಯಾಲಿಗೂ ರಾಹುಲ್ ಮಿಸ್ ಆಗುವ ಸಾಧ್ಯತೆ ಇದೆ…

ಈ ಎಲ್ಲಾ ಘಟನೆಗಳ ಬಗ್ಗೆ ರಾಹುಲ್ ಗಾಂಧಿ ಹೇಳುವುದೇನು?
ಈ ಘಟನೆಗಳ ಬಗ್ಗೆ ರಾಹುಲ್ ಗಾಂಧಿ ಟ್ವಿಟರ್‍ನಲ್ಲಿ ಹೇಳುವುದಿಷ್ಟು, `ನಾರ್ವೆಯ ವಿದೇಶಾಂಗ ಸಚಿಚಾಲಯ ನೀಡಿದ ಆಮಂತ್ರಣದ ಮೇರೆಗೆ ನಾನು ಕೆಲವು ದಿನಗಳ ಮಟ್ಟಿಗೆ ಒಸ್ಲೋ ಎಂಬಲ್ಲಿಗೆ ತೆರಳುತ್ತಿದ್ದೇನೆ. ಇಲ್ಲಿ ರಾಜಕೀಯ, ಉದ್ಯಮಿಗಳ ಮತ್ತು ಸಂಶೋಧನಾ ಸಂಸ್ಥೆಗಳ ಜೊತೆ ಸಭೆ ನಡೆಯಲಿದೆ…’

ರಾಹುಲ್ ಗಾಂಧಿಯ ಈ ನಿಗೂಢ ನಾರ್ವೆ ಭೇಟಿಯ ಹಿಂದಿನ ಉದ್ದೇಶವೇನು ಎಂದೇ ಅರ್ಥವಾಗುವುದಿಲ್ಲ. ಈತನ ನಾರ್ವೆ ಭೇಟಿಯಿಂದ ಭಾರತೀಯರ್ಯಾರಿಗೂ ಲಾಭವಿಲ್ಲ. ಇಲ್ಲಿ ರಾಹುಲ್ ತನ್ನ ಪ್ರವಾಸದಲ್ಲಿ ತಾನು ಭೇಟಿ ನೀಡಲಿರುವ ಪ್ರದೇಶದ ಬಗ್ಗೆ ತಿಳಿಸುತ್ತಾನಾದರೂ ತನ್ನ ಹಿಡನ್ ಅಜೆಂಡಾದ ಬಗ್ಗೆ ಮಾತ್ರ ತಿಳಿಸುವುದಿಲ್ಲ. ನಾವೆಲ್ಲಾ ತಿಳಿದಿರುವ ಪ್ರಕಾರ ವಿದೇಶಿ ರಾಷ್ಟ್ರಗಳು ಒಂದು ವಿಷಯದ ಬಗ್ಗೆ ಚರ್ಚೆ ನಡೆಸಲು ಅಥವಾ ಒಪ್ಪಂದ ನಡೆಸಲು ದೇಶದ ಆಡಳಿತ ಸರಕಾರದ ಪ್ರತಿನಿಧಿಯನ್ನಷ್ಟೇ ತನ್ನ ದೇಶಕ್ಕೆ ಆಹ್ವಾನಿಸುತ್ತದೆ. ಆದರೆ ಇಲ್ಲಿ ನಡೆದಿರುವುದೇ ಬೇರೆ. ಕೇಂದ್ರ ಸರಕಾರದ ಪ್ರತಿನಿಧಿಯನ್ನು ಕರೆಯದ ನಾರ್ವೆ ವಿಪಕ್ಷದ ರಾಹುಲ್ ಗಾಂಧಿಯನ್ನು ತನ್ನ ದೇಶಕ್ಕೆ ಕರೆದಿರುವುದು ಯಾಕೆ ಎಂಬ ಪ್ರಶ್ನೆ ಈಗ ಬೃಹದಾಕಾರವಾಗಿ ಕಾಡಲಾರಂಭಿಸುತ್ತದೆ.

ಇಲ್ಲಿ ಮತ್ತೊಂದು ಸಂಶಯ ನಮ್ಮ ತಲೆ ತಿನ್ನುತ್ತದೆ. ಅದೇನೆಂದರೆ ರಾಹುಲ್ ನಾರ್ವೆಯಲ್ಲಿ ಯಾವ ಪ್ರದೇಶದಲ್ಲಿ ತಂಗುತ್ತಾರೆಂದು ಎಲ್ಲೂ ಪ್ರಸ್ತಾಪಿಸುವುದಿಲ್ಲ.
ರಾಜತಾಂತ್ರಿಕ ಭೇಟಿಯಾಗಿದ್ದರೆ ಯಾವ ವಿಷಯದ ಬಗ್ಗೆ ಅಲ್ಲಿ ಚರ್ಚೆ ನಡೆಯಲಿದೆ, ಅದರ ನಿರ್ದಿಷ್ಟ ಸಮಯವೆಷ್ಟು ಎಂಬೆಲ್ಲದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಆತ ಎಲ್ಲೂ ಪ್ರಸ್ತಾಪಿಸಿಲ್ಲ. ಆದ್ದರಿಂದ ರಾಹುಲ್‍ನ ಸೀಕ್ರೆಟ್ ಭೇಟಿ ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ.

ರಾಹುಲ್ ಗಾಂಧಿ ಟ್ವೀಟಿಸಿದ ಒಂದು ಗಂಟೆಯ ನಂತರ ಭುಗಿಲೆದ್ದ ಹಿಂಸಾಚಾರ, ಢಝನ್‍ಗಟ್ಟಲೆ ಜನರ ಸಾವು…!
ಈ ನಡುವೆ ಗುರ್ಮಿತ್ ರಾಂ ರಹೀಂ ಪ್ರಕರಣದ ವಿಚಾರವಾಗಿ ಹಿಂಸಾಚಾರವೂ ಭುಗಿಲೆದ್ದಿತು. ಇಲ್ಲೊಂದು ಅಚ್ಚರಿಯ ಸಂಗತಿ ಇದೆ. ಈ ಸಂಗತಿಯನ್ನು ಕೇಳಿದಾಗ ನಮಗೆ ಖಂಡಿತಾ ಶಾಕ್ ಆಗುತ್ತದೆ. ಅದೇನು ಗೊತ್ತಾ? ಹಿಂಸಾಚಾರ ಭುಗಿಲೆದ್ದಿರುವುದು ಹರ್ಯಾಣದಲ್ಲಿ ಮಾತ್ರ. ಆದ್ರೆ ಪಂಜಾಬ್‍ನಲ್ಲಿ ಏನೂ ಆಗಿಲ್ಲ ಎನ್ನುವುದೇ ಈ ಅಚ್ಚರಿಗೆ ಕಾರಣ. ಯಾಕೆಂದರೆ ಪಂಜಾಬ್‍ನಲ್ಲಿರುವುದು ಕಾಂಗ್ರೆಸ್ ಸರಕಾರ, ಹರ್ಯಾಣದಲ್ಲಿರುವುದು ಬಿಜೆಪಿ ಸರಕಾರ.
ರಾಂ ರಹೀಂ ವಿಚಾರವಾಗಿ ಡೇರಾ ಬೆಂಬಲಿಗರು ನಡೆಸಿದ ಹಿಂಸಾಚಾರ ಇಡೀ ಉತ್ತರ ಭಾರತವನ್ನೇ ಸ್ಥಬ್ಧಗೊಳಿಸಿದೆ. ಆದರೆ ಡೇರಾ ಬೆಂಬಲಿಗರ ಸಂಖ್ಯೆ ಜಾಸ್ತಿ ಇರುವುದು ಪಂಜಾಬ್‍ನಲ್ಲಿ. ಪ್ರಕರಣ ದಾಖಲಾಗಿರುವುದು ಛತ್ತೀಸ್‍ಗಢದಲ್ಲಿ. ಆದರೆ ಪ್ರತಿಭಟನೆ ನಡೆದಿರುವುದು ಹರ್ಯಾಣದ ಪಂಚಕುಲದಲ್ಲಿ. ಎಲ್ಲೋ ನಡೆದ ಪ್ರಕರಣಕ್ಕೆ ಸಂಬಂಧಿಸಿ ಹರ್ಯಾಣದಲ್ಲಿ ಗಲಭೆ ನಡೆದಿದೆ ಎಂದಾದರೆ ಅದರ ಸೂತ್ರಧಾರರು ಯಾರಿರಬಹುದೆಂದು ಶಂಕೆ ಮೂಡುತ್ತದೆ.

ಈ ವಿಷ್ಯವನ್ನು ಬೇರೆ ಯಾವ ಮೀಡಿಯವೂ ಹೇಳೋದಿಲ್ಲ…! ಈ ವಿಷ್ಯವನ್ನು ಕೇಳಿದಾಗ ನಿಮಗೆ ಇನ್ನೂ ಶಾಕ್ ಆಗಬಹುದು. ಯಾಕೆ ಗೊತ್ತಾ? ಹರ್ಯಾಣದಲ್ಲಿ ಗಲಭೆ ನಡೆಸಲೆಂದೇ ಪಂಜಾಬ್‍ನಿಂದ 180ಕ್ಕೂ ಹೆಚ್ಚಿನ ಬೆಂಗಾವಲು ಕಾರ್‍ಗಳು ಬಂದಿದೆ…! ಆ ಮೇಲೆ ಹರ್ಯಾಣದಲ್ಲಿ ಏನು ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಮೀಡಿಯಾಗಳೆಲ್ಲಾ ಹರ್ಯಾಣ ಸರಕಾರದ ವಿರುದ್ಧ ಮುಗಿಬಿದ್ದವು. ಈ ಕಾರ್‍ಗಳೆಲ್ಲಾ ಪಂಜಾಬ್‍ನಿಂದ ಹರ್ಯಾಣಕ್ಕೆ ಬಂದಿದ್ಯಾಕೆ? ಹರ್ಯಾಣ ಹಿಂಸಾಚಾರದ ಹಿಂದೆ ಯಾರಿದ್ದಾರೆ ಎಂದು ಇದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಗಲಭೆಯ ಹಿಂದೆ ಪಾಕಿಸ್ತಾನ?
ಹೌದು ಇನ್ನೊಂದು ಮುಖ್ಯವಾದ ವಿಚಾರವೊಂದಿದೆ. ಅದೇನೆಂದರೆ ಗಲಭೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ವಿಚಾರ. ಮೆಹರ್ ತರಾರ್ ಎಂಬ ಪಾಕಿಸ್ತಾನಿ ಪತ್ರಕರ್ತೆ ಆಗಸ್ಟ್ 12ರಂದು ಟ್ವೀಟ್ ಮಾಡಿದ್ದಳು. ಮೆಹರ್ ತರರ್ ಯಾರು ಗೊತ್ತಾ? ಈಕೆ ಶಶಿತರೂರು ಪತ್ನಿ ಸುನಂದಾ ಪುಷ್ಕರ್ ಅನುಮಾನಾಸ್ಪದವಾಗಿ ಸಾಯೋ ಮುಂಚೆ ಶಶಿ ತರೂರು ಜೊತೆ ಮಾತುಕತೆ ನಡೆಸಿದ ಮಹಿಳೆ. ಈಕೆಗೂ ಶಶಿ ತರೂರುಗೆ ಅಕ್ರಮ ಸಂಬಂಧವಿತ್ತು ಎಂದು ಪುಷ್ಕರ್ ಟ್ವಿಟರ್‍ನಲ್ಲಿ ಜಗಳ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.

ಮೆಹರ್ ತರಾರ್ ಆಗಸ್ಟ್ 12ರಂದು ಟ್ವೀಟ್ ಮಾಡಿದ್ದು ಇಷ್ಟೆ…. `13 ಡೇಯ್ಸ್( 13 ದಿನಗಳು)’.

ಈಕೆಯ ಟ್ವೀಟಿಸಿದ ವಿಚಾರದ ಬಗ್ಗೆ ಹಲವಾರು ಮಂದಿಯ ತಲೆ ಕೊರೆಯಲಾರಂಭಿಸಿತ್ತು. ಈಕೆ ಟ್ವೀಟಿಸಿ ಸ್ವಲ್ಪ ಹೊತ್ತಲ್ಲೇ ಡಾ ಗೌರವ್ ಪ್ರಧಾನ್ ಅವರು ಮುಂಬೈಗೆ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಆಕೆ ತಿಳಿಸಿರಬಹುದೆಂದು ಊಹಿಸಿದ್ದರು. ಆದರೆ ಅದೇ ದಿನ ಬಿಜೆಪಿ ಸರಕಾರವಿರುವ ಹರ್ಯಾಣದಲ್ಲಿ ಭಾರೀ ಗಲಭೆ ಉಂಟಾಗಿತ್ತು.

ಮೆಹರ್ ತರಾರ್ ಟ್ವೀಟ್‍ಗೂ, ರಾಹುಲ್ ನಾರ್ವೆ ಭೇಟಿಗೂ, ಹಾಗೂ ಹರ್ಯಾಣದಲ್ಲಿ ನಡೆದ ಗಲಭೆಗೂ ಇರುವ ಒಂದಕ್ಕೊಂದು ಸಂಬಂಧವೇನು ಎಂಬ ಬಗ್ಗೆ ಶಂಕೆ ಮೂಡುವುದು ಸಹಜ.ಅದನ್ನು ಗೌರವ್ ಪ್ರಧಾನ್ ಟ್ವಿಟರ್‍ನಲ್ಲಿ ವಿಶ್ಲೇಷಿಸಿ ಬರೆದಿದ್ದಾರೆ.

ರಾಹುಲ್ ಆಗಸ್ಟ್ 25ರಂದು ತಾನು ನಾರ್ವೆಗೆ ರಾಜಕೀಯ ಭೇಟಿಗೆ ಹೋಗುವುದಾಗಿ ಟ್ವೀಟಿಸಿದ್ದರು. ಅದಕ್ಕೆ ಗೌರವ್ ಪ್ರಧಾನ್, ನೀವು ನಾರ್ವೆಯಲ್ಲಿರುವುದು ಖಚಿತಪಡಿಸಿಕೊಳ್ಳಲು ಫೋಟೋ ತೋರಿಸಿ ಎಂದು ಟ್ವಿಟರ್‍ನಲ್ಲಿ ರಾಹುಲ್ ಜೊತೆ ಕೇಳಿಕೊಂಡಿದ್ದರು.

ಇನ್ನು ಮೆಹರ್ ತರಾರ್ 13 ದಿನಗಳು ಎಂದಷ್ಟೇ ಟ್ವೀಟಿಸಿದ್ದಳು.
ಇದಕ್ಕೆ ಗೌರವ್ ಪ್ರಧಾನ್, 13 ದಿನಗಳೆಂದರೆ ಏನು? ಪಪ್ಪು 13 ದಿನಗಳ ಕಾಲ ಪ್ರಯಾಣಿಸುತ್ತಾನೆ ಎಂದು ಐಎಸ್‍ಐ ಜನರಿಗೆ ಈಕೆ ದೃಢೀಕರಿಸಿದ್ದೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಂದು ಕಡೆ ಅವರು, ರಾಹುಲ್ ಗಾಂಧಿ ನಾರ್ವೆ ಭೇಟಿಯ ಅಜೆಂಡವೇನು ಎಂದು ಪ್ರಶ್ನಿಸಿದ್ದಾರೆ.ಆಸಿನ್ ಎಂಬ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಉತ್ತರಿಸುತ್ತಾ…. ಯು.ಕೆ ಪತ್ರಿಕೆಯೊಂದರ ಪ್ರಕಾರ ನಾರ್ವೆಯ ಓಸ್ಲೋ ಎನ್ನುವ ಪ್ರದೇಶದಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿದೆ.

ಜಗತ್ತಲ್ಲಿ ಭಯೋತ್ಪಾದನೆ ಹೆಚ್ಚಲು ನಾರ್ವೆಯ ಪಾತ್ರವೂ ಇದೆ ಎಂದು ಟ್ವೀಟಿಸಿದೆ.
ಒಟ್ಟಿನಲ್ಲಿ ಹರ್ಯಾಣದಲ್ಲಿ ನಡೆದ ಗಲಭೆ, ಮೆಹರ್ ತರಾರ್ ಟ್ವೀಟ್, ರಾಹುಲ್ ಗಾಂಧಿ ನಿಗೂಢ ನಾರ್ವೆ ಪ್ರಯಾಣ ಎಲ್ಲದರ ಬಗ್ಗೆ ಶಂಕೆ ಮೂಡುವುದು ಸುಳ್ಳಲ್ಲ.
ಹರ್ಯಾಣದಲ್ಲಿ ಗಲಭೆ ಎಬ್ಬಿಸಿ ಒಂದಷ್ಟು ಮಂದಿ ಪ್ರಾಣ ಕಳೆದುಕೊಳ್ಳುವಂತೆ ಮಾಡಿದ್ದು ಯಾರು ಎಂದು ಇಂದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಸರಕಾರವನ್ನುಸೋಲಿಸುವ ಸಲವಾಗಿ ಕಾಂಗ್ರೆಸ್ ಈ ಹಿಂದಿನಿಂದಲೂ ಗಲಭೆ ಸೃಷ್ಟಿಸುತ್ತಾ ಬರುತ್ತಿದೆ. ಆದರೆ ಜನರಿಗೆ ಇದರ ಸತ್ಯವನ್ನು ಯಾರೂ ತಿಳಿಸುತ್ತಿರಲಿಲ್ಲ. ಆದರೆ ಇದೀಗ ಅದರ ಒಂದೊಂದೇ ಪಾಪಕೃತ್ಯಗಳು ಬಯಲಾಗಿ, ಕಾಂಗ್ರೆಸ್ ಪಕ್ಷದ ಮುಖಂಡರು ಜನರ ಮುಂದೆ ಬೆತ್ತಲಾಗುತ್ತಿದ್ದಾರೆ.

ಚೇಕಿತಾನ

Tags

Related Articles

Close