ಪ್ರಚಲಿತ

 ಹಳ್ಳ ಹಿಡಿದ ರಾಜ್ಯ ಕಾನೂನು ಸುವ್ಯವಸ್ಥೆ!! ರಾಜ್ಯ ಕಾಂಗ್ರೆಸ್ ಸರಕಾರದ ಮಹಾನ್ ಸಾಧನೆಗಳನ್ನು ನೀವು ತಿಳಿಯಲೇಬೇಕು!!!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡ್ಕೊಂಡ್ ಹೋಗಿದೆ, ಕಂಡ ಕಂಡಲ್ಲಿ ಹೆಣ ಬೀಳ್ತಿವೆ, ಬೀದ್ ಬೀದೀಲಿ ಪೋಲಿಸರನ್ನೋದನ್ನೂ ಲೆಕ್ಕಿಸದೆ ನೂರ್ ಇನ್ನೂರ್ ಜನ ಕಟುಕರು ಅಟ್ಯಾಕ್ ಮಾಡ್ತಿದಾರೆ, ನಮ್ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿಗೆ ಅಂಟಿರೋ “ಭೀಮಾ ತೀರದ ಹಂತಕರು”, “ಮತ್ತೆ ಭೀಮಾತೀರದಲ್ಲಿ ಹರಿದ ನೆತ್ತರು” ಅನ್ನೋ ಸುದ್ದಿ ವಾರಕ್ಕೊಂದು ಕೇಳೋ ಹಾಗಿದೆ.

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ, ಬೆಂಗಳೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ, ಕೊಡಗಿನಲ್ಲಿ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಕುಟ್ಟಪ್ಪ ಹತ್ಯೆ, ಬೊಮ್ಮನಹಳ್ಳಿಯಲ್ಲಿ ಮಾಜಿ ಮುನ್ಸಿಪಲ್ ಸದಸ್ಯ ಕಿಟಗನಹಳ್ಳಿ ವಾಸು ಹತ್ಯೆ, ಹೀಗೆ ಎರಡು ವರ್ಷದಲ್ಲಿ ಸುಮಾರು 22 ಹಿಂದೂ ಕಾರ್ಯಕರ್ತರ ಹತ್ಯೆ.

ಎಂ.ಎಂ. ಕಲಬುರಗಿ, ಗೌರಿ ಲಂಕೇಶರಂತಹ “ವಿಚಾರವಾದಿ”ಗಳ ಹತ್ಯೆ, ಇದುವರೆಗೂ ಹಂತಕರ ಪತ್ತೆ ಹಚ್ಚದ ರಾಜ್ಯ ಸರ್ಕಾರ.

ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವ ಸಂಘಟನೆಯಂತ ಕೇಂದ್ರ ಸರ್ಕಾರದಿಂದ ರಡಾರ್ ಮೇಲಿರೋ ಪಿ.ಎಫ್.ಐ, ಎಸ್.ಡಿ.ಪಿ.ಐ ಸಂಘಟನೆಗಳ ಮೇಲಿದ್ದ 150 ಕೇಸ್ಗಳನ್ನ ವಾಪಸ್ ತೆಗೆದುಕೊಂಡ ರಾಜ್ಯ ಸರ್ಕಾರ.

ರಾಜ್ಯದಲ್ಲಿ ಸುಮಾರು ಮೂರು ಸಾವಿರ ರೈತರ ಆತ್ಮಹತ್ಯೆ.

ಅಕ್ರಮಗಳು, ಹಗರಣಗಳು, ಭ್ರಷ್ಟಾಚಾರ, ಕಿಕ್ ಬ್ಯಾಕ್ ಆರೋಪಗಳು.

ಸಾಲು ಸಾಲು ದಕ್ಷ ಪೋಲಿಸ್ ಅಧಿಕಾರಿಗಳ ವರ್ಗಾವಣೆ, ನಿಗೂಢ ಸಾವಿನ ಸರಮಾಲೆ, ಕಿರುಕುಳ.

1. ಅನುಪಮಾ ಶೆಣೈ(Anupama Shenoy), DySP

ಶಿಕ್ಷೆ : ಕೂಡ್ಲಿಗಿ 2 ಎತ್ತಂಗಡಿ ಒಂದೇ ದಿನದಲ್ಲಿ

ಕಾರಣ – ಸಚಿವನ ಫೋನ್ ಹೋಲ್ಡ್ ನಲ್ಲಿ ಹಾಕಿದ್ದಕ್ಕೆ, Murder Case ನ್ನ Suicide ಅಂತ ಬದಲಾಯಿಸಿ ಅಂತ ಬಂದಿದ್ದ ಒತ್ತಡಕ್ಕೆ ಸೊಪ್ಪು
ಹಾಕದಿದ್ದಕ್ಕೆ & ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಈ ಶಿಕ್ಷೆ ಅನುಭವಿಸಿದ ದಕ್ಷ ಅಧಿಕಾರಿ

2. ರಶ್ಮಿ ಮಹೇಶ್ IAS

ಶಿಕ್ಷೆ : ಕಡ್ಡಾಯ ರಜೆ(Compulsory Leave) ನೀಡಲಾಗಿದೆ

ಕಾರಣ : 2012 ರವರೆಗೆ ಮೆಡಿಕಲ್ ಸೀಟುಗಳಲ್ಲಿ ನಡೆದ ಅವ್ಯವಹಾರದ ರಾಜಕಾರಣಿಗಳ ಹಸ್ತಕ್ಷೇಪದ ಒತ್ತಡವನ್ನ ನಿರಾಕರಿಸಿದ್ದಕ್ಕೆ & ಇವರು ATI ಅಧಿಕಾರಿಯಾಗಿದ್ದಾಗ ಇವರು 100 ಕೋಟಿ ಹಗರಣದಲ್ಲಿ ಭಾಗಿಯಾಗಿದಾರೆ ಅನ್ನೋ ಸುಳ್ಳು ಆರೋಪ ಹೊರಿಸಿ ಕಡ್ಡಾಯ ರಜೆಯ ಮೇಲೆ ಮನೆಗೆ ಕಳಿಸಿದ ಸರ್ಕಾರ

3. ತುಳಸಿ ಮದ್ದಿನೇನಿ IAS

ಶಿಕ್ಷೆ : ಕೊಪ್ಪಳದಿಂದ ಮಂಗಳೂರಿಗೆ DC post ನಿಂದ CEO ಆಗಿ ಹಿಂಬಡ್ತಿ(demotion)

ಕಾರಣ : ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಿಯ ಸಹೋದರ ಅನಧಿಕೃತವಾಗಿ ಕೃಷಿ ಭೂಮಿಯನ್ನ ವಶಪಡಿಸಿಕೊಂಡು ಕಟ್ಟುತ್ತಿದ್ದ Building Demolish ಮಾಡಿ ಅಂತ ಅಧಿಕಾರಿಗಳಿಗೆ ತುಳಸಿಯವರು order ಮಾಡಿದ್ದಕ್ಕೆ ಈ ಶಿಕ್ಷೆ.

4. ಸೋನಿಯಾ ನಾರಂಗ್ IPS

ಶಿಕ್ಷೆ : 16,000 ಕೋಟಿ ಮೈನಿಂಗ್ ಸ್ಕ್ಯಾಮ್ ನಲ್ಲಿ ಸೋನಿಯಾ ನಾರಂಗ್ ಭಾಗಿಯಾಗಿದ್ದರಂತ ಸ್ವತಃ CM ರಿಂದಲೇ ವಿಧಾನಸಭೆಯಲ್ಲಿ ಹೇಳಿಕೆ/ಆರೋಪ

ಆದರೆ ಇದೇ ಸೋನಿಯಾ ನಾರಂಗ್ ಅವರೇ ಲೋಕಾಯುಕ್ತ ಹಗರಣವನ್ನ ಬಯಲಿಗೆಳೆದದ್ದು ಅನ್ನೋದನ್ನ ಸಿದ್ದರಾಮಯ್ಯ ಮರೆತಂತಿದೆ.

5. ಡಿ.ವೈ.ಎಸ್ಪಿ ಗಣಪತಿ ಆತ್ಮಹತ್ಯೆ, ತಮ್ಮ ಆತ್ಮಹತ್ಯೆಗೆ ಸಿದ್ದರಾಮಯ್ಯ ಸರ್ಕಾರದ ಮಂತ್ರಿ ಕೆ.ಜೆ.ಜಾರ್ಜ್ ನೇರ ಕಾರಣ ಎಂಬುದನ್ನ ಮಾಧ್ಯಮದೆದುರು ಹೇಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಕ್ಷ ಪೋಲಿಸ್ ಅಧಿಕಾರಿ

6. ದಕ್ಷ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಸಾವು (ಅದು ಪೂರ್ವನಿಯೋಜಿತ ಕೊಲೆ ಅನ್ನೋದು ನಮ್ಮ ಕಲಬುರಗಿ ಜನರಿಗೆಲ್ಲಾ ಗೊತ್ತಿರೋ ವಿಷಯ)

7. 10 ಲಕ್ಷ ಲಂಚ ತೆಗೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿ ಡಿ.ಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ

8. ಅನುರಾಗ್ ತಿವಾರಿ IAS, ಕರ್ನಾಟಕ ಸರ್ಕಾರದ ಆಹಾರ ಮತ್ತು ಸರಬರಾಜು ಇಲಾಖೆಯಲ್ಲಿ ಕಮಿಷನರ್ ಆಗಿದ್ದ ಅನುರಾಗ್ ತಿವಾರಿ ರಾಜ್ಯ ಸರ್ಕಾರದಲ್ಲಿ ನಡೆದ ಅವ್ಯವಹಾರವನ್ನ ಬೇಧಿಸಲು ಮುಂದಾದಾಗ ಉತ್ತರಪ್ರದೇಶದಲ್ಲಿ ಅಪರಿಚಿತರಿಂದ ಈ ದಕ್ಷ ಅಧಿಕಾರಿಯ ಹತ್ಯೆಯಾಗಿತ್ತು

9. ಪ್ರಾಮಾಣಿಕ IAS ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ, ಆತ್ಮಹತ್ಯೆಯೋ ಅಥವ ರಾಜಕೀಯ ಹತ್ಯೆಯೋ ಅನ್ನೋದನ್ನ ರಾಜ್ಯದ ಜನರಿಗೇ ಗೊತ್ತು

10. ಎಸ್.ಪಿ.ಮಹಾಂತೇಶ್, ಕೋ ಆಪರೇಟಿವ್ ಸೋಸೈಟಿಯಲ್ಲಿನ ಹಗರಣವನ್ನ ಬಯಲಿಗೆಳಿದದ್ದಕ್ಕೆ ದುಷ್ಕರ್ಮಿಗಳಿಂದ ರಾಡಿನಿಂದ ದಾಳಿಗೊಳಗಾಗಿ ಅಸುನೀಗಿದ ಅಧಿಕಾರಿ

11. ಕೋಲಾರದ ಪೋಲಿಸ್ ಸ್ಟೇಷನನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ

ಇಷ್ಟೇ ಅಲ್ಲ ಮೊನ್ನೆ ಮೊನ್ನೆ ತಾನೆ ರಾಜ್ಯಕ್ಕೆ ದಕ್ಷ, ಖಡಕ್ ಅಧಿಕಾರಿ ಎಂದು ಚಿರಪರಿಚಿತವಿರೋ ರವಿ ಚನ್ನಣ್ಣನವರ್ ಕೂಡ ಮೇಲಾಧಿಕಾರಿಗಳ ರಾಜೀನಾಮೆ ನೀಡುವ ಪ್ರಸ್ತಾಪ ಮಾಡಿದ್ದಾರೆ.

ನೋಡಿ ಸ್ವಾಮಿ ಇದು ಕಾಂಗ್ರೆಸ್ ಸರ್ಕಾರದ ಪ್ರಭಾವಿ ರಾಜಕಾರಣಿಗಳ ಪ್ರಭಾವ.

ಹೆಬ್ಬೆಟ್ಟಿನ ಪ್ರಭಾವದಿಂದ IAS, IPS ಯಾರು ಬೇಕಾದವರನ್ನೂ ಅಲುಗಾಡಿಸಿ ಸಬಲೀಕರಣ ಮಾಡೋದು ಹೇಗಂತ ರಾಜಕಾರಣಿಗಳಿಗೆ ತುಂಬಾನೇ ಚೆನ್ನಾಗಿ ಗೊತ್ತು.

ಆದರೆ ಈ ಹೆಬ್ಬೆಟ್ಟುಗಳಿಗೆ ಬುದ್ಧಿ ಕಲಿಸೋಕೆ ರಾಜ್ಯದ ಜನ ನಾವು ಅನ್ಯಾಯಕ್ಕೊಳಗಾದ ಪ್ರಾಮಾಣಿಕ ಅಧಿಕಾರಿಗಳ ಜೊತೆಗೀದಿವಿ ಅನ್ನೋದನ್ನ ಸರಕಾರಕ್ಕೆ ಹಾಗು ಈ ಭ್ರಷ್ಟ ಮಂತ್ರಿಗಳಿಗೆ ತೋರಿಸೋಣ!!!

– Vinod Hindu Nationalist

Tags

Related Articles

Close