ಅಂಕಣ

ಹವಾಯಿ ಚಪ್ಪಲಿ ಧರಿಸುವ ವ್ಯಕ್ತಿಯೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎನ್ನುವ ಮೋದಿಯ ಹೊಸ ಯೋಜನೆಯ ಬಗ್ಗೆ ಗೊತ್ತೇ??

ದೇಶದ ಚಿತ್ರಣವೇ ಬದಲಾಗಿದೆ!!

ಸಣ್ಣಪುಟ್ಟ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಹಾಗೂ ಜನಸಾಮಾನ್ಯರಿಗೆ ವಿಮಾನ ಸಂಚಾರ ಭಾಗ್ಯ ಒದಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ವಿಶ್ವದಲ್ಲೇ ಮೊದಲು ಎನ್ನಲಾದ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಅದೇ ‘ಉಡೇ ದೇಶ್ ಕ ಆಮ್ ನಾಗರೀಕ್’ (ಉಡಾನ್) ಯೋಜನೆ!!!

ಹೌದು… ನರೇಂದ್ರ ಮೋದಿಯವರ ಮಹತ್ತರ ಯೋಜನೆಗಳಲ್ಲೊಂದಾದ ಉಡಾನ್ ಯೋಜನೆ ಅಗ್ಗದ ದರದ ವೈಮಾನಿಕ ಸಂಪರ್ಕಕ್ಕಾಗಿ ಆರಂಭಿಸಲಾಗಿದೆ. ಈ ಯೋಜನೆಗಾಗಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‍ಎಫ್) ಭದ್ರತೆಯೂ ಕೂಡ ದೊರೆಯಲಿದೆ. ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಏಪ್ರಿಲ್‍ನಲ್ಲಿ ಶಿಮ್ಲಾದಲ್ಲಿ ಉದ್ಘಾಟಿಸಿದ್ದು, ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ವಿಮಾನ ಯಾನ ಒದಗಿಸುವುದೇ ಯೋಜನೆಯ ಉದ್ದೇಶವಾಗಿದೆ.

ಏನಿದು ಉಡಾನ್ ಯೋಜನೆ ?

ಸಣ್ಣ ನಗರಗಳ ನಡುವೆ ವಿಮಾನ ಪ್ರಯಾಣ ಮಾಡಬಹುದಾದ ಈ ಯೋಜನೆಯಡಿಯಲ್ಲಿ ಸಾಮಾನ್ಯ ವ್ಯಕ್ತಿಗೆ ಕೈಗೆಟುಕಬಹುದಾದ ದರದಲ್ಲಿ ವಿಮಾನ ಯಾನ ಮಾಡಬಹುದು. ಅಷ್ಟೇ ಅಲ್ಲದೇ ದೇಶದಲ್ಲಿರುವ 70 ವಿಮಾನ ನಿಲ್ದಾಣಗಳ ಮೂಲಕ ಸಂಪರ್ಕ ಕಲ್ಪಿಸಲಾಗುವುದು. “ಉಡಾನ್” ಯೋಜನೆ ಅಂಗವಾಗಿ ಆರಂಭಿಸಲಾದ ಶಿಮ್ಲಾ-ದೆಹಲಿ ವಿಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ.

ಶ್ರೀಸಾಮಾನ್ಯನಿಗೂ ವಾಯು ಯಾನ ಕಲ್ಪಿಸಲು ಉಡಾನ್ (ಉಡೇ ದೇಶ್ ಕಾ ನಾಗರಿಕ್) ಎಂಬ ಯೋಜನೆ ಉದ್ಘಾಟಿಸಿ ಮಾತಾನಾಡಿದ ನರೇಂದ್ರ ಮೋದಿ, “ಹವಾಯಿ ಚಪ್ಪಲಿ ಧರಿಸುವ ವ್ಯಕ್ತಿ ಸಹ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಭಾರತದಲ್ಲಿ ಕೇವಲ ರಾಜ-ಮಹಾರಾಜರಿಗೆ ಮತ್ತು ಶ್ರೀಮಂತರಿಗೆ ಮಾತ್ರ ವಾಯು ಯಾನ ಎನ್ನುವ ಪರಿಸ್ಥಿತಿ ಇತ್ತು. ಏರ್ ಇಂಡಿಯಾ ಸಹ ಮಹಾರಾಜ ಲಾಂಛನ ಹೊಂದಿತ್ತು. ಈ ವಿಷಯವನ್ನು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ನಾಗರಿಕ ವಿಮಾನ ಯಾನ ಖಾತೆ ಸಚಿವರಾಗಿದ್ದ ರಾಜೀವ್ ಪ್ರತಾಪ್ ರೂಢಿ ಅವರ ಜತೆ ಚರ್ಚಿಸಿದ್ದೆ. ತದನಂತರದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ “ಶ್ರೀಸಾಮಾನ್ಯ” ಏರ್‍ಇಂಡಿಯಾದ ಲಾಂಛನವಾಗಬೇಕು ಎನ್ನುವ ಬಯಕೆಯನ್ನು ವ್ಯಕ್ತಪಡಿಸಿದ್ದೆ” ಎಂದಿದ್ದಾರೆ.

Related image

“ಬಡವರು, ಮಧ್ಯಮವರ್ಗದ ಜನರು ವಿಮಾನದಲ್ಲಿ ಹಾರುವುದನ್ನು ನಾನು ನೋಡಬೇಕು. ಮಧ್ಯಮ ವರ್ಗದವರ ಆಕಾಂಕ್ಷೆ ಹೆಚ್ಚುತ್ತಿದೆ. ಅವರಿಗೆ ಅವಕಾಶ ದೊರೆತರೆ ದೇಶದ ಚಿತ್ರಣವೇ ಬದಲಾಗಿದೆ” ಎಂದು ಹೇಳಿದ್ದಾರೆ!! ಇನ್ನು ಈ ಯೋಜನೆಯಿಂದ ಭವಿಷ್ಯದಲ್ಲಿ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಗೆ ಅನುಕೂಲವಾಗಲಿದ್ದು, ಇದಕ್ಕಾಗಿ ದೇಶದ ಸಣ್ಣ ಮತ್ತು ಮಧ್ಯಮ ವಿಮಾನ ನಿಲ್ದಾಣಗಳನ್ನು ಬಳಸಿಕೊಳ್ಳಲಾಗುತ್ತದೆ. ಒಟ್ಟು 70 ವಿಮಾನ ನಿಲ್ದಾಣಗಳಲ್ಲಿ 24 ವಿಮಾನ ನಿಲ್ದಾಣಗಳು ಪಶ್ಚಿಮ ಭಾಗ, 17 ಉತ್ತರ, 11 ದಕ್ಷಿಣ ಹಾಗೂ ಉಳಿದ 6 ಈಶಾನ್ಯ ಭಾಗದಲ್ಲಿ ಸ್ಥಾಪಿಸಲಾಗುತ್ತದೆ. ಈ ಮೂಲಕ 22 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿವೆ. ಅಲಯನ್ಸ್ ಏರ್ ಸೇರಿದಂತೆ ಸ್ಪೈಸ್ ಜೆಟ್, ಟರ್ಬೋ ಮೆಗಾ ಏರ್‍ವೇರ್, ಏರ್ ಡೆಕ್ಕನ್ ಮತ್ತು ಏರ್ ಒಡಿಶಾ ಕಂಪೆನಿಗಳನ್ನು ಆಯ್ಕೆ ಮಾಡಲಾಗಿದೆ.

ಸರಕಾರ ಘೋಷಿಸಿದ ಉಡಾನ್ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ:

* 800 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನ ಯಾನ ಕಲ್ಪಿಸುವ ಮೂಲಕ ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗಲಿದೆ.
* ದೇಶದ 43 ನಗರಗಳಲ್ಲಿ ವಿಮಾನ ಪ್ರಯಾಣ ವ್ಯವಸ್ಥೆ ಮೂಲಕ ತಲುಪುವ ಅನುಕೂಲ ಮಾಡಲಾಗುತ್ತದೆ. ಹನ್ನೆರಡು ವಿಮಾನ ನಿಲ್ದಾಣಗಳಲ್ಲಿ ನಿಯಮಿತವಾಗಿ, ಅಪರೂಪಕ್ಕೆ ವಿಮಾನ ಹಾರಾಟ ನಡೆಸುತ್ತಿರುವುದು ಇನ್ನು ಮುಂದೆ ಸಮಯಕ್ಕೆ ಹಾರಾಟ ನಡೆಸುತ್ತದೆ. ಸದ್ಯಕ್ಕೆ ವಿಮಾನ ನಿಲ್ದಾಣ ಇದ್ದು, ಹಾರಾಟ ನಡೆಸದ ಮೂವತ್ತೊಂದು ಸ್ಥಳಗಳಲ್ಲಿ ಚಟುವಟಿಕೆ ಆರಂಭವಾಗುತ್ತದೆ.
* ಏರ್ ಇಂಡಿಯಾದ ಸಹವರ್ತಿ ಅಲಯನ್ಸ್ ಏರ್ ಮೊದಲ ಬಾರಿಗೆ ಪ್ರಾದೇಶಿಕ ಸಂಪರ್ಕ ಯೋಜನೆ (ರೀಜನಲ್ ಕನೆಕ್ಟವಿಟಿ ಸ್ಕೀಮ್) ಅಡಿ ದೆಹಲಿ-ಶಿಮ್ಲಾ ಮಧ್ಯೆ ವಿಮಾನ ಯಾನ ಆರಂಭಿಸಿದೆ. ಆಲಯನ್ಸ್ ಏರ್ ಏಪ್ರಿಲ್ 28ರಿಂದ ನಲವತ್ತೆಂಟು ಸೀಟಿನ, ಎಕಾನಮಿ ಕ್ಲಾಸ್ ನ ವಿಮಾನ ಹಾರಾಟವನ್ನು ನಿರಂತರವಾಗಿ ನಡೆಸಲಿದೆ.
* ಕಡಿಮೆ ವಿಸ್ತಾರದ ರನ್ ವೇ, ಎತ್ತರ ಹಾಗೂ ತಾಪಮಾನದ ನಿರ್ಬಂಧ ಇರುವುದರಿಂದ ನಲವತ್ತೆಂಟಕ್ಕಿಂತ ಹೆಚ್ಚು ಪ್ರಯಾಣಿಕರಿಗಿಂತ ವಿಮಾನದಲ್ಲಿ ಕರೆದೊಯ್ಯಲು ಸಾಧ್ಯವಿಲ್ಲ. ದೆಹಲಿ-ಶಿಮ್ಲಾ ಮಧ್ಯೆ ವಿಮಾನ ಯಾನದಲ್ಲಿ ಮೂವತ್ತೈದು ಮಂದಿಯನ್ನು ಕರೆದೊಯ್ಯುವ ವಿಮಾನ, ವಾಪಸ್ ಬರುವಾಗ ಹದಿನೈದು ಮಂದಿಯನ್ನಷ್ಟೇ ಕರೆತರಲು ಸಾಧ್ಯವಾಗುತ್ತದೆ. ವಯಾಬಲಿಟಿ ಕ್ಯಾಪ್ ಫಂಡಿಂಗ್ (ವಿಜಿಎಫ್) ಮೂಲಕ ಪ್ರತಿ ಸೀಟಿಗೆ 3 ಸಾವಿರವನ್ನು ಸರಕಾರವು ಕೊಡುತ್ತದೆ.
* ವಿಮಾನ ಯಾನದಿಂದ ಬರುವ ಆದಾಯ ಹಾಗೂ ತಗುಲುವ ವೆಚ್ಚದ ಮಧ್ಯೆ ಇರುವ ವ್ಯತ್ಯಾಸವನ್ನು ತುಂಬಿಕೊಡುವುದಕ್ಕೆ ವಯಾಬಲಿಟಿ ಕ್ಯಾಪ್ ಫಂಡಿಂಗ್ ಬಳಸಲಾಗುತ್ತದೆ. ಈ ಮೊತ್ತ ವರ್ಷಕ್ಕೆ 205 ಕೋಟಿ ಅಗಬಹುದು ಎಂದು ಅಂದಾಜಿಸಲಾಗಿದೆ. ಈವರೆಗೆ ಹತ್ತೊಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ಈ ಉದ್ದೇಶದ ಒಪ್ಪಂದಕ್ಕೆ ಸಹಿ ಹಾಕಿವೆ.
* ಅಗತ್ಯ ಭೂಮಿ ಒದಗಿಸುವುದು, ಅಗತ್ಯ ರಕ್ಷಣೆ, ವಿಮಾನ ನಿಲ್ದಾಣದಲ್ಲಿ ಒದಗಿಸುವ ಸೇವೆಯಲ್ಲಿ ವಿನಾಯಿತಿ ಒದಗಿಸುವುದಕ್ಕೆ ರಾಜ್ಯ ಸರಕಾರಗಳು ಒಪ್ಪಿವೆ. ಜತೆಗೆ ವಯಾಬಲಿಟಿ ಕ್ಯಾಪ್ ಫಂಡಿಂಗ್ ನಲ್ಲಿ ಶೇ 20ರಷ್ಟನ್ನು ರಾಜ್ಯಗಳು ಭರಿಸಬೇಕು. ಇನ್ನು ವಾಯವ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶೇ 10ರಷ್ಟು ಭರಿಸಬೇಕು.
* ಅಲಯನ್ಸ್ ಏರ್, ಸ್ಪೈಸ್ ಜೆಟ್, ಟರ್ಬೀ ಮೇಘಾ, ಏರ್ ಒಡಿಶಾ ಮತ್ತು ಏರ್ ಡೆಕ್ಕನ್ ಏರ್ ಲೈನ್ಸ್ ಗಳು 128 ಹೊಸ ಮಾರ್ಗದಲ್ಲಿ ಸಂಚರಿಸುತ್ತವೆ.
* ಪ್ರತಿ ಸೀಟಿಗೆ/ಒಂದು ಗಂಟೆ ಪ್ರಯಾಣಕ್ಕೆ ಗರಿಷ್ಠ 2,500 ನಿಗದಿ ಮಾಡಲಾಗಿದೆ. “ಅಂದಾಜು 500 ಕಿಲೋಮೀಟರ್ ದೂರದ ಒಂದು ಗಂಟೆ ಪ್ರಯಾಣಕ್ಕೆ ಅಥವಾ ಮೂವತ್ತು ನಿಮಿಷದ ಹೆಲಿಕಾಪ್ಟರ್ ಪ್ರಯಾಣಕ್ಕೆ ಗರಿಷ್ಠ 2,500 ನಿಗದಿ ಮಾಡಲಾಗಿದೆ” ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
* ಜೂನ್ 15, 2016ರಲ್ಲಿ ಬಿಡುಗಡೆ ಮಾಡಿದ ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ ಭಾಗವಾಗಿ ಉಡಾನ್ ಯೋಜನೆ ಪರಿಚಯಿಸಲಾಗಿದೆ.
* ಹೈದರಾ-ಕಡಪಾ, ಹೈದರಾಬಾದ್-ನಾಂದೇಡ್, ನಾಂದೇಡ್-ಮುಂಬೈ, ಚೆನ್ನೈ-ಮೈಸೂರು, ಚೆನ್ನೈ-ಸೇಲಂ, ಮುಂಬೈ-ಪೆÇೀರಬಂದರ್, ಕೋಲ್ಕತ್ತಾ-ಐಜ್ ವಾಲ್, ಪುಣೆ-ನಾಸಿಕ್, ದೆಹಲಿ-ಡೆಹ್ರಾಡೂನ್, ರಾಂಚಿ-ರಾಯ್ ಪುರ್ ಸೇರಿದಂತೆ ಇತರೆ ಮಾರ್ಗಗಳಲ್ಲಿ ವಿಮಾನ ಯಾನಕ್ಕೆ ಪ್ರಸ್ತಾವಿಸಲಾಗಿದೆ.

ಜನವರಿಯಿಂದ ಜಾರಿಗೆ ಬರುವ ಸಂಭಾವ್ಯತೆ ಇರುವ ‘ಉಡಾನ್’ ಎಂಬ ಈ ಯೋಜನೆಯಡಿ ಒಂದು ತಾಸಿನ ಅವಧಿಯಲ್ಲಿ ಮುಗಿಯಬಹುದಾದ ವಿಮಾನ ಪ್ರಯಾಣಕ್ಕೆ ಗರಿಷ್ಠ 2500 ರೂ. ಪ್ರಯಾಣ ದರ ನಿಗದಿ ಮಾಡಲಾಗುತ್ತದೆ. ಬಳಕೆಯಾಗದ ಅಥವಾ ಕಡಿಮೆ ಬಳಕೆಯಾಗುತ್ತಿರುವ ವಿಮಾನ ನಿಲ್ದಾಣಗಳು ಈ ಯೋಜನೆಯಡಿ ಬರುತ್ತವೆ. ಇದು ಕರ್ನಾಟಕದಲ್ಲಿ ಕಡಿಮೆ ಬಳಕೆಯಲ್ಲಿರುವ ಹುಬ್ಬಳ್ಳಿ, ಮೈಸೂರು ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಅನ್ವಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಅಂತಾರಾಷ್ಟ್ರೀಯ ವಿಮಾನಯಾನ ಸೌಲಭ್ಯ ಕಲ್ಪಿಸುವ ‘ಹಾರಾಟ ನಿಬಿಡ’ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗೆ ಅಥವಾ ಹೆಚ್ಚು ವಿಮಾನ ಹಾರಾಟ ಹೊಂದಿರುವ ದೇಶದ ಇನ್ನಾವುದೇ ವಿಮಾನ ನಿಲ್ದಾಣಗಳಿಗೆ ಅನ್ವಯಿಸದು.

Related image

ಯೋಜನೆ ಅನುಷ್ಠಾನ ಹೇಗೆ?

ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್- ಜನಸಾಮಾನ್ಯರ ವಿಮಾನ ಹಾರಾಟಕ್ಕೆ ನೆರವು) ಯೋಜನೆಯಡಿ ಕೇಂದ್ರ ಸರ್ಕಾರ, ಬಳಕೆಯಾಗದ ಅಥವಾ ಕಡಿಮೆ ಬಳಕೆಯಾಗುತ್ತಿರುವ ವಿಮಾನ ನಿಲ್ದಾಣಗಳನ್ನು ಗುರುತಿಸಲಿದೆ. ದೇಶದಲ್ಲಿ ಬಳಕೆಯಾಗದ 394 ಮತ್ತು ಕಡಿಮೆ ಬಳಕೆಯಾಗುತ್ತಿರುವ 16 ವಿಮಾನ ನಿಲ್ದಾಣಗಳಿವೆ. ಆ ನಿಲ್ದಾಣಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ವಿಮಾನಯಾನ ಕಂಪನಿಗಳು ಮುಂದೆ ಬರಬೇಕು. 476ರಿಂದ 500 ಕಿ.ಮೀ. ದೂರದಲ್ಲಿರುವ, ಒಂದು ತಾಸಿನಲ್ಲಿ ಕ್ರಮಿಸಬಹುದಾದ ಈ ಮಾರ್ಗಗಳಲ್ಲಿನ ಶೇ.50ರಷ್ಟು ಸೀಟುಗಳಿಗೆ ವಿಮಾನ ಕಂಪನಿಗಳು ಗರಿಷ್ಠ 2500 ರೂ. ಬೆಲೆ ನಿಗದಿಪಡಿಸಬೇಕು. ಉಳಿದ ಸೀಟುಗಳಿಗೆ ಮಾರುಕಟ್ಟೆ ದರ ನಿಗದಿಪಡಿಸಬಹುದು.

ಗರಿಷ್ಠ 2500 ರೂ. ದರ ನಿಗದಿಯಿಂದ ವಿಮಾನ ಕಂಪನಿಗಳ ಆದಾಯ ಖೋತಾ ಆದರೆ ವ್ಯತ್ಯಾಸದ ಮೊತ್ತವನ್ನು ಸರ್ಕಾರ ಭರಿಸಲಿದೆ. ಇದಕ್ಕಾಗಿ ವಿಮಾನ ಪ್ರಯಾಣಿಕರ ಮೇಲೆ ಶೇ.2ರಷ್ಟು ಸೆಸ್ ವಿಧಿಸುವ ಅಥವಾ ಪ್ರಮುಖ ನಿಲ್ದಾಣಗಳಲ್ಲಿ ಇಳಿಯುವ ವಿಮಾನಗಳಿಂದ ಪ್ರತಿ ಬಾರಿಗೆ 8 ಸಾವಿರ ರೂ. ಸಂಗ್ರಹಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದು ಅಂತಿಮವಾಗಿಲ್ಲ. ಇದೇ ವೇಳೆ, ಹೆಲಿಕಾಪ್ಟರ್‍ಗಳಿಗೂ ಯೋಜನೆ ಆರಂಭಿಸಲಾಗಿದ್ದು, ಮೊದಲ ಅರ್ಧ ತಾಸಿನ ಯಾನಕ್ಕೆ 2500 ರೂ. ಹಾಗೂ 1 ತಾಸಿನ ನಂತರದ ಯಾನಕ್ಕೆ ಗರಿಷ್ಠ 5000 ರೂ. ನಿಗದಿಪಡಿಸಲಾಗಿದೆ.

ಉಡಾನ್ ವಿಮಾನ ಮಾರ್ಗಗಳು:

ಉಡಾನ್ ವಿಮಾನ ಯೋಜನೆಯಡಿಯಲ್ಲಿ ಹಂತ ಹಂತವಾಗಿ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಡೆಸಲಿವೆ. ದೆಹಲಿ- ಶಿಮ್ಲಾ, ನಾಂದೇಡ್- ಹೈದರಾಬಾದ್ ಮತ್ತು ಕಡಪಾ-ಹೈದರಾಬಾದ್ ವಲಯಗಳಲ್ಲಿ ಈಗ ಉಡಾನ್ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣಗಳು ಕಾರ್ಯ ಪ್ರವೃತ್ತವಾಗಿವೆ. ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ತಮಿಳುನಾಡು, ಕರ್ನಾಟಕ ಮತ್ತು ಪುದುಚೇರಿ ಸೇರಿದಂತೆ 20ಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಡಾನ್ ವಿಮಾನ ಹಾರಾಡಲಿದೆ.

ಬಟಿಂಡಾ, ಶಿಮ್ಲಾ, ಬಿಲಾಸ್‍ಪುರ್, ನೈವೇಲಿಸ ಕೂಚ್ ಬೆಹರ್, ನಾಂದೇಡ್ ಮತ್ತು ಕಡಪಾದಲ್ಲಿ ಈ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣಗಳನ್ನು
ಸಂಪರ್ಕಗೊಳಪಡಿಸಲಾಗುವುದು. ಇನ್ನು ವಿಮಾನಯಾನ ಸಂಸ್ಥೆಗಳ ವೆಬ್‍ಸೈಟ್ ಮತ್ತು ವಿಮಾನ ಟಿಕೆಟ್ ಮಾರುವ ವೆಬ್‍ಸೈಟ್‍ಗಳಾದ ಯಾತ್ರಾ ಮತ್ತು ಮೇಕ್ ಮೈ ಟ್ರಿಪ್ ಮೂಲಕ ಉಡಾನ್ ಯೋಜನೆಯಡಿ ವಿಮಾನ ಟಿಕೆಟುಗಳನ್ನು ಖರೀದಿಸಬಹುದು.

ಉಡಾನ್ ವಿಮಾನಯಾನ ಆಪರೇಟರ್‍ಗಳು:

* ಅಲಯನ್ಸ್ ಏರ್, ಏರ್ ಡೆಕ್ಕನ್, ಸ್ಪೈಸ್ ಜೆಟ್ , ಏರ್ ಒಡಿಶಾ ಮತ್ತು ಟ್ರೂ ಜೆಟ್ಸ್ 70 ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ 128 ವಿಮಾನ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲು ಈ 5 ವಿಮಾನಯಾನ ಸಂಸ್ಥೆಗಳು ಹರಾಜು ಪಡೆದಿವೆ.
* ಏರ್ ಒಡಿಶಾ -50, ಏರ್ ಡೆಕ್ಕನ್- 34, ಟರ್ಬೊ ಮೇಘಾ ಏರ್ ವೇಸ್ -18, ಏರ್ ಇಂಡಿಯಾದ ಅಲಯನ್ಸ್ ಏರ್ -15 ಮತ್ತು ಸ್ಪೈಸ್ ಜೆಟ್- 11 ವಿಮಾನ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿವೆ.

ದೇಶದ ಮೊದಲ ನಾಗರಿಕ ವಿಮಾನ ಯಾನ ನೀತಿಗೆ ಅನುಗುಣವಾಗಿ ವಿಮಾನ ಪ್ರಯಾಣವನ್ನು ಜನಸಾಮಾನ್ಯರಿಗೂ ಕೈಗೆಟುಕುವಂತೆ ಮಾಡುವುದು ಮತ್ತು ಪ್ರಾದೇಶಿಕ ಸಂಪರ್ಕ ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. ಅಷ್ಟೆ ಅಲ್ಲದೇ ಈ ಕೈಗೆಟುಕುವ, ಅನುಕೂಲಕರ ಮತ್ತು ಅಗ್ಗದ ಪ್ರಯಾಣ ದರವು ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಲು ಮಾತ್ರವಲ್ಲದೇ ವಿಮಾನ ನಿಲ್ದಾಣಗಳ ಬಳಕೆಯ ಪ್ರಮಾಣ ಹೆಚ್ಚಳವಾಗಲು ಈ ಯೋಜನೆ ನೆರವಾಗಲಿರುವುದಂತೂ ಖಂಡಿತಾ!!

– ಅಲೋಖಾ

Tags

Related Articles

Close