ಪ್ರಚಲಿತ

ಹಿಂದುಗಳಾಯಿತು, ಈಗ ಈ ನಾಯಿ ಕನ್ನಡಿಗರ ಬೆನ್ನು ಬಿದ್ದಿದೆ! ಪ್ರೊ ಕೆ ಎಸ್ ಭಗವಾನನಿಗೊಂದು ಬಹಿರಂಗ ಪತ್ರ!!

ಈ ವಿಚಾರವಾದಿಗಳ ದೊಂಬರಾಟ ಎಲ್ಲಿಯವರೆಗಿರುತ್ತದೆಂದರೆ ಹುಟ್ಟಿದ ಕುಲವನ್ನೂ ದ್ವೇಷಿಸುವುದಷ್ಟೇ ಅಲ್ಲದೇ, ಧರ್ಮ ಗ್ರಂಥಗಳಿಗೆ ತಮ್ಮದೇ ಆದ ಹೊಸ
ಅರ್ಥವನ್ನೂ ನೀಡಿ ನಂತರದ ಪೀಳಿಗೆಯಲ್ಲಿ ಧರ್ಮವೆಂದರೇ ಏನು ಎನ್ನುವಷ್ಟು ಸ್ವೇಚ್ಛಾಚಾರವಾಗಿ ಬೆಳೆಯುವಂತಹ ಅವಕಾಶ ಕಲ್ಪಿಸಿಕೊಡುವುದಕ್ಕೆ ಹಾದಿ
ಕಲ್ಪಿಸಿಬಿಡಿವ ಇಂತಹ ಹರಾಮಿಗಳಿಗೆ ಪ್ರಶ್ನೆ ಮಾಡಲೇಬೇಕಾದ ಅಗತ್ಯವಿದೆ!

ಮೈಸೂರಿನಲ್ಲಿ ನಡೆದ ದಸರಾ ಉತ್ಸವದಲ್ಲಿ ಮತ್ತದೇ ಹಿಂದೂ ಧರ್ಮದ ಘನತೆಯನ್ನು ಪ್ರಶ್ನೆ ಮಾಡಿದ ಪ್ರೋ.ಕೆ.ಎಸ್.ಭಗವಾನರಿಗೆ ನನ್ನದೊಂದಿಷ್ಟು ಪ್ರಶ್ನೆಗಳಿದೆ. ಜೊತೆಗೆ ಮೈಸೂರು ದಸರಾವನ್ನು ಆಯೋಜಿಸಿದವರಿಗೂ ಸಹ!!!

ರಾಮ ಯಾರು?!

ನಿಮಗೆಲ್ಲಿ 60 ದಾಟಿತೋ, ಅದಾದ ಮೇಲೆ ಅರಳು ಮರಳು ಹಿಡಿದಿದೆ ಎಂಬುದನ್ನು ಚೆನ್ನಾಗಿಯೇ ಸಾಬೀತು ಪಡಿಸುತ್ತಾ ಬಂದಿದ್ದೀರಿ ಬಿಡಿ!

ಪ್ರತಿ ಬಾರಿಯೂ ರಾಮನನ್ನೇ ತೆಗಳುವ ನೀವು ರಾಮಾಯಣದ ಬಗ್ಗೆ ಎಷ್ಟು ಅಧ್ಯಯನ ಮಾಡಿದ್ದೀರಿ?! ಏಳು ಕಾಂಡದ ಒಂದೆರಡು ಶ್ಲೋಕಗಳನ್ನಾದರೂ ಸರಿಯಾಗಿ ಅರ್ಥೈಸುವಷ್ಟು ತಾಕತ್ತು ನಿಮ್ಮಲ್ಲಿದೆಯೇ?

ರಾಮ ದೇವರಲ್ಲ, ರಾಮಾಯಣದ ಎಲ್ಲೂ ರಾಮನನ್ನು ದೇವರೆಂದು ಉಲ್ಲೇಖಿಸಿಲ್ಲ ವೆಂದ ನಿಮಗೆ ಇಡೀ ರಾಮಾಯಣದಲ್ಲಿ ‘ಭಗವಾನ್ ರಾಮ:’ ಎಂದು ವಾಲ್ಮೀಕಿ ಬರೆದದ್ದು ಕಾಣಿಸಲಿಲ್ಲವೋ ಅಥವಾ ನಿಮ್ಮ ಹೆಸರೇ ಅಲ್ಲಿದ್ದದ್ದಕ್ಕೆ ನಿಮಗೆ ಮತಿಭ್ರಮಣೆಯಾಯಿತೋ! ಬಿಡಿ! ನೀವು ರಾಮಾಯಣವನ್ನು ಓದುವಷ್ಟು ಮಾನಸಿಕವಾಗಿ ಸ್ಥಿಮಿತದಲ್ಲಿಲ್ಲ ಎಂಬ ಅರಿವಿದ್ದೇ ಪ್ರಶ್ನೆ ಕೇಳುತ್ತಿರುವುದು ನನ್ನ ದೌರ್ಭಾಗ್ಯವಷ್ಟೇ!

ರಾಮ ದೇವರಾಗಿರಲಿಲ್ಲ, ಆತ ಒಬ್ಬ ಮಾನವ! ವಾಲ್ಮೀಕಿ ಅವನನ್ನು ಹೊಗಳಿ ಅಟ್ಟಕ್ಕೇರಿಸಿದ್ದಾನೆ ಎಂದು ಅರ್ಥೈಸಿದ ನಿಮಗೆ ವಿಷ್ಣು ಪುರಾಣದ ಅರಿವಿಲ್ಲವೇ?! ವಿಷ್ಣುವಿನ ದಶಾವತಾರದಲ್ಲಿ ರಾಮನ ಅವತಾರವೂ ಒಂದು ಎಂಬುವ ಜ್ಞಾನ ನಿಮಗಿರಲಿಲ್ಲವೆಂದು ಇಲ್ಲಿಗೆ ಸ್ಪಷ್ಟವಾಯಿತು!

ಅಕಸ್ಮಾತ್, ಈ ಅವತಾರಗಳೆಲ್ಲ ಸುಳ್ಳೆಂದು ನೀವು ಸಾಧಿಸಿದರೆ ನಿಮಗೆ ಅಲ್ಲಾಹ್ ಕುರಿಯಾಗಿ ಅವತರಿಸಿದ್ದು, ಜೀಸಸ್ ನೀರ ಮೇಲೆ ನಡೆದಿದ್ದೆಲ್ಲ ಸುಳ್ಳೆಂದೇ ವಾದಿಸಿದ್ದಿರಬೇಕಲ್ಲವೇ?!

ರಾಮ ಬಸುರಿ ಹೆಂಗಸನ್ನು ಕಾಡಿಗಟ್ಟಿದ ಎಂದಿರಿ! ಒಂದು ರೀತಿಯಲ್ಲಿ ಆತ ಮಾಡಿದ್ದು ತಪ್ಪೇ ಎಂದೆನಿಸಿದರೂ ಧರ್ಮಕ್ಕೆ ವಿರುದ್ಧವಾದ ಕಾರ್ಯಕ್ಕಿಳಿಯದ ರಾಮ ಅಂದಿನ ಸಮಾಜದ ಸ್ಥಿತಿಗತಿಗೆ ಸ್ವತಃ ತಾನೇ ಧರ್ಮವನ್ನು ಪಾಲಿಸಿದ್ದು ಸರಿ ಎಂದೆನಿಸಿಕೊಳ್ಳುತ್ತದೆ! ನೀವು ನಿಮ್ಮ ನಾಲಿಗೆಯನ್ನು ಹರಿ ಬಿಟ್ಟ ಹಾಗೆ ರಾಮನೇನೂ ಆಕೆಯನ್ನು ಬಡಿದು ಕಾಡಗಟ್ಟಲಿಲ್ಲ. ಆಕೆಯ ರಕ್ಷಣೆಗೆ ಸ್ವತಃ ರಾಮನ ಬಂಟನೇ ಬಾಲಕನ ರೂಪದಲ್ಲಿ ಸೀತೆಯ ಜೊತೆಗಿದ್ದ ಎನ್ನುವುದನ್ನು ವಾಲ್ಮೀಕಿ ಉಲ್ಲೇಖಿಸಿದ್ದು ನಿಮಗೆ ಕಾಣದಂತೆ ನಿಮ್ಮ ತಿಕ್ಕಲು ಬುದ್ದಿ ಮರೆಮಾಚಿತೇ ಸ್ವಾಮಿ?!

ಶೂದ್ರಳ ಒಡಲಲ್ಲಿ ಹುಟ್ಟಿದ ಶಂಭುಕನನ್ನು ರಾಮ ಪುರೋಹಿತರ ಮಾತು ಕೇಳಿ ‘ಶಂಭುಕ’ ಕೆಳ ಜಾತಿಯನವನಾದ್ದರಿಂದ ತಲೆ ಕತ್ತರಿಸಿದ ಎಂದ ನಿಮಗೆ ಸಂಸ್ಕೃತ ಭಾಷೆಯನ್ನು ಅರಗಿಸಿಕೊಳ್ಳುವಷ್ಟು ಬುದ್ಧಿಮತ್ತೆಯಿದೆಯಾ?! ಅಥವಾ ನಿಮ್ಮ ಈ ಹೇಳಿಕೆಗೆ ಸಮರ್ಥನೆ ಕೊಡುವಷ್ಟು ತಾಕತ್ತು ನಿಮ್ಮಲ್ಲಿದೆಯಾ?

ನಿಮ್ಮ ಈ ‘ಕೆಳಜಾತಿ’ ಯ ಕೀಳು ಮಟ್ಟದ ವಾದಕ್ಕೆ ಸರಿಯಾಗಿಯೇ ನಾನೂ ಕೇಳುತ್ತೇನೆ! ವಾಲ್ಮೀಕಿ ಯಾವ ಜಾತಿಯವ ಹಾಗಾದರೆ?! ನಿಮ್ಮರ್ಥದಲ್ಲಿ ರಾಮ ಜಾತಿ ಭೇಧ ಮಾಡಿದಿದ್ದರೆ, ಶಂಭುಕ ಧರ್ಮಮಾರ್ಗದಲ್ಲಿ ನಡೆದ ಮೇಲೂ ರಾಮ ಆತನ ವಧೆ ಮಾಡಿದ್ದಿದ್ದರೆ ವಾಲ್ಮೀಕಿ ರಾಮಾಯಣವನ್ನು ಬರೆಯುತ್ತಲೇ ಇರಲಿಲ್ಲ.

ನಿಮ್ಮ ಈ ಶಂಭುಕನ ಪರವಾದ ಸರಿಯಾಗಿಯೇ ಇದೆ! ಯಾಕೆ ಗೊತ್ತಾ?! ಶಂಭುಕ ದುರುದ್ದೇಶವನ್ನಿಟ್ಟುಕೊಂಡು ತಪಸ್ಸು ಮಾಡಲು ಕುಳಿತಾಗ, ವೇದದಲ್ಲಿ ಹೇಳಿರುವಂತಹ ನಿಯಮಗಳನ್ನು ಮುರಿದಾಗ, ಧರ್ಮ ಸಂಸ್ಥಾಪನೆಗೆ ಸತ್ಯದ ವಿರುದ್ಧ ನಡೆದವರನ್ನು ಸಂಹರಿಸುವುದು ಒಬ್ಬ ಪ್ರಜಾಪಾಲಕನಾದ ರಾಮನ ಕರ್ತವ್ಯ! ಅದನ್ನು ರಾಮ ನಿರ್ವಿಘ್ನವಾಗಿಯೇ ಮಾಡಿ‌ದ್ದನಷ್ಟೇ! ವಿಪರ್ಯಾಸ! ಇವತ್ತೂ ಸಹ ಶುಂಭಕನಂತಹ ಅದೆಷ್ಟೋ ಧರ್ಮದ ವಿರುದ್ಧ ನಡೆದವರ, ದೇಶದ ವಿರುದ್ಧ ನಡೆದವರ ಬೆಂಬಲಿಸುತ್ತಿರುವ ನಿಮಗೆ ರಾಮನ ಆದರ್ಶ ಅಥವಾ ಹಿಂದೂ ಧರ್ಮದ ಸತ್ಯಾಸತ್ಯತೆ ತಿಳಿಯುವಂತಹದ್ದಲ್ಲ ಎಂಬ ನನ್ನ ಅಭಿಪ್ರಾಯ ಸರಿ!

ನಿಮಗೆ ತಲೆ ಸರಿಯಿದೆಯಾ?!

ಇದನ್ನು ನಾ ಕೇಳಲೇಬೇಕಿದೆ! ಧರ್ಮದ ಬಗ್ಗೆ, ಮತದ ಬಗ‌್ಗೆ, ಆದರ್ಶಗಳ ಬಗ್ಗೆ ಮಾತನಾಡುವ ನೀವು ಅವತ್ತು ನಾನು ಬೌದ್ಧ ಧರ್ಮವನ್ನು ಪಾಲಿಸುವವನು ಎಂದಿರಿ! ಸ್ವಾಮಿ! ನಿಮಗೊಂದು ಪ್ರಶ್ನೆ! ಬೌದ್ಧ ಮತದಲ್ಲಿ ಎಲ್ಲಿಯಾದರೂ ಪರರ ಧರ್ಮಗ್ರಂಥಗಳನ್ನು ಬೆಂಕಿಗೆ ಹಾಕಿ ಎಂದಿದ್ದಾರೆಯೇ?! ಪರರ ನಂಬಿಕೆಗಳ ಬಗ್ಗೆ ಅಶ್ಲೀಲವಾಗಿ ಅವಹೇಳನ ಮಾಡಿ ಎಂದಿದೆಯೇ?!

ಗೋಮಾಂಸ ಭಕ್ಷಣೆ ಮಾಡಿ ಗೋಮಾಂಸ ತಿಂದರೆ ಆರೋಗ್ಯಕ್ಕೆ ಒಳ್ಳೆಯದೆಂದು ಅವೈಜ್ಞಾನಿಕವಾಗಿ ಭಾಷಣ ಮಾಡಿದ ನಿಮಗೆ ಬುದ್ಧ ಎಲ್ಲಿಯಾದರೂ ಗೋ ಮಾಂಸ ತಿನ್ನಲು ಪ್ರೋತ್ಸಾಹಿಸಿದ್ದನೇ?! ಎಲ್ಲಿಯಾದರೂ ಪ್ರಾಣಿಗಳ ಬೇಟೆಯಾಡು ಎಂದಿದ್ದನೇ?! ನೀವೆನು ಮಾಡಿದಿರಿ?! ಬುದ್ಧ ಎನ್ನುವುದನ್ನೂ ಬಿಡಲಿಲ್ಲ, ಹಿಂಸೆಯನ್ನೂ ವಿರೋಧಿಸಲಿಲ್ಲ! ಗೋಮಾಂಸವನ್ನು ವಿಚಾರವಾದದ ತಳಹದಿಯ ಮೇಲೆ ತಿಂದ ನಿಮಗೆ ಯಾವುದರಲ್ಲಿ ಹೊಡೆಯಬೇಕು ಭಗವಾನ್?!

ನಿಮ್ಮ ಅಡ್ಡಕಸುಬಿ ವಿಚಾರವಾದಿಗಳೆಲ್ಲ ಇನ್ನೂ ಮುಂದುವರೆದು ವಿಷ್ಣು ಅತ್ಯಾಚಾರ ಮಾಡಿದ್ದಾನೆ, ಬ್ರಹ್ಮ ಮಗಳ ತಲೆ ಹಿಡಿದಿದ್ದಾನೆ ಎಂದೆಲ್ಲ ಬೊಬ್ಬಿರಿದು
ಅನ್ಯಧರ್ಮದವರ ಪ್ರಚೋದನೆಗೊಳಗಾಗಿ ಗೋಮಾಂಸ ನೆಕ್ಕುವಾಗ ಅಲ್ಲಾಹನ ನೆನಪೂ ಬರೋದಿಲ್ಲ, 72 ಕನ್ಯೆಯರ ವಿಚಾರವೂ ಬರುವುದಿಲ್ಲ ಎನ್ನುವುದು
ದುರದೃಷ್ಟಕರ!

ಕಾವೇರಿಯೂ ಬಚಾವಾಗಲಿಲ್ಲ!

ನಿಮ್ಮ ಎಲುಬಿಲ್ಲದ ನಾಲಿಗೆಗೆ ಇದೊಂದು ಬಾಕಿ!!! ಕಾವೇರಿ ಎಲ್ಲರಿಗೂ ಸೇರಿದ್ದಾಳೆ! ಪಾಂಡಿಚೇರಿ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿಯೂ ಹರಿಯುತ್ತಿದ್ದಾಳೆ! ಕಾವೇರಿ ನಮ್ಮವಳೆಂದು ಹೇಳಬೇಡಿ ಎಂದು ಕನ್ನಡಿಗರಿಗೆ ಭಾಷಣ ಬಿಗಿದ ನೀವು ಈಗ ಕರ್ನಾಟಕದ ಘನತೆಯನ್ನೇ ಪ್ರಶ್ನಿಸುವುದನ್ನು ಹೊಸದಾಗಿ ಕಲಿತಂತಿದೆಯಷ್ಟೇ! ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದರೆ ವಿಚಾರವಾದದ ಸರಣಿಗಳಿಗೆ ನ್ಯಾಯ ಸಿಗುತ್ತದೆಯಾ?!

ಕೊನೆಯದಾಗಿ ಇಷ್ಟೇ!!!

ನೀವು ಯಾವ ತಳಿ ಎಂಬುದು ನಿಜಕ್ಕೂ ನನ್ನಲ್ಲಿರುವ ಒಂದು ಗೊಂದಲ!! ಹಿಂದೂ ಧರ್ಮವನ್ನು ದ್ವೇಷಿಸುವ ನೀವು ಇನ್ನೂ ಯಾಕೆ ನಿಮ್ಮೊಲವಿನ ಇಸ್ಲಾಂ ಗೋ ಅಥವಾ ಕ್ರೈಸ್ತ ಮತಕ್ಕೋ ಮತಾಂತರವಾಗಿಲ್ಲ?!

ಭಗವಂತನನ್ನೇ ನಂಬದ ನೀವು ಭಗವಾನ್ ಎನ್ನುವ ಹೆಸರಿನಿಂದಲೇ ಇನ್ನೂ ಬದುಕಿರುವುದ್ಯಾಕೆ?!

ಬೌದ್ಧ ಮತ ಹಿಂದೂ ಗಳದ್ದಲ್ಲ ಎಂದ ನಿಮಗೆ ಬುದ್ಧ ಒಬ್ಬ ಹಿಂದೂವೇ ಎನ್ನುವುದು ನಿಮ್ಮ ಯಾವ ಪ್ರಜ್ಞೆಗೂ ನಿಲುಕಲಿಲ್ಲವೇಕೆ?!

ಹಿಂದೂಗಳ ಹಬ್ಬವನ್ನೆಲ್ಲ ದ್ವೇಷಿಸುವ ನೀವು ದಸರಾ ಉತ್ಸವಕ್ಕೆ ಹೋಗಿ ಪುಂಗಿ ಊದಿದ್ಯಾಕೆ?! ಇದನ್ನಾದರೂ ಹೇಳಿಬಿಡಿ! ಸಿಗುವ ಸಂಭಾವನೆಗಾ?! ಅಥವಾ ಉಪನ್ಯಾಸದ ಆಹ್ವಾನಕ್ಕೆ ಬರವಿತ್ತಾ?!

ಭಗವಾನ್! ಗೌರವಯುತವಾಗಿಯೇ ಹೇಳ್ತಿದ‌್ದೇನೆ! ಇನ್ನಾದರೂ ಎಲುಬಿಲ್ಲದ ನಾಲಿಗೆಯನ್ನು ಹರಿಬಿಡುವುದನ್ನು ಕಡಿಮೆ ಮಾಡಿ! ಅರಳು ಮರಳು ಎಂದು ಯಾವಾಗಲೂ ಸುಮ್ಮನೇ ಕೂತಿರುವುದಿಲ್ಲ ಸಭೆಯಲ್ಲಿ ಸ್ವಾಭಿಮಾನಿ ಹಿಂದೂಗಳು! ನೆನಪಿಡಿ!

– ತಪಸ್ವಿ

Tags

Related Articles

Close