ಪ್ರಚಲಿತ

ಹಿಂದುಗಳಿಗೆ ಸಂದ ದೊಡ್ಡ ಜಯ! ಹಿಂದೂ ಭಯೋತ್ಪಾದನೆಯಿದೆ ಎಂದವನೇ ಇಂದು ಕುರ್ತಾದೊಳಗಿನಿಂದ ಜನಿವಾರ ತೆಗೆದು ತೋರಿಸಿದ!

ಆಶ್ಚರ್ಯವಾಗುವುದು ಇದೇ ನೋಡಿ! ಹುಟ್ಟಿನಿಂದಲೇ ಹಿಂದೂ ವಿರೋಧಿ ತತ್ವಗಳ ಜೊತೆ ಬದುಕಿದ ಒಬ್ಬ ತನ್ನ ಕುರ್ತಾದೊಳಗಿನಿಂದಲೇ ಬಚ್ಚಿಟ್ಟ ಜನಿವಾರವೊಂದನ್ನು ತೋರಿಸಿ ‘ನಾನು ಜನಿವಾರ ಹಾಕಿದ ಬ್ರಾಹ್ಮಣ’ ಎಂದುಬಿಟ್ಟಾಗ ಸ್ವತಃ ಹಿಂದೂ ವಿರೋಧಿಯಾಗೆಂದು ಆಶೀರ್ವದಿಸಿದ್ದ ಇಟಲಿಯ ಅಮ್ಮನೇ ದಂಗುಬಡಿದು ಕೂತಿದ್ದಳು!

ಗುಜರಾತ್ ಚುನಾವಣೆ ಹತ್ತಿರವಾಗುತ್ತಿದ್ದ ಹಾಗೇ. . .

ವಾಸ್ತವವನ್ನೇ ಚಿತ್ರಿಸಬೇಕೆಂದರೆ ಇಷ್ಟು ವರ್ಷಗಳ ಕಾಂಗ‌್ರೆಸ್ ನ ಆಡಳಿತಾವಧಿಯಲ್ಲಿ, ಕಾಂಗ್ರೆಸ್ ನ ಪ್ರತಿ ನಾಯಕನೂ ಬಹುಷಃ ಹಿಂದುತ್ವ ವಿರೋಧಿಯಾಗಿಯೇ ಆಡಳಿತ ನಡೆಸುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿದ್ದನೋ ಎಂದೆನಿಸುವಷ್ಟು ತುಷ್ಟೀಕರಣಕ್ಕಿಳಿದಿದ್ದಾನೆ! ಅಷ್ಟಾದರೂ ಸಹ, ಬರೋಬ್ಬರಿ 70 ವರ್ಷಗಳ ಕಾಲ ಸ್ವಾಭಿಮಾನವನ್ನೂ ಮರೆತು ಕಾಂಗ‌್ರೆಸ್ ನ ಕೈಗೆ ಅಧಿಕಾರದ ಗದ್ದುಗೆಯನ್ನು ನೀಡುತ್ತಲೇ ಬಂದಿದ್ದ ಹಿಂದೂಗಳು ಮಂಪರಿನಿಂದ ಹೊರ ಬಂದಿದ್ದಾರೆಂದು ಅರಿವಾಗಿದ್ದು 2014 ರಲ್ಲಿ ಮೋದಿಯ ಕೈಗೆ ಅಧಿಕಾರವನ್ನು ಕೊಟ್ಟಾಗ!

ಅಲ್ಲಿಂದ ನೋಡಿ! ಅಲ್ಲಿಯ ತನಕವೂ ಕೂಡ, ಹಿಂದೂ ಭಯೋತ್ಪಾದನೆಯೆಂಬ ವಿಷಬೀಜ ಬಿತ್ತಲು ದೇಶದ ಭದ್ರತಾ ವ್ಯವಸ್ಥೆಯನ್ನೇ ಬಯಲಿಗಿಟ್ಟಿದ್ದ ಕಾಂಗ್ರೆಸ್ ನ ಮೇಲೆ ಹಿಂದೂಗಳು ಶಾಪ ಹಾಕಲು ಪ್ರಾರಂಭಿಸಿದರು! ಅಷ್ಟಕ್ಕೇ ಬಿಡದ ಹಿಂದೂಗಳು ಯಾವಾಗ ಗೋಪೂಜೆಯ ಮಂತ್ರವನ್ನು ಜಪಿಸಿದರೋ, ಕಾಂಗ‌್ರೆಸ್ ನ ಗಾಂಧೀ ಕುಟುಂಬವೊಂದು ಹೌಹಾರಿ ಹೋಗಿತ್ತು! ಎಲ್ಲಿ, ದೇಶದಾದ್ಯಂತ ಯಾವ ಕಾನೂನನ್ನೂ ಲೆಕ್ಕಿಸದೇ ಗೋಕಳ್ಳರಿಗೆ ಗೂಸಾ ಕೊಟ್ಟರೋ, ಯಾವಾಗ ಮುಂಬೈ ಸ್ಫೋಟದ ರೂವಾರಿಯೇ ಕಾಂಗ್ರೆಸ್ ಎಂಬುದಾಗಿ ಬೆಟ್ಟು ಮಾಡಿ ತೋರಿಸಿದರೋ, ಯಾವಾಗ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಳಿಗಾಗಿ ಧ್ವನಿ ಎತ್ತಿದರೋ, ಯಾವಾಗ ಕಾಲೊನೆಲ್ ಪುರೋಹಿತ್ ಬಿಡುಗಡೆಗೆ ಕಾಂಗ್ರೆಸ್ ನ ವಿರುದ್ಧವೂ ನಿಂತರೋ. . . ಆಗಲೆಲ್ಲ, ಹುಲಿ ಚರ್ಮ ತೊಟ್ಟಿದ್ದ ನರಿಯೊಂದು ಊಳಿಡುತ್ತಾ ಮುದುರಿ ಕುಳಿತಿದೆ! ಹಾ! ಅದೇ ಕಾಂಗ್ರೆಸ್ ನ ಹಿಂದೂ ವಿರೋಧಿ ಮನಃಸ್ಥಿತಿಯೊಂದು ಕಾಂಗ್ರೆಸ್ ಗೆ ಮುಳುವಾಗಿದ್ದು ಹೀಗೆಯೇ!

ಎಪ್ಪತ್ತು ವರ್ಷಗಳಿಂದಲೂ ಸುಮ್ಮನೇ ಇದ್ದ ಹಿಂದೂಗಳು!

ನೆಹರೂ ವಿನಿಂದಲೇ ಪ್ರಾರಂಭಿಸೋಣ! ಮತ್ತೆ ಮತ್ತೆ ಹಿಂದೂಗಳು ನೆನಪು ಮಾಡಿಕೊಳ್ಳಲಿಕ್ಕಿದೆ ಒಂದಷ್ಟು ವಿಷಯಗಳನ್ನು!

ಸೋಮನಾಥ ದೇವಾಲಯದ ವಿಷಯದಲ್ಲಿ, ‘ಭಾರತದ ಮೇಲೆ ಸೋಮನಾಥ ದೇವಾಲಯದ ಜೀರ್ಣೋದ್ಧಾರ ವಿಷಯವು ಅತೀ ಕೆಟ್ಟದಾಗಿ ಪ್ರತಿಬಿಂಬಿತವಾಗಲಿದೆ’ ಎಂದಿದ್ದರು! ಅದೆಷ್ಟೋ ಹಿಂದೂ ಸ್ವಯಂ ಸೇವಕರ ಮೇಲೆ ‘ಉಗ್ರಗಾಮಿ ಸಂಘಟನೆ’ ಯೆಂಬ ಪಟ್ಟಕಟ್ಟಿ ಸೆಕ್ಷನ್ 144 ನನ್ನು ದುರುಪಯೋಗ ಮಾಡಿಕೊಂಡಿದ್ದಲ್ಲದೇ, ನೆಹರೂ ವೆಂಬ ‘ಅನಾಮಿಕ ಧರ್ಮ’ದವನೊಬ್ಬ ಹಿಂದೂ ಮುಖವಾಡ ಹಾಕಿ ಹಿಂದೂಗಳನ್ನೇ ಜರಿದು ಹೊಸ ಯುಗಕ್ಕೆ ನಾಂದಿ ಹಾಡಿದಾಗಲೂ ಕೂಡ ಹಿಂದೂಗಳು ಸುಮ್ಮನೇ ಉಳಿದುಬಿಟ್ಟರು!

ತದನಂತರ ಬಂದಿದ್ದೇ ಮಗಳು ಇಂದಿರಾ!! ಪಾರ್ಸಿಯವನೊಬ್ಬನನ್ನು ವರಿಸಿದ ಇಂದಿರೆ ಅಧಿಕೃತವಾಗಿ ತಾನು ಮುಸಲ್ಮಾನಳಾದರೂ ಸಹ, ಮೈಮೂನಾ ಬೇಗಂ ಎಂಬ ಹೆಸರನ್ನೂ ಬಚ್ಚಿಟ್ಟು ಹಿಂದೂ ಮುಖವಾಡ ಧರಿಸಿಯೇ ಅಧಿಕಾರದ ಆಸೆಗೋಸ್ಕರ ಮತ್ತದೇ ಹಿಂದೂ ಸಂತರ ಬಳಿ ನಡೆದಿದ್ದನ್ನು ನಾವು ಮರೆತೇ ಬಿಟ್ಟಿದ್ದೇವೆ! ಸಂತ ಕಪಾತ್ರಿಯವರ ಆಶೀರ್ವಾದಕ್ಕೂ ಕೊನೆಗೆ ಬೆಲೆ ಕೊಡದೇ ಹೋದ ಇಂದಿರೆ, ಗೋಮಾತೆಯ ಪ್ರಾಣ ಉಳಿಸೆಂದ ಸಹಸ್ರ ಹಿಂದೂಗಳ ಧ್ವನಿಯನ್ನೂ ಅಡಗಿಸಿದ್ದರೂ ಹಿಂದೂ ‘ಕಾಲಾಯ ತಸ್ಮೈ ನಮಃ’ ಎಂದು ಹಿಂದೂಗಳು ಸುಮ್ಮನಾದರು!

ಹಿಂದೂ ಧರ್ಮದ ಉಳಿವಿಗಾಗಿ ಪ್ರಾಣ ತೆತ್ತವರು ಗುರುಗೋವಿಂದ್ ಸಿಂಗ್! ಅವರ ವಂಶಸ್ಥರನ್ನು ಇಂದಿರೆಯನ್ನು ಹತ್ಯೆ ಮಾಡಿದವರು ಸಿಖ್ಖರೆಂಬ ಕಾರಣಕ್ಕೆ ಮಾರಣಹೋಮ ನಡೆಸಲಾಯ್ತು! ಇಂದಿರೆಯ ಮಗನೊಬ್ಬ ‘ದೊಡ್ಡ ಮರ ಉರುಳಿದಾಗ ಸಣ್ಣ ಗಿಡಗಳು ಸಾಯಲೇಬೇಕೆಂದು’ ಹೇಳಿಕೆ ಕೊಟ್ಟಾಗಲೂ ಹಿಂದೂಗಳು ಸುಮ್ಮನಾದರು!

ಕೊನೆ ಕೊನೆಗೆ ಇಸ್ಲಾಂ ಭಯೋತ್ಪಾದನೆಯನ್ನು ಸುಳ್ಳಾಗಿಸುವ ಭರದಲ್ಲಿ, ಮಾಡಿದ ಪಾಪಕರ್ಮಗಳನ್ನು ಮುಚ್ಚಿಡಲು ‘ಕೇಸರೀ ಭಯೋತ್ಪಾದನೆ’ ಎಂಬ ವಿಷಬೀಜವನ್ನು ಬಿತ್ತಲೇ ಬೇಕಿತ್ತು! ಇಟಲಿಯಿಂದ ಬಂದ ಬೆಡಗಿ ಜಾಣೆ! ಸಾರ್ವಜನಿಕವಾಗಿ ಯಾವ ವಿಷಯವನ್ನೂ ತೋರದೇ, ಪಾಕಿಸ್ಥಾನದ ಉಗ್ರರ ಕೈ ಬೆಚ್ಚಗೆ ಮಾಡಿ ಭಾರತದೊಳ ಬಿಟ್ಟಳು! ಮುಂಬೈ ತಾಜ್ ಹೋಟೆಲ್ ಸ್ಫೋಟದ ಹಿಂದಿನ ರೂವಾರಿ ಇದೇ ಕಾಂಗ್ರೆಸ್ ಎಂದು ಮನದಟ್ಟಾಗುವ ಹೊತ್ತಿಗೆ ನಾಲ್ಕು ವರ್ಷಗಳು ಕಳೆದು ಹೋಗಿತ್ತು! ಅದೂ ಬಿಡಿ! ಹಿಂದೂ ಸಂಘಟನೆಯ ಮುಖಂಡರನ್ನು ಗುರಿಯಾಗಿಸಿ, ಸಂಝೋತಾ, ಮಾಲೆಗಾಂವ್ ಸ್ಫೋಟಗಳನ್ನು
ನೆಪವಾಗಿಸಿ ಇನ್ನೇನು ಹಿಂದೂ ಭಯೋತ್ಪಾದನೆಯೆಂಬ ಮಿಥ್ಯವೊಂದು ಸತ್ಯವಾಗಿಯೇ ಹೋಗುತ್ತದೆನ್ನುವಾಗ ಹಿಂದೂಗಳಿಗೆ ಚುರುಕು ಮುಟ್ಟಿತು! ಅವತ್ತೇ
ನಿರ್ಧರಿಸಿದ್ದರೇನೋ! ಹಿಂದೂಗಳಲ್ಲಿ ಜಾಗೃತಿ ಮೂಡುವ ಹಣತೆಯೊಂದು ಬೆಳಗಿತ್ತು!

‘ಏನೂ ಇಲ್ಲವೆನ್ನುವಾಗ ಏನಾದರೂ ಮಾಡಲೇಬೇಕೆಂದೆನಿಸುತ್ತದಲ್ಲವಾ?!’ ಆಗಲೇ, ರಾಹುಲ್ ಗಾಂಧಿಯ ಆಗಮನವಾಗಿತ್ತು! ಬಂದವನೇ ‘ನಿಜಕ್ಕೂ ಹಿಂದೂ ಭಯೋತ್ಪಾದನೆಯಿದೆ’ ಎಂದುಬಿಟ್ಟ! ಹಿಂದೂಗಳು ‘ಸಣ್ಣ ಹುಡುಗ’ ಎಂದು ಸುಮ್ಮನಾದರು! ಕೊನೆ ಕೊನೆಗೆ ‘ಸಂಘದಲ್ಲಿ ಮಹಿಳೆಯರು ಚಡ್ಡಿ ಹಾಕುವುದನ್ನು ನೋಡಿದ್ದೀರಾ?! ಇದು ತುಷ್ಟೀಕರಣ’ ಎಂದಾಗ ಹಿಂದೂಗಳು ಮುಗಿಬಿದ್ದರು! ಅಲ್ಲಿಯವರೆಗೂ ತಡೆದು ಕೂತಿದ್ದ ಹಿಂದೂಗಳ ಸ್ವಾಭಿಮಾನದಿಂದ ಕಟ್ಟಿದ ಧರ್ಮರಕ್ಷಣಾಸಂಘದ ಮೇಲಿನ, ಅದರಲ್ಲಿಯೂ ಮಾತೆಯರ ಮೇಲಿನ ಅವಹೇಳನದಿಂದ ರಾಹುಲ್ ಗಾಂಧಿಗೆ ಮುಖ ಮೂತಿ ನೋಡದೇ ಬೈದರು!

‘ದೇವಸ್ಥಾನಕ್ಕೆ ಹಿಂದೂಗಳು ಹೋಗುವುದು ಹುಡುಗಿಯರನ್ನು ಚುಡಾಯಿಸಲಿಕ್ಕೇ’ಎಂದ ರಾಹುಲ್ ಗಾಂಧಿಯ ವಿರುದ್ಧ ಹಿಂದೂಗಳು ತಿರುಗಿ ಬಿದ್ದಿದ್ದೊಂದೇ ಅಲ್ಲ! ಧರ್ಮದೇಟು ಕೊಡುವುದಕ್ಕೂ ಹೇಸಿರಲಿಲ್ಲ ಎಂಬ ಸತ್ಯ ಅರಿವಾದದ್ದೇ ರಾಹುಲ್ ಗಾಂಧಿಗೆ ಅಮ್ಮ ಬುದ್ಧಿ ಹೇಳಿದ್ದಳು! “ಆಗಿದ್ದು ಆಗಿ ಹೋಯಿತು! ಹಿಂದೂಗಳು ಒಟ್ಟಾಗಿದ್ದಾರೋ! ಇಟಲಿಯಲ್ಲಿಯೂ ನಮ್ಮನ್ನು ಸೇರಿಸಲಾರರು ಮಗನೇ! ಬದುಕಿದರೆ ಇದೇ ಭಾರತದಲ್ಲಿ ಮಾತ್ರವೋ! ನಿನ್ನಜ್ಜಿ ಬಿತ್ತಿದ ಜಾತ್ಯಾತೀತತೆ ಕಾಪಾಡುತ್ತೋ” ಎಂದಳು ನೋಡಿ! ರಾಹುಲ್ ಗಾಂಧಿ ಗುಜರಾತ್ ಚುನಾವಣೆಯಲ್ಲಿ ಪಕ್ಕಾ ಹಿಂದೂವಾಗಿ ಹೋಗುತ್ತೇನೆಂದು ಪಣತೊಟ್ಟು ಸೋಮನಾಥ ದೇವಾಲಯಕ್ಕೆ ಭೇಟಿ ಕೊಟ್ಟ ನೋಡಿ! ಪಾಪ! ಎಷ್ಟೆಂದರೂ ಸತ್ಯ ನೋಡಿ! ತಾನು ಹಿಂದೂವಲ್ಲ ಎಂಬುದನ್ನು ಒಪ್ಪಿಕೊಂಡೇ ನುಗ್ಗಿದ ರಾಹುಲ್!

ಇಂದಿನ ಪ್ರಚಾರದ ಹಾವಳಿಯಲ್ಲಿ ಯಾವ ಟೋಪಿಯನ್ನು ಹಾಕಲಿಲ್ಲ! ಯಾವ ಮಸೀದಿಗೂ ಭೇಟಿ ಕೊಡಲಿಲ್ಲ! ಯಾವ ಚರ್ಚಿಗೂ ಕಾಲಿಡಲಿಲ್ಲ! 2002 ರ
ಗಲಭೆಯ ಬಗ್ಗೆಯೂ ಮಾತನಾಡಲಿಲ್ಲ! ಕೊನೆ ಕೊನೆಗೆ ಕುರ್ತಾದೊಳ ಬಚ್ಚಿಟ್ಟ ಜನಿವಾರವೊಂದನ್ನು ಎತ್ತಿ ತೋರಿಸಿ ‘ನಾನು ಜನಿವಾರ ಹಾಕಿದ ಬ್ರಾಹ್ಮಣ’ ಎಂದು ಘೋಷಿಸಿಯೇ ಬಿಟ್ಟಾಗ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಹೇಳಿದ್ದ ಮಾತೊಂದು ಸತ್ಯವಾಗಿ ಹೋಗಿತ್ತು!

ಏನೆಂದಿದ್ದರು ಗೊತ್ತಾ ಸಾವರ್ಕರ್?!

“ಯಾವಾಗ ಹಿಂದೂಗಳು ಒಗ್ಗಟ್ಟಾಗುತ್ತಾರೆಯೋ, ಅವತ್ತು ಇದೇ ಹಿಂದೂ ವಿರೋಧಿ ಕಾಂಗ್ರೆಸ್ ಕೋಟಿನ ಮೇಲೆ ಜನಿವಾರ ಹಾಕುತ್ತಾರೆ.” ಎಂಬ ಮಾತೊಂದು ಕೊನೆಗೂ ಸತ್ಯವಾಗಿದೆ! ಇದು ಹಿಂದೂಗಳಿದೆ ಸಂದ ಜಯವಲ್ಲವೇ?!

ಪರಂಪರಾಗತವಾಗಿಯೇ ಹಿಂದುಗಳನ್ನು ವಿರೋಧಿಸುತ್ತ ಬಂದಿದ್ದ ಇಂತಹ ಕುಟುಂಬದ ಯುವ ನಾಯಕನೊಬ್ಬ ಹಿಂದೂಗಳ ಕಾಲಿಗೆ ಬಿದ್ದಿದ್ದಾನೆ!

ಮುಂಚೆ ಟೋಪಿ ಹಾಕಿದವನು ಇಂ್ು ತಿಲಕ.ಇಟ್ಟು ಜೈ ಹಿಂದ್ ಎನ್ನುತ್ತಿದ್ದಾನೆ! ಮುಂಚೆ ಮಸೀದಿಗಳಲಿ ನಮಾಜು ಮಾಡುತ್ತಿದ್ದವನು ಇಂದು ದೇವಸ್ಥಾನಕ್ಕೆ ಬಂದು ಕೈ ಮುಗಿಯುತ್ತಿದ್ದಾನೆ!

ಇಷ್ಟೇ ಅಲ್ಲ! ಹೀಗೇ ಆದರೆ, ರಾಮ ಮಂದಿರಕ್ಕೆ ವಿರೋಧಿಸಿದ್ದವರು ಮುಂದೆ ಜೈ ಶ್ರೀರಾಮ್ ಎನ್ನಬಹುದು! ಇವತ್ತು ತಿಲಕವಿಟ್ಟರೆ ಅನುಮಾನವೆನ್ನುವರ ಹಣೆಯ ಮೇಲೆ ತಿಲಕ ರಾರಾಜಿಸಬಹುದು! ಒಗ್ಗಟ್ಟಾದಿರಿ ಎಂದುಕೊಳ್ಳಿ! ಕೇಸರೀ ಭಯೋತ್ಪಾದನೆಯಿದೆ ಎಂದವರ ಮನೆಯ ಮೇಲೆ ಭಗವಾಧ್ವಜ ಹಾರಾಡಬಲ್ಲದು! ಇದೇ, ಹಿಂದುತ್ವದ ತಾಕತ್ತು!

ವ್ಹಾ! ಇದು ನಿಜಕ್ಕೂ ಹಿಂದೂಗಳಿಗೆ ಸಿಕ್ಕ ಜಯವಲ್ಲವೇ?!

– ಅಜೇಯ ಶರ್ಮಾ

Tags

Related Articles

Close