ಪ್ರಚಲಿತ

ಹಿಂದೂಗಳೇ! ಇನ್ನು ಮುಂದೆ ರಾಹುಲ್ ಗಾಂಧಿಯನ್ನು ಹಿಂದು ಎಂದು ತಿಳಿದು ಮೋಸ ಹೋಗದಿರಿ! ಇಲ್ಲಿದೆ ಸಾಕ್ಷಿ!!!

ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿಗೆ ಇವತ್ತು ಬಹಳ ಮುಖ್ಯವಾದ ದಿನ! ಹೌದು! ಯಾಕೆಂದರೆ, ಇದೇ ಸೋಮನಾಥ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಅಡ್ಡಿ ಪಡಿಸಿದ್ದು ರಾಹುಲ್ ಗಾಂಧಿಯ ಮುತ್ತಜ್ಜ ನೆಹರೂ!

“ಸೋಮನಾಥ ದೇವಾಲಯದ ಜೀರ್ಣೋದ್ಧಾರ ಕೆಲಸ ಕೈಗೊಂಡಿದ್ದರಿಂದ ಭಾರತದ ಮೇಲಿದ್ದ ಒಳ್ಳೆಯ ಅನಿಸಿಕೆಯೇ ಹಾಳಾಗಿದೆ!” ಹೀಗೆಂದು ಹೇಳಿದ್ದವರು ನೆಹರೂ! ದೇವಾಲಯದ ಜೀರ್ಣೋದ್ಧಾರ ಮಾತ್ರವಲ್ಲ, ಬದಲಾಗಿ, ಅಂದಿನ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್ ರವರನ್ನೂ ಸಹ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗದಂತೆ ತಡೆದಿದ್ದರು ನೆಹರೂ!

ರಾಹುಲ್ ಗಾಂಧಿ ಹಿಂದೂವಲ್ಲ!

ಮುತ್ತಜ್ಜ ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳುವ ಅವಕಾಶವೊಂದು ಇವತ್ತು ರಾಹುಲ್ ಗಾಂಧಿಗಿತ್ತಷ್ಟೇ! ಅವತ್ತು ನೆಹರೂ ತೆಗೆದುಕೊಂಡಿದ್ದ ನಿರ್ಧಾರಕ್ಕೆ
ತೋರಿಕೆಗಾಗಿಯಾದರೂ ಹಿಂದುಗಳ ಹತ್ತಿರ ಕ್ಷಮೆಯಾಚಿಸಿ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಪ್ರತಿ ಅವಕಾಶಗಳೂ ಇತ್ತೆನ್ನುವಾಗಲೇ ಕೈಯ್ಯಾರೆ ಹಾಳು
ಮಾಡಿಕೊಂಡಿದ‌್ದಾನೆ ಕಾಂಗ‌್ರೆಸ್ ನ ಯುವರಾಜ! ಹೌದು! ದೇವಾಲಯಕ್ಕೆ ಭೇಟಿ ನೀಡುವವರ ಪಟ್ಟಿಯಲ್ಲಿ ‘Non – Hindu’ ಪುಸ್ತಕದಲ್ಲಿ ಹೆಸರನ್ನು ನಮೂದಿಸಿ
ಸಹಿ ಹಾಕಿದ್ದಾನೆ ಯುವರಾಜ! ಅಂದರೆ, ತಾನೊಬ್ಬ ‘ಹಿಂದೂ ಅಲ್ಲ’ ಎಂಬ ಸತ್ಯವನ್ನಾಡಿದ್ದಾನೆ!

ಈ ಕೆಳಗಿನ ಚಿತ್ರದಲ್ಲಿ ಹಿಂದೂಗಳೇತರರಿಗೆ ಇಟ್ಟಿದ್ದ ವಿವರಪುಸ್ತಕದಲ್ಲಿ ಹೆಸರನ್ನು ನಮೂದಿಸಿದ ರಾಹುಲ್ ಗಾಂಧಿಯ ತೋರಿಕೆಯೊಂದು ಬಯಲಾಗಿದೆ!

ರಾಹುಲ್ ಗಾಂಧಿ ಒಬ್ಬ ಕ್ರೈಸ್ತ!!!!

ಡಾ.ಸುಬ್ರಹ್ಮಣಿಯನ್ ಸ್ವಾಮಿ ಈ ಹಿಂದೆ, “ಬಹುಷಃ ರಾಹುಲ್ ಗಾಂಧಿ ಕ್ರೈಸ್ತ! ಹಾಗೂ, ಅವರ 10 ಜನಪಥ ನಿವಾಸದೊಳಗೆ ಚರ್ಚ್ ಕೂಡ ಇದೆ ಎಂಬುದನ್ನು ನಂಬುತ್ತೇನೆ!” ಎಂದು ಹೇಳಿದ್ದರು!

“ಅಹ್ಮದ್ ಪಟೇಲ್, ರಾಹುಲ್ ಗಾಂಧಿಯ ಹೆಸರುಗಳನ್ನು ಹಿಂದೂಗಳೇತರರ ವಿವರ ಪುಸ್ತಕದಲ್ಲಿ ಗಾಂಧಿಯ ಜೊತೆಗಾರ ಮನೋಜ್ ತ್ಯಾಗಿ ನಮೂದಿಸಿದ್ದಾರೆ! ಭದ್ರತಾ ದೃಷ್ಟಿಯಿಂದ ಹೆಸರುಗಳನ್ನು ನಿಗದಿಪಡಿಸಿದ ಪಟ್ಟಿಗಳಲ್ಲಿ ನಮೂದಿಸುವು್ದು ಕಡ್ಡಾಯ” ಎಂದು ಸೋಮನಾಥ ದೇವಾಲಯದ ಟ್ರಸ್ಟೀ ಧ್ರುವ್ ಜೋಷಿ ಹೇಳಿದ್ದಾರೆ.

ನ್ಯೂ ಯಾರ್ಕ್ ಟೈಮ್ಸ್ ನ ಪ್ರಕಾರ ರಾಹುಲ್ ಗಾಂಧಿ ಒಬ್ಬ ಕ್ಯಾಥೋಲಿಕ್!

ಹಾ! ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯಿಬ್ಬರ ಬದುಕಿನ ರೀತಿಗಳೂ ಕೂಡ ರೋಮನ್ ಕ್ಯಾಥೋಲಿಕ್ ರ ಶೈಲಿಯಲ್ಲಿಯೇ ಇರುವುದಲ್ಲದೇ, ಯೆಸ್! ಮಿಸ್ಟ್ರೆಸ್ ಗಾಂಧಿ ಕೂಡಾ ಕ್ಯಾಥೋಲಿಕ್!

https://twitter.com/rishibagree/status/935829722562428928

2012 ರಲ್ಲಿ ರಾಹುಲ್ ಗಾಂಧಿಯ ಪ್ರಕಾರ ಆತನೊಬ್ಬ ಬ್ರಾಹ್ಮಣ!!!

ಹಿಂದೆ ಉತ್ತರ ಪ್ರದೇಶದಲ್ಲಿ ಇದೇ ರಾಹುಲ್ ಗಾಂಧಿ, ಬ್ರಾಹ್ಮಣರ ಮೇಲುವಾದವನ್ನು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ “ನಾನೊಬ್ಬ ಬ್ರಾಹ್ಮಣ
ಹಾಗೂ ಪಕ್ಷದ ಪ್ರಧಾನ.ಕಾರ್ಯದರ್ಶಿ’ ಎಂದಿದ್ದು ದೊಡ್ಡ ಸುದ್ದಿಯಾಗಿತ್ತು! ಅಂದರೆ, ಕೊನೆಗೆ ಮತಾಂತರಗೊಂಡನೇ?!

ರಾಹುಲ್ ಗಾಂಧಿ ತಾನೊಬ್ಬ ಶಿವಭಕ್ತನೆಂದೂ ಹೇಳಿಕೊಂಡಿದ್ದ! ಆದರೆ, ಇದು ಕೇವಲ ಮತಬ್ಯಾಂಕಿನ ಉದ್ದೇಶಕ್ಕೆ ಎಂಬುದನ್ನು ಆತನೇ ಸ್ಪಷ್ಟಪಡಿಸಿದ್ದಾನೆ!

ಈ ಹಿಂದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಹುಲ್ ಗಾಂಧಿ ದೇವಸ್ಥಾನದಲ್ಲಿ ನಮಾಜು ಮಾಡಿದ್ದನ್ನು ಬಹಿರಂಗಗೊಳಿಸಿದ್ದರು! ಅದಲ್ಲದೇ, “ಪಾಪ! ಈ ರಾಹುಲ್ ಗಾಂಧಿಗೆ ದೇವಸ್ಥಾನದಲ್ಲಿ ಹೇಗೆ ನಮಸ್ಕರಿಸಬೇಕೆಂದೂ ಗೊತ್ತಿಲ್ಲ! ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾಗ, ನಮಾಜು ಮಾಡುವಂತೆ ಕೂತಿದ್ದರು ರಾಹುಲ್! ಅರ್ಚಕರು ಕೊನೆಗೆ ಇದು ದೇವಸ್ಥಾನ, ಮಸೀದಿಯಲ್ಲ ಎಂದು ಹೇಳಿದ್ದರು.” ಎಂದು ಯೋಗಿ ರಾಹುಲ್ ಗಾಂಧಿಯ ಶಿವಭಕ್ತಿಯನ್ನು ಬಹಿರಂಗಗೊಳಿಸಿದ್ದರು!

ತಾನು ಹಿಂದು ಎನ್ನಲು ನಾಚಿಕೆಯೋ ಅಥವಾ ಹಿಂದೂವೇ ಅಲ್ಲವೋ?!

ತರ್ಕಕ್ಕೆ ಕೂತರೆ ನೆಹರೂ ವೇ ಹಿಂದೂವಲ್ಲ! ಜೊತೆಗೆ ಇಂದಿರೆ ಮದುವೆಯಾದವನೂ! ಮುಂದೆ ಬಂದ ಪರಂಪರೆಯೂ!

ಮನಮೋಹನ್ ಸಿಂಗ್ ಅಲ್ಪಸಂಖ್ಯಾತರಿಗೇ ಮೊದಲ ಹಕ್ಕು ಸಿಗಬೇಕೆಂದಿದ್ದು ಇದಕ್ಕೇನಾ?!

ಒಂದೇ ಸಿಗ್ನೇಚರ್ರು! ಇಡೀ ಯೋಜನೆಯೇ ಮಣ್ಣುಪಾಲು!

ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ, 78% ಇರುವ ಹಿಂದೂಗಳನ್ನು ಇಷ್ಟು ವರ್ಷ ಒಲಿಸಿಕೊಳ್ಳಲಾಗದಿದ್ದರೂ, ಆರು ತಿಂಗಳಲ್ಲಿ ಒಲಿಸಿಕೊಂಡು ಜಯಿಸುವೆ ಎಂದು ಭ್ರಾಮಕ ಸ್ಥಿತಿಯಲ್ಲಿರುವ ರಾಹುಲ್ ಗಾಂಧಿ ಸಿಕ್ಕ ಸಿಕ್ಕ ದೇವಸ್ಥಾನಕ್ಕೆ ನುಗ್ಗುತ್ತಿದ್ದಾದರೂ ಪಾಪ! ತಾನೊಬ್ಬ ಹಿಂದೂವೇ ಅಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವುದು ಇಷ್ಟು ದಿನ ಪಟ್ಟಿದ್ದ ಶ್ರಮವನ್ನೆಲ್ಲ ನೀರು ಪಾಲು ಮಾಡಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close