ಪ್ರಚಲಿತ

ಹಿಂದೂಗಳೇ ಹುಷಾರ್! ಹಬ್ಬಗಳನ್ನು ಆಚರಿಸದಿರಿ! ಮಾಲಿನ್ಯಗೆಡವದಿರಿ! ಎಚ್ಚರಿಕೆ! ಇದು ಹಿಂದೂಗಳಿಗೆ ಮಾತ್ರ!

ಬಹುಷಃ ಹಿಂದೂಗಳು ದೀಪಾವಳಿಯೆಂಬ ಅತಿಮುಖ್ಯ ಹಬ್ಬವಾದ ದೀಪಾವಳಿಯನ್ನಾಚರಿಸಲು ಹಿಂಜರಿಯುತ್ತಾರೆಂದೆನಿಸುತ್ತದೆ! ಅದಲ್ಲದೇ, ಬಹಳ ನಾಚಿಕೆಯನ್ನೂ ಪಟ್ಟುಕೊಳ್ಳುವುದು ಹೊಸತೇನಲ್ಲ! ಹಣತೆಗಳನ್ನು ಹೊರತುಪಡಿಸಿದರೆ, ಹಬ್ಬಗಳಿಗೆಲ್ಲ ರಂಗು ತರುವುದು ಪಟಾಕಿಗಳೆಂಬುದು ಸತ್ಯ! ಅನಾದಿಕಾಲದಿಂದಲೂ ಪಟಾಕಿ ಸಿಡಿಸುವ ಸಂಭ್ರಮವೊಂದು ಭಾರತದ ಇತಿಹಾಸದಲ್ಲಿ ನಡೆದುಕೊಂಡೇ ಬಂದಿದೆ! ಆದರೆ, ಪ್ರತಿ ಬಾರಿಯೂ ಸಹ ಮಾಮೂಲು ದೂಷಣೆಗೊಳಲ್ಪಡುವ ಹಿಂದೂಗಳು ಹೆದರಿ ಹಬ್ಬವನ್ನು ಆಚರಿಸುವುದಕ್ಕೇ ಹಿಂಜರಿಯುತ್ತಾರೆ!

ದೀಪಾವಳಿಯಂದು ಪಟಾಕಿ ಸಿಡಿಸುವುದು ಮಾಲಿನ್ಯಕ್ಕೆ ಕಾರಣವಾಗುತ್ತದೆಂದು ಬೊಬ್ಬಿಡುವವರು ಜೊತೆಗೆ ಸಾಕು ಪ್ರಾಣಿಗಳಿಗೂ ಹಿಂಸೆ ಆಗುತ್ತದೆ ಎಂಬುದನ್ನು ಸೇರಿಸಿ ಹಿಂದೂಗಳನ್ನು ತೆಪ್ಪಗಾಗಿಸಿಬಿಡುವ ಜಾಣತನಕ್ಕೊಂದು ಚಪ್ಪಾಳೆ ಹೊಡೆಯಲೇ ಬೇಕು ಬಿಡಿ! ಪಟಾಕಿ ಸಿಡಿಸುವುದರಿಂದ ಆರೋಗ್ಯ ಹದಗೆಡುತ್ತದೆ, ಶ್ವಾಸಕೋಶಗಳು ಒಡೆದೇ ಹೋಗುತ್ತದೆ! ಕಿವಿಗಳ ತಮಟೆ ಒಡೆದು ರಕ್ತ ಸುರಿಯುತ್ತದೆ! ಅಬ್ಬ್ಬಬ್ಬಬ್ಬಾ!! ಎಂತಹ ವೈಜ್ಞಾನಿಕ ಕಾರಣಗಳನ್ನಿಡುತ್ತಾರಲ್ಲವಾ?!

ದೀಪಾವಳಿಯಂದು ಹರಡುವ ಹೊಗೆಯೊಂದು ಸರ್ವೋಚ್ಛ ನ್ಯಾಯಾಲಯಕ್ಕೂ ತಟ್ಟುವಷ್ಟು ಭಯಂಕರವಾಗಿ ತನ್ನ ಮಾಲಿನ್ಯವನ್ನು ಹರಡಿದೆ ಎಂದಾದರೆ?! ಛೇ! ಬಿಡಿ! ಪಟಾಕಿ ಘನತೆಯನ್ನು ಪಡೆದುಕೊಂಡಿತು!

ಪಟಾಕಿಯಿಂದ ಮಾತ್ರ ವಾಯು ಮಾಲಿನ್ಯವೇ?!

Greenpeace ಎಂಬ ಸಂಸ್ಥೆಯ ವರದಿಯ ಪ್ರಕಾರ ಇಡೀ ಭಾರತದಲ್ಲಿ ವಾಯು ಮಾಲಿನ್ಯ ಹೆಚ್ಚಿರುವುದು ದೆಹಲಿಯಲ್ಲಿ! ಪ್ರತಿ ವರ್ಷವೂ ಸಹ ಸರಾಸರಿ ಐದು ಪಟ್ಟು ಹೆಚ್ಚಾಗುವ ದೆಹಲಿ ಈಗಾಗಲೇ WHO ನಿಗದಿಗೊಳಿಸಿದ್ದ ಸುರಕ್ಷಣಾ ಹಂತವನ್ನೂ ಮೀರಿ ಮಾಲಿನ್ಯಕ್ಕೊಳಗಾಗಿದೆ!( Greenpeace Report – Link )

ವರದಿಯ ಪ್ರಕಾರವೇ ಹೇಳುವುದಾದರೆ ದೆಹಲಿಯ ಅತಿಯಾದ ಮಾಲಿನ್ಯಕ್ಕೆ ಕಾರಣವಾಗಿರುವುದು ಅತಿಯಾದ ಕನ್ಸಟ್ರಕ್ಷನ್ ಗಳು, ಹಾಗೂ ವಾಹನಗಳಿಂದ ಮಾತ್ರ! ಮೂರನೆಯ ಕಾರಣ ಭತ್ತದ ಹೊಟ್ಟುಗಳನ್ನು ಬೆಂಕಿಯಲ್ಲಿ ಸುಡುವ ಅಭ್ಯಾಸ! ತೀರಾ ಹೆಚ್ಚಿನದಾದ ಸಮೀಕ್ಷೆಯನ್ನು ಕೈಗೊಳ್ಳದಿದ್ದರೂ ಸಹ, ದೆಹಲಿಯಲ್ಲಿ ಅದೂ ನಂ.1 ವಾಯು ಮಾಲಿನ್ಯದ ನಗರದಲ್ಲಿ ಅತಿಮುಖ್ಯವಾಗಿ ಮಾಲಿನ್ಯಕ್ಕೆ ಕಾರಣವಾಗಿದ್ದು ಕೈಗಾರಿಕೆ! ಇಟ್ಟಿಗೆ, ಸಿಮೆಂಟು ಗಳಿಂದಾಗುವ ಧೂಳು ದೆಹಲಿಯಂತಹ ನಗರದ ವಾಯು ಮಾಲಿನ್ಯಕ್ಕೆ ಕಾರಣ!

ಇವೆಲ್ಲವನ್ನೂ ಹೊರತು ಪಡಿಸಿ ನೋಡಿದರೆ, ತೀರಾ ಕೆಟ್ಟದಾದ ಮೂಲಭೂತ ಸೌಕರ್ಯವೊಂದು ಕಾರಣವಾಗಿದೆ! ಒಟ್ಟಾರೆಯಾಗಿ ಹೇಳಬೇಕೆಂದರೆ, ಕೇವಲ ದೀಪಾವಳಿಯ ಪಟಾಕಿಯೊಂದರಿಂದಲೇ ವಾಯು ಮಾಲಿನ್ಯವಾಗುತ್ತಿಲ್ಲ ಎಂಬುದರಿವಿರಲಿ!! ( Research Doc – Link )

2016 ರಲ್ಲಿ ಕಾನ್ಪುರದ ಐಐಟಿ ಯೊಂದು ವಾಯು ಮಾಲಿನ್ಯ ಹಾಗೂ ಮಾಲಿನ್ಯದ ಕಾರಣಗಳನ್ನಿಟ್ಟುಕೊಂಡು ವಿಸ್ತಾರವಾದ ಸಮೀಕ್ಷಾ ವರದಿಯೊಂದನ್ನು ಪ್ರಕಟಿಸಿತ್ತು! ಅದರ ಅಂಕಿ ಅಂಶಗಳು ಈ ಕೆಳಗಿನಂತಿವೆ!

ಈ ಮೇಲಿನ ಅಂಕಿ ಅಂಶದಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿರುವುದು ನವೆಂಬರ್ ನಲ್ಲಿ (2013). ಇದರಲ್ಲಿ first data point ದೀಪಾವಳಿಯ ದಿನವನ್ನು ಪ್ರತಿನಿಧಿಸಿದರೆ ನಮಗರಿವಾಗುವುದು ಮಾಮೂಲಾಗುವ ಮಾಲಿನ್ಯಕ್ಕಿಂತ (blue – red dotted lines)ಜಾಸ್ತಿಯೇ. ಆಸಕ್ತಿದಾಯಕ ವಿಚಾರವೆಂದರೆ ಅದೇ! ಈ ಮಾಲಿನ್ಯದ ಹಂತಗಳು ನವೆಂಬರ್ 5, 9, 11, 21, 22 ಹಾಗೂ 23 ರ ತನಕವೂ ಜಾಸ್ತಿಯಾಗಿದೆ!

ವಾಸ್ತವವಾಗಿ, ವಾಯು ಮಾಲಿನ್ಯದ ಹಂತವೊಂದು ದೀಪಾವಳಿಯ ದಿನಕ್ಕಿಂತಲೂ ಹೆಚ್ಚಿರುವುದು ನವೆಂಬರ್ 23 ರಂದು! ಮೂರ್ಖರು, ದೀಪಾವಳಿಯ ದಿನವಾದ ವಾಯು ಮಾಲಿನ್ಯ 23 ರವರೆಗೂ ಮುಂದುವರೆದಿತ್ತೆನ್ನಬಹುದು! ಆದರೆ, ಸ್ವತಃ ಸಮೀಕ್ಷೆಯೇ ಅದನ್ನು ಸುಳ್ಳೆಂದು ಪ್ರತಿಪಾದಿಸುತ್ತದೆ! ಹೇಗೆ ಗೊತ್ತಾ?!

ದೀಪಾವಳಿಯ ದಿನದಂದಾದ ಮಾಲಿನ್ಯದ ಮಟ್ಟ ಮರುದಿನವೇ ಇಳಿಕೆಯಾಗಿದೆ! ಉಳಿದಂತಹ ದಿನಗಳಲ್ಲಿ ಪಟಾಕಿಯಿಂದಾದ ಮಾಲಿನ್ಯದ ಮಟ್ಟವನ್ನೂ ತೆಗೆದುಕೊಂಡರೆ ಮರುದಿನವೇ ಮಟ್ಟ ಕಡಿಮೆಯಾಗಿರುವುದನ್ನು ನೋಡಬಹುದು! ಅದರರ್ಥ, ದೀಪಾವಳಿಯಂದು ಪಟಾಕಿಯಿಂದಾಗುವ ಮಾಲಿನ್ಯ ಕೇವಲ ಇರುವುದು 24 ತಾಸು ಮಾತ್ರ!! ಮತ್ತು, ಉಳಿದಂತಹ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳಿಂದ ಎಷ್ಟೋ ಪಾಲು ಒಳ್ಳೆಯದು!

ಅಕಸ್ಮಾತ್ ವಾಯು ಮಾಲಿನ್ಯ ಬಿಡಿ! ಶಬ್ದ ಮಾಲಿನ್ಯವಾಗುತ್ತಿದೆಯೆಂದು ಸಾಧಿಸುವಿರಾದರೆ ಒಂದು ಕ್ಷಣ! ಈ ಪಟಾಕಿಗಳಿಂದಾಗುವ ಶಬ್ದ ಮಾಲಿನ್ಯ ಇರುವುದು ಕೇವಲ 140dB ಗಳವರೆಗೆ ಮಾತ್ರ! ಅದು, ನಿರಂತರವಾಗಿ ಅರ್ಧ ಗಂಟೆಗಳ ಕಾಲ ಸಿಡಿಯುವ ಪಟಾಕಿಗಳಿಂದಾಗುವ ಶಬ್ದದ ಮಟ್ಟ! ಆದರೆ, ಅದನ್ನು ಹೊರತು ಪಡಿಸಿದರೆ ಒಂದು ಪಟಾಕಿಯ ಶಬ್ದ ಮಟ್ಟ 100dB ಗಳಿಗಿಂತಲೂ ಕಡಿಮೆಯೇ! ಗರಿಷ್ಠ ಮಟ್ಟ 100dB ಯಷ್ಟೇ! ಆದರೆ, ನಗರಗಳಲ್ಲಾಗುವ ಹಾರ್ನ್ ಗಳಿಂದ, ಬುಲೆಟ್ ಬೈಕ್ ಗಳಿಂದ, ಸ್ಪೀಕರ್ರುಗಳಿಂದಾಗುವ ಶಬ್ದ ಮಾಲಿನ್ಯದ ಮಟ್ಟ 60dB ಯಿಂದ 90dB ಯವರೆಗೆ ಇರುತ್ತದೆ! ಒಮ್ಮೊಮ್ಮೆ ಕೆಲ ಹಾರ್ನು ಗಳ ಮಟ್ಟ 100 dB ಗಳಿಗಿಂತಲೂ ಹೆಚ್ಚು!

ಈಗ ಹೇಳಿ?! ದೀಪಾವಳಿಯಂದು ಹೊಡೆಯುವ ಪಟಾಕಿಗಳು ಮಾತ್ರ ಜಾಸ್ತಿ ಶಬ್ದ ಮಾಲಿನ್ಯವನ್ನುಂಟು ಮಾಡುವುದಾ?! ನಗರಗಳಲ್ಲಾಗುವ ಶಬ್ದ
ಮಾಲಿನ್ಯ ಹಾಗೂ ಪಟಾಕಿಗಳಿಂದಾಗುವ ಶಬ್ದ ಮಾಲಿನ್ಯದ ಮಟ್ಟ almost same!!!

ಈ ಕೆಳಗಿನ Central Pollution Control Board ನ 2014 ರ ಅಧ್ಯಯನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಧ್ಯಯನವೊಂದು ಶಬ್ದಗಳ ಮಟ್ಟದ ಮಧ್ಯಂತರದ ಮಟ್ಟವನ್ನೂ ದಾಖಲಿಸಲಿಲ್ಲ, ಅದಲ್ಲದೇ, ದೀಪಾವಳಿಯ ದಿನದ ಮಟ್ಟ ಹಾಗೂ ಉಳಿದಂತಹ ದಿನಗಳ ಶಬ್ದ ಮಾಲಿನ್ಯದ ಮಟ್ಟದ p- value ವನ್ನು ಸಹ ನೀಡಲಿಲ್ಲ! ಆದರೆ, ಇದರಲ್ಲಿದ್ದದ್ದು ಅಷ್ಟೇ! ಉಳಿದೆಲ್ಲ ದಿನಗಳಿಗಿಂತ ದೀಪಾವಳಿಯ ದಿನ ಶಬ್ದ ಮಾಲಿನ್ಯ ಎರಡು ಅದೇ ಮಟ್ಟದಲ್ಲಿಯೇ ಇರುತ್ತದೆ.

ಈ ಕೆಳಗಿನ ಬೆಂಗಳೂರಿನ ಶಬ್ದ ಮಾಲಿನ್ಯದ ಬಗೆಗಿನ ಅಧ್ಯಯನವೊಂದು ದೀಪಾವಳಿಗೂ ಉಳಿದ ದಿನಗಳಿಗೂ ಕೇವಲ 2dB ವ್ಯತ್ಯಾಸವಿರುತ್ತದಷ್ಟೇ! ಅದೂ ಕೂಡ ಗಣನೆಗೆ ತೆಗೆದುಕೊಳ್ಳಲು ಬರುವುದಿಲ್ಲವೆಂದಾಗ ದೀಪಾವಳಿಯ ಪಟಾಕಿಗಳಿಂದ ಇವರೆಲ್ಲಾ ಬೊಬ್ಬಿರಿಯುವ ಹಾಗೆ ಹೆಚ್ಚಿಗೆಯದಾದ ಶಬ್ದ ಮಾಲಿನ್ಯವನ್ನೇನೂ ಸೃಷ್ಟಿಸುವುದಿಲ್ಲ!

ಬಿಡಿ! ಈ ಎರಡು ಅನರ್ಥ ಕಾರಣಗಳನ್ನೂ ಬಿಟ್ಟು ಬುದ್ಧಿಜೀವಿಗಳು ಇನ್ನೊಂದು ಕಾರಣವನ್ನೂ ಕೊಡುತ್ತಾರೆ! ಅದೇ, ‘ಆರ್ಥಿಕತೆ‘!!! ಎಷ್ಟೋ ವರದಿಗಳು ಇವತ್ತು ಪಟಾಕಿಗಳ ಮಾರಾಟ ವಹಿವಾಟು ಗಣನೀಯವಾಗಿ ಇಳಿಕೆ ಕಂಡಿದೆ ಎಂಬುದನ್ನು ಎತ್ತಿ ತೋರಿಸುತ್ತವೆ! ಈ ಮಾಹಿತಿಯೊಂದು ಪ್ರತಿವರ್ಷ ಶೇ.20% ರಷ್ಟು ಮಾರಾಟ 5 ವರ್ಷದಲ್ಲಿ ನಿರಂತರವಾಗಿ ಇಳಿಕೆ ಕಂಡಿದೆ! ಈ ರೀತಿಯಾದ ಇಳಿಕೆಯಿಂದ ಅರ್ಧದಷ್ಟು ಪಟಾಕಿ ಮಾರಾಟ ಇಳಿಕೆ ಕಂಡಿದೆ! ಉದಾಹರಣೆಗೆ 5 ವರ್ಷಗಳ ಹಿಂದೆ 100 ಕೋಟಿ ರೂಗಳ ಪಟಾಕಿ ಮಾರಾಟವಾಗುತ್ತಿದ್ದರೆ, ಪ್ರತಿ ವರ್ಷ ನಿರಂತರವಾಗಿ ಐದು ವರ್ಷ ಇಳಿಕೆಯಾದಾಗ ಅದು 32 ಕೋಟಿ ರೂಗಳಿಗೆ ಇಳಿಕೆಯಾಗಿದೆ! ಅಂದರೆ,.ಶೇ.68% ರಷ್ಟು ಇಳಿಕೆಕಂಡಿದೆ!

2015 – 2016 ರಲ್ಲಿ ಶೇ.25% ರಷ್ಟು ಇಳಿಕೆ ಕಂಡಿತ್ತು! ಆದರೂ, ಕೆಲವು ಸುದ್ದಿ ವಾಹಿನಿಗಳು 40% ಜಾಸ್ತಿಯೇ ದೀಪಾವಳಿಯ ದಿನ ಪಟಾಕಿ
ಸಿಡಿಸುವುದರಿಂದ ಮಾಲಿನ್ಯ ಜಾಸ್ತಿಯಾಗಿದೆ ಎಂದು ವರದಿ ನೀಡಿದ್ದವು! ಹಾಸ್ಯಾಸ್ಪದ ಅದೇ ಅಲ್ಲವೇ?! ಪಟಾಕಿಯ ಮಾರಾಟವೇ ಇಳಿಕೆ ಕಂಡರೂ ಅಂದಿನ ವರುಷ ಎಲ್ಲಿಲ್ಲದ ಮಾಲಿನ್ಯವಾಗಿಬಿಟ್ಟಿತು! ಪಟಾಕಿಯ ಮಾರಾಟ ಶೇ.70% ಕಡಿಮೆಯಾಗಿದ್ದರೂ, ವರದಿ ನೀಡಿದ್ದು ಮಾಲಿನ್ಯ ಶೇ.40% ರಷ್ಟು ಹೆಚ್ಚಾಗಿದೆ ಎಂದು!!!! ಹಾಗಾದರೆ, ದೇಶದ ಆರ್ಥಿಕತೆಗೆ ಪೆಟ್ಟು ಬೀಳುತ್ತಿರುವುದು ಪಟಾಕಿಯನ್ನು ಖರೀದಿಸದೇ ಇರುವುದರಿಂದ!!

ಇದು, ಪಟಾಕಿಗಳಿಂದಲೇ ಮೂರು ಪಟ್ಟು ಜಾಸ್ತಿ ಮಾಲಿನ್ಯವಾಗುತ್ತದೆಯೆಂಬ ಆರೋಪ ಹಾಗಾದರೆ ಸತ್ಯವೇ?! ಬಹುಷಃ ಇದನ್ನೂ ಕೆಲವರು ಮಾಲಿನ್ಯಕ್ಕೆ ಪಟಾಕಿ ಯೊಂದು ಸೇರಿಕೊಳ್ಳುತ್ತದ್ದಾದ್ದರಿಂದ ಪಟಾಕಿ ಬೇಡ ಎನ್ನಬಹುದು! ಹಾಗೆನ್ನುವಿರಾದರೆ ಕ್ರೈಸ್ತರ ಹೊಸ ವರುಷಕ್ಕೂ ನೀವು ಪಟಾಕಿಯನ್ನು ನಿಷೇಧಿಸುತ್ತೀರಾದರೆ ಮಾತ್ರ ಹೇಳಬಹುದು!

ಅಂತಿಮ ನುಡಿ!

ತೀರಾ ಗಂಭೀರವಾಗಿಯೇ ಅಂಕಿ ಅಂಶಗಳನ್ನಿಟ್ಟು ಚರ್ಚೆ ಮಾಡಲೇಬೇಕಿದೆ! ದೀಪಾವಳಿಯಂದು ಸಿಡಿಸುವ ಪಟಾಕಿಯಿಂದ ಮಾತ್ರವೇ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಹೇಳುವವರೆಲ್ಲ ವೈಜ್ಞಾನಿಕವಾಗಿ ಯಾವ ಜ್ಞಾನವನ್ನು ಹೊಂದಿಲ್ಲವೆಂಬುದೂ ಅಷ್ಟೇ ಸತ್ಯ! ಪರಿಸರ ಮಾಲಿನ್ಯದ ನೆಪವನ್ನಿಟ್ಟು ದೇಶದ ತುಂಬಾ ‘ದೀಪಾವಳಿಯಂದು ದೀಪಗಳನ್ನು ಉರಿಸಿ, ಪಟಾಕಿಗಳನ್ನಲ್ಲ’ ಎನ್ನುವ ವರ ಹಿಂದೆಯೊಂದಿದೆ ಹಿಂದೂ ವಿರೋಧಿ ಷಡ್ಯಂತ್ರ!

ಇನ್ನಾದರೂ ಎಚ್ಚರಗೊಳ್ಳಿ! ದೀಪಾವಳಿಯನ್ನು ಸಂಭ್ರಮಿಸಿ!

– ತಪಸ್ವಿ

Tags

Related Articles

Close