ಅಂಕಣ

ಹಿಂದೂಗಳ ಪವಿತ್ರನದಿ ಗಂಗೆ ಮರುಹುಟ್ಟು ಪಡೆಯಲು ಕಾರಣವಾದ ಮೋದಿಯ ನಮಾಮಿ ಗಂಗೆ ಯೋಜನೆ!!

ಹಿಂದೂಗಳ ಪವಿತ್ರ ನದಿಯೆಂದೇ ಪ್ರಖ್ಯಾತಿ ಪಡೆದಿರುವ ಗಂಗಾ ನದಿ ನೀರನ್ನು ಬ್ರಹ್ಮ ದಿವ್ಯ ಅಥವಾ ದೈವಾಮೃತ ಎಂದು ನಂಬುತ್ತಾರೆ. ಗಂಗಾ ನದಿ ನೀರಿನಲ್ಲಿ
ಮುಳುಗೆದ್ದರೆ ಪಾಪಗಳೆಲ್ಲಾ ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಿರುವ ಅಸಂಖ್ಯಾತ ಜನರು, ಜೀವನದ ಹುಟ್ಟು-ಸಾವಿನ ಚಕ್ರದಿಂದ ಮುಕ್ತಿ ಸಿಗುತ್ತದೆ
ಎಂದೂ ನಂಬಿದ್ದ ಕಾಲಾವೊಂದಿತ್ತು!! ಆದರೆ ಈ ಪವಿತ್ರ ನದಿಯು ಮಲೀನಗೊಂಡಿರುವ ಕಾರಣ ಭಾರತೀಯರ ಧಾರ್ಮಿಕ ಶ್ರದ್ಧೆಯ ಕೇಂದ್ರಬಿಂದುವಾಗಿರುವ ಗಂಗಾ ನದಿಗೆ, ಮರುಹುಟ್ಟು ನೀಡುವ ತನ್ನ ಹೆಬ್ಬಯಕೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಯತ್ನ ನಡೆಸುತ್ತಿತ್ತು!! ಅಂತೂ ಈ ಮಹತ್ವಾಕಾಂಕ್ಷೆಯ ನಿಟ್ಟಿನಲ್ಲಿ “ನಮಾಮಿ ಗಂಗೆ” ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದ್ದು, ಗಂಗೆಗೆ ಮರುಹುಟ್ಟು ನೀಡಿದ್ದಾರೆ!!

ನದಿ ಶುದ್ಧೀಕರಣಕ್ಕಾಗಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಅನಿಯಂತ್ರಿತ ನೀರಿನ ಹರಿವು ನಿಯಂತ್ರಣ ಸೇರಿದಂತೆ 300 ಯೋಜನೆಗಳು “ನಮಾಮಿ ಗಂಗೆ” ಯಲ್ಲಿ ಸೇರಿಕೊಂಡಿದ್ದು, ಯೋಜನೆಯ ಮೊದಲ ಭಾಗವಾಗಿ ಗಂಗಾ ನದಿ ಹರಿಯುವ ಐದು ರಾಜ್ಯಗಳ 104 ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಮಶಾನ ಹಾಗೂ ಚಿತಾಗಾರ ನಿರ್ಮಾಣ, ದುರಸ್ತಿ, ಸುಂದರ ನದಿ ತೀರ ನಿರ್ಮಾಣ ಹಾಗೂ ಕೊಳಚೆ ನೀರು ಸಂಸ್ಕರಣ ಘಟಕಗಳ ನಿರ್ಮಾಣ, ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲಾಗಿದೆ!!

ಅಷ್ಟೇ ಅಲ್ಲದೇ, ಗಂಗಾ ನದಿ ಸ್ವಚ್ಛತೆ ಹಾಗೂ ಆ ನದಿಗೆ ಮರುಹುಟ್ಟು ನೀಡುವುದಾಗಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾಪೂರ್ವದಲ್ಲಿ ಭರವಸೆ
ನೀಡಿದ್ದರು. ಇದರಂತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ “ಸ್ವಚ್ಛ ಗಂಗಾ” ಎಂಬ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಿದ್ದರು. ಇದರ ಅನುಷ್ಠಾನದ ಭಾಗವಾಗಿ ಮೊದಲ ಹಂತದಲ್ಲಿ “ನಮಾಮಿ ಗಂಗೆ” ಯೋಜನೆಯ 231 ಕಾರ್ಯಚಟುವಟಿಕೆಗಳಿಗೆ ಸರಕಾರ ಜಾರಿಗೆ ತಂದಿದೆ!!

ಇನ್ನು, ಎಂಭತ್ತರ ದಶಕದಲ್ಲೇ ಎರಡು ಹಂತದ ಗಂಗಾ ಕ್ರಿಯಾಯೋಜನೆ ರೂಪಿಸಿದ್ದರೂ ಕೂಡ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಹಾಗಾಗಿ ವಿಶ್ವ ಬ್ಯಾಂಕ್ ಕೂಡಾ ಇದೊಂದು ಹೈ ರಿಸ್ಕ್ ಪ್ರಾಜೆಕ್ಟ್ ಎಂದು ಎಚ್ಚರಿಸಿರುವಾಗ ಗಂಗಾ ಪುನಶ್ಚೇತನ ಕಾರ್ಯ ಸುಲಭದ ವಿಷಯವೇ ಎಂಬ ವಿಚಾರದ ಚರ್ಚೆಗೆ ಇನ್ನೂ ವಿರಾಮ ಸಿಕ್ಕಿಲ್ಲ.

ಏನಿದು ಗಂಗಾ ಆಕ್ಷನ್ ಪ್ಲ್ಯಾನ್?

ಗಂಗಾ ನದಿಯ ಮಾಲಿನ್ಯ ಮಟ್ಟ ತಗ್ಗಿಸುವ ಸಲುವಾಗಿ 80ರ ದಶಕದಲ್ಲಿ ಎರಡು ಹಂತದ ಯೋಜನೆ ಸಿದ್ಧಪಡಿಸಲಾಗಿತ್ತು. ರಾಜೀವ್ ಗಾಂಧಿ
ಪ್ರಧಾನಮಂತ್ರಿಯಾಗಿದ್ದಾಗ ಗಂಗಾ ನದಿ ಪ್ರಾಧಿಕಾರ ರಚಿಸಲಾಗಿತ್ತು. ಇದಕ್ಕೆ ಗಂಗಾ ಆಕ್ಷನ್ ಪ್ಲ್ಯಾನ್ ಎಂದು ಹೆಸರಿಸಿದ್ದು, 1986ರ ಏಪ್ರಿಲ್‍ನಲ್ಲಿ ರಾಜೀವ್
ಗಾಂಧಿಯವರೇ ಇದಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದ ಯೋಜನೆ 1993ರಲ್ಲಿ ವಾರಾಣಸಿ ಭಾಗದಲ್ಲಿ ಮುಕ್ತಾಯವಾಗಿದೆ. ಆದರೆ, ಅದರಿಂದ
ಪ್ರಯೋಜನವಾದಂತಿಲ್ಲ. ವಾಸ್ತವದಲ್ಲಿ ಗಂಗಾ ಇನ್ನಷ್ಟು ಮಲಿನಗೊಂಡು, ನಿರ್ಜೀವವಾಗಿತ್ತು. ಸಮಸ್ಯೆಗಳನ್ನು ಅರಿಯದೇ ಯೋಜನೆ ರೂಪಿಸಿದ್ದು ಮೊದಲ ಹಂತದ ವೈಫಲ್ಯಕ್ಕೆ ಮುಖ್ಯ ಕಾರಣ ಎಂಬುದು ವಿಶ್ಲೇಷಣೆಯಲ್ಲಿ ಗೊತ್ತಾಯಿತು. ಎರಡನೇ ಹಂತದ ಯೋಜನೆ 1993-96ರ ಅವಧಿಯಲ್ಲಿ ಜಾರಿಗೊಂಡಿದ್ದು, ಐದು ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಈ ಎರಡು ಹಂತಗಳ ಯೋಜನೆಗೆ ಸರ್ಕಾರ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ನಮಾಮಿ ಗಂಗೆ……………!!!

ಈ ದೂರದಷ್ಟಿಯನ್ನು ಕಾರ್ಯರೂಪಕ್ಕಿಳಿಸುವ ಸಲುವಾಗಿಯೇ ನರೇಂದ್ರ ಮೋದಿ ಸರಕಾರ, ಸಮಗ್ರ ಗಂಗಾ ಸಂರಕ್ಷಣಾ ಮಿಷನ್ “ನಮಾಮಿ ಗಂಗೆ” ಯನ್ನು
ಘೋಷಿಸಿತು. ಗಂಗೆಯ ಮಾಲಿನ್ಯ ತಡೆದು ಅದನ್ನು ಪುನರುಜ್ಜೀವನಗೊಳಿಸುವುದು ಮಿಷನ್ ನ ಉದ್ದೇಶ. ಕೇಂದ್ರ ಸಚಿವ ಸಂಪುಟ 2019-2020 ರವರೆಗೆ 20 ಸಾವಿರ ಕೋಟಿ ರೂಪಾಯಿ ಗಳ ಕ್ರಿಯಾಯೋಜನೆಯನ್ನು ಅನುಮೋದಿಸಿತು. ಇದರ ಜೊತೆಗೆ ನಾಲ್ಕರಷ್ಟು ಅನುದಾನವನ್ನು ಹೆಚ್ಚಿಸಿತಲ್ಲದೇ, ಶೇಕಡಾ 100 ರಷ್ಟು ಅಂದರೆ ಸಂಪೂರ್ಣವಾಗಿ ಕೇಂದ್ರ ಸರಕಾರವೇ ಭರಿಸುವುದಾಗಿ ಪ್ರಕಟಿಸಿತು!!

ಗಂಗೆಯ ಪುನರುಜ್ಜೀವನದ ನೆಲೆಯಲ್ಲಿ ಇರಬಹುದಾದ ಬಹು ಆಯಾಮದ, ಬಹು ವಲಯದ ಹಾಗೂ ಬಹು ಪಾಲುದಾರಿಕೆಯ ಸವಾಲುಗಳನ್ನು ಗುರುತಿಸುವ
ಸಲುವಾಗಿಯೇ, ಅಂತರ್ ಸಚಿವಾಲಯ, ಕೇಂದ್ರ ಮತ್ತು ರಾಜ್ಯ ಸರಕಾರ ನಡುವಿನ ಸಮನ್ವಯ ಸುಧಾರಣೆಗೆ ಗಮನ ನೀಡಲಾಯಿತು. ಕ್ರಿಯಾ ಯೋಜನೆ
ರೂಪಿಸುವಲ್ಲಿ ಎಲ್ಲರನ್ನೂ ಪರಿಗಣಿಸಿದ್ದಲ್ಲದೇ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಉಸ್ತುವಾರಿ ನೆಲೆಯಲ್ಲೂ ಸಾಕಷ್ಟು ಸುಧಾರಣೆಗಳನ್ನು ತರಲಾಯಿತು.

ಯೋಜನೆಯ ಮೊದಲ ಭಾಗವಾಗಿ ಗಂಗಾ ನದಿ ಹರಿಯುವ ಐದು ರಾಜ್ಯಗಳ 104 ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಮಶಾನ ಹಾಗೂ ಚಿತಾಗಾರ ನಿರ್ಮಾಣ, ದುರಸ್ತಿ,
ಸುಂದರ ನದಿ ತೀರ ನಿರ್ಮಾಣ ಹಾಗೂ ಕೊಳಚೆ ನೀರು ಸಂಸ್ಕರಣ ಘಟಕಗಳ ನಿರ್ಮಾಣ, ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಗಳನ್ನು
ಆರಂಭಿಸಲಾಗುತ್ತದೆ!! ಈ ಆಂದೋಲನಕ್ಕೆ 5 ವರ್ಷಗಳ ಅವಧಿಗೆ 20 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿರಿಸಿದೆ. ಇನ್ನು 2019ರೊಳಗೆ ಗಂಗೆಯನ್ನು ವಿಶ್ವದ ಟಾಪ್-10 ಸ್ವಚ್ಛ ನದಿ ಎಂದು ಘೋಷಿಸುವ ಇರಾದೆ ಮೋದಿ ಸರ್ಕಾರದ್ದು!!

ಇದೇ ಮೊದಲ ಬಾರಿ ಇಷ್ಟೊಂದು ಸಂಪೂರ್ಣ ಪ್ರಮಾಣದಲ್ಲಿ ನದಿಯೊಂದನ್ನು ಶುದ್ಧೀಕರಿಸಲಾಗುತ್ತಿದೆ. ಅಕ್ಟೋಬರ್ 2016ರ ವೇಳೆಗೆ ಮೊದಲ ಹಂತ ಮುಗಿದಿದ್ದು, 2ನೇ ಹಂತದ ಶುದ್ಧೀಕರಣಕ್ಕೆ 2 ವರ್ಷ ಹಿಡಿಯಲಿದೆ. ಗಂಗಾ ನದಿ ಧಾರ್ಮಿಕ ಮಹತ್ವ ಪಡೆದಿದ್ದು, ಜನರ ನಂಬಿಕೆಗೆ ಧಕ್ಕೆಯಾಗದಂತೆ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ವಿಶ್ವದಲ್ಲಿ ಲಭ್ಯವಿರುವ ಎಲ್ಲ ಉನ್ನತ ತಂತ್ರಜ್ಞಾನ ಬಳಸಿ ಶುದ್ಧೀಕರಣ ನಡೆಸಲಾಗುವುದು ಎಂದು ಹೇಳಲಾಗಿದೆ!! ಪರಿಸರ ಸಚಿವಾಲಯದ ಮೂಲಗಳ ಪ್ರಕಾರ ಗಂಗೆಯ ಶುದ್ಧೀಕರಣಕ್ಕೆ 30 ವರ್ಷಗಳಲ್ಲಿ ಖರ್ಚಾದ ಮೊತ್ತ 967.30 ಕೋಟಿ ರೂಪಾಯಿಗಳಾಗಿದ್ದು, ಇನ್ನು ಪರಿಸರ ಸಚಿವಾಲಯದ ಕ್ಯಾಬಿನೆಟ್ ಸಮಿತಿ ವರದಿ ಪ್ರಕಾರ ಯೋಜನೆಗೆ ವ್ಯಯಿಸಿದ್ದು 39,226 ಕೋಟಿ ರೂಪಾಯಿ ಎಂದು ಹೇಳಲಾಗಿದೆ!!

ಇನ್ನು ಗಂಗೆಯ ವಿಸ್ತಾರ ಮತ್ತು ಹರಿವಿನ ಹಿನ್ನೆಲೆಯಲ್ಲಿ ಅದರ ನೀರಿನ ಗುಣಮಟ್ಟವನ್ನು ಹೆಚ್ಚಳ ಮಾಡುವುದಕ್ಕೆ ಸಿಕ್ಕಾಪಟ್ಟೆ ಹಣ ಬೇಕಾಗಿದೆ. ಕೇಂದ್ರ ಸರಕಾರ
ಈಗಾಗಲೇ ಆಯವ್ಯಯದಲ್ಲಿ ನಾಲ್ಕರಷ್ಟು ಅನುದಾನವನ್ನು ಹೆಚ್ಚಳ ಮಾಡಿದೆ. ಆದರೂ ಅದಷ್ಟೇ ಸಾಕಾಗದು. ಈ ಸಂಬಂಧ ಕ್ಲೀನ್ ಗಂಗಾ ಫಂಡ್ (ನಿಧಿ)ನ್ನು
ಸ್ಥಾಪಿಸಲಾಗಿದ್ದು, ಸಾರ್ವಜನಿಕರು ದೇಣಿಗೆಯನ್ನು ನೀಡಬಹುದಾಗಿದೆ!!

Related image

ಮಾತೆಯ ಮಡಿಲಲ್ಲಿ ಹಾಲಾಹಲ:

80ರ ದಶಕದಲ್ಲಿ ಗಂಗೆಯ ಮಡಿಲಿನಲ್ಲಿದ್ದ ಡಾಲಿನ್‍ಗಳ ಸಂಖ್ಯೆ ಒಟ್ಟು 5000ಗಳಷ್ಟಿದ್ದು, 2013ರಲ್ಲಿ ಡಾಲಿನ್‍ಗಳ ಸಂಖ್ಯೆ 1,800ಗಳಾಗಿತ್ತು!! ಇನ್ನು ಗಂಗಾ
ನದಿಯ ನೀರಿಗೆ ಪ್ರತಿ ನಿಮಿಷ ಸೇರುವ ಮನುಷ್ಯ ಮಲದ ತ್ಯಾಜ್ಯ ಪ್ರಮಾಣ 11,00,000 ಲೀಟರ್‍ಗಳಾದರೆ, ಗಂಗಾ ನದಿ ದಂಡೆಯಲ್ಲಿ ಪ್ರತಿವರ್ಷ ಅಂತ್ಯಸಂಸ್ಕಾರ ಕಾಣುವ ಮೃತದೇಹಗಳ ಸಂಖ್ಯೆ 40,000 ನದಿಗೆ ಪ್ರತಿ ವರ್ಷ ಸೇರಲ್ಪಡುವ ಬೂದಿಯ ಪ್ರಮಾಣ 15,000 ಟನ್‍ಗಳಷ್ಟಿದೆ. ಅಷ್ಟೇ ಅಲ್ಲದೇ, ಪ್ರತಿವರ್ಷ ಗಂಗಾ ನದಿ ನೀರಿಗೆ ಸೇರುವ ಅರ್ಧಂಬರ್ಧ ಸುಟ್ಟ ಶವಗಳ ಪ್ರಮಾಣ 140-200 ಟನ್!!

Image result for namami gange and modi

ಯೋಜನೆಯ ಐದು ಹೆಜ್ಜೆಗಳು:

* ಘಾಟ್ ಹಾಗೂ ಸ್ಮಶಾನಗಳ ಆಧುನೀಕರಣ ಹಾಗೂ ಮರುಅಭಿವೃದ್ಧಿ, ಕೊಳಚೆ ನೀರಿನ ಸಂಸ್ಕರಣೆ, ಮೂಲಸೌಕರ್ಯ, ಅರಣ್ಯ ನಿರ್ಮಾಣ, ಔಷಧಿಯ ಸಸ್ಯಗಳನ್ನು ನೆಡುವುದು, ಪೈಲಟ್ ಕಾಲುವೆ ಪ್ರಾಜೆಕ್ಟ್, ತಡೆ ಕಾಲುವೆ ಪ್ರಾಜೆಕ್ಟ್, ನದಿಯ ಕಸ ಸಂಗ್ರಹಿಸುವ ಯಂತ್ರಗಳು, ಪರಿಸರವೈವಿಧ್ಯ ಕಾಪಾಡುವ ಯೋಜನೆಗಳು ಇದರಲ್ಲಿವೆ.
* ಮೊದಲ ಹಂತದಲ್ಲಿ ಗಂಗಾ ನದಿ ತಟದಲ್ಲಿರುವ 400 ಗ್ರಾಮಗಳನ್ನು “ಗಂಗಾ ಗ್ರಾಮ”ಗಳನ್ನಾಗಿ ಅಭಿವೃದ್ಧಿಪಡಿಸುವುದು
* ದೇಶದ 13 ಐಐಟಿಗಳು ತಲಾ ಐದು ಗ್ರಾಮಗಳನ್ನು ಗಂಗಾ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸುವ ಹೊಣೆಗಾರಿಕೆ ಹೊತ್ತುಕೊಂಡಿವೆ. ಪಂಜಾಬ್‍ನ ಸಿಚಾವಲ್‍ನಲ್ಲಿ 328 ಸರಪಂಚರಿಗೆ ಈ ನಿಟ್ಟಿನಲ್ಲಿ ತರಬೇತಿಯನ್ನೂ ನೀಡಲಾಗಿದೆ.
* ಹೃಷಿಕೇಶ, ನರೋರಾ, ಡೆಹ್ರಾಡೂನ್, ಅಲಹಾಬಾದ್, ಭಾಗಲ್‍ಪುರ, ವಾರಾಣಸಿ, ಸಾಹಿಬ್‍ಗಂಜ್ ಮತ್ತು ಬ್ಯಾರಕ್‍ಪುರಫ ಈ ಎಂಟು ಜೀವವೈವಿಧ್ಯ ಕೇಂದ್ರಗಳನ್ನು ಗಂಗಾ ತಟದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರತಿ ಕೇಂದ್ರದಲ್ಲೂ ಸ್ಥಳೀಯ ಜೀವತಳಿಗಳ ಮರುಸ್ಥಾಪನೆ ಕಾರ್ಯ ನಡೆಯಲಿದೆ.
* ಗಂಗಾ ನದಿಯ ಮಾಲಿನ್ಯಮಟ್ಟವನ್ನು ಗಮನಿಸುವುದಕ್ಕಾಗಿ ಆಪ್ ಒಂದನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿದೆ.

Related image

ನದಿ ಅಭಿವೃದ್ಧಿಗೆ ಸಂಬಂಧಿಸಿ 1,242 ಘಾಟ್‍ಗಳ ಹಾಗೂ 411 ಗ್ರಾಮಗಳ ಕಾಲುವೆಗಳ ಅಭಿವೃದ್ಧಿ ಕಾರ್ಯ ಶೀಘ್ರವೇ ಆರಂಭವಾಗಲಿದ್ದು, ಗಂಗಾ ನದಿ
ತಟದಲ್ಲಿರುವ 118 ಪಟ್ಟಣಗಳ ಪೈಕಿ 59 ಪಟ್ಟಣಗಳಲ್ಲಿ ವಿಸ್ತೃತ ಸಮೀಕ್ಷೆ ಸಂಪೂರ್ಣಗೊಂಡಿದ್ದು, 27 ವರದಿಗಳು ಸಿದ್ಧವಾಗುತ್ತಿವೆ. 50ಕ್ಕೂ ಹೆಚ್ಚು ವರದಿಗಳು ಈ ತಿಂಗಳ ಕೊನೆಗೆ ಸರ್ಕಾರದ ಕೈಸೇರಲಿದೆ!! ಅಷ್ಟೇ ಅಲ್ಲದೇ, ಭಾರತದ ವನ್ಯಜೀವ ಸಂಸ್ಥೆಯು ನದಿಯಲ್ಲಿ ಡಾಲಿನ್, ಮೊಸಳೆ ಹಾಗೂ ಇತರೆ ಜೀವವೈವಿಧ್ಯಗಳ ಸಂರಕ್ಷಿತ ಪ್ರದೇಶಗಳ ಆಯ್ಕೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹೆಚ್ಚುವರಿಯಾಗಿ, ಕೇಂದ್ರೀಯ ಒಳನಾಡು ಮೀನುಗಾರಿಕಾ ಸಂಶೋಧನಾ ಸಂಸ್ಥೆ ನದಿಯಲ್ಲಿ ವಿವಿಧ ತಳಿಯ ಮೀನುಗಳನ್ನು ಸಂರಕ್ಷಿಸಲು ಸಿದ್ಧತೆ ನಡೆಸಿದೆ!!

ಇನ್ನು ಈ ಹಣಕಾಸು ವರ್ಷದಲ್ಲಿ ಗಂಗಾ ನದಿ ದಂಡೆಯುದ್ದಕ್ಕೂ ಸುಮಾರು 2,700 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನೆಡಿಸುವುದಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಹಾಗೆಯೇ ಗಂಗಾ ನದಿಯ ನೀರಿನ ಗುಣಮಟ್ಟ ಪರಿಶೀಲಿಸಲು ಹಾಗೂ ಗಮನಿಸುವುದಕ್ಕೆ 57 ಮ್ಯಾನುವೆಲ್ ಹಾಗೂ ಐದು ರಿಯಲ್ ಟೈಮ್ ನಿಗಾ ಕೇಂದ್ರಗಳನ್ನು ಸರ್ಕಾರ ಆರಂಭಿಸಿದೆ. ಇದಲ್ಲದೇ, ಮುಂದಿನ ಮಾರ್ಚ್ ವೇಳೆಗೆ ಹೆಚ್ಚುವರಿ 113 ಇಂತಹ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ!!

ಅಂತೂ… ಹಿಂದೂ ಪುರಾಣಗಳ ಪ್ರಕಾರ ಪವಿತ್ರ ನದಿಯಾಗಿರುವ ಗಂಗೆ ಮಿಂದರೆ ಪಾಪ ಕಳೆಯುವ ಈಕೆ ಮಲೀನಗೊಂಡಿದ್ದರೂ, ಇದೀಗ ಪ್ರಧಾನಿ ನರೇಂದ್ರ
ಮೋದಿಯವರ ನೇತೃತ್ವದಲ್ಲಿ ಶುದ್ದೀಕರಣಗೊಂಡಿದ್ದು ಮಾತ್ರ ಹೆಮ್ಮೆಯ ವಿಚಾರವಾಗಿದೆ!!

-ಅಲೋಖಾ

Tags

Related Articles

Close