ಪ್ರಚಲಿತ

ಹಿಂದೂಸ್ಥಾನದಲ್ಲಿ ಹುಟ್ಟಿದವರೆಲ್ಲ ಹಿಂದೂಗಳೆ : ವಿನಯ್ ಕುಲಕರ್ಣಿ!! ಮೊನ್ನೆವರೆಗೂ ತಾನು ಲಿಂಗಾಯತ ಧರ್ಮದವನು ಅಂತ ಹೇಳಿಕೊಂಡಿದ್ದವ ಈಗ ಹಿಂದೂ ಆದನೇ?

ರಾಜ್ಯದಲ್ಲಿ ಸಾಲು ಸಾಲು ಲಿಂಗಾಯತ ಸಮಾವೇಶಗಳನ್ನ ಏರ್ಪಡಿಸುತ್ತ ತನ್ನದು ಲಿಂಗಾಯತ ಧರ್ಮ, ಲಿಂಗಾಯತ ಧರ್ಮ ಹಿಂದೂ ಧರ್ಮದ ಅಂಗವಲ್ಲ ಅಂತ ಅಬ್ಬರಿಸುತ್ತಿದ್ದ ಕರ್ನಾಟಕದ ಸಚಿವ ವಿನಯ್ ಕುಲಕರ್ಣಿಗೆ ಅದ್ಯಾಕೋ ಭಾರತೀಯರೆಲ್ಲರೂ ಹಿಂದೂಗಳೇ ಅನ್ನೋ ಜ್ಞಾನೋದಯ ಆದಂಗೆ ಕಾಣಸ್ತಿದೆ.

ಅದೇ ಮೋದಿ ಎಂಬ ಹೆಸರಿಗಿರೋ ತಾಕತ್ತು ಅಂತಂದರೂ ಅತಿಶಯೋಕ್ತಿಯೇನಲ್ಲ ಬಿಡಿ.

ಮೋದಿಯನ್ನ ತೆಗಳುವುದಕ್ಕೆ ತಾನಷ್ಟೇ ಅಲ್ಲ ಇಡೀ “ಭಾರತೀಯರೆಲ್ಲಾ ಹಿಂದುಗಳೇ” ಅಂತ ವಿನಯ್ ಕುಲಕರ್ಣಿ ಹೇಳಿಕೆ ಕೊಟ್ಟಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ವಿನಯ್ ಕುಲಕರ್ಣಿ ಬಿಜೆಪಿ, ಆರೆಸ್ಸೆಸ್, ಮೋದಿಯನ್ನ ಟೀಕಿಸುತ್ತ “ಬಿಜೆಪಿ ನಾಯಕರು ಯಾವಾಗಲು ಮುಸ್ಲಿಂರ ವಿರುದ್ಧ ಮಾತನಾಡುವುದೇಕೆ? ಜಾತಿ ಧರ್ಮದ ವಿರುದ್ಧ ಮಾತಾಡಿ ನಾಗರಿಕರ ಮಧ್ಯೆ ಗಲಾಟೆ ಹಚ್ಚಿ ಅದರ ಮೇಲೆ ತಮ್ಮ ಪಕ್ಷದ ಬೇಳೆ ಬೇಯಿಸಿಕೊಳ್ಳುವ ಉದ್ದೇಶವಾ?.. ಹಾಗಾದರೆ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಂರೆನ್ನಲ್ಲ ದೇಶದಿಂದ ಹೊರ ಹಾಕ್ತಾರ ಈ ಮೋದಿ?

ಪ್ರಧಾನಿ ಮೋದಿ ಅವರು ಮುಸ್ಲಿಂ ಸಮುದಾಯದವರನ್ನು ದೇಶ ಬಿಟ್ಟು ಹೊರ ಹಾಕ್ತಾರಾ..? ಅದು ಸಾಧ್ಯವಾ..? ಆರ್‍ಎಸ್‍ಎಸ್ ನವರು ಮಾತ್ರ
ಹಿಂದೂಗಳಾ..?” ಎಂದು ಪ್ರಶ್ನಿಸಿದ ಅವರು, “ಹಿಂದೂಸ್ಥಾನದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳೇ” ಇದನ್ನು ಬಿಜೆಪಿ ನಾಯಕರು ಅರ್ಥೈಸಿಕೊಳ್ಳಬೇಕು. ಜಾತಿ
ಧರ್ಮದ ನಡುವೆ ಗೊಂದಲ ಉಂಟುಮಾಡಿ ಜಗಳ ಹಚ್ಚುವುದು ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ಮೇಲೆ ಹರಿಹಾಯ್ದರು.

ಪ್ರಧಾನಿ ಮೋದಿ ಎಂದಾದರೂ ಈ ಯೋಜನೆ ಹಿಂದುಗಳಿಗೆ ಮಾತ್ರ ಸೀಮಿತ, ಹಿಂದುಗಳಿಗಷ್ಟೇ ಈ ಯೋಜನೆಗಳನ್ನ ಜಾರಿಗೆ ತಂದದ್ದು, ಮುಸಲ್ಮಾನರಿಗೆ ನಮ್ಮ ಸರ್ಕಾರದ ವತಿಯಿಂದ ಯಾವ ಯೋಜನೆಗಳೂ ಅನ್ವಯವಾಗಲ್ಲ, ಮುಸಲ್ಮಾನರು ದೇಶಬಿಟ್ಟು ಹೋಗಲಿ ಅಂತ ಎಲ್ಲಾದರೂ ಹೇಳಿದ್ದಾರ ಅನ್ನೋದನ್ನ ವಿನಯ್ ಕುಲಕರ್ಣಿ ರಾಜ್ಯದ ಜನರಿಗೆ ತಿಳಿಸಬೇಕು.

ಆರೆಸ್ಸೆಸ್ ಬಗ್ಗೆ ಗಂಧ ಗಾಳಿಯೂ ಗೊತ್ತಿರದ ಮೂರ್ಖರೆಲ್ಲ ಆರೆಸ್ಸೆಸ್ಸಿನ ಬಗ್ಗೆ ಮಾತಾಡುವಂತಾಗಿದಾರೆ. ಆರೆಸ್ಸೆಸ್ “ಸರ್ವೇ ಜನ ಸುಖಿನೋ ಭವಂತು”
ತತ್ವದಡಿಯಲ್ಲಿ ಕೆಲಸ ಮಾಡುವ ಸಾಮಾಜಿಕ ಸಂಘಟನೆಯಾಗಿದೆ ಹೊರತು ಅದು ಕೋಮು ವಿಷ ಬೀಜ ಬಿತ್ತಿ ರಾಜಕಾರಣ ಮಾಡೋ ಕಾಂಗ್ರೆಸ್ ಅಥವ ಓವೈಸಿ
ಪಾರ್ಟಿಯಂತ ಸಂಘಟನೆಯಲ್ಲ ಅನ್ನೋದನ್ನ ವಿನಯ್ ಕುಲಕರ್ಣಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಆರೆಸ್ಸೆಸ್ ಬಗ್ಗೆ ಅಷ್ಟು ಅನುಮಾನಗಳಿದ್ದರೆ ಕಾಂಗ್ರೆಸ್ಸಿನರ್ಯಾಕೆ ಆರೆಸ್ಸೆಸ್ ಶಾಖೆಗಳಿಗೆ ಭೇಟಿ ಕೊಡಬಾರದು?

ಆರೆಸ್ಸೆಸ್ ಒಂದು ವೇಳೆ ಮುಸಲ್ಮಾನ ವಿರೋಧಿಯಾಗಿದ್ದರೆ ಬಹುಸಂಖ್ಯಾತ ಮುಸಲ್ಮಾನರೇ ಇರೋ ಕಾಶ್ಮೀರದಲ್ಲಿ ಪ್ರವಾಹ ಉಂಟಾದಾಗ ತುರ್ತಾಗಿ ರಕ್ಷಣೆಗೆ ಧಾವಿಸಿದ್ಯಾಕೆ? ಕಾಶ್ಮೀರದ ಪ್ರವಾಹ ಸಂತ್ರಸ್ತರಿಗಾಗಿ ದೇಶದಾದ್ಯಂತ ರಿಲೀಫ್ ಫಂಡ್ ಸಂಗ್ರಹಿಸಿ ಕೊಟ್ಟಿದ್ಯಾಕೆ? ಅನ್ನೋದನ್ನೂ ವಿನಯ್ ಕುಲಕರ್ಣಿ ಒಮ್ಮೆ ಯೋಚಿಸಬೇಕು.

ಸುಖಾ ಸುಮ್ಮನೆ ಒಮ್ಮೆ ಹಿಂದುಗಳನ್ನ ಹಿಂದೂ ಧರ್ಮವನ್ನ ವಿರೋಧಿಸುತ್ತ, ಮತ್ತೊಂದೆಡೆ ಲಿಂಗಾಯತ ಪ್ರತ್ಯೇಕ ಧರ್ಮ ಅಂತ ಪ್ರತಿಪಾದಿಸುತ್ತ, ಇತ್ತ ಭಾರತೀಯರೆಲ್ಲರೂ ಹಿಂದೂಗಳೇ ಅಂತ ಢೋಂಗಿ ಹೇಳಿಕೆಗಳನ್ನ ನೀಡುತ್ತ, ಅತ್ತ ಮುಸಲ್ಮಾರನ್ನ ಮೋದಿ ದೇಶ ಬಿಟ್ಟು ಓಡಿಸುತ್ತಾರೆ ಅನ್ನೋ ಭಯದ ಬೀಜವನ್ನ ಮುಸಲ್ಮಾನರಲ್ಲಿ ಬಿತ್ತುತ್ತ ತಮ್ಮ ಮುಸ್ಲಿಂ ವೋಟ್ ಬ್ಯಾಂಕ್ ಗಟ್ಟಿಗೊಳಿಸುವತ್ತ ಹೆಜ್ಜೆ ಹಾಕುತ್ತಿರೋ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆಯಲ್ಲಿ ಮುಸಲ್ಮಾನರೇ ತಕ್ಕ ಪಾಠ ಕಲಿಸುತ್ತಾರೆ ಅನ್ನೋದನ್ನ ಕಾಂಗ್ರೆಸ್ ಮರೆತಂತಿದೆ.

ಉತ್ತರಪ್ರದೇಶದಲ್ಲೂ ಇದೇ ರೀತಿಯ ಎಡಬಿಡಂಗಿ ಹೇಳಿಕೆ ಕೊಟ್ಟು ಮುಸಲ್ಮಾನರ ಪರ ಅಂತ ತೋರಿಸಿಕೊಳ್ಳೋಕೆ ಹೋದ ನಿಮಗೆ ಅಲ್ಲಿನ ಜನ ತಕ್ಕ ಪಾಠವನ್ನೇ ಕಲಿಸಿದ್ದರು ಅನ್ನೋದನ್ನ ಮರೀಬೇಡಿ. ಜನ ಎಚ್ಚೆತ್ತುಕೊಂಡಿದಾರೆ ಸ್ವಾಮಿ, ಇನ್ಮುಂದೆ ನಿಮ್ಮ ಆಟ ನಡೆಯೊಲ್ಲ!!

– Vinod Hindu Nationalist

Tags

Related Articles

Close