ಸನಾತನ ಹಿಂದೂ ಧರ್ಮ. ಅದು ಜಗತ್ತಿನ ಇತರೆಲ್ಲಾ ಧರ್ಮಗಳಿಗಿಂತ ಶ್ರೇಷ್ಟ ಧರ್ಮ. ನಂಬಿಕೆ-ನಡವಳಿಕೆ, ಆಚಾರ-ವಿಚಾರ, ಶಾಸ್ತ್ರ-ಸಂಪ್ರದಾಯ, ಪರಂಪರೆ, ಹೀಗೆ ಪ್ರತಿಯೊಂದು ವಿಚಾರದಲ್ಲೂ ತನ್ನದೇ ಆದಂತಹ ವೈಶಿಷ್ಟತೆಗಳನ್ನು ಪಡೆದುಕೊಂಡು ಬಂದಿರುವ ಧರ್ಮವಾಗಿದೆ. ಅದೆಷ್ಟೇ ಆಕ್ರಮ ಅನ್ಯಾಯಗಳು ನಡೆದ ನಂತರವೂ, ಈ ಜಗತ್ತಿನಲ್ಲಿ ಸಧೃಢವಾಗಿ ಬೆಳೆದಿರುವ ಧರ್ಮವೊಂದಿದ್ದರೆ ಅದು ಹಿಂದೂ ಧರ್ಮ ಮಾತ್ರ…
ಋಷಿ-ಮುನಿಗಳ ತಪಸ್ಸಿನ ಶಕ್ತಿ, ರಾಮಾಯಣ-ಮಹಾಭಾರತಗಳೆಂಬ ಮಹಾಕಾವ್ಯಗಳು ಹಿಂದುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರೆ ತಪ್ಪಾಗಲಾರದು.
ಈ ಧರ್ಮದ ಬೆಳವಣಿಗೆಗಳನ್ನು ಕಂಡು ಸಹಿಸಲಾರದ ಮೊಘಲರು, ಫ್ರೆಂಚರು, ಡಚ್ಚರು, ಬ್ರಿಟಿಷರು ಸಹಿತ ಅನೇಕ ಮತಾಂಧ ಆಕ್ರಮಣಕಾರಿಗಳು ಈ ಮಣ್ಣಿನ
ಸಂಪತ್ತನ್ನು ಕೊಳ್ಳೆ ಹೊಡೆದರೂ ಈ ಧರ್ಮವನ್ನು ಅದೆಷ್ಟೇ ಪ್ರಯತ್ನ ಪಟ್ಟರೂ ಅಲುಗಾಡಿಸಲು ಸಾಧ್ಯವೇ ಆಗಲಿಲ್ಲ. ಅಷ್ಟೊಂದು ಬಲಿಷ್ಟವಾದ ಶಕ್ತಿ ಸಾಮಾಥ್ರ್ಯಗಳಿದ್ದರೆ ಅದು ಹಿಂದೂ ಧರ್ಮದಲ್ಲಿ ಮಾತ್ರ.
ಕೇವಲ ಸನಾತನ ಸಂಸ್ಕøತಿಯನ್ನು ಸಾರುವ ಧರ್ಮವಾಗದೆ ಧರ್ಮ ಪ್ರೇಮದೊಂದಿಗೆ ದೇಶಪ್ರೇಮವನ್ನೂ ಮೈಗೂಡಿಸಿಕೊಂಡು ಬಂದ ಧರ್ಮ ಹಿಂದೂ ಧರ್ಮ. ಆ ಕಾರಣಕ್ಕಾಗಿಯೇ ಇಂದಿಗೂ ಧರ್ಮದೊಂದಿಗೆ ಈ ಭಾರತ ದೇಶವೂ ಬಲಿಷ್ಟವಾಗಿ ಬೆಳೆದಿದೆ.
ಇಷ್ಟೊಂದು ಶಕ್ತಿ ಶಾಲಿಯಾದ ಹಿಂದೂ ಧರ್ಮದಲ್ಲಿ ಇನ್ನೂ ಕೆಲವೊಂದು ನ್ಯೂನತೆಗಳು ಹೆಚ್ಚಾಗುತ್ತಿದೆ. ಅದರಲ್ಲೂ ಈಗಲಂತೂ ಬುದ್ಧಿಜೀವಿಗಳ ಹಾವಳಿಯಿಂದ
ಹಿಂದೂ ಧರ್ಮದ ಬಗ್ಗೆ ಕೆಲವೊಂದು ಅಪಪ್ರಚಾರಗಳು ಹೆಚ್ಚುತ್ತಿವೆ. ಅನ್ಯ ಧರ್ಮೀಯರಿಗಿಂತ ಹೆಚ್ಚಾಗಿ ನಮ್ಮ ಧರ್ಮದಲ್ಲೇ ಕೆಲವೊಂದು ಪ್ರಶ್ನಿಸಬೇಕಾದ ವಿಷಯಗಳಿವೆ. ನಮ್ಮೊಳಗೆ ಕಾಡುತ್ತಿರುವ ಪ್ರಶ್ನೆಗಳು ಹಾಗೂ ಕೆಲವೊಂದು ತಪ್ಪುಗಳು ಯಾವುದೆಂದು ಸಣ್ಣ ಪ್ರಯತ್ನವನ್ನು ಮಾಡೋಣ ಬನ್ನಿ…
* ಸಮಸ್ತ ಹಿಂದೂ ಧರ್ಮ ಪ್ರೇಮಿಗಳೂ ದೇಶಪ್ರೇಮಿಗಳಾಗಿರುತ್ತಾರೆ. ಆದರೆ ಈ ದೇಶದ ನೆಲದಲ್ಲಿ ಹುಟ್ಟಿ, ಈ ಮಣ್ಣಿನಲ್ಲಿ ಬೆಳೆದು, ಹಿಂದೂ ಧರ್ಮದ ವಿರುಧ್ಧವೇ
ಮಾತನಾಡುವವರೂ ಇದ್ದಾರೆ. ಈ ದೇಶದಲ್ಲಿ ಹುಟ್ಟಿ ಬೆಳೆದು ಅದೇ ದೇಶದ ವಿರುದ್ಧ ಮಾತನಾಡುವ, ಘೋಷಣೆ ಕೂಗುವ ಮುಸಲ್ಮಾನರನ್ನು ನೋಡಿದ್ದೇವೆ. ನೋಡಿ ಈ ದೇಶದಲ್ಲಿ ಅದೇ ದೇಶದ್ರೋಹಿಗಳನ್ನು ಬೆಂಬಲಿಸುವ ಹಿಂದೂಗಳನ್ನು ನೋಡುತ್ತಿದ್ದೇವೆ.
* ಅದೆಷ್ಟೇ ಹುಡುಕಾಡಿದರೂ ಗೋಮಾಂಸ ತಿನ್ನುತ್ತಿರುವ ಹಿಂದೂಗಳು ಸಿಗುತ್ತಾರೆ… ಆದರೆ ಹಂದಿ ಮಾಂಸ ತಿನ್ನುವ ಮುಸಲ್ಮಾನರು ಸಿಕ್ತಾರಾ..? ಪ್ರಶ್ನಿಸಬೇಕಾದ ವಿಷಯವಲ್ಲವೇ..?
* ಯಾವ ಧರ್ಮದ ಹೆಸರು ಹೇಳಿಕೊಂಡು ಕಾವಿ ತೊಟ್ಟು ಸನ್ಯಾಸತ್ವ ಸ್ವೀಕರಿಸಿದ ಸ್ವಾಮಿಗಳೇ ಹಿಂದೂ ಧರ್ಮದ ಬಗ್ಗೆ ಹಿಯಾಳಿಸುತ್ತಾರೆ. ಆದರೆ ಯಾವಾಗಲಾದರು ಮುಸಲ್ಮಾನ ಮೌಲ್ವೀಗಳು ಇಸ್ಲಾಂ ಧರ್ಮದ ವಿರುದ್ಧ ಮಾತಾಡಿದ್ದನ್ನು ಕಾಣುತ್ತೇವಾ..?
* ನಾನು ಆ ಜಾತಿ, ನಾನು ಈ ಜಾತಿ ಎಂದು ಬಡಿದಾಡಿಕೊಳ್ಳುವ ಹಿಂದೂಗಳು ಅದೆಷ್ಟೋ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಆದರೆ ಅನ್ಯಧರ್ಮದಲ್ಲಿ ಹೀಗೇನಾದರೂ ಕಂಡಿದ್ದೇವಾ..?
* ದೇಶವನ್ನು, ಹಿಂದೂ ಧರ್ಮವನ್ನು ಕೊಳ್ಳೆ ಹೊಡೆದ ಟಿಪ್ಪು, ಔರಂಗಜೇಬನನ್ನು ಸಮರ್ಥಿಸಿಕೊಳ್ಳುವ ಹಿಂದೂಗಳು ಬೇಕಾದಷ್ಟು ಸಿಗುತ್ತಾರೆ. ಆದರೆ ಈ ದೇಶಕ್ಕಾಗಿ ಖಡ್ಗ ಹಿಡಿದು ಹೋರಾಡಿದ ಛತ್ರಪತಿ ಶಿವಾಜಿ, ರಾಣಾ ಪ್ರತಾಪರನ್ನು ಸಮರ್ಥಿಸಿಕೊಳ್ಳುವ ಮುಸಲ್ಮಾನರು ಕಾಣಸಿಗುವುದೇ ಇಲ್ಲವಲ್ಲಾ..?
* ಪಕ್ಕದ ಬೀದಿಯಲ್ಲಿದ್ದರೂ ದೇವಸ್ಥಾನಕ್ಕೆ ಹೋಗದ ಹಿಂದೂಗಳು ನೂರಾರು ಸಂಖ್ಯೆಯಲ್ಲಿ ಸಿಗುವರು… ಮಸೀದಿಗೆ, ಕ್ರೈಸ್ತಾಲಗಳಿಗೆ ಹೋಗದ ಮುಸಲ್ಮಾನರನ್ನು, ಕ್ರೈಸ್ತರನ್ನು ನೋಡಿದ್ದೇವಾ…?
* ಸ್ವಲ್ಪ ಓದಿದರೂ ಧರ್ಮದ ಆಚಾರ ವಿಚಾರ ಬಿಟ್ಟು, ಸಮಾಜದಲ್ಲಿ ಸೆಕ್ಯೂಲರಿಸಮ್ ತೋರಿಸುತ್ತಿರುವ ಹಿಂದೂ ಮಂದಿಯನ್ನು ಈ ಸಮಾಜದಲ್ಲಿ ನೋಡುತ್ತೇವೆ. ಆದರೆ ಡಬಲ್ ಡಿಗ್ರಿಯನ್ನು ಪಡೆದರೂ ಸಂಸ್ಕಾರವನ್ನು ಮರೆಯುವ ಅನ್ಯಧರ್ಮೀಯರನ್ನು ನೋಡಿದ್ದೇವಾ..?
* ಶ್ರೀ ರಾಮ, ಶ್ರೀ ಕೃಷ್ಣ ದೇವರಲ್ಲ. ಅವರು ಸಮಾಜಕ್ಕೆ ಆದರ್ಶವೂ ಅಲ್ಲ ಎಂದು ಬೊಬ್ಬೆ ಬಿಡುವ ವಿಚಾರವಾದಿ ಎಂದು ಪೋಸು ಕೊಡುವ ಹಿಂದೂಗಳನ್ನು
ಕಂಡಿದ್ದೇವೆ… ಫೈಗಂಬರ್, ಯೇಸು ಕ್ರಿಸ್ತನ ವಿರುದ್ಧ ಮಾತನಾಡುವ ಅನ್ಯಧರ್ಮೀಯರನ್ನು ಕಂಡಿದ್ದೇವಾ..?
* ಬೇರೆ ದೇಶದ ಮುಸಲ್ಮಾನರ ಮೇಲೆ ದಾಳಿಯಾದರೂ ಈ ದೇಶದಲ್ಲಿ ಪ್ರತಿಭಟಿಸುವ ಜಾತ್ಯಾತೀತ ನಾಯಕರು ಈ ದೇಶದಲ್ಲಿ ಸಾಲು ಸಾಲಾಗಿ ಕಾಣ ಸಿಗುತ್ತಾರೆ. ಆದರೆ ಅಯೋಧ್ಯೆಯ ಮೇಲೆ ಮಥುರಾದ ಮೇಲೆ ದಾಳಿಯಾದರೂ ಬಾಯಿ ಮುಚ್ಚಿ ಕೂರುವ ಹಿಂದೂಗಳು ನಮ್ಮಲ್ಲಿ ಇದ್ದಾರೆ.
* “ದೇವರು ಎನ್ನುವುದು ಇಲ್ಲ. ಅದೆಲ್ಲಾ ಸುಳ್ಳು. ನಾನು ದೇವರ ಮೂರ್ತಿ ಮೇಲೆ ಮೂತ್ರ ಮಾಡಿದ್ದೇನೆ” ಎಂದು ಕಿರುಚುವ ಕಿರುಚುವ ಹಿಂದೂಗಳು ನಮ್ಮ ಮಧ್ಯೆಯೇ ಇರುತ್ತಾರೆ… ಯಾವಾಗಲಾದರು ತನ್ನ ಧರ್ಮದ ದೇವರುಗಳನ್ನು ನಿಂದಿಸುವ ಅನ್ಯಧರ್ಮೀಯರನ್ನು ನೋಡಿದ್ದೇವಾ..?
* ಓಟಿಗಾಗಿ ಟೋಪಿ ಹಾಕಿಕೊಂಡು ಇಫ್ತಾರ್ ಕೂಟಕ್ಕೆ ಹೋಗುವ ಹಿಂದೂ ರಾಜಕಾರಣಿಗಳನ್ನು ನೋಡಿದ್ದೇವೆ… ಯಾವಾಗಾದರು ಕೇಸರಿ ಶಾಲು ಧರಿಸಿ, ಹಣೆಗೆ
ಕುಂಕುಮ ಹಚ್ಚಿ, ಜೈ ಶ್ರೀ ರಾಮ್ ಎಂದ ಮುಸಲ್ಮಾನರನ್ನು ನೋಡುವುದು ಅತಿ ಕಡಿಮೆ ಅಲ್ವಾ..?
* ಕುತ್ತಿಗೆಗೆ ಕತ್ತಿ ಇಟ್ಟರೂ ಭಾರತ್ ಮಾತಾ ಕೀ ಜೈ ಅನ್ನಲ್ಲ ಎಂದ ಓವೈಸಿ ಉಗ್ರರರನ್ನು ನೋಡಿದ್ದೇವೆ, ಆದರೆ ಅಲ್ಲಾಹು ಅಕ್ಬರ್ ಅನ್ನಲ್ಲ ಎಂದು ಉಧ್ಘರಿಸುವ
ಹಿಂದೂಗಳು ಸಿಗುವುದು ಎಲ್ಲೋ..?
* ಭಗವದ್ಗೀತೆ ಸರಿಯಿಲ್ಲ, ಅದನ್ನು ಸುಡಬೇಕು ಎನ್ನುವ ಹಿಂದೂ ಸಿಗ್ತಾನೆ ಆದರೆ ಕುರಾನ್ ಭಯೋತ್ಪಾದನೆಯನ್ನು ಭೋಧಿಸುತ್ತದೆ, ಅದು ಸರಿಯಿಲ್ಲ ಎಂದು ತೆಗಳುವ ಮುಸ್ಲಿಮರನ್ನು ನೋಡಿದ್ದೀರಾ…?
* ಹಿಂದೂಗಳ ವೇಷ ಭೂಷಣಗಳನ್ನು ವ್ಯಂಗ್ಯವಾಗಿ ಚಿತ್ರೀಕರಿಸುವ ಹಿಂದೂಗಳನ್ನು ನೋಡಿದ್ದೇವೆ, ಸಿನಿಮಾದಲ್ಲಿ ನಮ್ಮವರನ್ನು ಹಿಯಾಳಿಸುವ ದೃಶ್ಯಗಳನ್ನು
ನೋಡಿದ್ದೇವೆ. ಆದರೆ ಯಾವಾಗಲಾದರೂ ಮುಸಲ್ಮಾನರ ದಾಡಿಯನ್ನು, ಮುಲ್ಲಾನ ಟೋಪಿಯನ್ನು, ಅವರು ನಮಾಝ್ ಮಾಡುವ ಶೈಲಿಯನ್ನು ವ್ಯಂಗ್ಯವಾಗಿ
ಚಿತ್ರೀಕರಿಸಿದ್ದನ್ನು ನೋಡಿದ್ದೇವಾ..?
ಇಷ್ಟು ಮಾತ್ರವಲ್ಲ. ನಮ್ಮನ್ನು ನಾವೇ ಹಿಯಾಳಿಸುವ ಅದೆಷ್ಟೋ ಹಿಂದೂಗಳು ನಮ್ಮ ಮುಂದೆ ಇರುತ್ತಾರೆ. ಅದೆಷ್ಟೋ ಅನ್ಯಧರ್ಮೀಯರು ನಮ್ಮ ಧರ್ಮವನ್ನು
ನಿಂದಿಸುತ್ತಾರೆ. ಅದನ್ನು ಖಂಡಿಸುವ ಧೈರ್ಯವನ್ನೂ ನಮ್ಮವರು ಮಾಡಲ್ಲ. ಯಾಕೆಂದರೆ ನಾವು ಸಹಿಷ್ಣುಗಳು ಅಲ್ವಾ…!
ಆತ್ಮೀಯ ಹಿಂದೂಗಳೇ… ಸ್ವಲ್ಪಾನಾದ್ರೂ ಸ್ವಾಭಿಮಾನವನ್ನು ಬೆಳೆಸಿಕೊಳ್ಳೋಣ. ತಮ್ಮತನವನ್ನು ಉಳಿಸಿಕೊಳ್ಳೋಣ. ಪಕ್ಕದ ಮನೆಯಲ್ಲಿ ಯೇನೋ ಆಗಿದೆ,
ನಮಗ್ಯಾಕೆ ಅಂತ ಸುಮ್ಮನಿದ್ದರೆ ನಾಳೆ ನಮ್ಮ ಮನೆ ಅಂಗಳಕ್ಕೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಎಚ್ಚೆತ್ತುಕೊಳ್ಳೋಣ. ಭಾರತ ವಿಶ್ವಗುರುವಾಗಬೇಕಾದರೆ ಹಿಂದು
ರಾಷ್ಟ್ರವಾಗಲೇಬೇಕು. ಏಕೆಂದರೆ ಹಿಂದೂಗಳ ರಾಷ್ಟ್ರ ಪ್ರೇಮದಿಂದ ಮಾತ್ರ ಭಾರತವನ್ನು ವಿಶ್ವದೆತ್ತರಕ್ಕೆ ಕೊಂಡೊಯ್ಯಬಹುದು. ಅದಕ್ಕೆ ನಮ್ಮ ನೆಚ್ಚಿನ ಪ್ರಧಾನಿ
ನರೇಂದ್ರ ಮೋದೀಜಿಯೇ ಸಾಕ್ಷಿ…
-ಸುನಿಲ್