ಪ್ರಚಲಿತ

ಹಿಂದೂ ಫೈರ್‍ಬ್ರಾಂಡ್ ಅನಂತಕುಮಾರ್ ಹೆಗ್ಡೆಗೆ ಸಿದ್ದುಖಾನ್ ಸರಕಾರ ಬೆದರಿ ಬಸವಳಿಯಲು ಕಾರಣವೇನು ಗೊತ್ತೇ? ಮತ್ತೆ ಇಕ್ಕಟಿಗೆ ಸಿದ್ದುಸರ್ಕಾರ್!!!

ಹಿಂದೂ ಫೈರ್‍ಬ್ರಾಂಡ್, ಕೋಟ್ಯಂತರ ಹಿಂದೂಗಳ ಕಣ್ಮಣಿಯಾಗಿರುವ ಅನಂತಕುಮಾರ್ ಹೆಗ್ಡೆಗೆ ಸಿದ್ದರಾಮಯ್ಯ ಸರಕಾರ ಬೆದರಿ ಬೆಂಡಾಗಿದೆ. ಬೆದರಿದ್ದಷ್ಟೇ ಅಲ್ಲ, ಈ ಭಯ ಸಿದ್ದೂಖಾನ್ ಸರಕಾರವನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ಲಕ್ಷಣ ಕಾಣಿಸಿಕೊಂಡಿದೆ. `ಅತ್ತ ದರಿ ಇತ್ತ ಪುಲಿ’ ಎಂಬ ಸ್ಥಿತಿಗೆ ತಲುಪಿರುವ ಸಿದ್ದು, ವಿಲವಿಲ ಒದ್ದಾಡುವಂತಾಗಿದೆ. ಇಷ್ಟೆಲ್ಲಾ ಕಷ್ಟಪಡುವ ಬದಲು ಟಿಪ್ಪು ಜಯಂತಿಯನ್ನು ಆಚರಿಸದೇ ಉಳಿದಿದ್ದರೆ ಚೆನ್ನಾಗಿತ್ತು..

ಕರ್ನಾಟಕ ಸರಕಾರ ಇಸ್ಲಾಂಪಾಲಿಗೆ ಹರಾಂ ಆಗಿರುವ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದೆ. ಟಿಪ್ಪು ಜಯಂತಿಯ ಆಮಂತ್ರಣ ಪತ್ರದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆಯ ಹೆಸರನ್ನು ಪ್ರಸ್ತಾಪಿಸಲು ಸಿದ್ದು ಮುಂದಾಗಿದ್ದರು. ಆದರೆ ಅನಂತ್‍ಕುಮಾರ್ ಹೆಗ್ಡೆ ಟಿಪ್ಪು ಜಯಂತಿ ಆಮಂತ್ರಣ ಪತ್ರದಲ್ಲಿ ತನ್ನ ಹೆಸರು ಪ್ರಸ್ತಾಪಿಸುವುದು ಬೇಡ, ಪ್ರಸ್ತಾಪಿಸಿದ್ದೇ ಆದರೆ ಆತನ ಕ್ರೂರತೆಯನ್ನು ಸಭೆಯಲ್ಲೇ ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಅವಾಝ್ ಹಾಕಿದ್ದರು. ಈ ಅವಾಝ್‍ಗೆ ಬೆದರಿದ ಸಿದ್ದುಸರಕಾರ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಅನಂತ ಕುಮಾರ್ ಹೆಗಡೆ ಹೆಸರನ್ನು ಕೈಬಿಡಲು ರಾಜ್ಯ ಸರಕಾರ ನಿರ್ಧರಿಸಿದೆ.

ರಾಜ್ಯಸರಕಾರದ ಕಾರ್ಯಕ್ರಮದಲ್ಲಿ ಶಿಷ್ಠಾಚಾರಕ್ಕೆ ಕೇಂದ್ರಸಚಿವರ ಹೆಸರು ಪ್ರಸ್ತಾಪಿಸಬೇಕು. ಆದರೆ ಇದೀಗ ಅನಂತರ ಹೆಸರನ್ನು ಕೈಬಿಟ್ಟಿರುವುದರಿಂದ ಸಿದ್ದು ಸರಕಾರ ಮತ್ತೊಂದು ವಿವಾದಕ್ಕೆ ಸಿಲುಕಿದಂತಾಗಿದೆ.

ಕಳೆದ ಬಾರಿ ಜಲ್ಲೆಯಲ್ಲಿ ನಡೆದ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರನ್ನು ಹಾಕದಂತೆ ಪತ್ರ ಬರೆದು ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ
ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಕೂಡಾ ಭಾಗಿಯಾಗದೇ ಟಿಪ್ಪು ಜಯಂತಿಗೆ ಸಂಸದ ಅನಂತ ಕುಮಾರ್ ಹೆಗಡೆ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ಈ ಬಾರಿ ಹೀಗೆ ಆಗದಂತೆ ಎಚ್ಚರ ವಹಿಸಿರುವ ಕೇಂದ್ರ ಸಚಿವರು ಈ ಬಾರಿಯ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ತನ್ನ ಹೆಸರು
ನಮೂದಿಸಬೇಡಿ ಎಂದು ಕೇಂದ್ರ ಕೌಶಲ್ಯಭಿವೃದ್ಧಿ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು.

ಕರ್ನಾಟಕ ಸರಕಾರದ ಶಿಷ್ಟಾಚಾರ ವಿಭಾಗದ ಮುಖ್ಯ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ಅವರಿಗೆ ತನ್ನ ಆಪ್ತ ಸಹಾಯಕ ರಮೇಶ್ ಮೂಲಕ ಪತ್ರ ಕಳುಹಿಸಿದ್ದರು. ನವೆಂಬರ್10 ರಂದು ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತದೆ ಈ ಹಿನ್ನಲೆಯಲ್ಲಿ ಅನಂತ ಕುಮಾರ್ ಹೆಗ್ಗಡೆ ರಾಜ್ಯದ ಶಿಷ್ಟಾಚಾರ ವಿಭಾಗದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗಿತ್ತು. ಇದೇ ವೇಳೆ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಯಾವುದೆ ಕಾರ್ಯಕ್ರಮದಲ್ಲಾಗಲಿ ಹಾಗೂ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಪತ್ರ ಬರೆದಿದ್ದರು.

ಒಂದು ವೇಳೆ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಪ್ರಕಟಿಸಿದ್ದಲ್ಲಿ ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಎಂದು ಹೇಳಿದ್ದರು. ಶಿಷ್ಟಾಚಾರದಂತೆ ಟಿಪ್ಪು ಜಯಂತಿ ಆಹ್ವಾನದ ಪತ್ರಿಕೆಯಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ಸಚಿವ ಅನಂತ ಕುಮಾರ್ ಹೆಗ್ಗಡೆ ಅವರ ಹೆಸರನ್ನು
ಮುದ್ರಿಸಲಾಗುವುದು ಎಂದು ಈಗಾಗಲೇ ಸಿದ್ದರಾಮಯ್ಯ ಪ್ರತ್ತುತ್ತರ ನೀಡಿದ್ದರು. ಅಧಿಕೃತವಾಗಿ ಪತ್ರ ಬರೆದಿರುವ ಕಾರಣ ಅನಂತ ಕುಮಾರ್ ಹೆಗಡೆಗೆ ಸಂಬಂಧಿಸಿದ ಉತ್ತರ ಕನ್ನಡ, ಬೆಳಗಾವಿ ಜಿಲ್ಲಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಮುದ್ರಿಸದಿರಲು ಸಿದ್ದರಾಮಯ್ಯ ಸರಕಾರ ತೀರ್ಮಾನಿಸಿದೆ. ಹಾಗಾದರೆ ಅನಂತ ಕುಮಾರ್ ಕುಮಾರ್ ಕೊಟ್ಟಿರುವ ಹೇಳಿಕೆಯೊಂದಕ್ಕೆ ಬೆದರಿದ ಸಿದ್ದರಾಮಯ್ಯ ಸರಕಾರ ಅನಂತರ ಕುಮಾರ್ ಹೆಸರನ್ನು ನೊಂದಾಯಿಸಲು ಹಿಂಜರಿದಿದೆ ಎನ್ನುವುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತಿದೆ… ಅನಂತಕುಮಾರ್ ಹೆಗಡೆ ಅಮಂತ್ರಣ ಪತ್ರಿಕೆಯಲ್ಲಿ ಒಂದು ವೇಳೆ ಹೆಸರು ನೊಂದಾಯಿಸಿದಲ್ಲಿ ಕಾರ್ಯಕ್ರಮಕ್ಕೆ ಬಂದು ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಎಂದಿದ್ದಾರೆ.. ಇದೇ ಭಯಕ್ಕೆ ಈ ರೀತಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ನಮಗೆ ಅರ್ಥವಾಗುತ್ತದೆ.

ಸಚಿವ ಅನಂತ್ ಕುಮಾರ್ ಹೆಗ್ಗಡೆಯವರ ಪತ್ರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಟಿಪ್ಪು ವಿರೋಧಿಸುವ ಬದಲು ಟಿಪ್ಪುವಿನ ಬಗ್ಗೆ ಓದಿ , ಟಿಪ್ಪು ನಿಜವಾಗಿಯೂ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದ ಸಿದ್ದರಾಮಯ್ಯನವರಿಗೆ ಯಾಕೆ ಈಗ ಟಿಪ್ಪುವಿನ ಬಗ್ಗೆ ಸಂಶಯ ಹುಟ್ಟಿತ್ತೇ? ಟಿಪ್ಪು ಒಬ್ಬ ದೇಶದ್ರೋಹಿ ಎಂಬುವುದು ಸಾಬೀತಾಯಿತೇ? ಇಲ್ಲದಿದ್ದರೆ ಸಚಿವ ಅನಂತ್ ಕುಮಾರ್ ಹೆಗಡೆ ಹೆಸರನ್ನು ಕೈ ಬಿಡುವುದಕ್ಕೆ ಕಾರಣ ಬೇಕಲ್ಲವೇ? ಆಮಂತ್ರಣ ಪತ್ರಿಕೆಯಲ್ಲಿ ಅನಂತಕುಮಾರ್ ಹೆಸರು ಪ್ರಕಟಿಸಿದರೆ ಎಲ್ಲಿ ಟಿಪ್ಪುವಿನ ಜನ್ಮ ಎಲ್ಲಿ ಜಾಲಾಡುತ್ತಾರೋ ಎಂಬ ಭಯದಿಂದ ಪಾಪ ಹೆಸರನ್ನು ನೋಂದಾಯಿ ಹಿಂದೆ ಮುಂದೆ ನೋಡುತ್ತಿದ್ದಾರೆ. ಟಿಪ್ಪು ನಿಜವಾಗಿಯೂ ದೇಶಪ್ರೇಮಿ ಅಥವಾ ಸ್ವಾತಂತ್ರ ಹೋರಾಟಗಾರ ಎಂದಾದರೇ ಸಿದ್ದರಾಮಯ್ಯನವರೇ ಅನಂತ ಕುಮಾರ್ ಹೆಸರನ್ನು ನಿಮಗೆ ನಿಮಗೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಬಹುದಲ್ಲವೇ? ಅವರು ಯಾವ ರೀತಿ ಟಿಪ್ಪುವಿನ ಜನ್ಮ ಜಾಲಾಡುತ್ತಾರೆ ಎಂಬುವುದನ್ನು ನಿಮ್ಮ ಕಿವಿಯಾರೇ ಕೇಳಿಕೊಳ್ಳಬಹುದಲ್ಲವೇ? ಟಿಪ್ಪು ಮಾಡಿದ ಘನಾಂದಾರಿ ಕೆಲಸ ಒಂದೇ ಎರಡೇ? ಸಾವಿರಾರು ಹಿಂದೂ ದೇವಾಲಯಗಳ ನಾಶ, ಅದೆಷ್ಟೋ ಹಿಂದೂ ಮಹಿಳೆಯ ಅತ್ಯಾಚಾರ ಹಾಗೂ ಹಿಂದೂ ಧರ್ಮದಿಂದ ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡಿದ ಈ ಟಿಪ್ಪು ಹಾಡಿ ಕೊಂಡಾಡುವುದು ಎಷ್ಟ ಮಟ್ಟಿಗೆ ಸರಿ ಎಂಬುದು ನಮ್ಮೆಲ್ಲರ ಪ್ರಶ್ನೆ..

ಯಾರೂ ಏನೇ ಹೇಳಿದರೂ ಶಿಷ್ಟಾಚಾರದ ಮೂಲಕ ಹೆಸರನ್ನು ನೊಂದಾಯಿಸದೇ ಇರಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತನ್ನು ಸ್ವತ: ಸಿದ್ದರಾಮಯ್ಯನವರೇ ಉಲ್ಲಂಘಿಸಿದ್ದು ಮಾತಿಗೆ ವಿರೋಧವಾಗಿ ವರ್ತಿಸಿದ್ದಾರೆ.

ಸಾರ್ವಜನಿಕರ ಹಣವನ್ನು ಜಯಂತಿ ಆಚರಣೆಗಳಿಗೆ ವ್ಯಯಿಸಲು ಕಾನೂನಲ್ಲಿರುವ ಅವಕಾಶಗಳೇನು ಎಂಬುವುದರ ಕುರಿತು ರಾಜ್ಯ ಸರಕಾರದಿಂದ ಹೈಕೋರ್ಟ್ ವಿವರಣೆ ಬಯಸಿದೆ. ರಾಜ್ಯಾದ್ಯಂತ ಟಿಪ್ಪು ಆಚರಣೆ ಮಾಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರು 2017ರ ಅಗಸ್ಟ್ 24 ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕು ಹಾಗೂ ಕೊಡಗಿನಲ್ಲಿ ಟಿಪ್ಪು ಜಯಂತಿ ಮಾಡದಂತೆ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೆ.ಪಿ ಮಂಜುನಾಥ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ನಡೆಸಿದ್ದು ಈ ವೇಳೆ ಸರಕಾರದ ಉದ್ಧೇಶಿತ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮ ತಡೆಹಿಡಿಯಲು ಯಾವ ಕಾನೂನಿನಲ್ಲಿ ಅವಕಾಶವಿದೆ? ಜಯಂತಿ ಆಚರಣೆ ನಿರ್ಭಂಧಿಸಲು ಸುಪ್ರಿಂ ಕೋರ್ಟ್ ಅಥವಾ ಯಾವುದಾದರೂ ಹೈಕೋರ್ಟ್ ಆದೇಶಗಳಿವೆಯೇ?: ಟಿಪ್ಪು ಜಯಂತಿ ಆಚರಣೆಗೆ ಬಜೆಟ್‍ನಲ್ಲಿ ಹಣ ಮೀಸಲಿಡಲಾಗಿದೆಯೇ ? ಸಾರ್ವಜನಿಕರ ಹಣವನ್ನು ಜಯಂತಿಗಳಿಗೆ ವ್ಯಯಿಸಲು ಕಾನೂನುಗಳಲ್ಲಿನ ಅವಕಾಶಗಳೇನು? ಎಂಬುವುದನ್ನು ಮುಂದಿನ ವಿಚಾರಣೆ ವೇಳೆ ವಿವರಿಸುವಂತೆ ರಾಜ್ಯ ಅಡ್ವೋಕೇಟ್ ಜನರಲ್‍ಗೆ ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಲಾಗಿದೆ

-ಪವಿತ್ರ

Tags

Related Articles

Close