ಪ್ರಚಲಿತ

ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ!!

ದೇಶದಲ್ಲಿ ಹಿಂದೂ ಭಯೋತ್ಪಾದನೆ ಹೆಚ್ಚಾಗಿದೆ ಎಂದು ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿದ್ದು ಹಿಂದೂ ಭಯೋತ್ಪಾದನೆಯನ್ನು ನಿಯಂತ್ರಿಸಲು ಬಿಜೆಪಿ
ಸರಕಾರ ವಿಫಲವಾಗಿದೆ.!! ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತತರಪ್ರದೇಶ, ಗುಜರಾತ್, ರಾಜಸ್ಥಾನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಘೋರವಾಗಿದೆ ಎಂದು
ಹೇಳಿದ್ದರು. ವಿಕಟನ್ ಪತ್ರಿಕೆಯಲ್ಲಿ ಇವರು ಬರೆದ ಲೇಖನ ಈಗ ವಿವಾದದ ಕೇಂದ್ರಬಿಂದುವಾಗಿದೆ.!! ಈ ಹಿಂದೆ ಹಿಂದೂ ಸಂಘಟನೆಗಳು ಹಿಂಸೆಗೆ ಇಳಿಯುತ್ತಿರಲಿಲ್ಲ, ಕೇವಲ ಮಾತುಗಳಿಂದಲೇ ವಿರೋಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದವು. ಆದರೆ ಪರಿಸ್ಥಿತಿಗಳು ಈಗ ಹದಗೆಟ್ಟಿದ್ದು ದಾಳಿಗಳಿಗೆ ಇಳಿಯುವ ಮಟ್ಟಕ್ಕೆ ಇಳಿದಿವೆ ಎಂದು ಕಮಲ್ ಆರೋಪಿಸಿದ್ದರು. ಅವರನ್ನು ಹಿಂದಿನಿಂದ ಕೆಲವರು ಪ್ರೋತ್ಸಾಹಿಸಿದ್ದಾರೆ. ಅಸಲಿಗೆ ಹಿಂದೂ ಭಯೋತ್ಪಾದನೆ ಇಲ್ಲವೆಂಬ ಕೆಲವರ ವಾದದಲ್ಲಿ ಸತ್ಯವಿಲ್ಲ. ಹಿಂದೂ ಭಯೋತ್ಪಾದನೆ ಮುಂಚಿನಿಂದಲೂ ಇದೆ, ಈಗ ಹೆಚ್ಚಾಗಿದೆ ಎಂದು ನಟ ಕಮಲ್ ಹಾಸನ್ ತಮ್ಮ ಲೇಖನದಲ್ಲಿ ಬರೆದಿದ್ದರು ಇದಕ್ಕೆ ನಟ ಪ್ರಕಾಶ್ ರೈ ಬೆಂಬಲ ನೀಡಿದ್ದಾರೆ.

ಈ ರೀತಿ ಹೇಳಿಕೆ ನೀಡಿರುವುದಕ್ಕೆ ಪ್ರತ್ಯುತ್ತರವಾಗಿ ನಟ ಪ್ರಕಾಶ್ ರೈ ಕಮಲ್ ಹಾಸನ್‍ಗೆ ಬೆಂಬಲ ವ್ಯಕ್ತಪಡಿಸುವ ರೀತಿಯಲ್ಲಿ ಭಯೋತ್ಪಾದನೆ ಬಗ್ಗೆ ರೀ ಟ್ವೀಟ್
ಮಾಡಿದ್ದಾರೆ. ಧರ್ಮ ನೈತಿಕತೆ ಹೆಸರಿನಲ್ಲಿ ನನ್ನ ದೇಶದ ಬೀದಿಗಳಲ್ಲಿ ಯುವ ಜೋಡಿಗಳ ಮೇಲೆ ಹಲ್ಲೆ ಮಾಡುವುದು ಭಯೋತ್ಪಾದನೆಯಲ್ಲದೆ ಮತ್ತೆನು? ಗೋಹತ್ಯೆ ಬಗ್ಗೆ ಸಣ್ಣ ಅನುಮಾನ ಬಂದ್ರೂ ಕಾನೂನು ಕೈಗೆತ್ತಿಕೊಂಡು ಜನರನ್ನು ಹತ್ಯೆ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ ಪ್ರತಿರೋಧಿ ಧ್ವನಿಗಳನ್ನ ಹತ್ತಿಕ್ಕಲು ನಿಂದನೆ ಬೆದರಿಕೆ ಮೂಲಕ ಟ್ರೋಲ್ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ ಹಾಗಾದ್ರೆ ಭಯೋತ್ಪಾದನೆ ಎನ್ನುವುದು ಏನು ಎಂದು ಪ್ರಶ್ನಿಸಿ ರೀಟ್ವೀಟ್ ಮಾಡಿದ್ದಾರೆ. ಈ ಕಾಂಗ್ರೆಸ್‍ನವರಿಗೆ ಭಯೋತ್ಪಾನೆ ಎನ್ನುವ ಅಂತರದ ವ್ಯತ್ಯಾಸವೇ ಗೊತ್ತಿಲ್ಲ… ಭಯೋತ್ಪಾದನೆಗೆ ಕುಮ್ಮಕ್ಕು ನೀಡುವರು ನೀವೆ. ಅದನ್ನು ಬಿಟ್ಟು ತಾವು ಮಾಡುತ್ತಿರುವ ನಾಲಾಯಕ್ಕು ಕೆಲಸಗಳಿಗೆ ಸುಖಾ ಸುಮ್ಮನೆ ಬಿಜೆಪಿಯವರನ್ನು ಎಳೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ?

ಅಂದು ಹಿರಿಯ ಪತ್ರಕರ್ತೆ ಮತ್ತು ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಪ್ರಧಾನಿ ಮೋದಿಯ ಮೌನವನ್ನು ಟೀಕಿಸಿದ ಪ್ರಕಾಶ್ ರೈ, ಗೌರಿ ಲಂಕೇಶ್
ಯನ್ನು ಸಂಭ್ರಮಿಸುತ್ತಿರುವವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ ಎಂದು ವ್ಯಕ್ತಪಡಿಸಿದ್ದರು. ಡೆಮಾಕ್ರಟಿಕ್ ಯೂತ್
ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್)ನ 11ನೇ ಸಭೆಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಹಂತಕರ ಬಂಧನವಾಗಿಲ್ಲ. ಆದಾಗ್ಯೂ ಸಾಮಾಜಿಕ ಜಾಲ ತಾಣದಲ್ಲಿ ಕೆಲವರು ದ್ವೇಷವನ್ನು ಹರಡಿಸುತ್ತಾ ಲಂಕೇಶ್ ಹತ್ಯೆಗೆ ವಿಕೃತ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಸುಖಾಸುಮ್ಮನೆ ಪ್ರಕಾಶ್ ರೈ ಟೀಕಿಸಿದ್ದರು.

ನನಗಿಂತ ಮೋದಿ ದೊಡ್ಡ ನಟ. ನನಗೆ ಸಿಕ್ಕ ಪ್ರಶಸ್ತಿಯನ್ನು ಅವರಿಗೆ ಕೊಡುತ್ತೇನೆ ಎಂದು ವಿವಾದಿತ ಹೇಳಿಕೆ ನೀಡಿದ್ದಕ್ಕೆ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಈ ಹೇಳಿಕೆ ದೇಶಾದ್ಯಂತ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ನಟ ಪ್ರಕಾಶ್ ರೈ ವಿರುದ್ಧ ವಕೀಲರೊಬ್ಬರು ಲಕ್ನೋ ಕೋರ್ಟ್‍ನಲ್ಲಿ ಪ್ರಕರಣವನ್ನು
ದಾಖಲಿಸಿದ್ದರು. ನಂತರ ಪ್ರಶಸ್ತಿ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್ ಕ್ಷಮೆಯನ್ನು ಕೇಳಿದ್ದರು. ಈ ಹೇಳಿಕೆಗೆ ಇವರಿಗೆ ಸರಿಯಾಗಿ
ಗೂನ ಬಿದ್ದಿದೆ… ಆ ವಿವಾದ ಸ್ವಲ್ಪ ತಣ್ಣಗಾಗುವ ಸಮಯದಲ್ಲಿ ಮತ್ತೊಂದು ವಿವಾದಕ್ಕೆ ಸಿಲುಕುವ ಸಾಧ್ಯತೆ ಈಗ ಪ್ರಕಾಶ್ ರೈ ತೊಡಗಿದ್ದಾರೆ.

ಯಾವ ರೀತಿಯ ಹೇಳಿಕೆಗೆ ಬೆಂಬಲವನ್ನು ವ್ಯಕ್ತಪಡಿಸಬೇಕು ಎನ್ನು ಸಾಮಾನ್ಯ ಜ್ಞಾನವಿಲ್ಲ ಇವರಿಗೆ.!! ಯಾರಿಗಾದರೂ ಬೆಂಬಲವನ್ನು ಸೂಚಿಸುವ ಮೊದಲು ಅವರು ಏನು ಹೇಳಿಕೆ ನೀಡಿದ್ದಾರೆ ಎಂಬುವುದನ್ನು ಸರಿಯಾಗಿ ತಿಳಿದುಕೊಳ್ಳ ಬೇಕು. ಅದಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿ ಅವರನ್ನು ನೋಡಿದಾಗ ಮುಖ್ಯಮಂತ್ರಿಯೋ ಅಥವಾ ಒಬ್ಬ ಅರ್ಚಕರೋ ಎಂಬುವುದು ನಮಗೆ ಅರ್ಥವಾಗುತ್ತಿಲ್ಲ ಎಂಬ ಹೇಳಿಕೆ ಕೂಡಾ ಕೊಟ್ಟಿದ್ದರು..

ಮೊದಲು ನಮ್ಮ ಬಗ್ಗೆ ನಾವು ತಿಳಿದುಕೊಳ್ಳಬೇಕು.. ಬೇರೆಯವರನ್ನು ದೂಷಿಸಬಾರದು ಎಂಬುವುದನ್ನು ಯಾವಾಗ ನೀವು ಅರಿತುಕೊಳ್ಳುತ್ತೀರೋ ದೇವರೇ ಬಲ್ಲ. ಇದು ನಿಮ್ಮ ಒಬ್ಬರ ತಪ್ಪಲ್ಲ. ಯಾಕೆಂದರೆ ನಿಮ್ಮ ಇಡೀ ಸರಕಾರ ಅಂದರೆ ಕಾಂಗ್ರೆಸ್ ಸರಕಾರ ನೀವು ಮಾಡಿದ ತಪ್ಪನ್ನು ಯಾವಾಗಲಾದರೂ ಒಪ್ಪಿಕೊಂಡಿದ್ದೀರಾ? ನೀವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದೇ ನಿಮ್ಮ ಕಾಯಕ..

ತಮಿಳು ನಟ ಕಮಲ್ ಹಾಸನ್ ಆನಂದ್ ವಿಕಟನ್ ಎಂಬ ವಾರ ಪತ್ರಿಕೆಗೆ ಬರೆದ ಅಂಕಣದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು
ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಯಾವುದೇ ಸಂಘಟನೆ ಹೆಸರನ್ನು ಪ್ರಸ್ತಾಪಿಸದೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ನಟ ಕಮಲ್‍ಹಾಸನ್‍ರ ಹೇಳಿಕೆಗೆ ಬಲಪಂಥೀಯ ಸಂಘಟನೆಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಇವರ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ತೀವ್ರವಾದಿತನ ಎನ್ನುವುದು ಅಭಿವೃದ್ದಿಗೆ ಪೂರಕವಲ್ಲ ಎಂದು ಪ್ರತಿಪಾದಿಸಿರುವ ಕಮಲ್ ಇದು ಹಿಂದೂವಾದಿಗಳು ಎಂದು ಹೇಳಿಕೊಂಡವರಿಗೆ ಶೋಭೆಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮಿಳು ನಾಡಿನಲ್ಲಿ ಜನಾಂಗೀಯ ತಾರತಮ್ಯ ಮತ್ತು ಪ್ರತಿಗಾಮಿತ್ವ ಹೆಚ್ಚು ಹೆಚ್ಚು ಢಾಳಾಗಿ ಎದ್ದುಕಾಣುತ್ತಿದೆ ಎಂದು ಬರೆದುಕೊಂಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮಿಳುನಾಡಿನಲ್ಲಿ ಹಿಂದುತ್ವ ಶಕ್ತಿ ನೆಲೆಯೂರುತ್ತಿದೆ ಎಂಬ ಮಾತಿಗೆ ಈ ಮೂಲಕ ಉತ್ತರಿಸಿದ್ದಾರೆ. ಇವರು ಕೇರಳದ ಪಿಣರಾಯ ವಿಜಯನ್‍ಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಸಂಶಯ ಹುಟ್ಟುತ್ತಿದೆ. ಕೇರಳ ಸರಕಾರ ಭಯೋತ್ಪಾಕರನ್ನು ಪೋಷಿಸಿ ಬೆಳೆಸಿರುವಂತಹದ್ದು ಎಲ್ಲರಿಗೂ ತಿಳಿದ ವಿಷಯ.

ಪ್ರಕಾಶ್ ರೈ, ಭಯೋತ್ಪಾನೆ ಬಗ್ಗೆ  ಯಾವ ಕಾರಣಕ್ಕೂ ನೀವು ಬೆಂಬಲಿಸುವ ಅವಶ್ಯಕತೆ ಇಲ್ಲ. ಯಾಕೆಂದರೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ ಭಯೋತ್ಪಾದನೆಯನ್ನು ಪೋಷಿಸಿ ಬೆಳೆಸುತ್ತಿರುವುದು ನಿಮ್ಮದೇ ಕಾಂಗ್ರೆಸ್ ಸರಕಾರ.. ಇದೆಲ್ಲಾ ಇಡೀ ಪ್ರಪಂಚಕ್ಕೆ ತಿಳಿದ ವಿಷಯ ಬಿಡಿ. ಆದರೆ ಸುಖಾ ಸುಮ್ಮನೆ ಬಿಜೆಪಿಯನ್ನು ಹಿಂದೂ ಭಯೋತ್ಪಾದಕರು ಎಂದರೆ ಯಾರೂ ಸಹಿಸುವವರಿಲ್ಲ!!.. ಎಲು ಬಿಲ್ಲದ ನಾಲಗೆ ಹೇಗೆ ಬೇಕಾದರೂ ತಿರುಗತ್ತೇ ಅನ್ನುವ ಮಾತು ಕಾಂಗ್ರೆಸ್ ಸರಿಯಾಗಿ ಮಾಡುತ್ತಿದೆ.

-ಪವಿತ್ರ

Tags

Related Articles

Close