ಪ್ರಚಲಿತ

ಹಿಂದೂ ಮುಖಂಡರು ಒಬ್ಬರೂ ಉಳಿಯಬಾರದು…. ಅವರ ಚಲನವಲನಗಳ ಮೇಲೆ ಕಣ್ಣಿಟ್ಟು ಈ ರೀತಿ ಕೊಂದುಬಿಡಿ’

`ಹಿಂದೂ ಮುಖಂಡರು ಒಬ್ಬರೂ ಉಳಿಯಬಾರದು, ಅವರ ಚಲನವಲಗಳ ಮೇಲೆ ಕಣ್ಣಿಡಿ. ಅವಕಾಶ ಸಿಕ್ಕಿದಾಗ ಅವರನ್ನು ಕೊಂದುಬಿಡಿ.. ಧರ್ಮಕ್ಕಾಗಿ ಹೋರಾಡಿದರೆ ನಿಮಗೆ ಶಹೀದ್ ಸಿಗುತ್ತದೆ…’

ಹೌದು ಇಂಥದೊಂದು ವಿಡಿಯೋವೊಂದನ್ನು ಮಾಡಿಕೊಂಡಿರುವುದು ಯಾರು ಗೊತ್ತೇ? ಜಹಾದಿ ಮುಸ್ಲಿಂ ಉಗ್ರ ಸಂಘಟನೆ ಅಲ್‍ಖೈದಾ.. ಹಿಂದೂ ಮುಖಂಡರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಅಲ್‍ಖೈದಾ ಅವರನ್ನು ಕೊಲ್ಲಲು ಯೋಜನೆಯೊಂದನ್ನು ರೂಪಿಸಿದೆ. ಈ ಬಗ್ಗೆ ಗುಪ್ತಚರ ಇಲಾಖೆಗೆ ಅಲ್‍ಖೈದಾ ಸಂಘಟನೆ ಮಾಡಿರುವ ವಿಡಿಯೋ ಒಂದು ಲಭಿಸಿದ್ದು, ಭಾರೀ ಆತಂಕ ಸೃಷ್ಟಿಯಾಗಿದೆ. ಐಸಿಸ್ ಉಗ್ರರು ಅಯ್ಯಪ್ಪ ಭಕ್ತರನ್ನು ಕೊಲ್ಲಲು ಪ್ರಸಾದದಲ್ಲಿ ವಿಷಪ್ರಾಶನ ಮಾಡುವ ಐಡಿಯಾ ರೂಪಿಸಿರುವ ಮಾಹಿತಿ ಲಭಿಸಿದ ಬೆನ್ನಲೇ ಈ ವಿಡಿಯೋವನ್ನು ಅಲ್‍ಖೈದಾ ಬಿಡುಗಡೆ ಮಾಡಿದೆ. ದೇಶದಲ್ಲಿರುವ ಹಿಂದೂ ಮುಖಂಡರನ್ನು ಕೊಂದು ಹಿಂದೂಗಳನ್ನು ನಿರ್ವಂಶ ಮಾಡುವ ಗುರಿಯನ್ನು ಅಲ್‍ಖೈದಾ ಹೊಂದಿದ್ದು, ಈ ಬಗ್ಗೆ ಹಿಂದೂ ಮುಖಂಡರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಸರಣಿ ವಿಡಿಯೋಗಳನ್ನು ಹರಿಯಬಿಟ್ಟಿರುವ ಅಲ್‍ಖೈದಾ ಉಗ್ರ ಸಂಘಟನೆ ಅದರಲ್ಲಿ ಒಂದು ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡಿರುವ ವಿಡಿಯೋ ಕೂಡಾ ಇದೆ.

ಈ ವಿಡಿಯೋ ಲಭಿಸಿದಂತೆ ಅಲರ್ಟ್ ಆಗಿರುವ ಭಾರತೀಯ ತನಿಖಾದಳ ಇದರ ಬಗ್ಗೆ ತನಿಖೆ ನಡೆಸುತ್ತಿದ್ದು, ಅದನ್ನು ಎಲ್ಲಿ ರೂಪಿಸಲಾಗಿದೆ ಎನ್ನುವ ಬಗ್ಗೆ ಅದರ ಮೂಲವನ್ನು ಹುಡುಕಾಡುತ್ತಿದೆ. ಮೂಲಗಳ ಪ್ರಕಾರ ಇದನ್ನು ಉತ್ತರ ಪ್ರದೇಶದಲ್ಲಿ ರೂಪಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿರುವ ತನಿಖಾ ಸಂಸ್ಥೆ ಭಾರತದಲ್ಲಿ ಅಲ್‍ಖೈದಾ ಬೇರುಬಿಟ್ಟಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಅಲ್‍ಖೈದಾ ಉಗ್ರರು ಭಾರತದ ಮುಸ್ಲಿಮರ ಬ್ರೈನ್‍ವಾಶ್ ಮಾಡಿಕೊಂಡು ಅವರನ್ನು ಉಗ್ರರನ್ನಾಗಿ ಪರಿವರ್ತಿಸಲು ದೊಡ್ಡ ಮಟ್ಟದ ಯೋಜನೆ ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಸ್ಥಳೀಯ ಮುಸ್ಲಿಂ ಸಂಘಟನೆಗಳ ಬೆನ್ನು ಬಿದ್ದು ಹಿಂದೂ ಮುಖಂಡರನ್ನು ಕೊಲ್ಲಲು ಅವರಿಗೆ ಸುಫಾರಿ ನೀಡುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಆತಂಕ ಹೊಂದಿರುವ ತನಿಖಾ ಸಂಸ್ಥೆ ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳ ಮೇಲೆ ನಿಗಾ ಇರಿಸಿದೆ. ಅಲ್ಲದೆ ಈವರೆಗೆ ನಿಗೂಢವಾಗಿ ಮೃತಪಟ್ಟಿರುವ ಹಿಂದೂ ಮುಖಂಡರ ಕೊಲೆಯ ಹಿಂದೆ ಅಲ್‍ಖೈದಾ ಸಂಘಟನೆಯ ಕೈವಾಡ ಇದೆಯಾ ಎನ್ನುವ ಬಗ್ಗೆ ಗಹನವಾದ ತನಿಖೆಯನ್ನು ನಡೆಸಲು ತನಿಖಾ ಸಂಸ್ಥೆ ಮುಂದಾಗಿದ್ದು, ಈ ಬಗ್ಗೆ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಹಿಂದೂ ಮುಖಂಡರನ್ನು ಕೊಲ್ಲುವುದು ಹೇಗೆ?

ಹಿಂದೂ ಮುಖಂಡರನ್ನು ಕೊಲ್ಲುವ ಬಗ್ಗೆ ಅಲ್‍ಖೈದಾ ಯೋಜನೆ ರೂಪಿಸಿದ್ದು, ಅವರನ್ನು ಕೊಲ್ಲುವುದು ಹೇಗೆ ಎನ್ನುವುದನ್ನು ವಿಡಿಯೋದಲ್ಲಿ ಉಗ್ರರು ಚರ್ಚೆ ನಡೆಸಿದ್ದಾರೆ ಎನ್ನುವ ಬಗ್ಗೆ ಗುಪ್ತಚರ ಇಲಾಖೆ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದೆ. ಪ್ರಸಿದ್ಧ ಹಾಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಹಿಂದೂ ಮುಖಂಡರ ಮಾಹಿತಿ ಸಂಗ್ರಹಿಸಿ ಅದನ್ನು ಅಲ್‍ಖೈದಾಕ್ಕೆ ನೀಡಬೇಕು. ಬಳಿಕ ಅವರ ಚಲನವಲನಗಳ ಬಗ್ಗೆ ಕಣ್ಣಿಟ್ಟು, ನಿಗೂಢವಾಗಿ ಮುಗಿಸಿಬಿಡಬೇಕು.

ಹಿಂದೂ ಮುಖಂಡರು ಮಾಡುವ ಚಟುವಟಿಕೆ, ಮೊಬೈಲ್ ನಂಬರ್ ಸಂಗ್ರಹಿಸುವುದು, ಹಿಂದೂ ಸಂಘಟನೆಗಾಗಿ ನಡೆಸಲು ಕೆಲಸ ಕಾರ್ಯಗಳು, ಅವರ ಕುಟುಂಬ, ಅವರ ಅನುಯಾಯಿಗಳು, ಹಿಂದೂ ಸಂಘಟನೆಗಾಗಿ ಮಾಡುವ ಕೆಲಸವನ್ನು ಸಂಗ್ರಹಿಸಿ ಅಲ್‍ಖೈದಾಕ್ಕೆ ನೀಡಬೇಕು. ಅವರನ್ನು ಮುಗಿಸಲು ಅಲ್‍ಖೈದಾ ಸಂಘಟನೆಯ ಸದಸ್ಯ ಕಟೀಬದ್ಧವಾಗಿಕೊಂಡು, ಸರಿಯಾದ ಯೋಜನೆ ರೂಪಿಸಿ ಮುಗಿಸಿಬಿಡಬೇಕು. ಈ ರೀತಿ ಮಾಡಿದರೆ ಸ್ವರ್ಗ ಸಿಗುತ್ತದೆ ಎನ್ನುವ ಬಗ್ಗೆ ವಿಡಿಯೋ ಒಳಗೊಂಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಸಿಕ್ಕಿರುವುದರಿಂದ ಹಿಂದೂ ಮುಖಂಡರು ತಮ್ಮ ಬಗ್ಗೆ ಎಚ್ಚರಿಕೆಯಲ್ಲಿ ಇರುವಂತೆ ಸೂಚಿಸಲಾಗಿದ್ದು, ತನಗೇನಾದರೂ ಅನುಮಾನ ಮೂಡಿದರೆ ಪೊಲೀಸರ ಜೊತೆ ತಿಳಿಸುವಂತೆ ಸೂಚಿಸಲಾಗಿದೆ.

ಹಿಂದೂ ಮುಖಂಡರನ್ನು ಅಪಘಾತದ ಮೂಲಕ ಕೊಲ್ಲುವುದು, ಅವರ ಆಹಾರಕ್ಕೆ ವಿಷಪ್ರಾಶನ ಮಾಡುವುದು, ದಿಕ್ಕು ತಪ್ಪಿಸಿ ಕೊಲ್ಲುವುದು, ಹಿಂದೂ ಸಭೆ ನಡೆದಾಗ ಬಾಂಬ್ ಸ್ಫೋಟಿಸುವುದು, ಅವರಿಗೆ ಬೆದರಿಕೆ ಕರೆಯೊಡ್ಡಿ ಹೆದರಿಸುವುದು, ಅವರ ಮೇಲೆ ದಾಳಿ ನಡೆಸುವುದು, ಅವರ ಬಗ್ಗೆ ಸುಳ್ಳು ಕಥೆ ಹಬ್ಬಿಸುವುದು, ವದಂದಿ ಎಬ್ಬಿಸಿ ಅವರ ಚಾರಿತ್ರ್ಯ ಹರಣ ಮಾಡುವುದು ಇತ್ಯಾದಿಗಳ ಬಗ್ಗೆ ಅಲ್‍ಖೈದಾ ಕಾರ್ಯಯೋಜನೆ ರೂಪಿಸಿದೆ ಎನ್ನುವುದನ್ನು ಗುಪ್ತಚರ ಇಲಾಖೆ ಪತ್ತೆಹಚ್ಚಿದೆ. ಒಟ್ಟಿನಲ್ಲಿ ಅಲ್‍ಖೈದಾ ಭಾರತದಲ್ಲಿ ಹಿಂದೂ ಸಂಘಟನೆಗಳು ಬೆಳೆಯುತ್ತಿರುವುದನ್ನು ಮನಗಂಡು, ಭಾರತದಲ್ಲಿ ಮುಸ್ಲಿಮರಿಗೆ ಬದುಕೇ ಕಷ್ಟವಾಗುತ್ತದೆ ಎಂದು ಭಾರತೀಯ ಮುಸ್ಲಿಮರ ಬ್ರೈನ್‍ವಾಶ್ ಮಾಡಿಕೊಂಡು ಕೊಲ್ಲುವ ಬಗ್ಗೆ ವಿಡಿಯೋದಲ್ಲಿ ಮಾತಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಭಾರತದಲ್ಲಿ ಉಗ್ರ ಚಟುವಟಿಕೆ ಗರಿಗೆದರಿರುವುದನ್ನು ಗುಪ್ತಚರ ಸಂಸ್ಥೆ ಪತ್ತೆಹಚ್ಚಿದೆ. ಭಾರತದಲ್ಲಿ ಉಗ್ರ ಸಂಘಟನೆಗಳ ಬಗ್ಗೆ ಪ್ರಚಾರ ಕಾರ್ಯದಲ್ಲಿ ಐಎಸ್‍ಐ ತೊಡಗಿ ಜನರನ್ನು ಸೇರಿಸುವ ಕೆಲಸವನ್ನು ಮಾಡುತ್ತಿದೆ. ಕೇರಳ ರಾಜ್ಯದಲ್ಲಿ ಐಎಸ್‍ಐಎಸ್ ಉಗ್ರ ಚಟುವಟಿಕೆಗಳು ಹೆಚ್ಚು ನಡೆಯುತ್ತಿರುವುದು ಮಾತ್ರವಲ್ಲ, ರಾಜ್ಯದ ಹಲವು ಯುವಕರು ಸಂಘಟನೆ ಸೇರಿದ್ದಾರೆ.  ಕೇರಳದಲ್ಲಿ ಐಎಸ್‍ಐಎಸ್ ಚಟುವಟಿಕೆಗಳು ಹೆಚ್ಚಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿನ ಚಟುವಟಿಕೆ ಮೇಲೆ ಇಲಾಖೆ ಕಣ್ಣಿಟ್ಟಿದೆ. ಭಾರತದಿಂದ ಹೋಗುವ ಯುವಕರು ಆಘಾನಿಸ್ತಾನ ಮೂಲಕ ತೆರಳಿ ಸಂಘಟನೆ ಸೇರುತ್ತಾರೆ. ಸುಮಾರು 60 ಮಂದಿ ನೇರವಾಗಿ ಹೋಗಿದ್ದಾರೆ ಎಂದು ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ಸಿರಿಯಾ ಮೂಲಕವೂ ಹಲವು ಮಂದಿ ತೆರಳಿ ಉಗ್ರ ಸಂಘಟನೆ ಸೇರಿದ್ದಾರೆ ಎನ್ನುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.

ಒಟ್ಟಿನಲ್ಲಿ ಭಾರತದಲ್ಲಿ ಉಗ್ರ ಸಂಘಟನೆಯನ್ನು ಮಾಡಲು ಅಲ್‍ಖೈದ, ಐಸಿಸ್ ಸಂಘಟನೆ ತೊಡಗಿದ್ದು, ಅದರ ಮೊದಲ ಭಾಗವೆಂಬಂತೆ ಹಿಂದೂ ಸಂಘಟನೆಗಳ ಮುಖಂಡರನ್ನು ಮುಗಿಸಲು ರಣತಂತ್ರ ರೂಪಿಸಿದೆ. ಹಿಂದೂಗಳು ಸಂಘಟನೆಯನ್ನು ಸೇರದಂತೆ ಭಯ ಹುಟ್ಟಿಸಿ ಅವರನ್ನು ವಿಮುಖರನ್ನಾಗಿಸುವುದು, ಒಂದಷ್ಟು ಮಂದಿಯನ್ನು ಹೇಗಾದರೂ ಮಾಡಿ ಕೊಂದು, ಹಿಂದೂ ಸಂಘಟನೆಗಳಲ್ಲಿ ಭಯಹುಟ್ಟಿಸುವುದು, ಭಾರತವನ್ನು ಇಸ್ಲಾಂ ಆಗಿ ಪರಿವರ್ತಿಸುವುದು ಇತ್ಯಾದಿ ಉಗ್ರ ಸಂಘಟನೆಗಳ ಯೋಜನೆಯಲ್ಲಿ ಸೇರಿಕೊಂಡಿದೆ.

ಇತ್ತೀಚೆಗೆ ತಾನೇ ಇಸ್ಲಾಮಿಕ್ ಸ್ಟೇಟ್ಸ್ (ಐಸಿಸ್) ಉಗ್ರ ಸಂಘಟನೆ ಭಾರತದ ಹಲವೆಡೆ ಬಾಂಬ್ ಸ್ಫೋಟಿಸುವ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆಹಾರಗಳಿಗೆ ವಿಷ ಹಾಕುವ ಯೋಜನೆಯ ವಿಡಿಯೋವೊಂದು ವೈರಲ್ ಆಗಿದ್ದು ದೇಶಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಶಬರಿ ಮಲೆ ದೇಗುಲದಲ್ಲೂ ಹೈ ಅಲರ್ಟ್ ಘೋಷಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ. ಇದೀಗ ಆಲ್ ಖೈದಾ ಸಹ ಅಂಥದೇ ವಿಡಿಯೋವನ್ನು ಬಿಡುಗಡೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

ಚೇಕಿತಾನ

Tags

Related Articles

Close