ಸರಕಾರಕ್ಕೆ ಎಷ್ಟು ಉಗಿದರೂ ಸಾಲದು ಯಾಕೆ ಗೊತ್ತಾ? ರಾಜ್ಯದ ಪೊಲೀಸ್ ಇಲಾಖೆಯನ್ನು ಕೆಲಸ ಕೆಲಸ ಮಾಡಲು ಬಿಡದ, ಗುಪ್ತಚರ ಇಲಾಖೆಯ ಮಾಹಿತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ, ರಾಜ್ಯದ ಅಮಾಯಕ ಜನರು ನಿರಂತರ ಕೊಲೆಯಾಗುತ್ತಾ ಇದ್ದರೂ ಜಾತಿ ಜಾತಿಗಳ ಮಧ್ಯೆ ಎತ್ತಿಕಟ್ಟಿ ಗಲಾಟೆ ನಡೆಸಿ ಚಂದಾ ನೋಡುವ ಈ ಸರಕಾರಕ್ಕೆ ಎಷ್ಟು ಉಗಿದರೂ ಸಾಲದು ಎನಿಸುತ್ತದೆ. ಸರಕಾರ ಒಬ್ಬರನ್ನೊಬ್ಬರು ಎತ್ತಿ ಕಟ್ಟಿ ಗಲಾಟೆ ನಡೆಸಿ ಚಂದಾ ನೋಡುವ ನಡುವೆ ದೇಶದ ಮೋಸ್ಟ್ ವಾಂಟೆಡ್, ಪಿಎಫ್‍ಐ ಜೊತೆ ಲಿಂಕ್ ಇಟ್ಟುಕೊಂಡಿರುವ ಉಗ್ರನೊಬ್ಬ ಎಸ್ಕೇಪ್ ಆಗಿದ್ದು ಗೊತ್ತೇ ಇಲ್ಲ. ಸಿದ್ದರಾಮ್ಯನ ಎಡ-ಬಲ ಗಲಾಟೆ ನೋಡಿ ಆ ಉಗ್ರ ದೂರದಲ್ಲಿ ನಿಂತು ನಗ್ತಾ ಇರಬಹುದು. ಅಥವಾ ದೇಶದ ಯಾವ ಕಡೆ ಬಾಂಬ್ ಹಾಕ್ಬೇಕು ಎಂದು ಸ್ಕೆಚ್ ಹಾಕ್ತಾ ಇರಬಹುದು. ಹೌದು ಆತ ಬೇರ್ಯಾರೂ ಅಲ್ಲ… ರಶೀದ್ ಮಲಬಾರಿ… ಈತ ದೇಶದಿಂದ ಆರಾಮವಾಗಿ ತಪ್ಪಿಸಿಕೊಂಡು ಹೋಗಲು ಅಲ್ಪಸಂಖ್ಯಾತ ಓಲೈಕೆ ಮಾಡುವ ಸರಕಾರವೇ ನೆರವಾಗಿ ನೆರಲೂಬಹುದು.
ರಶೀದ್ ಮಲಬಾರಿ ಹೆಸರು ಕೇಳಿದ್ರೆ ಪಾತಕ ಲೋಕ ಗಡಗಡ ನಡುಗುತ್ತೆ. ಹತ್ಯೆ, ಕೊಲೆ ಸ್ಕೆಚ್, ಹಫ್ತಾ ವಸೂಲಿ ಮುಂತಾದ ಕೇಸ್‍ಗಳನ್ನು ತಗಲಾಕಿಕೊಂಡಿರುವ ಮಲಬಾರಿ ಪೆÇಲೀಸರ ವಾಂಟೆಡ್ ಲಿಸ್ಟ್‍ನಲ್ಲಿ ಖಾಯಂ ಆಗಿ ಹೆಸರು ಪಡೆದುಕೊಂಡವನು. ಪಕ್ಕಾ ಕ್ರಿಮಿನಲ್ ಆಗಿರುವ ಮಲಬಾರಿಯನ್ನು ಹಿಡಿಯುವುದು ಬಿಡಿ, ಆತ ಎಲ್ಲಿದ್ದಾನೆಂದು ಕೂಡಾ ಪೊಲೀಸರಿಗೆ ಗೊತ್ತಿಲ್ಲ. ಸರಕಾರಕ್ಕೆ ನಾಚಿಕೆಯಾಗ್ಬೇಕು… ಒಬ್ಬ ಕ್ರಿಮಿನಲ್ ತಪ್ಪಿಸಿಕೊಂಡು ಇಷ್ಟು ವರ್ಷ ಕಳೆದರೂ ಆತನನ್ನು ಹಿಡಿಯಲಾಗುತ್ತಿಲ್ಲ ಎಂದರೆ ಇದಕ್ಕಿಂತ ಮಾನಗೆಟ್ಟ ವಿಷಯ ಬೇರೊಂದಿಲ್ಲ.ರಶೀದ್ ಮಲಬಾರಿ ಒಬ್ಬ ಭೂಗತ ಲೋಕದ ಪಾತಕಿ. ಈಗಾಗಲೇ ರಕ್ತದಲ್ಲಿ ಕೈ ತೊಳೆದುಕೊಂಡಿರುವ ಮಲಬಾರಿ ಇನ್ನೂ ಅನೇಕರ ಪ್ರಾಣ ಹೀರಲು ಕಾತರನಾಗಿದ್ದಾನೆ ಅನ್ತಿವೆ ಪೆÇಲೀಸ್ ಮೂಲಗಳು. ಮುಸ್ಲಿಂ ಡಾನ್ ಆಗಿ, ಭೂಗತ ಲೋಕದ ಡಾನ್ ಆಗಿ ಮಿಂಚಬೇಕು ಎನ್ನುವ ಹುಂಬತನದಲ್ಲಿರುವ ಮಲಬಾರಿ ಇಲ್ಲಿನ ಕೆಲವು ಪಿಎಫ್‍ಐನಂಥಾ ಮತೀಯ ಮುಸ್ಲಿಂ ಸಂಘಟನೆಗಳಿಗೆ ಹಣಕಾಸು ಸಹಾಯ ಮಾಡ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಉಗ್ರ ರಶೀದ್ ಮಲಬಾರಿಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಒಬ್ಬರಿಗೊಬ್ಬರು ನೇರಾ ನೇರಾ ಸಂಬಧವಿದೆ. ದಾವೂದ್‍ನ ಸಾಕಷ್ಟು ಮಾಹಿತಿ ಉಗ್ರ ರಶೀದ್ ಮಲಬಾರಿಗೆ ಇದೆ. ದಾವೂದ್‍ನ ಮಾಹಿತಿ ಸೋರಿಕೆಯಾಗಬಹುದೆಂಬ ಕಾರಣಕ್ಕೆ ಈತನನ್ನು ಬೇಕೆಂದೇ ಎಸ್ಕೇಪ್ ಮಾಡಿಸಿರುವ ಸಾಧ್ಯತೆಯೂ ಇದೆ.
ರಶೀದ್ ಬಲಬಾರಿ ಭೂಗತ ಪಾತಕಿ ಚೋಟಾ ಶಕೀಲ್‍ನ ಬಲಗೈ ಬಂಟ. ರಶೀದ್ ಮಲಬಾರಿ ಇಸ್ಲಾಂ ಉಗ್ರವಾದದ ಕಡೆಗೆ ಅತಿ ಆಸಕ್ತಿ ಹೊಂದಿದವನು. ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ದಂಧೆ, ಮರ್ಡರ್, ಕಿಡ್ನಾಪ್ ಮುಂತಾದ ಕೃತ್ಯಗಳಲ್ಲಿ ತೊಡಗಿರುವ ಮಲಬಾರಿಯನ್ನು ಪೊಲೀಸರು ಹಿಡಿಯುತ್ತಿಲ್ಲ. ಜೊತೆ ಈತ ಎಲ್ಲಿದ್ದಾನೆಂಬುವುದು ಮಾಹಿತಿಯೂ ಇಲ್ಲ. ಕರ್ನಾಟಕ, ಕೇರಳ ಮುಂತಾದ ಕಡೆಗಳಲ್ಲಿ ನಡೆದ ಸಂಘಪರಿವಾರದವರ ಕೊಲೆಯ ಹಿಂದೆ ರಶೀದ್ ಮಲಬಾರಿಯ ಕೈವಾಡವೂ ಇದೆ .
ರಶೀದ್ ಮಲಬಾರಿ ಚೋಟಾಶಕೀಲ್‍ನ ಬಲಗೈ ಬಂಟ. ಚೋಟಾ ಶಕೀಲ್‍ನ ಆಣತಿಯಂತೆ ಕೆಲಸ ಮಾಡುವ ಮಲಬಾರಿ ಆತ ಹೇಳುವ ಯಾವುದೇ ಕೆಲಸಕ್ಕೂ ಸೈ ಎನ್ನುವಷ್ಟು ಮಟ್ಟಿಗೆ ಅವರಿಬ್ಬರ ಗೆಳೆತನ ಮುಂದುವರಿಯುತ್ತದೆ. ಈ ಚೋಟಾ ಶಕೀಲ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬಲಗೈ ಬಂಟ. ಇನ್ನು ಚೋಟಾ ಶಕೀಲನ ಕಡುವೈರಿ ಚೋಟಾ ರಾಜನ್ ಅರೆಸ್ಟ್ ಆದ ಬಳಿಕ ಚೋಟಾ ಶಕೀಲ್‍ಗೆ ಭೂಗತಲೋಕದಲ್ಲಿ ಅಡ್ಡ ಬರುವವರು ಯಾರೂ ಇರಲಿಲ್ಲ.
ಒಂದು ಕಾಲದಲ್ಲಿ ಚೋಟಾ ಶಕೀಲನು ಚೋಟಾ ರಾಜನ್‍ನ್ನು ಮುಗಿಸಲು ನೋಡಿದ್ದ. ಇದಕ್ಕಾಗಿ ಶಕೀಲ್ ನೇಮಿಸಿದ್ದು ರಶೀದ್ ಮಲಬಾರಿಯನ್ನು…!
ಅದು ಸೆಪ್ಟೆಂಬರ್ 2000ನೇ ಇಸವಿ; ಸ್ಥಳ ಬ್ಯಾಂಕಾಕ್‍ನ ಪ್ರತಿಷ್ಠಿತ ಐಷಾರಾಮಿ ಹೋಟೆಲ್ ಫಥುನಮ್ನ ಎಂಬಲ್ಲಿ ಚೋಟಾ ರಾಜನ್ ರೂಂ ಮಾಡಿಕೊಂಡಿದ್ದ. ಚೋಟಾ ರಾಜನ್‍ನನ್ನು ಮುಗಿಸಬೇಕೆಂದು ಗನ್ ಹಿಡಿದುಕೊಂಡು ನುಗ್ಗಿದವನೇ ಇದೇ ಮೋಸ್ಟ್ ವಾಂಟೆಡ್ ಕ್ರಿಮಿನಲ್ ರಶೀದ್ ಮಲಬಾರಿ. ಬಾಗಿಲನ್ನು ಒಡೆದು ಸುಮಾರು 200 ಸುತ್ತು ಗುಂಡಿನ ಸುರಿಮಳೆ ಸುರಿಸಿ ಎದುರಲ್ಲಿದ್ದ ವ್ಯಕ್ತಿಯನ್ನು ಕೊಂದು ಹಾಕುತ್ತಾನೆ.
ರಶೀದ್ ಮಲಬಾರಿ ತನ್ನ ಕೊಲ್ಲಲು ಬಂದಿದ್ದಾನೆ ಎಂದು ಮೊದಲೇ ಅರಿತಿದ್ದ ಚೋಟಾ ರಾಜನ್ ಅಲ್ಲಿಂದ ತಪ್ಪಿಸಿಕೊಂಡಿದ್ದ. ಆದರೆ ಮನೆಯ ಬಾಗಿಲು ತೆರೆದ ಚೋಟಾ ರಾಜನ್ ಬಲಗೈ ಬಂಟ ರೋಹಿತ್ ವರ್ಮಾ ಜೀವ ಕಳೆದುಕೊಳ್ಳುತ್ತಾನೆ.
ಅಲ್ಲಿಂದ ತಪ್ಪಿಸಿಕೊಂಡಿದ್ದ ಮಲಬಾರಿ ದುಬೈಗೆ ಪರಾರಿಯಾಗಿದ್ದ. ಇದರಿಂದ ಬೆಚ್ಚಿಬಿದ್ದಿದ್ದ ಬೆಂಗಳೂರಿನ ಸಿಸಿಬಿ ಪೆÇಲೀಸರು ದಿಲ್ಲಿಗೆ ತೆರಳಿ ಇಂಟರ್‍ಪೆÇೀಲ್ ಮೂಲಕ ರೆಡ್‍ಕಾರ್ನರ್ ನೋಟೀಸ್ ಜಾರಿ ಮಾಡಿದ್ದರು. ಆತನ ಮೇಲೆ ದೇಶದ ನಾನಾ ಕ್ರೈಂ ಸಂಸ್ಥೆ, ಗುಪ್ತಚರ ಸಂಸ್ಥೆ `ರಾ’ ಆತನ ಮೇಲೆ ಕಣ್ಣಿಡಲಾರಂಭಿಸಿತ್ತು. ಯಾವಾಗ ರಶೀದ್ ಮಲಬಾರಿ ಚೋಟಾ ರಾಜನ್ ಮೇಲೆ ಗುಂಡಿನ ದಾಳಿ ನಡೆಸಿದನೋ ಆಮೇಲೆ ಮಲಬಾರಿ ದಾವೂದ್ ಇಬ್ರಾಹಿಂ ಜೊತೆ ನೇರ ಸಂಪರ್ಕ ಸಾಧಿಸಿಕೊಂಡ.
ಮಲಬಾರಿಯ ಗುಂಡೇಟಿನಿಂದ ಗಾಯಗೊಂಡಿದ್ದ ಚೋಟಾ ರಾಜನ್ ಬದುಕುಳಿದಿದ್ದ. ಗಾಯಗೊಂಡ ನಾಗರಹಾವಿನಂತೆ ಹಗೆ ತೀರಿಸಲು ಮುಂದಾಗಿದ್ದ ಚೋಟಾ ರಾಜನ್ ದಾವೂದ್ ಗ್ಯಾಂಗ್ ಮೇಲೆ ಕಣ್ಣಿಟ್ಟಿದ್ದ. ಇದನ್ನೆಲ್ಲಾ ಅರಿತಿದ್ದ ಮಲಬಾರಿ ನೇರವಾಗಿ ಭಾರತಕ್ಕೆ ಬಂದು ತನ್ನ ಕೃತ್ಯಗಳಲ್ಲಿ ಮುಂದುವರಿಸಿದ. ಆದ್ರೆ ವಿಪರ್ಯಾಸ ಎಂದರೆ ಈತ ಭಾರತಕ್ಕೆ ಬಂದು ತನ್ನ ಕೃತ್ಯಗಳನ್ನು ಮುಂದುವರಿಸಿರುವುದು ಸ್ವತಃ ಪೆÇಲೀಸರಿಗೂ ಗೊತ್ತಿರಲಿಲ್ಲ.
ಹಿಂದೂ ಮುಖಂಡರ ಕೊಲೆಗೆ ಡೀಲ್ ಪಡೆಯುವ ಮಲಬಾರಿಸಣ್ಣಪುಟ್ಟ ಗ್ಯಾಂಗ್‍ವಾರ್‍ಗಳಲ್ಲಿ ತೊಡಗಿಕೊಂಡಿದ್ದ ರಶೀದ್ ಮಲಬಾರಿ ಚೋಟಾ ರಾಜನ್ ಹತ್ಯೆಗೆ ಸ್ಕೆಚ್ ರೂಪಿಸಿದ ಬಳಿಕ ಭೂಗತ ಲೋಕಕ್ಕೆ ಎಂಟ್ರಿ ಪಡೆದ. ಆತನ ತಲೆಯಲ್ಲಿ ಮುಸ್ಲಿಂ ಮೂಲಭೂತವಾದದ ಅಮಲು ಎಷ್ಟು ತಲೆಗೆ ಹತ್ತಿತ್ತೆಂದರೆ ಹಿಂದೂ ಮುಖಂಡರನ್ನು ಕೊಲ್ಲು ಡೀಲ್ ಪಡೆದುಕೊಳ್ಳುವಷ್ಟು… ಆ ಪ್ರಭಾವಿ ಹಿಂದೂ ಮುಖಂಡರುಗಳು ಯಾರು ಗೊತ್ತಾ?
1. ಅರುಣ್ ಗಾವ್ಲಿ
2. ಪ್ರವೀಣ್ ಭಾಯ್ ತೊಗಡಿಯಾ
3. ಪ್ರಮೋದ್ ಮುತಾಲಿಕ್
ಹೌದು ಅರುಣ್ ಗಾವ್ಲಿ, ಪ್ರವೀಣ್ ಭಾಯ್ ತೊಗಡಿಯಾ ಹಾಗೂ ಪ್ರಮೋದ್ ಮುತಾಲಿಕ ಇಬ್ಬರೂ ತನ್ನ ಡಿಫೆರೆಂಡ್ ಮ್ಯಾನರಿಸಂನಿಂದ, ಸಂಘಟನೆಗಳಿಂದ ಹೆಸರು ಮಾಡಿಕೊಂಡವರು. ಹಿಂದೂಗಳಿಗಾಗಿ ಜೀವನವನ್ನೇ ಮುಡಿಪಾಡಿಟ್ಟುಕೊಂಡವರನ್ನು ಕೊಲ್ಲಲು ಸುಪಾರಿ ಪಡೆದಿದ್ದ ಮಲಬಾರಿ ದೇಶದಲ್ಲಿ ಕೋಮುಗಲಭೆಗೆ ವ್ಯವಸ್ಥಿತ ಪ್ಲಾನ್ ಮಾಡಿದ್ದ.
ಇನ್ನು ಅರುಣ್ ಗಾವ್ಲಿ ಬಗ್ಗೆ ಹೇಳ್ಬೇಕಾದ್ರೆ ಈತ ಒಂದು ಕಾಲದಲ್ಲಿ ಇಡೀ ಮುಂಬೈಯನ್ನು ಗಡಗಡ ನಡುಗಿಸಿದ ಗ್ಯಾಂಗ್‍ಸ್ಟರ್. ಒಂದು ಕಾಲದಲ್ಲಿ ಭೂಗತ ಲೋಕದಲ್ಲಿ ಪಾರಮ್ಯ ಮೆರೆದಿದ್ದ ಅರುಣ್ ಗಾವ್ಲಿ ಹಾಗೂ ಇವರ ತಮ್ಮ ಕಿಶೋರ್ ಮುಂಬೈಯಲ್ಲಿ ಬೈಸುಲ್ಲಾ ಕಂಪನಿ ಸ್ಥಾಪಿಸಿದ್ದರು. ದಾವೂದ್‍ನ `ಡಿ’ ಕಂಪೆನಿಗೆ ಪ್ರತಿಸ್ಪರ್ಧಿಯಾಗಿದ್ದ ಅರುಣ್ ಗಾವ್ಲಿ ಕೊನೆಗೆ ರೌಡಿಸಂ ಬಿಟ್ಟು ರಾಜಕೀಯ ಸೇರಿಕೊಂಡರು. ಮುಂಬೈಯಲ್ಲಿ ತನ್ನದೇ ಹವಾ ಸೃಷ್ಟಿಸಿಕೊಂಡಿದ್ದ ಅರುಣ್ ಗಾವ್ಲಿಗೆ ಇಂದಿಗೂ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅರುಣ್ ಗಾವ್ಲಿಗೆ ಏನಾದ್ರೂ ಆದ್ರೆ ಇಡೀ ಮುಂಬೈ ಹೊತ್ತಿ ಉರಿಯಬಹುದು.
ಅದೇ ರೀತಿ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಪ್ರವೀಣ್ ತೊಗಡಿಯಾ ಕೂಡಾ ಸಾಕಷ್ಟು ಹವಾ ಸೃಷ್ಟಿಸಿಕೊಂಡ ಹಿಂದೂ ಮುಖಂಡರು. ಇಂಥವರನ್ನು ಮುಗಿಸಲು ಮಲಬಾರಿ ಸಿಮಿ ಸಂಘಟನೆಯ ಕಾರ್ಯಕರ್ತರ ಸಹಾಯ ಪಡೆದಿದ್ದ. ಈ ಸಿಮಿ ಸಂಘಟನೆ ಇಂದು ನಿಷೇಧಗೊಂಡಿದೆ. ಅದೇ ಸಿಮಿ ಸಂಘಟನೆ ತನ್ನ ಹೆಸರನ್ನು ಕೆಎಫ್‍ಡಿ ಎಂದು ಬದಲಿಸಿ ಇಂದು ಪಿಎಫ್‍ಐ ಎಂಬ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ರಶೀದ್ ಮಲಬಾರಿ ಸಿಮಿ ಸಂಘಟನೆಯ ಸಹಾಯ ಪಡೆದು ತನ್ನ ಕೃತ್ಯಕ್ಕೆ ಬೇಕಾದ ಹುಡುಗರನ್ನು ನೇಮಿಸಲು ಶುರು ಮಾಡಿದ. ಶ್ರೀಮಂತರಿಂದ ಹಫ್ತಾ ವಸೂಲಿ ಮಾಡುವುದು, ಉದ್ಯಮಿ, ಶ್ರೀಮಂತರ ಕೊಲೆ, ಅಪಹರಣ, ಸುಲಿಗೆ ಹಾಗೂ ಕಳ್ಳತನ ಇತ್ಯಾದಿ ಕೃತ್ಯಗಳಲ್ಲಿ ಈತನ ಹುಡುಗರು ತೊಡಗಲಾರಂಭಿಸಿದರು. ಜೂನ್ 7, 1998ರ ಮಂಗಳೂರಿನ ಪಣಂಬೂರಿನಲ್ಲಿ ನಡೆದ ಡಬಲ್ ಮರ್ಡರ್‍ನಲ್ಲಿ ಮಲಬಾರಿ ಪ್ರಮುಖ ಆರೋಪಿಯಾಗಿದ್ದಾನೆ.
ರಶೀದ್ ಮಲಬಾರಿ ಕ್ರಿಮಿನಲ್ ಹಿಸ್ಟರಿ ನೋಡಿದರೆ ಈತನ ವಿರುದ್ಧ ದೇಶ-ವಿದೇಶಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದೆ. ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿಯೂ ರಶೀದ್ ಮಲಬಾರಿ ಭಾಗಿಯಾಗಿದ್ದಾನೆ. ನಕಲಿ ದಾಖಲೆ ಸೃಷ್ಟಿಸಿ ಗಲ್ಫ್, ದಕ್ಷಿಣ ಏಷ್ಯ, ಚೀನಾ, ದುಬೈ, ನೇಪಾಳದಲ್ಲಿ ತಲೆಮರೆಸಿಕೊಂಡು ಮಂಗಳೂರಿನಲ್ಲಿ ನಡೆದ ಅನೇಕ ಕೋಮುಗಲಭೆ ಪ್ರಕರಣದಲ್ಲಿ ಈತನ ಕೈವಾಡ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಪಡೆದುಕೊಂಡಿದೆ. ಇದಲ್ಲದೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ, ಉದ್ಯಮಿ ಪುತ್ರನ ಅಪಹರಸಿ ಹತ್ಯೆ ಮುಂತಾದ ಪ್ರಕರಣಗಳಿವೆ.
ಸ್ಕೆಚ್ ಹಾಕಿದ ಇಬ್ಬರನ್ನು ಮುಗಿಸಿದ ಮಲಬಾರಿ!
ಇಷ್ಟೆಲ್ಲಾ ಕೃತ್ಯಗಳನ್ನು ಮಾಡಿಕೊಂಡಿದ್ದ ಮಲಬಾರಿಯನ್ನೂ ಕೊಲ್ಲಲು ಇಬ್ಬರು ಸ್ಕೆಚ್ ಹಾಕಿದ್ದರು. ಹೌದು, 1998 ರ ಜು.7 ರಂದು ಪಣಂಬೂರಿನಲ್ಲಿ ನಡೆದ ಅವಳಿ ಮರ್ಡರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದವನು ರಶೀದ್ ಮಲಬಾರಿ. ಮೂಲತಃ ಕೇರಳದವರಾದ ಪ್ರಶಾಂತ್ ಘಾಟೆ ಹಾಗೂ ರೋಬರ್ಟ್ ಡೇವಿಡ್ ಪಿರೇರ ದುಬೈ ಡಾನ್‍ಗಳ ಅಣತಿಯ ಮೇರೆಗೆ ಕೇರಳದವನೇ ಆದ ರಶೀದ್ ಮಲಬಾರಿ ಹತ್ಯೆಗೆ ಸಂಚು ರೂಪಿಸಿದ್ದರು. ಇದರ ಸುಳಿವು ದೊರೆತ ಮಲಬಾರಿ, ತನಗೆ ಸ್ಕೆಚ್ಚು ಹಾಕಿದವರನ್ನೇ ಯಮಲೋಕಕ್ಕೆ ಕಳುಹಿಸಿದ.
ಇನ್ನು ಬೆಳಗಾವಿ ನಗರದ ಉದ್ಯಮಿಯೊಬ್ಬರ ಮಗ ರೋಹನ್ ರಡೇಕರ ಶವ ಬೆಳಗಾವಿಯ ಚೋರ್ಲಾ ಘಾಟ್‍ನಲ್ಲಿ ಪತ್ತೆಯಾಗಿತ್ತು. ರೋಹನ್ ರಡೇಕರ್‍ನನ್ನು ಅಪಹರಿಸಿ ಹತ್ಯೆಗೈದ ಮಲಬಾರಿಯ 11 ಸಹಚರರನ್ನು ಪೆÇಲೀಸರು ಬಂಧಿಸಿದ್ದರು. ಆತನ ಸಹರರು ಸ್ಫೋಟಕ ವಿಷಯವೊಂದನ್ನು ಬಾಯ್ಬಿಟ್ಟರು. ಅದೇನಪ್ಪಾ ಅಂದ್ರೆ ಮೋಸ್ಟ್ ವಾಂಟೆಡ್ ಮಲಬಾರಿ 2 ವರ್ಷಗಳ ಕಾಲ ಮಾಮು ಎಂಬ ಹೆಸರಲ್ಲಿ ಬೆಳಗಾವಿ, ಪುಣೆಯಲ್ಲಿ ಅಡ್ಡಾಡಿಕೊಂಡಿದ್ದ. ಇದು ಪೆÇಲೀಸರಿಗೆ ತಲೆನೋವಿನ ವಿಷ್ಯವಾಗಿತ್ತು. ಇದಕ್ಕಾಗಿ ಪೆÇಲೀಸರು ಆತನ ವಿರುದ್ಧ ರೆಡ್‍ಕಾರ್ನರ್ ನೋಟೀಸ್ ಕೂಡಾ ಜಾರಿಗೊಳಿಸಿದ್ದರು.
ಪೊಲೀಸರಿಗೂ ಸಿಕ್ಕಿಬಿದ್ದಿದ್ದ ಭಯೋತ್ಪಾದಕ;
ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ್ದ ಉಗ್ರ ರಶೀದ್ ಮಲಬಾರಿ ಒಮ್ಮೆ ಪೆÇಲೀಸರಿಗೂ ಸಿಕ್ಕಿಬಿದ್ದಿದ್ದ. ಆ ಬಳಿಕ ಆತ ತಪ್ಪಿಸಿಕೊಂಡಿರುವ ಆತ ಪೆÇಲೀಸರಿಗೆ ಸಿಕ್ಕೇ ಇಲ್ಲ. ರಶೀದ್ ಮಲಬಾರಿ ಪರವಾಗಿ ವಾದಿಸಲು ಬಂದ ವಕೀಲನೂ ಕೊಲೆಯಾದ. ಆ ಬಳಿಕ ತಪ್ಪಿಸಿಕೊಂಡ ಮಲಬಾರಿ ಎಲ್ಲಿಗೆ ಪರಾರಿಯಾಗಿದ್ದಾನೆಂದೇ ಗೊತ್ತಿಲ್ಲ.
ಬಿಜೆಪಿಯ ಹಾಲಿ ಸಂಸದ ವರುಣ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದಾನೆ ಅನ್ನೋದು ತಿಳಿದದ್ದೇ ತಡ, ಸೆಂಟ್ರಲ್ ಪೆÇಲೀಸರು ಅಲೆರ್ಟ್ ಆಗಿ ಮಂಗಳೂರು ಪೆÇಲೀಸರನ್ನು ಸಂಪರ್ಕಿಸಿದರು. ಪಣಂಬೂರು ಜೋಡಿಕೊಲೆಯಲ್ಲಿ ರಶೀದ್ ಇದ್ದಾನೆಂಬ ಕಾರಣಕ್ಕೆ ಪೆÇಲೀಸರಿಗೂ ಒತ್ತಡ ಹೆಚ್ಚಿದ್ದರಿಂದ ಅವನಿಗಾಗಿ ತಲಾಶೆಯಲ್ಲಿ ತೊಡಗಿದರು. ಅದು ಮಾ.29,2009. ಅಂದಿನ ಡಿಸಿಬಿಐ ಆಗಿದ್ದ ವೆಂಕಟೇಶ್ ಪ್ರಸನ್ನ ನೇತೃತ್ವದ ವಿಶೇಷ ಪೆÇಲೀಸರ ತಂಡ ಕಾಸರಗೋಡಿನ ಚಟ್ಟಂಚಾಲ್ ಎಂಬಲ್ಲಿ ಮಲಬಾರಿಯನ್ನು ಬಂಧಿಸಿತು. ಈ ವೇಳೆ ಮಲಬಾರಿ ಪಣಂಬೂರು ಜೋಡಿಕೊಲೆಯನ್ನು ಒಪ್ಪಿಕೊಂಡಿದ್ದ. ಅಲ್ಲಿಂದ 2013ರ ತನಕ ಮಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇದ್ದುಕೊಂಡಿದ್ದ. ಜೈಲಿನಲ್ಲೇ ಇದ್ದುಕೊಂಡು ಅಂಡರ್ ವಲ್ಡ್ ಅನ್ನು ನಿಯಂತ್ರಿಸಿಕೊಳ್ಳುತ್ತಿದ್ದ.
ಪಣಂಬೂರು ಜೋಡಿಕೊಲೆಯ ಬಗ್ಗೆ ಮಲಬಾರಿ ಪರವಾಗಿ ವಾದಿಸಲು ವಕೀಲರಿಗಾಗಿ ಹುಡುಕಾಡಿದ. ಆದರೆ ಯಾರೊಬ್ಬ ವಕೀಲರೂ ವಾದಿಸಲು ಮುಂದೆ ಬರಲಿಲ್ಲ. ಆದರೆ ಕೊನೆಗೂ ಒಬ್ಬ ವಕೀಲ ಮುಂದೆ ಬಂದರು. ಅವರೇ ವಕೀಲ ನೌಷಾದ್ ಖಾಸಿಂ.
ಕುಖ್ಯಾತನಾಗಿದ್ದ ರಶೀದ್ ಮಲಬಾರಿ ಪರ ವಾದಿಸಲು ಯಾವುದೇ ವಕೀಲರು ಮುಂದೆ ಬಾರದಾಗ ಆತನ ಪರ ವಾದಿಸಲು ಕೊನೆಗೂ ಮನಸ್ಸು ಮಾಡಿದವರು ಭಟ್ಕಳ ಮೂಲದ ವಕೀಲ ವಕೀಲ ನೌಷಾದ್ ಖಾಸಿಂ. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ 2009ರಲ್ಲಿ ಪಾತಕಿ ರವಿ ಪೂಜಾರಿ ಸಹಚರರು ಮಂಗಳೂರಿನ ಹೃದಯಭಾಗವಾದ ಫಳ್ನೀರ್ನಲ್ಲಿ ನೌಷದ್‍ನನ್ನೇ ಮುಗಿಸಿಬಿಟ್ಟರು. ಪ್ರತೀಕಾರಕ್ಕಾಗಿ ಮುಂದಾದ ಮಲಬಾರಿ ಇದಕ್ಕೆ ಪ್ರತಿಯಾಗಿ ರಾಜ್ಯದ ಪ್ರಮುಖ ಹಿಂದೂ ವಕೀಲರೊಬ್ಬರ ಕೊಲೆಗೆ ಮುಂದಾದ ಮಲಬಾರಿ. ಆದರೆ ಈತನ ಯೋಜನೆ ಕಾರ್ಯಗತವಾಗುವ ಹಂತದಲ್ಲಿ ಈ ಹಿಂದು ವಕೀಲ ಕೂದಲೆಳೆಯ ಅಂತರದಿಂದ
ಸಾವಿನಿಂದ ಪಾರಾದರು..
ಇತ್ತೀಚೆಗೆ ಮಲಬಾರಿಯನ್ನು ಭೇಟಿ ಮಾಡಲು ಬಂದ ಆರು ಮಂದಿಯನ್ನು ಸಿಸಿಬಿ,ಡಿಸಿಐಬಿ ಮತ್ತು ಮಂಗಳೂರು ಪೆÇಲೀಸರು ಜೈಲು ಆವರಣದಲ್ಲಿ ಬಂಧಿಸಿದ್ದರು ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬೆಳಕಿಗೆ ಬಂದದ್ದೇ ಹಿಂದು ನಾಯಕನ ಹತ್ಯೆ ಸಂಚು. ನಂತರ ಪ್ರಬಲ ಹಿಂದು ಸಂಘಟನೆಯ ನಾಯಕನ ಹತ್ಯೆಗೆ ಮಲಬಾರಿ ಮಂಗಳೂರು ಜೈಲಿನಿಂದಲೇ `ಸ್ಕೆಚ್’ ಹಾಕಿದ್ದ. ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮಲಬಾರಿಗೆ ಅಕ್ರಮ ಶಶ್ತ್ರಾಸ್ತ ಹೊಂದಿರುವ ಆರೋಪದಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ದ ಮಲಬಾರಿ ತನ್ನ ವಕೀಲರ ಮೂಲಕ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಶಿಕ್ಷೆಗೆ ತಡೆಯಾಜ್ಞೆ ತಂದಿದ್ದ. ಈ ಸಂದರ್ಭ ಮಂಗಳೂರು ಜೈಲಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಮಲಬಾರಿಯನ್ನು ಮಂಗಳೂರಿನ ಪರಪ್ಪನ ಜೈಲಿಗೆ ವರ್ಗಾಯಿಸಲಾಗಿತ್ತು.
ಈ ವೇಳೆ ಪ್ರಕರಣಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮಲಬಾರಿಗೆ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿತ್ತು. ಈತನ ವಿರುದ್ಧ ಬೆಂಗಳೂರಿನಲ್ಲಿ ಒಂದು ಹಾಗೂ ಮಂಗಳೂರಿನಲ್ಲಿ 9 ಪ್ರಕರಣಗಳಿರುವುದರಿಂದ ಅದರ ವಿಚಾರಣೆಗೂ ಮಲಬಾರಿ ಬರಬೇಕಿತ್ತು. ಜಾಮೀನು ಪಡೆದು ಹೊರಬಂದ ಮಲಬಾರಿಗೆ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ಮಲಬಾರಿ ನಾಪತ್ತೆಯಾಗಿದ್ದ.
ಪೊಲೀಸರು ಎಷ್ಟು ಮೂರ್ಖರೆಂದರೆ ಒಮ್ಮ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಹಲವಾರು ಕೇಸ್‍ಗಳಿಗೆ ಬೇಕಾಗಿದ್ದ ವ್ಯಕ್ತಿಯೋರ್ವನ ಮೇಲೆ ಹದ್ದಿನ ಕಣ್ಣಿಟ್ಟು ನಿಗಾ ವಹಿಸುವುದನ್ನು ಬಿಟ್ಟು ಆತ ತಪ್ಪಿಸಿಕೊಂಡವರೆಗೂ ನೋಡಿ ಸುಮ್ಮನಿದ್ದುಬಿಟ್ಟಿತ್ತು. ಈತನಿಗೆ ತಪ್ಪಿಸಲು ಒಬ್ಬ ಪ್ರಭಾವಿ ಕೈ ಮುಖಂಡ ಸಹಾಯ ಮಾಡಿದ್ದ ಎಂಬ ಮಾಹಿತಿಯನ್ನೂ ಗುಪ್ತಚರ ಇಲಾಖೆ ಕಲೆಹಾಕುತ್ತಿದೆ. ಅಲ್ಲಿಂದ ನಾಪತ್ತೆಯಾದ ಮಲಬಾರಿ ಇಂದಿಗೂ ಸಿಕ್ಕಿಲ್ಲ. ಆತ ನಾಪತ್ತೆಯಾಗಿ ಇಂದಿಗೆ ಬರೋಬ್ಬರಿ 4 ವರ್ಷಗಳಾದವು. ಆದರೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ. ಪೊಲೀಸರು ಆತನ ಚಲನವಲನಗಳ ಮೇಲೆ ಹದ್ದಿನಗಣ್ಣಿಡದ ಕಾರಣ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬ ಅನಾಯಾಸವಾಗಿ ತಪ್ಪಿಸಿಕೊಂಡಿದ್ದಾನೆ.
ಒಬ್ಬ ಕುಖ್ಯಾತ ಕ್ರಿಮಿನಲ್, ಟೆರರಿಸ್ಟ್ ಇಂದು ತಪ್ಪಿಸಿಕೊಂಡಿದ್ದಾನೆ. ಈತನಿಂದ ಮುಂದೆ ಯಾವ ಅನಾಹುತ ಕಾದಿದೆಯೋ ಯಾರಿಗೆ ಗೊತ್ತು? ಸರಕಾರದ ಕೈಗೊಂಬೆಯಂತೆ ಕೆಲಸ ಮಾಡುವ ಪೊಲೀಸರಿಗೆ ಮಲಬಾರಿ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಬಂಧಿಸದಂತೆ ಕೆಲವರ ಒತ್ತಡವಿದೆಯಂತೆ. ತಲೆಯಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಬೈಕ್ ಸವಾರರನ್ನು ನಿಲ್ಲಿಸುವ ಪೊಲೀಸರಿಗೆ ಹಿಂದೂ ಮುಖಂಡರನ್ನು ಕೊಲ್ಲಲು ಬರುವ ಮಲಬಾರಿ ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂದರೆ ಇದಕ್ಕಿಂತ ದೊಡ್ಡ ವಿಪರ್ಯಾಸ ಬೇರೆ ಯಾವುದೂ ಇಲ್ಲ ಅಲ್ಲವೇ….
ಚೇಕಿತಾನ