ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಿಸಿ ಏರಿಕೆಯಾಗಿರುವುದರಿಂದ ಎರಡು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ
ಸ್ಪರ್ಧೆಯು ಅಸಾಧಾರಣವಾಗಿದ್ದಲ್ಲದೇ, ಈ ಚುನಾವಣೆಯೂ ತೀಕ್ಷ್ಮವಾದ ಪರಿಣಾಮ ಬೀಳುವುದಂತೂ ಗ್ಯಾರೆಂಟಿ!! ಇನ್ನು ವಿಧಾನಸಭಾ ಚುನಾವಣೆಯಲ್ಲಿ ತೀವ್ರ
ಪೈಪೋಟಿ ನಡೆಯುತ್ತಿರುವುದರಿಂದ ಈ ಬಾರಿ ಮಹತ್ವದ ತೀರ್ಮಾನ ಕೈಗೊಳ್ಳಲಿದೆ. ಹಾಗಾಗಿ ಈ ಬಗ್ಗೆ ಇಲ್ಲಿದೆ ಒಂದು ವಿಶ್ಲೇಷಣೆ.
ಮೋದಿ ಅಲೆಯ ಆಧಾರದ ಮೇಲೆ ಈ ಚುನಾವಣಾ ಮತಹಂಚಿಕೆಯ ಬಗ್ಗೆ ನೀಡುವ ವಿಶ್ಲೇಷಣೆ ಇದಾಗಿದ್ದು, (2014ರ ಸಾರ್ವತ್ರಿಕ ಚುನಾವಣೆಯನ್ನು 2009ಕ್ಕೆ
ಹೋಲಿಸಿದರೆ ಪಕ್ಷಗಳ ಮತ ಶೇಕಡಾವಾರು ಲೆಕ್ಕಾಚಾರದಲ್ಲಿ ಹೆಚ್ಚಳ ಮತ್ತು ಕಡಿಮೆಯ ಆಧಾರದ ಮೇಲೆ ಹೇಳಲಾಗಿದೆ) ಸಾಮಾಜಿಕ-ಆರ್ಥಿಕತೆಯ ಮೇಲೆ
ಮಾಡಿರುವ ಅಂಶಗಳು ಇದಾಗಿವೆ!! ಇದಷ್ಟೇ ಅಲ್ಲದೇ, ಇಲ್ಲಿ ಚುನಾವಣಾ ಫಲಿತಾಂಶಗಳ ಕುರಿತಾದ ಮಾಹಿತಿ, ಭಾರತದ ಚುನಾವಣಾ ಆಯೋಗ ಮತ್ತು 2011ರ ಜನಗಣತಿಯಲ್ಲಿ ಗುಜರಾತ್ ನ ಜನಸಂಖ್ಯೆಯ ಲೆಕ್ಕಾಚಾರದ ಮೆರೆಗೆ ಈ ಮಾಹಿತಿಯನ್ನು ನೀಡಲಾಗಿದೆ!!
ಹಿಮಾಚಲ ಪ್ರದೇಶ:
ಹಿಮಾಚಲ ಪ್ರದೇಶದಲ್ಲಿ 1990 ರಿಂದ 2012ರವರೆಗೆ ಆರು ವಿಧಾನಸಭೆ ಚುನಾವಣೆಗಳು ನಡೆದಿವೆ!! 1980ರಲ್ಲಿ ರಚನೆಯಾದ ಬಿಜೆಪಿ 1989ರ ಸಾರ್ವತ್ರಿಕ
ಚುನಾವಣೆಯಲ್ಲಿ ರಾಷ್ಟ್ರೀಯ ಶಕ್ತಿಯಾಗಿ ಮತ್ತು ಅದರ ನಂತರ ಗಮನಾರ್ಹ ಸ್ಪರ್ಧಿಯಾಗಿ ಮಾರ್ಪಟ್ಟಿದೆ!! ಸರಾಸರಿ ಅನುಪಾತದ ಸೀಟುಹಂಚಿಕೆಯಲ್ಲಿ ಎರಡು ಸ್ಪಷ್ಟ ಮಾದರಿಗಳಿವೆ. ಮೊದಲನೆಯದಾಗಿ, ಎರಡೂ ಪಕ್ಷಗಳು 40%ರಷ್ಟು ಮತಗಳನ್ನು ಹಂಚಿಕೊಂಡಾಗ, ಎರಡರ ಪರಿವರ್ತನಾ ಅನುಪಾತವೂ 2012 ಮತ್ತು 1998ರಲ್ಲಿ ಇದ್ದಂತೆ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ(ಮೊದಲ ಪಕ್ಷಕ್ಕೆ 0.8 ಮತ್ತು ಎರಡನೇ ಪಕ್ಷಕ್ಕೆ 0.7)!! ಎರಡನೇಯದಾಗಿ, ಮತ ಹಂಚಿಕೆಯ ನಡುವಿನ ವ್ಯತ್ಯಾಸ ಸ್ವಲ್ಪ ಹೆಚ್ಚಳವಾಗಿರುವುದರಿಂದ, ಎದುರಾಳಿ ಪಕ್ಷಗಳ ನಡುವಿನ ಪರಿವರ್ತನೆ ಅನುಪಾತವು 1993ರಲ್ಲಿ ಭಾರಿ ಪ್ರಮಾಣದಲ್ಲಿ
ವಿಸ್ತರಿಸಲಾಗಿದೆ(1.1ಪ್ರಮಾಣದಲ್ಲಿ ಮುಂಚೂಣಿಯಲ್ಲಿದ್ದು ಮತ್ತು 0.2ರಷ್ಟು ಮಂದಗತಿಯಾಗಿ ಸಾಗಿವೆ). ಮೊದಲ ಮಾದರಿಯ ಸಂದರ್ಭದಲ್ಲಿ ಈ ಎರಡು ಪಕ್ಷಗಳ ಮತ ಹಂಚಿಕೆಯ ನಡುವಿನ ವ್ಯತ್ಯಾಸವು ಶೇಕಡಾ 4ರಷ್ಟು ಮಾತ್ರ ಮತ್ತು ಎರಡನೇಯ ಮಾದರಿಯು ಶೇಕಡಾ 5 ಕ್ಕಿಂತ ಹೆಚ್ಚಾಗಿದೆ!! (ಇದು 1993ರಲ್ಲಿ ಶೇಕಡಾ 13ರಷ್ಟಾಗಿದ್ದು, ದಿಗ್ಬ್ರಮೆಯುಂಟು ಮಾಡಿತ್ತು)
2009ಕ್ಕೆ ಹೋಲಿಸಿದರೆ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಶೇಕಡಾ 4.3 ರಷ್ಟು ಪರ್ಸೆಂಟೆಜ್ ಪಾಯಿಂಟ್ (ಪಿಪಿ)ಹೆಚ್ಚಳ ಕಂಡು ಬಂದಿದ್ದು, ಈ ಬೆಳವಣಿಗೆಗೆ ಮೋದಿ ಅಲೆ ಎಂದು ಕರೆಯಬಹುದಾಗಿದೆ!! 5 ವರ್ಷಗಳಲ್ಲಿ, ಆಡಳಿತ ವಿರೋಧಿಯೆಂದು ಮತ್ತು ಭ್ರಷ್ಟಚಾರದ ಆರೋಪಗಳನ್ನು ಎದುರಿಸುತ್ತಿದ್ದಂತಹ 83ವರ್ಷದ ಮುಖ್ಯಮಂತ್ರಿ ವೀರಭದ್ರ ಸಿಂಗ್ ವಿರುದ್ದ ಆರೋಪಗಳಿರುವುದರಿಂದ ಬಹುಜನಸಂಖ್ಯೆ ಜನ ಬಿಜೆಪಿಗೆ ಪರಿವರ್ತನೆಯಾದರು!!! ಒಟ್ಟಾರೆಯಾಗಿ, ಇವೆಲ್ಲವೂ ಕೂಡ ಬಿಜೆಪಿ 4.3ಪಿಪಿ ಹೆಚ್ಚಳಕ್ಕೆ ಈ ಅಂಶ ಕಾರಣವಾಗಿದೆ!! 2014 ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ 4.5 ಪಿಪಿ ಮತದಾನ ನಷ್ಟವು, 2009ರ ಹಿಮಾಚಲ ಚುನಾವಣೆಯನ್ನು ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಾಗಿದೆ!! ಅಷ್ಟೇ ಅಲ್ಲದೇ, 2017ರ ಹಿಮಾಚಲ ಶಾಸನಸಭೆಯ ಚುನಾವಣೆಯಲ್ಲಿ ಬಿಜೆಪಿ ಶೇ. 8.6 ರಷ್ಟು ಹೆಚ್ಚಳವಾಗಿದ್ದು, ಕಾಂಗ್ರೆಸ್ ಮತ ಹಂಚಿಕೆಯಲ್ಲಿ ಒಟ್ಟು 4.5 ಪಿಪಿಯಷ್ಟು ಇಳಿಕೆಯಾಗಿದೆ!!
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ 47% ಮತ್ತು 38.3% ರಷ್ಟಿತ್ತಾದರೂ ಇದು 49 ಮತ್ತು 14 ಸ್ಥಾನಗಳನ್ನು ಪಡೆದುಕೊಂಡಿದೆ!!
ಗುಜರಾತ್:
ವಿಶ್ಲೇಷಣೆ ಅವಧಿಯು 1990 ರಿಂದ 2012ರವರೆಗೆ ಮಾಡಲಾಗಿದ್ದು, ಇದರಲ್ಲಿ 1990ನ್ನು ಹೊರತುಪಡಿಸಿ, 5 ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ
ಚಲಾಯಿಸುವಿಕೆಯು ಕಾಂಗ್ರೆಸ್ ಗಿಂತ 10 ಪಿಪಿ ಹೆಚ್ಚಳವಾಗಿದೆ!! ಗುಜರಾತಿನಲ್ಲಿ ಬಿಜೆಪಿಯ ಪರವಾಗಿರುವ ಈ ಪ್ರವೃತಿಯು ಸ್ಥಿರವಾಗಿದ್ದು, ಎಲ್ಲಾ ಪಕ್ಷಗಳ
ಪರಿವರ್ತನೆಯ ಅನುಪಾತವನ್ನು ಕೂಡ ಒಟ್ಟುಗೂಡಿಸಲಾಗಿದೆ. ಗುಜರಾತ್ ಆರು ಚುನಾವಣೆಯಲ್ಲಿಯೂ ಬಿಜೆಪಿಯು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ!! ಇದು ಕೆಲ ವರ್ಷಗಳ ಬಿಜೆಪಿ ಮತ್ತು ಕಾಂಗ್ರೆಸ್ ನ ಪರಿವರ್ತನೆ ಅನುಪಾತವನ್ನು ಪ್ರತಿಬಿಂಬಿಸುತ್ತದೆ!! ಈ ವರ್ಷದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮತ ಹಂಚಿಕೆಯು ಕ್ರಮವಾಗಿ 2.5 ಮತ್ತು 1.5 ಆಗಿದೆ.
ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಎರಡು ಪ್ರಮುಖ ಅಂಶಗಳಿವೆ. ಒಂದು ಮೋದಿ ಅಲೆ ಇನ್ನೊಂದು ರಾಜ್ಯ ಸರ್ಕಾರವನ್ನು ವಿರೋಧಿಸುವ
ಪಟೇಲ್ ಸಮುದಾಯ. ಬಿಜೆಪಿಯ ಮತ ಹಂಚಿಕೆಯಲ್ಲಿ 13.6 ಪಿಪಿ ಹೆಚ್ಚಳವಾಗಿದ್ದು, ಇನ್ನು 2009ರಿಂದ 2014ನೇ ಸಾರ್ವತ್ರಿಕ ಚುನಾವಣೆಯಲ್ಲಿ 9.9ರಷ್ಟು ಕಾಂಗ್ರೆಸ್ ನ ಮತದಾರರ ಸಂಖ್ಯೆ ಕಡಿಮೆಯಾಗಿದೆ!! ಗುಜರಾತಿನಲ್ಲಿ ನರೇಂದ್ರ ಮೋದಿಯವರ ಅಲೆ ಹೆಚ್ಚಾಗಿರುವುದನ್ನು ಅದನ್ನು ಮೋದಿ ಅಲೆ ಎಂದು ವರ್ಗೀಕರಿಸಲಾಗಿದೆ!! ಗುಜರಾತಿನಲ್ಲಿ ಮೋದಿಯ ಪರಿಚಯ ಹೊಸದೆನಲ್ಲ, ಹಾಗಾಗಿ 2012ರ ಚುನಾವಣೆಯಲ್ಲಿ ಬಿಜೆಪಿ ಮುಖಂಡರಾಗಿದ್ದ ಕಾರಣ ಮುಂದಿನ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಲಿದೆ!!
ಬಿಸಿನೆಸ್ ಲೈನ್‍ವರದಿಯ ಪ್ರಕಾರ, ಎರಡು ದಶಕಗಳಿಂದಲೇ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 15ರಷ್ಟು ಜನ ಪಟೇಲ್ ಸಮುದಾಯದವರೇ ಇದ್ದು, ಈ
ವರ್ಗದ ಬಹುಪಾಲು ಜನರು ಬಿಜೆಪಿ ಪಕ್ಷದ ಮೇಲೆ ವಿಶಾಸಾರ್ಹತೆಯನ್ನು ಹೊಂದಿದ್ದ ಮತದಾರರಾಗಿದ್ದರು!! ಆದರೆ, ಈ ಸಮುದಾಯವು 2015ರ ನಂತರ
ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದ್ದು ಬಿಜೆಪಿಯನ್ನು ವಿರೋಧಿಸಲು ಪ್ರಾರಂಭಿಸಿದರು. ಹಾಗಾಗಿ ಕಾಂಗ್ರೆಸ್ ಪರವಾಗಿರುವ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ
ಬಿಜೆಪಿಯನ್ನು ಶಮನಗೊಳಿಸಲು ನಿರ್ಧರಿಸಿದ್ದು, ಇನ್ನು ಗುಜರಾತನ ಒಟ್ಟು ಜನಸಂಖ್ಯೆಯಲ್ಲಿ 63%ರಷ್ಟು ಮತದಾರರು ಇದ್ದರೂ ಕೂಡ ಅದರಲ್ಲಿ ಬಹುಪಾಲು ಜನರು ಪಟೇಲ್ ಸಮುದಾಯದವರಾಗಿದ್ದು, ಲೆಕ್ಕಚಾರದ ಪ್ರಕಾರ 2.4%ದಷ್ಟು ಮತ ಹಂಚಿಕೆಯಾಗಲಿದೆ ಎಂದು ತೋರುತ್ತದೆ!!
ಈ ಸಮುದಾಯವು ಹಿಂದೆ ಬಿಜೆಪಿಗೆ ಮತ ಹಾಕುತ್ತಿದ್ದು ಇದೀಗ ಅದರಲ್ಲಿರುವ ಬಹುಪಾಲು ಜನ ಕಾಂಗ್ರೆಸ್‍ಗೆ ಪರಿವರ್ತನೆಯಾಗಿದ್ದಾರೆ!! ಬಿಜೆಪಿಯ ಮತದಾನದಲ್ಲಿ ನಿವ್ವಳ ಪರಿಣಾಮವಾಗಿ 4.4ಪಿಪಿಯಷ್ಟು ಹೆಚ್ಚಳವಾಗಿದೆ ಮತ್ತು ಇದೇ ರೀತಿ ಕಾಂಗ್ರೆಸ್‍ನ ಮತ ಹಂಚಿಕೆಯಲ್ಲಿ 7.6ಪಿಪಿ ಕಡಿಮೆಯಾಗಿದೆ. ಆದರೆ ಗುಜರಾತ್ ನಲ್ಲಿರುವ ಇನ್ನೆರಡು ಜಾತಿ ನಾಯಕರು ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೆವಾನಿ ಬೆಂಬಲ ನೀಡುತ್ತಿದ್ದಾದರೂ ಕೂಡ, ಅವರಿಗೆ ಯಾವುದೇ ರೀತಿಯ ಅಜೆಂಡಾ ಇರದೇ ಇರುವುದರಿಂದ ಇದಾವೂದು ಕೂಡ ಪಕ್ಷದ ಮೇಲೆ ಯಾವುದೇ ರೀತಿಯ ಗಮನಾರ್ಹ ಬದಲಾವಣೆಯಾಗುವುದಿಲ್ಲ ಎಂದು ಭಾವಿಸಬಹುದು!!
ಗುಜರಾತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನ ಮತವು ಶೇಕಡಾ 52.3 ಮತ್ತು ಶೇಕಡಾ 31.4 ಆಗಲಿದ್ದು, ಇದು 130 ಮತ್ತು 47 ಸ್ಥಾನಗಳನ್ನು ಕ್ರಮವಾಗಿ
ಪಡೆದುಕೊಳ್ಳಲಿದೆ!!
Table 1: Predicted Vote Share and number of Seats for BJP and Congress in 2017 assembly election | ||||
BJP | Congress | |||
Vote Share (%) | Number of Seats | Vote Share (%) | Number of Seats | |
Himachal Pradesh | 47.0 | 49 | 38.3 | 14 |
Gujarat | 52.3 | 130 | 31.4 | 47 |
Sources: Election Commission of India, Census 2011
|
ಮೂಲ:https://rightlog.in/2017/11/bjp-congress-gujarat-himachal-01/
– – ಜಗನ್ ಪುರೋಹಿತ್