ಪ್ರಚಲಿತ

ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರ “ಸುಕನ್ಯಾ ಸಮೃದ್ಧಿ ಯೋಜನೆ”

“ಬೇಟಿ ಬಚಾವೋ ಬೇಟಿ ಪಡಾವೋ” ಆಶಯದಡಿಯಲ್ಲಿ ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ “ಸುಕನ್ಯಾ ಸಮೃದ್ಧಿ ಯೋಜನೆ”ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಸಹಾಯವಾಗುವುದೇ ಈ ಯೋಜನೆಯ ಮೂಲ ಉದ್ದೇಶ!! ಈ ಯೋಜನೆಯು ಲಿಂಗ ತಾರತಮ್ಯವನ್ನು ಕಡಿಮೆ ಗೊಳಿಸುವ ಹಾಗೂ ಹೆಣ್ಣುಮಕ್ಕಳಿಗೆ ಮತ್ತು ಅವರ ತಾಯಿ ತಂದೆಯರಿಗೆ ಸುರಕ್ಷೆಯನ್ನು ಒದಗಿಸುವ ಮಹತ್ವದ ಉದ್ದೇಶವನ್ನು ಹೊಂದಿದೆ ಈ ಯೋಜನೆ!!

ಭಾರತ ಸರ್ಕಾರದ ಇತ್ತೀಚಿನ ಜನಪ್ರಿಯ ಯೋಜನೆಗಳಲ್ಲಿ ಒಂದಾದ “ಸುಕನ್ಯಾ ಸಮೃದ್ದಿ ಯೋಜನೆ” 2015ರ ಜನವರಿ 22ರಂದು ಆರಂಭಗೊಂಡಿದ್ದು, ಹೆಸರೇ ಸೂಚಿಸುವಂತೆ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಾಗು ಅವರ ಭವಿಷ್ಯಗಳಲ್ಲಿನ ವಿದ್ಯಾಭ್ಯಾಸ, ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಪೆÇೀಷಕರಿಗೆ ನೆರವಾಗುವ ಹಣ ಉಳಿತಾಯ ಖಾತೆಯೇ ಭಾರತ ಸರ್ಕಾರ ಆರಂಭಿಸಿರುವ ಸುಕನ್ಯ ಸಮೃದ್ಧಿ ಯೋಜನೆ ಖಾತೆ.
10 ವರ್ಷಗಳ ಒಳಗಿನ ಹೆಣ್ಣುಮಕ್ಕಳಿಗಾಗಿಯೇ ರೂಪಿಸಲಾಗಿರುವ ಹಣಕಾಸು ಸುರಕ್ಷತೆಯನ್ನು ಒದಗಿಸುವ ಯೋಜನೆ ಇದಾಗಿದ್ದು, ಹೆಣ್ಣುಮಕ್ಕಳ ಪೆÇೀಷಕರು ಅಥವಾ ಪಾಲಕರು ಗರಿಷ್ಠ ಎರಡು ಹೆಣ್ಣುಮಕ್ಕಳ ಹೆಸರಿನಲ್ಲಿ ಯಾವುದೇ ನಿಗದಿತ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಖಾತೆ ಪ್ರಾರಂಭಿಸಬಹುದು. ಈ ಯೋಜನೆಯ ಫಲಾನುಭವಿಗಳು ಸದ್ಯ ಖಾತೆಯಲ್ಲಿನ ತಮ್ಮ ಹಣಕ್ಕೆ 8.6% ಬಡ್ಡಿಯನ್ನು ಪಡೆಯುತ್ತಿದ್ದು ತೆರಿಗೆ ಉಳಿತಾಯಕ್ಕೂ ಸಹಕಾರಿಯಾಗಿದೆ. ಸುಕನ್ಯ ಸಮೃದ್ಧಿ ಯೋಜನೆ ಖಾತೆಯನ್ನು ಹೆಣ್ಣು ಮಗು ಹೊಂದಿರುವ ಪಾಲಕರು ಸೂಕ್ತ ದಾಖಲೆಗಳೊಂದಿಗೆ ಭಾರತದ ಯಾವುದೇ ಅಂಚೆ ಕಛೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ತೆರೆಯಬಹುದು!!

ಯಾರು ಖಾತೆಯನ್ನು ತೆರೆಯಬಹುದು?

1. ಹೆಣ್ಣು ಮಗುವಿನ ಹೆತ್ತವರು, ವಿಧಿಬದ್ದ ಪಾಲಕರು ಈ ಯೋಜನೆಯ ಪ್ರಕಾರ ಖಾತೆಯನ್ನು ತೆರೆಯಬಹುದು2. ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆ ತೆರೆಯಲು ಮಾತ್ರ ಅವಕಾಶ3. ದತ್ತು ಪಡೆಯಲಾದ ಹೆಣ್ಣು ಮಗುವಿನ ಹೆಸರಿನಲ್ಲಿ ಕೂಡಾ ಖಾತೆಯನ್ನು ತೆರೆಯಬಹುದು. ಇಷ್ಟಾಗಿಯೂ, ಈ ನಿಯಮಕ್ಕೊಂದು ವಿನಾಯಿತಿಯೂ ಇದೆ. ಅದೆಂದರೆ, ಎರಡನೇ ಹೆರಿಗೆಯ ಸಂದರ್ಭದಲ್ಲಿ ಅವಳಿ ಹೆಣ್ಣುಮಕ್ಕಳು ಹುಟ್ಟಿದರೆ ಅಥವಾ ಮೊದಲ ಹೆರಿಗೆಯಲ್ಲೇ ತ್ರಿವಳಿ ಹೆಣ್ಣುಮಕ್ಕಳು ಹುಟ್ಟಿದರೆ, ಕ್ರಮವಾಗಿ ಎರಡು ಅಥವಾ ಮೂರು ಖಾತೆಗಳನ್ನು ಹೆತ್ತವರು/ಪಾಲಕರು ತೆರೆಯಬಹುದು. ದತ್ತು ಪಡೆಯಲಾದ ಹೆಣ್ಣುಮಗುವಿನ ಹೆಸರಲ್ಲೂ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ ಎಂಬುದು ಮತ್ತೊಂದು ವಿಶೇಷ.

ಅಷ್ಟೇ ಅಲ್ಲದೇ, ಇದು ಒಟ್ಟು 21 ವರ್ಷಗಳ ಕಾಲಾವಧಿಗಳಾಗಿದ್ದು, 14 ವರ್ಷಗಳ ಕಾಲ ಹಣ ಕಟ್ಟಬೇಕು!! ತದನಂತರ 7 ವರ್ಷ ಗತಿಸಿದ ಬಳಿಕ ಯೋಜನೆಯ ಸಂಪೂರ್ಣ ಫಲವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ, ಒಂದಿಡೀ ವರ್ಷ ಹಣ ಕಟ್ಟದೇ ಇದ್ದಲ್ಲಿ ಈ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ. ಅದನ್ನು ಪುನಾರಂಭಿಸಲು ಸುಮಾರು 50 ರೂಪಾಯಿ ದಂಡ ಕಟ್ಟಬೇಕಾಗುತ್ತದೆ!!!
ಖಾತೆಯನ್ನು ಎಲ್ಲಾ ಸರಕಾರಿ ಸ್ವಾಮ್ಯದ ರಾಷ್ಟ್ರೀಕೃತ ಬ್ಯಾಂಕುಗಳು-ಸ್ಟೇಟ್ ಬ್ಯಾಂಕ್ ಮತ್ತು ಅದರ 5 ಸಹವರ್ತಿ ಬ್ಯಾಂಕುಗಳು, 20 ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ 3 ಖಾಸಗೀ ವಲಯದ ಐಸಿಐಸಿಐ ಬ್ಯಾಂಕು, ಆಕ್ಷಿಸ್ ಬ್ಯಾಂಕ್ ಹಾಗೂ ಐಡಿಬಿಐ ಬ್ಯಾಂಕಿನ ಶಾಖೆಗಳಲ್ಲಿ ಒಟ್ಟು 28 ಬ್ಯಾಂಕುಗಳ ಶಾಖೆಗಳಲ್ಲಿ ಈ ಖಾತೆಯನ್ನು ಪ್ರಾರಂಭಿಸಬಹುದಾಗಿದೆ. ಮತ್ತು ದೇಶಾದ್ಯಂತ ತಮ್ಮ ಜಾಲವನ್ನು ವಿಸ್ತರಿಸಿರುವ ದೊಡ್ಡ ಮತ್ತು ಸಣ್ಣ ಅಂಚೆಕಛೇರಿ ಗಳಲ್ಲೂ ಈ ಯೋಜನೆಯಡಿಯಲ್ಲಿ ಖಾತೆಗಳನ್ನು ತೆರೆಯಬಹುದಾಗಿದೆ. ಇದಕ್ಕೆ ಅಗತ್ಯವಾಗುವ ದಾಖಲೆಪತ್ರಗಳ ಪಟ್ಟಿ ಇಂತಿವೆ:

1. ಹೆಣ್ಣುಮಗುವಿನ ಜನನ ಪ್ರಮಾಣಪತ್ರ. 2. ಹಣ ಠೇವಣಿ ಇಡುವವರ (ಅಂದರೆ, ಮಗುವಿನ ಹೆತ್ತವರ ಅಥವಾ ವಿಧಿಬದ್ಧ ಪಾಲಕರ) ಪಾನ್ ಕಾರ್ಡ್, ಪಡಿತರ ಚೀಟಿಯಂಥ ಗುರುತಿನ ಪುರಾವೆ.3. ಹಣ ಠೇವಣಿ ಇಡುವವರ (ಅಂದರೆ, ಮಗುವಿನ ಹೆತ್ತವರ ಅಥವಾ ವಿಧಿಬದ್ಧ ಪಾಲಕರ) ದೂರವಾಣಿ ಬಿಲ್, ಚಾಲನಾ ಪರವಾನಗಿ, ವಿದ್ಯುಚ್ಛಕ್ತಿ ಬಿಲ್, ಪಡಿತರ ಚೀಟಿ, ಪಾಸ್‍ಪೆÇೀರ್ಟ್‍ನಂಥ ವಿಳಾಸ ಪುರಾವೆ.
ಇದು ವರ್ಗಾಯಿಸಬಹುದಾದ ಠೇವಣಿ ಯೋಜನೆಯಾಗಿದ್ದು, ಒಂದು ಅಧಿಕೃತ ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕಿಗೆ ಹಾಗೂ ಒಂದು ಅಂಚೆ ಕಚೇರಿಯಿಂದ ಯಾವುದೇ ಅಧಿಕೃತ ಬ್ಯಾಂಕಿಗೆ ಮತ್ತು ಪ್ರತಿಕ್ರಮದಲ್ಲಿ ಇದರ ವರ್ಗಾವಣೆ ಸಾಧ್ಯವಿದೆ. ಅಷ್ಟೇ ಅಲ್ಲದೇ, ಇದು 10 ವರ್ಷಗಳ ಒಳಗಿರುವ ಹೆಣ್ಣುಮಕ್ಕಳಿಗಾಗಿಯೇ ಸೀಮಿತವಾಗಿದ್ದರೂ ಈ ವರ್ಷ ಮಾತ್ರ 02. 12. 2003ರ ನಂತರ ಹುಟ್ಟಿದ ಹೆಣ್ಣುಮಗವಿಗೂ ಅವಕಾಶ ಕಲ್ಪಿಸಿದೆ!!! ಆದರೆ 1. 12. 2015ರ ನಂತರ ಹತ್ತು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಯೋಜನೆ ಸೀಮಿತವಾಗಿರುತ್ತದೆ.

ಖಾತೆ ಪ್ರಾರಂಭಿಸಲು ಬೇಕಾದ ಕನಿಷ್ಠ ಮೊತ್ತ ಎಷ್ಟು?

ಸುಕನ್ಯ ಸಮೃದ್ಧಿ ಯೋಜನೆಯಡಿಯಲ್ಲಿ ಪ್ರಾರಂಭಿಸಲಾಗುವ ಖಾತೆಯನ್ನು ಮೊದಲು ಒಂದು ಸಾರಿ 1000 ರೂ.ಗಳಿಂದ ಪ್ರಾರಂಭಿಸಿ ಮುಂದಿನ ಠೇವಣಿಗಳನ್ನು ಕನಿಷ್ಠ 100 ರೂ.ಕ್ಕೆ ಮಿತಿಗೊಳಿಸಬಹುದು. ಒಂದು  ವರ್ಷದಲ್ಲಿ ಗರಿಷ್ಠ ರೂ. 1,50,000 ಗಳನ್ನು ಖಾತೆಗೆ ಜಮಾ ಮಾಡಬಹುದಾಗಿದೆ. ಖಾತೆ ಪ್ರಾರಂಭಗೊಂಡ 14 ವರ್ಷಗಳ ವರೆಗೆ ಮಾತ್ರ ಹಣ ಠೇವಣಿಯಾಗಿ ಜಮಾ ಮಾಡಬಹುದು. ಒಂದು ವರ್ಷದ ಅವಧಿಯಲ್ಲಿ 1000 ರೂ.ಕ್ಕಿಂತ ಕಡಿಮೆ ಹಣ ಜಮಾಮಾಡಿದ್ದೇ ಆದರೆ 50 ರೂ. ದಂಡ ಪಾವತಿಸಬೇಕಾಗುತ್ತದೆ. ಖಾತೆಗೆ ಹಣವನ್ನು ಪೆÇೀಷಕರ ಅನುಕೂಲಕ್ಕೆ ತಕ್ಕಂತೆ ಪ್ರತಿದಿನವಾಗಲಿ, ವಾರದ, ತಿಂಗಳ ಅಥವಾ ಅರ್ಧವಾರ್ಷಿಕ ಅಥವಾ ವಾರ್ಷಿಕ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಹೆಣ್ಣುಮಗುವಿಗೆ 10 ವರ್ಷ ವಯಸ್ಸಾಗಿದ್ದರೆ ಆಕೆ ತಾನೇ ಸ್ವತಂತ್ರವಾಗಿ ಖಾತೆಯ ನಿರ್ವಹಣೆ ಮಾಡಬಹುದು. ಖಾತೆ ಪ್ರಾರಂಭಿಸಿದ 21 ವರ್ಷಗಳ ನಂತರ ಬಡ್ಡಿಸೇರಿ ಪೂರ್ತಿ ಹಣ ಆಕೆಗೇ ದೊರೆಯುತ್ತದೆ.

ಸುಕನ್ಯ ಸಮೃದ್ಧಿ ಯೋಜನೆಯಡಿಯಲ್ಲಿ ಪ್ರಾರಂಭಿಸಲಾಗುವ ಠೇವಣಿ ಖಾತೆಯು ಆದಾಯ ಕರ ಸೆಕ್ಷನ್ 80ಸಿ ಅನ್ವಯ ಹೂಡಬಹುದಾದ ಗರಿಷ್ಟ ರೂ 1.50 ಲಕ್ಷ ಹಣಕ್ಕೆ ಎಲ್ ಐ ಸಿ, ಪಿಪಿಎಫ್ ಖಾತೆಗಳಿಗೆ ದೊರೆಯುವ ವಿನಾಯಿತಿಯಂತೆ ಒಟ್ಟಾರೆ 1.50ಲಕ್ಷ ರೂ.ಗಳವರೆಗೆ ತೆರಿಗೆ ವಿನಾಯಿತಿ ದೊರೆಯುತ್ತದೆ.  ಈ ಖಾತೆಯ ವಿಶೇಷವೆಂದರೆ ಠೇವಣಿಗೆ, ಮತ್ತು ಈ ವರ್ಷದಿಂದ ಠೇವಣಿ ಮೇಲಿನ ಬಡ್ಡಿಗೂ ಆದಾಯ ತೆರಿಗೆ ಸೆ. 80ಸಿ ಅನ್ವಯ ತೆರಿಗೆ ವಿನಾಯಿತಿ ದೊರೆಯುತ್ತದೆ. ಹೀಗಾಗಿ ಹೆಣ್ಣುಮಕ್ಕಳ ರಕ್ಷಣೆಗೆ ಕೇಂದ್ರ ಸರಕಾರ ತಂದಿರುವ ಈ ಯೋಜನೆಯು ಬೆಳೆದು ನಿಂತ ಹೆಣ್ಣುಮಕ್ಕಳಿಗೆ ಆರ್ಥಿಕ ಸ್ವಾವಲಂಬನೆಗೆ ಬೇಕಾದ ಹಣವನ್ನು ನೀಡುವುದರ ಜೊತೆಗೆ, ಸಾಮಾನ್ಯ ಬಡ ಅಥವಾ ಮಧ್ಯಮ ವರ್ಗದ ತಂದೆ-ತಾಯಿಯರು, ಪೆÇೀಷಕರಿಗೆ ಆದಾಯ ತೆರಿಗೆ ವಿನಾಯಿತಿ ನೀಡುವ ಸೌಕರ್ಯವನ್ನೂ ಒದಗಿಸುವ ಮಾದರಿ ಜನಹಿತ ಯೋಜನೆಯನ್ನಾಗಿ ರೂಪಿಸಿದೆ.

ಬಡ್ಡಿ ದರದ ಲಾಭ…..?

ಕೇಂದ್ರ ಸರ್ಕಾರ ಈ ಯೋಜನೆಯಲ್ಲಿಡುವ ಠೇವಣಿಗೆ ಶೇ. 9.1ರಷ್ಟು ವಾರ್ಷಿಕ ಬಡ್ಡಿಯನ್ನು ಸದ್ಯಕ್ಕೆ ಘೋಷಣೆ ಮಾಡಿದ್ದು, ಇಷ್ಟು ಪ್ರಮಾಣದ ಬಡ್ಡಿಯನ್ನು ಯಾವುದೇ ಬ್ಯಾಂಕುಗಳು ನೀಡುತ್ತಿಲ್ಲವೆಂಬುದು ಇಲ್ಲಿ ಗಮನಾರ್ಹ. ಅಲ್ಲದೇ, ಈ ಯೋಜನೆಗೆ ಬಡ್ಡಿಯನ್ನ ನಿಗದಿಪಡಿಸುವುದು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಲ, ಬದಲಾಗಿ ಖುದ್ದು ಸರ್ಕಾರವೇ ಬಡ್ಡಿದರವನ್ನು ಬೇಕೆಂದಾಗ ಬದಲಿಸಬಹುದಾಗಿದೆ. ಇದಷ್ಟೇ ಅಲ್ಲದೇ, ಬಾಲಕಿಯ ವಯಸ್ಸು 18 ವರ್ಷ ದಾಟಿದಾಗ, ಅಥವಾ ಆಕೆಯ ಮದುವೆ ಫಿಕ್ಸ್ ಆದಾಗ ಖಾತೆಯಲ್ಲಿ ಆವರೆಗೆ ಜಮೆಯಾದ ಹಣದಲ್ಲಿ ಶೇ. 50ರಷ್ಟು ಮೊತ್ತವನ್ನು ಹಿಂಪಡೆದುಕೊಳ್ಳುವ ಅವಕಾಶ ಈ ಯೋಜನೆಯಲ್ಲಿದೆ!!

ಬಡ್ಡಿದರಗಳ ವಾರ್ಷಿಕ ಸಂಕ್ಷಿಪ್ತ ನೋಟ
ಕ್ರಮ ಸಂಖ್ಯೆ ಆರ್ಥಿಕ ವರ್ಷ ಚಾಲ್ತಿ ದಿನಾಂಕ ಬಡ್ಡಿ ದರ ಕನಿಷ್ಠ ಮೊತ್ತ ಗರಿಷ್ಠ ಮೊತ್ತ
೨೦೧೪-೧೫ ೧ ಏಪ್ರಿಲ್ ೨೦೧೪ ರಿಂದ ೩೧ ಮಾರ್ಚ್ ೨೦೧೫ ೯.೧% ೧,೦೦೦ ೧,೫೦,೦೦೦
೨೦೧೫-೧೬ ೧ ಏಪ್ರಿಲ್ ೨೦೧೫ ರಿಂದ ೩೧ ಮಾರ್ಚ್ ೨೦೧೬ ೯.೨% ೧,೦೦೦ ೧,೫೦,೦೦೦
೨೦೧೬-೧೭ ೧ ಏಪ್ರಿಲ್ ೨೦೧೬ ರಿಂದ ೩೧ ಸೆಪ್ಟೆಂಬರ್ ೨೦೧೬ ೮.೬% ೧,೦೦೦ ೧,೫೦,೦೦೦
೨೦೧೬-೧೭ ೧ ಅಕ್ಟೋಬರ್ ೨೦೧೬ ರಿಂದ ಇದುವರೆವಿಗೂ ೮.೫% ೧,೦೦೦ ೧,೫೦,೦೦೦

ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಫಲವಾಗಿ ಹೆಣ್ಣು ಮಕ್ಕಳ ತಂದೆ ತಾಯಂದಿರಿಗೆ ಈ ಯೋಜನೆ ಭವಿಷ್ಯದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೂ ಸುಲಭ ಪರಿಹಾರೋಪಾಯವಾಗಿದೆ. ಅಷ್ಟೇ ಅಲ್ಲದೇ, ಲಿಂಗ ತಾರತಮ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿರುವುದು ಇನ್ನೂ ವಿಶೇಷ!!

– ಅಲೋಖಾ

Tags

Related Articles

Close