ಪ್ರಚಲಿತ

“ಹೆಣ್ಣು ಮಕ್ಕಳ ಪ್ರೋತ್ಸಾಹ ಧನ”ವನ್ನೂ ನಿಲ್ಲಿಸಿ ಬಿಟ್ಟಿರಲ್ಲಾ ಸಿದ್ದರಾಮಯ್ಯನವರೇ!!! ನಿಮ್ಮ ಉದ್ದೇಶವಾದರೂ ಏನು ಸ್ವಾಮಿ?

ಹೆಣ್ಣುಮಕ್ಕಳು ಶಾಲೆಗೆ ಬರಲಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅಂತ ಬರೀ ಬಾಯಿ ಮಾತಲ್ಲಿ ಹೇಳುವ ಸರ್ಕಾರ ಅದೇ ಹೆಣ್ಣುಮಕ್ಕಳು ಶಾಲೆಗೆ ಹಾಜರಾಗಲಿ ಅನ್ನೋ ಉದ್ದೇಶದಿಂದ ಜಾರಿಗೆ ತಂದಿದ್ದ “ಹೆಣ್ಣು ಮಕ್ಕಳ ಪ್ರೋತ್ಸಾಹ ಧನ” ವನ್ನ ಬಂದ್ ಮಾಡಿಬಿಟ್ಟಿದೆ.

ಸರ್ಕಾರಿ ಶಾಲೆಯಲ್ಲಿ ಹೆಣ್ಣು ಹಾಜರಾತಿಯನ್ನು ಕಾಯ್ದುಕೊಳ್ಳುವುದನ್ನ ಪ್ರೋತ್ಸಾಹಿಸುವ ಸಲುವಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಮಹತ್ವಾಕಾಂಕ್ಷೆಯ “2 ರೂ. ಪ್ರೋತ್ಸಾಹಧನ ಯೋಜನೆ” ಯನ್ನ ಜಾರಿಗೆ ತಂದಿದ್ದರಲ್ಲದೆ ಅದನ್ನ ಮುನ್ನಡೆಸದ ಸರ್ಕಾರ ಸದ್ದಿಲ್ಲದೇ ಸ್ತಬ್ಧಗೊಳಿಸಿಬಿಟ್ಟಿದೆ. ವಿದ್ಯಾಭ್ಯಾಸದಿಂದ ದೂರ ಉಳಿವ ಹೆಣ್ಣು ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ತಕ್ಷಣದ ಬಜೆಟ್‌ನಲ್ಲಿ ಘೋಷಿಸಿದ್ದ ಈ ಯೋಜನೆ ಇದೀಗ ಅನುದಾನದ ಕೊರತೆಯಿಂದ ಹಳ್ಳ ಹಿಡಿದಿದೆ.

ಯೋಜನೆಯ ಆರಂಭದ ವರ್ಷಗಳಲ್ಲಿ ಸರ್ಕಾರ ಅನುದಾನ ನೀಡಿದ ತಕ್ಷಣವೇ ಬಿಇಒಗಳ ಮೂಲಕ ಶಾಲಾ ಶಿಕ್ಷಕರು ಹೆಣ್ಣು ಮಕ್ಕಳಿಗೆ ಚೆಕ್‌ ವಿತರಿಸಿದ್ದರು. 2014 – 15 ಮತ್ತು 2015 – 16ರಲ್ಲೂ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಸಮರ್ಪಕವಾಗಿ ಹಂಚಿಕೆ ಮಾಡದಿದ್ದರೂ, ತಕ್ಕಮಟ್ಟಿಗೆ ವಿತರಣೆಯಾಗಿತ್ತು. ಆದರೆ, 2016-17 ಮತ್ತು 2017-18ನೇ ಸಾಲಿನಲ್ಲಿ ಒಂದನೇ ತರಗತಿಗೆ ಸೇರಿದ ಹೆಣ್ಣುಮಕ್ಕಳಿಗೆ ನಯಾಪೈಸೆ ನೀಡಿಲ್ಲ.

ಸರ್ಕಾರ ಅನುದಾನ ನೀಡದೇ ಇರುವುದರಿಂದ ಇಲಾಖೆಯ ಅಧಿಕಾರಿಗಳು ಯೋಜನೆಯನ್ನೇ ರದ್ದು ಮಾಡಿದ್ದಾರೆ. 2017-18ನೇ ಸಾಲಿನಿಂದ ಈ ಯೋಜನೆ ಜಾರಿಯಲ್ಲಿ ಇಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಇನ್ನೊಂದೆಡೆ 2013 ರಿಂದ 2015 ರವೆರೆಗೆ ಯೋಜನೆ ಸರಿಯಾಗಿ ನಡೆದಿದ್ದರೂ, ಹಲವು ಜಿಲ್ಲೆಗಳಲ್ಲಿ ಶಾಲಾ ಮುಖ್ಯಶಿಕ್ಷಕರು ಹೆಣ್ಣು ಮಕ್ಕಳಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನು ತಮ್ಮ ಜೇಬಿಗಿಳಿಸಿಕೊಂಡಿರುವುದನ್ನ ಲೋಕಾಯುಕ್ತ ಸಂಸ್ಥೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಿರುವ ವರದಿಯಲ್ಲಿ ಬಹಿರಂಗೊಂಡಿದೆ.

ಕುಂಟುತ್ತ ಕುಂಟುತ್ತ ಸಾಗುತ್ತಿದ್ದ ಪ್ರೋತ್ಸಾಹ ಧನ ಯೋಜನೆಗೆ 2016 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ನಯಾ ಪೈಸೆಯನ್ನೂ ಬಿಡುಗಡೆ ಮಾಡಲೇ ಇಲ್ಲ. 2017 ರಲ್ಲಿ ಎಲ್ಲಾ ಜಿಲ್ಲೆಗಳಿಗೂ ಅನುದಾನ ಬಿಡುಗಡೆಯಾಗಬೇಕಿತ್ತು ಆದರೆ 2017-18 ರ ಶೈಕ್ಷಣಿಕ ವರ್ಷ ಆರಂಭವಾಗಿ ಆರು ತಿಂಗಳುವಕಳೆದರೂ ಇನ್ನೂ ಸರ್ಕಾರದ ವತಿಯಿಂದ ಅನುದಾನ ಬಂದಿಲ್ಲ.

ಸರ್ಕಾರದ ಕಡೆಯಿಂದಲೇ ಅನುದಾನದ ದುಡ್ಡು ಬರದಿದ್ದರೆ ಇಲಾಖೆಯ ಅಧಿಕಾರಿಗಳೇನು ತಮ್ಮ ಸ್ವಂತ ಖರ್ಚಿಂದ ಅನನುದಾನ ನೀಡಿಯಾರೆ? ಹೀಗಾಗಿ ಇದನ್ನ ಇಲಾಖೆಯ ಅಧಿಕಾರಿಗಳು ಬಂದ್ ಮಾಡಿದ್ದಾರೆ. ಹೀಗೆ ಮೊದ ಮೊದಲು ಅನುದಾನ ಬಂದಿತ್ತು ನಂತರ ನಿಂತು ಹೋಯಿತು,.ಬಂದ ಅನುದಾನವು ಸಮರ್ಪಕವಾಗಿ ವಿತರಣೆಯಾಗದೆ ಅದರಲ್ಲೂ ಶಾಲೆಯ ಕೆಲವರು ದುರಪಯೋಗಪಡಿಸಿಕೊಂಡರು.

ಇದನ್ನ ಅರಿತ ಲೋಕಾಯುಕ್ತ ಸಂಸ್ಥೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯಕ್ತ ಪಿ. ವಿಶ್ವನಾಥ ಶೆಟ್ಟಿ, ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಧನ ನೀಡದೇ ಬಾಕಿ ಉಳಿಸಿಕೊಂಡಿರುವ ಸಂಬಂಧ ವರದಿ ನೀಡುವಂತೆ ಸೂಚನೆ ನೀಡಿದ್ದರು. ಲೋಕಾಯುಕ್ತರಿಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಕೆಲ ಜಿಲ್ಲೆಗಳಲ್ಲಿ ಅನುದಾನ ಬಿಡುಗಡೆಯಾದರೂ ಹೆಣ್ಣುಮಕ್ಕಳಿಗೆ ನೀಡದೇ ಇರುವ ಸಂಗತಿ ಬೆಳಕಿಗೆ ಬಂದಿದೆ.

ಹಲವಾರು ಜಿಲ್ಲೆಗಳಲ್ಲಿ ಬಂದ ಅನುದಾನವನ್ನೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ ಅಥವ ಅಲ್ಲೂ ಗೋಲಮಾಲ್ ನಡೆಸಲಾಗಿದೆ. ಇನ್ನೂ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಮತ್ತು ಹಾಜರಾತಿ ಕೊರತೆಯಿದೆ ಎಂದು ಉಳಿಕೆಯಾಗಿದ ಅನುದಾನವನ್ನು ವಾಪಸ್‌ ಸರ್ಕಾರಕ್ಕೆ ನೀಡಿಲ್ಲ.

ಕಳೆದ ಸಾಲಿನ ಹಣ ಇನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಪ್ರಸಕ್ತ ಸಾಲಿನಿಂದ ಒಂದನೇ ತರಗತಿಗೆ ಹೆಣ್ಣುಮಕ್ಕಳ ಹಾಜರಾತಿಗೆ ನೀಡುವ ಎರಡು ರೂಪಾಯಿ ಪ್ರೋತ್ಸಾಹ ಧನ ಯೋಜನೆಯನ್ನು ನಿಲ್ಲಿಸಿರೋದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಾನೇ ರೂಪಿಸಿದ ಯೋಜನೆಯನ್ನು ತನ್ನ ಸರ್ಕಾರದ ಮೂಲಕವೇ ನಡೆಸಲಾಗದ ಮುಖ್ಯಮಂತ್ರಿಗಳು ಮತ್ತೆ ಹೇಳ್ತಾರೆ ನಾವು ಅದು ಮಾಡಿದೀವಿ ಇದು ಮಾಡಿದೀವಿ, ಮುಂದಿನ ಮುಖ್ಯಮಂತ್ರಿ ನಾನೇ ಅಂತ!!

ಸ್ವಾಮಿ ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿರಿ ಅಲ್ಲೂ ಗುಣಮಟ್ಟದ ಊಟ ಕೊಡಲಿಲ್ಲ,
ಅನ್ನಭಾಗ್ಯ ಯೋಜನೆ ಅಂತೀರಾ ಆ ಅಕ್ಕಿಯನ್ನ ನಾಯಿಯೂ ಮೂಸಿ ನೋಡುತ್ತಿಲ್ಲ(ನಮ್ಮ ಮನೆಯ ಹತ್ತಿರವಿರುವ ಬೀದಿ ನಾಯಿಗಳಿಗೆ ಅನ್ನಭಾಗ್ಯದ ಅಕ್ಕಿಯಿಂದ ಮಾಡಿದ ಅನ್ನ ಮೂಸೋದೇ ಇಲ್ಲ).

ಈ ಕಡೆ ಹೇಳ್ತೀರ ನಾವು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದೇವೆ, ಕನ್ನಡ ಮಾಧ್ಯಮ ಶಾಲೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ, ಆ ಯೋಜನೆ ತಂದ್ವಿ ಈ ಯೋಜನೆ ತಂದ್ವಿ ಅಂತೀರಾ…

ಇತ್ತ ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ನಿಮ್ಮ ಕೈಲಾಗುತ್ತಿಲ್ಲ, ಅತ್ತ ಕರ್ನಾಟಕದ ಅತಿ ದೊಡ್ಡ ಕನ್ನಡ ಮಾಧ್ಯಮ ಶಾಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕೆ ಟ್ರಸ್ಟ್ ನಿಂದ ಮಕ್ಕಳ ಊಟಕ್ಕಾಗಿ ಬರುತ್ತಿದ್ದ ಅನುದಾನವನ್ನ ಬಂದ್ ಮಾಡ್ತಿರ, ಏನ್ ಮಾಡ್ತಿದೀರಾ ಸ್ವಾಮಿ ನೀವು?

ಸುವರ್ಣಮಹೋತ್ಸವನೋ ವಜ್ರಮಹೋತ್ಸವನೋ ಅಂತ ಕೋಟಿ ಕೋಟಿ ಖರ್ಚು ಮಾಡಿ ಒಂದು ದಿನದ ಕಾರ್ಯಕ್ರಮ ಮಾಡುವ ಬದಲು ಮೊದಲು ರಾಜ್ಯದ ವಿದ್ಯಾರ್ಥಿಗಳ ಬಗ್ಗೆ ರೈತರ ಬಗ್ಗೆ ಯೋಚನೆ ಮಾಡಿ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಿರೋದೇ ನಿಮ್ಮ ಸರ್ಕಾರದ ಘನ ಸಾಧನೆಗಳಾಗಿವೆ ಅಂತ ಜನ ಮಾತಾಡಿಕೊಳ್ತಿದಾರೆ, ಈಗಲಾದರೂ ಎಚ್ಚೆತ್ತುಕೊಳ್ಳಿ ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿಯಾರು!!!!

– Vinod Hindu Nationalist

Tags

Related Articles

Close