ಅಂಕಣ

ಹೇಳೋದೆಲ್ಲ ಆಚಾರ! ಮಾಡೋದು ಮಾತ್ರ ಅನಾಚಾರ! ರಾಜ್ಯ ಕಾಂಗ್ರೆಸ್ ನ ಐದು ವರುಷದ ಆಡಳಿತ . . . . . .! ಛೇ! ಛೇ! ಅಸಹ್ಯ! ಅಸಹ್ಯ!

ಈ ಕಾಂಗ್ರೆಸ್ ಗೆ ಅದೇನೋ ಟೈಮೇ ಸರಿ ಇಲ್ಲ ಅಂತ ಕಾಣುತ್ತೆ. ಯಾವಾಗ ನೋಡಿದ್ರೂನು ಗೊಂದಲಗಳ ಮೇಲೆ ಗೊಂದಲ, ಹಗರಣಗಳ ಮೇಲೆ ಹಗರಣ. ಪದೇ ಪದೇ ಮುಜುಗರವನ್ನು ಅನುಭವಿಸುತ್ತಲೇ ಇದೆ. ತಮ್ಮ ಸರ್ಕಾರದ ನಿರುಪಯೋಗ ಯೋಜನೆಗಳ ಮೂಲಕ ಮುಜುಗರವನ್ನು ಅನುಭವಿಸಿದ್ದರೆ, ಮತ್ತೊಂದೆಡೆ ಸಚಿವರು ಶಾಸಕರುಗಳ ಹಗರಣಗಳು. ಒಂದೆಡೆ ಹಿರಿಯ ಕಾಂಗ್ರೆಸ್ ನಾಯಕರಿಗೆ ಐಟಿ, ಬಿಸಿ ಮುಟ್ಟಿಸಿದ್ದರೆ, ಮತ್ತೊಂದೆಡೆ ಸಚಿವ, ಶಾಸಕರ ಕಾಮಕೇಳಿ ಹಗರಣಗಳು ರಾಜ್ಯದ ಜನರನ್ನು ಥೂ ಎಂದು ಉಗಿಯುವಂತೆ ಮಾಡಿದೆ. ಇವೆಲ್ಲ ಸರಿ ಹೋಗಬೇಕೆಂದು ಹೈಕಮಾಂಡೇ ಒಬ್ಬರನ್ನು ನೇಮಿಸಿದ್ದರೆ, ಪಾಪ ಅವರದ್ದೂ ರೇಪ್ ಕೇಸ್ ಈಗ ಭಾರೀ ಸುದ್ಧಿಯಾಗುತ್ತಿದೆ.

ಒಂದಂತೂ ಸತ್ಯ. ಯಾವುದೇ ಆಪಾದನೆಗಳು ಬಂದರೂ, ಅದು ತನ್ನ ಮಾನವನ್ನೇ ಹರಾಜು ಹಾಕಿದರೂ, ಕಿಂಚಿತ್ತೂ ಜಗ್ಗದೆ ತನ್ನ ಅಧಿಕಾರವನ್ನು
ಚಲಾಯಿಸುತ್ತಿರುವುದು ದಿಟ್ಟತನವೇ. ಸ್ವಲ್ಪ ತಪ್ಪು ನಡೆದ್ರೂ ರಾಜೀನಾಮೆ ಪಡೆಯುತ್ತಿದ್ದ ಬಿಜೆಪಿ ನಾಯಕರಿಗಿಂತ, ಏನೇ ತಪ್ಪಗಳು ನಡೆದರೂ ಜಗ್ಗದೆ ಪ್ರೋತ್ಸಾಹಿಸುವ ಕಾಂಗ್ರೆಸ್ ನಾಯಕರ ಧೈರ್ಯಕ್ಕೆ ಮೆಚ್ಚಲೇ ಬೇಕು. ದೆಹಲಿಗೆ ಹೋಗಿ ಮೇಡಂ ಕಾಲು ಹಿಡಿದರೆ ಎಲ್ಲವೂ ಪಾಸ್.

ಕಾಂಗ್ರೆಸ್ ಅಂದ್ರೇನೆ ಹಾಗೇ ಅಲ್ವಾ… ಏನಾದರು ಪ್ರಮುಖ ಕೆಲಸವಾಗಬೇಕೆಂದರೆ ದೆಹಲಿಗೆ ಹೋಗಿ ಸೋನಿಯಾ ಮೇಡಂ ಅಥವಾ ಅವರ ಪ್ರೀತಿಯ ಮಗ
ಪಪ್ಪು,ಕ್ಷಮಿಸಿ, ರಾಹುಲ್ ಗಾಂಧಿಯ ಕಾಲು ಹಿಡಿದರೆ ಸಾಕು. ಆ ಕೆಲಸ ಆದ ಹಾಗೆನೇ. ದೇಶದಲ್ಲಿ ಮೋದೀಜಿ ನೇತೃತ್ವದ ದಿಟ್ಟ ಸರ್ಕಾರ ಆಡಳಿತಕ್ಕೆ ಬಂದ ನಂತರ ಈ ಸೋಗಲಾಡಿಗಳಿಗೆ ಸ್ವಲ್ಪ ಕಷ್ಟವಾಗಿದೆಯಾದರೂ, ಕರ್ನಾಟಕ ರಾಜ್ಯದಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಶತ ಪ್ರಯತ್ನ ಮಾಡುವುದೂ ಹಾಗೂ ಅದರಲ್ಲಿ ಯಶಸ್ಸು ಕಾಣುವುದೂ ನಡೆಯತ್ತಿದೆ.

ಭಾರತೀಯ ಜನತಾ ಪಕ್ಷ ದೆಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸಿತ್ತು. ಆರಂಭದಲ್ಲಿ ಹಲವಾರು ಜನಪರ ಯೋಜನೆಗಳ
ಮೂಲಕ ಸಮೃದ್ಧ ಕರ್ನಾಟಕವನ್ನು ಕಟ್ಟುವಲ್ಲಿ ಪಣ ತೊಟ್ಟಿತ್ತು. ಕಾರ್ಣಾಟಕದಲ್ಲಿ ಬಿಜೆಪಿಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂಬ ಮಾತುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕೇಳತೊಡಗಿತು. ಆದರೆ ಅದ್ಯಾಕೋ ಗ್ರಹಚಾರ ಸರಿ ಇರಲಿಲ್ಲ ಅಂತ ಕಾಣುತ್ತೆ. ಮೂರು ಮುಖ್ಯಮಂತ್ರಿಗಳನ್ನು ಕಾಣಬೇಕಾಯಿತು. ಸಣ್ಣ ಪುಟ್ಟ ತಪ್ಪುಗಳಿಗೆ ಬಿಜೆಪಿ ಸಚಿವರು ರಾಜೀನಾಮೆ ನೀಡಬೇಕಾಯಿತು.

ಕಾಂಗ್ರೆಸ್-ಬಿಜೆಪಿಯ ವ್ಯತ್ಯಾಸವನ್ನು ಬಲ್ಲಿರಾ..?

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೂವರು ಸಚಿವರು ಸದನದಲ್ಲಿ, ಉಡುಪಿಯಲ್ಲಿ ನಡೆದ ನಂಗಾನಾಚ್ ಬಗ್ಗೆ ವೀಡಿಯೋ ನೋಡುತ್ತಿದ್ದ ವಿಷಯಕ್ಕೆ ಮತ್ತು ಕೇವಲ ಆ ವೀಡಿಯೋವನ್ನು ಮತ್ತೊಬ್ಬ ಶಾಸಕರು ಶೇರ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ತನ್ನ ಸ್ಥಾನಕ್ಕೆ ಆ ಕೂಡಲೇ ರಾಜೀನಾಮೆಯನ್ನು ನೀಡಿ ತನಿಖೆಯನ್ನು
ಎದುರಿಸಬೇಕಾಯಿತು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರಾಜೀನಾಮೆಯನ್ನು ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಹಗರಣವೊಂದರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರು ಕೇಳಿ ಬಂತು ಎನ್ನುವ ಕಾರಣಕ್ಕೆ ಆ ಕೂಡಲೇ ಅವರ ರಾಜೀನಾಮೆಯನ್ನು ಬಿಜೆಪಿ ಪಕ್ಷದ ಹೈಕಮಾಂಡ್ ಕೇಳಿದ್ದರು. ಪಕ್ಷದ ಸಿದ್ಧಾಂತ ಪ್ರಕಾರ ಯಾವುದೇ ಕಪ್ಪು ಚುಕ್ಕೆಗಳು ತನ್ನ ಮೇಲೆ ಅಂಟಿಕೊಂಡರೂ ಅದರಿಂದ ಖುಲಾಸೆಯಾಗೋವರೆಗೂ ಅಧಿಕಾರ ವಹಿಸಿಕೊಳ್ಳುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿತ್ತು ಬಿಜೆಪಿ ಹೈಕಮಾಂಡ್.

ಆದರೆ ಕಾಂಗ್ರೆಸ್ ಪಕ್ಷದ ದರ್ಪವನ್ನು ಗಮನಿಸಿದ್ದೀರಾ? ಅದೆಷ್ಟೇ ದೊಡ್ಡ ಪ್ರಮಾಣದ ಆಪಾದನೆ ಬಂದರೂ ಕೂಡಾ ಜಗ್ಗದೆ ಸಚಿವ ಸ್ಥಾನದ ಕುರ್ಚಿಯಲ್ಲಿ ಭದ್ರವಾಗಿ
ಅಂಟಿಕೊಂಡುಬಿಡುತ್ತಾರೆ. ಯಾವುದೇ ಹಗರಣ ಅಥವಾ ಅನೈತಿಕ ಪ್ರಕರಣಗಳು ಅಂಟಿಕೊಂಡರೂ, ಸೋನಿಯಾ ಮೇಡಂ ಕಾಲಿಗೆರಗಿದರೆ ಸಾಕು, ಆಕೆಯ ಅಭಯ ಹಸ್ತ ಭದ್ರವಾಗಿರುತ್ತದೆ.

ಕಾಂಗ್ರೆಸ್‍ನಲ್ಲಿ ತಂದೆ-ಮಗಳು, ಅಣ್ಣ-ತಂಗೀನೂ ರತಿಕ್ರೀಡೆ ಆಡುತ್ತಾರೆ…

ಕ್ಷಮಿಸಿ. ಈ ಪದಗಳನ್ನು ನಾವು ಖಂಡಿತಾ ಹೇಳಬಾರದು. ಹೌದು. ನಮಗೂ ಮುಜುಗರವಾಗುತ್ತಿದೆ. ಆದರೆ ಮಾನಗೆಟ್ಟ ಈ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಮಾನ ಮರ್ಯಾದೆ ಇದ್ಯಾವುದೂ ಇಲ್ವೇ… ಆಚಾರವಿಲ್ಲದ ನಾಲಗೆ ಹೇಗೆ ಬೇಕಾದರೂ ತಿರುಗಬಹುದು ಎಂಬುವುದಕ್ಕೆ ಇವರಿಗಿಂತ ಉತ್ತಮ ಸಾಕ್ಷಿ ಬೇರೆ ಬೇಕೇನು…

ಕೆಲ ಸಮಯದ ಹಿಂದೆ ಕರ್ನಾಟಕ ಸರ್ಕಾರದ ನಡೆತೆಗೆಟ್ಟ ಸಚಿವ ಹೆಚ್.ವೈ.ಮೇಟಿ ಸಣ್ಣ ಪ್ರಾಯದ ಹುಡುಗಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿದ್ದ
ವೀಡಿಯೋವೊಂದು ಬಹಿರಂಗವಾಗಿತ್ತು. ಇದು ರಾಜ್ಯದ ಜನತೆಯ ಕೆಂಗಣ್ಣಿಗೆ ಕಾರಣವಾಗಿತ್ತು. ವಿರೋಧ ಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನೆ ಮಾಡಿ
ರಾಜೀನಾಮೆಯನ್ನು ಕೇಳಿದ್ದವು. ಆದರೆ ಈ ಪುಣ್ಯಾತ್ಮ ಮಾತ್ರ ಹೇಳಿದ್ದೇ ಬೇರೆ. “ವೀಡಿಯೋದಲ್ಲಿ ಕಂಡಿದ್ದಾಕೆಗೂ ನನಗೂ ಇನ್ನಿತರ ಯಾವುದೇ ಸಂಭಂಧವಿಲ್ಲ. ಆಕೆ ಮತ್ತು ನನ್ನ ಮಧ್ಯೆ ಇರುವುದು ತಂದೆ-ಮಗಳ ಸಂಬಂಧ ಮಾತ್ರ” ಎಂದು ತನ್ನ ನಾಲಗೆಯನ್ನು ಕೆಟ್ಟ ವಿಚಾರಕ್ಕೆ ಶ್ರೇಷ್ಠ ಸಂಬಂಧವನ್ನೇ ಹಾಲುಗೆಡವಿಬಿಟ್ಟಿದ್ದ. ರತಿ ಕ್ರೀಡೆಗೆ ಬಳಸಿಕೊಂಡಿದ್ದ ಓರ್ವ ಹೆಣ್ಣನ್ನು ಮಗಳ ಸಮಾನ ಎಂದು ಹೇಳಿ, ತಂದೆ-ಮಗಳ ಶ್ರೆಷ್ಠ ಸಂಬಂಧಕ್ಕೆ ಕಳಂಕ ತಂದು ಬಿಟ್ಟಿದ್ದ.

ಸ್ವತಂತ್ರೋತ್ಸವ ಕಾರ್ಯಕ್ರಮದ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕನೊಬ್ಬ, ಕಾರ್ಯಕ್ರಮ ನಡೆದ ವೇದಿಕೆಯಲ್ಲೇ ವಿಧಾನ ಪರಿಷತ್ ಮಹಿಳಾ ಸದಸ್ಯೆಯ ಕೈಸವರಿ ಮಾನ ಮರ್ಯಾದೆ ಕಳೆದಿದ್ದರು. ತಾನು ವೇದಿಕೆಯಲ್ಲಿ ಇದ್ದೇನೆ ಎನ್ನುವ ಕನಿಷ್ಠ ಜ್ನಾನವೂ ಇಲ್ಲದ ಈ ನಾಯಕ, ಮಹಿಳೆಯ ಕೈಸವರಿ ಕಾಂಗ್ರೆಸ್ ಪಕ್ಷದ ಅಸಲಿ ಮುಖವನ್ನು ವೇದಿಕೆಯಲ್ಲೇ ಅನಾವರಣಗೊಳಿಸಿದ್ದರು. ಆತನ ರಾಸಲೀಲೆಯನ್ನು ರಾಜ್ಯ ಕಣ್ಣಾರೆ ಕಂಡ ನಂತರ ಆತನ ನುಡಿ ನಮನಗಳನ್ನು ಗಮನಿಸಬೇಕಿತ್ತು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಆ ಮಾನಗೆಟ್ಟ ಕಾಂಗ್ರೆಸ್ ಮುಖಂಡ, “ಆಕೆ ನನ್ನ ಸಹೋದರಿಯ ಸಮಾನ. ನಮ್ಮ ಮಧ್ಯೆ ಇರುವುದು ಅಣ್ಣ-ತಂಂಗಿಯ ಸಂಬಂಧ” ಎಂದು ಹೇಳಿಯೇ ಬಿಟ್ಟ. ಥೂ… ನೆಟ್ಟಗೆ ಇದ್ದ ಅದೊಂದು ಸಂಬಂಧವನ್ನೂ ಮೂರು ಕಾಸಿಗೆ ಹರಾಜು ಹಾಕಿ ಬಿಟ್ಟ ಆ ಕಾಂಗ್ರೆಸ್ ಮುಖಂಡ.

ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ರಾಜ್ಯಕ್ಕೆ ಪಾಠ ಹೇಳುವ ಶಿಕ್ಷಣ ಸಚಿವ ತನ್ವೀರ್ ಸೇಠ್ ತನ್ನ ಮೊಬೈಲ್‍ನಲ್ಲಿ “ನೀಲಿ ಚಿತ್ರ”ವನ್ನು ನೋಡಿ ತೀವ್ರ ಟೀಕೆಗೆ
ಗುರಿಯಾಗಿದ್ದರು. ಈ ವಿಷಯವನ್ನೂ ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತದೆ. ಆದರೆ ಸೇಟ್ ಮಾತ್ರ ಜಗ್ಗಲೇ ಇಲ್ಲ. ಪ್ರಶ್ನಿಸಿದರೆ, “ಅದು ನನ್ನ ಗೆಳೆಯರು ಕಳಿಸಿದ್ದು. ಅದ್ರಲ್ಲಿ ನನ್ನದೇನೂ ತಪ್ಪಿಲ್ಲ” ಎಂದು ಬಡಬಡಾಯಿಸಿ ಸಚಿವ ಸ್ಥಾನದ ಕುರ್ಚಿಯಲ್ಲಿ ಬೆಚ್ಚಗೆ ಕುಂತೇ ಬಿಟ್ಟಿದ್ದರು. (ಇಷ್ಟೇ ಬಿಜೆಪಿ ಅವಧಿಯಲ್ಲಿ ಆಗಿದ್ದಕ್ಕೆ ರಾಜೀನಾಮೆ ನೀಡುವ ಸಂಭವ ಎದುರಾಗಿತ್ತು)

ಹಗರಣಗಳ ಮೇಲೆ ಹಗರಣಗಳು, ಪ್ರಶ್ನಿಸಿದರೆ ನೂರಾರು ಸಮರ್ಥನೆಗಳು…

ಹೌದು. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿ ಯಾರು ಬೇಕಾದ್ರು ಲೂಟಿ ಮಾಡಬಹುದು. ಆ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು
ಕಡೆಯಲ್ಲಿ ಮುಖ್ಯಮಂತ್ರಿಗಳು ಲಕ್ಷ ಕೋಟಿಗಳಷ್ಟು ಸಾಲ ಮಾಡಿದ್ರೆ ಮತ್ತೊಂದು ಕಡೆ ಅದನ್ನು ನುಂಗಿ ನೀರು ಕುಡಿಯುವ ಸಚಿವರುಗಳು. ಕಮಿಷನ್ ದಂಧೆ ಅನ್ನೋದು ಇದ್ದದ್ದೇ ಬಿಡಿ.

ದಾಳಿ ಮಾಡಿತ್ತು ಡಿಕೆಶಿ ಮನೆಗೆ ಐಟಿ, ಮೋದಿಯತ್ತ ಕಾಂಗ್ರೆಸ್ಸಿಗರು ಎಸೆದಿದ್ದರು ಈಟಿ…!!!

ತನ್ನನ್ನ ತಾನು ಕಾಪಾಡಿಕೊಳ್ಳಲು ಯಾವ ಪರಿ ಬೇಕಾದ್ರು ನಾಟಕವಾಡುತ್ತಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ. ದೇಶದಲ್ಲೇ ಅತಿ ಹೆಚ್ಚು ಆಸ್ತಿ
ಹೊಂದಿರುವ ಸಚಿವ ಎಂದು ಕರೆಸಿಕೊಳ್ಳುವ ಡಿಕೆಶಿ ಕೋಟಿಗಟ್ಟಲೆಯ ಒಡೆಯ. ಸುಖಾ ಸುಮ್ಮನೆ ಯಾರ ಮೇಲೂ ಐಟಿ ದಾಳಿ ಮಾಡಲ್ಲ. ಅವರ ಆದಾಯ ಹಾಗೂ ಅವರ ವ್ಯವಹಾರಗಳನ್ನು ಗಮನಿಸಿಕೊಂಡೇ ದಾಳಿಗಳಾಗುತ್ತೆ. ಆದರೆ ಇದು ಬಿಜೆಪಿ ಸರ್ಕಾರದ ಧ್ವೇಷದ ರಾಜಕೀಯ ಎಂದು ಗಂಟಲು ಹರಿದು ಹೋಗುವಂತೆ ಕಿರುಚಿಕೊಂಡರು. ಇತ್ತ ಸಿಎಂ ಸಿದ್ದರಾಮಯ್ಯ, “ಡಿಕೆಶಿ ಮನೆ ಮೇಲೆ ಐಟಿ ದಾಳಿಯ ಸಂಧರ್ಭದಲ್ಲಿ, ಬಿಜೆಪಿಗೆ ಸೇರುವಂತೆ ಐಟಿ ಅಧಿಕಾರಿಗಳು ಆಹ್ವಾನ ನೀಡಿದ್ದರು” ಎಂದು ಹೇಳಿಕೆ ನೀಡಿದ್ದಾರೆ. ಅಂತಹ ಭ್ರಷ್ಟನನ್ನು ಬಿಜೆಪಿಗೆ ಸೇರಿಸಿಕೊಳ್ಳುವ ದುರ್ದು ಬರಬಹುದೇ? ದಾಖಲೆ ಇಲ್ಲದ ಸುಮಾರು 400 ಕೋಟಿಗೂ ಅಧಿಕ ಆಸ್ತಿಗಳು ಪತ್ತೆಯಾಗಿವೆ ಎಂಬ ಮಾಹಿತಿ ಇದೆ. ಹಾಗಾದರೆ ಇದೆಲ್ಲಾ ಹೇಗೆ ಸಾಧ್ಯ? ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರ ಭೀತಿಯಿಂದ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೂಡಿಹಾಕಲಾಗಿತ್ತು. ಈ ಜವಭ್ಧಾರಿಯನ್ನು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯ ಸೂಚನೆ ಮೇರೆಗೆ ಡಿಕೆ ಶಿವಕುಮಾರ್‍ರವರನ್ನು ಅವರ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅವರಿಗೆ ಕೋಟಿಗಟ್ಟಲೆ ಹಣಗಳನ್ನು ನೀಡಿ ಅವರನ್ನು ಪಕ್ಷ ಬಿಟ್ಟು ಹೋಗದಂತೆ ಮಾಡಿದ್ದರು ಡಿಕೆಶಿ. ಆ ಹಣಗಳೆಲ್ಲ ಎಲ್ಲಿಂದ ಬಂದಿತ್ತು? ಇದನ್ನೆಲ್ಲಾ ಪ್ರಶ್ನೆ ಮಾಡಿದ್ರೆ ರಾಜಕೀಯ ಧ್ವೇಷ ಅನ್ನೋದಾ..?

ಶೋಕಿಲಾಲ, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ…

ಬಡವರು 100 ರೂಪಾಯಿ ವಾಚ್ ಕಟ್ಟಿಕೊಳ್ಳುವುದೇ ಕಷ್ಟ. ಇನ್ನು ಬಡವರ ಪ್ರತಿನಿದಿ ಅಂತ ಕರೆಸಿಕೊಳ್ಳುವ ನಮ್ಮ ಸಿಎಂ ಸಾಹೇಬ್ರು ಬರೋಬ್ಬರಿ 80 ಲಕ್ಷದ
ಹೂಬ್ಲೂಟ್ ವಾಚ್ ಕಟ್ಟಿಕೊಂಡು, ಅಂಬಾನಿಗಿಂತಲೂ ತಾನೊಂದು ಹೆಜ್ಜೆ ಮುಂದೆ ಎಂದು ತೋರಿಸಿಕೊಳ್ಳುತ್ತಿದ್ದರು. ಇದರ ಬಗ್ಗೆ ಪ್ರಶ್ನೆ ಮಾಡೋರೆ ಇರಲಿಲ್ಲ.
ಮಾಧ್ಯಮಗಳು ಇದನ್ನು ಪ್ರಶ್ನೆ ಮಾಡಿದ್ರೆ “ಅದು ನನ್ನ ಸ್ನೇಹಿತ ಕೊಟ್ಟ ಉಡುಗೊರೆ” ಎಂದು ಜಾರಿಕೊಳ್ಳುತ್ತಿದ್ದರು. ಈ ಹಿಂದೆ ನಮ್ಮ ಪ್ರಧಾನಿ ಮೋದಿಯವರಿಗೆ
ಉಡುಗೊರೆಯಾಗಿ ಬಂದಿದ್ದ ಸೂಟ್‍ನಲ್ಲಿ ಮೋದಿ ಎಂದು ಬರೆದಿದ್ದನ್ನು ಕಂಡಂತಹ ಈ ಕಾಂಗ್ರೆಸ್ಸಿಗರು ದುಬಾರಿ ಬಟ್ಟೆಗಳನ್ನು ಮೋದಿ ಹಾಕುತ್ತಾರೆ ಎಂದು ತಮ್ಮ
ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದರು. ಆದರೆ ಸಿದ್ದರಾಮಯ್ಯನವರು 80ಲಕ್ಷದ ವಾಚ್ ಧರಿಸಿಕೊಂಡರೆ ಅದನ್ನು ಕೇಳಬಾರದು. ಇತಿಹಾಸದಲ್ಲಿ ತುಘಲಕ್ ಸರ್ಕಾರ ಹೀಗೇ ಇತ್ತಂತೆ…

ಸಿದ್ದರಾಮಯ್ಯರ ತಲೆದಿಂಬು, ಶಾಲ್ ಹಾಗೂ ಬಿಸ್ಕೆಟ್‍ಗೆ ಲಕ್ಷ ಲಕ್ಷ ಖರ್ಚು…!!!

ಸರಳ ಜೀವನ. ನಮ್ಮ ಮುಖ್ಯಮಂತ್ರಿಗಳು ಕೇವಲ ಪಂಚೆ, ಜುಬ್ಬ ಮತ್ತು ಶಾಲನ್ನು ಮಾತ್ರ ಉಟ್ಟುಕೊಳ್ಳುತ್ತಾರೆ ಎಂದು ಕೊಚ್ಚಿಕೊಳ್ಳುತ್ತಾರೆ ನಮ್ಮ ಕಾಂಗ್ರೆಸ್
ನಾಯಕರು. ಆದರೆ ಅದೇ ಪಂಚೆ, ಜುಬ್ಬ ಮತ್ತು ಶಾಲನ್ನು ಖರೀಧಿಸಲು ಕೋಟಿ ಕೋಟಿ ಖರ್ಚು ಮಾಡಲಾಗಿತ್ತು ಎಂಬುವುದು ಬಹಿರಂಗವಾಗಿತ್ತು. ಮುಖ್ಯಮಂತ್ರಿಗಳ ಬಿಸ್ಕೆಟ್‍ಗೆ ಲಕ್ಷಾಂತರ ರೂಗಳಷ್ಟು ಖರ್ಚು ಮಾಡಲಾಗಿತ್ತು ಎಂದು ವರದಿ ಬಂದಿದೆ. ಹಾಗಾದರೆ ಸರಳ ಜೀವನ ಯಾರದ್ದು ಸ್ವಾಮಿ?

ಬಡಮಕ್ಕಳ ಅನ್ನಕ್ಕೆ ಕನ್ನ, ಅದು ಕಾನೂನು ಬದ್ಧ ನಿಲುವು ಅಣ್ಣಾ…

ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ನೇತೃತ್ವದ ಶ್ರೀರಾಮ ವಿದ್ಯಾ ಕೇಂದ್ರದ ಸಾವಿರಾರು ಮಕ್ಕಳ ಅನ್ನವನ್ನೇ ಕಸಿದಿತ್ತು ಸರ್ಕಾರ. ಅಷ್ಟಕ್ಕೂ ಈ ಅನ್ನವನ್ನು ನೀಡುತ್ತಿದ್ದುದು ಕರ್ನಾಟಕ ಸರ್ಕಾರ ಅಲ್ಲವೇ ಅಲ್ಲ. ಬದಲಾಗಿ ಕೊಲ್ಲೂರು ದೇವಾಲಯದಿಂದ ಬರುತ್ತಿದ್ದ ಅನ್ನ. ಈ ಅನ್ನವನ್ನೇ ನಿಲ್ಲಿಸಿದ್ದರು ಅರಣ್ಯ ಸಚಿವ ರಮಾನಾಥ ರೈ ಹಾಗೂ ಸಿದ್ದರಾಮಯ್ಯ. ಈ ಪಾಪದ ಕೆಲಸವನ್ನು ಪ್ರಶ್ನಿಸಿದರೆ ಅದು ಕಾನೂನು ಬದ್ಧ ನಿಲುವು. ಅದನ್ನು ಪ್ರಶ್ನಿಸುವಂತಿಲ್ಲ ಎಂಬ ಉಡಾಫೆ ಉತ್ತರ.

ದಕ್ಷ ಅಧಿಕಾರಿಗಳ ಸಾವು-ವಿಪಕ್ಷಗಳ ವ್ಯವಸ್ಥಿತ ಪಿತೂರಿ..!!!

ರಾಜ್ಯದಲ್ಲಿ ಹಲವಾರು ದಕ್ಷ ಅಧಿಕಾರಿಗಳು ಅಸಹಜವಾಗಿ ಸಾವನ್ನಪ್ಪುತ್ತಾರೆ. ಇದನ್ನು ಪ್ರತಿಭಟಿಸಿ ಬೀದಿಗಳಿದರೆ ಅದು ವಿರೋಧ ಪಕ್ಷಗಳ ವ್ಯವಸ್ಥಿತಿ ಪಿತೂರಿ ಎಂಬ ಹಣೆಪಟ್ಟಿ. ಕಾರಾಗೃಹದಲ್ಲಿ ಲಂಚಾವತಾರವನ್ನು ಬಯಲಿಗೆಳೆದರೆ ನಿಷ್ಠಾವಂತ ಪೊಲೀಸ್ ಅಧಿಕಾರಿ ರೂಪಾಗೆ ವರ್ಗಾವಣೆ ಶಿಕ್ಷೆ. ಪೊಲೀಸ್ ಅಧಿಕಾರಿ ಅನುಪಮಾಗೆ ಅವಮಾನಿಸಿದರೂ ಕೇಳೋರಿಲ್ಲ, ಜಿಲ್ಲಾಧಿಕಾರಿ ರಶ್ಮಿಗೆ ಚಪ್ಪಲಿ ಎಸೆದಾಗಲೂ ತುಟಿಕ್ ಪಿಟಿಕ್ ಅನ್ನಲಿಲ್ಲ. ಕೆಂಪಯ್ಯ ಮಾತ್ರ ಗೃಹ ಇಲಾಖೆಯ ಸಲಹೆಗಾರ. ವಾವ್ ಭೇಷ್…

ಪ್ರತ್ಯೇಕ ಧ್ವಜ, ಪ್ರತ್ಯೇಕ ಧರ್ಮ-ರಾಜಕೀಯ ದಾಳಗಳು…

ಈ ಕಾಂಗ್ರೆಸಿಗರು ರಾಜಕೀಯಕ್ಕೋಸ್ಕರ ಏನು ಮಾಡಲೂ ಹಿಂದೆ ಸರಿಯುವವರಲ್ಲ. ಇದು ಮತ್ತೊಮ್ಮೆ ಸಾಭೀತಾಗಿದೆ. ಕನ್ನಡ ಧ್ವಜ ಅರಶಿನ-ಕುಂಕುಮದ
ಪ್ರತೀಕವಾಗಿದೆ ಎನ್ನುವ ಕಾರಣಕ್ಕಾಗಿ ಅದನ್ನು ಬದಲಾಯಿಸಿ ರಾಜಕೀಯವಾಗಿ ಕೆಲವರಿಂದ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಇತ್ತ ಲಿಂಗಾಯುತ ಹಾಗೂ ವೀರಶೈವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿ ರಾಜಕೀಯ ದಾಳವನ್ನು ಬಿಟ್ಟಿದ್ದಾರೆ ಈ ಕಾಂಗ್ರೆಸ್ಸಿಗರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿಮಾನಿಗಳಾಗಿದ್ದ ಲಿಂಗಾಯುತರನ್ನು ಒಡೆಯಬೇಕೆನ್ನುವ ಉದ್ಧೇಶದಿಂದ ಪ್ರತ್ಯೇಕ ಧರ್ಮದ ಆಮಿಷಕ್ಕೊಳಗಾಗುವಂತೆ ಮಾಡಿ ಅವರನ್ನು ಬೀದಿಗಿಳಿಯುವಂತೆ ಮಾಡಿ ರಾಜಕೀಯ ದಾಳವನ್ನು ಉರುಳಿಸಿದರು.

ಕಾನೂನು ಎನು ಇವರಪ್ಪನದ್ದಾ..???

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಇಲ್ಲವೇ ಇಲ್ಲ. ಅದು ಸಂಪೂರ್ಣವಗಿ ಹದಗೆಟ್ಟಿ ಹೋಗಿದೆ. ಅಧಿಕಾರಕ್ಕೆ ಬಂದ ಕೂಡಲೇ ಕೆ.ಎಫ್.ಡಿ, ಪಿಎಫ್‍ಐ ಸಹಿತ
ಮುಸಲ್ಮಾನರ ಮೇಲಿದ್ದ ಎಲ್ಲಾ ಪ್ರಕರಣಗಳಿಂದ ಮುಕ್ತಗೊಳಿಸಿ ತಾನೊಬ್ಬ ಬಾಬರ್, ಅಕ್ಬರನ ಸಂತಾನ ಎಂದು ನಿರೂಪಿಸಿಬಿಟ್ಟಿದ್ದರು ಸಿದ್ದರಾಮಯ್ಯ. ಆ ಪಾಪಿಗಳು ಹೊರಗೆ ಬಂದರೆ ಬಿಡುತ್ತಾರೆಯೇ…

ಮರಣ ಮೃಧಂಗ ಬಾರಿಸಿದ ಸಿದ್ದರಾಮಯ್ಯ, ಅದು ನಮ್ಮ ಸರ್ಕಾರದ ತಪ್ಪು ಅಲ್ಲಯ್ಯಾ…

ಹೀಗೆ ಜೈಲಿನಿಂದ ಹೊರಗೆ ಬಂದ ಮುಸಲ್ಮಾನ ಉಗ್ರರು ರಾಜ್ಯದಲ್ಲಿ ಸಾಲು ಸಾಲು ಹತ್ಯೆಗಳನ್ನು ನಡೆಸಿ ಎಷ್ಟೋ ಸಮಯ ಬಾಲ ಮುದುಡಿಕೊಂಡಿದ್ದ ಪಾಪಿಗಳು
ಮತ್ತೆ ಬಾಲ ಬಿಚ್ಚುವಂತೆ ಮಾಡಿದ್ದರು. ಪರಿಣಾಮ 19ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಗಳು ನೋಡು ನೋಡುತ್ತಿದ್ದಂತೆಯೇ ನಡೆದೇ ಹೋಗುತ್ತದೆ. ಕರ್ನಾಟಕ ಅಕ್ಷರಷಃ ಕೇರಳವಾಗುತ್ತೆ. ನೂರಾರು ಉಗ್ರರ ಕೇಸು ಹಿಂದಕ್ಕೆ ಪಡೆದಿರಲ್ಲಾ… ಅವರೇನು ನಿಮ್ಮ ರಕ್ತ ಸಂಬಂಧಿಗಳೇ..?

ಬೇಕಿತ್ತಾ ಟಿಪ್ಪು, ನಿಮ್ಮೊಂದಿಗಿರುವಾಗ ಪಪ್ಪು…!!!

ನಿಮ್ಮೊಂದಿಗೆ ಸದಾ ಕಾಮಿಡಿ ಮಾಡಿಕೊಂಡು ದೇಶವನ್ನೇ ನಗಿಸಲು ಪ್ರಣೇಶ್‍ರನ್ನೇ ಮೀರಿಸುವಂತಹ ಪಪ್ಪು(ರಾಹುಲ್ ಗಾಂಧಿ) ಇರುವಾಗ, ಆ ದೇಶ ದ್ರೋಹಿ,
ಮತಾಂಧ, ಲಕ್ಷಾಂತರ ಹಿಂದೂ ಹಾಗೂ ಕ್ರೈಸ್ತ ಜನಾಂಗದವರ ಮೇಲೆ ಹತ್ಯೆಗೆ, ಮತಾಂತರಕ್ಕೆ ಕಾರಣನಾಗಿದ್ದ ಟಿಪ್ಪು ಜಯಂತಿ ಬೇಕಿತ್ತಾ..? ಅವನೇನು ನಿಮ್ಮ
ಸಂಬಂಧಿಕನೇ..? ಬಲ್ಲಿರೇನು ಆತನ ಜಯಂತಿಯಿಂದ ಎಷ್ಟೆಲ್ಲಾ ಘಟನೆಗಳು ನಡೆಯಿತೆಂದು?

ಲೋಕಾಯುಕ್ತಕ್ಕೆ ಎಳ್ಳು ನೀರು, ಎಸಿಬಿಗೆ ಹುಟ್ಟಿತು ಬೇರು…

ನಿವೃತ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಢೆ ಸಹಿತ ಅನೇಕ ನಿಷ್ಟಾವಂತ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಕಂಡಿದ್ದಂತಹ ಲೋಕಾಯುಕ್ತ ಸಂಸ್ಥೆಗೆ ಕಾಂಗ್ರೆಸ್ ಸರ್ಕಾರ ಎಳ್ಳು ನೀರು ಬಿಟ್ಟಿತ್ತು. ಬದಲಾಗಿ ತಮ್ಮ ಹಾಗೂ ತಮ್ಮ ಕಾಂಗ್ರೆಸ್ ಕಾರ್ಯಕರ್ತರ ಉದ್ದಾರಕ್ಕಾಗಿ ಎಸಿಬಿ ಎಂಬ ಸಂಸ್ಥೆಯನ್ನು ಜಾರಿಗೆ ತಂದು ಬಿಟ್ಟಿತ್ತು. ಇರಲಿ. ಅದಾದರೂ ನೆಟ್ಟಗೆ ಕಾರ್ಯ ನಿರ್ವಹಿಸುತ್ತಿದೆಯಾ…? ಇಲ್ಲ. ಅದರಲ್ಲಿ ಮೊಟ್ಟ ಮೊದಲು ದಾಖಲಾದ ಪ್ರಕರಣವೇ ಸಿಎಂ ಸಿದ್ದರಾಮಯ್ಯನವರ ಹಗರಣದ ಕುರಿತು. ಆದರೆ ಇಂದಿನ ವರೆಗೂ ಅದೆಷ್ಟೋ ಪ್ರಕರಣಗಳು ಹಳ್ಳ ಹಿಡಿದವೆ. ಇದು ಕೇವಲ ವಿರೋಧ ಪಕ್ಷಗಳನ್ನು ಮಟ್ಟ ಹಾಕಲು ಮಾಡಿರುವ ಷಡ್ಯಂತ್ರ ಅಷ್ಟೆ ಎಂಬುವುದು ಸಾಮಾನ್ಯ ಪ್ರಜೆಗೂ ಗೊತ್ತಿರುವ ಸಂಗತಿಯಾಗಿದೆ.

ಕೇವಲ 50000 ಸಾಲ ಮನ್ನಾ. 1000ಕ್ಕೂ ಹೆಚ್ಚು ಬಿದ್ದಿತ್ತು ರೈತರ ಹೆಣ…

ರಾಜ್ಯ ಕಂಡ ಅತ್ಯಂತ ಕೆಟ್ಟ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾವಿರಾರು ರೈತರ ಆತ್ಮಹತ್ಯೆಗಳಾಗುತ್ತೆ. ರಾಜ್ಯಾದ್ಯಂತ ಬರಗಾಲ ತಾಂಡವವಾಡುತ್ತಿರುತ್ತೆ.
ಎಲ್ಲಾ ರೈತರು ಸಾಲ ಮನ್ನಾ ಮಾಡಿ ಎಂದು ಬೀದಿಗಿಳಿಯುತ್ತಾರೆ. ವಿರೋಧ ಪಕ್ಷಗಳೂ ಸಾಲ ಮನ್ನಕ್ಕಾಗಿ ಹೋರಟ ಮಾಡುತ್ತವೆ. ಆದರೆ ಕಾಂಗ್ರೆಸ್ ಸರ್ಕಾರ
ಜಪ್ಪಯ್ಯಾ ಅಂದ್ರೂನು ಜಗ್ಗಲ್ಲ. ನಂತರ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನ ಸೌಧ ಮುತ್ತಿಗೆ ಹಾಗೂ ರಾಜ್ಯಾದ್ಯಂತ ಬಿಜೆಪಿಯ ಪ್ರತಿಭಟನೆ ನಂತರ 50 ಸಾವಿರ ಸಾಲ ಮನ್ನಾ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು ಸಿದ್ದರಾಮಯ್ಯ ಸರ್ಕಾರ. ಅದೂ ಎಲ್ಲರಿಗೂ ಅನ್ವಯವಾಗಲ್ಲ ಅನ್ನೋದು ಕಟು ಸತ್ಯ.

ಸರ್ಕಾರದ ದುಡ್ಡಲ್ಲಿ ಇಂದಿರಾ, ಇಲ್ಲಿ ಊಟ ಮಾಡಿದರೆ ಹರೋಹರ..!!

ಕಳೆದ ನಾಲ್ಕೂವರೆ ವರ್ಷ ಮಾಡಿದ್ದ ಪಾಪಗಳನ್ನು ತೊಳೆಯಬೇಕಲ್ವಾ? ಈ ಕಾರಣಕ್ಕಾಗಿಯೇ ಊಟ ಕೊಟ್ಟು ಪಾಪ ಕಳೆಯುವ ಕೆಲಸಕ್ಕೆ ಕೈ ಹಾಕಿದರು. ಆದರೆ ಅದೂ ವಿಷವಾಯಿತು. ಆರಂಭದಲ್ಲಿ ರಾಹುಲ್ ಗಾಂಧಿಯನ್ನು ಕರೆಸಿ ಮದುವೆ ಮನೆಯಲ್ಲಿ ತಯಾರಿಸಿದ್ದ ಊಟವನ್ನು ತಂದು ಬಡಿಸಿ, ಅಜ್ಜಿಯ ಹೆಸರಲ್ಲಿದ್ದ ಕ್ಯಾಂಟೀನ್‍ನ್ನು ಉಧ್ಘಾಟನೆ ಮಾಡಿದ್ರು. ಆದರೆ ಕೆಲವೇ ದಿನಗಳ ನಂತರ ಅದರಲ್ಲಿ ಜಿರಳೆ, ಹಲ್ಲಿ ಹುಪ್ಪಟ್ಟೆಗಳು ಪ್ರತ್ಯಕ್ಷವಾಗಿ ಬಡವರಿಗೆ ಹೋಗುವುದಕ್ಕೂ ಭಯವನ್ನುಂಟು ಮಾಡುವ ವಾತಾವರಣ ನಿರ್ಮಾಣವಾಯಿತು. ಥೂ ಹೀಗೂ ಪಾಪ ತೊಳೆಯೋಕ್ಕಾಗಿಲ್ಲ.

ಏನೇ ಮಾಡಿದ್ರೂನು ಸಿಎಂಗೆ ಹಾಗೂ ಕಾಂಗ್ರೆಸ್‍ಗೆ ಹಿಡಿದಿರುವ ಗ್ರಹಚಾರ ಮಾತ್ರ ಇಳಿಯುವ ಲಕ್ಷಣಗಳೇ ಕಾಣುತ್ತಿಲ. ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ.
ಜನರೂ ಕಾಯುತ್ತಿದ್ದಾರೆ. ಪ್ರತಿಭಟನೆಗಳಿಗೆಲ್ಲಾ ಈ ಅಹಂಕಾರಿ ಮುಖ್ಯಮಂತ್ರಿಗಳು ಬಗ್ಗಲ್ಲ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿಯೇ ಚುನಾವಣೆ
ಬರೋವರೆಗೆ “ಜಸ್ಟ್ ವೈಟ್ ಆಂಡ್ ಸೀ” ಎನ್ನುತ್ತಿದ್ದಾನೆ ಜನಸಾಮಾನ್ಯ…

-ಸುನಿಲ್ ಪಣಪಿಲ

Tags

Related Articles

Close