ಪ್ರಚಲಿತ

ಹೇ ರಾವಣ! ನಿನ್ನಲ್ಲಿ ಲವ್ ಆಗಿದೆ ಕಣೋ ಎಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ಯಾಕೆ ಗೊತ್ತಾ?!

ಇವತ್ತಿನ ಸಮಾಜದ ಮಾನಸಿಕ ಸ್ಥಿತಿಯನ್ನ ಬಿಚ್ಚಿಟ್ಟಿದ್ದಾಳೆ ಆ ಹೆಣ್ಣು ಮಗಳು! ಆಕೆಯ ಐ ಲವ್ ಯೂ ರಾವಣ ಎನ್ನೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ
ವೈರಲ್ ಆಗಿದೆ! ರಾವಣನಿಗೆ ಆಕೆ ಐ ಲವ್ ಯೂ ಎಂದಿದ್ದಾ ಎಂದು ಹುಬ್ಬೇರಿಸಬೇಡಿ! ಒಮ್ಮೆ ಆಕೆಯ ಮಾತುಗಳನ್ನು ಕೇಳಿದರೆ ನಮ್ಮ ಕುದಿಯದ ರಕ್ತಕ್ಕೆ
ನಾಚಿಕೆಯಾಗುತ್ತೆ!

ಆಕೆ ಹೇಳಿದ್ದೇನು ಗೊತ್ತಾ?!

ಪ್ರತೀ ವರ್ಷವೂ ಕೂಡ ವಿಜಯದಶಮಿ ಆಚರಿಸ್ತೀವಿ! ಬಹಳ ಅದ್ದೂರಿಯಾಗಿ ಸೀತಾ ಮಾತೆಯನ್ನ ಅಪಹರಿಸಿದ ನಿನ್ನನ್ನ ಕೋಪದಿಂದಲೇ ಸುಡುತ್ತೇವೆ! ಇವತ್ತಿನ ಸಮಾಜಕ್ಕೆ ಹೋಲಿಸಿದರೆ ನೀನು ತುಂಟನಾಗಿ ಕಾಣುತ್ತೀಯಷ್ಟೇ! ಬಹಳ ಕ್ರೂರವಾಗಲ್ಲ! ನಿನ್ನನ್ನ ಇಷ್ಟು ದ್ವೇಷಿಸೋಕೆ ಏನು ಕಾರಣ ಹೇಳು! ನೀನು ಪೂಜನೀಯವಾದ ಸೀತಾ ಮಾತೆಯನ್ನ ಅಪಹರಿಸಿದೆ! ಆದರೆ, ಆಕೆಯನ್ನ ಅಪಹರಿಸಿದ ಮೇಲೆ ನೀನು ಆಕೆಯ ಮೈ ಮುಟ್ಟಲಿಲ್ಲ, ಆಕೆಯನ್ನ ಗೌರವಯುತವಾಗಿಯೇ ನಡೆಸಿಕೊಂಡೇ! ಪರರ ಪತ್ನಿಯನ್ನು ಮುಟ್ಟಿದ್ದು ಧರ್ಮಕ್ಕೆ ವಿರುದ್ಧ !ಆದರೆ, ನೀನು ಆಕೆ ಒಪ್ಪಲಿಲ್ಲ ಅಂತ acid ಎಸೆಯಲಿಲ್ಲ.
ಆಕೆಯ ಸೇವೆಗೆ ಜನಗಳನ್ನಿಟ್ಟೆ! ಅವರ ಮೂಲಕವೇ ಆಕೆಯ ಮನವೊಲಿಸಲು ಪ್ರಯತ್ನಿಸಿದೆ!

ರಾಮ ನಿನ್ನನ್ನು ಕೊಲ್ಲುವ ಮುನ್ನ ಕ್ಷಮೆಯನ್ನೂ ಕೇಳಿದ ನೀನು ನಮ್ಮ ಇವತ್ತಿನ ವಿಧಾನಸಭೆಯಲ್ಲಿರುವ ರಾಜಕಾರಣಿಗಳಿ ಗಿಂತಲೂ ತೀರಾ educated ಎನ್ನಿಸಿಬಿಡುತ್ತಿ! ನೀ ಮಾಡಿದ್ದಷ್ಟೇ! ಅದರ ಪ್ರತಿಫಲವಾಗಿ ನಿನ್ನನ್ನ ಪ್ರತೀ ವರ್ಷ ಸುಡುತ್ತೇವೆ! ನಂಬು! ನಿನ್ನ ಸುಡುವ ಯಾವ ಘೋರ ಅಪರಾಧವನ್ನೂ ನೀ ಮಾಡಲಿಲ್ಲ!

ಅವತ್ತು ದೆಹಲಿಯಲ್ಲಿ ನಿರ್ಭಯ ಎಂಬ ಹೆಣ್ಣಿನ ಮೇಲೆ ಬರ್ಬರವಾಗಿ ಅತ್ಯಾಚಾರ ಮಾಡಿದರು! ಆಕೆಯ ಗರ್ಭಕೋಶವೇ ಒಡೆದುಹೋಗಿತ್ತು! ಕಬ್ಬಿಣದ ರಾಡು ಆಕೆಯ ಗರ್ಭ ಹೊಕ್ಕಿತ್ತು! ಆ ಅತ್ಯಾಚಾರಿಗಳಿಗಿಂತ ನೀನು ವಾಸಿ!

15 ನಿಮಿಷ ಪೋಲಿಸರಿಗೆ ಸುಮ್ಮನಿರಲು ಹೇಳಿ. ಎಲ್ಲಾ ಹಿಂದೂಗಳನ್ನು ಕೊಲ್ಲುತ್ತೇವೆಂದ ಓವೈಸಿ ನಿನಗಿಂತ ಸಾವಿರ ಪಟ್ಟು ಕೆಟ್ಟವನು!

ನೀನು ರಾಮನ ಕಾಲಿಗೆ ಬಿದ್ದೆ! ಕ್ಷಮಿಸು ತಪ್ಪಾಯಿತೆಂದು ಪ್ರಾಣ ಬಿಟ್ಟೆ! ಆದರೆ, ಅದೇ ರಾಮನ ಮಂದಿರವನ್ನು ಕಟ್ಟಲು ಬಿಡವುದಿಲ್ಲವೆಂದು ಅಬ್ಬರಿಸಿದವರನ್ನು ಸುಡಬೇಕು!

ಧರ್ಮದ ಹೆಸರಿನಲ್ಲಿ ಅದೆಷ್ಟೋ ಹಿಂದೂ ಭಗಿನಿಯರ ಅತ್ಯಾಚಾರವಾಯಿತು! ದಿಕ್ಕಿಲ್ಲದಂತೆ ಅನಾಥರಾದರು ಅವರು! ಆ ಮತಾಂಧರನ್ನು ಸುಡಬೇಕಿತ್ತು!

ಒಬ್ಬ ರಾಜಕಾರಣಿಗೆ ಒಂದು ಹೆಣ್ಣುಮಗಳು ಗೌರವಯುತವಾಗಿಯೇ ಪ್ರಶ್ನೆ ಮಾಡಿದರೂ ಆಕೆಯನ್ನ ರೇಪ್ ಮಾಡ್ತೀವಿ, ಐಟೆಮ್ ಡಾನ್ಸ್ ನಲ್ಲಿ ಕುಣಿಸ್ತೀವಿ ಅಂತಾರೆ! ಅವರಿಗಿಂತ ನಿನ್ನ ಚೇಲಾಗಳೇ ಒಳ್ಳೆಯವರು!

ನಿನ್ನ ಸುಡುವಾಗ ನೋವಾಗುತ್ತೆ ರಾವಣ! ಇವತ್ತಿನವರ ಕ್ರೂರತೆ, ಹಿಂಸೆಯ ಮುಂದೆ ನೀ ತೀರಾ ಏನೂ ಅಲ್ಲ ! ಇವತ್ತಿನ ಕೆಲ ಮತಾಂಧರ ಕ್ರೂರತೆಯ ಮುಂದೆ
ನಿನ್ನದು ಏನೂ ಅಲ್ಲ ! ನಿನ್ನ ಮೇಲೆ ಲವ್ ಆಗಿದೆ ರಾವಣ ! ಆದರೇನು ಹೇಳು?! ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನ ನಾನೊಬ್ಬಳೇ ಧಿಕ್ಕರಿಸಲಾರೆ! ನಿನ್ನ ಪ್ರತಿಕ್ರತಿಯ ಬದಲಿಗೇ ನಾ ಹೇಳಿದವರೆಲ್ಲರನ್ನೂ ಕಲ್ಪಿಸಿಕೊಂಡು ಬೆಂಕಿ ಹಚ್ಚಿದ್ದೇನೆ ರಾವಣ!

ಇವರೆಲ್ಲರಿಗಿಂತಲೂ ನೀ ಗ್ರೇಟ್ ಕಣೋ , I Love You Ravana!

ಇವರೆಲ್ಲ ಬದುಕಿರುವಾಗ ರಾವಣನನ್ನು ಸುಡುವುದು ಸರೀನಾ?ಮನ ಮಿಡಿಯುವಂತಹ ವಿಡಿಯೋ ಶೇರ್ ಮಾಡಿ.

تم النشر بواسطة ‏‎Narendra Modi fans from Karunadu‎‏ في 30 سبتمبر، 2017

ವ್ಹಾ!!! ಆಕೆಯನ್ನು ಏನು ಬೇಕಾದರೂ ಕರೆಯಿರಿ! ಆದರೆ, ಯಾವ ರಾವಣರನ್ನು ಸುಡಬೇಕಿತ್ತು ಎಂಬುದನ್ನು ಬಹಳ ಚೆನ್ನಾಗಿಯೇ ಹೇಳಿದ್ದಾಳೆ! ಆಕೆಯಲ್ಲಿ ಈ ರಾವಣರನ್ನು ಸುಡುವುದು ಬಿಟ್ಟು ಕೇವಲ ಪೃತಿಕ್ರತಿಯನ್ನು ಸುಡುತ್ತಿದ್ದೀರಲ್ಲ ಎಂಬ ವಿಷಾದವಿದೆ! ಹಿಂದೂ ಭಗಿನಿಯರ ಅತ್ಯಾಚಾರವಾದ ಬಗ್ಗೆ ಕುದಿಯುವ ಸೇಡಿದೆ! ರಾಮ ಮಂದಿರವನ್ನು ಕಟ್ಟಲು ಅಡ್ಡ ಬಂದವರ ಸುಡುವಷ್ಟು ತಾಕತ್ತಿದೆ! ಆದರೆ. . . . .

ನೀವೇನೇ ಹೇಳಿ! ಒಬ್ಬ ಹೆಣ್ಣನ್ನು ಹೇಗೆ ನಡೆಸಿಕೊಳ್ಳಬೇಕೆಂಬ ಅರಿವು ಸಮಾಜಕ್ಕಿಲ್ಲ! ಆಕೆ ಹೇಳಿದ ನಿರ್ಭಯಾಳನ್ನೇ ತೆಗೆದುಕೊಳ್ಳಿ! ಅವರಿಗೆಲ್ಲ ಯಾವ ಶಿಕ್ಷೆಯಾಯಿತು?! ಜೈಲಿನಲ್ಲಿ ಕೂತುಂಡರಷ್ಟೇ! ಅದೆಷ್ಟೋ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಎಂಬ ಮೋಸದ ಬಲೆಗೆ ಬೀಳಿಸುವ ಯಾರನ್ನೂ ನಾವು ಹಿಂದೂಗಳು ಸುಡುವುದೇ ಇಲ್ಲ! ಬದಲಿಗೆ ಹೆದರಿ ಸುಮ್ಮನಾಗುತ್ತೇವೆ! ಒಂದು ರಾಜಕಾರಣಿಯನ್ನ ಪ್ರಶ್ನೆ ಮಾಡಿದಳೆಂಬ ಒಂದೇ ಕಾರಣಕ್ಕೆ ಆಕೆಯನ್ನು ಅಶ್ಲೀಲವಾಗಿ ಚಿತ್ರಿಸುತ್ತೇವೆ! ಅವರನ್ನು ಶಿಕ್ಷಿಸುವ ಬದಲು ಸುಮ್ಮನಾದೆವು!

ಆಕೆ ಒಂದೆರಡು ಉದಾಹರಣೆಗಳನ್ನು ಕೊಟ್ಟಿದ್ದಾಳಷ್ಟೇ! ಆದರೆ,. ಇವತ್ತಿನ ಹಿಂದೂ ಸಮಾಜಕ್ಕೆ ಯಾವ ರೀತಿ ಸಂದೇಶವನ್ನು ಕೊಡಬೇಕೋ ಅದೇ ರೀತಿ ಸಂದೇಶವನ್ನು ಕೊಟ್ಟಿದ್ದಾಳಷ್ಟೇ! ಹೌದು! ಆಕೆ ಹೇಳುವಂತೆ ಆ ರಾವಣ ಕ್ಷಮೆ ಕೇಳಿದ! ಆ ರಾವಣನಿಗಿದ್ದ ಸೌಜನ್ಯ ಹಾಗೂ ಸ್ವಲ್ಪವಾದರೂ ಇದ್ದ ಮನುಷ್ಯತ್ವ
ಇವತ್ತಿನ ರಾವಣರಿಗಿಂತಲೂ ಬಹಳ ಶ್ರೇಷ್ಠ ಎನ್ನಿಸುವುದು ಸುಳ್ಳಲ್ಲ!

ಆಕೆ ತೀರಾ ಸೌಜನ್ಯಯುತವಾಗಿಯೇ ಸಮಾಜದ ಸ್ಥಿತಿ ಗತಿಗಳ ಬಗ್ಗೆ ತೆರೆದಿಟ್ಟಿದ್ದಾಳೆ! ಛೇ! ನಾವಿನ್ನೂ ಅದೇ ಸಂಪ್ರದಾಯದಲ್ಲಿದ್ದೇವೆ! ಆದರೆ, ಅದರಿಂದ ಏನನ್ನೂ ಕಲಿಯಲೇ ಇಲ್ಲ!

ಸಹೋದರಿ! ನಿನ್ನ ಸಮಾಜ ಕಳಕಳಿಯ ಬಗ್ಗೆ, ನೀ ತೋರಿದ ಈ ಸೂಕ್ಷ್ಮತೆಗಳ ಬಗ್ಗೆ ಬಹಳ ಅಭಿಮಾನವಿದೆ! ಜೊತೆ ಜೊತೆಗೆ ಅಯ್ಯೋ! ನಾವು ಆ ರಾಮನಾಗದಿದ್ದಕ್ಕೆ ವಿಷಾದವಿದೆ!

– ಪೃಥ ಅಗ್ನಿಹೋತ್ರಿ

Tags

Related Articles

Close