ಅಂಕಣಪ್ರಚಲಿತ

ಹೊಲಸು ರಾಜಕೀಯಕ್ಕೆ ಕನ್ನಡ ಭಾಷೆಯನ್ನು ಎಳೆದ ಕುಮಾರಸ್ವಾಮಿಗೆ ನವರಾತ್ರಿಯಂದೇ ಮೈ ಚಳಿ ಬಿಡಿಸಿದ ಕನ್ನಡದ ದುರ್ಗೆ!!!

ಅಲ್ಲ ಸ್ವಾಮಿ!!! ರಾಜಕೀಯದಲ್ಲಿ ಮೆರೆಯಲೇ ಬೇಕು ಎನ್ನುವ ಚಟ ಏನೆಲ್ಲ ಮಾಡಿಸಿಬಿಡುತ್ತದೆ ನೋಡಿ! ಕುಮಾರಸ್ವಾಮಿ ಎಂಬ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕನ್ನಡ ಧ್ವಜವನ್ನೇ ರಾಜಕೀಯಕ್ಕೆಳೆದಿದ್ದಾರೆ! ಬಿಜೆಪಿಯ ಅಮಿತ್ ಷಾರನ್ನೂ ಎಳೆದ ಕುಮಾರಸ್ವಾಮಿಯವರಿಗೆ ಬಹುಷಃ ಕನ್ನಡ ಪ್ರೀತಿ ಉಕ್ಕಿ ಹರಿದು ಅಮಿತ್ ಷಾ ನವೆಂಬರ್ ಒಂದಕ್ಕೆ ಕನ್ನಡ ಧ್ವಜವನ್ನು ಕೆಳಗಿಳಿಸಿ ಬಿಜೆಪಿಯ ಧ್ವಜವನ್ನು ಹಾರಿಸಲು ಹೇಳಿದ್ದಾಗಿ ಚೇಲಾಗಳ ಕೈನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಸರಿಯಾಗಿ ಕನ್ನಡತಿಯೊಬ್ಬಳು ತರಾಟೆಗೆ ತೆಗೆದುಕೊಂಡಿದ್ದಾಳೆ! ಅದೂ ನವರಾತ್ರಿಯ ಮೊದಲ ದಿನವೇ ಕುಮಾರಸ್ವಾಮಿಯ ಬಣ್ಣ ಬಯಲು ಮಾಡಿ, ಪ್ರಶ್ನಿಸಿದ ಆಕೆಗೆ ಕುಮಾರಸ್ವಾಮಿ ಅಥವಾ ಅವರ ಕಡೆಯಿಂದ ಯಾವ ರೀತಿಯಲ್ಲಿ ಉತ್ತರ ಬರಬಹುದೋ ಕಾದು ನೋಡಬೇಕು!!!

ಅಮಿತ್ ಷಾ ನಿಜಕ್ಕೂ ಹೇಳಿದ್ದೇನು?!

ಅಮಿತ್ ಷಾ ರವರು ಅಸಲಿಗೆ ನವೆಂಬರ್ 1 ರ ಸುದ್ದಿಯನ್ನೇ ಎತ್ತಿಲ್ಲ. ನವಕರ್ನಾಟಕ ನಿರ್ಮಾಣ ರಥಯಾತ್ರೆ ನಡೆಯುವ ನವೆಂಬರ 2 ರಂದು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಬಿಜೆಪಿಯ ಧ್ವಜವನ್ನು ಹಾರಿಸಿ ಎಂದು ಹೇಳಿದ್ದನ್ನೇ ತಿರುಚಿ ಕುಮಾರಸ್ವಾಮಿಯವರ official page ನಲ್ಲಿ ನವೆಂಬರ್ 1 ರಂದು ಅಮಿತ್ ಷಾ ಕನ್ನಡದ ಧ್ವಜವನ್ನು ಕೆಳಗಿಳಿಸಿ ಬಿಜೆಪಿಯ ಧ್ವಜವನ್ನು ಹಾರಿಸಲು ಹೇಳಿ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಜೆಡಿಎಸ್ ಕಾರ್ಯಕರ್ತರಿಗೆ ಬಹುಷಃ ಕುಮಾರಸ್ವಾಮಿಯವರ ಕನ್ನಡದ ಪ್ರೀತಿ ಯ ಬಗ್ಗೆ ಗೊತ್ತೇ ಇಲ್ವೇನೋ!!!

ಆಕೆ ಹೇಳಿದ್ದೇನು?!

“ಇತ್ತೀಚೆಗೆ ತಾನೇ ನಿಮ್ಮ ಮಗನ ಹೆಸರಿನಲ್ಲಿ ಹದಿನೈದು ಕೋಟಿ ವೆಚ್ಚ ಮಾಡಿ ‘ಜಾಗ್ವಾರ್’ ಎನ್ಜುವ ಸಿನಿಮಾ ಮಾಡಿದಾಗ ದೀಪ್ತಿ ಸತಿ ಎನ್ನುವ ಮಹಾರಾಷ್ಟ್ರದ ಹುಡುಗಿಯನ್ನು ಆ ಸಿನಿಮಾದ ನಾಯಕಿಯಾಗಿ ಆರಿಸಿದ್ರಿ!ತಮನ್ನಾ ಭಾಟಿಯಾ ಎನ್ನುವ ಪರಭಾಷಾ ನಾಯಕಿಯಿಂದ ಐಟೆಮ್ ಸಾಂಗ್ ಬೇರೆ ಮಾಡಿಸಿದ್ರಿ!

ಹಿಂದೆ ನೀವು ನಿರ್ಮಿಸಿದ ಸೂರ್ಯವಂಶ ಎನ್ನುವ ಸಿನಿಮಾದಲ್ಲೂ ಇಶಾ ಕೊಪ್ಪಿಕರ್ ಎನ್ನುವ ಮಹಾರಾಷ್ಟ್ರದ ನಾಯಕಿ! ಗಲಾಟೆ ಅಳಿಯಂದ್ರು ಸಿನಿಮಾದಲ್ಲಿ ಸಾಕ್ಷಿ ಶಿವಾನಂದ್ ಎನ್ನುವ ಮಹಾರಾಷ್ಟ್ರದ ನಾಯಕಿ! ಚಂದ್ರ ಚಕೋರಿಯಲ್ಲಿದ್ದ ನಾಝ್ ಎನ್ನುವವಳೂ ಮಹಾರಾಷ್ಟ್ರದವಳೇ!!!

ನೀವು ನಿರ್ಮಿಸಿದ ನಾಲ್ಕೂ ಚಿತ್ರಗಳಿಗೆ ಮಹಾರಾಷ್ಟ್ರದವರನ್ನೇ ನಾಯಕಿಯಾಗಿ ಆರಿಸಿದ್ದೀರಿ!! ಆದರೆ, ಕನ್ನಡ, ಕನ್ನಡಿಗರು ಎಂದು ಉಲಿಯುವ ನಿಮಗೆ ಕನ್ನಡದಲ್ಲಿ ಯಾವ ಪ್ರತಿಭೆಯೂ ಇರಲಿಲ್ಲವೇ?! ಕನ್ನಡ ಅಂದರೆ ಅಷ್ಟು ತಾತ್ಸಾರ ಆಗೋಯ್ತೇ?! ಅಥವಾ ಕನ್ನಡವನ್ನು ಹೊಲಸು ರಾಜಕೀಯಕ್ಕೆ ಬಳಸಿಕೊಂಡಿರೇ?!” ಎಂದು ತಪರಾಕಿ ಬಾರಿಸಿದ್ದಾರೆ!

ತಮಗೆ ತಾವೇ ಏನೇನೋ ಕಲ್ಪಿಸಿಕೊಂಡು ಧಮ್ ಇದ್ರೆ ಕನ್ನಡ ಧ್ವಜವನ್ನು ಕೆಳಗಿಳಿಸಿ, ಅವಮಾನ ಮಾಡಿ ಎಂದೆಲ್ಲ ಧಮಕಿ ಹಾಕಿರುವ ಕುಮಾರಸ್ವಾಮಿಯವರ ಚೇಲಾಗಳಿಗೆ ಯಾರ ಹೇಳಿಕೆಯನ್ನು ಇನ್ನು ಹೇಗೆಗೆಲ್ಲ ತಿರುಚುತ್ತಾರೋ ಆ ಸ್ವಾಮಿಗೇ ಗೊತ್ತು!

ಪಾಪ! ಕುಮಾರಸ್ವಾಮಿಯವರ ಚೇಲಾಗಳಿಗೆ ಸಮರ್ಥನೆಯೊಂದೇ ಕೆಲಸವಾಗಿದೆ! ಅಲ್ಲದೇ, ಉತ್ತರ ಕೊಡಲಾಗದ ಸಂಕಟದಲ್ಲಿ ನರಿಗಳಂತೆ ಊಳಿಡುತ್ತಿರುವ ಚೇಲಾಗಳಿಗೆ ಬಹುಷಃ ನವರಾತ್ರಿಯ ಮೊದಲ ದಿನವೇ ಉರಿ ಬಿದ್ದಂತಾಗಿದೆ!!!!!

ಆಕೆಯ ಮಾತುಗಳನ್ನು ನೀವೇ ಕೇಳಿ!!

ವೀಡಿಯೋ ನೋಡಲು ಇದನ್ನು ಒತ್ತಿ!

ಅದೇ! ರಾಜಕೀಯದಲ್ಲಿ ಹಣ ಮಾಡಲು ಕನ್ನಡ! ಸಿನಿಮಾದಲ್ಲಿ ಹಣ ಮಾಡಲು ಮಹಾರಾಷ್ಟ್ರದ ಜನ!!! ಅಹಾಹಾಹಾ!!!! ಏನಂತೀರಾ ಕುಮಾರಸ್ವಾಮಿಯವರ ಕನ್ನಡ ಪ್ರೀತಿ?! ಕೇಳಿದರೆ ಇನ್ನೇನೋ ಮಾತನಾಡುವ ಕುಮಾರಸ್ವಾಮಿ ಈಕೆಯ ಪ್ರಶ್ನೆಗೆ ಏನು ಉತ್ತರ ಕೊಡಬಲ್ಲರೋ ಗೊತ್ತಿಲ್ಲ!! ಬಿಡಿ! ಕರ್ನಾಟಕದಲ್ಲಿ ಅದೇನು ಕಡಿದು ಕಟ್ಟೆ ಹಾಕಿದ್ದಾರೋ ಗೊತ್ತಿಲ್ಲ ಆದರೆ, ಚೆಂದವಾಗಿ ಸಂಸಾರ ಮಾಡಿಕೊಂಡಿದ್ದಾರೆ ಬಿಡಿ!

ಇಷ್ಟು ವರ್ಷವೂ ಚುನಾವಣೆ ಹತ್ತರಿವಾಗುತ್ತಿದ್ದಂತೆ ಕನ್ನಡಾಭಿಮಾನ ಉಕ್ಕಿ ಹರಿದುಬಿಡುವ ಕುಮಾರಸ್ವಾಮಿಯವರಿಗೆ ಚುನಾವಣೆಯಲ್ಲಿ ಗೆದ್ದ ಮೇಲೆ ಕನ್ನಡವೆಂದರೆ ಕಾಲಕಸವಾಗಿರುತ್ತೆ ಎನ್ನುವುದನ್ನೂ ಇಷ್ಟು ವರ್ಷ ನೋಡುತ್ತಲೇ ಬಂದಿದೇವೆ! ಅದಕ್ಕೇ, ಸ್ವಾಮಿ ಯವರು ಜಪ ಮಾಡಿಕೊಂಡಿರುವುದು ಬಿಟ್ಟು ಹೋಗಿ ಹೋಗಿ ಅಮಿತ್ ಷಾರನ್ನು ಅವಮಾನ ಮಾಡಲು ಹೋಗಿ ತಾವೇ ಪೇಚಿಗೆ ಸಿಲುಕಿದ್ದಾರಷ್ಟೇ!

ಅಯ್ಯೋ! ಗೌಡರ ಮಗನಾದ ನಿಮಗೆ ಬೆಳಗಾವಿಯಲ್ಲಿ ಮಹಾರಾಷ್ಟ್ರದವರು ಮಾಡುತ್ತಿರುವ ರಗಳೆಗಳ ಬಗ್ಗೆ ಗೊತ್ತಿಲ್ಲವೇ?! ಕನ್ನಡ ಭಾಷೆಗಾಗುತ್ತಿರುವ ಅವಮಾನವೂ ಗೊತ್ತಿಲ್ಲವೇ?! ಅಥವಾ ಗೊತ್ತಿದ್ದೂ ಗೊತ್ತಿದ್ದು ಮಾಡುತ್ತಿರುವ ನಾಟಕವೇ?! ಅಂತಹ ರಾಜ್ಯದಿಂದಲೇ ನಿಮ್ಮ ಕನ್ನಡ ಸಿನಿಮಾಗಳಿಗೆ ನಾಯಕಿಯನ್ನು ಆರಿಸುವ ಜರೂರತ್ತೇನಿತ್ತು?! ಆಹಾ! ನಿಮ್ಮ ಈ ಕನ್ನಡಭಿಮಾನ ಹಾಗೂ ಮಹಾರಾಷ್ಟ್ರ ನಾಯಕಿಯರ ಗುಣಗಾನ ಮೆಚ್ಚುವಂತದ್ದೇ ಬಿಡಿ!!!

ಮುಖವಾಡಗಳನ್ನು ಧರಿಸುವುದು ನಿಮ್ಮ ರಾಜಕೀಯದ ಭಾಗವಾದರೂ ರಾಷ್ಟ್ರೀಯ ಹಿತಕ್ಕೆ ಕೆಲಸ ಮಾಡುವ ಒಬ್ಬರಿಂದ ಇಂತಹ ತಿರುಗು ಬಾಣ ಬಂದರೆ ಮುಖವಾಡ ಕಳಚಿ ಬಿದ್ದಿರುತ್ತದೆಂಬುದು ನೆನಪಿರಲಿ! ಇವತ್ತು, ಈಕೆ ಪ್ರಶ್ನೆ ಮಾಡಿದ್ದಾಳೆ! ನಾಳೆ ಹತ್ತು ಜನ ಪ್ರಶ್ನೆ ಮಾಡಬಹುದು!

ನೀವು ಸಿನಿಮಾ ರಂಗವೇ ಬೇರೆ ರಾಜಕೀಯವೇ ಬೇರೆ ಎಂದು ಸಮರ್ಥಿಸಿಕೊಳ್ಳಬಹುದು! ಆದರೆ, ಕನ್ನಡದವರಿಗೆ ಪ್ರಾಶಸ್ತ್ಯ ಕೊಡುವುದು ಬಹಳ ಮುಖ್ಯ! ಇಲ್ಲದೇ ಹೋದರೆ ಇವರದೆಂಥಾ ಕನ್ನಡ ಪ್ರೇಮ?!

ಆಕೆ ಹೇಳಿದಂತೆ ನಿಮ್ಮ ಹೊಲಸು ರಾಜಕೀಯಕ್ಕೆ ಕನ್ನಡವನ್ನು ಬಳಸಲೇ ಬೇಡಿ!!! ಕನ್ನಡ ಧ್ವಜದ ಮರ್ಯಾದೆಯನ್ನೂ ತೆಗೆಯಬೇಡಿ!

– ಪೃಥ ಅಗ್ನಿಹೋತ್ರಿ

Tags

Related Articles

Close