ಅಂಕಣಪ್ರಚಲಿತ

ಅಚ್ಚರಿ!! ಸತ್ತನಂತರವೂ ಈ ಮಹಾಪುರುಷ ಆಕ್ರಮಣಕಾರಿಗಳಿಗೆ ಕ್ರಾಂತಿಯ ಕಿಡಿಯಾಗಿದ್ದು ಹೇಗೆ?? ಆ ರಹಸ್ಯವೇನು ಗೊತ್ತಾ?

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತನಾಗಿದ್ದ ಈ ವೀರ, ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಪ್ರಥಮ ಬಾರಿಗೆ ದಾಸ್ಯ ಮುಕ್ತವನ್ನಾಗಿ ಮಾಡಿ, ಬ್ರಿಟಿಷರ ಪಾಲಿಗೆ ಕೆರಳಿದ ಸಿಂಹವಾಗಿ ಭಯ ಹುಟ್ಟಿಸಿದ್ದರು. ಅವರು ಬೇರಾರು ಅಲ್ಲ… ಭಾರತಮಾತೆಯ ವೀರ ಸೇನಾನಿ ಎಂದೆನಿಸಿಕೊಂಡಿರುವ ನೇತಾಜಿ ಸುಭಾಷ್ ಚಂದ್ರ ಬೋಸ್!! ಯುದ್ಧ ಖೈದಿಗಳು, ಪ್ಲಾಂಟೇಶನ್ ಕೆಲಸಗಾರರನ್ನು ಒಟ್ಟುಗೂಡಿಸಿ ಆಜಾದ್ ಹಿಂದ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಸ್ಥಾಪಿಸಿದ ಇವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರಾಗಿದ್ದಾರೆ.

“ಜೈ ಹಿಂದ್” ಎಂದು ಕೇಳಿದಾಕ್ಷಣ ನಮ್ಮ ಕಣ್ಣಿಗೆ ಮೊದಲು ಬೀಳುವ ಚಿತ್ರವೇ ಸುಭಾಷರದ್ದು. ಕ್ರಾಂತಿಕಾರಿ ಯೋಧನಾಗಿ ಬ್ರಿಟಿಷರ ಪಾಲಿಗೆ ಜ್ವಾಲೆಯಾಗಿ ಸುಟ್ಟಿದ್ದ ನೇತಾಜಿ ಸುಭಾಷ್ ಚಂದ್ರಬೋಸ್, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದಂತೂ ಅಕ್ಷರಶಃ ನಿಜ!!

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದೆಂಬ ಸುಭಾಷ್‍ರ ಈ ಮಾತು, ಅವರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು. ಕಾಂಗ್ರೆಸ್‍ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲತುಂಬಿದವರು ಸುಭಾಷರು.

ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಅಂಹಿಸಾತ್ಮಕ ಚಳುವಳಿಯಿಂದಲ್ಲ!! ಬದಲಾಗಿ ಎರಡನೇ ಮಹಾಯುದ್ದದ ನಂತರ ನೇತಾಜಿಯವರ ಐಎನ್‍ಎ ಪ್ರಭಾವ ದೇಶದಲ್ಲಿ ಹೆಚ್ಚಾಗಿ ಸೇನೆಯಲ್ಲಿ ಬಂಡಾಯದ ಕಾವು ಹರಡಿತ್ತು. ಇದರಿಂದ ಬ್ರಿಟಿಷರು ಇನ್ನು ನಮಗೆ ದೇಶವಾಳುವುದು ಕಷ್ಟ ಎಂದು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರು. ಹೀಗೆ ನೇತಾಜಿ ಬ್ರಿಟಿಷರಿಗೆ ಪ್ರತಿ ಹಂತದಲ್ಲೂ ನಡುಕ ಹುಟ್ಟಿಸಿದ್ದರು. ಭಾರತದಲ್ಲಿರುವಾಗ ಬ್ರಿಟಿಷರು ಅತಿ ಹೆಚ್ಚು ಹೆದರಿದ್ದು ಇಬ್ಬರಿಗೆ ಮಾತ್ರ!! ಅದು……. ಒಬ್ಬರು ಸಾವರ್ಕರ್ ಮತ್ತೊಬ್ಬರು ಸುಭಾಷ್ ಚಂದ್ರ ಬೋಸ್.

ಚಿನ್ನದ ಮೊಟ್ಟೆಯಿಡುವ “ಐ.ಸಿ.ಎಸ್” ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ಕೇವಲ 23!! ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು “ಮಹಾತ್ಮ ಗಾಂಧೀಜಿ”ಯವರನ್ನು. ಮಹಾತ್ಮರ ಸಲಹೆಯಂತೆ “ದೇಶ ಬಂಧು” ಚಿತ್ತರಂಜನ ದಾಸ್ ಅವರೊಂದಿಗೆ ಭಾರತದ ಸ್ವಾತಂತ್ಯ್ರ ಹೋರಾಟಕ್ಕೆ ಧುಮುಕಿ ಮುಂದಿನ 25 ವರ್ಷಗಳಲ್ಲಿ , 40000 ದಿಂದ 45000 ಜನರ “ಆಜಾದ್ ಹಿಂದ್ ಫೌಜ” ಎಂಬ ಸೇನೆಯನ್ನು ಮುನ್ನಡೆಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ್ದರು.

ದೇಶದ ಬಗ್ಗೆ ಅಪಾರ ದೇಶಾಭಿಮಾನವನ್ನು ಬೆಳೆಸಿಕೊಂಡಿದ್ದ ಧೀಮಂತರಾದ ಇವರು ಪದವಿ ಓದುವ ಸಮಯದಲ್ಲಿ ಪ್ರಾಧ್ಯಾಪಕರೊಬ್ಬರು ದೇಶದ ಬಗ್ಗೆ ಕೇವಲವಾಗಿ ಮಾತನಾಡಿದಾಗ, ಸಿಡಿದೆದ್ದು ಅವರ ಮಾತುಗಳನ್ನು ವಿರೋಧಿಸಿದಂತಹ ದೇಶಭಕ್ತನಾಗಿದ್ದಾರೆ. ಸುಭಾಷರು ತಾರುಣ್ಯದಲ್ಲಿ ಬಂಗಾಳದ ವಿಭಜನೆಯ ಚಳುವಳಿ “ವಂಗಬಂಗ” ದಿಂದ ಪ್ರೇರಿತರಾಗಿದ್ದಲ್ಲದೇ, ಧಾರ್ಮಿಕ ವಿಷಯಗಳ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ನೇತಾಜಿ ಭಗವದ್ಗೀತೆ, ಯೋಗ, ಆತ್ಮ ಸಂಯಮ, ಮನೋನಿಗ್ರಹಗಳ ಬಗ್ಗೆ ತಿಳಿದಿದ್ದರು. ಅಷ್ಟೇ ಅಲ್ಲದೇ, ರಾಮಕೃಷ್ಣ, ವಿವೇಕಾನಂದರತ್ತ ಆಕರ್ಷಿತರಾಗಿದ್ದಂತಹ ಇವರು ಬ್ರಿಟಿಷರ ಅವಧಿಯಲ್ಲೇ ಐಎಎಸ್ ಪದವಿ ದೊರೆತಾಗ “ಬ್ರಿಟಿಷರ ಕೆಳಗೆ ನಾನು ಕೆಲಸ ಮಾಡುವುದಿಲ್ಲ” ಎಂದು ಹೇಳಿ ಆ ಕೆಲಸವನ್ನೇ ತ್ಯಜಿಸಿ ಬಂದ ಕಿಚ್ಚಿನ ಸ್ವಾಭಿಮಾನಿಯಾಗಿದ್ದರು ಸುಭಾಷ್ ಚಂದ್ರಬೋಸ್!!

Image result for subhaschandra bose with ina

ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದ ಸುಭಾಷ್ ಚಂದ್ರ ಬೋಸ್ ಪ್ರತಿಭಾನ್ವಿತರಾಗಿದ್ದಲ್ಲದೇ, ಒಂದೊಮ್ಮೆ ವಿಶ್ವದ ಅಧ್ಯಕ್ಷರೆಲ್ಲರೂ ಸಾಲಾಗಿ ನಿಂತು ಫೆÇೀಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಸುಭಾಷ್ ಚಂದ್ರ ಬೋಸರು ಅವರೊಂದಿಗೆ ನಿಲ್ಲಲು ಒಪ್ಪಿಕೊಳ್ಳುವುದಿಲ್ಲ. ಆ ಸಂದರ್ಭದಲ್ಲಿ ಅಧ್ಯಕ್ಷರೊಬ್ಬರು ಅವರನ್ನು ಕರೆದು ಕೇಳಿದರಂತೆ “ಬನ್ನಿ.. ಈ ಸಾಲಿನಲ್ಲಿ ನಮ್ಮೊಂದಿಗೆ ನಿಂತುಕೊಂಡು ಫೆÇೀಟೋ ತೆಗೆಸಿಕೊಳ್ಳಿ.. ಮುಜುಗರ ಪಡಬೇಡಿ” ಎಂದು ಹೇಳಿದರಂತೆ.

ಆಗ ಸುಭಾಷ್ ಚಂದ್ರಬೋಸ್ ಹೇಳಿದ ಪ್ರತ್ಯುತ್ತರ ಆ ಅಧ್ಯಕ್ಷನನ್ನು ಒಂದು ಕ್ಷಣ ಬೆಚ್ಚಿ ಬೀಳಿಸುವಂತೆ ಮಾಡಿತ್ತು!! ಹೌದು.. ಸುಭಾಷ್ ಚಂದ್ರ ಬೋಸರು ಪೋಟೋ ತೆಗೆಸಿಕೊಳ್ಳಲು ಒಪ್ಪದೇ, ಆ ಅಧ್ಯಕ್ಷ ಹೇಳಿದೆ ಮಾತಿಗೆ, “ನಿಮ್ಮೊಂದಿಗೆ ಫೆÇೀಟೋ ತೆಗೆಸಿಕೊಳ್ಳಲು ನನಗೆ ಅಭ್ಯಂತರವಿಲ್ಲ. ಆದರೆ ನನ್ನೊಂದಿಗೆ ಸರಿಸಮನಾಗಿ ನಿಲ್ಲುವ ಅರ್ಹತೆ ನಿಮ್ಮಲ್ಲಿ ಯಾರಿಗೂ ಇಲ್ಲ” ಎಂದು ಹೇಳಿದರು ಆ ಮಹಾನ್ ದೇಶಭಕ್ತ!!

ಬ್ರಿಟಿಷರ ಅಧೀನದಿಂದ ಭಾರತವನ್ನು ಮುಕ್ತಗೊಳಿಸಬೇಕು ಎಂದು ಅವಿರತವಾಗಿ ಶ್ರಮಿಸಿ, ರಕ್ತ ಹರಿಸಿದ ದಿಟ್ಟ ಸ್ವಾಭಿಮಾನಿ ಸುಭಾಷ್ ಚಂದ್ರಬೋಸ್, ಭಾರತ ಮತ್ತು ಪಾಕಿಸ್ತಾನ ವಿಭಜಿತವಾದಾಗ ಪಾಕಿಸ್ತಾನದ ಮೊಹಮದ್ ಅಲಿ ಜಿನ್ನಾ ಹೇಳಿದ ಮಾತು, ಸುಭಾಷ್ ಚಂದ್ರ ಬೋಸರ ಕಿಚ್ಚಿನ ಹೋರಾಟದ ಬಗ್ಗೆ ತಿಳಿಸಿಕೊಡುತ್ತದೆ!! ಯಾಕೆಂದರೆ ಜಿನ್ನಾ ಹೇಳಿದ ಮಾತು ಕೂಡ ಸುಭಾಷ್ ಚಂದ್ರ ಬೋಸರ ಪರಾಕ್ರಮವನ್ನು ಎತ್ತಿ ತೋರಿಸುತ್ತದೆ.

ಹೌದು… ಒಂದೊಮ್ಮೆ ಜಿನ್ನಾ ಪಾಕಿಸ್ತಾನ ವಿಭಜನೆಯಾದ ನಂತರ, “ನಾನು ಗಾಂಧೀಜಿಯವರೊಂದಿಗೆ ಮಾತುಕತೆ ನಡೆಸಿದ್ದಕ್ಕಾಗಿ ನನಗೆ ಪಾಕಿಸ್ತಾನ ಸಿಕ್ಕಿತು. ಒಂದು ವೇಳೆ ಗಾಂಧೀಜಿಯವರ ಬದಲು ನಾನೇನಾದ್ರೂ ಸುಭಾಷ್ ಚಂದ್ರಬೋಸರೊಂದಿಗೆ ಮಾತುಕತೆಯನ್ನು ನಡೆಸಿದ್ದಿದ್ದರೆ ನಮಗೆ ಪಾಕಿಸ್ತಾನ ದಕ್ಕುತ್ತಿರಲಿಲ್ಲ” ಎಂದು ಹೇಳಿದ್ದರು. ಈ ಮಾತು ಸುಭಾಷ್ ಚಂದ್ರಬೋಸ್ ಅವರ ದೇಶಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ಮಾತ್ರ ಅಕ್ಷರಶಃ ನಿಜ!!

ಸ್ವಾಭಿಮಾನಿಯಾದ ಸುಭಾಷ್ ಚಂದ್ರಬೋಸರು ಭಾರತದ ಸ್ವಾತಂತ್ರ್ಯಕ್ಕಾಗಿ ವಿದೇಶಗಳ ಬೆಂಬಲವನ್ನು ಪಡೆದು ದಿಟ್ಟ ಸೈನ್ಯವನ್ನು ಸಜ್ಜುಗೊಳಿಸಿದ್ದರು. ಸಾಯುವವರೆಗೂ ಅವಿರತವಾಗಿ ಶ್ರಮಿಸಿದ ಇವರು ಕೊನೆಯ ಉಸಿರಿರುವರೆಗೂ ಬ್ರಿಟಿಷರಿಗೆ ತಲೆ ಬಾಗದೇ…. ತಲೆ ಎತ್ತಿ ಮೆರೆದಂತಹ ಕೆಚ್ಚೆದೆಯ ವೀರನಾಗಿದ್ದರು. ಬ್ರಿಟಿಷರೊಂದಿಗೆ ಕದನಕ್ಕಿಳಿಯಲು ಸೇನೆಯನ್ನು ಸಜ್ಜುಗೊಳಿಸುತ್ತಿದ್ದ ಸುಭಾಷರು ದಿನಾಂಕ 18 ಆಗಸ್ಟ್ 1945 ರಂದು ವಿಮಾನ ಪ್ರಯಾಣ ಮಾಡುತ್ತಿರುವಾಗ ಅಕಸ್ಮಿಕವಾಗಿ ಸಂಭವಿಸಿದ ವಿಮಾನ ಸ್ಪೋಟದಿಂದಾಗಿ ಅವರು ವಿಧಿವಶರಾದರೆಂದು ಹೇಳಲಾಗುತ್ತದೆ.. ಆದರೆ ಇದು ಎಷ್ಟು ಸತ್ಯವೋ, ಎಷ್ಟು ಸುಳ್ಳೋ ಎಂಬುವುದು ತಿಳಿದಿಲ್ಲ. ಆದರೆ ಸುಭಾಷ್ ಚಂದ್ರ ಬೋಸರ ಸಾವು ವಿಶ್ವಕ್ಕೆ ಒಂದು ನಿಗೂಢ ವಿಷಯವಾಗಿಯೇ ಉಳಿದಿದ್ದ ಮಾತ್ರ ಬೇಸರ ಸಂಗತಿ!!

ಆದರೆ ಅಚ್ಚರಿಯ ವಿಷಯ ಏನೆಂದರೆ, ಸುಭಾಷ್ ಚಂದ್ರಬೋಸ್ ಹುತಾತ್ಮರಾಗಿದ್ದಾರೆ ಎಂದು ಹೇಳಿದರೂ ಕೂಡ ಬ್ರಿಟಿಷರು ಅದನ್ನು ನಂಬಲೇ ಇಲ್ಲವಂತೆ!! ಯಾಕೆಂದರೆ, ಸುಭಾಷ್ ಚಂದ್ರ ಬೋಸರು ಅಷ್ಟು ಸುಲಭವಾಗಿ ಹುತಾತ್ಮರಾಗುವಂಥ ವ್ಯಕ್ತಿಯಲ್ಲ ಅವರೊಬ್ಬ “ಕ್ರಾಂತಿಯ ಕಿಡಿ” ಎಂದು ಬ್ರಿಟಿಷ್ ಅಧಿಕಾರಿಯೊಬ್ಬರು ಹೇಳಿದ್ದರಂತೆ.. ಸುಭಾಷ್ ಹುತಾತ್ಮರಾಗಿದ್ದರೂ ಕೂಡ ಬ್ರಿಟಿಷರು ಮಾತ್ರ ಸುಭಾಷ್ ಚಂದ್ರ ಬೋಸ್ ತಮ್ಮ ಮೇಲೆ ದಾಳಿ ಮಾಡಬಹುದು ಎನ್ನುವ ಆತಂಕದಲ್ಲೇ ಬಹಳಷ್ಟು ದಿನ ಕಾಲ ಕಳೆದಿದ್ದರು ಎಂಬ ಸಂಗತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಸ್ವಾಮಿ ವಿವೇಕಾನಂದರ ನಿಷ್ಠ ಭಕ್ತರಾದ ನೇತಾಜಿ ಅವರು ವಿಶ್ವದೆಲ್ಲೆಡೆ ಭಾರತದ ಸ್ವಾತಂತ್ರ್ಯದ ಕಹಳೆಯನ್ನು ಕೂಗಿ ಜನಮನವನ್ನು ಬಡಿದೆಬ್ಬಿಸಿ ಬ್ರಿಟಿಷರನ್ನು ದಿಗ್ಬ್ರಾಂತರನ್ನಾಗಿ ಮಾಡಿದ್ದು ಚರಿತ್ರೆಯ ಪುಟಗಳಲ್ಲಿ ನಿಚ್ಚಳವಾಗಿ ಮೂಡಿದೆ. ಭಾರತದಿಂದ ಬ್ರಿಟಿಷರನ್ನು ಒದ್ದೊಡಿಸಲು ನಿರಂತರವಾಗಿ ಹೊಸ ಹೊಸ ಯೋಜನೆಗಳನ್ನು ಹಾಕುತ್ತಿದ್ದ ಸುಭಾಷ್ ಚಂದ್ರ ಬೋಸ್ ಅವರು, ಸಾಧ್ಯವಿದ್ದ ಶ್ರೀಮಂತಿಕೆಯ ಬದುಕನ್ನು, ಭವಿಷ್ಯದ ರಾಜಕಾರಣಿಯ ಹಿರಿತನದ ಬದುಕನ್ನೆಲ್ಲಾ ಬದಿಗೊತ್ತಿ, ಯಾವುದನ್ನೂ ಸ್ವಾರ್ಥದಿಂದ ಯೋಚಿಸದೆ ಜೀವಮಾನವಿಡೀ ಕಷ್ಟಗಳನ್ನು ಎದುರಿಸಿ ಹೋರಾಟಮಯ ಬದುಕನ್ನು ಬಾಳಿದ ಈ ಧೀಮಂತ ನಾಯಕನಿಗೆ ಶಿರಬಾಗಿ ನಮಿಸುವುದೇ ನಮಗೆ ಉಳಿದಿರುವ ದಾರಿ!!

ಭಾರತ್ ಮಾತಾ ಕೀ…… ಜೈ!!

– ಅಲೋಖಾ

Tags

Related Articles

Close