ಅಂಕಣಪ್ರಚಲಿತ

ಅರವತ್ತರ ಅರಳು-ಮರಳು! ಬರಗೂರು ರಾಮಚಂದ್ರಪ್ಪನವರ ಹೀನ ಪರಿಸ್ಥಿತಿಯಿದು!

ವಿವಾದಗಳಿಗಾಗಿಯೇ ಹೆಚ್ಚು ಪ್ರಚಾರವಾಗಿರುವ ಬರಗೂರು ರಾಮಚಂದ್ರಪ್ಪನವರು ಈಗ ಮಗದೊಂದು ವಿವಾದದೊಂದಿಗೆ ಜನಪ್ರಿಯವಾಗಿದ್ದಾರೆ. ಸಿದ್ಧರಾಮಯ್ಯನವರ ಅಣತಿಯಂತೆ ಪಠ್ಯ ಪರಿಷ್ಕರಣೆ ಮಾಡಿದ ಬರಗೂರು ರಾಮಚಂದ್ರಪ್ಪನವರು ವಿದ್ಯಾರ್ಥಿಗಳ ಭವಿಷ್ಯದಲ್ಲಾಡಿದ ಚೆಲ್ಲಾಟದ ಕೀರ್ತಿ ಅವರಿಗೆ ಸಲ್ಲುತ್ತದೆ!
ಸ್ವಾತಂತ್ರ್ಯ ಹಾಗೂ ಮಾನವೀಯತೆಯ ನೆಪದಲ್ಲಿ ಹಿಂದುತ್ವ ಹಾಗೂ ಭಾರತದ ಬಗ್ಗೆ ಬಹಳ ವಿವಾದಿತ ಹೇಳಿಕೆ ಕೊಡುತ್ತಿದ್ದ ಎಡ_ಪಂಥೀಯ ರಾಮಚಂದ್ರಪ್ಪನವರ ಈ ವಿವಾದ ‘ಮೂರ್ಖತನದ ಪರಮಾವಧಿ’ ಎನ್ನಬಹುದಷ್ಟೇ!

ಕರ್ನಾಟಕದ ಪದವಿ ವಿಷಯಗಳಲ್ಲಿ ಕನ್ನಡವೂ ಒಂದು! ಪರಿಷ್ಕರಣೆಗೊಂಡ ಈ ಬಾರಿಯ ಮಂಗಳೂರು ವಿಶ್ವ ವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕದಲ್ಲಿ ಬೇರಾವ ವಿಷಯವೂ ಕಾಣದೇ ದೇಶ ಕಾಯುವ ಯೋಧರ ಬೆನ್ನು ಹತ್ತಿದ್ದಾರೆ! ಬರಗೂರು ರಾಮಚಂದ್ರಪ್ಪ ಬರೆದಿರುವ ‘ಯುದ್ಧ ಒಂದು ಉದ್ಯಮ’ ಎಂಬ ಗದ್ಯಪಾಠದಲ್ಲಿ ಇಡೀ ದೇಶದ ಗೌರವವನ್ನೇ ಪ್ರಶ್ನಿಸುವಂತಹ ಸಾಲುಗಳು ಅವರ ‘ಕೀಳು’ ಆಲೋಚನೆಯ ಮಟ್ಟವನ್ನು ಎತ್ತಿ ಹಿಡಿಯುತ್ತದೆ!

“ಯುದ್ಧವೆಂಬುದು ಹಣ ಮಾಡುವ ಉದ್ಯೋಗ! ಗಡಿಭಾಗದಲ್ಲಿ ನಿರಂತರ ಅತ್ಯಾಚಾರಗಳು ನಡೆಯುತ್ತವೆ. ಇದರಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಭಾಗಿಯಾಗುತ್ತಾರೆ. ಅಲ್ಲದೇ ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರವಲ್ಲ, ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಎಂಬ ಕಲ್ಪನೆಯಡಿ ಭ್ರಮೆ ಸೃಷ್ಟಿಸಲಾಗುತ್ತಿದೆ.”

ಅರಳು-ಮರಳಿನ ಪ್ರಭಾವವೇ?!

ಬರಗೂರು ರಾಮಚಂದ್ರಪ್ಪನವರು ಬಹುಷ: ಅರಳು-ಮರಳಿನ ಹಾದಿ ಹಿಡಿದಿರಬೇಕು. ಯುದ್ಧದಲ್ಲಿ ಮಡಿದರೆ ಸ್ವರ್ಗ ಸೇರುತ್ತಾರೆಂಬ ಭ್ರಮೆ ಎಂದಿರಲ್ಲ ರಾಮಚಂದ್ರಪ್ಪನವರೇ, ಬಹುಷಃ ನಿಮಗೆ ಹೃದಯದಾಳದಲ್ಲಿರುವ ‘ಸೆಕ್ಯುಲರ್’ ಎಂಬ ಇನ್ನೊಂದು ‘ಜಿಹಾದ್’ ನ ಭಾವನೆಗಳು ನೆನಪಾಗಿ ‘ಯುದ್ಧ’ವೆಂದರೆ ಜಿಹಾದ್ ಎಂದು ತಪ್ಪಾಗಿ ಭಾವಿಸಿಕೊಂಡಿದ್ದೀರೆಂದು ನಮ್ಮ ಭಾವನೆ!
ದೇವತಾ ಸ್ತ್ರೀಯರು ಸ್ವರ್ಗದ ಬಾಗಿಲಿನಲ್ಲಿ ಸ್ವಾಗತಿಸಲು ಕಾಯುತ್ತಿರುತ್ತಾರೆಂಬ ನಿಮ್ಮ ಹುಚ್ಚಾಟಕ್ಕೆ ‘ಜಿಹಾದಿ’ಗಳೇ ನಕ್ಕಾರು! ಬಿಡಿ! ನಿಮ್ಮ ಒಲವಿನ ಜಿಹಾದಿಗಳ ಎಪ್ಪತ್ತೆರಡು ಕನ್ಯೆಯರು ಇಲ್ಲಿರಲು ಸಾಧ್ಯವೇ ಇಲ್ಲ!

ಸ್ವರ್ಗದ ಬಾಗಿಲು ಹಾಗಿರಲಿ! ಗಡಿ ಭಾಗದಲ್ಲಿ ಅತ್ಯಾಚಾರ ನಡೆಯುತ್ತವೆ, ಅದೂ ಸೈನಿಕರಿಂದ ಅಂದಿರಲ್ಲ?! ನಿಮಗೇನಾದರೂ ಸಾಕ್ಷಿ ಇದೆಯೇ?! ಯಾವ ಆಧಾರದ ಮೇಲೆ ಅಭಿಪ್ರಾಯಪಟ್ಟಿರಿ?! ಗಡಿ ಭಾಗದಲ್ಲಿ ನಿಮ್ಮವರೆನಿಸಿಕೊಳ್ಳುವರಾದಾರೂ ಅತ್ಯಾಚಾರಕ್ಕೀಡಾಗಿದ್ದಾರೆಯೇ?! ಭಾಗಿಯಾಗಿ ಸುಖಿಸಲು ಅದೇನು ನಿಮ್ಮ ಒಲವ ಗಳಿಸಿಕೊಂಡ ಜಿಹಾದಿಗಳ ಜನಾನಾವೇ?! ಅಥವಾ, ಯಾರಾದರೂ ನಿಮ್ಮ ಹತ್ತಿರ ಅವರ ನೋವನ್ನು ತೋಡಿಕೊಂಡಿದ್ದಾರೆಯೇ?!

ಒಬ್ಬ ಸಾಹಿತಿಯಾಗಿ ನಿಮಗೆ ನಾಚಿಕೆಯಾಗಲೇ ಬೇಕು! ಯಾವ ವಾಸ್ತವವನ್ನೂ ಅರಿಯದೆಯೇ, ಇತಿಹಾಸವನ್ನೂ ಅರಿಯದೆಯೇ, ಕೇವಲ ನಿಮ್ಮ ಭ್ರಮಾ ಲೋಕದ ಮೇಲೆಯೇ ನೀವು ಆಲೋಚಿಸಿ ಅದ್ಯಾವ ಜಾದೂವಿನಿಂದ ನೀವು ಸಾಹಿತಿಯಾಗಿ ಪ್ರಶಸ್ತಿ ಗಳಿಸಿದಿರೋ?! ಪಾಕಿಸ್ತಾನದ ನೆಲದಲ್ಲಿ ನಡೆಯುವ ಅತ್ಯಾಚಾರಗಳಿಗೆಲ್ಲ ಭಾರತೀಯ ಯೋಧರನ್ನು ಸೇರಿಸಿ, ಇಲ್ಲ ಸಲ್ಲದ ಅಪವಾದ ಹೊರಿಸಿ, ಇಷ್ಟು ದಿನವೂ ಬದುಕಿದ್ದ ನೆಲದ ಮೇಲೆ ಮಿಥ್ಯಾರೋಪವನ್ನು ಹೊರಿಸುವ ನಿಮ್ಮ ಬುದ್ಧಿ ನಿಜಕ್ಕೂ ಸ್ಥಿಮಿತದಲ್ಲಿದೆಯೇ?!

ನಿಮ್ಮ ಎಡಪಂಥದ ಚೇಲಾಗಳು ಮಾನವೀಯತೆಯೆಂಬ ಆಧಾರದ ಮೇಲೆ ಉಗ್ರರನ್ನೂ ಅಮಾಯಕರೆಂದು ಕರೆದು ಅವರ ಬಿಡುಗಡೆಗೆ ಆಗ್ರಹಿಸುತ್ತಾರೆ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ವ್ಯತ್ಯಾಸವೇ ಗೊತ್ತಿಲ್ಲದ ನಿಮ್ಮ ಮಹಿಳಾಮಣಿಗಳು ‘ಸ್ತ್ರೀ ತತ್ವದ’ ಬಗ್ಗೆ ‘ಎದೆ’ ತೋರಿಸಿ ಪ್ರಚಾರ ಮಾಡುತ್ತಾರೆ! ನಿಮ್ಮಂತಹ ಸಾಹಿತಿಗಳು ಅದಕ್ಕೆಲ್ಲಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಅಷ್ಟಾಗಿಯೂ ಭಾರತದ ವೈಭವದ ಬಗ್ಗೆ ಜರಿದು, ಘಂಟಾಘೋಷವಾಗಿ ಸಾರುವ ನಿಮ್ಮ ದೊಡ್ಡತನಕ್ಕೊಂದು ಧಿಕ್ಕಾರವಿರಲೇ ಬೇಕು!

ಬೆಚ್ಚನೆಯ ಹಾಸಿಗೆಯ ಮೇಲೆ ಕುಳಿತು ಪಾಕಿಸ್ಥಾನವನ್ನು ಬೆಂಬಲಿಸುವ ನೀವು ಯುದ್ಧದ ಬಗೆಗೆ ಮಾತನಾಡುವ ಮೊದಲು ಯುದ್ಧದ ಬಗ್ಗೆ ಅಧ್ಯಯನ ಮಾಡಿದ್ದೀರೇನು?! ಅದೊಂದು ಉದ್ಯಮವೆಂದು ಜರಿಯುವ ನೀವು ಯುದ್ಧದಲ್ಲಿ ಮಡಿದ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನಿಸಿದ್ದೀರೇನು?! ತಿನ್ನುವುದಕ್ಕೆ ಗಂಜಿಯೂ ಇಲ್ಲದೇ ಇರುವ ಅದೆಷ್ಟೋ ಮನೆಗಳ ಯುವಕರು ದೇಶದ ಮೇಲಿನ ಅಭಿಮಾನಕ್ಕೆ ಮಣ್ಣಾಗುತ್ತಾರೆ!

ಒಬ್ಬ ಸೈನಿಕನನ್ನಾದರೂ ಭೇಟಿ ಮಾಡಿ ಮಾತನಾಡಿದ್ದೀರೇನು?! ‘ನಾವು ಸತ್ತರೆ ಸ್ವರ್ಗ ಸೇರುವುದಿಲ್ಲ, ಬದಲಿಗೆ ಆತ್ಮವಾಗಿ ಉಳಿದಿರುವ ಸೈನಿಕರ ಕಾಯುತ್ತೇವೆ’ ಎಂಬ ಅವರ ಮುಗ್ಧತನಕ್ಕೆ, ದೇಶದ ಮೇಲಿನ ಅಭಿಮಾನದ ಅರ್ಥ ನಿಮ್ಮಂತಹ ಗಂಜಿ ಗಿರಾಕಿಗಳಿಗೆ ಅರ್ಥವಾಗುವ ಪಠ್ಯವಲ್ಲ! ಅದ್ಯಾವುದೋ ಯಾಕೂಬ್, ದಾವೂದ್, ಕಸಬ್ ನಂತಹವರ ಪರವಾಗಿ ಹೋರಾಡುವ ನಿಮ್ಮದು ಹಣ ಮಾಡುವ ಉದ್ಯೋಗವಲ್ಲದೇ ‘ಪವಿತ್ರ ಜಿಹಾದ್’ ಎಂಬುದೇ?!

ಉಸಿರು ನೀಡಿ, ಸ್ಥಾನ ನೀಡಿ, ಬದುಕಲು ಆಶ್ರಯ ನೀಡಿರುವ, ಸಹಸ್ರಾರು ವರ್ಷಗಳ ಇತಿಹಾಸವಿರುವ, ಜಗದುದ್ದಗಲಕ್ಕೂ ಗೌರವಿಸುವ ಭಾರತ ಹಾಗೂ ಹಿಂದುತ್ವದ ಮೇಲೆ ಗೊತ್ತು ಗುರಿಯಿಲ್ಲದೇ ಪ್ರಹಾರ ನಡೆಸಿ ಪ್ರಚಾರ ಗಿಟ್ಟಿಸುವ ನಿಮ್ಮಂತಹವರ ‘ಹೀನಾತಿ ಹೀನ’ ಪರಿಸ್ಥಿತಿಗೆ ನಮ್ಮಲ್ಲಿ ನಿಜಕ್ಕೂ ವಿಷಾದದ ನಗೆಯಿದೆ!!!!

– ಸಪ್ತರ್ಷಿ

Tags

Related Articles

Close